ಜಿಎಸ್ಟಿ ದರ ಘೋಷಿಸಿದಾಗಿನಿಂದ, ಶಕೆಯಲ್ಲಿ ಹೊಸ ವಾಹನ ಖರೀದಿಸಿದರೆ ತಾವು ಹೊಸ ವಾಹನ ಖರೀದಿಸಿದರೆ ನಷ್ಟವಾಗಬಹುದೇ ಅಥವಾ ಲಾಭವಾಗುವುದೇ ಎಂದು ಪ್ರಯಾಣಿಕ ವಾಹನದ ಸಂಭಾವ್ಯ ಖರೀದಿದಾರರು ಕುತೂಹಲಗೊಂಡಿದ್ದಾರೆ. ಜಿಎಸ್ಟಿ ಪರಿಷತ್ ಪ್ರಕಟಿಸಿದ ಜಿಎಸ್ಟಿ ದರವು ವಾಹನೋದ್ಯಮಕ್ಕೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಈ ಲೇಖನದಲ್ಲಿ ನಾವು ಮಾಹಿತಿ ನೀಡುತ್ತಿದ್ದೇವೆ.

ಹಳೆಯ ತೆರಿಗೆ ಪದ್ಧತಿಯಲ್ಲಿದ್ದ ತೆರಿಗೆಗಳು
ಹಳೆಯ ತೆರಿಗೆ ಪದ್ಧತಿಯಲ್ಲಿ ವಾಹನೋದ್ಯಮಕ್ಕೆ ಅಬಕಾರಿ ಸುಂಕ ವಿಧಿಸಲಾಗುತ್ತಿತ್ತು- ಇದರ ಪ್ರಮಾಣವು ಶೇಕಡ 12.5ರಿಂದ ಶೇಕಡ 27ರಷ್ಟು ಇತ್ತು (ಕಾರು ಗಾತ್ರ ಮತ್ತು ಎಂಜಿನ್ ಸಾಮರ್ಥ್ಯಕ್ಕೆ ಅನುಗುಣವಾಗಿ); ಉಳಿದ ಹೆಚ್ಚುವರಿ ಸುಂಕಗಳು, ಉದಾಹರಣೆಗೆ ಎನ್ಸಿಎನ್ಸಿಡಿ ಶೇಕಡ 1; ವಾಹನ ಚಂದಾತೆರಿಗೆ ಶೇಕಡ 0.125; ತಯಾರಿಕಾ ಚಂದಾತೆರಿಗೆ- ಶೇಕಡ 1ರಿಂದ ಶೇಕಡ 4 (ಕಾರಿನ ಬಗೆ ಆಧಾರಿತವಾಗಿ) ಮತ್ತು ಮೌಲ್ಯವರ್ಧಿತ ತೆರಿಗೆಯು ಸರಾಸರಿಯಾಗಿ ಶೇಕಡ 14.5ರಷ್ಟು ಇತ್ತು- ಇದು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ.

ವಾಹನಗಳಿಗೆ ಜಿಎಸ್ಟಿ ದರಗಳು

ಉತ್ತಮವಾಗಿರುವುದು

ಮೋಟಾರ್ ವಾಹನಗಳು

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ಜಿಎಸ್ಟಿ
, ಮೋಟಾರ್ ವಾಹನಗಳಿಗೆ ಸಂಬಂಧಪಟ್ಟ ಎಲ್ಲಾ ತೆರಿಗೆಗಳು ಒಂದೇ ತೆರಿಗೆ ದರ ಶೇಕಡ 28ರೊಳಗೆ ಅಂತರ್ಗತವಾಗಿದೆ, ಹೆಚ್ಚುವರಿ ಚಂದಾ ತೆರಿಗೆಯು ಶೇಕಡ 1ರಿಂದ 15ರವರೆಗೆ ಜೊತೆಯಾಗಿದೆ; ಇದನ್ನು ಜಿಎಸ್ಟಿ ಪರಿಹಾರ ಚಂದಾತೆರಿಗೆ ನಿಯಮಗಳಲ್ಲಿ ಈ ಮುಂದಿನಂತೆ ವ್ಯಾಖ್ಯಾನ ಮಾಡಬಹುದು-

ವಾಹನದ ಬಗೆ ಉದ್ದ ಎಂಜಿನ್ ಸಾಮರ್ಥ್ಯ ಚಂದಾ ತೆರಿಗೆ ದರ
ಸಣ್ಣ ಕಾರು 4 ಮೀಟರ್ ಗಿಂತ ಕಡಿಮೆ 1200 ಸಿಸಿಗಿಂತ ಕಡಿಮೆ 1%
ಸಣ್ಣ ಕಾರು 4 ಮೀಟರಿಗಿಂತ ಹೆಚ್ಚು 1201 ಸಿಸಿ– 1500 ಸಿಸಿ 3%
ಮಧ್ಯಮ ಗಾತ್ರದ ಕಾರು 4 ಮೀಟರಿಗಿಂತ ಹೆಚ್ಚು 1500 ಸಿಸಿಗಿಂತ ಕಡಿಮೆ 15%
ದೊಡ್ಡ ಕಾರುಗಳು 4 ಮೀಟರಿಗಿಂತ ಹೆಚ್ಚು 1500 ಸಿಸಿಗಿಂತ ಹೆಚ್ಚು 15%
ಹೈಡ್ರೋಜನ್ ವಾಹನಗಳು (ಇಂಧನ ಕೋಶ ತಂತ್ರಜ್ಞಾನ ಆಧರಿತವಾಗಿ)4 ಮೀಟರಿಗಿಂತ ಹೆಚ್ಚು 15%
ದ್ವಿಚಕ್ರ ವಾಹನಗಳು 350 ಸಿಸಿಗಿಂತ ಹೆಚ್ಚು 3%
ಮೋಟಾರ್ ವಾಹನಗಳು (10ರಿಂದ 13 ಜನರ ಸಾಮರ್ಥ್ಯದ )15%

ಮೊದಲ ನೋಟದಲ್ಲಿಯೇ, ಎಲ್ಲೆಡೆಯಲ್ಲಿ ತೆರಿಗೆ ದರ ಹೆಚ್ಚಾದಂತೆ ಕಾಣಿಸಬಹುದು. ಆದರೆ, ಮೋಟಾರ್ ವಾಹನಗಳಿಗೆ ಈಗಿನ ತೆರಿಗೆ ಪದ್ಧತಿಯಲ್ಲಿ ಮತ್ತು ಜಿಎಸ್ಟಿಯಲ್ಲಿ ತೆರಿಗೆಯ ನಡುವೆ ಯಾವ ರೀತಿ ವ್ಯತ್ಯಾವಿದೆ ಎಂದು ಪರಿಶೀಲಿಸೋಣ-

ಈಗಿನ ತೆರಿಗೆ ಪದ್ಧತಿ ಜಿಎಸ್ಟಿ
ಕಾರಿನ ವಿಧ ಅಬಕಾರಿ ಸುಂಕ ಎನ್ ಸಿಸಿಡಿ ಮೂಲಸೌಕರ್ಯ ಚಂದಾತೆರಿಗೆ ವಾಹನ ಚಂದಾತೆರಿಗೆ ಮೌಲ್ಯವರ್ತಿತ ತೆರಿಗೆ ಒಟ್ಟು ತೆರಿಗೆ (ಅಂದಾಜು) ಜಿಎಸ್ಟಿ ಹೆಚ್ಚುವರಿ ಚಂದಾತೆರಿಗೆ ಒಟ್ಟು ತೆರಿಗೆ (ಅಂದಾಜು)
ಸಣ್ಣ ಕಾರುಗಳು 12.5 %1 %1 %0.125 %14.5 %31 %28 %1% – 3%29 % –

32 %

ಐಷಾರಾಮಿ ಕಾರುಗಳು 27 %1 %4 %0.125 %14.5 %51 %28 %15 %43 %

ಈಗಿನ ತೆರಿಗೆ ಪದ್ಧತಿಯಲ್ಲಿರುವ ಹಲವು ಬಗೆಯ ತೆರಿಗೆ ವಿಧಿಸುವಿಕೆಯ ಪರಿಣಾಮದಿಂದ ಸಣ್ಣ ಕಾರು ಖರೀದಿದಾರರೊಬ್ಬರು ಕಾರಿಗೆ ತಕ್ಕಂತೆ ಸುಮಾರು ಶೇಕಡ 31ರಷ್ಟು ತೆರಿಗೆ ಪಾವತಿಸುತ್ತಾರೆ, ಐಷಾರಾಮಿ ಕಾರುಗಳಿಗಂತೂ ಶೇಕಡ 51ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ಜಿಎಸ್ಟಿ ತೆರಿಗೆ ಪದ್ಧತಿಯ ಶಕೆಯಲ್ಲಿ ಬಹುಬಗೆಯ ತೆರಿಗೆಗಳು ಇಲ್ಲ. ಒಂದೇ ಬಾರಿಗೆ ಹೆಚ್ಚು ತೆರಿಗೆ ದರದಂತೆ ಕಂಡರೂ ಸಣ್ಣ ಗಾತ್ರದಿಂದ ದೊಡ್ಡ ಗಾತ್ರದ ಖರೀದಿದಾರರು ಬಹುತೇಕ ಒಂದೇ ಬಗೆಯ ತೆರಿಗೆಯನ್ನು ಪಾವತಿಸುತ್ತಾರೆ. ನಿಜಕ್ಕೂ ಹೆಚ್ಚು ಲಾಭವಾಗುವುದು ಐಷಾರಾಮಿ ಕಾರು ಖರೀದಿದಾರರಿಗೆ, ಇವರಿಗೆ ನೂತನ ತೆರಿಗೆ ದರದಲ್ಲಿ ಸುಮಾರು ಶೇಕಡ 8ರಷ್ಟು ತೆರಿಗೆ ಕಡಿಮೆಯಾಗಿದೆ- ಮತ್ತು ಇದರಿಂದ ಭಾರತದ ರಸ್ತೆಯಲ್ಲಿ ಔಡಿಗಳು ಮತ್ತು ಮರ್ಸಿಡಿಸ್ ಬೆಂಝ್ ಕಾರುಗಳು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡರೆ ಅಚ್ಚರಿಯೇನಿಲ್ಲ.

ವಿದ್ಯುತ್ ವಾಹನಗಳು
ಆದರೂ, ವಿದ್ಯುತ್ ವಾಹನಗಳಿಗೆ ಪ್ರೋತ್ಸಾಹದಾಯಕವಾಗಿ ತೆರಿಗೆ ದರ ವಿಧಿಸಿರುವುದು ಆಶ್ಚರ್ಯದಾಯಕ ಸಂಗತಿಯಾಗಿದೆ- ವಿದ್ಯುತ್ ವಾಹನಗಳಿಗೆ ಶೇಕಡ 12 ಜಿಎಸ್ಟಿ ದರ ವಿಧಿಸಲಾಗಿದೆ. ವಿದ್ಯುತ್ ವಾಹನಗಳು ಆರಂಭದಿಂದಲೇ ಕಡಿಮೆ ಅಬಕಾರಿ ಸುಂಕವಾದ ಶೇಕಡ 6 ಮತ್ತು ಬಹುತೇಕ ರಾಜ್ಯಗಳಲ್ಲಿ ಶೇಕಡ 5ರಷ್ಟು ಮೌಲ್ಯವರ್ಧಿತ ತೆರಿಗೆಯನ್ನು ಅನುಭವಿಸುತ್ತಲೇ ಬೆಳೆದಿವೆ. ಜಿಎಸ್ಟಿ ಶಕೆಯಲ್ಲಿಯೂ ಇದು ಮುಂದುವರೆಯು ನಿರೀಕ್ಷೆಯಿದೆ. ಒಟ್ಟಾರೆಯಾಗಿ ಜಿಎಸ್ಟಿ ದರ ಕಡಿಮೆ ಇರುವುದರಿಂದ ದೇಶಾದ್ಯಂತ ವಿದ್ಯುತ್ ವಾಹನಗಳು ಹೆಚ್ಚಾಗುವ ನಿರೀಕ್ಷೆಯಿದೆ ಮತ್ತು ಸರಕಾರವು ಪರಿಸರ ಸ್ನೇಹಿ ತಂತ್ರಜ್ಞಾನಗಳಿಗೆ ಪ್ರೋತ್ಸಾಹ ನೀಡುವುದು ಇದರಿಂದ ತಿಳಿದುಬರುತ್ತದೆ.

ಕೆಟ್ಟದ್ದಾಗಿರುವುದುವಿದ್ಯುತ್ ಶಕ್ತಿ ಮತ್ತು ಸಾಂಪ್ರದಾಯಿಕ ಇಂಧನಗಳು, ಉದಾಹರಣೆಗೆ-ಪೆಟ್ರೋಲ್ ಅಥವಾ ಡೀಸೆಲ್ ನ ಮಿಶ್ರಣದಿಂದ ಸಾಗುವ ಹೈಬ್ರಿಡ್ ವಾಹನಗಳಿಗೆ ನಿಜಕ್ಕೂ ಜಿಎಸ್ಟಿಯು ಆಶ್ಚರ್ಯವನ್ನು ಉಂಟು ಮಾಡಿದೆ- ಯಾವುದೇ ಸಾಮಾರ್ಥ್ಯಕ್ಕೆ ತಕ್ಕಂತೆ ಈ ವಾಹನಗಳಿಗೆ ಅತ್ಯಧಿಕ ಚಂದಾತೆರಿಗೆಯಾದ ಶೇಕಡ 15 ನಿಗದಿಪಡಿಸಲಾಗಿದೆ. ಇದರೊಂದಿಗೆ ಅತ್ಯಧಿಕ ಸಾಮರ್ಥ್ಯದ ಹೈಬ್ರಿಡ್ ವಾಹನಗಳಿಗೆ (1500 ಸಿಸಿಗಿಂತ ಹೆಚ್ಚಿರುವುದಕ್ಕೆ) ಶೇಕಡ 43ರಷ್ಟು ತೆರಿಗೆ ವಿಧಿಸಲಾಗಿದೆ- ಇದು ಹಿಂದಿನದಕ್ಕಿಂತ ಕಡಿಮೆಯಾಗಿಲ್ಲ. ಬಹುತೇಕ ಹೈಬ್ರಿಡ್ ವಾಹನ ತಯಾರಕರು, ಜೊತೆಗೆ ಗ್ರಾಹಕರು ಹೈಬ್ರಿಡ್ ವಾಹನದತ್ತ ಮುಖ ಮಾಡುವ ಸಮಯದಲ್ಲಿ ತೆರಿಗೆ ಕಡಿಮೆಯಾಗದೆ ಇರುವುದು ಕೆಟ್ಟದೆನಿಸಿದೆ.

ತೀರಾ ಕೆಟ್ಟದಾಗಿರುವುದು

ವಾಹನದ ಬಿಡಿಭಾಗಗಳು
ಕಾರಿನ ಬಿಡಿಭಾಗಗಳು, ಟ್ರ್ಯಾಕ್ಟರ್ ಬಿಡಿಭಾಗಗಳು ಮತ್ತು ಕಾರಿನ ಸಲಕರಣೆಗಳಿಗೆ ವಿಧಿಸಿರುವ ಜಿಎಸ್ಟಿ ತೆರಿಗೆ ದರದ ಕುರಿತು- ಅತ್ಯಧಿಕ ಅಂದರೆ ಶೇಕಡ 28ರಷ್ಟು ತೆರಿಗೆ ದರ ವಿಧಿಸಲಾಗಿದೆ- ವ್ಯಾಪಾರಿಗಳು ಸಂತೋಷಗೊಂಡಿಲ್ಲ, ಇದು ವಾಹನೋದ್ಯಮದ ಮೇಲೆ ಕಾರ್ಮೋಡ ಮಸುಕಿದಂತೆ ಆಗಿದೆ. ಈಗಿನ ತೆರಿಗೆ ಪದ್ಧತಿಯಲ್ಲಿ ಅಬಕಾರಿಯು ಶೇಕಡ 12.5ರಷ್ಟು ಮತ್ತು ಬಹುತೇಕ ರಾಜ್ಯಗಳಲ್ಲಿ ಮೌಲ್ಯವರ್ಧಿತ ತೆರಿಗೆಯು ಶೇಕಡ 5ರಷ್ಟಿತ್ತು, ಹಳೆಯ ತೆರಿಗೆ ಪದ್ಧತಿಯಲ್ಲಿ ಒಟ್ಟಾರೆ ಶೇಕಡ 18.13ರಷ್ಟಿದ್ದ ತೆರಿಗೆಯು ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಶೇಕಡ 28ಕ್ಕೆ ನೆಗೆದಿದೆ. ಈ ಹೆಚ್ಚಳವು ಬಿಡಿಭಾಗದ ವಿತರಣೆ ಮಾಡುವ ವ್ಯವಹಾರಕ್ಕೆ ಮತ್ತು ಬಿಡಿಭಾಗ ಉದ್ಯಮಕ್ಕೆ ದೊಡ್ಡ ಪ್ರಮಾಣದ ಹೊಡೆತ ನೀಡಲಿದೆ.

ಉಪಸಂಹಾರ

ಬೇರೆಬೇರೆ ಬಗೆಯ ತೆರಿಗೆ ಪದ್ಧತಿಯ ಪರಿಣಾಮದಿಂದ ಮುಕ್ತಿ ದೊರಕಿ ಸಾಕಷ್ಟು ಪ್ರಯೋಜನ ದೊರಕಿದರೂ, ವಾಹನೋದ್ಯಮಕ್ಕೆ, ಬಿಡಿಭಾಗ ಇತ್ಯಾದಿ ವಿಭಾಗಕ್ಕೆ ಸೇರಿದಂತೆ ವಿಧಿಸಿರುವ ಅತ್ಯಧಿಕ ತೆರಿಗೆ ದರವು ಕೆಟ್ಟ ಪರಿಣಾಮ ಬೀರಲಿದೆ. ಐಷಾರಾಮಿ ಕಾರುಗಳು ಮತ್ತು ವಿದ್ಯುತ್ ವಾಹನಗಳಿಗೆ ಪ್ರಯೋಜನ ದೊರಕಿದರೂ ಹೈಬ್ರಿಡ್ ವಾಹನಗಳು ಮತ್ತು ವಾಹನ ಬಿಡಿಭಾಗಗಳಿಗೆ ಅಪ್ರಯೋಜನಕಾರಿಯಾಗಿದೆ. ಒಟ್ಟಾರೆಯಾಗಿ ವಾಹನೋದ್ಯಮದ ಮೇಲೆ ಜಿಎಸ್ಟಿಯ ಕೊಡುಗೆ ಒಳ್ಳೆಯದು ಮತ್ತು ಕೆಟ್ಟದರ ಮಿಶ್ರಣ ಎನ್ನಬಹುದು.

Are you GST ready yet?

Get ready for GST with Tally.ERP 9 Release 6