ಜಿಎಸ್‍ಟಿ ಅಡಿಯಲ್ಲಿರುವ ಸಲ್ಲಿಕೆಗಳ ವಿಧಗಳು ಯಾವುವು?

Last updated on July 17th, 2017 at 12:49 am

Language

  • English
  • Hindi
  • Marathi
  • Kannada
  • Telugu
  • Tamil
  • Gujarati

ಇತ್ತೀಚಿನ ಪೋಸ್ಟ್ಗಳನ್ನು ಅಳವಡಿಸಲು ಈ ಪೋಸ್ಟ್ 25 ಅಕ್ಟೋಬರ್, 2016 ರಂದು ನವೀಕರಿಸಲಾಗಿದೆ.
ಜಿಎಸ್‍ಟಿಗೆ ಒಮ್ಮುಖವಾಗುವಿಕೆ ಪ್ರಮುಖವಾಗುತ್ತದೆ; ರಾಜ್ಯ ಮತ್ತು ಕೇಂದ್ರ ತೆರಿಗೆಗಳ ನಡುವೆ ಒಮ್ಮುಖತೆ ಇರಬೇಕು.

ಇಂದು ಏನಾಗುತ್ತದೆ ಎಂಬುದನ್ನು ಪರಿಗಣಿಸಿ. ಕೇಂದ್ರಯ ಅಬಕಾರಿ, ಸೇವಾ ತೆರಿಗೆ ಮತ್ತು ವ್ಯಾಟ್ ಅಡಿಯಲ್ಲಿ ಅನುಸರಣೆ ಮಾಡುವ ಉತ್ಪಾದಕರು ಪ್ರತಿ ರಾಜ್ಯಗಳಲ್ಲಿ ಸೂಚಿಸಿರುವಂತೆ ತೆರಿಗೆ ಸಲ್ಲಿಸÀಬೇಕಾಗುತ್ತದೆ. ಉತ್ಪಾದಕರು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಆವರ್ತನದಲ್ಲಿ (ಫ್ರೀಕ್ವೆನ್ಸಿಯಲ್ಲಿ) ಅಬಕಾರಿ, ಸೇವಾ ತೆರಿಗೆ ಮತ್ತು ವ್ಯಾಟ್‍ಗಳಿಗೆ ಸಂಬಂಧಿಸಿದ ಸಲ್ಲಿಕೆ, ಅನುಬಂಧಗಳನ್ನು ಮತ್ತು ರೆಜಿಸ್ಟರ್‍ಗಳನ್ನುನಿರ್ವಹಿಸಸಬೇಕು.

ಜಿಎಸ್‍ಟಿ ಸಿದ್ಧವಾಗಿದ್ದು, ನೀವು ಒಂದು ವ್ಯಾಪಾರಿ, ಉತ್ಪಾದಕರು, ಮರುಮಾರಾಟಗಾರರ ಅಥವಾ ಸೇವೆ ಒದಗಿಸುವವರಾಗಿದ್ದರೂ, ನೀವು ಮಾತ್ರ ಜಿ.ಎಸ್.ಟಿ. ಆದಾಯ ಸಲ್ಲಿಸÀಬೇಕಾಗುತ್ತದೆ.
ಅದ್ಭುತ! ಇದು ಅತ್ಯುತ್ತಮ ಯೋಜನೆ ಎನಿಸುತ್ತದೆ. ಜಿ.ಎಸ್.ಟಿ.ಯಲ್ಲಿರುವ ವಿವಿಧ ಸಲ್ಲಿಕೆಗಳ ನಮೂನೆಗಳನ್ನು ಅರ್ಥ ಮಾಡಿಕೊಳ್ಳೋಣ.
ಜಿಎಸ್‍ಟಿ ಅಡಿಯಲ್ಲಿ ತೆರಿಗೆ ಪಾವತಿದಾರರು ರಿಟರ್ನ್ಸ್ ಫೈಲ್ ಮಾಡಲು 19 ಪ್ರಕಾರದ ಫಾರ್ಮ್‍ಗಳಿವೆ. ಈ ಎಲ್ಲಾ ರೀತಿಯ ಫಾರ್ಮ್‍ಗಳನ್ನು ಇ-ಫೈಲ್ ಮಾಡುವ ಅಗತ್ಯವಿದೆ. ಪ್ರತಿ ಫಾರ್ಮ್ ಅನ್ವಯವಾಗುವಿಕೆ ಮತ್ತು ಅವಧಿಯ ವಿವರಗಳನ್ನು ಈ ಕೆಳಗಿನಂತೆ ಪಟ್ಟಿಮಾಡಲಾಗಿದೆ.

ನಿಯಮಿತ ಡೀಲರ್

ನಮೂನೆ ವಿಧ ಪುನರಾವರ್ತನೆ (ಫ್ರೀಕ್ವೆನ್ಸಿ) ಗಡುವಿನ ದಿನಾಂಕ ಸಲ್ಲಿಸಬೇಕಾಗಿರುವ ವಿವರಗಳು
ನಮೂನೆ GSTR-1 ಮಾಸಿಕ ತಿಂಗಳ ತರುವಾಯದ 10ನೇ ತಾರೀಕು ತೆರಿಗೆಗೆ ಒಳಗಾಗುವ ಔಟ್‍ವಾರ್ಡ್ ಸರಕುಗಳು ಮತ್ತು/ಅಥವಾ ಸೇವೆಗಳ ವಿವರಗಳನ್ನು ಒದಗಿಸಿ
ನಮೂನೆ GSTR-2A ಮಾಸಿಕ ತಿಂಗಳ ತರುವಾಯದ 11ನೇ ತಾರೀಕು ಪೂರೈಕೆದರರು ಸಲ್ಲಿಸಿದ ನಮೂನೆ GSTR -1 ಆಧಾರದಲ್ಲಿ ಸ್ವೀಕರಿಸುವವರಿಗೆ ಒದಗಿಸಲಾಗುವ ಇನ್ವಾರ್ಡ್ ಸಪ್ಲೈಗಳ ಅಟೋ-ಪಾಪ್ಯೂಲೇಟೆಡ್ ವಿವರಗಳು
ನಮೂನೆ GSTR-2 ಮಾಸಿಕ ತಿಂಗಳ ತರುವಾಯದ 15ನೇ ತಾರೀಕು ಇನ್ಪುಟ್ ತೆರಿಗೆ ಕ್ರೆಡಿಟ್‍ನ ಕ್ಲೈಮ್‍ಗಾಗಿ ತೆರಿಗೆಗೆ ಒಳಪಡುವ ಸರಕು ಮತ್ತು/ಅಥವಾ ಸೇವೆಗಳನ್ನು ಇನ್ವಾರ್ಡ್ ಪೂರೈಕೆಗಳ ವಿವರಗಳು. ನಮೂನೆ GSTR-2Aಯಲ್ಲಿ ಸೇರಿಸುವಿಕೆ(ಕ್ಲೈಮ್) ಅಥವ ಬದಲಾವಣೆಗಾಗಿ ನಮೂನೆ GSTR -2 ಸಲ್ಲಿಸಬೇಕು.
ನಮೂನೆ GSTR-1A ಮಾಸಿಕ ತಿಂಗಳ ತರುವಾಯದ 17ನೇ ತಾರೀಕು ಸ್ವೀಕರಿಸುವವರು ನಮೂನೆಯಲ್ಲಿ ಸೇರಿಸಲಾದ, ಸರಿಪಡಿಸಿಲಾದ ಅಥವಾ ಅಳಿಸಲಾದ ಔಟ್‍ವಾರ್ಡ್ ಸಪ್ಲೈಗಳ ವಿವರಗಳು ಪೂರೈಕೆದಾರಿಗೆ ಲಭ್ಯವಾಗುವಂತೆ ಮಾಡಲಾಗುವುದು.
ನಮೂನೆ GSTR-3 ಮಾಸಿಕ ತಿಂಗಳ ತರುವಾಯದ 20ನೇ ತಾರೀಕು ತೆರಿಗೆಯ ಮೊತ್ತದ ಪ್ರಮಾಣದ ಪಾವತಿಯ ಜೊತೆಗೆ ಔಟ್ ವಾರ್ಡ್ ಪೂರೈಕೆಗಳು ಮತ್ತು ಇನ್ವಾರ್ಡ್ ಪೂರೈಕೆಗಳ ವಿವರಗಳ ಅಂತಿಮಗೊಳಿಸುವಿಕೆಯ ಆಧಾರದ ಮೇಲೆ ಮಾಸಿಕ ಸಲ್ಲಿಕೆ
ನಮೂನೆ GST MIS-1 ಮಾಸಿಕ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್‍ನ ಸ್ವೀಕಾರ, ವ್ಯತ್ಯಾಸ ಅಥವಾ ಡುಪ್ಲಿಕೇಷನ್‍ಗಳ ಬಗ್ಗೆ ಸಂವಹನ
ನಮೂನೆ GSTR-3A ನೋಂದಾಯಿತ ತೆರಿಗೆದಾರ ವ್ಯಕ್ತಿ ಪರಿಚ್ಛೇದ 27 ಮತ್ತು ಪರಿಚ್ಛೇದ 31ರ ಅಡಿಯಲ್ಲಿ ತೆರಿಗೆ ಸಲ್ಲಿಸಲು ವಿಫಲವಾದರೆ ನೋಟೀಸು
ನಮೂನೆ GSTR-9 ವಾರ್ಷಿಕ ಮುಂದಿನ ಆರ್ಥಿಕ ವರ್ಷದ ಡಿಸೆಂಬರ್ 31ನೇ ತಾರೀಕು ವಾರ್ಷಿಕ ಸಲ್ಲಿಕೆ- ಪಡೆಯಲಾದ ಐಟಿಸಿ ವಿವರಗಳು ಮತ್ತು ಪಾವತಿಸಲಾದ ಸ್ಥಳೀಯ, ಅಂತರರಾಜ್ಯ ಮತ್ತು ಆಮದು/ರಫ್ತುಗಳ ಜಿ.ಎಸ್.ಟಿ.ಯ ವಿವರಗಳನ್ನು ಸಲ್ಲಿಸಿ.

 

ಸಂಯೋಜಿತ (ಕಾಂಪೋಸಿಟ್) ತೆರಿಗೆ ಪಾವತಿದಾರರು

ರಿಟರ್ನ್ ವಿಧ ಪುನರಾವರ್ತನೆ (ಫ್ರೀಕ್ವೆನ್ಸಿ) ಗಡುವಿನ ದಿನಾಂಕ ಸಲ್ಲಿಸಬೇಕಾಗಿರುವ ವಿವರಗಳು
ನಮೂನೆ GSTR-4A ತ್ರೈಮಾಸಿಕ ಪೂರೈಕೆದಾರರು ಸಲ್ಲಿಸಲಾದ ನಮೂನೆ GSTR-1ರ ಆಧಾರದ ಮೇಲೆ ಸಂಯೋಜಿತ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳಲಾದ ಸ್ವೀಕೃತಿದಾರರಿಗೆ ಲಭ್ಯವಾಗುವಂತೆ ಮಾಡುವ ಇನ್ವಾರ್ಡ್ ಪೂರೈಕೆಗಳ ವಿವರಗಳು
ನಮೂನೆ GSTR-4 ತ್ರೈಮಾಸಿಕ ತಿಂಗಳ ತರುವಾಯದ 18ನೇ ತಾರೀಕು ಸರಕು ಮತ್ತು ಸೇವೆಗಳ ಎಲ್ಲಾ ಔಟ್‍ವಾರ್ಡ್ ಪೂರೈಕೆಗಳನ್ನು ಸಲ್ಲಿಸುವಿಕೆ. ಇದು ನಮೂನೆ GSTR-4Aರ ಅಟೋ-ಪಾಪ್ಯೂಲೇಟೆಡ್ ವಿವರಗಳನ್ನು, ಪಾವತಿಸಬೇಕಾದ ತೆರಿಗೆ ಮತ್ತು ತೆರಿಗೆ ಪಾವತಿಯ ವಿವರಗಳನ್ನು ಒಳಗೊಂಡಿದೆ.
ನಮೂನೆ GSTR-9A ವಾರ್ಷಿಕ ತಿಂಗಳ ತರುವಾಯದ 31ನೇ ತಾರೀಕು ತೆರಿಗೆ ಪಾವತಿಯ ವಿವರಗಳೊಂದಿಗೆ ಸಲ್ಲಿಸಲಾದ ತ್ರೈಮಾಸಿಕ ರಿಟರ್ನ್‍ಗಳ ಕ್ರೂಢೀಕೃತ ವಿವರಗಳನ್ನು ಸಲ್ಲಿಸುವಿಕೆ.

 

ವಿದೇಶಿ ಅನಿವಾಸಿ ತೆರಿಗೆದಾರ

ರಿಟರ್ನ್ ವಿಧ ಪುನರಾವರ್ತನೆ (ಫ್ರೀಕ್ವೆನ್ಸಿ) ಗಡುವಿನ ದಿನಾಂಕ ಸಲ್ಲಿಸಬೇಕಾಗಿರುವ ವಿವರಗಳು
ನಮೂನೆ GSTR-5 ಮಾಸಿಕ ತಿಂಗಳ ತರುವಾಯದ 20ನೇ ತಾರೀಕು ಅಥವ ನೋಂದಣಿ ಎಕ್ಸ್‍ಪೈರಿಯಾಗಿ 7 ದಿನಗಳ ನಂತರ ಆಮದು, ಔಟ್ ವಾರ್ಡ್ ಪೂರೈಕೆ, ಪಡೆಯಲಾದ ಐಟಿಸಿ, ಪಾವತಿಸಲಾದ ತೆರಿಗೆ ಮತ್ತು ಸ್ಟಾಕ್ ವಿವರಗಳನ್ನು ಸಲ್ಲಿಸಿ

 

ಇನ್ಪುಟ್ ಸೇವೆ ವಿತರಕ

ರಿಟರ್ನ್ ವಿಧ ಪುನರಾವರ್ತನೆ (ಫ್ರೀಕ್ವೆನ್ಸಿ) ಗಡುವಿನ ದಿನಾಂಕ ಸಲ್ಲಿಸಬೇಕಾಗಿರುವ ವಿವರಗಳು
ನಮೂನೆ GSTR -6A ಮಾಸಿಕ ತಿಂಗಳ ತರುವಾಯದ 11ನೇ ತಾರೀಕು ಪೂರೈಕೆದಾರರು ಸಲ್ಲಿಸುವ ನಮೂನೆ GSTR -1ರ ಆಧಾರದ ಮೇಲೆ ಐ.ಎಸ್.ಡಿ. ಸ್ವೀಕೃತಿದಾರರಿಗೆ ಲಭ್ಯವಾಗುವಂತೆ ಮಾಡಲಾಗುವ ಇನ್ವಾರ್ಡ್ ಪೂರೈಕೆಗಳ ವಿವರಗಳು
ನಮೂನೆ GSTR -6 ಮಾಸಿಕ ತಿಂಗಳ ತರುವಾಯದ 13ನೇ ತಾರೀಕು ಹಂಚಿಕೆ ಮಾಡಲಾದ ಇನ್ಪುಟ್ ಕ್ರೆಡಿಟ್ ವಿವರಗಳನ್ನು ಸಲ್ಲಿಸುವಿಕೆ

 

ತೆರಿಗೆ ಕಡಿತದಾರರು (ಡಿಡಕ್ಟರ್)

ರಿಟರ್ನ್ ವಿಧ ಪುನರಾವರ್ತನೆ (ಫ್ರೀಕ್ವೆನ್ಸಿ) ಗಡುವಿನ ದಿನಾಂಕ ಸಲ್ಲಿಸಬೇಕಾಗಿರುವ ವಿವರಗಳು
ನಮೂನೆ GSTR-7 ಮಾಸಿಕ ತಿಂಗಳ ತರುವಾಯದ 10ನೇ ತಾರೀಕು ಕಡಿತಗೊಳಿಸಲಾಗುತ್ತದೆ ಟಿಡಿಎಸ್ ವಿವರಗಳನ್ನು ಒದಗಿಸುವಂತೆ
ನಮೂನೆ GSTR-7A ಮಾಸಿಕ ಟಿಡಿಎಸ್ ಪ್ರಮಾಣಪತ್ರವನ್ನು ಡೌನ್ಲೋಡ್‍ಗೆ ಲಭ್ಯವಾಗುವಂತೆ ಮಾಡುವಿಕೆ ಟಿಡಿಸ್ ಪ್ರಮಾಣ ಪತ್ರ – ಟಿಡಿಎಸ್ ಕಡಿತಗೊಳಿಸಲಾದ ಮೌಲ್ಯದ ವಿವರಗಳನ್ನು ಕ್ಯಾಪ್ಚರ್ ಮಾಡುವಿಕೆ ಮತ್ತು ಕಡಿತಗೊಳಿಸಲಾದ ಟಿಡಿಎಸ್ ಅನ್ನು ಸೂಕ್ತ ಸರ್ಕಾರಕ್ಕೆ ಠೇವಣಿ ಮಾಡುವಿಕೆ.

 

ಇ-ಕಾಮರ್ಸ್

ರಿಟರ್ನ್ ವಿಧ ಪುನರಾವರ್ತನೆ (ಫ್ರೀಕ್ವೆನ್ಸಿ) ಗಡುವಿನ ದಿನಾಂಕ ಸಲ್ಲಿಸಬೇಕಾಗಿರುವ ವಿವರಗಳು
ನಮೂನೆ GSTR-8 ಮಾಸಿಕ ತಿಂಗಳ ತರುವಾಯದ 10ನೇ ತಾರೀಕು ಇ-ಕಾಮರ್ಸ್ ಆಪರೇಟರ್‍ಗಳ ಮೂಲಕ ಪೂರೈಸಲಾದ ಸರಕುಗಳು ಮತ್ತು ಪೂರೈಕೆಗಳ ಮೇಲೆ ಸಂಗ್ರಹಿಸಲಾದ ತೆರಿಗೆಯ ಮೊತ್ತಗಳ ವಿವರಗಳು

 

ಒಟ್ಟು ವಹಿವಾಟು 2 ಕೋಟಿ ಮೀರಿದರೆ

ರಿಟರ್ನ್ ವಿಧ ಪುನರಾವರ್ತನೆ (ಫ್ರೀಕ್ವೆನ್ಸಿ) ಗಡುವಿನ ದಿನಾಂಕ ಸಲ್ಲಿಸಬೇಕಾಗಿರುವ ವಿವರಗಳು
ನಮೂನೆ GSTR-9C ವಾರ್ಷಿಕ ವಾರ್ಷಿಕ, ಮುಂದಿನ ಹಣಕಾಸು ವರ್ಷದ ಡಿಸೆಂಬರ್ 31 ರೀಕನ್ಸಿಲಿಯೇಷನ್ ವರದಿ- ದೃಢೀಕರಿಸಲಾದ, ಆಡಿಟ್ ಮಾಡಲಾದ ವಾರ್ಷಿಕ ಖಾತೆಗಳು ಮತ್ತು ರೀಕನ್ಸಿಲಿಯೇಷನ್ ವರದಿ.

 

ಅಂತಿಮ ರಿಟರ್ನ್:

ತೆರಿಗೆದಾರ ವ್ಯಕ್ತಿಯ ನೋಂದಣಿ ಸರಂಡರ್ ಮಾಡಲಾಗಿದ್ದರೆ ಅಥವ ರದ್ದುಗೊಳಿಸಲಾಗಿದ್ದರೆ

ರಿಟರ್ನ್ ವಿಧ ಪುನರಾವರ್ತನೆ (ಫ್ರೀಕ್ವೆನ್ಸಿ) ಗಡುವಿನ ದಿನಾಂಕ ಸಲ್ಲಿಸಬೇಕಾಗಿರುವ ವಿವರಗಳು
ನಮೂನೆ GSTR-10 ಮಾಸಿಕ ನೋಂದಣಿ ರದ್ದಾದ 3 ತಿಂಗಳ ಒಳಗೆ ಇರುವ ಇನ್ಪುಟ್ಸ್ ಮತ್ತು ಕ್ಯಾಪಿಟಲ್ ಸರಕುಗಳ, ಪಾವತಿಸಲಾದ ಮತ್ತು ಪಾವತಿಸಬೇಕಾದ ತೆರಿಗೆಯ ವಿವರಗಳನ್ನು ಸಲ್ಲಿಸುವಿಕೆ.

 

ಸರ್ಕಾರದ ಇಲಾಖೆಗಳು ಮತ್ತು ವಿಶ್ವಸಂಸ್ಥೆಯ ಅಂಗಗಳು

ರಿಟರ್ನ್ ವಿಧ ಪುನರಾವರ್ತನೆ (ಫ್ರೀಕ್ವೆನ್ಸಿ) ಗಡುವಿನ ದಿನಾಂಕ ಸಲ್ಲಿಸಬೇಕಾಗಿರುವ ವಿವರಗಳು
ನಮೂನೆ GSTR-11 ಮಾಸಿಕ ತಿಂಗಳ ತರುವಾಯದ 28ನೇ ತಾರೀಕು ಯು.ಐ.ಎನ್. ಹೊಂದಿರುವ ವ್ಯಕ್ತಿಯು ನೀಡಬೇಕಾಗಿರುವ ಇನ್ವಾರ್ಡ್ ಪೂರೈಕೆಗಳ ವಿವರಗಳು

 

Are you GST ready yet?

Get ready for GST with Tally.ERP 9 Release 6

About the author

Pugal T & Yarab A

88 Comments

© Tally Solutions Pvt. Ltd. All rights reserved - 2017