ಪಾಯಿಂಟ್ ಆಫ್ ಟ್ಯಾಕ್ಸೆಷನ್(ಪಿಒಟಿ) ಎಂದರೆ ಯಾವ ಸಮಯದಲ್ಲಿ ತೆರಿಗೆ ಪಾವತಿಸಿಯೇ ತೀರಬೇಕೆಂದು ಸೂಚಿಸುವ ಬಿಂದು ಆಗಿದೆ. ಯಾವಾಗ ತೆರಿಗೆ ಬಾಧ್ಯತೆ ಬರುತ್ತದೋ ಆ ತೆರಿಗೆ ಪಾವತಿಸುವ ಸಮಯವನ್ನು ಕಂಡುಹಿಡಿಯಲು ಒಂದು ಯಾಂತ್ರಿಕ ರಚನೆಯಿದೆ.
ಈಗಿನ ಪರೋಕ್ಷ ತೆರಿಗೆ ಪದ್ಧತಿಯಲ್ಲಿ ತೆರಿಗೆ ಪಾವತಿಸುವ ನಿಶ್ಚಿತ ಸಮಯವು ಪ್ರತಿಯೊಂದು ತೆರಿಗೆ ವಿಧದಲ್ಲಿಯೂ ಭಿನ್ನವಾಗಿರುತ್ತದೆ.

ಸನ್ನಿವೇಶ ತೆರಿಗೆಯ ವಿಧ ಪಾಯಿಂಟ್ ಆಫ್ ಟ್ಯಾಕ್ಸೆಷನ್
ಸರಕುಗಳ ತಯಾರಿಕೆ ಅಬಕಾರಿ ಸುಂಕಭಾರತದಲ್ಲಿನ ಸರಕು ತಯಾರಕರಿಗೆ ಅಬಕಾರಿ ಸುಂಕ ವಿಧಿಸಲಾಗುತ್ತದೆ, ಮತ್ತು ಅಬಕಾರಿ ಘಟಕದಿಂದ ಸುಂಕ ವಿಧಿಸಬಹುದಾದ ಸರಕುಗಳನ್ನು ತೆಗೆಯಬೇಕಾದ ಸಂದರ್ಭ ಎದುರಾದರೆ ಅಬಕಾರಿ ಸುಂಕ ಪಾವತಿಸುವ ಬಾಧ್ಯತೆ ಉಂಟಾಗುತ್ತದೆ. ಉದಾಹರಣೆಗೆ, ಏಪ್ರಿಲ್ 28, 2016ರಂದು ಸರಕು ತಯಾರಿಸಲಾಗಿದೆ ಮತ್ತು ಮೇ 5, 2016ರಂದು ಅಬಕಾರಿ ಯೂನಿಟ್ ಅನ್ನು ಮಾರಾಟದ ಉದ್ದೇಶಕ್ಕಾಗಿ ತೆಗೆಯಲಾಗಿದೆ. ಅಬಕಾರಿ ಸುಂಕ ಪಾವತಿಸುವ ಬಾಧ್ಯತೆಯು ಮೇ 5, 2017ರಂದು ಬರುತ್ತದೆ.
ಸೇವೆ ಸಲ್ಲಿಕೆ ಸೇವಾ ತೆರಿಗೆತೆರಿಗೆ ಪಾವತಿಸುವ ಸಮಯವು ಈ ಮುಂದಿನವುದಕ್ಕಿಂತ ಮುನ್ನ ಇರಬೇಕು (ಎ) ಪಾವತಿ ಸ್ವೀಕರಿಸಿದ ದಿನಾಂಕ ಮತ್ತು (2) ಸರಕುಪಟ್ಟಿ ಸ್ವೀಕರಿಸಿದ ದಿನಾಂಕ..
ಸರಕುಗಳ ಮಾರಾಟ ವ್ಯಾಟ್/ಸಿಎಸ್ಟಿಎಲ್ಲಾದರೂ ರಾಜ್ಯದೊಳಗೆ ಅಥವಾ ಬೇರೆ ಬೇರೆ ರಾಜ್ಯಗಳಲ್ಲಿ ಸರಕುಗಳ ಮಾರಾಟ ಮಾಡಬೇಕಿದ್ದರೆ ವ್ಯಾಟ್/ಸಿಎಸ್ಟಿ ಅನ್ವಯವಾಗುತ್ತದೆ.

ಜಿಎಸ್ಟಿ ಕಾನೂನಿನಡಿ, ಸರಕು ಮತ್ತು ಸೇವೆಯ “ಪೂರೈಕೆ’’ ತೆರಿಗೆ ವಿಧಿಸಬಹುದಾದ ಸನ್ನಿವೇಶವಾಗಿದೆ. ಸರಕು ಮತ್ತು ಸೇವೆಗಳನ್ನು ಪೂರೈಕೆಯಲ್ಲಿ “ಪೂರೈಕೆಯ ಸಮಯ’’ ಆಧರಿಸಿ ಪಾಯಿಂಟ್ ಆಫ್ ಟೈಮ್ ಅಥವಾ ತೆರಿಗೆ ಪಾವತಿಸಲು ನಿಶ್ಚಿತ ಸಮಯವನ್ನು ನಿರ್ಧರಿಸಲಾಗುತ್ತದೆ.

ಈ ಬ್ಲಾಗ್ ಬರಹದಲ್ಲಿ ನಾವು ಸರಕು ಪೂರೈಕೆಯ ಸಮಯದ ಕುರಿತು ಚರ್ಚಿಸಲಿದ್ದೇವೆ.
ಅತ್ಯುತ್ತಮವಾಗಿ ಅರ್ಥಮಾಡಿಕೊಳ್ಳುವ ಉದ್ದೇಶದಿಂದ ನಾವು ಸರಕುಗಳ ಪೂರೈಕೆಗಳ ಸಮಯವನ್ನು ಈ ಮುಂದಿನಂತೆ ವಿಭಾಗಿಸೋಣ:
• ಸರಕುಗಳ ಪೂರೈಕೆಗೆ ಫಾರ್ವಾರ್ಡ್ ಚಾರ್ಜ್
• ಸರಕುಗಳ ಪೂರೈಕೆಗೆ ರಿವರ್ಸ್ ಚಾರ್ಜ್

ಸರಕುಗಳ ಪೂರೈಕೆಗೆ ಫಾರ್ವಾರ್ಡ್ ಚಾರ್ಜ್

ಫಾರ್ವಾರ್ಡ್ ಚಾರ್ಜ್ ಎನ್ನುವುದು ಒಂದು ಮೆಕಾನಿಸಂ ಅಥವಾ ವಿಧಾನವಾಗಿದ್ದು, ಅದರಲ್ಲಿ ಪೂರೈಕೆದಾರರು ಕೇಂದ್ರ ಅಥವಾ ರಾಜ್ಯ ಸರಕಾರಕ್ಕೆ ಚಂದಾ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈಗಿನ ತೆರಿಗೆಯಡಿಯಲ್ಲಿ ಬಹುತೇಕ ವ್ಯವಹಾರಗಳಲ್ಲಿ ಫಾರ್ವಾರ್ಡ್ ಚಾರ್ಜ್ ವಿಧಾನದಲ್ಲಿ ತೆರಿಗೆ ಸಂಗ್ರಹಿಸಲಾಗುತ್ತದೆ(ಇದನ್ನು ನೇರ ಶುಲ್ಕ ಎಂದೂ ಕರೆಯಲಾಗುತ್ತದೆ).

Forward Charge (also called direct charge) is a mechanism in which the supplier has to levy tax and remit the same to the credit of the Central or State Government. Click To Tweet

ಉದಾಹರಣೆಗೆ, ಸೂಪರ್ ಕಾರ್ಸ್ ಲಿಮಿಟೆಡ್, 1,00,000 ರೂ. ಮೌಲ್ಯದ ಬಿಡಿಭಾಗಗಳನ್ನು ರವೀಂದ್ರ ಆಟೋಮೊಬೈಲ್ಸ್ ಗೆ ಮಾರಾಟ ಮಾಡುತ್ತದೆ ಮತ್ತು ಶೇಕಡ 14.5ರ ಅನ್ವಯ 14,500 ರೂ. ವ್ಯಾಟ್ ಸಂಗ್ರಹಿಸುತ್ತದೆ.
ಸೂಪರ್ ಕಾರ್ಸ್ ಲಿಮಿಟೆಡ್ ವ್ಯಾಟ್ ಸಂಗ್ರಹಿಸಿರುವುದು ಫಾರ್ವಾರ್ಡ್ ಚಾರ್ಜ್ ಮೆಕಾನಿಸಂ ವಿಧಾನದಲ್ಲಿಯಾಗಿದೆ.

ಜಿಎಎಸ್ಟಿಯಲ್ಲಿ ಫಾರ್ವಾರ್ಡ್ ಚಾರ್ಜ್ ಅನ್ವಯ “ಸರಕುಗಳ ಪೂರೈಕೆಯ ಸಮಯ’ವನ್ನು ಅರ್ಥಮಾಡಿಕೊಳ್ಳೋಣ.

ಜಿಎಸ್ಟಿಯ ಬಾಧ್ಯತೆ (ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ಅಥವಾ ಐಜಿಎಸ್ಟಿಯೂ ಅನ್ವಯವಾಗುತ್ತದೆ) ಈ ಮುಂದಿನಂತೆ ಇರುತ್ತದೆ.

ಇವುಗಳಲ್ಲಿ ಯಾವುದು ಮೊದಲೋ ಅದು

ಸರಕುಪಟ್ಟಿ ರಚಿಸಿದ ದಿನಾಂಕ

ಪೂರೈಕೆದಾರರು ಸರಕುಪಟ್ಟಿ ನೀಡಿದ ದಿನಾಂಕ
.

ಸರಕುಪಟ್ಟಿ ನೀಡಲು ಕೊನೆಯ ದಿನಾಂಕ

ಸರಕುಗಳ ಪೂರೈಕೆಗಾಗಿ ಪೂರೈಕೆದಾರರು ಸರಕುಪಟ್ಟಿ ನೀಡಲು ಗಡುವು ನೀಡಲಾದ ದಿನಾಂಕ ಇದಾಗಿದೆ. ಎಲ್ಲಾದರೂ ಸರಕು ಚಲನೆಯನ್ನೂ ಒಳಗೊಂಡು ಪೂರೈಕೆ ಮಾಡಿದ್ದರೆ, “ಟೈಮ್ ಆಫ್ ರಿಮೂವಲ್’’ನ ಸಮಯದಲ್ಲಿ ಸರಕುಪಟ್ಟಿ ನೀಡಬೇಕು. ಇತರೆ ಸಂದರ್ಭಗಳಲ್ಲಿ ಸ್ವೀಕೃತಿದಾರರಿಗೆ ಸರಕು ಡೆಲಿವರಿ ಮಾಡಿದ ಸಂದರ್ಭದಲ್ಲಿ ನೀಡಬೇಕು.

ಪಾವತಿ ಸ್ವೀಕೃತಿ

ಯಾವ ಪಾವತಿ ಸ್ವೀಕೃತಿಯಾದ ದಿನಾಂಕವಿದು. ಈ ಸಂದರ್ಭದಲ್ಲಿ ಪಾಯಿಂಟ್ ಆಫ್ ಟ್ಯಾಕ್ಸೆಷನ್ ಈ ಮುಂದಿನವುಗಳಲ್ಲಿ ಯಾವುದು ಮೊದಲು ಬರುತ್ತೋ ಅವುಗಳಿಗೆ ಅನ್ವಯವಾಗುತ್ತದೆ. ಅಂದರೆ, ಸ್ವೀಕೃತಿದಾರರ ಲೆಕ್ಕ ಪುಸ್ತಕದಲ್ಲಿ ಪಾವತಿ ನಮೋದಿಸಿದ ದಿನಾಂಕ ಅಥವಾ ಬ್ಯಾಂಕ್ ಖಾತೆಗೆ ಪಾವತಿಯಾದ ದಿನಾಂಕವಾಗಿದೆ.

ಇದನ್ನು ಇನ್ನಷ್ಟು ಉದಾಹರಣೆಗಳ ಮೂಲಕ ಅರ್ಥಮಾಡಿಕೊಳ್ಳೋಣ

ಸನ್ನಿವೇಶ 1
ಸರಕುಪಟ್ಟಿ ದಿನಾಂಕ ಪಾವತಿ ಸ್ವೀಕೃತಿ ದಿನಾಂಕ ಸರಕು ಪೂರೈಸಿದ ದಿನಾಂಕ
ಜುಲೈ 20, 2017ಆಗಸ್ಟ್ 17, 2017 ಜುಲೈ 20, 2017

ಮೇಲಿನ ಸನ್ನಿವೇಶದಲ್ಲಿ ಪೂರೈಕೆಯ ಸಮಯ ಜುಲೈ 20, 2017 ಆಗಿದೆ. ಇದಕ್ಕೆ ಇರುವ ಕಾರಣಗಳೆಂದರೆ, ಸರಕುಪಟ್ಟಿಯ ದಿನಾಂಕ ಅಥವಾ ಪಾವತಿ ಸ್ವೀಕೃತಿ ದಿನಾಂಕದಲ್ಲಿ ಯಾವುದು ಮೊದಲೋ ಅದನ್ನು ಅನ್ವಯಿಸಲಾಗಿದೆ. ಈ ಪ್ರಕರಣದಲ್ಲಿ ಪಾವತಿ ಸ್ವೀಕೃತಿಗಿಂತ ಮೊದಲು ಸರಕುಪಟ್ಟಿ ದಿನಾಂಕ ಇದೆ.

ಸನ್ನಿವೇಶ 2
ಸರಕುಪಟ್ಟಿ ದಿನಾಂಕ ಪಾವತಿ ಸ್ವೀಕೃತಿ ದಿನಾಂಕ ಸರಕು ಪೂರೈಕೆ ಮಾಡಿದ ದಿನಾಂಕ
ಸೆಪ್ಟೆಂಬರ್ 05, 2017ಆಗಸ್ಟ್ 25, 2017 ಆಗಸ್ಟ್ 25, 2017

ಈ ಮೇಲಿನ ಸಂದರ್ಭದಲ್ಲಿ ಪೂರೈಕೆಯ ಸಮಯವು ಆಗಸ್ಟ್ 25, 2017 ಆಗಿದೆ. ಪಾವತಿ ಸ್ವೀಕೃತಿ ಅಥವಾ ಸರಕುಪಟ್ಟಿ ದಿನಾಂಕ ದಲ್ಲಿ ಯಾವುದು ಮೊದಲು ಬರುತ್ತದೋ ಆ ಕಾರಣವನ್ನು ಪರಿಶೀಲಿಸಬೇಕು. ಈ ಸಂದರ್ಭದಲ್ಲಿ ಪಾವತಿ ಸ್ವೀಕೃತಿಯು (ಮುಂಗಡ ಪಾವತಿ) ಸರಕುಪಟ್ಟಿಗಿಂತ ಮೊದಲು ನೀಡಲಾಗಿದೆ.

ಸನ್ನಿವೇಶ 3
ಸರಕುಪಟ್ಟಿ ದಿನಾಂಕ ಲೆಕ್ಕ ಪುಸ್ತಕದಲ್ಲಿ ಪಾವತಿ ಕುರಿತು ನಮೋದಿಸಿದ ದಿನಾಂಕ ಬ್ಯಾಂಕ್ ಖಾತೆ ಮೂಲಕ ಪಾವತಿ ಸ್ವೀಕೃತಿ ಸರಕು ಪೂರೈಕೆ ಮಾಡಿರುವ ಸಮಯ
ಸೆಪ್ಟೆಂಬರ್ 10, 2017ಆಗಸ್ಟ್ 29, 2017ಸೆಪ್ಟೆಂಬರ್ 03, 2017 ಆಗಸ್ಟ್ 29, 2017

ಈ ಮೇಲಿನ ಸನ್ನಿವೇಶದಲ್ಲಿ, ಆಗಸ್ಟ್ 29, 2017 ಪೂರೈಕೆ ಮಾಡಿರುವ ಸಮಯವಾಗಿದೆ. ಪಾವತಿ ಸ್ವೀಕೃತಿ ಅಥವಾ ಸರಕುಪಟ್ಟಿ ದಿನಾಂಕ ದಲ್ಲಿ ಯಾವುದು ಮೊದಲು ಬರುತ್ತದೋ ಆ ಕಾರಣವನ್ನು ಪರಿಶೀಲಿಸಬೇಕು. ಪಾವತಿ ಸ್ವೀಕೃತಿಯ ದಿನಂಕವು ಈ ಮುಂದಿನ ಅನ್ವಯ ಯಾವುದು ಬೇಗವೋ ಹಾಗೆ ಇರುತ್ತದೆ:
• ಲೆಕ್ಕ ಪುಸ್ತಕದಲ್ಲಿ ಪಾವತಿಯನ್ನು ನಮೋದಿಸಿದ ದಿನಾಂಕ ಅಥವಾ
• ಬ್ಯಾಂಕ್ ಖಾತೆಗೆ ಹಣ ಪಾವತಿಯಾದ ದಿನಾಂಕ.

ಈ ಸಂದರ್ಭದಲ್ಲಿ, ಲೆಕ್ಕ ಪುಸ್ತಕದಲ್ಲಿ ಪಾವತಿಯನ್ನು ನಮೋದಿಸಿದ ದಿನಾಂಕವು ಬ್ಯಾಂಕ್ ಖಾತೆಗೆ ಹಣ ಪಾವತಿಯಾದ ದಿನಾಂಕಕ್ಕಿಂತ ಮೊದಲು ಬಂದಿದೆ. ಹೀಗಾಗಿ, ಆಗಸ್ಟ್ 29, 2017 ಪೂರೈಕೆಯ ಸಮಯವಾಗಿರುತ್ತದೆ.

ಸನ್ನಿವೇಶ 4
ಸರಕುಪಟ್ಟಿ ದಿನಾಂಕ ಲೆಕ್ಕ ಪುಸ್ತಕದಲ್ಲಿ ಪಾವತಿ ಕುರಿತು ನಮೋದಿಸಿದ ದಿನಾಂಕ ಬ್ಯಾಂಕ್ ಖಾತೆ ಮೂಲಕ ಪಾವತಿ ಸ್ವೀಕೃತಿ ಸರಕು ಪೂರೈಕೆ ಮಾಡಿರುವ ಸಮಯ
ಸೆಪ್ಟೆಂಬರ್ 10, 2017ಸೆಪ್ಟೆಂಬರ್ 5, 2017ಆಗಸ್ಟ್ 31, 2017 ಆಗಸ್ಟ್ 31, 2017

ಈ ಮೇಲಿನ ಸಂದರ್ಭದಲ್ಲಿ ಆಗಸ್ಟ್ 31, 2017 ಪೂರೈಕೆಯ ಸಮಯವಾಗಿದೆ. ಪಾವತಿ ಸ್ವೀಕೃತಿ ಅಥವಾ ಸರಕುಪಟ್ಟಿ ದಿನಾಂಕ ದಲ್ಲಿ ಯಾವುದು ಮೊದಲು ಬರುತ್ತದೋ ಆ ಕಾರಣವನ್ನು ಪರಿಶೀಲಿಸಬೇಕು. ಈ ಸಂದರ್ಭದಲ್ಲಿ, ಬ್ಯಾಂಕ್ ಖಾತೆಗೆ ಹಣ ಪಾವತಿಯಾದ ದಿನಾಂಕವು ಲೆಕ್ಕ ಪುಸ್ತಕದಲ್ಲಿ ಪಾವತಿಯನ್ನು ನಮೋದಿಸಿದ ದಿನಾಂಕಕ್ಕಿಂತ ಮೊದಲು ಬಂದಿದೆ.

ಸನ್ನಿವೇಶ 5
ಪೂರೈಕೆಗಾಗಿ ತೆಗೆದ ಸರಕು ಪಾವತಿಯ ಸ್ವೀಕೃತಿ ಸರಕು ಪೂರೈಕೆ ಮಾಡಿರುವ ಸಮಯ
25th August, 20175th September, 201725th August, 2017

ಮೇಲಿನ ಸಂದರ್ಭಲ್ಲಿ ಸರಕುಪಟ್ಟಿಯ ದಿನಾಂಕ ಅನ್ವಯವಾಗಿಲ್ಲ. ಇಲ್ಲಿ ಸರಕುಪಟ್ಟಿ ನೀಡಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕಿಂತ ಮತ್ತು ಪಾವತಿ ಸ್ವೀಕೃತಿಯ ಕೊನೆಯ ದಿನಾಂಕಕ್ಕಿಂತ ಮೊದಲು ಪೂರೈಕೆ ಮಾಡಲಾಗಿದೆ. ಎಲ್ಲಾದರೂ ಸರಕು ಸಾಗಾಟ ಮಾಡಬೇಕಿದ್ದರೆ, ಸರಕು ಪಟ್ಟಿ ನೀಡಲು ಕೊನೆಯ ದಿನಾಂಕವು ಸರಕನ್ನು ತೆಗೆಯುವ ದಿನಾಂಕವಾಗಿರುತ್ತದೆ. ಹೀಗಾಗಿ ಇಲ್ಲಿ ಆಗಸ್ಟ್ 25, 2017 ಸರಕು ಪೂರೈಕೆ ಮಾಡಿರುವ ದಿನಾಂಕವಾಗಿದೆ. ಸರಕು ತೆಗೆಯುವ ದಿನಾಂಕಕ್ಕಿಂತ ಪಾವತಿ ಸ್ವೀಕರಿಸುವ ದಿನಾಂಕವು ಮೊದಲು ಆಗಿರುವುದರಿಂದ ಈ ರೀತಿ ಆಗಿದೆ.

ಶೀಘ್ರದಲ್ಲಿ ನಿರೀಕ್ಷಿಸಿ

ರಿವರ್ಸ್ ಚಾರ್ಜ್ ನಲ್ಲಿ ಸರಕಿನ ಪೂರೈಕೆಯ ಸಮಯ ಯಾವುದು?

Are you GST ready yet?

Get ready for GST with Tally.ERP 9 Release 6

74,097 total views, 162 views today

Yarab A

Author: Yarab A

Yarab is associated with Tally since 2012. In his 7+ years of experience, he has built his expertise in the field of Accounting, Inventory, Compliance and software product for the diverse industry segment. Being a member of ‘Centre of Excellence’ team, he has conducted several knowledge sharing sessions on GST and has written 200+ blogs and articles on GST, UAE VAT, Saudi VAT, Bahrain VAT, iTax in Kenya and Business efficiency.