Language

  • English
  • Hindi
  • Marathi
  • Kannada
  • Telugu
  • Tamil
  • Gujarati

ನಿಮ್ಮ ವ್ಯಾಪಾರವನ್ನು ಪ್ರಸಕ್ತ ಕಾನೂನಿನ ಅನ್ವಯ ನೋಂದಣಿ ಮಾಡಿಸಿ ಜಿಎಸ್ಟಿಗೆ ವರ್ಗಾವಣೆ ಮಾಡಬೇಕಿರುವುದು ನೀವು ಮಾಡಬೇಕಾದ ಮೊದಲ ಮತ್ತು ಮುಖ್ಯವಾದ ಕಾರ್ಯವಾಗಿದೆ.ಲಭ್ಯವಿರುವ ಜಿಎಸ್ಟಿ, ಪರಿವರ್ತನೆ ನಿಬಂಧನೆಗಳನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಅತ್ಯಂತ ಕಷ್ಟಕಾರಿಯಾಗಬಹುದು ಮತ್ತು ಸರಳವಾಗಿ ಜಿಎಸ್ಟಿಗೆ ವರ್ಗಾವಣೆಗೊಳ್ಳುವುದು ಮತ್ತು ವರ್ಗಾವಣೆಯ ಲಾಭಗಳನ್ನು ಪಡೆದುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಸಹ ಅಗತ್ಯವಾಗಿದೆ. ಸೂಕ್ತವಾದ ಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಮುಂಚಿತವಾಗಿ ಪಡೆಯಲು ನೀವು ನಿಮ್ಮ ಅಕೌಂಟಿಂಗ್ ಮತ್ತು ರಿಪೋರ್ಟಿಂಗ್ ಪ್ರಕ್ರಿಯೆಗಳನ್ನು, ಪ್ರೊಕ್ಯುರ್ ಮೆಂಟ್, ಲಾಜಿಸ್ಟಿಕ್ ನಿರ್ಧಾರಗಳನ್ನು ಪರಾಮರ್ಶಿಸಬೇಕಿದೆ.

ಈಗ, ತಯಾರಿಕೆ, ಮಾರಾಟ ಮತ್ತು ಸೇವಾ ಚಟುವಟಿಕೆಗಳನ್ನು ಪ್ರತ್ಯೇಕ ಪರೋಕ್ಷ ತೆರಿಗೆ ವ್ಯವಸ್ಥೆ ಮೂಲಕ ನಡೆಸಲಾಗುತ್ತದೆ. ತಯಾರಿಕಾ ಚಟುವಟಿಕೆಗಳಿಗೆ ಕೇಂದ್ರ ಅಬಕಾರಿಯಡಿ, ಮಾರಾಟವು ರಾಜ್ಯ ವ್ಯಾಟ್/ಸಿಎಸ್ಟಿಯಡಿ ಮತ್ತು ಸೇವಾ ಚಟುವಟಿಕೆಗಳು ಸೇವಾ ತೆರಿಗೆ ಕಾಯಿದೆಯಡಿ ಕವರ್ ಆಗುತ್ತದೆ.

ಅತ್ಯುತ್ತಮವಾಗಿ ಮತ್ತು ಸರಳವಾಗಿ ಅರ್ಥ ಮಾಡಿಕೊಳ್ಳುವ ಸಲುವಾಗಿ, ಪರಿವರ್ತನೆ ನಿಬಂಧನೆಗಳನ್ನುಈ ಕೆಳಗಿನ ವಿವಿಧ ತೆರಿಗೆಯ ವಿಧಗಳಿಗೆ ಅನುಗುಣವಾಗಿ ವಿಂಗಡಿಸಲಾಗಿದೆ:

  • ಕೇಂದ್ರ ಅಬಕಾರಿ
  • ವ್ಯಾಟ್
  • ಸೇವಾ ತೆರಿಗೆ

ನಿಮ್ಮಲ್ಲಿ ಕೆಲವು ಪ್ರಶ್ನೆಗಳು ಇರಬಹುದು:

  • ಜಿಎಸ್ಟಿ ಅನುಷ್ಠಾನಕ್ಕೆ ಬರುವ ಮೊದಲು ಇನ್ಪುಟ್ ತೆರಿಗೆ ಪಾವತಿಯ ಬಾಕಿ ಲಭ್ಯವಿದ್ದರೆ ಏನಾಗಬಹುದು?
  • ಇನ್ನೂ ಪಡೆಯಬೇಕಿರುವ ಬಂಡವಾಳ ಸರಕುಗಳ ಮೇಲಿನ ಇನ್ಪುಟ್ ತೆರಿಗೆ ಕ್ರೆಡಿಟ್ ಗೆ ಏನಾಗಬಹುದು?

ಈ ಪ್ರಶ್ನೆಗಳಿಗೆ ಸನ್ನಿವೇಶ ಆಧಾರದಲ್ಲಿ ನಾವು ಈ ರೀತಿ ಉತ್ತರಿಸುತ್ತೇವೆ.

ಸನ್ನಿವೇಶ 1: ಪಡೆದಿರುವ ಸೆನ್ ವ್ಯಾಟ್ ಮತ್ತು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್

ಕೇಂದ್ರ ಅಬಕಾರಿ

central excise to gst transition

ತಯಾರಕರು

ಜಿಎಸ್ಟಿ ಅನುಷ್ಠಾನಕ್ಕೆ ಬಂದ ಮೊದಲ ದಿನಾಂಕದವರೆಗಿನ, ಕೊನೆಯ ದಿನಾಂಕಕ್ಕೆ ಲಭ್ಯವಿರುವ ಸೆನ್ ವ್ಯಾಟ್ ಕ್ರೆಡಿಟ್ ಬಾಕಿ ಅನ್ನು ಇನ್ಪುಟ್ ಕ್ರೆಡಿಟ್ ಆಗಿ ತಯಾರಕರು ಮುಂದಕ್ಕೆ ಕೊಂಡೊಯ್ಯಬಹುದು.

ಇದರ ಅರ್ಥವೇನು?

ಇಂದು, ಸಣ್ಣ ಪ್ರಮಾಣದ ಉದ್ದಿಮೆಗಳು(ಎಸ್ ಎಸ್ ಐ- ವಹಿವಾಟು 4 ಕೋಟಿ ರೂ.ಗಿಂತ ಹೆಚ್ಚಿಲ್ಲದಿರುವುದು) ಹೊರತಾದ ತಯಾರಕರು ತಮ್ಮ ಮಾಸಿಕ ರಿಟರ್ನ್ಸ್ ಅನ್ನು ಫಾರ್ಮ್ ಇಆರ್-1ರಲ್ಲಿ ಸಲ್ಲಿಸಬೇಕು ಮತ್ತು ಎಸ್ ಎಸ್ ಐ ತ್ರೈಮಾಸಿಕ ರಿಟರ್ನ್ ಅನ್ನು ಫಾರ್ಮ್ ಇಆರ್-3ಯಲ್ಲಿ ಭರ್ತಿ ಮಾಡಬೇಕು. ಫಾರ್ಮ್ ಇಆರ್-1 ಅಥವಾ ಫಾರ್ಮ್ ಇಆರ್-3ಯಲ್ಲಿಜಿಎಸ್ಟಿ ಅನುಷ್ಠಾನಕ್ಕೆ ಬಂದ ಮೊದಲು ಅಥವಾ ಸೆನ್ ವ್ಯಾಟ್ (CENVAT) ಕೊನೆಯ ದಿನಾಂಕದ ಮೊತ್ತವನ್ನು ಸಿಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಆಗಿ ಕಳುಹಿಸಲು ಅವಕಾಶವಿದೆ.

ಇದನ್ನು ಒಂದು ಉದಾಹರಣೆ ಮೂಲಕ ಅರ್ಥ ಮಾಡಿಕೊಳ್ಳೋಣ.

ಕರ್ನಾಟಕದಲ್ಲಿ ಇರುವ ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್, ಅಬಕಾರಿ ಮತ್ತು ಕರ್ನಾಟಕ ವ್ಯಾಟ್ ನಡಿ ನೋಂದಾಯಿಸಲ್ಪಟ್ಟಿದೆ. 2017ರ ಮಾರ್ಚ್ 31ರ ವೇಳಗೆ ಸೂಪರ್ ಕಾರ್ಸ್ ಲಿಮಿಟೆಡ್ ನ ಫಾರ್ಮ್ ಇಆರ್-1 ಹೀಗಿರುತ್ತದೆ:

ಫಾರ್ಮ್ ಇ.ಆರ್.-1

ಮಾರ್ಚ್ ತಿಂಗಳು ಮತ್ತು 2017ನೇ ವರ್ಷ ದ ತೆರಿಗೆ ವಿಧಿಸಬಹುದಾದ ಸರಕುಗಳು ಮತ್ತು ಸೆನ್ ವ್ಯಾಟ್ ಕ್ರೆಡಿಟ್
ಕ್ರೆಡಿಟ್ ಮಾಹಿತಿ
ಸೆನ್ ವ್ಯಾಟ್
AED_TTA
NCCD
ADE_LVD_CL_85
ADC_LVD_CT_75
EDU_CESS
SEC_EDU_CESS
SERVICE_TAX
EDU_CESSST
SEC_EDU_CESS_ST
ಮುಕ್ತಾಯದ ಬ್ಯಾಲ್ಎನ್ಸ್25,000.000.000.000.000.000.000.000.000.000.00

ಮಾರ್ಚ್ 2017ರ ಫಾರ್ಮ್ ಇಆರ್-1ರ ಅನ್ವಯ ಸೂಪರ್ ಕಾರ್ಸ್ ಲಿಮಿಟೆಡ್ ನ ಸೆನ್ ವ್ಯಾಟ್ ಕ್ಲೋಸಿಂಗ್ ಬಾಕಿ 25,000 ರೂ. ಆಗಿರುತ್ತದೆ.

ಸೆನ್ ವ್ಯಾಟ್ ಕ್ರೆಡಿಟ್ ಅನ್ನು ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ಮುಂದಕ್ಕೆ ಕೊಂಡೊಯ್ಯಬಹುದೇ?

ಹೌದು, ಸೂಪರ್ ಕಾರ್ಸ್ ಲಿಮಿಟೆಡ್ ನ ಮುಕ್ತಾಯಗೊಂಡ ಕ್ಯಾನ್ ವ್ಯಾಟ್ ಬ್ಯಾಲೆನ್ಸ್ 25,000 ರೂ. ಇರುವುದರಿಂದ ಮುಂದಕ್ಕೆ ಕೊಂಡೊಯ್ಯಲು ಸಂಪೂರ್ಣ ಅರ್ಹತೆಯನ್ನು ಹೊಂದಿರುತ್ತದೆ. ಈ ಕೆಳಗೆ ವಿವರಿಸಿರುವ ಷರತ್ತುಗಳನ್ನು ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ಪೂರೈಸಿರುವುದು ಇದಕ್ಕೆ ಕಾರಣವಾಗಿದೆ:

  • ರಿಟರ್ನ್ ನಲ್ಲಿ ಸೆನ್ ವ್ಯಾಟ್ 25,000 ರೂಪಾಯಿಯು ಕಾಣಿಸುತ್ತದೆ ಮತ್ತು
  • ಜಿಎಸ್ಟಿಯಲ್ಲಿ ಇದಕ್ಕೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಆಗಿ ಅವಕಾಶ ಇರುತ್ತದೆ.

ಈಗ, ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ಗೆ ಸೆನ್ ವ್ಯಾಟ್ ಎನ್ನುವುದು ಸಿಜಿಎಸ್ಟಿ ಕ್ರೆಡಿಟ್ ಆಗಲಿದೆ. ನಿಗದಿತಪಡಿಸಿದಂತೆ ಭಾದ್ಯತೆಗಳನ್ನು ಸೆಟ್-ಆಫ್ ಮಾಡಲು ಇದನ್ನು ಬಳಸಿಕೊಳ್ಳಲು ಅವಕಾಶವಿದೆ.

ವಿತರಕರಿಗೆ ಅಬಕಾರಿ ಸುಂಕ

ನಿಮ್ಮ ವ್ಯಾಪಾರವು ಅಬಕಾರಿಯಡಿ ಬರುವ ಸರಕು ಆಗಿದ್ದರೆ, ವಿತರಕರಾಗಿ ಕೇಂದ್ರ ಅಬಕಾರಿಯಡಿ ನೋಂದಣಿ ಮಾಡಲು ಅವಕಾಶವಿದೆ. ಇಂದು, ನೀವು ಅಬಕಾರಿ ಸುಂಕವಾಗಿ ಪಾವತಿಸುವ ಮೊತ್ತವು ಕ್ರೆಡಿಟ್ ಆಗಿ ಲಭ್ಯ ಇರುವುದಿಲ್ಲ. ಮೊದಲ ಹಂತದ ಅಥವಾ ಎರಡನೇ ಹಂತದ ವಿತರಕರಾಗಿ, ಅಬಕಾರಿ ಸುಂಕವಾಗಿ ಪಾವತಿಸಿರುವುದನ್ನು ಉತ್ಪನ್ನದ ದರವಾಗಿ ಸೇರಿಸಿಕೊಳ್ಳಬಹುದಾಗಿದೆ. ಇದನ್ನು ತಯಾರಿಕರಿಗೆ ಮಾರಾಟ ಮಾಡಿದಾಗ, ವರ್ಗಾಯಿಸಲ್ಪಟ್ಟ ಅಬಕಾರಿ ಸುಂಕವನ್ನು ಖರೀದಿಸುವ ತಯಾರಿಕರು ಸೆನ್ ವ್ಯಾಟ್ ಕ್ರೆಡಿಟ್ ಆಗಿ ಕ್ಲೇಮ್ ಮಾಡಿಕೊಳ್ಳಬಹುದಾಗಿದೆ.

ಜಿಎಸ್ಟಿಗೆ ವರ್ಗಾವಣೆಗೊಂಡ ದಿನಾಂಕದಿಂದ, ನೀವು ಹೊಂದಿರುವ ಮುಕ್ತಾಯಗೊಂಡ ಸ್ಟಾಕ್ ಗೆ ಅಬಕಾರಿ ಸುಂಕವನ್ನು ಪಾವತಿಸಿರುವುದನ್ನು, ಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಆಗಿ ಮುಂದಕ್ಕೆ ಕೊಂಡೊಯ್ಯಬಹುದಾಗಿದೆ.

ವ್ಯಾಟ್

gst for vat dealers

ಸಂಬಂಧಪಟ್ಟ ರಾಜ್ಯಗಳು ನಿಗದಿಪಡಿಸಿದಂತೆ ವ್ಯಾಟ್ ನಡಿ ನೋಂದಾಣಿ ಮಾಡಿರುವ ವ್ಯವಹಾರಗಳು ಮಾಸಿಕ ಅಥವಾ ತ್ರೈಮಾಸಿಕವಾಗಿ ವ್ಯಾಟ್ ರಿಟರ್ನ್ ಫಾರ್ಮ್ ಸಲ್ಲಿಸಬೇಕು. ವ್ಯಾಟ್ ರಿಟರ್ನ್ ಫಾರ್ಮ್ ನಲ್ಲಿರುವ ಇನ್ಪುಟ್ ವ್ಯಾಟ್ ಕ್ರೆಡಿಟ್ ಅನ್ನು ಎಸ್ ಜಿ ಎಸ್ ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಆಗಿ ಮುಂದಕ್ಕೆ ಕೊಂಡೊಯ್ಯಲಾಗುತ್ತದೆ.

ಇದನ್ನು ಒಂದು ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳೋಣ

ಕರ್ನಾಟಕದಲ್ಲಿ ಇರುವ ಒಂದು ಕಾರು ತಯಾರಿಕಾ ಕಂಪನಿಯಾದ ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್, ಕರ್ನಾಟಕದ ವ್ಯಾಟ್ ನಡಿ ನೋಂದಣಿ ಮಾಡಿಸಿದೆ. ಮಾರ್ಚ್ 31, 2017ಕ್ಕೆ ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ನ ವ್ಯಾಟ್ ಫಾರ್ಮ್ 100(ಕರ್ನಾಟಕದ ಮಾಸಿಕ ರಿಟರ್ನ್ ಫಾರ್ಮ್) ಈ ಕೆಳಗಿನಂತೆ ಇರಲಿದೆ:

ಫಾರ್ಮ್ ವ್ಯಾಟ್ 100 (ನಿಯಮ 138ನ್ನು ನೋಡಿ)

ರಿಟರ್ನ್

ತೆರಿಗೆ ಅವಧಿ (ಮಾಸಿಕ/ ತ್ರೈಮಾಸಿಕ)

ಮಾರ್ಚ್ 2017
ಮುಂದಕ್ಕೆ ಫಾರ್ವಾರ್ಡ್ ಮಾಡಲಾದ ಕ್ರೆಡಿಟ್/ಅಬಕಾರಿ ಪಾವತಿ5,000.00

ಮಾರ್ಚ್ 2017ರ ವ್ಯಾಟ್ ಫಾರ್ಮ್ 100ರ ಅನ್ವಯ, ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ನ ಇನ್ಪುಟ್ ವ್ಯಾಟ್ ಕ್ರೆಡಿಟ್ ಬಾಕಿ 5000 ಆಗಿರುತ್ತದೆ.


ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್, ಇನ್ಪುಟ್ ವ್ಯಾಟ್ ಕ್ರೆಡಿಟ್ ಅನ್ನು ಮುಂದಕ್ಕೆ ಕೊಂಡೊಯ್ಯಬಹುದೇ?

ಹೌದು, ಸೂಪರ್ ಕಾರ್ಸ್ ಲಿಮಿಟೆಡ್ ಗೆ ಮುಕ್ತಾಯಗೊಂಡ ಇನ್ಪುಟ್ ವ್ಯಾಟ್ 5,000 ರೂ. ಅನ್ನು ಮುಂದಕ್ಕೆ ಕೊಂಡೊಯ್ಯಲು ಸಂಪೂರ್ಣ ಅರ್ಹತೆ ಇರುತ್ತದೆ. ಈ ಕೆಳಗೆ ವಿವರಿಸಿರುವ ಷರತ್ತುಗಳನ್ನು ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ಪೂರೈಸಿರುವುದು ಇದಕ್ಕೆ ಕಾರಣವಾಗಿದೆ:

  • ರಿಟರ್ನ್ ನಲ್ಲಿ ಇನ್ಪುಟ್ ವ್ಯಾಟ್ 5,000 ರೂಪಾಯಿಯು ಕಾಣಿಸುತ್ತದೆ ಮತ್ತು
  • ಜಿಎಸ್ಟಿಯಲ್ಲಿ ಇದಕ್ಕೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಆಗಿ ಅವಕಾಶ ಇರುತ್ತದೆ.

ಈಗ, ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್, ಇನ್ಪುಟ್ ವ್ಯಾಟ್ ಅನ್ನು ಎಸ್ ಜಿ ಎಸ್ ಟಿ ಕ್ರೆಡಿಟ್ ಆಗಿ ಮುಂದಕ್ಕೆ ಕೊಂಡೊಯ್ಯಲು ಅವಕಾಶವಿದೆ. ನಿಗದಿತ ನಮೂನೆಯಲ್ಲಿ ಭಾದ್ಯತೆಗಳನ್ನು ಸೆಟ್ ಆಫ್ ಮಾಡಲು ಇದನ್ನು ಬಳಸಿಕೊಳ್ಳಬಹುದಾಗಿದೆ.

ಸೇವಾ ತೆರಿಗೆ

gst for service tax tax payers

ಇಂದು, ತೆರಿಗೆ ವಿಧಿಸಬಹುದಾದ ಒಟ್ಟು ಸೇವೆಯು 10 ಲಕ್ಷವನ್ನು ಮೀರಿದ್ದರೆ ಒಬ್ಬ ಸೇವಾದಾರರಿಗೆ ನೋಂದಾಣಿ ಮಾಡಲು ಅವಕಾಶ ಇರುತ್ತದೆ. ತೆರಿಗೆ ವಿಧಿಸಬಹುದಾದ ಸೇವೆಗಳಿಗೆ ಈ ಮುಂದಿನ ವಿಧದ ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ.

ತೆರಿಗೆತೆರಿಗೆ ದರಇನ್ಪುಟ್ ಕ್ರೆಡಿಟ್ ಲಭ್ಯವಿದೆಯೇ?ಯಾವುದರ ವಿರುದ್ಧ?
ಸೇವಾ ತೆರಿಗೆ

14%

                  ಹೌದುಸೇವಾ ತೆರಿಗೆ ಮತ್ತು ಅಬಕಾರಿ ಭಾದ್ಯತೆ
ಸ್ವಚ್ಚ ಭಾರತ್ ಸೆಸ್

0.5%

ಇಲ್ಲ

ಕೃಷಿ ಕಲ್ಯಾಣ್ ಸೆಸ್

0.5%

ಹೌದು

ಕೃಷಿ ಕಲ್ಯಾಣ ಸೆಸ್ ಬಾಧ್ಯತೆಗೆ ಮಾತ್ರ

 

ಸೇವಾದಾರರಾಗಿ, ನೀವು ಅರ್ಧವಾರ್ಷಿಕ ಫಾರ್ಮ್ ಎಸ್ ಟಿ-3 ರಿಟರ್ನ್ ಅನ್ನು ಸಲ್ಲಿಸಬೇಕು. ಸೇವಾ ತೆರಿಗೆ ಇನ್ಪುಟ್ ಟ್ಯಾಕ್ಸ್ ನ ಮುಕ್ತಾಯಗೊಂಡ ಬಾಕಿಯನ್ನು ಸಿಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಆಗಿ ಮುಂದಕ್ಕೆ ಕೊಂಡೊಯ್ಯಲಾಗುತ್ತದೆ.

ಇದನ್ನು ಒಂದು ಉದಾಹರಣೆ ಮೂಲಕ ಅರ್ಥ ಮಾಡಿಕೊಳ್ಳೋಣ

ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್, ಕರ್ನಾಟಕದಲ್ಲಿ ಇರುವ ಒಂದು ಕಾರು ತಯಾರಿಕಾ ಕಂಪನಿಯಾಗಿದೆ. ಇದರ ಸೇವಾ ಘಟಕವೂ ಕರ್ನಾಟಕದಲ್ಲಿದೆ. ಮಾರ್ಚ್ 31, 2017ಕ್ಕೆ ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ನ ಎಸ್ ಟಿ-3 ರಿಟರ್ನ್ ಫಾರ್ಮ್ ಈ ಕೆಳಗಿನಂತೆ ಇರಲಿದೆ:

service_tax

ಮಾರ್ಚ್ 2017ರ ಫಾರ್ಮ್ ಎಸ್ ಟಿ-3ರ ಅನ್ವಯ, ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ನ ಮುಕ್ತಾಯಗೊಂಡ ಸೆನ್ ವ್ಯಾಟ್ (ಸೇವಾ ತೆರಿಗೆ ಇನ್ಪುಟ್ ಕ್ರೆಡಿಟ್) ಬಾಕಿಯನ್ನು 30,000 ಆಗಿರುತ್ತದೆ.

ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್, ಸೆನ್ ವ್ಯಾಟ್ ಕ್ರೆಡಿಟ್ ಅನ್ನು ಮುಂದಕ್ಕೆ ಕೊಂಡೊಯ್ಯಬಹುದೇ?

ಹೌದು, ಸೂಪರ್ ಕಾರ್ಸ್ ಲಿಮಿಟೆಡ್ ಗೆ ಮುಕ್ತಾಯಗೊಂಡ ಸೆನ್ ವ್ಯಾಟ್ ಬ್ಯಾಲೆನ್ಸ್ 30,000 ರೂ. ಅನ್ನು ಮುಂದಕ್ಕೆ ಕೊಂಡೊಯ್ಯಲು ಸಂಪೂರ್ಣ ಅರ್ಹತೆ ಇರುತ್ತದೆ. ಈ ಕೆಳಗೆ ವಿವರಿಸಿರುವ ಷರತ್ತುಗಳನ್ನು ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ಪೂರೈಸಿರುವುದು ಇದಕ್ಕೆ ಕಾರಣವಾಗಿದೆ:

  • ರಿಟರ್ನ್ ನಲ್ಲಿ ಇನ್ಪುಟ್ ವ್ಯಾಟ್ 30,000 ರೂಪಾಯಿಯು ಕಾಣಿಸುತ್ತದೆ ಮತ್ತು
  • ಜಿಎಸ್ಟಿಯಲ್ಲಿ ಇದಕ್ಕೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಆಗಿ ಅವಕಾಶ ಇರುತ್ತದೆ.

ಈಗ, ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ಗೆ ಸೆನ್ ವ್ಯಾಟ್ ಎನ್ನುವುದು ಸಿಜಿಎಸ್ಟಿ ಕ್ರೆಡಿಟ್ ಆಗಲಿದೆ. ನಿಗದಿತ ನಮೂನೆಯಲ್ಲಿ ಭಾದ್ಯತೆಗಳನ್ನು ಸೆಟ್ ಆಫ್ ಮಾಡಲು ಇದನ್ನು ಬಳಸಿಕೊಳ್ಳಬಹುದಾಗಿದೆ.

ಸನ್ನಿವೇಶ 2: ಲಭ್ಯವಿಲ್ಲದ ಸೆನ್ ವ್ಯಾಟ್ ಕ್ರೆಡಿಟ್ ಮತ್ತು ಬಂಡವಾಳ ಸರಕುಗಳ ಮೇಲೆ ಇನ್ಪುಟ್ ವ್ಯಾಟ್

ಈಗ, ಕೇಂದ್ರ ಅಬಕಾರಿ ಸುಂಕದಡಿ, ಪ್ರಸಕ್ತ ವರ್ಷದಲ್ಲಿ ಸೆನ್ ವ್ಯಾಟ್ ಕ್ರೆಡಿಟ್ ಹೆಚ್ಚೆಂದರೆ ಶೇಕಡ 50ರವರೆಗೆ ಲಭಿಸಲಿದೆ, ಉಳಿದಿರುವುದನ್ನು ಮುಂಬರುವ ವರ್ಷಗಳಲ್ಲಿ ಪಡೆಯಲು ಅವಕಾಶವಿರುತ್ತದೆ. ಹೀಗೆಯೇ, ಬಂಡವಾಳ ಸರಕುಗಳ ಖರೀದಿಗೆ ಪಾವತಿಸಿರುವ ವ್ಯಾಟ್ ಅನ್ನು ಸಂಪೂರ್ಣವಾಗಿ ಇನ್ಪುಟ್ ವ್ಯಾಟ್ ಆಗಿ ತಕ್ಷಣ ಪಡೆಯಲು ಸಾಧ್ಯವಿಲ್ಲ. ಆಯಾ ರಾಜ್ಯದ ವ್ಯಾಟ್ ಕಾನೂನಿಗೆ ತಕ್ಕಂತೆ ಮತ್ತು ಖರೀದಿಸಿರುವ ಬಂಡವಾಳ ಸರಕುಗಳಿಗೆ ತಕ್ಕಂತೆ ಇನ್ಪುಟ್ ವ್ಯಾಟ್ ಅನ್ನು ಪಡೆಯಬಹುದಾಗಿದೆ,

  • ವಿವಿಧ ಹಣಕಾಸು ವರ್ಷಗಳಲ್ಲಿ ಕಂತುಗಳು ವಿಸ್ತರಿಸಿ ಅಥವಾ ಹಂಚಿಕೊಂಡಿದ್ದರೆ
  • ವಾಣಿಜ್ಯ ಉತ್ಪಾದನೆಯು ಆರಂಭವಾದ ನಂತರ ಪಾವತಿ ಮತ್ತು ಇತ್ಯಾದಿಗಳು

ಬಂಡಾವಳ ಸರಕುಗಳ ಮೇಲೆ ಸೆನ್ ವ್ಯಾಟ್ ಕ್ರೆಡಿಟ್ ಪಡೆಯಲು ಈ ಚಾಲ್ತಿಯಲ್ಲಿರುವ ನಿರ್ಬಂಧಗಳು ಇರುವುದರಿಂದ, ಜಿಎಸ್ಟಿಗೆ ಪರಿವರ್ತನೆ ಮಾಡುವ ದಿನದಂದು ಅಲ್ಲಿ ಕೆಲವು ಲಭ್ಯವಿರದ ಸೆನ್ ವ್ಯಾಟ್ ಮತ್ತು ಇನ್ಪುಟ್ ವ್ಯಾಟ್ ಇರುತ್ತದೆ.

ಇದನ್ನು ಇನ್ನೂ ಉತ್ತಮವಾಗಿ ಅರ್ಥಮಾಡಿಕೊಳ್ಳಲು ಉದಾಹರಣೆಯ ಜೊತೆ ಚರ್ಚಿಸೋಣ

ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್, ಫೆಬ್ರವರಿ 1, 2017ರಂದು ಕೆಲವು ಮೆಷಿನರಿಗಳನ್ನು ಖರೀದಿಸಿದೆ. ಈ ವ್ಯವಹಾರದ ವಿವರವನ್ನು ಮುಂದೆ ನೀಡಲಾಗಿದೆ:

ವಿವರಗಳುದರ (ರೂ.ಗಳಲ್ಲಿ)
ಯಂತ್ರೋಪಕರಣಗಳು1,00,000
ಅಬಕಾರಿ ಸುಂಕ@12.5%12,500
ವ್ಯಾಟ್ 14.5%16,313
ಒಟ್ಟು1,28,813

ಪ್ರಸಕ್ತ ಸೆನ್ ವ್ಯಾಟ್ ನಿಬಂಧನೆಗಳ ಅನುಸಾರ, ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ಗೆ ಈ ವರ್ಷದಲ್ಲಿ ಶೇಕಡ 50ರಷ್ಟು ಸೆನ್ ವ್ಯಾಟ್ ಪಡೆಯಲು ಅವಕಾಶವಿದೆ ಮತ್ತು ಉಳಿದಿರುವುದನ್ನು ಮುಂಬರುವ ವರ್ಷದಲ್ಲಿ ಪಡೆಯಬಹುದಾಗಿದೆ. ಮತ್ತು, ಕರ್ನಾಟಕದ ವ್ಯಾಟ್ ಷರತ್ತುಗಳ ಅನ್ವಯ ವಾಣಿಜ್ಯ ಉತ್ಪಾದನೆ ಆರಂಭಿಸಿದ ನಂತರವಷ್ಟೇ ಇನ್ಪುಟ್ ವ್ಯಾಟ್ ಕ್ರೆಡಿಟ್ ಪಡೆಯಬಹುದಾಗಿದೆ. ವಾಣಿಜ್ಯ ಉತ್ಪಾದನೆಯು ಜೂನ್ 17 ತಿಂಗಳಲ್ಲಿ ಆರಂಭವಾಗಲಿದೆ ಎಂದು ಊಹಿಸಿ ಪರಿಶೀಲಿಸೋಣ.

ಈ ಸನ್ನಿವೇಶವನ್ನು ಪರಿಗಣನೆಗೆ ತೆಗೆದುಕೊಂಡರೆ- ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ಗೆ

  • ಶೇಕಡ 50ರಷ್ಟು ಸೆನ್ ವ್ಯಾಟ್. ಉದಾಹರಣೆಗೆ: ಈ ಆರ್ಥಿಕ ವರ್ಷದಲ್ಲಿ(2016-17) 6,250 ರೂ.
  • ಉಳಿದಿರುವ 6,250 ರೂಪಾಯಿ ಸೆನ್ ವ್ಯಾಟ್ ಮುಂದಿನ ತಿಂಗಳಲ್ಲಿ (2017-18)ರಲ್ಲಿ ದೊರಕಲಿದೆ.
  • ವಾಣಿಜ್ಯ ಉತ್ಪಾದನೆ ಆರಂಭವಾದ ನಂತರದ ಇನ್ಪುಟ್ ವ್ಯಾಟ್ ಕ್ರೆಡಿಟ್ 2017-18ರಲ್ಲಿ ದೊರಕಲಿದೆ.

ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ಗೆ ಪಡೆಯದೆ ಇರುವ 6,250 ರೂಪಾಯಿ 6,250 ಸೆನ್ ವ್ಯಾಟ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಮತ್ತು 16,313 ಇನ್ಪುಟ್ ವ್ಯಾಟ್ ಕ್ರೆಡಿಟ್ ಅನ್ನು ಜಿಎಸ್ಟಿಗೆ ಪರಿವರ್ತನೆ ಮಾಡಲು ಅವಕಾಶವಿದೆಯೇ?

ಹೌದು, ಬಂಡವಾಳ ಸರಕುಗಳ ಮೇಲೆ ಪಡೆಯದೆ ಇರುವ ಸೆನ್ ವ್ಯಾಟ್ ಕ್ರೆಡಿಟ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ಗೆ, ಈ ಮುಂದಿನ ಷರತ್ತುಗಳನ್ನು ಪೂರೈಸಿದರೆ ಮಾತ್ರ ಅವಕಾಶವಿರುತ್ತದೆ:

  • ಪ್ರಸಕ್ತ ಕಾನೂನಿನ ಅನ್ವಯ, ಸೆನ್ ವ್ಯಾಟ್ ಮತ್ತು ಇನ್ಪುಟ್ ವ್ಯಾಟ್ ಅನ್ನು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಆಗಿಸಲು ಅವಕಾಶವಿದೆ.
  • ಜಿಎಸ್ಟಿಯಲ್ಲಿ ಇದನ್ನು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಆಗಿ ಸ್ವೀಕರಿಸಲಾಗುತ್ತದೆ.

ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ಈ ಎಲ್ಲಾ ಷರತ್ತುಗಳನ್ನು ಪೂರೈಸಿದರೆ, ಈ ಕಂಪನಿ ಸೆನ್ ವ್ಯಾಟ್ ಮತ್ತು ಇನ್ಪುಟ್ ವ್ಯಾಟ್ ಕ್ರೆಡಿಟ್ ಅನ್ನು ಮುಂದಕ್ಕೆ(ಕ್ಯಾರಿ ಫಾರ್ವಾರ್ಡ್) ಕೊಂಡೊಯ್ಯಬಹುದಾಗಿದೆ.

Are you GST ready yet?

Get ready for GST with Tally.ERP 9 Release 6