ಹಳೆಯ ತೆರಿಗೆ ಪದ್ಧತಿಯಡಿಯಲ್ಲಿ ಈಗಾಗಲೇ ನೋಂದಾಯಿಸಿರವ ವ್ಯವಹಾರಗಳು ತಾವು ಜಿಎಸ್ಟಿಯಡಿ ನೋಂದಾಯಿಸಿಕೊಳ್ಳಲು ಬಾಧ್ಯತೆ ಹೊಂದಿದ್ದಾರೆಯೇ ಎಂದು ತಿಳಿದುಕೊಂಡು ಜಿಎಸ್ಟಿ ತೆರಿಗೆ ನೋಂದಣಿ ಮಾಡಿಸಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಇದಕ್ಕೆ ತಕ್ಕಂತೆ ತಾವು ಜಿಎಸ್ಟಿ ನೋಂದಣಿಗೆ ವಲಸೆ ಹೋಗಬೇಕೆ ಅಥವಾ ಈಗಿರುವ ನೋಂದಣಿ ರದ್ದುಗೊಳಿಸಬೇಕೆ ಎಂದು ತಿಳಿದುಕೊಳ್ಳಬೇಕು.

ನೀವು ಹೊಸ ವ್ಯವಹಾರ ಹೊಂದಿದ್ದರೆ, ಈ ಹಿಂದೆ ನೋಂದಣಿ ಮಾಡಿಸದೆ ಇದ್ದರೆ, ಆದರೆ, ಆದಾಯ ಮಿತಿ ನಿಗದಿಗಿಂತ ಹೆಚ್ಚಿರುವುದರಿಂದ ಈಗಿನ ತೆರಿಗೆ ಪದ್ಧತಿಯಲ್ಲಿ ನೋಂದಾಯಿಸುವ ಬಾಧ್ಯತೆ ಹೊಂದಿದ್ದರೆ, ನೀವು ಹೊಸದಾಗಿ ಜಿಎಸ್ಟಿ ನೋಂದಣಿ ಮಾಡಿಸಿಕೊಳ್ಳಬೇಕು.

ಇದನ್ನೂ ಓದಿ: ನೋಂದಾಯಿತ ವಿತರಕರೇ? ಜಿಎಸ್ಟಿಗೆ ವರ್ಗಾವಣೆಗೊಳ್ಳುವುದು ಹೇಗೆಂದು ತಿಳಿದುಕೊಳ್ಳಿರಿ.
ಹೊಸ ಜಿಎಸ್ಟಿ ನೊಂದಣಿ ಮಾಡಿಸುವ ಕುರಿತು ತಿಳಿದುಕೊಳ್ಳಲು ಮುಂದಿನ ಹಂತಗಳನ್ನು ನೋಡಿರಿ–

ಹಂತ-1: ನಿಮ್ಮ ರಾಜ್ಯದಲ್ಲಿ ಗರಿಷ್ಠ ಆದಾಯ ಮಿತಿ ಎಷ್ಟು ಎಂದು ಪರಿಶೀಲಿಸಿರಿ

ಜಿಎಸ್ಟಿ ನೋಂದಣಿ ಮಾಡಿಸಿಕೊಳ್ಳಲು ಗರಿಷ್ಠ ಮಿತಿ ಈ ಮುಂದಿನಂತೆ ಇದೆ:

 • ವಿಶೇಷ ಪ್ರಾತಿನಿದ್ಯದ ರಾಜ್ಯಗಳು (ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಝೊರಾಂ, ನಾಗಲೇಂಡ್, ಸಿಕ್ಕಿಂ, ತ್ರಿಪುರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ)- 10 ಲಕ್ಷ ರೂಪಾಯಿ
 • ಭಾರತದ ಉಳಿದ ರಾಜ್ಯಗಳು – 20 ಲಕ್ಷ ರೂಪಾಯಿ

ಗಮನಿಸಿ: ಜಮ್ಮು ಮತ್ತು ಕಾಶ್ಮೀರವು ಆರಂಭದಲ್ಲಿ ಜಿಎಸ್ಟಿಯಡಿಯಲ್ಲಿ ಇರಲಿಲ್ಲ, ಆದರೆ, ಜುಲೈ 5ರಂದು ಜಿಎಸ್ಟಿ ಕ್ರಾಂತಿಗೆ ಸೇರಿಸಲಾಗಿದೆ. ಜಮ್ಮು ಮತ್ತು ಕಾಶ್ಮಿರದ ಮಿತಿ 10 ಲಕ್ಷ ರೂಪಾಯಿ ಆಗಿದೆ.

ಹಂತ 2: ಹೊಸ ಜಿಎಸ್ಟಿ ನೋಂದಣಿ ಪಡೆದುಕೊಳ್ಳುವುದು

ನೀವು ಕಾಯಂ ವಿತರಕರು ಅಥವಾ ಸಂಯೋಜಿತ ಯೋಜನೆಯಡಿಯಲ್ಲಿದ್ದರೂ, ನೀವು ಜಿಎಸ್ಟಿ , ನೋಂದಣಿಗೆ ಮುಂದಿನ ಹಂತಗಳನ್ನು ಪಾಲಿಸುವ ಅವಶ್ಯಕತೆ ಇರುತ್ತದೆ:

  • ಜಿಎಸ್ಟಿ ವೆಬ್ ಸೈಟ್ ಗೆ ಪ್ರವೇಶಿಸಿರಿ
  • ಪಾನ್, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನೀಡಿ ಒಂದು ಬಾರಿಯ ಪಾಸ್ ವರ್ಡ್ (ಒಟಿಪಿ) ಮೂಲಕ ದೃಢೀಕರಿಸಿ ನೀವು GST REG-01 ನಮೂನೆಯ ಭಾಗ-ಎಯನ್ನು ಭರ್ತಿ ಮಾಡಿ ಸಲ್ಲಿಸುವ ಅಗತ್ಯವಿದೆ.
  • ಒಮ್ಮೆ ನೀವು ಈ ಹಂತ ಪೂರೈಸಿದ ಬಳಿಕ ನಿಮಗೆ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸಕ್ಕೆ ಅರ್ಜಿ ರೆಫರೆನ್ಸ್ ಸಂಖ್ಯೆ ದೊರಕುತ್ತದೆ.
  • ಈ ರೀತಿ ದೊರಕಿದ ಅರ್ಜಿಯ ಗುರುತಿನ ಸಂಖ್ಯೆಯನ್ನು ನಮೂನೆ GST REG-01 ಯ ಭಾಗ-ಬಿಯಲ್ಲಿ ನಮೋದಿಸುವ ಅಗತ್ಯವಿರುತ್ತದೆ. ಇದರೊಂದಿಗೆ, ಅರ್ಜಿ ಸಲ್ಲಿಕೆ ಮಾಡುವ ಮೊದಲು, ನೀವು ಈ ಕೆಳಗಿನ ವಿಭಾಗದಲ್ಲಿ ಸೂಚಿಸಿದ ಸಂಬಂಧಪಟ್ಟ ದಾಖಲೆಗಳನ್ನು ನೀವು ಅರ್ಜಿಯ ಜೊತೆ ಲಗ್ಗತ್ತಿಸಬೇಕು.
  • ಹೆಚ್ಚುವರಿ ಮಾಹಿತಿ ಸಲ್ಲಿಸುವ ಅವಶ್ಯಕತೆ ಇದ್ದರೆ ಜಿಎಸ್ಟಿ ವೆಬ್ ತಾಣದಲ್ಲಿ ನಮೂನೆ GST REG-03 ಯನ್ನು ಸಲ್ಲಿಸಿ GST REG-03 ನಮೂನೆ ಪಡೆದ 7 ದಿನದೊಳಗೆ ಸಂಬಂಧಪಟ್ಟ ಮಾಹಿತಿಗಳನ್ನು GST REG-04 ನಮೂನೆಯಲ್ಲಿ ಪ್ರತಿಕ್ರಿಯೆಯಾಗಿ ಸಲ್ಲಿಸಬೇಕು.
  • GST REG-01 ಅಥವಾ GST REG-04 ನಮೂನೆಯಲ್ಲಿ ಸಂಬಂಧಪಟ್ಟ ಮಾಹಿತಿಗಳನ್ನೆಲ್ಲವನ್ನು ನೀವು ನೀಡಿದ ಬಳಿಕ GST REG-01 ಅಥವಾ GST REG-04 ನಮೂನೆ ಸ್ವೀಕೃತಿ ದೊರಕಿದ 3 ದಿನದೊಳಗೆ ನೀವು ನೋಂದಣಿ ಸರ್ಟಿಫಿಕೇಟ್ ಅನ್ನು GST REG-06 ನಮೂನೆಯಲ್ಲಿ ಪಡೆಯುವಿರಿ. ಎಲ್ಲಾದರೂ ನೀವು ಸಲ್ಲಿಸಿದ ಮಾಹಿತಿಗಳು ತೃಪ್ತಿಕರವಾಗಿರದೆ ಇದ್ದಲ್ಲಿ GST REG-05 ನಮೂನೆಯಲ್ಲಿ ನಿಮ್ಮ ನೋಂದಣಿ ಅರ್ಜಿಯು ತಿರಸ್ಕೃತಗೊಳ್ಳುತ್ತದೆ.

  ಹೊಸ ಜಿಎಸ್ಟಿ ನೊಂದಣಿಗೆ ಅಗತ್ಯವಿರುವ ದಾಖಲೆಪತ್ರಗಳ ಪರಿಶೀಲನಾಪಟ್ಟಿ

  ಜಿಎಸ್ಟಿ ನೊಂದಣಿಗೆ ಈ ಮುಂದಿನ ದಾಖಲೆಗಳು ನಿಮ್ಮಲ್ಲಿರುವಂತೆ ಖಚಿತಪಡಿಸಿಕೊಳ್ಳಿರಿ.
  • ಪಾನ್
  • ಸಂಪರ್ಕ ಮಾಹಿತಿ- ಇಮೇಲ್ ಐಡಿ, ಸಂಪರ್ಕ ಸಂಖ್ಯೆ.
  • ಭಾವಚಿತ್ರಗಳು: ಮಾಲೀಕರು, ಪಾಲುದಾರರು, ನಿರ್ವಹಣ ಟ್ರಸ್ಟಿಗಳು, ಸಮಿತಿ ಇತ್ಯಾದಿ ಮತ್ತು ಅಧಿಕೃತಗೊಳಿಸುವ ಸಹಿ
  • ತೆರಿಗೆ ಪಾವತಿದಾರರ ಸಂವಿಧಾನ: ಪಾಲುದಾರಿಕೆಯ ಡೀಡ್, ನೋಂದಣಿ ದಾಖಲೆ ಪತ್ರ ಅಥವಾ ಸಾಂವಿಧಾನಿಕ ದಾಖಲೆ
  • ವ್ಯವಹಾರದ ಮುಖ್ಯ/ಹೆಚ್ಚುವರಿ ಸ್ಥಳದ ದಾಖಲೆಗಳು:
  o ಸ್ವಂತ ಸ್ಥಳವಾಗಿದ್ದರೆ- ಆಸ್ತಿ ತೆರಿಗೆ ರಸೀದಿ ಅಥವಾ ನಗರಪಾಲಿಕೆಯ ಖಾತಾ ಪ್ರತಿ ಅಥವಾ ವಿದ್ಯುತ್ ಬಿಲ್ ಪ್ರತಿ ಇತ್ಯಾದಿ ಸ್ಥಳದ ಮಾಲಿಕತ್ವಕ್ಕೆ ಬೆಂಬಲ ನೀಡುವ ಯಾವುದೇ ದಾಖಲೆಗಳು.
  o ಬಾಡಿಗೆ ಅಥವಾ ಭೋಗ್ಯದ ಸ್ಥಳವಾಗಿದ್ದರೆ- ಬಾಡಿಗೆ/ಭೋಗ್ಯದ ಕರಾರಿನ ಪ್ರತಿಯ ಜೊತೆಗೆ ಸ್ಥಳದ ಮಾಲಿಕರ ಆದಾಯ ಪಾವತಿ ರಸೀದಿ ಅಥವಾ ನಗರಪಾಲಿಕೆ ಖಾತಾ ಪ್ರತಿ ಅಥವಾ ವಿದ್ಯುತ್ ಬೆಲೆಪಟ್ಟಿಯನ್ನು ಸಲ್ಲಿಸಬೇಕು.
  • ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ದಾಖಲೆಗಳು: ಪಾಸ್ ಪುಸ್ತಕ ಅಥವಾ ಬ್ಯಾಂಕ್ ಸ್ಟೇಟ್ ಮೆಂಟ್ ನ ಮೊದಲ ಪುಟ ಸ್ಕ್ಯಾನ್ ಮಾಡಿರುವ ಪ್ರತಿ.
  • ನಮೂನೆಯ ಅಧಿಕೃತತೆ: ಪ್ರತಿಯೊಂದಕ್ಕೆ ಅಧಿಕೃತಗೊಳಿಸುವ ಸಹಿಯನ್ನು ಹಾಕಬೇಕು, ಅಧಿಕೃತ ಪ್ರತಿಗಳನ್ನು ಲಗ್ಗತ್ತಿಸಬೇಕು ಅಥವಾ ವ್ಯವಸ್ಥಾಪನ ಸಮಿತಿಯ ನಿರ್ಣಯದ ಪ್ರತಿ ಅಥವಾ ಆಡಳಿತ ಮಂಡಳಿಗೆ ಸಂಬಂಧಪಟ್ಟ ಅಧಿಕೃತತೆಯ ಪ್ರತಿಯನ್ನು ನಿಗದಿಪಡಿಸಿದ ನಮೂನೆಯಲ್ಲಿ ಸಲ್ಲಿಸಬೇಕು.

  ನಿರ್ದಿಷ್ಟ ತೆರಿಗೆದಾರರಿಗೆ ಹೊಸ ನೊಂದಣಿಗೆ ಅರ್ಜಿ ನಮೂನೆಗಳು

  ನಮೂನೆಯ ಸಂಖ್ಯೆ

  ನಮೂನೆಯ ಬಗೆ
  ನಮೂನೆ ಜಿಎಸ್ಟಿ ಆರ್ ಇಜಿ-07 ಮೂಲದಿಂದ ತೆರಿಗೆ ತೆಗೆದುಕೊಳ್ಳುವವರು ಅಥವಾ ತೆರಿಗೆ ಸಂಗ್ರಹಿಸಲು ನೋಂದಣಿ ಅರ್ಜಿ
  ನಮೂನೆ ಜಿಎಸ್ಟಿ ಆರ್ ಇಜಿ-09 ಅನಿವಾಸಿ ತೆರಿಗೆದಾರ ನೋಂದಣಿಗೆ ಅರ್ಜಿ
  ನಮೂನೆ ಜಿಎಸ್ಟಿ ಆರ್ ಇಜಿ-09ಎ ಭಾರತದಿಂದ ಹೊರಗಿನ ಸ್ಥಳದಿಂದ ತೆರಿಗೆ ವಿಧಿಸಲಾಗದ ಆನ್ ಲೈನ್ ಸ್ವೀಕೃತಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬರು ಆನ್ ಲೈನ್ ಮಾಹಿತಿ ಮತ್ತು ವಿವರಗಳನ್ನು ಸೇವೆಯನ್ನು ಪಡೆಯುವ ಅಥವಾ ಮುಂದುವರೆಸುವ ಸಲುವಾಗಿ ನೋಂದಣಿ ಮಾಡಿಸಿಕೊಳ್ಳಲು ಅರ್ಜಿ

  Are you GST ready yet?

  Get ready for GST with Tally.ERP 9 Release 6

  52,348 total views, 543 views today