(English) Language

 • English
 • Hindi
 • Marathi
 • Kannada
 • Telugu
 • Tamil
 • Gujarati

ನೋಂದಾಯಿತ ವ್ಯಾಪಾರಿ? ಜಿಎಸ್‍ಟಿಗೆ ಬದಲಾಯಿಸಿಕೊಳ್ಳುವುದು ಹೇಗೆ ಎಂಬ ಶೀರ್ಷಿಕೆಯ ಪೋಸ್ಟ್ನಲ್ಲಿ ನಾವು ಜಿಎಸ್‍ಟಿ ,  ನೋಂದಣಿಗೆ ಅಗತ್ಯ ಅಂಶಗಳು ಮತ್ತು ಅಸ್ತಿತ್ವದಲ್ಲಿರುವ ವ್ಯಾಪಾರಿಗಳು ನೋಂದಣಿ ಮಾಡಿಕೊಳ್ಳಲು ಬೇಕಾದ ನಮೂನೆಗಳ ಬಗ್ಗೆ ಚರ್ಚಿಸಿದ್ದೇವೆ. ಈ ಪೋಸ್ಟ್ನಲ್ಲಿ, ನಾವು ಹೊಸ ವ್ಯವಹಾರ ನೋಂದಣಿಗಳಿಗೆ ಅಗತ್ಯವಿರುವ ನೋಂದಣಿ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳಲಿದ್ದೇವೆ.

ಜಿಎಸ್‍ಟಿ ನೋಂದಣಿಗೆ ಹೊಣೆಗಾರಿಕೆ

ಪ್ರದೇಶಒಟ್ಟು ವಹಿವಾಟು
ಈಶಾನ್ಯ ಭಾರತ + ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಖಂಡರೂ. 10 ಲಕ್ಷ
ಭಾರತದ ಇತರ ಸ್ಥಳಗಳುರೂ. 20 ಲಕ್ಷ

 

ನೀವು ನಿಯಮಿತ ವ್ಯಾಪಾರಿ ಅಥವಾ ಸಂಯೋಜಿತ ತೆರಿಗೆ ಪಾವತಿದಾರರಾಗಿದ್ದರೆ, ಜಿ.ಎಸ್.ಟಿ. ನೋಂದಣಿಗಾಗಿ ಈ ಕೆಳಗಿನಂತೆ ಮಾಡಬೇಕಾಗುತ್ತದೆ:

 1. ನಮೂನೆ GST REG-01ರ ಭಾಗ-ಎ ಅನ್ನು ಭರ್ತಿ ಮಾಡಿ. ನಿಮ್ಮ ಪ್ಯಾನ್, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ನೀಡಿ ನಮೂನೆಯನ್ನು ಸಲ್ಲಿಸಿ.
 2. ಪ್ಯಾನ್ ಅನ್ನು ಜಿ.ಎಸ್.ಟಿ. ಪೋರ್ಟಲ್‍ನಲ್ಲಿ ಪರಿಶೀಲಿಸಲಾಗುತ್ತದೆ. ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಗಳನ್ನು ಒನ್ ಟೈಮ್ ಪಾಸ್ವರ್ಡ್ (ಒ.ಟಿ.ಪಿ.) ಮೂಲಕ ಪರಿಶೀಲಿಸಲಾಗುತ್ತದೆ.
 3. ನಿಮ್ಮ ಮೊಬೈಲ್ ಮತ್ತು ಇ-ಮೇಲ್ ಮೂಲಕ ಅರ್ಜಿಯ ಉಲ್ಲೇಖ ಸಂಖ್ಯೆಯನ್ನು ಸ್ವೀಕರಿಸುವಿರಿ./li>
 4. ನಮೂನೆ GST REG-01ರ ಭಾಗ-ಬಿ ಯನ್ನು ಭರ್ತಿ ಮಾಡಿ ಮತ್ತು ನೀವು ಸ್ವೀಕರಿಸಿದ ಅರ್ಜಿಯ ಉಲ್ಲೇಖ ಸಂಖ್ಯೆಯನ್ನು ಸೂಚಿಸಿ. ಇತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ ನಮೂನೆಯನ್ನು ಸಲ್ಲಿಸಲು ಅಪ್ಲೋಡ್ ಮಾಡಬೇಕಾದ ದಾಖಲೆಗಳ ವಿವರ ಈ ಕೆಳಕಂಡತಿದೆ-
  • ಭಾವಚಿತ್ರಗಳು: ಮಾಲಿಕರು, ಪಾಲುದಾರರು, ಮ್ಯಾನೆಜಿಂಗ್ ಟ್ರಸ್ಟಿ, ಸಮಿತಿ ಇತ್ಯಾದಿಯವರ ಮತ್ತು ಸಹಿ ಹಾಕುವ ಅಧಿಕಾರವಿರುವವರ ಭಾವಚಿತ್ರಗಳು.
  • ತೆರಿಗೆದಾರರ ಸಂವಿಧಾನ: ಪಾಲುದಾರಿಕೆಯ ಕರಾರು ಪತ್ರ, ನೋಂದಣಿ ಪ್ರಮಾಣಪತ್ರ ಅಥವಾ ಸಂವಿಧಾನದ ಇತರೆ ಪುರಾವೆ
  • ವ್ಯಾಪಾರ ಪ್ರಧಾನ/ಹೆಚ್ಚುವರಿ ಸ್ಥಳದ ಪುರಾವೆ:
   • ಸ್ವಂತ ಸ್ಥಳಗಳಿಗಾಗಿ– ಸ್ಥಳದ ಮಾಲಿಕತ್ವವನ್ನು ಬೆಂಬಲಿಸುವ ಯಾವುದೇ ದಾಖಲೆಯ ಪುರಾವೆ- ಇತ್ತೀಚಿನ ಆಸ್ತಿ ತೆರಿಗೆ ಸ್ವೀಕೃತಿ ಅಥವಾ ಪುರಸಭಾ ಖಾತಾ ಪ್ರತಿ ಅಥವಾ ವಿದ್ಯುತ್ ಬಿಲ್ ಪ್ರತಿ.
   • ಬಾಡಿಗೆ ಅಥವಾ ಗುತ್ತಿಗೆ ಸ್ಥಳಗಳಿಗಾಗಿ– ಮಾಲೀಕರ (ಜಮೀನುದಾರರ) ಇತ್ತೀಚಿನ ಆಸ್ತಿ ತೆರಿಗೆ ಸ್ವೀಕೃತಿ ಅಥವಾ ಪುರಸಭಾ ಖಾತಾ ಪ್ರತಿ ಅಥವಾ ವಿದ್ಯುತ್ ಬಿಲ್ ಪ್ರತಿಯೊಂದಿಗೆ ಬಾಡಿಗೆ/ಭೋಗ್ಯ ಒಪ್ಪಂದದ ಪ್ರತಿ.
  • ಬ್ಯಾಂಕ್ ಖಾತೆಗೆ ಸಂಬಂಧಿಸಿದ ಪುರಾವೆ : ಬ್ಯಾಂಕ್ ಪಾಸ್ ಪುಸ್ತಕದ ಮೊದಲ ಪುಟದ ಸ್ಕ್ಯಾನ್ ಪ್ರತಿ ಅಥವಾ ಬ್ಯಾಂಕ್ ವರದಿ.
  • ಅಧಿಕೃತತೆಯ ನಮೂನೆಗಳು: ಸಹಿ ಹಾಕುವ ಅಧಿಕಾರವಿರುವ ಪ್ರತಿಯೊಬ್ಬರಿಗಾಗಿಯೂ ಅಧಿಕೃತತೆಯ ಪ್ರತಿ ಅಥವಾ ವ್ಯವಸ್ಥಾಪಕ ಸಮಿತಿ ಅಥವ ನಿರ್ದೇಶಕರ ಮಂಡಳಿಯ ನಿರ್ಣಯದ ನಿಗದಿತ ನಮೂನೆಯನ್ನು ಅಪ್ಲೋಡ್ ಮಾಡಬೇಕು.
 5. ಹೆಚ್ಚುವರಿ ಮಾಹಿತಿಯ ಅಗತ್ಯವಿದ್ದಲ್ಲಿ ನಿಮಗೆ ನಮೂನೆ GST REG-03 ನೀಡಲಾಗುವುದು. ನೀವು ನಮೂನೆ GST REG-03ಅನ್ನು ಸ್ವೀಕರಿಸಿದ ದಿನಾಂಕದಿಂದ 7 ದಿನಗಳೊಳಗಾಗಿ ಅಗತ್ಯ ಮಾಹಿತಿಯೊಂದಿಗೆ ನಮೂನೆ GST REG-04ರ ಮೂಲಕ ಪ್ರತಿಕ್ರಿಯೆ ನೀಡಬೇಕು.
 6. ನೀವು ನಮೂನೆ GST REG-01 ಅಥವಾ ನಮೂನೆ GST REG-04ರ ಮೂಲಕ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಿದ್ದರೆ, ನಮೂನೆ GST REG-01 ಅಥವಾ ನಮೂನೆ GST REG-04 ಅನ್ನು ಸ್ವೀಕರಿಸಿದ 3 ದಿನಗಳ ಒಳಗೆ ನಮೂನೆ GST REG-06ರ ಮೂಲಕ ನೋಂದಣಿ ಪ್ರಮಾಣಪತ್ರವನ್ನು ನೀಡಲಾಗುವುದು.
 7. ಸಲ್ಲಿಸಿದ ವಿವರಗಳನ್ನು ತೃಪ್ತಿದಾಯಕವಾಗದೇ ಇದ್ದಲ್ಲಿ, ನೋಂದಣಿ ಅರ್ಜಿಯನ್ನು ನಮೂನೆ GST REG-05ರ ಮೂಲಕ ತಿರಸ್ಕೃತಗೊಳಿಸಲಾಗುತ್ತದೆ.

GST---Registration-Process

ಇತರೆ ಮಧ್ಯಸ್ಥಗಾರರಿಗೆ ಜಿ.ಎಸ್.ಟಿ. ನೋಂದಣಿ ನಮೂನೆಗಳು

ನಮೂನೆ ಸಂ.ನಮೂನೆ ವಿಧ
ನಮೂನೆ GST REG-07ಮೂಲದಲ್ಲಿ ತೆರಿಗೆಯ ಕಡಿತಗೊಳಿಸುವ ಅಥವಾ ತೆರಿಗೆಯ ಸಂಗ್ರಹಕರಾಗಿ ನೋಂದಣಿಗೆ ಅರ್ಜಿ
ನಮೂನೆ GST REG-08ಮೂಲದಲ್ಲಿ ತೆರಿಗೆಯ ಕಡಿತಗೊಳಿಸುವ ಅಥವಾ ತೆರಿಗೆಯ ಸಂಗ್ರಹಕರಾಗಿ ನೋಂದಣಿಯ ಅರ್ಜಿಯನ್ನು ರದ್ದುಗೊಳಿಸಲು ಆದೇಶ
ನಮೂನೆ GST REG-09ಯುಎನ್ ಸಂಸ್ಥೆಗಳಿಗೆ/ಎಂಬೆಸಿಗಳಿಗೆ ವಿಶಿಷ್ಟ ಐ.ಡಿ.ಯ ಮಂಜೂರಿಗಾಗಿ ಅರ್ಜಿ

Are you GST ready yet?

Get ready for GST with Tally.ERP 9 Release 6

684,729 total views, 130 views today

Yarab A

Author: Yarab A

Yarab is associated with Tally since 2012. In his 7+ years of experience, he has built his expertise in the field of Accounting, Inventory, Compliance and software product for the diverse industry segment. Being a member of ‘Centre of Excellence’ team, he has conducted several knowledge sharing sessions on GST and has written 200+ blogs and articles on GST, UAE VAT, Saudi VAT, Bahrain VAT, iTax in Kenya and Business efficiency.