Language

  • English
  • Hindi
  • Marathi
  • Kannada
  • Telugu
  • Tamil
  • Gujarati

ಇತ್ತೀಚಿನ ಬದಲಾವಣೆಗಳನ್ನು ಅಳವಡಿಸಿ ಈ ಪೋಸ್ಟ್ ಅನ್ನು ಅಕ್ಟೋಬರ್ 21, 2016ರಂದು ಅಪ್ಡೇಟ್ ಮಾಡಲಾಗಿದೆ.

ಎಲ್ಲಾ ಸರಪಳಿಗೂ (ಸರಕುಗಳ ತಯಾರಿಕೆಯಿಂದ ಆರಂಭಿಸಿ ಅದರ ಅನುಭೋಗದ ತನಕ) ಮತ್ತು ದೇಶಾದ್ಯಂತ ಇನ್ಪುಟ್ ಕ್ರೆಡಿಟ್ ನ ತಡೆರಹಿತ ಹರಿವು ಜಿಎಸ್ಟಿಯ ಒಂದು ಮೂಲಭೂತ ಲಕ್ಷಣವಾಗಿದೆ. ಸರಕು ಅಥವಾ ಸೇವೆಯ ಪೂರೈಕೆ ಮೇಲಿನ ಜಿಎಸ್ಟಿ ಇನ್ಪುಟ್ ತೆರಿಗೆ ಪಾವತಿ ಪಡೆಯಲು ಇರುವ ಕಾನೂನಿನಲ್ಲಿರುವ ಅವಕಾಶಗಳ ಕುರಿತು ಈ ವಿಭಾಗದಲ್ಲಿ ಚರ್ಚಿಸೋಣ ಬನ್ನಿ.

ಜಿಎಸ್ಟಿ ಇನ್ಪುಟ್ ಕ್ರೆಡಿಟ್ ಪಡೆಯಲು ಈ ಮುಂದಿನ ಎಲ್ಲಾ ಪರಿಸ್ಥಿತಿಗಳು ತೃಪ್ತಿಕರವಾಗಿರಬೇಕಾದ ಅಗತ್ಯವಾಗಿದೆ:
• ಜಿಎಸ್ಟಿ ಮಸೂದೆಯಡಿ ಪೂರೈಕೆದಾರರು ನೋಂದಾಯಿಸಿದ ತೆರಿಗೆ ಇನ್ವಾಯ್ಸ್(ಸರಕುಪಟ್ಟಿ)/ ಡೆಬಿಟ್ ಅಥವಾ ಕ್ರೆಡಿಟ್ ನೋಟ್/ ಪೂರಕವಾದ ಸರಕುಪಟ್ಟಿಯನ್ನು ಡೀಲರ್ ಹೊಂದಿರಬೇಕು.
• ಹೇಳಿರುವ ಸರಕು/ಸೇವೆಯನ್ನು ಸ್ವೀಕರಿಸಿರಬೇಕು.
• ರಿಟರ್ನ್ಸ್(ಜಿಎಸ್ಟಿಆರ್-3) ಅನ್ನು ಭರ್ತಿ ಮಾಡಬೇಕು.
• ವಿಧಿಸಿರುವ ತೆರಿಗೆಯನ್ನು ಪೂರೈಕೆದಾರರು ಸರಕಾರಕ್ಕೆ ಪಾವತಿಸರಬೇಕು.

ಈ ಷರತ್ತುಗಳು ಏನನ್ನು ಸೂಚಿಸುತ್ತವೆ?

ಒಮ್ಮೆ ಜಿಎಸ್ಟಿ ಆರ್-1 ಫಾರ್ಮ್ (ಹೊರಗಿನ ಪೂರೈಕೆಯ ಮಾಹಿತಿ) ಅನ್ನು ಪೂರೈಕೆದಾರರು ಭರ್ತಿ ಮಾಡಿದ ನಂತರ,ಸ್ವಯಂ ರಚನೆಯಾದ ಫಾರ್ಮ್ ಜಿಎಸ್ಟಿ ಆರ್-2 ಎ (ಒಳಗಿನ ಪೂರೈಕೆಯ ಮಾಹಿತಿ) ಮೂಲಕ ಖರೀದಿಯ ಗೋಚರತಿ ಸ್ವೀಕೃತಿದಾರರಿಗೆ ಲಭಿಸುತ್ತದೆ. ಅಗತ್ಯವಿರುವ ಮಾರ್ಪಾಡುಗಳನ್ನು ಮಾಡಿದ ತರುವಾಯ, ಫಾರ್ಮ್ ಜಿಎಸ್ಟಿಆರ್-2ನಲ್ಲಿ ಸೇರ್ಪಡೆಗಳು (ಇದ್ದರೆ) ಮತ್ತು ಅಂಗೀಕಾರ ಪಡೆದು ಎಲೆಕ್ಟ್ರಾನಿಕ್ ಕ್ರೆಡಿಟ್ ಲೆಡ್ಜರ್ ಮೂಲಕ ತಾತ್ಕಾಲಿಕ ಆಧಾರದ ಮೇಲೆ ಸ್ವೀಕೃತಿದಾರರಿಗೆ ಇನ್ಪುಟ್ ಕ್ರೆಡಿಟ್ ಅನ್ನು ಪಾವತಿಸಲಾಗುತ್ತದೆ.

ಈ ಸೇರ್ಪಡೆ ಮತ್ತು ತಿದ್ದುಪಡಿಗಳನ್ನು ಸ್ವೀಕೃತಿದಾರರು ಫಾರ್ಮ್ ಜಿಎಸ್ಟಿಆರ್-2 ನಲ್ಲಿ ಮಾಡಬೇಕು ಮತ್ತು ಅಂಗೀಕಾರ ಪಡೆಯಲು ಫಾರ್ಮ್ ಜಿಎಸ್ಟಿಆರ್-1ಎ ನಲ್ಲಿ ಪೂರೈಕೆದಾರರಿಗೆ ಲಭಿಸುವಂತೆ ಮಾಡಬೇಕು.

ಪಾವತಿ ತೆರಿಗೆ ಜೊತೆಗೆ ಮಾಸಿಕ ರಿಟರ್ನ್ಸ್ (ಫಾರ್ಮ್ ಜಿಎಸ್ಟಿ -3) ಅನ್ನು ಪೂರೈಕೆದಾರರು ಫೈಲ್ ಮಾಡಿದ್ದರೆ ಮಾತ್ರ ಇನ್ಪುಟ್ ಕ್ರೆಡಿಟ್ ದೊರಕಲಿದೆ. ಇನ್ಪುಟ್ ತೆರಿಗೆ ಪಾವತಿಗೆ ಅಂತಿಮ ಅಂಗೀಕಾರವನ್ನು ಫಾರ್ಮ್ ಜಿಎಸ್ಟಿ ಎಮ್ಐಎಸ್-1 ರಲ್ಲಿ ಸಂವಹನ ಮಾಡಲಾಗುತ್ತದೆ.

ಇದನ್ನು ಒಂದು ಉದಾಹರಣೆ ಮೂಲಕ ಅರ್ಥಮಾಡಿಕೊಳ್ಳೋಣ ಬನ್ನಿ

ಕಾರು ತಯಾರಿಕ ಕಂಪನಿಯಾದ ಸೂಪರ್ ಕಾರ್ಸ್ ಲಿಮಿಟೆಡ್, ರತ್ನ ಸ್ಟೀಲ್ಸ್ನಿಂದ 30 ಟನ್ ಉಕ್ಕು ಖರೀದಿಸಿದೆ ಎಂದಿರಲಿ. ರತ್ನ ಸ್ಟೀಲ್ ಉಕ್ಕು ಪೂರೈಕೆ ಮಾಡಿತ್ತು ಮತ್ತು 5ನೇ ಏಪ್ರಿಲ್ನಂದು ಜಿಎಸ್ಟಿಯಾಗಿ 2, 40, 000 ಟ್ಯಾಕ್ಸ್ ಇನ್ವಾಯ್ಸ್ ನೀಡಿತ್ತು.

ಈ ಉದಾಹರಣೆಯೊಂದಿಗೆ, ಇನ್ಪುಟ್ ಕ್ರೆಡಿಟ್ ಪಡೆಯುವ ಹರಿವನ್ನು ಅರ್ಥಮಾಡಿಕೊಳ್ಳಲು ನಾವು ಪ್ರಕ್ರಿಯೆಯನ್ನು ಪರಿಶೀಲಿಸೋಣ.

ಟಿಪ್ಪಣಿಗಳು
ಜಿಎಸ್ಟಿಆರ್-1:- ಎಲ್ಲಾ ಬಾಹ್ಯಾ ಪೂರೈಕೆ ಮಾಹಿತಿಯನ್ನು ಮುಂದಿನ ತಿಂಗಳ 10ನೇ ತಾರೀಕು ಅಥವಾ ಅದಕ್ಕಿಂತ ಮೊದಲು ಒದಗಿಸಬೇಕು.
ಜಿಎಸ್ಟಿಆರ್-2ಎ: ಮುಂದಿನ ತಿಂಗಳ 11ರಂದು ಕಂಪ್ಯೂಟರ್ ಮೂಲಕ ಸ್ವಯಂಚಾಲಿತವಾಗಿ ರಚಿಸಬೇಕು. ಇದು ಎಲ್ಲಾ ಆಂತರಿಕ ಪೂರೈಕೆ ಮಾಹಿತಿಯನ್ನೂ ಒಳಗೊಂಡಿರಬೇಕು.
ಜಿಎಸ್ಟಿಆರ್-3: ಮುಂದಿನ ತಿಂಗಳ 20ನೇ ತಾರೀಕು ತಿಂಗಳ ರಿಟರ್ನ್ ಅನ್ನು ಸ್ವಯಂಚಾಲಿತವಾಗಿ ರಚಿಸಬೇಕು.

ಈ ಮುಂದಿನವುಗಳ ಕುರಿತು ಇನ್ನಷ್ಟು ಲೇಖನಗಳು ಶೀಘ್ರದಲ್ಲಿ ಬರಲಿವೆ:
• ರಿಟರ್ನ್ಸ್ ಅಪ್ಲೋಡಿಂಗ್ ಮಾಡುವುದು.
• ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಬದಲಾಯಿಸುವುದು ಅಥವಾ ಮರುಕ್ಲೇಮ್ ಮಾಡುವುದು.

Are you GST ready yet?

Get ready for GST with Tally.ERP 9 Release 6