ಇತ್ತೀಚಿನ ಅಪನಗದೀಕರಣದ ಆಘಾತದಿಂದ ಸುಧಾರಿಸಲು ಭಾರತ ಸರಕಾರವು ಹೆಚ್ಚಿನ ಜನರನ್ನು ಡಿಜಿಟಲ್ ಬಳಕೆಗೆ ಉತ್ತೇಜಿಸುತ್ತಿದೆ, ಈ ಬಜೆಟಿನಲ್ಲಿ ಹೆಚ್ಚು ಜಟಿಲವಾದ ಮತ್ತು ಹೆಚ್ಚು ಉಜ್ವಲಮಾನವಾದ ಅರ್ಥವ್ಯವಸ್ಥೆ ಗೋಚರಿಸುತ್ತಿದೆ. ನಗದು ಅಪನಗದೀಕರಣ ಅಥವಾ ನೋಟು ನಿಷೇಧದಿಂದಾಗಿ ಎಂಎಸ್ಎಂಇಗೆ ತೀವ್ರ ಹೊಡೆತವುಂಟಾಗಿದೆ- ಫೆಬ್ರವರಿ 1ರಂದು ಪ್ರಕಟಿಸಿದ ಬಜೆಟಿನಲ್ಲಿ ಎಂಎಸ್ಎಂಇ ವಲಯದ ಪ್ರಗತಿಗಾಗಿ ಕೆಲವೊಂದು ಉತ್ತೇಜನಾಕ್ರಮಗಳನ್ನು ಪ್ರಕಟಿಸಲಾಗಿದೆ. ಈ ವಲಯದಲ್ಲಿ ಬೃಹತ್ ಉದ್ಯೋಗಾವಕಾಶಗಳಿವೆ.

ಹಣಕಾಸು ಸಚಿವರು ಈ ಮುಂದಿನ ಉತ್ತೇಜನಗಳ ಮೂಲಕ ಎಂಎಸ್ಎಂಇ ವಲಯದ ಪ್ರಗತಿಗೆ ಮತ್ತು ಎಂಎಸ್ಎಂಇ ವಲಯದ ಡಿಜಿಟಲೀಕರಣಕ್ಕೆ ಆದ್ಯತೆ ನೀಡಿದ್ದಾರೆ.

ಕಂಪನಿ ತೆರಿಗೆಯಲ್ಲಿ ಇಳಿಕೆ

ಸುಮಾರು 50 ಕೋಟಿವರೆಗೆ ಆದಾಯ ತೆರಿಗೆ ನೀಡುವ ಆದಾಯದ ಮೂಲವಾಗಿರುವ ಕಂಪನಿಗಳ ತೆರಿಗೆಯನ್ನು ಶೇಕಡ 30ರಿಂದ ಶೇಕಡ 25ಕ್ಕೆ ಇಳಿಸಲಾಗಿದೆ.

ಶೇಕಡ 5ರಷ್ಟು ಇಳಿಕೆ ಮಾಡಿರುವುದು ಎಂಎಸ್ಎಂಇ ಪಾಲಿಗೆ ಒಳ್ಳೆಯ ಬೆಳವಣಿಗೆ, ಇದು ಬಹುತೇಕ ಕಂಪನಿಗಳಿಗೆ ಸಹಕಾರಿಯಾಗಲಿದೆ. ಇದರಿಂದಾಗಿ ವ್ಯವಹಾರದ ಪ್ರಗತಿಗೆ ಇನ್ನಷ್ಟು ಹಣದ ಹರಿವು ಹೆಚ್ಚಿಸಲಿದೆ. ಇದ ಎಂಎಸ್ಎಂಇಗಳಿಗೆ ಸೂಕ್ತ ವೇದಿಕೆ ಒದಗಿಸಲಿದೆ ಮತ್ತು ಎಂಎಸ್ಎಂಇ ಹಾಗೂ ದೊಡ್ಡ ಕಂಪನಿಗಳ ನಡುವಿನ ಅಂತರವನ್ನು ತಗ್ಗಿಸಲಿದೆ. ದೊಡ್ಡ ಕಂಪನಿಗಳು ಉತ್ತೇಜನಗಳನ್ನು, ವಿನಾಯಿತಿಗಳನ್ನು ಮತ್ತು ಲಭ್ಯವಿರುವ ಸೌಲಭ್ಯಗಳನ್ನೆಲ್ಲ ವಿವಿಧ ಅತ್ಯುತ್ತಮ ವೇದಿಕೆ ಮತ್ತು ತಜ್ಞರ ಮೂಲಕ ತಮ್ಮದಾಗಿಸಿಕೊಳ್ಳುತ್ತಿವೆ.

ಹೀಗಾಗಿ, ತೆರಿಗೆ ದರ ಇಳಿಕೆಯಾಗಿರುವುದರಿಂದ ಅತಿಸಣ್ಣ ಮತ್ತು ಸಣ್ಣ ಉದ್ದಿಮೆಗಳ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ, ಕಡಿಮೆ ವೆಚ್ಚದಲ್ಲಿ ಪೈಪೋಟಿ ನಡೆಸಲಿದೆ ಮತ್ತು ವ್ಯವಹಾರದ ಪ್ರಗತಿಗೆ ಉತ್ತೇಜನ ನೀಡಲಿದೆ.

ಸಂಭಾವ್ಯ ಯೋಜನೆಗಳಿಂದ ಡಿಜಿಟಲ್ ವಹಿವಾಟು

ಎಂಎಸ್ಎಂಇಗಳಿಗೆ ಡಿಜಿಟಲ್ ವಿಧಾನದಲ್ಲಿ ಪಾವತಿ ಪಡೆಯುವಂತೆ ಪ್ರೋತ್ಸಾಹ ನೀಡುವ ಸಲುವಾಗಿ ಸಂಭಾವ್ಯ ಯೋಜನೆಗಳು ಸೇರಿದಂತೆ ಡಿಜಿಟಲ್ ವಹಿವಾಟು ಪರಿಕಲ್ಪನೆ ಮಾಡಲಾಗಿದೆ. ಇದು 2 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ಇಲ್ಲದ ವ್ಯವಹಾರಗಳಿಗೆ ಅನ್ವಯವಾಗುತ್ತದೆ. ಈ ಯೋಜನೆಯಡಿ ಡಿಜಿಟಲ್ ವಿಧಾನದಿಂದ ಒಟ್ಟು ವ್ಯವಹಾರ ಅಥವಾ ನಿವ್ವಳ ಸ್ವೀಕೃತಿಯನ್ನು ಪಡೆದರೆ ಪರಿಗಣಿತ ಆದಾಯವನ್ನುಶೇಕಡ 8ರಿಂದ ಶೇಕಡ 6ಕ್ಕೆ ಇಳಿಕೆ ಮಾಡಲಾಗಿದೆ. ಆದರೆ, ವ್ಯವಹಾರಗಳನ್ನು ನಗದು ರೂಪದಲ್ಲಿಯೇ ಮಾಡುವವರಿಗೆ ಈ ಹಿಂದಿನ ಶೇಕಡ 8 ಡಿಮ್ಡ್ ಪ್ರಾಪಿಟ್ ನೀತಿಯೇ ಅನ್ವಯವಾಗಲಿದೆ.

ಈ 3 ವಿಭಿನ್ನ ಸನ್ನಿವೇಶಗಳಲ್ಲಿ ವ್ಯವಹಾರ ಪ್ರಯೋಜನಗಳನ್ನು ವಿಶ್ಲೇಷಣೆ ಮಾಡೋಣ.

ಸನ್ನಿವೇಶಗಳುಶೇಕಡ 100ರಷ್ಟು ನಗದು ರೂಪದಲ್ಲಿ ವ್ಯವಹಾರ ನಡೆಸುವಿಕೆಶೇಕಡ 50ರಷ್ಟು ವ್ಯವಹಾರವನ್ನು ಡಿಜಿಟಲ್ ರೂಪದಲ್ಲಿ ಮಾಡುವಿಕೆಶೇಕಡ 100ರಷ್ಟು ಡಿಜಿಟಲ್ ರೂಪದಲ್ಲಿ ವ್ಯವಹಾರ ನಡೆಸುವಿಕೆ
ವಹಿವಾಟು2 ಕೋಟಿ2 ಕೋಟಿ2 ಕೋಟಿ
ನಗದು ವಹಿವಾಟು2 ಕೋಟಿ1 ಕೋಟಿಏನಿಲ್ಲ
ಡಿಜಿಟಲ್ ವಹಿವಾಟುಏನಿಲ್ಲ1 ಕೋಟಿ2 ಕೋಟಿ
ಹಣದ ವಹಿವಾಟಿನಲ್ಲಿ ಶೇಕಡ 8 ಡಿಮ್ಡ್ ಪ್ರಾಫಿಟ್16 ಲಕ್ಷ8 ಲಕ್ಷಏನಿಲ್ಲ
ಡಿಜಿಟಲ್ ವಹಿವಾಟಿನಲ್ಲಿ ಶೇಕಡ 6 ಡೀಮ್ಡ್ ಪ್ರಾಫಿಟ್ಏನಿಲ್ಲ6 ಲಕ್ಷ12 ಲಕ್ಷ
ಒಟ್ಟು ಆದಾಯ (ನಗದು+ಡಿಜಿಟಲ್)16 ಲಕ್ಷ14 ಲಕ್ಷ12 ಲಕ್ಷ
ತೆರಿಗೆ*
ಪಾವತಿಸಬೇಕಾಗಿರುವುದು
ಕಂಪನಿಗಳು (@ 25 ಶೇಕಡ)4 ಲಕ್ಷ3.5 ಲಕ್ಷ3 ಲಕ್ಷ
ಒಡೆತನವನ್ನು ಪರಿಗಣಿಸಿದಾಗ
(ಆದಾಯ ತೆರಿಗೆಯಂತೆ)
2,54,9251,93,1251,31,325
ತೆರಿಗೆ ಉಳಿತಾಯಕಂಪನಿಗಳುಇಲ್ಲ50,0001,00,000
ಒಡೆತನದ ಪರಿಗಣನೆಇಲ್ಲ61,8001,23,600

*2017-18ರ ಆಧಾರದಲ್ಲಿ ತೆರಿಗೆ ಲೆಕ್ಕಹಾಕಲಾಗಿದೆ.

ಇದನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳೋಣ.

ಉದ್ಯಮಿಯು ತನ್ನ ಒಟ್ಟಾರೆ ವಹಿವಾಟನ್ನು ನಗದು ರೂಪದಲ್ಲಿ ಮಾಡಿದಾಗ 2 ಕೋಟಿಯಲ್ಲಿ ಶೇಕಡ 8ರ ಪ್ರಕಾರ 16 ಲಕ್ಷ ಆತನ ಆದಾಯವಾಗುತ್ತದೆ. ಆದರೆ, ಆತ ತನ್ನ ಒಟ್ಟಾರೆ ವಹಿವಾಟನ್ನು ಡಿಜಿಟಲ್ ರೂಪದಲ್ಲಿ ಮಾಡಿದಾಗ (ಚೆಕ್ ಅಥವಾ ಇತರೆ ಯಾವುದಾದರೂ ಡಿಜಿಟಲ್ ಪಾವತಿ ವಿಧಾನ) ಆತನ ಆದಾಯವು 2 ಕೋಟಿಯಲ್ಲಿ ಶೇಕಡ 6ನ್ನು ಪರಿಗಣಿಸಿ 12 ಲಕ್ಷವೆಂದು ಭಾವಿಸಲಾಗುತ್ತದೆ. ಇದರ ಫಲಿತಾಂಶವಾಗಿ ಫರ್ಮ್ ಅಥವಾ ಕಂಪನಿಗೆ 1 ಲಕ್ಷ ರೂ. ಮತ್ತು ಪ್ರೊಪ್ರಿಯೆಟರಿ ಕನ್ಸರ್ನ್ ಗೆ 1,23,600 ರೂ. ತೆರಿಗೆ ಉಳಿತಾಯವಾಗುತ್ತದೆ.

ಎಲ್ಲಾದರೂ ವ್ಯವಹಾರದ ವಹಿವಾಟು ಅಥವಾ ಸ್ವೀಕೃತಿಯನ್ನು ಶೇಕಡ 50ರಷ್ಟು ಡಿಜಿಟಲ್ ಮೋಡ್ ಅಥವಾ ಬ್ಯಾಂಕ್ ಮೂಲಕ ನಡೆಸಿದರೆ ಆತನ ಉಳಿತಾಯ ಕಂಪನಿಯಾದರೆ 50,000 ರೂ. (14 ಲಕ್ಷದ ಶೇಕಡ 25ರಷ್ಟು) ಮತ್ತು ಪ್ರೊಪ್ರಿಯೆಟರಿಯಾದರೆ 61,800 ರೂ. ಆಗುತ್ತದೆ. ಇದು ಅತೀಸಣ್ಣ, ಸಣ್ಣ ಮತ್ತು ಮಧ್ಯಮ ವರ್ಗದ ಎಂಎಸ್ಎಂಇ ವಲಯಕ್ಕೆ ದೊರಕಿರುವ ಪ್ರಯೋಜನವಾಗಿದೆ. ಈ ಪ್ರಯೋಜನಗಳನ್ನು ಪಡೆಯುವ ಸಲುವಾಗಿ ಎಂಎಸ್ಎಂಇಗಳು ಹೆಚ್ಚಿನ ಸಂಖ್ಯೆಯಲ್ಲಿ ಡಿಜಿಟಲ್ ವೇದಿಕೆಗೆ ಪ್ರವೇಶಿಸಬೇಕಿದೆ.

ವ್ಯವಹಾರದ ಡಿಜಿಟಲೀಕರಣ ಸೌಲಭ್ಯಕ್ಕೆ ಕಾರ್ಯತಂತ್ರಗಳು

ಡಿಜಿಗವರ್ನ್ ಕಾರ್ಯತಂತ್ರವು 1,50,000ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿಗೆ ಅತ್ಯಧಿಕ ವೇಗದ ಬ್ರಾಡ್ ಬಾಂಡ್ ಇಂಟರ್ನೆಟ್ ಸಂಪರ್ಕ ಒದಗಿಸುವ ಗುರಿ ಹೊಂದಿದೆ ಮತ್ತು ಡಿಜಿಟಲ್ ತಂತ್ರಜ್ಞಾನದ ಕೌಶಲ ನೀಡುವ, ಶಿಕ್ಷಣವನ್ನು 2017-18ರ ಅಂತ್ಯಕ್ಕೆ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ಸವಾಲುಗಳನ್ನು ಪೂರ್ಣಗೊಳಿಸಲು ಸಾಕಷ್ಟು ಕಾಲಾವಕಾಶ ಬೇಕಾಗಬಹುದು, ಮೂಲಸೌಕರ್ಯ ಮತ್ತು ಕೌಶಲಗಳ ಲಭ್ಯತೆಯನ್ನು ಪೂರೈಸಲು ಹೆಚ್ಚು ಸಮಯ ಬೇಕಾಗಬಹುದು, ಗ್ರಾಮೀಣ ಪ್ರದೇಶದಲ್ಲಿರುವ ಎಂಎಸ್ಎಂಇಗಳಿಗೆ ಇವು ದೊರಕಲು ಸಾಕಷ್ಟು ಸಮಯ ಹಿಡಿಯಬಹುದು. ವ್ಯಾಪಾರಿಗಳಿಗೆ ಕ್ಯಾಶ್ ಬ್ಯಾಕ್ ಸೌಲಭ್ಯ ಒದಗಿಸಲು ಭೀಮ್ ಆ್ಯಪ್ ಅನ್ನು ಪರಿಚಯಿಸಿದೆ ಮತ್ತು ಆಧಾರ್ ಸಂಪರ್ಕಿಸಿದ ಪಾವತಿ ವ್ಯವಸ್ಥೆಯಾದ ಆಧಾರ್ ಪೇಯ ಮರ್ಚೆಂಟ್ ಆವೃತ್ತಿಯನ್ನು ಪರಿಚಯಿಸಿ ಉತ್ತೇಜಿಸುವ ಯೋಜನೆಯನ್ನು ಸರಕಾರ ಹಾಕಿಕೊಂಡಿದೆ.

ಡಿಜಿಟಲ್ ಮೂಲಸೌಕರ್ಯ ಒದಗಿಸಲು ಬಜೆಟಿನಲ್ಲಿ ನೀಡಿರುವ ಮೊತ್ತವನ್ನು ಹೆಚ್ಚಿಸಿರುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಡಿಜಿಟಲ್ ಮೂಲಸೌಕರ್ಯ ಒದಗಿಸಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಡಿಜಿಟಲೀಕರಣ ಮಾಡಲು, ಎಂಎಸ್ಎಂಇಗಳು ನಗದು ರಹಿತ ವ್ಯವಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸಲು ಪ್ರೋತ್ಸಾಹಿಸುವ ಸಲುವಾಗಿ ಹಲವು ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ.

ನವೋದ್ಯಮಗಳಿಗೆ ಸಿಹಿಯಾದ ತೆರಿಗೆ ರಜೆ

ಸ್ಟಾರ್ಟಪ್ ಉದ್ದಿಮೆಗಳಿಗೆ ವಿನಾಯಿತಿ ಕೇಳಲು ತೆರಿಗೆ ರಜೆ ಸೌಲಭ್ಯ ನೀಡಲಾಗಿದ್ದು, ವ್ಯವಹಾರದಲ್ಲಿ ಆದಾಯ ಮತ್ತು ಲಾಭ ಪಡೆಯುವ ಸಲುವಾಗಿ ಈ ಹಿಂದಿನ 5 ವರ್ಷದ ಮಿತಿಗೆ ಬದಲಾಗಿ 7 ವರ್ಷದಲ್ಲಿ 3 ಸತತ ವರ್ಷಗಳು ಸೇರಿದಂತೆ ತೆರಿಗೆ ರಜೆ ನೀಡಲಾಗಿದೆ. ಇದು ಹೂಡಿಕೆಗೆ ಉತ್ತೇಜನ ನೀಡಲಿದೆ ಮತ್ತು ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.

ನಗದು ಪಾವತಿಗೆ ಕಡಿಮೆ ಮಿತಿ

ದಿನವೊಂದರಲ್ಲಿ ವ್ಯಕ್ತಿಯೊಬ್ಬರಿಗೆ ನಗದು ರೂಪದಲ್ಲಿ ಹಣವನ್ನು ಒಂದು ದಿನದಲ್ಲಿ ಪಾವತಿಸುವ ಮಿತಿಯನ್ನು 20 ಸಾವಿರ ರೂ.ನಿಂದ 10 ಸಾವಿರ ರೂ.ಗೆ ಇಳಿಕೆ ಮಾಡಲಾಗಿದೆ. ಇದರಿಂದಾಗಿ ವ್ಯಕ್ತಿಯೊಬ್ಬರಿಗೆ ನಗದು ರೂಪದಲ್ಲಿ ದಿನವೊಂದಕ್ಕೆ 10 ಸಾವಿರ ರೂ. ನೀಡಲು ಅವಕಾಶವಿಲ್ಲ. ಇದರಿಂದ ವ್ಯವಹಾರ ಅಥವಾ ವೃತ್ತಿಯಿಂದ ಲಾಭ ಅಥವಾ ಆದಾಯದ ಅನುಭೋಗವನ್ನು ತಗ್ಗಿಸಿದೆ. ಇದು ಎಂಎಸ್ಎಂಇಗಳ ಮೇಲೆ ಭಾರಿ ಪರಿಣಾಮ ಬೀರಲಿದೆ ಮತ್ತು ಅಸಂಘಟಿತ ಮತ್ತು ಸಾಂಪ್ರದಾಯಿಕ ಕೆಲಸದ ರೀತಿಯನ್ನು ತಪ್ಪಿಸಲಿದೆ, ಯಾಕೆಂದರೆ ಹೆಚ್ಚಿನ ಜನರು ಪ್ರತಿದಿನದ ವೇತನವನ್ನು ಅವಲಂಬಿಸಿದ್ದಾರೆ.
ಎರಡನೆಯದಾಗಿ 8,000 ರೂ.ನಿಂದ 15,000 ರೂ.ವರೆಗಿನ ಸಂಬಳ ಮತ್ತು ವೇತನಗಳನ್ನು ಎಂಎಸ್ಎಂಇಗಳು ನೀಡುತ್ತವೆ. 2017ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಈ ಪಾವತಿಯನ್ನು ಬ್ಯಾಂಕ್ ಮೂಲಕ ಅಥವಾ ಡಿಜಿಟಲ್ ಪಾವತಿ ವಿಧಾನದ ಮೂಲಕವೇ ಪಾವತಿಸಬೇಕಿದೆ.

ಎಂಎಸ್ಎಂಇಗಳಲ್ಲಿ ನಗದು ವಹಿವಾಟು ತಗ್ಗಿಸಲು ಮತ್ತು ಡಿಜಿಟಲೀಕರಣ ನೀಡಲು ಇದು ನೆರವಾಗುತ್ತದೆ.

ಫಂಡ್ ಪಡೆಯುವ ಸೌಲಭ್ಯದ ಬಲವರ್ಧನೆ

ಎಂಎಸ್ಎಂಇಗಳಿಗೆ ಪಾವತಿ ಖಾತ್ರಿ ಯೋಜನೆಯ ಮೂಲಕ ಸಾಲ ಪಡೆಯುವ ಸೌಲಭ್ಯವನ್ನು ಈ ಹಿಂದಿನ 1 ಕೋಟಿ ರೂ.ನಿಂದ 2 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ಪ್ರಧಾನ ಮಂತ್ರಿಯವರು ಡಿಸೆಂಬರ್ 31, 2016ರಂದು ಘೋಷಿಸಿದ್ದಾರೆ. ಈ ಸೌಲಭ್ಯದಿಂದಾಗಿ ತಮ್ಮ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಹೆಚ್ಚು ಹಣಕಾಸು ಸೌಲಭ್ಯವು ಎಂಎಸ್ಎಂಇಗಳಿಗೆ ದೊರಕುವಂತಾಗಿದೆ.

ಹಣದ ಅಪನಗದೀಕರಣದಿಂದ ಪರಿಣಾಮಕ್ಕೆ ಒಳಗಾದ ಎಂಎಸ್ಎಂಇಗಳಿಗೆ ಈ ಬಜೆಟ್ ಉತ್ತೇಜನಗಳು ವರದಾನವಾಗಿದೆಯೆಂದು ಹೇಳಬಹುದು ಮತ್ತು ಡಿಜಿಟಲೀಕರಣದ ವಿವಿಧ ಉತ್ತೇಜನಗಳಿಂದ ಎಂಎಸ್ಎಂಇಗಳು ಉತ್ತಮವಾಗಿ ಕಾರ್ಯನಿರ್ವಹಿಸಬುದಾಗಿದೆ ಹಾಗೂ ಇದರಿಂದ ಎಂಎಸ್ಎಂಇಗಳಿಗೆ ಪರಿಣಾಮಕಾರಿ ಮತ್ತು ಉಜ್ವಲಮಾನ್ಯ ಪ್ರಗತಿಯು ಸಾಧ್ಯವಾಗಲಿದೆ.

ಡಿಜಿಟಲ್ ರೂಪದಲ್ಲಿ ವ್ಯವಹಾರ ನಡೆಸಿ, ಬಜೆಟಿನಲ್ಲಿ ಕೊಡುಗೆಯಾಗಿ ನೀಡಿದ ಪ್ರಯೋಜನಗಳು ಮತ್ತು ಅವಕಾಶಗಳ ಲಾಭವನ್ನು ಪಡೆಯಿರಿ.

Are you GST ready yet?

Get ready for GST with Tally.ERP 9 Release 6

80,205 total views, 36 views today

Yarab A

Author: Yarab A

Yarab is associated with Tally since 2012. In his 7+ years of experience, he has built his expertise in the field of Accounting, Inventory, Compliance and software product for the diverse industry segment. Being a member of ‘Centre of Excellence’ team, he has conducted several knowledge sharing sessions on GST and has written 200+ blogs and articles on GST, UAE VAT, Saudi VAT, Bahrain VAT, iTax in Kenya and Business efficiency.