ಸಣ್ಣ ಮತ್ತು ಮಧ್ಯಮ ವ್ಯವಹಾರ ಕ್ಷೇತ್ರವು ಭಾರತದ ಅರ್ಥವ್ಯವಸ್ಥೆಯ ಹೃದಯವಾಗಿದೆ. ಇಲ್ಲಿಯವರೆಗೆ ಲೆಕ್ಕಹಾಕಿದರೆ, ಭಾರತದಲ್ಲಿ 50 ದಶಲಕ್ಷ ಎಸ್ಎಂಇಗಳು ಇವೆ- ಇವು ಭಾರತದ ಕೈಗಾರಿಕಾ ಉತ್ಪಾದನೆಗೆ ಸುಮಾರು ಶೇಕಡ 37ರಷ್ಟು ಮತ್ತು ಭಾರತದ ಒಟ್ಟು ರಪ್ತಿನಲ್ಲಿ ಶೇಕಡ 46ರಷ್ಟು ಕೊಡುಗೆ ನೀಡುತ್ತಿವೆ. ಶೇಕಡ 10ರಷ್ಟು ಸ್ಥಿರ ಪ್ರಗತಿ ದರದ ಜೊತೆಗೆ ಎಸ್ಎಂಇ ಭಾರತವು ಅಗಾಧವಾದ 120 ದಶಲಕ್ಷ ಜನರಿಗೆ ಉದ್ಯೋಗಾವಕಾಶ ನೀಡುತ್ತಿದ್ದು, ಹಲವು ವರ್ಷಗಳಿಂದ ಉದ್ಯೋಗಸೃಷ್ಟಿಯಲ್ಲಿ ಪ್ರಮುಖ ವಲಯವಾಗಿ ಪರಿಣಮಿಸಿದೆ. ಇದರ ಕುರಿತು ಹೇಳುವುದಾದರೆ ರಾಷ್ಟ್ರವು ಬೃಹತ್ ತೆರಿಗೆ ಆಡಳಿತ ಬದಲಾವಣೆಯಾದ ಜಿಎಸ್ಟಿಗೆ ಸಿದ್ಧವಾಗಿದೆ- ಇದರ ಎಸ್ಎಂಇಗಳ ಮೇಲಿನ ಪರಿಣಾಮವು ದೇಶಕ್ಕೆ ಒಟ್ಟಾರೆಯಾಗಿ ಪ್ರಮುಖ ಪರಿಣಾಮ ಬೀರಲಿದೆ.
.

ಜೂನ್ 11, 2017ರಂದು ನಡೆದ 16ನೇ ಜಿಎಸ್ಟಿ ಪರಿಷತ್ನ ಸಭೆಯಲ್ಲಿ- ಸಂಯೋಜಿತ ಯೋಜನೆಯಲ್ಲಿ ಈಗಿನ ವಹಿವಾಟು ಮಿತಿಯನ್ನು 50 ಲಕ್ಷ ರೂಪಾಯಿಯಿಂದ 75 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಇತ್ತೀಚಿನ ಈ ಪ್ರಗತಿಯ ಬೆಳಕಿನಲ್ಲಿ, ಪ್ರಸ್ತುತ ಆಡಳಿತದ ಸಂಯೋಜನೆ ಯೋಜನೆಯು ಎಸ್ಎಂಇಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳುವುದು ಅವಶ್ಯವಾಗಿದೆ ಮತ್ತು ಈಗ ನೋಂದಾಯಿಸಿಕೊಳ್ಳಲು ನಿರ್ಧರಿಸಿದ ವ್ಯಕ್ತಿಗಳು ತಕ್ಷಣ ಸಂಯೋಜಿತ ಯೋಜನೆಯನ್ನು ತೆಗೆದುಕೊಳ್ಳುವ ಅವಕಾಶಪಡೆದುಕೊಂಡಿದ್ದಾರೆ- 25 ಲಕ್ಷ ರೂ. ಮಿತಿ ಹೆಚ್ಚಳ ಮಾಡಿರುವುದಕ್ಕೆ ಧನ್ಯವಾದ ಸಮರ್ಪಿಸಲೇಬೇಕು.

ಒಳಿತುಗಳು

ವಹಿವಾಟು ಮಿತಿ ಹೆಚ್ಚಳ

ಈಗಿನ ತೆರಿಗೆ ಪದ್ಧತಿಯಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲಿಯೂ ಸಂಯೋಜಿತ ಯೋಜನೆಗೆ ಮಿತಿಯು 50 ಲಕ್ಷ ರೂಪಾಯಿ ಆಗಿತ್ತು. ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಈ ಮಿತಿಯು ಆರಂಭದಲ್ಲಿ 50 ಲಕ್ಷ ರೂ. ಆಗಿತ್ತು. ಆದರೆ ಇದನ್ನು ಈಗ 75 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ (ವಿಶೇಷ ವಿಭಾಗದ ರಾಜ್ಯಗಳಾದ- ಉತ್ತರಾಖಂಡ, ಹಿಮಾಚಲ ಪ್ರದೇಶ ಸಿಕ್ಕಿಮ್ ಮತ್ತು ಉಳಿದ 7 ಎನ್ಇ ರಾಜ್ಯಗಳಿಗೆ- ವಹಿವಾಟು ಮಿತಿ 50 ಲಕ್ಷ ರೂ. ಇದೆ). ಇದರಿಂದ ಖಂಡಿತವಾಗಿಯೂ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಸಂಯೋಜಿತ ಯೋಜನೆಯ ಪ್ರಯೋಜನ ದೊರಕುತ್ತದೆ. ಜಿಎಸ್ಟಿ ಪರಿಷತ್ನ ಶಿಫಾರಸ್ಸಿನ ಪ್ರಕಾರ ಈ ಮಿತಿಯನ್ನು 1 ಕೋಟಿ ರೂ.ಗೆ ಹೆಚ್ಚಿಸಬಹುದು, ಹೀಗಾಗಿ ಈ ಶುಭಸುದ್ದಿಗೆ ಕಾಯಬಹುದು.

ತೆರಿಗೆ ದರ ಕಡಿಮೆ

ನೋಂದಾಯಿಸುವ ಬಾಧ್ಯತೆ ಹೊಂದಿರುವ ವಿತರಕರಿಗೆ ಹೋಲಿಸಿದರೆ ಸಂಯೋಜಿತ ವಿತರಕರು ಕಡಿಮೆ ದರದ ತೆರಿಗೆ ಪಾವತಿಸುವ ಪ್ರಯೋಜನವನ್ನು ಆನಂದಿಸಬಹುದು. ಈ ತೆರಿಗೆ ದರವನ್ನು ತಯಾರಕರಿಗೆ ಶೇಕಡ 2, ವ್ಯಾಪಾರಿಗಳಿಗೆ ಶೇಕಡ 1 ಮತ್ತು ಸಣ್ಣ ರೆಸ್ಟೂರೆಂಟ್ಗಳಿಗೆ- ಮಾನವ ಅನುಭೋಗಕ್ಕೆ ಆಹಾರ ಮತ್ತು ಪಾನೀಯ ಸರಬರಾಜು ಮಾಡುವವರಿಗೆ- ಶೇಕಡ 5 ಎಂದು ಸ್ಥಿರಗೊಳಿಸಲಾಗಿದೆ.

ಕಡಿಮೆ ಅನುಸರಣೆ ಚಟುವಟಿಕೆ

ನೋಂದಾಯಿಸಿದ ವಿತರಕರಿಗೆ ಹೋಲಿಸಿದರೆ, ಸಂಯೋಜಿತ ವಿತರಕರು ತಿಂಗಳಿಗೆ 3 ಆದಾಯ ಸಲ್ಲಿಕಗೆ ಬದಲಾಗಿ ತ್ರೈಮಾಸಿಕಕ್ಕೆ 1ರಂತೆ, ಮೂರು ತಿಂಗಳಿಗೊಮ್ಮೆ ಮತ್ತು ವರ್ಷಕ್ಕೆ 1 ಆದಾಯ ಸಲ್ಲಿಕೆ ಮಾಡಿದರೆ ಸಾಕು. ಇದರಿಂದ ಸಂಯೋಜಿತ ವಿತರಕರಿಗೆ ಸಾಕಷ್ಟು ಸಮಯದ ಉಳಿತಾಯವಾಗಲಿದೆ, ಇದರಿಂದ ಇವರು ವ್ಯವಹಾರದ ಚಟುವಟಿಕೆಗಳಲ್ಲಿ ಹೆಚ್ಚು ಗಮನ ನೀಡಬಹುದು.

ಕೆಡುಕುಗಳು

ಸರಕು ಮತ್ತು ಸೇವೆಯ ಲಕ್ಷಣಗಳಿಗೆ ಅನುಗುಣವಾಗಿ ನಿರ್ಬಂಧಗಳು

ಸರಕಾರ ಮತ್ತು ಜಿಎಸ್ಟಿ ಪರಿಷತ್ ನಿರ್ದಿಷ್ಟಪಡಿಸಿದ ಕೆಲವೊಂದು ಸೂಚಿತ ಸರಕುಗಳ ತಯಾರಕರ ಜೊತೆ ಸಂಯೋಜಿತ ವಿತರಕರು ತೊಡಗಿಸಿಕೊಳ್ಳುವಂತೆ ಇಲ್ಲ. ಈ ಕುರಿತು ಇನ್ನಷ್ಟು ಸ್ಪಷ್ಟತೆಯು ಬರಬೇಕಿದೆ, ಆದರೆ, ಮಾನವರು ಸೇವಿಸುವ ಆಹಾರ ಮತ್ತು ಪಾನೀಯ ಹೊರತುಪಡಿಸಿದ ಇತರೆ ಸೇವೆಗಳಿಗೆ ಈ ನಿರ್ಬಂಧಗಳು ಸ್ಪಷ್ಟವಾಗಿದೆ. ಸಂಯೋಜಿತ ವಿತರಕರು ಸಣ್ಣ ಹೋಟೇಲ್ ಒಂದನ್ನು ಸಿದ್ಧಪಡಿಸಬಹುದು. ಜಿಎಸ್ಟಿ ನಿರ್ದಿಷ್ಟಪಡಿಸಿದ್ದನ್ನು ಹೊರತುಪಡಿಸಿದ ಸರಕುಗಳ ಪೂರೈಕೆಗಳನ್ನೂ ಸಂಯೋಜಿತ ತೆರಿಗೆ ಪಾವತಿದಾರರು ಮಾಡಬಾರದು.

ವ್ಯಾಪಾರದ ವಿಧಾನದ ಮೇಲೆ ನಿರ್ಬಂಧಗಳು

ಜಿಎಸ್ಟಿ ಕಾನೂನಿನ ಅನ್ವಯ ಸಂಯೋಜಿತ ವಿತರಕರು, ಇ-ವಾಣಿಜ್ಯ ವೇದಿಕೆಯಲ್ಲಿ ವ್ಯವಹಾರ ನಡೆಸುವಂತೆ ಇಲ್ಲ ಮತ್ತು ಸರಕು ಅಥವಾ ಸೇವೆಯನ್ನು ಹೊರರಾಜ್ಯಗಳಿಗೆ ಪೂರೈಕೆ ಮಾಡುವುದರಲ್ಲಿಯೂ ತೊಡಗಿಸಿಕೊಳ್ಳಬಾರದು, ಆನ್ಲೈನ್ ಮೂಲಕ ವ್ಯವಹಾರ ನಡೆಸುವ, ಹೊರರಾಜ್ಯಗಳಿಗೆ ವಸ್ತುಗಳನ್ನು ಪೂರೈಕೆ ಮಾಡುವ ಎಸ್ಎಂಇಗಳ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರುತ್ತದೆ, ಇದರಿಂದ ಇವರು ವಹಿವಾಟನ್ನು ಲೆಕ್ಕಿಸದ ಸಂಯೋಜಿತ ಯೋಜನೆಯನ್ನು ಆನಂದಿಸಲು ಸಾಧ್ಯವಾಗುವುದಿಲ್ಲ.

ಆಯ್ದ ಸಂಯೋಜನೆ ಯೋಜನೆ ಇಲ್ಲದೆ ಇರುವುದು

ಈಗಿನ ನೋಂದಣಿ ವ್ಯವಸ್ಥೆಯಲ್ಲಿ, ಅನೇಕ ವ್ಯವಹಾರದ ಲಂಬಸಾಲುಗಳಿಗೆ ಮತ್ತು ಬಹುದಾಖಲಾತಿಗಳೊಂದಿಗಿನ ಸ್ಥಾಪನೆಯ ಪ್ರಮಾಣಿತ ಅಭ್ಯಾಸ ಇರುತ್ತದೆ- ಇದರಿಂದ ಆಯ್ಕೆ ಮಾಡಿರುವ ವ್ಯವಹಾರಗಳಿಗೆ ಸಂಯೋಜನೆಯ ಸಾಧ್ಯತೆಗಳ ಅವಕಾಶವನ್ನು ಒದಗಿಸಿಕೊಡುತ್ತದೆ. ಆದರೆ, ಜಿಎಸ್ಟಿ ಆಧರಿತ ನೋಂದಣಿಯು ಪಾನ್ ಆಧರಿತವಾಗಿದೆ. ಹೆಚ್ಚು ಮುಖ್ಯವಾಗಿ, ಒಂದೇ ಪಾನ್ನಡಿ ನೋಂದಾಯಿಸಿರುವ ಎಲ್ಲಾ ವ್ಯವಹಾರ ಲಂಬಸಾಲುಗಳಿಗೆ-ರಾಜ್ಯದೊಳಗೆ ಅಥವಾ ಹೊರರಾಜ್ಯದ ಜೊತೆಗೆ- ಸಂಯೋಜಿತ ಯೋಜನೆಯು ಅನ್ವಯವಾಗುತ್ತದೆ. ಇದರಿಂದ ಹಲವು ರಾಜ್ಯಗಳಲ್ಲಿ ಹಂಚಿಕೊಂಡಿರುವ ವಿವಿಧ ವ್ಯವಹಾರ ಲಂಬಸಾಲುಗಳನ್ನು ಹೊಂದಿರುವ ಎಸ್ಎಂಇ ಒಂದಕ್ಕೆ ಸಂಯೋಜಿತ ಯೋಜನೆಯಡಿ ನಿರ್ದಿಷ್ಟ ಲಂಬಸಾಲುಗಳನ್ನು ಮತ್ತು/ಅಥವಾ ಶಾಖೆಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರ ಅರ್ಥವೇನೆಂದರೆ, ನೋಂದಾಯಿತ ವ್ಯಕ್ತಿಯೊಬ್ಬ ಒಂದೇ ಪಾನ್ ಮೂಲಕ ಹಲವು ರಾಜ್ಯಗಳಲ್ಲಿ ವ್ಯವಹಾರ ನಡೆಸಬೇಕಾದರೆ ದೇಶಾದ್ಯಂತದ ವ್ಯವಹಾರಗಳಿಗೆ `ಸಂಯೋಜಿತ ಯೋಜನೆ’ ಮಾಡಕೊಳ್ಳಬೇಕು ಅಥವಾ ನಿಯಮಿತ ವಿತರಕರಾಗಿ ಬದಲಾಗಬೇಕು.

ತೆರಿಗೆ ಸಂಗ್ರಹವಿಲ್ಲ ಐಟಿಸಿ ಇಲ್ಲ

ಸರಕು ಅಥವಾ ಸೇವೆಯ ಬಾಹ್ಯಾ ಪೂರೈಕೆಗೆ ಸಂಯೋಜಿತ ವಿತರಕರು ಯಾವುದೇ ತೆರಿಗೆಯನ್ನು ಸಂಗ್ರಹಿಸುವಂತೆ ಇಲ್ಲ. ಆದರೆ, ಹೆಚ್ಚು ಪ್ರಮುಖವಾಗಿ, ಆತನ ಒಳಗಿನ ಸರಕು ಮತ್ತು/ಅಥವಾ ಸೇವೆಯ ಪೂರೈಕೆಗೆ, ಆತ ನಿಯಮಿತ ತೆರಿಗೆದಾರ ವಿತರಕರಿಂದ ತೆರಿಗೆ ವಿಧಿಸಿರುವುದನ್ನು ಖರೀದಿ ಮಾಡಿದ್ದರೂ ಆದಾನ ತೆರಿಗೆ ಪಾವತಿ ಕೇಳಲು ಅವಕಾಶ ನೀಡಲಾಗಿಲ್ಲ. ಇದರ ಫಲಿತಾಂಶವಾಗಿ, ತೆರಿಗೆ ಪಾವತಿಸಿ ಖರೀದಿಸಿದ ವೆಚ್ಚವು ಸಂಯೋಜಿತ ವಿತರಕರಿಗೆ ವೆಚ್ಚವಾಗಿ ಪರಿಣಮಿಸಲಿದೆ, ಇದರಿಂದ ಅವರ ಗ್ರಾಹಕರಿಗೆ ಹೆಚ್ಚಿನ ವೆಚ್ಚದ ವರ್ಗಾವಣೆಯಾಗಲಿದೆ. ನಿಯಮಿತ ವಿತರಕರಿಗೆ ಹೋಲಿಸಿದರೆ, ಇವರ ಸ್ಪರ್ಧಾತ್ಮಕತೆಯು ತಗ್ಗಲಿದೆ.

ಅನುಸರಣೆಯಲ್ಲಿ ಹೆಚ್ಚು ಆಳ

ಈಗಿನ ಸಂಯೋಜಿತ ಯೋಜನೆಯಲ್ಲಿ, ಸಂಯೋಜಿತ ವಿತರಕರೊಬ್ಬರು ಒಟ್ಟು ಮಾರಾಟದ ವಹಿವಾಟನ್ನು ಮಾತ್ರ ಘೋಷಿಸಿದರೆ ಸಾಕು; ಅವರು ಸರಕುಪಟ್ಟಿ ಆಧರಿತ ಮಾಹಿತಿಯನ್ನು ಘೋಷಿಸಬೇಕೆಂದಿಲ್ಲ. ಆದರೆ, ಈಗಿನ ಜಿಎಸ್ಟಿಯಲ್ಲಿ ಸಂಯೋಜಿತ ತೆರಿಗೆ ಪಾವತಿದಾರರು ಸರಕುಪಟ್ಟಿ ಆಧರಿತ ಆಂತರಿಕ ಪೂರೈಕೆಯ ಕುರಿತು(ಇದು ಪೂರೈಕೆದಾರರು ಸಲ್ಲಿಸಿದ ನಮೂನೆ ಜಿಎಸ್ಟಿಆರ್-1ರ ಮೂಲಕ ಸ್ವಯಂ ಸೃಷ್ಟಿಯಾಗುತ್ತದೆ) ಜಿಎಸ್ಟಿ ಆದಾಯ ಸಲ್ಲಿಕೆ ಮಾಡಬೇಕಿದೆ. ಇದರಿಂದಾಗಿ ಸಂಯೋಜಿತ ಯೋಜನೆಯಡಿ ಎಸ್ಎಂಇಯು ಲೆಕ್ಕಪತ್ರ ಮತ್ತು ವಹಿವಾಟು ದಾಖಲೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕಾದ ಅಗತ್ಯವಿರುತ್ತದೆ.

ಉಪಸಂಹಾರ

ಇದನ್ನೆಲ್ಲ ಎದುರಿಸಬೇಕಿರುವುದರಿಂದ, ಹೆಚ್ಚು ಅನುಸರಣೆ ಇದ್ದರೂ ಸಂಯೋಜಿತ ಆಯ್ಕೆಗೆ ಎಸ್ಎಂಇ ತೆರೆದುಕೊಳ್ಳುವುದು ಅತ್ಯುತ್ತಮವಾಗದೆ ಇರಬಹುದು, ಯಾಕೆಂದರೆ, ದೀರ್ಘಕಾಲದಲ್ಲಿ ನಿಮಗೆ ಇದು ಹೆಚ್ಚು ವ್ಯವಹಾರ ಪ್ರಯೋಜನಗಳನ್ನು ನೀಡುವುದಿಲ್ಲ. ಆದರೂ, ಬಿ2ಸಿ ವ್ಯವಹಾರದಲ್ಲಿ ತೊಡಗಿರುವ ಸಂಯೋಜಿತ ದರ ಕಡಿಮೆ ಇರುವ ಮತ್ತು ನಿವ್ವಳ ಲಾಭ ಹೆಚ್ಚಿರುವ ಎಸ್ಎಂಇಗಳಿಗೆ ಇದು ಹೆಚ್ಚು ಉತ್ತಮವಾಗಿ ಕಾಣುವ ಆಯ್ಕೆಯಾಗಬಹುದು.

Are you GST ready yet?

Get ready for GST with Tally.ERP 9 Release 6

36,800 total views, 26 views today