Language

  • English
  • Hindi
  • Marathi
  • Kannada
  • Telugu
  • Tamil
  • Gujarati

ಪ್ರಸ್ತುತ ಪರೋಕ್ಷ ತೆರಿಗೆ ರಚನೆಯಡಿ ತೆರಿಗೆ ವಿಧಿಸಬಹುದಾದ ಕ್ರಿಯೆಯು ಪ್ರತಿಯೊಂದು ವಿಧದ ತೆರಿಗೆಗೂ ಭಿನ್ನವಾಗಿರುತ್ತದೆ. ಪ್ರಸ್ತುತ ಪರೋಕ್ಷ ತೆರಿಗೆ ರಚನೆಯಡಿ ತೆರಿಗೆ ವಿಧಿಸಬಹುದಾದ ಸಂದರ್ಭಗಳನ್ನು ಈ ಕೆಳಗೆ ನೀಡಲಾಗಿದೆ:

ತೆರಿಗೆಯ ವಿಧತೆರಿಗೆ ವಿಧಿಸಬಹುದಾದ ಸಂದರ್ಭ
ಕೇಂದ್ರ ಅಬಕಾರಿಸುಂಕಹಾಕಬಲ್ಲ ಸರಕುಗಳನ್ನು ತೆಗೆಯುವಿಕೆ
ವ್ಯಾಟ್ಸರಕುಗಳ ಮಾರಾಟದ ಮೇಲೆ
ಸೇವಾ ತೆರಿಗೆತೆರಿಗೆ ವಿಧಿಸಬಹುದಾದ ಸೇವೆಗಳ ಸೌಲಭ್ಯ

ಸರಕು ಮತ್ತು/ಸೇವೆಗಳ ಪೂರೈಕೆಯು ಜಿಎಸ್‍ಟಿ ಅಡಿಯಲ್ಲಿ ತೆರಿಗೆಯ ಸಂದರ್ಭವಾಗಿದೆ. ಕೇಂದ್ರ ಅಬಕಾರಿ, ಸೇವಾ ತೆರಿಗೆ ಮತ್ತು ವ್ಯಾಟ್/ಸಿಎಸ್‍ಟಿ ಯಂತಹ ಎಲ್ಲಾ ತೆರಿಗೆಗಳನ್ನು ಜಿಎಸ್‍ಟಿ ಅಡಿಯಲ್ಲಿ ಒಟ್ಟುಗೂಡಿಸಲಾಗುತ್ತದೆ, ಮತ್ತು ಸರಕುಗಳ ಉತ್ಪಾದನೆ, ಸರಕುಗಳ ಮಾರಾಟ, ಹಾಗು ಸೇವೆಗಳ ಸೌಲಭ್ಯವು ಇನ್ನು ಮುಂದೆ ಅಪ್ರಸ್ತುತವಾಗುತ್ತದೆ.

ಹೀಗಾಗಿ, ಪ್ರತಿ ವ್ಯವಹಾರಕ್ಕೆ, ಜಿಎಸ್‍ಟಿ-ಯನ್ನು ವಿಧಿಸಲು ಒಳಪಡುವ ವಹಿವಾಟುಗಳ ವ್ಯಾಪ್ತಿಯನ್ನು ನಿಗದಿಸಡಿಸುವ ಪೂರೈಕೆ ಪ್ರಸ್ತುತತೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ಜಿಎಸ್‍ಟಿ ಅಡಿಯಲ್ಲಿ ಪೂರೈಕೆಯ ಪ್ರಸ್ತುತತೆ

‘ಪೂರೈಕೆ’ ಎಂಬ ಪದವು ವ್ಯವಹಾರ ಮಾಡುವಾಗ ಅಥವ ಮುಂದುವರೆಸುವಾಗ ಪರಿಗಣಿಸಬೇಕಾದ ಪೂರೈಕೆ ಮಾಡಲಾದ ಅಥವ ಮಾಡಬೇಕಾಗಿರುವ ಎಲ್ಲಾ ಸರಕುಗಳು ಅಥವಾ ಸೇವೆಗಳ ಪೂರೈಕೆಯ ಎಲ್ಲಾ ರೂಪಗಳನ್ನು ಇದು ಒಳಗೊಂಡಿದೆ.

ಆದಾಗ್ಯೂ, ಪರಿಗಣಿಸದೆ ಇರಬೇಕಾದ ಪೂರೈಕೆ ಎಂದು ಪರಿಗಣಿಸುವ ಅಗತ್ಯತೆ ಇರುವ ಸರಬರಾಜು ನಿರ್ದಿಷ್ಟ ಪೂರೈಕೆಗಳನ್ನು ಕಾನೂನಿಲ್ಲಿ ಉಲ್ಲೇಖಿಸಲಾಗಿದೆ.

ವಿವಿಧ ವಿಧದ ಪೂರೈಕೆಗಳನ್ನು ವರ್ಗೀಕರಿಸುವ ಮೂಲಕ ಅರ್ಥಮಾಡಿಕೊಳ್ಳೋಣ;

  • ವ್ಯವಹಾರ ಮಾಡುವಾಗ ಅಥವ ಮುಂದುವರೆಸುವಾಗ ಪರಿಗಣಿಸಬೇಕಾದ ಪೂರೈಕೆಗಳು
  • ಪರಿಗಣಿಸದೆ ಇರಬೇಕಾದ ಪೂರೈಕೆಗಳು
  • ವ್ಯವಹಾರ ಮಾಡುವಾಗ ಅಥವ ಮುಂದುವರೆಸುವಾಗ ಪರಿಗಣಿಸದೇ ಇರಬೇಕಾದ ಪೂರೈಕೆಗಳು

ವ್ಯವಹಾರ ಮಾಡುವಾಗ ಅಥವ ಮುಂದುವರೆಸುವಾಗ ಪರಿಗಣಿಸಬೇಕಾದ ಪೂರೈಕೆಗಳು

Supply of Goods and Services_Kannada

ಕೆಳಗಿನವುಗಳನ್ನ ಪರಿಗಣನೆಗೆ ಒಳಗಾಗುವ ಪೂರೈಕೆಗಳೆಂದು ಪರಿಗಣಿಸಲಾಗಿದೆ:

Saleಸರಕುಗಳ ಸಂದರ್ಭದಲ್ಲಿ ಶೀರ್ಷಿಕಯ ವರ್ಗಾವಣೆಗೆ ಕಾರಣವಾಗುವ ಸರಕುಗಳು ಮತ್ತು ಸೇವೆಗಳ ಯಾವುದೇ ಮಾರಾಟ, ಮತ್ತು ಸೇವೆಗಳ ವಿಚಾರದಲ್ಲಿ ಹಕ್ಕಿನ ವರ್ಗಾವಣೆ ಕಾರಣವಾಗುವಿಕೆ.
TransferAಶಾಖೆಗಳ ನಡುವೆ ಯಾವುದೇ ವರ್ಗಾವಣೆ ಯಾಗುವ ಪೂರೈಕೆಯು ತೆರಿಗೆಗೆ ಒಳಪಡುವ ಭಾಗವಾಗಲಿದೆ. ಆದಾಗ್ಯೂ, ಶಾಖೆಯ ವರ್ಗಾವಣೆಯಲ್ಲಿ ಜಿಎಸ್‍ಟಿ ಪಾವತಿಸಿದಲ್ಲಿ ಅವುಗಳು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಆಗಿ ಸಂಪೂರ್ಣವಾಗಿ ಲಭ್ಯವಾಗಲಿವೆ.
 Barterಪರಿಗಣನೆಯನ್ನು ಹಣದ ಬದಲಿಕೆ ಸರಕುಗಳು ಮೂಲಕ ಪಾವತಿ ಮಾಡಿದಾಗ. ಉದಾಹರಣೆಗೆ: ಒಬ್ಬ ಮಾರಾಟಗಾರ ಸರಕು ಮತ್ತು ಖರೀದಿದಾರರನ್ನ ಒದಗಿಸಿ, ಪಾವತಿಗೆ ತಕ್ಕ ಸರಕುಗಳನ್ನು ಪೂರೈಕೆ ಮಾಡುವಿಕೆ. ಅಥವಾ ಒಂದು ಉತ್ಪನ್ನವನ್ನು ಮತ್ತೊಂದು ಉತ್ಪನ್ನಕ್ಕೆ ಬದಲಾಗಿ ವಿನಿಮಯ ಮಾಡಿದಾಗ.
 Licenseಬಳಕೆಗಾಗಿ ಯಾವುದೇ ಪರವಾನಗಿಯನ್ನು ನೀಡುವಿಕೆ ಪೂರೈಕೆ ಭಾಗವಾಗಿದೆ. ಉದಾಹರಣೆಗೆ: ಆನ್ಲೈನ್ ಚಂದಾದಾರಿಕೆಗಳು
 Rentalಆಸ್ತಿಯನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಬಾಡಿಗೆ ನೀಡುವಿಕೆಯು ಜಿಎಸ್‍ಟಿ ಅಡಿಯಲ್ಲಿ ಪೂರೈಕೆಯಾಗುತ್ತದೆ
 Leaseಕಟ್ಟಡ ಅಥವಾ ಆಸ್ತಿ ಯನ್ನು ಭೋಗ್ಯಕ್ಕೆ ನೀಡುವಿಕೆ ಜಿಎಸ್‍ಟಿ ಅಡಿಯಲ್ಲಿ ಪೂರೈಕೆಯಾಗುತ್ತದೆ
 ವ್ಯಾಪಾರದ ಆಸ್ತಿಗಳನ್ನು ವಿಲೇವಾರಿ ಮಾಡುವಿಕೆ ಪೂರೈಕೆಯ ಭಾಗವಾಗುತ್ತದೆ

ಪೂರೈಕೆ ಎಂದು ಪರಿಗಣಿಸಬೇಕಾದ ಅಸಾಧಾರಣ ಸನ್ನಿವೇಶಗಳು ಮತ್ತು ಜಿಎಸ್‍ಟಿ ತೆರಿಗೆ ವಿಧಿಸಲು ಬದ್ಧರಾಗುವಿಕೆಯ ನಮ್ಮ ಮುಂದಿನ ಬ್ಲಾಗ್‍ಗಾಗಿ ಕಾಯುತ್ತಿರಿ.

ಶೀಘ್ರದಲ್ಲೇ ಬರಲಿದೆ:

  1. ಪರಿಗಣಿಸದೆ ಇರುವ ಪೂರೈಕೆ
  2. ವ್ಯವಹಾರ ಮಾಡುವಾಗ ಅಥವ ಮುಂದುವರೆಸುವಾಗ ಪರಿಗಣಿಸದೇ ಇರಬೇಕಾದ ಪೂರೈಕೆಗಳು

Are you GST ready yet?

Get ready for GST with Tally.ERP 9 Release 6