Language

  • English
  • Hindi
  • Marathi
  • Kannada
  • Telugu
  • Tamil
  • Gujarati

ಜಿಎಸ್ಟಿ ಕಾನೂನಿನ ಪರಿಷ್ಕೃತ ಕರಡು ಮಸೂದೆಯು ನವೆಂಬರ್ 26, 2016ರಂದು ಲಭ್ಯವಾಯಿತು. ಪರಿಷ್ಕೃತ ಜಿಎಸ್ಟಿ ಕರಡು ಮಸೂದೆಯ ಮುಖ್ಯಾಂಶಗಳನ್ನು ಈ ಕೆಳಗಿನ ವಿವಿಧ ವಿಭಾಗಗಳಲ್ಲಿ ನೀಡಲಾಗಿದೆ:

  • ಏನು ಬದಲಾವಣೆಯಾಗಿದೆ?
  • ಹೊಸದಾಗಿ ಸೇರ್ಪಡೆಗೊಂಡಿರುವುದೇನು?
  • ಯಾವುದನ್ನು ತೆಗೆದು ಹಾಕಲಾಗಿದೆ ಅಥವಾ ಹೊರಗಿಡಲಾಗಿದೆ?

ಬದಲಾವಣೆಗೊಂಡಿರುವುದೇನು?

ವಿಷಯವಿಚಾರಕರಡು ಮಸೂದೆ- ಜೂನ್ 14, 2016ಪರಿಷ್ಕೃತ ಕರದು ಮಸೂದೆ- ನವೆಂಬರ್ 26, 2016
ನೋಂದಣಿಥ್ರೆಶೋಲ್ಡ್ ಮಿತಿಈಶಾನ್ಯ ರಾಜ್ಯಗಳಿಗೆ5 ಲಕ್ಷ ರೂಪಾಯಿ

ಭಾರತದ ಉಳಿದೆಡೆ10 ಲಕ್ಷ ರೂಪಾಯಿ.

ವಿಶೇಷ ಕೆಟಗರಿಯ ರಾಜ್ಯ*ಗಳಿಗೆ10 ಲಕ್ಷ ರೂಪಾಯಿ. ವಿಶೇಷ ಕೆಟಗರಿ ಅಲ್ಲದ ರಾಜ್ಯಗಳಿಗೆ

ವಿಶೇಷ ಕೆಟಗರಿ ಅಲ್ಲದ ರಾಜ್ಯಗಳಿಗೆ 20 ಲಕ್ಷ ರೂಪಾಯಿ.

* ಅರುಣಾಚಲ ಪ್ರದೇಶ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಮಣಿಪುರ, ಮೇಘಾಲಯ, ಮಿಝೊರಾಂ, ನಾಗಾಲೇಂಡ್, ಸಿಕ್ಕಿಂ, ತ್ರಿಪುರ, ಹಿಮಾಚಲ ಪ್ರದೇಶ ಮತ್ತು ಉತ್ತರಖಂಡಾ

ಒಟ್ಟು ವಹಿವಾಟುಒಟ್ಟು ಮೌಲ್ಯಎಲ್ಲಾ ತೆರಿಗೆ ವಿಧಿಸಬಲ್ಲ ಪೂರೈಕೆ, ತೆರಿಗೆ ವಿಧಿಸಲಾಗದ ಪೂರೈಕೆ, ವಿನಾಯಿತಿ ಇರುವ ಪೂರೈಕೆ ಮತ್ತು ರಫ್ತು ಪೂರೈಕೆಗಳು ಸೇರಿವೆ.ಎಲ್ಲಾ ತೆರಿಗೆ ವಿಧಿಸಬಲ್ಲ ಪೂರೈಕೆಗಳು, ತೆರಿಗೆ ವಿನಾಯಿತಿ ಇರುವ ಪೂರೈಕೆಗಳು ಮತ್ತು ರಫ್ತು ಪೂರೈಕೆಗಳು ಸೇರಿವೆ.
ಪೂರೈಕೆಸೇವೆಯ ಆಮದುಪರಿಗಣನೆಗೆ ತೆಗೆದುಕೊಳ್ಳಬೇಕಾದ್ದೋ ಅಥವಾ ತೆಗೆದುಕೊಳ್ಳುವ ಅಗತ್ಯವಿಲ್ಲದೋ, ವ್ಯವಹಾರಕ್ಕೆ ಸಂಬಂಧಪಟ್ಟದ್ದೋ ಅಥವಾ ಸಂಬಂಧಪಟ್ಟಿರದ್ದೋ ಸೇರಿದತೆ ಸೇವೆಯ ಆಮದೀಕರಣ.ಪರಿಗಣನೆಗೆ ತೆಗೆದುಕೊಳ್ಳಬಹುದಾದ ಮತ್ತು ವ್ಯವಹಾರ ಮುಂದುವರಿಕೆಯಲ್ಲಿ ಸಂಬಂಧಪಟ್ಟದ್ದು ಅಥವಾ ಇಲ್ಲದ್ದರ ಸೇವೆಯ ಆಮದೀಕರಣ.
ಸಂಯೋಜಿತ ಚಂದಾತೆರಿಗೆತೆರಿಗೆಯ ದರಹಣಕಾಸು ವರ್ಷದಲ್ಲಿ ರಾಜ್ಯವೊಂದರಲ್ಲಿ ನಡೆಸುವ ವಹಿವಾಟಿನ ಶೇಕಡ 1ಕ್ಕಿಂತ ಕಡಿಮೆ ಇಲ್ಲದಂತೆ.ಹಣಕಾಸು ವರ್ಷದಲ್ಲಿ ರಾಜ್ಯವೊಂದರಲ್ಲಿ ನಡೆಸುವ ತಯಾರಕರು ವಹಿವಾಟಿನ ಶೇಕಡ 2.5ಕ್ಕಿಂತ ಕಡಿಮೆ ಇಲ್ಲದಂತೆ ಮತ್ತು ಇತರರಿಗೆ ಶೇಕಡ 1.

* ಜಿಎಸ್ಟಿ ಸಮಿತಿಯ ಶಿಫಾರಸ್ಸು ಪಡೆದ ಕೆಲವು ಸರಕುಗಳ ತಯಾರಕರನ್ನು ಹೊರತುಪಡಿಸಿದಂತೆ.

ಸಂಯೋಜಿತ ಚಂದಾತೆರಿಗೆ ನಿರ್ಬಂಧಸರಕು ಮತ್ತು/ ಅಥವಾ ಸೇವೆಯ ಅಂತರ್ ರಾಜ್ಯ ಹೊರಗಡೆಯ ಪೂರೈಕೆಯಲ್ಲಿ ತೊಡಗಿರುವ ನೋಂದಾಯಿತ ತೆರಿಗೆ ಪಾವತಿದಾರ ವ್ಯಕ್ತಿಯೊಬ್ಬರು ಚಂದಾತೆರಿಗೆ ಪಡೆಯುವಂತೆ ಇಲ್ಲ.ಅಂತರ್ ರಾಜ್ಯ ಹೊರಗಡೆಯ ಪೂರೈಕೆಗೆ ಇರುವ ಹಳೆಯ ನಿರ್ಬಂಧಗಳ ಜೊತೆ ಈ ಮುಂದಿನ ಹೊಸ ಷರತ್ತುಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ:

1)      ಸೇವೆಯ ಪೂರೈಕೆಯಲ್ಲಿ ತೊಡಗಿರುವುದು.
2)      ಜಿಎಸ್ಟಿಯಡಿ ತೆರಿಗೆ ವಿಧಿಸಲಾಗದ ಸರಕುಗಳ ಪೂರೈಕೆಯಲ್ಲಿ ತೊಡಗಿರುವುದು.
3)      ಎಲೆಕ್ಟ್ರಾನಿಕ್ ವಾಣಿಜ್ಯ ಆಪರೇಟರ್ ಗಳ ಮೂಲಕ ಸರಕುಗಳ ಪೂರೈಕೆಯಲ್ಲಿ ತೊಡಗುವುದು.
4)     ಇಂತಹ ಸರಕುಗಳ ತಯಾರಕರು ಮಂಡಳಿಯ ಶಿಫಾರಸ್ಸನ್ನು ಪಡೆದುಕೊಳ್ಳಬಹುದು.

ಸರಕುಗಳ ಪೂರೈಕೆ ಮಾಡುವ ಸಮಯಫಾರ್ವಾರ್ಡ್ ಶುಲ್ಕಈ ಕೆಳಗಿನವುಗಳಿಗಿಂತ ಮುಂಚೆ:

1.       ಸರಕುಗಳನ್ನು ಸ್ಥಳಾಂತರಿಸುವ ದಿನಾಂಕ.
2.      ಸರಕುಪಟ್ಟಿಯ ದಿನಾಂಕ.
3.       ಪಾವತಿ ಸ್ವೀಕರಿಸಿದ ದಿನಾಂಕ.
4.       ಅಕೌಂಟ್ಸ್ ಪುಸ್ತಕದಲ್ಲಿ ದಾಖಲೆ ಮಾಡಿದ ದಿನಾಂಕದಂದು.

ಈ ಕೆಳಗಿನವುಗಳಿಗಿಂತ ಮುಂಚೆ:

1.       ಸರಕು ಪಟ್ಟಿಯ ದಿನಾಂಕ
2.       ಪಾವತಿ ಸ್ವೀಕರಿಸಿದ ದಿನಾಂಕ.

ಸರಕುಗಳ ಪೂರೈಕೆ ಮಾಡುವ ಸಮಯ ರಿವರ್ಸ್ ಶುಲ್ಕಈ ಕೆಳಗಿನವುಗಳಿಗಿಂತ ಮುಂಚೆ:

1.       ಸರಕು ಸ್ವೀಕರಿಸುವ ದಿನಾಂಕ.
2.       ಪಾವತಿ ಪಡೆದ ದಿನಾಂಕ.
3.       ಸರಕುಪಟ್ಟಿ ನೀಡಿದ ದಿನಾಂಕ.
4.       ಅಕೌಂಟ್ಸ್ ಪುಸ್ತಕದಲ್ಲಿ ಡೆಬಿಟ್ ಆದ ದಿನಾಂಕ.

 

ಈ ಕೆಳಗಿನವುಗಳಿಗಿಂತ ಮುಂಚೆ:

1.     ಸರಕು ಸ್ವೀಕರಿಸುವ ದಿನಾಂಕ.
2.     ಪಾವತಿ ಪಡೆದ ದಿನಾಂಕ.
3.     ಸರಕು ಪಟ್ಟಿ ನೀಡಿದ 30 ದಿನದೊಳಗೆ.

ಎಲ್ಲಾದರೂ ಮೇಲಿನವುಗಳನ್ನು ನಿರ್ಧರಿಸಲು ಸಾಧ್ಯವಿಲ್ಲದೆ ಇರುವ ಸಂದರ್ಭದಲ್ಲಿ, ಗ್ರಾಹಕರಿಗೆ ಪೂರೈಕೆ ಮಾಡಿದ ಸಮಯದಲ್ಲಿ ಅಕೌಂಟ್ ಪುಸ್ತಕದಲ್ಲಿ ದಿನಾಂಕವನ್ನು ನಮೋದಿಸಿದ ಸಮಯ.

ಸೇವೆಯ ಪೂರೈಕೆಯ ಸಮಯಫಾರ್ವಾರ್ಡ್ ಶುಲ್ಕಎಲ್ಲಾದರೂ ನಿಗದಿತ ಅವಧಿಯಲ್ಲಿ ಸರಕುಪಟ್ಟಿ ನೀಡಿದ್ದರೆ: ಈ ಕೆಳಗಿನವುಗಳಿಗಿಂತ ಮುಂಚೆ:

1.       ಸರಕುಪಟ್ಟಿಯ ದಿನಾಂಕ
2.    ಪಾವತಿ ಸ್ವೀಕರಿಸಿದ ದಿನಾಂಕ

ಎಲ್ಲಾದರೂ ನಿಗದಿತ ಅವಧಿಯಲ್ಲಿ ಸರಕುಪಟ್ಟಿ ನೀಡದೆ ಇದ್ದರೆ: ಈ ಕೆಳಗಿನವುಗಳಿಗಿಂತ ಮುಂಚೆ:
1.      ಸೇವೆಯನ್ನು ಪೂರೈಸಿದ ದಿನಾಂಕ
2.      ಪಾವತಿ ಸ್ವೀಕರಿಸಿದ ದಿನಾಂಕ.

 

ಈ ಕೆಳಗಿನವುಗಳಿಗಿಂತ ಮುಂಚೆ:

1.       ಸರಕುಪಟ್ಟಿಯ ದಿನಾಂಕ
2.       ಪಾವತಿ ಸ್ವೀಕರಿಸಿದ ದಿನಾಂಕ

 

ಸೇವೆಯನ್ನು ಪೂರೈಸುವ ಸಮಯರಿವರ್ಸ್ ಶುಲ್ಕಈ ಕೆಳಗಿನವುಗಳಿಗಿಂತ ಮುಂಚೆ:

1.       ಸೇವೆಯನ್ನು ಸ್ವೀಕರಿಸಿದ ದಿನಾಂಕ.
2.       ಪಾವತಿ ಮಾಡಲ್ಪಟ್ಟ ದಿನಾಂಕ
3.       ಸರಕುಪಟ್ಟಿ ಸ್ವೀಕರಿಸಿದ ದಿನಾಂಕ.
4.       ಅಕೌಂಟ್ಸ್ ಪುಸ್ತಕದಲ್ಲಿ ಡೆಬಿಟ್ ಮಾಡಿದ ದಿನಾಂಕ.

ಈ ಕೆಳಗಿನವುಗಳಿಗಿಂತ ಮುಂಚೆ:

1.      ಪಾವತಿ ಮಾಡಲ್ಪಟ್ಟ ದಿನಾಂಕ.
2.      ಸರಕು ಪಟ್ಟಿ ಪಡೆದ 60 ದಿನದೊಳಗೆ
ಎಲ್ಲಾದರೂ ಮೇಲಿನವುಗಳನ್ನು ನಿರ್ಧರಿಸಲು ಸಾಧ್ಯವಿಲ್ಲದೆ ಇರುವ ಸಂದರ್ಭದಲ್ಲಿ, ಗ್ರಾಹಕರಿಗೆ ಪೂರೈಕೆ ಮಾಡಿದ ಸಮಯದಲ್ಲಿ ಅಕೌಂಟ್ ಪುಸ್ತಕದಲ್ಲಿ ದಿನಾಂಕವನ್ನು ನಮೋದಿಸಿದ ಸಮಯ.

ಪೂರೈಕೆಯ ಮೌಲ್ಯಸಬ್ಸಿಡಿಗಳುಪೂರೈಕೆಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಸಬ್ಸಿಡಿಗಳನ್ನು ನೀಡಲಾಗಿದ್ದರೆ ಮೌಲ್ಯವನ್ನು ಸೇರಿಸಬೇಕು.ಕೇಂದ್ರ ಅಥವಾ ರಾಜ್ಯ ಸರಕಾರು ನೀಡಿರುವುದನ್ನು ಹೊರತುಪಡಿಸಿದ ಸಬ್ಸಿಡಿಯನ್ನು ನೇರವಾಗಿ ದರಕ್ಕೆ ವರ್ಗಾಯಿಸಬೇಕು.
ಜಾಬ್ ವರ್ಕ್ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ಕೆಲಸಕ್ಕೆ ಕಳುಹಿಸಿದ ಇನ್ಪುಟ್ ಅನ್ನು 180 ದಿನದೊಳಗೆ ಪ್ರಮುಖ ತಯಾರಕರು ಸ್ವೀಕರಿಸಬೇಕು.ಕೆಲಸಕ್ಕೆ ಕಳುಹಿಸಿದ ಇನ್ಪುಟ್ ಅನ್ನು 1 ವರ್ಷದೊಳಗೆ ಪ್ರಮುಖ ತಯಾರಕರು ಸ್ವೀಕರಿಸಬೇಕು.
ಜಾಬ್ ವರ್ಕ್ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ಬಂಡವಾಳ ಸರಕನ್ನು ವಾಪಸ್ ಪಡೆಯುವ ಅವಧಿ 2 ವರ್ಷಗಳುಬಂಡವಾಳ ಸರಕನ್ನು ವಾಪಸ್ ಪಡೆಯುವ ಅವಧಿ 3 ವರ್ಷಗಳು
ಮರುಪಾವತಿವಿಳಂಬವಾದ ಮರುಪಾವತಿ ಗೆ ಬಡ್ಡಿ3 ತಿಂಗಳಲ್ಲಿ ಮರುಪಾವತಿ ನೀಡದೆ ಇದ್ದರೆ ಬಡ್ಡಿದರವನ್ನು ಪಾವತಿಸಬೇಕು.60 ದಿನಗಳಲ್ಲಿ ಮರುಪಾವತಿ ನೀಡದೆ ಇದ್ದರೆ ಬಡ್ಡಿದರವನ್ನು ಪಾವತಿಸಬೇಕು.
ಪರಿವರ್ತನೆಗೆ ಅವಕಾಶನೋಂದಾಯಿಸಿದ ವ್ಯವಹಾರಗಳು (ತಯಾರಕರು, ವ್ಯಾಪಾರಿಗಳು ಮತ್ತು ಸೇವಾ ಪೂರೈಕೆದಾರರು)ಜಿಎಸ್ಟಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಮುಂದುವರೆಸಲು ಇರುವ ನಿರ್ಬಂಧಗಳು:

1.       ಕಳೆದ ಬಾರಿ ಪೈಲ್ ಮಾಡಿರುವ ಸಲ್ಲಿಕೆಗಳು ಕ್ಲೋಸಿಂಗ್ ಬ್ಯಾಲೆನ್ಸ್ ಬಿಂಬಿಸಬೇಕು.
2.       ಈಗಿನ ಕಾನೂನಿನ ಅನ್ವಯ ಕ್ರೆಡಿಟ್ ನೀಡಬೇಕು.
3.       ಜಿಎಸ್ಟಿಯಡಿಯಲ್ಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಗೆ ಅವಕಾಶ ಇದೆ.

ಜಿಎಸ್ಟಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಮುಂದುವರೆಸಲು ಇರುವ ನಿರ್ಬಂಧಗಳು:

1.      ಕಳೆದ ಬಾರಿ ಪೈಲ್ ಮಾಡಿರುವ ಸಲ್ಲಿಕೆಗಳು ಕ್ಲೋಸಿಂಗ್ ಬ್ಯಾಲೆನ್ಸ್ ಬಿಂಬಿಸಬೇಕು.
2.      ಜಿಎಸ್ಟಿಯಡಿಯಲ್ಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಗೆ ಅವಕಾಶ ಇದೆ.

 

 

 

ಕಾರ್ಯಪಟ್ಟಿಕಾರ್ಯಪಟ್ಟಿ 1ಪರಿಗಣನೆಗೆ ತೆಗೆದುಕೊಳ್ಳದೆ ಇದ್ದರೂ ಪೂರೈಕೆಯಾಗಿ ನೋಡಲು ಅವಕಾಶ ಇರುವ ವ್ಯವಹಾರ ಅಥವಾ ಚಟುವಟಿಕೆಯ ಪಟ್ಟಿಯನ್ನು ಈ ಕಾರ್ಯಪಟ್ಟಿ ನೀಡುತ್ತದೆ:
1.       ವ್ಯವಹಾರದ ಸ್ವತ್ತುಗಳನ್ನು ಕಾಯಂ ಆಗಿ ರವಾನೆ/ ವಿಲೇವಾರಿ ಮಾಡುವುದು.
2.       ವ್ಯವಹಾರದ ಸ್ವತ್ತಾಗಿರುವ ಅರ್ಜಿಯನ್ನು ತಾತ್ಕಾಲಿಕವಾಗಿ ಖಾಸಗಿ ಅಥವಾ ವ್ಯವಹಾರೇತರ ಉದ್ದೇಶಕ್ಕೆ ನೀಡುವುದು.
3.       ಖಾಸಗಿ ಅಥವಾ ವ್ಯವಹಾರೇತರ ಉದ್ದೇಶಕ್ಕೆ ಸೇವೆಯನ್ನು ನೀಡುವುದು.
4.       ನೋಂದಣಿ ವಾಪಸ್ ಪಡೆದ ನಂತರ ಉಳಿದಿರುವ ಸ್ವತ್ತುಗಳು.
5.       ವ್ಯಾಪಾರದ ಮುಂದುವರಿಕೆಗೆ ಸರಕು ಮತ್ತು/ಅಥವಾ ಸೇವೆಯನ್ನು ಒಬ್ಬ ತೆರಿಗೆ ಪಾವತಿದಾರನು ಇನ್ನೊಬ್ಬ ತೆರಿಗೆ ಪಾವತಿದಾರ ಅಥವಾ ತೆರಿಗೆ ಪಾವತಿದಾರನಲ್ಲದ ವ್ಯಕ್ತಿಗೆ ಪೂರೈಕೆ ಮಾಡುವುದು.
ಪರಿಷ್ಕೃತ ಕರಡು ಮಸೂದೆಯ, ಪ್ರಕಾರ, ಸಂಖ್ಯೆ 2, 3, 4 ಮತ್ತು 5ರಲ್ಲಿ ತಿಳಿಸಿರುವ ವ್ಯವಹಾರ ಅಥವಾ ಚಟುವಟಿಕೆಯನ್ನು ಹೊರತುಪಡಿಸಲಾಗಿದೆ ಮತ್ತು ಪರಿಷ್ಕೃತ ಕಾರ್ಯಪಟ್ಟಿ ನಲ್ಲಿರುವ ಇರುವ ವಿಷಯಗಳು ಇಂತಿವೆ:

1.       ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಲಭ್ಯವಿರುವ ವ್ಯವಹಾರದ ಸ್ವತ್ತುಗಳನ್ನು ಕಾಯಂ ಆಗಿ ಸಾಗಿಸುವುದು ಅಥವಾ ವಿಲೇವಾರಿ ಮಾಡುವುದು.
2.       ಸೆಕ್ಷನ್ 10ರಲ್ಲಿ ನಿಗದಿಪಡಿಸಿದಂತೆ ಸಂಬಂಧಿತ ವ್ಯಕ್ತಿಗಳ ನಡುವೆ ಅಥವಾ ಪ್ರತ್ಯೇಕ ವ್ಯಕ್ತಿಗಳ ನಡುವೆ ಸರಕು ಅಥವಾ ಸೇವೆಗಳ ಪೂರೈಕೆ.
3.       ಮುಖ್ಯ ಸಂಸ್ಥೆಯು ಮಧ್ಯವರ್ತಿ ಮೂಲಕ ಸರಕುಗಳನ್ನು ಪೂರೈಕೆ ಮಾಡುವಾಗ, ತನ್ನ ಪ್ರಿನ್ಸಿಪಾಲ್ ಹೆಸರಿನಲ್ಲಿ ಮಧ್ಯವರ್ತಿ ಅಂತ ಸರಕುಗಳನ್ನು ಪೂರೈಕೆ ಮಾಡುವಾಗ.
4.       ಸಂಬಂಧಿತ ವ್ಯಕ್ತಿಯಿಂದ ಅಥವಾ ಭಾರತದ ಹೊರಗಿರುವ ಯಾವುದೇ ಘಟಕದಿಂದ ತೆರಿಗೆ ಪಾವತಿದಾರ ವ್ಯಕ್ತಿಯಿಂದ ಸೇವೆಯ ಆಮದೀಕರಣ. ವ್ಯವಹಾರದ ಮುಂದುವರಿಕೆಗೆ ಅಥವಾ ವ್ಯವಹಾರಕ್ಕಾಗಿ.

 

ಹೊಸ ಸೇರ್ಪಡೆಗಳೇನು?

ವಿಷಯಹೊಸ ಸೇರ್ಪಡೆವಿವರ
ವ್ಯಾಖ್ಯಾನಬಂಡವಾಳ ಸರಕುಗಳುಬಂಡವಾಳ ಸರಕುಗಳು ಎಂದರೆ, ಕ್ರೆಡಿಟ್ ಕ್ಲೇಮ್ ಮಾಡುವ ವ್ಯಕ್ತಿಯ ಅಕೌಂಟ್ಸ್ ಪುಸ್ತಕದಲ್ಲಿ ಬಂಡವಾಳೀಕರಣಗೊಂಡಿರುವ ಮೌಲ್ಯವಾಗಿದೆ ಮತ್ತು ಇದನ್ನು ವ್ಯವಹಾರಕ್ಕೆ ಬಳಸಲಾಗಿದೆ ಅಥವಾ ಬಳಸಲು ಉದ್ದೇಶಿಸಲಾಗಿದೆ.
ಪೂರೈಕೆಮಿಶ್ರ ಪೂರೈಕೆಸರಕು ಅಥವಾ ಸೇವೆ ಅಥವಾ ಇವೆರೆಡರ ಸಂಯೋಜಿತ ವಿಷಯಗಳ ಪೂರೈಕೆಯು ಎರಡು ಅಥವಾ ಹೆಚ್ಚು ವ್ಯಕ್ತಿಗಳ ನಡುವೆ ಪೂರೈಕೆಯಾಗುವುದು ಹಾಗೂ ಒಂದೇ ದರದಲ್ಲಿ ಇದನ್ನು ತೆರಿಗೆ ಪಾವತಿದಾರ ವ್ಯಕ್ತಿಯೊಬ್ಬರಿಗೆ ನೀಡುವುದಾಗಿದೆ.
ಪೂರೈಕೆಸಂಯೋಜಿತ ಪೂರೈಕೆಎರಡು ಅಥವಾ ಹೆಚ್ಚು ಸರಕು ಮತ್ತು ಸೇವೆಗಳ ಪೂರೈಕೆಯನ್ನು ವ್ಯವಹಾರದ ಸಾಮಾನ್ಯ ಕೋರ್ಸ್ ಉದ್ದೇಶದಿಂದ ಒಟ್ಟಾಗಿಸಿ ಒಬ್ಬರು ಗ್ರಾಹಕರಿಗೆ ತೆರಿಗೆ ಪಾವತಿದಾರ ವ್ಯಕ್ತಿಯೊಬ್ಬರು ಪೂರೈಕೆ ಮಾಡುವುದಾಗಿದೆ.
ಪೂರೈಕೆಯ ಸಮಯಸಲ್ಲಿಕೆಯ ಪತ್ರ ಪೂರೈಸುವುದುಪೂರೈಕೆಯ ಸಮಯವು ಈ ಕೆಳಗಿನವುಗಳಿಗಿಂತ ಮೊದಲು ಮಾಡಬೇಕು:

1.      ಎಲ್ಲಾದರೂ ಪೂರೈಕೆದಾರರನ್ನು ಗುರುತಿಸಲು ಸಾಧ್ಯವಿದ್ದರೆ, ಸಲ್ಲಿಕೆಯ ಪತ್ರ ನೀಡಿರುವ ದಿನಾಂಕದಂದು.
2.      ಉಳಿದ ಎಲ್ಲಾ ಸನ್ನಿವೇಶದಲ್ಲಿ, ಸಲ್ಲಿಕೆಯ ಪತ್ರ ಅನ್ನು ರಿಡೆಂಪ್ಷನ್ ಮಾಡಿದ ದಿನಾಂಕದಂದು.

ಪೂರೈಕೆಯ ಮೌಲ್ಯಬಡ್ಡಿ, ತಡವಾದ ಶುಲ್ಕ, ಪೆನಾಲ್ಟಿತೆರಿಗೆ ವಿಧಿಸಬಲ್ಲ ಪೂರೈಕೆಗೆ ಪಾವತಿ ಮಾಡಿರುವುದು ತಡವಾಗಿರುವುದಕ್ಕೆ ಬಡ್ಡಿ ದರ ಅಥವಾ ತಡವಾದ ಶುಲ್ಕ ಅಥವಾ ಪೆನಾಲ್ಟಿ.
ಪೂರೈಕೆಯ ಮೌಲ್ಯಪೂರೈಕೆ ನಂತರದ ವಿನಾಯಿತಿಪರಿವರ್ತನೆಯ ಮೌಲ್ಯದಿಂದ ಪೂರೈಕೆ ನಂತರದ ವಿನಾಯಿತಿಯನ್ನು ಹೊರತುಪಡಿಸಬೇಕಾದರೆ:
1.       ಪೂರೈಕೆಯ ಒಪ್ಪಂದದ ಸಮಯದಲ್ಲಿ ಅಥವಾ ಅದಕ್ಕಿಂತ ಮೊದಲು ವಿನಾಯಿತಿ ಮಾಡಿದ್ದರೆ ಅದನ್ನು ಸರಕುಪಟ್ಟಿಗೆ ಲಿಂಕ್ ಮಾಡಬೇಕು. ಮತ್ತು
2.       ಪೂರೈಕೆದಾರರು ನೀಡಿರುವ ದಾಖಲೆಯ ಆಧಾರದಲ್ಲಿ ಗ್ರಾಹಕರು ವಿನಾಯಿತಿ ಪಡೆದಿದ್ದರೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ರಿವರ್ಸ್ ಅಥವಾ ತಿರುಗುಮುರುಗಾಗುತ್ತದೆ.
ಸರಕುಪಟ್ಟಿರಿವರ್ಸ್ ಶುಲ್ಕ ಮೆಕಾನಿಸಂನೋಂದಾಯಿಸದೆ ಇರುವ ವ್ಯಕ್ತಿಯಿಂದ ಯಾವುದೇ ಇನ್ವಾರ್ಡ್ ಸರಕು ಅಥವಾ ಸೇವೆಗಳ ಪೂರೈಕೆಗಾಗಿ ಸರಕುಪಟ್ಟಿಯನ್ನು ಸಿದ್ಧಪಡಿಸುವಾಗ ನೋಂದಾಯಿಸಿದ ತೆರಿಗೆ ಪಾವತಿದಾರ ವ್ಯಕ್ತಿಯು ರಿವರ್ಸ್ ಶುಲ್ಕ ನಲ್ಲಿ ತೆರಿಗೆ ಪಾವತಿಸಲು ಅರ್ಹತೆ ಪಡೆಯುತ್ತಾರೆ.
ಬಂಡವಾಳ ಸರಕುಗಳ ಮೇಲೆ ಐಟಿಸಿಪೈಪ್ ಲೈನ್ ಮತ್ತು ದೂರಸಂಪರ್ಕ ಟವರ್ ಗಳಿಗಾಗಿ.ಮೊದಲ ವರ್ಷ ಗರಿಷ್ಠ 1/3ನೇ ಭಾಗದಷ್ಟು ಐಟಿಸಿ, ಎರಡನೇ ತ್ರೈಮಾಸಿಕದಲ್ಲಿ(ಮೊದಲ ವರ್ಷದ ಕ್ಲೇಮ್ ಮಾಡಲೂ ಅವಕಾಶವಿದೆ) ಮತ್ತು ಉಳಿದಿದ್ದರೆ ಮುಂಬರುವ ಆರ್ಥಿಕ ವರ್ಷಗಳಲ್ಲಿ ಗರಿಷ್ಠ 2/3ರಷ್ಟು ಐಟಿಸಿ.
ಐಟಿಸಿಸೇವೆಯ ಪೂರೈಕೆಯ ಮೇಲೆ ಐಟಿಸಿ ರಿವರ್ಸಲ್.ಸೇವೆಯ ಪೂರೈಕೆದಾರರಿಗೆ ಎಲ್ಲಾದರೂ ಗ್ರಾಹಕರು ಪಾವತಿಸಲು ವಿಫಲರಾದರೆ, ಸರಕುಪಟ್ಟಿ ನೀಡಿದ ಮೂರು ತಿಂಗಳೊಳಗೆ ಸೇವೆಯ ಪೂರೈಕೆಯ ಮೌಲ್ಯ ಮತ್ತು ಪಾವತಿಸಬೇಕಾಗಿರುವ ತೆರಿಗೆ, ಗ್ರಾಹಕರಿಗೆ ದೊರಕಿಸಿದಷ್ಟು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ನ ಸರಿಸಮನಾದ ಮೊತ್ತವನ್ನು ಬಡ್ಡಿದರದ ಜೊತೆಗೆ ಔಟ್ ಪುಟ್ ತೆರಿಗೆ ಬಾಧ್ಯತೆಯಾಗಿ ಸೇರಿಸಲಾಗುತ್ತದೆ.
ಪ್ರತಿ ಲಾಭಗಳಿಕೆ ಷರತ್ತುಪ್ರತಿ ಲಾಭಗಳಿಕೆಸರಕು ಅಥವಾ ಸೇವೆಯ ದರವನ್ನು ತಗ್ಗಿಸುವ ಉದ್ದೇಶದಿಂದ ಯಾವುದೇ ನೋಂದಾಯಿತ ತೆರಿಗೆ ಪಾವತಿದಾರರಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ನ ಲಾಭಗಳು ದೊರಕುತ್ತಿದೆಯೇ ಎಂದು ಪರಿಶೀಲಿಸಲು ಅಥವಾ ಗ್ರಾಹಕರಿಗೆ ನಿಜವಾಗಿಯೂ ತೆರಿಗೆ ದರದ ವಿನಾಯಿತಿ ವರ್ಗಾಯಿಸಲ್ಪಡುತ್ತಿದೆಯೇ ಪರೀಕ್ಷಿಸುವ ಉದ್ದೇಶ ಹೊಂದಿದೆ.
ಪರಿವರ್ತನೆಯ ಅವಕಾಶಅಬಕಾರಿ ಸುಂಕಮುಕ್ತಾಯದ ದಾಸ್ತಾನಿನ ಮೇಲೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಮೊದಲ ಹಂತದ ವಿತರಕರು/ ಎರಡನೇ ಹಂತದ ವಿತರಕರು/ಆಮದುದಾರರಿಗೆ ಅವಕಾಶವಿದೆ.
ಪರಿವರ್ತನೆಯ ಅವಕಾಶಪ್ರವೇಶ ತೆರಿಗೆಮುಕ್ತಾಯದ ದಾಸ್ತಾನಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಆಗಿ ಪ್ರವೇಶ ತೆರಿಗೆ ಪಾವತಿಸಲು ಅವಕಾಶವಿದೆ.
ಪರಿವರ್ತನೆಯ ಅವಕಾಶಸೇವಾ ತೆರಿಗೆಜಿಎಸ್ಟಿಯಲ್ಲಿ ತೆರಿಗೆ ವಿಧಿಸಲಾಗುವ, ವಿನಾಯಿತಿಯ ಸೇವೆಗಳನ್ನು ನೀಡುವಲ್ಲಿ ಸೇವಾ ಪೂರೈಕೆದಾರರು ತೊಡಗಿಸಿಕೊಂಡಿದ್ದರೆ, ಇನ್ಪುಟ್ ಮೇಲೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಅವಕಾಶವಿದೆ.
ಕಾರ್ಯಪಟ್ಟಿಕಾರ್ಯಪಟ್ಟಿ IIIಸರಕಿನ ಪೂರೈಕೆ ಅಥವಾ ಸೇವೆಯ ಪೂರೈಕೆಗೆ ಅಥವಾ ಎರಡಕ್ಕೂ ಚಟುವಟಿಕೆಗಳು ಅಥವಾ ವಹಿವಾಟುಗಳ ಪಟ್ಟಿಯನ್ನು ಈ ಕಾರ್ಯಪಟ್ಟಿ ನೀಡುತ್ತದೆ.

ಇನ್ನಷ್ಟು ಓದಿಪರಿವರ್ತನೆಯ ಅವಕಾಶ

ಯಾವುದನ್ನು ಹೊರತುಪಡಿಸಲಾಗಿದೆ ಅಥವಾ ಹೊರಗಿಡಲಾಗಿದೆ ?

ವಿಷಯಹೊರಗಿಡಲಾಗಿರುವುದುವಿವರಗಳು
ಸರಕುಗಳ ವ್ಯಾಖ್ಯಾನಭದ್ರತಾಪತ್ರಗಳುವ್ಯಾಖ್ಯಾನದ ಪ್ರಕಾರ ಭದ್ರತಾಪತ್ರಗಳನ್ನು ಹೊರಗಿಡಲಾಗಿದೆ
ಪೂರೈಕೆಯ ಮೌಲ್ಯಸ್ವಾಮ್ಯಶುಲ್ಕ, ಪರವಾನಿಗೆ ಶುಲ್ಕ, ಸರಕು ಅಥವಾ ಸೇವೆಯ ಫ್ರೀ ಆಫ್ ಶುಲ್ಕಪೂರೈಕೆಯ ಮೌಲ್ಯದಿಂದ ಇವುಗಳನ್ನು ಹೊರಗಿಡಲಾಗಿದೆ ಪೂರೈಕೆಯ
ಪೂರೈಕೆಯ ಮೌಲ್ಯಮೌಲ್ಯಾಂಕನ ನಿಯಮಗಳುಪರಿಷ್ಕೃತ ಕರಡು ಮಸೂದೆಯಲ್ಲಿಮೌಲ್ಯಂಕನ ನಿಯಮಗಳನ್ನು(ಹೋಲಿಕೆ, ಕಂಪ್ಯೂಟೆಡ್,
ಶೇಷ ವಿಧಾನ) ಹೊರಗಿಡಲಾಗಿದೆ.

 

* ಕಳೆದ ಜೂನ್ 14, 2016ಕ್ಕೆ ಪ್ರಕಟಿಸಿರುವ ಕರಡು ಮಸೂದೆಗೆ ಹೋಲಿಸಿದರೆ ಪರಿಷ್ಕೃತ ಕರಡು ಮಸೂದೆಯನ್ನು ಇವುಗಳನ್ನು ತೆಗೆದುಹಾಕಲಾಗಿದೆ. ಜಿಎಸ್ಟಿ ಮಸೂದೆಯು ಇನ್ನೂ ಕರಡು ಹಂತದಲ್ಲಿದ್ದು, ಮುಂದಿನ ಹಂತದಲ್ಲಿ ಇವುಗಳನ್ನು ತೆಗೆದುಕೊಳ್ಳಲೂ ಬಹುದು.

Are you GST ready yet?

Get ready for GST with Tally.ERP 9 Release 6