ಪ್ರಸಕ್ತ ಪರೋಕ್ಷ ತೆರಿಗೆ ವಿಧಾನದಿಂದ ಎಲ್ಲಾ ನೋಂದಾಯಿತ ತೆರಿಗೆ ಪಾವತಿಸುವ ವ್ಯವಹಾರಗಳು ಸ್ವಯಂಚಾಲಿತವಾಗಿ ಜಿಎಸ್ಟಿಗೆ ವರ್ಗಾವಣೆಗೊಳ್ಳುತ್ತಾರೆ ಮತ್ತು ಅವರಿಗೆ ತಾತ್ಕಾಲಿಕ ನೋಂದಣಿ ಐಡಿ ನೀಡಲಾಗುತ್ತದೆ. ನೋಂದಣಿ ಪ್ರಕ್ರಿಯೆಗೆ ಸಲ್ಲಿಸಿದ ಮಾಹಿತಿಯ ಪರಿಶೀಲನೆಯ ಬಳಿಕ ಅಂತಿಮ ನೋಂದಣಿ ಐಡಿ ನೀಡಲಾಗುತ್ತದೆ. ಇದೇ ರೀತಿ, ಈ ವ್ಯಾಪಾರಿಗಳು, ಸಂಯೋಜಿತ ಚಂದಾ ತೆರಿಗೆಗೆ ಅರ್ಹರಾಗಿರುವವರು, ಸ್ವಯಂಚಾಲಿತವಾಗಿ ಜಿಎಸ್ಟಿಗೆ ವರ್ಗಾವಣೆಗೊಳ್ಳುತ್ತಾರೆ.
ಜಿಎಸ್ಟಿ ಅನ್ವಯ, ಹಣಕಾಸು ವರ್ಷವೊಂದರಲ್ಲಿ ತೆರಿಗೆ ಪಾವತಿದಾರ ವ್ಯಕ್ತಿಯೊಬ್ಬರ ಒಟ್ಟಾರೆ ವ್ಯವಹಾರವು 50 ಲಕ್ಷಕ್ಕಿಂತ ಹೆಚ್ಚು ಇರದೆ ಇದ್ದಲ್ಲಿ ಅವರು for ಸಂಯೋಜಿತ ಚಂದಾ ತೆರಿಗೆ ಪಡೆಯಲು ಅರ್ಹರಾಗಿರುತ್ತಾರೆ. ಇದಕ್ಕೂ ಮತ್ತೆ ಹಲವು ನಿಬಂಧನೆಗಳಿವೆ. ಇದರ ಪ್ರಕಾರ ಜಿಎಸ್ಟಿಗೆ ವರ್ಗಾವಣೆಗೊಳ್ಳುವಾಗ ಸಂಯೋಜಿತ ವಿತರಕರೊಬ್ಬರು ನಿಯಮಿತ ವಿತರಕರಾಗಿ ಬದಲಾವಣೆಗೊಳ್ಳಬಹುದು.
ಜಿಎಸ್ಟಿಯಡಿಯಲ್ಲಿ ಸಂಯೋಜಿತ ವಿತರಕರು ನಿಯಮಿತ ವಿತರಕರಾಗಿ ಬದಲಾವಣೆಗೊಳ್ಳಲು ನೀವು ನಿಯಮಿತ ವಿತರಕರು ಪೂರೈಸಬೇಕಾದ ನಿಬಂಧನೆಗಳನ್ನು ಪೂರೈಸಬೇಕಾಗುತ್ತದೆ. ಒಳಗಿನ ಪೂರೈಕೆಗೆ ನೀವು ಇನ್ಪುಟ್ ತೆರಿಗೆ ಸೌಲಭ್ಯ ಪಡೆಯಬಹುದು ಮತ್ತು ಔಟ್ವಾರ್ಡ್ ಅಥವಾ ಹೊರಗಿನ ಪೂರೈಕೆಗೆ ಜಿಎಸ್ಟಿ ವಿಧಿಸಲಾಗುತ್ತದೆ.

ಇವೆಲ್ಲವೂ ಕೇಳಲು ಉತ್ತಮವೆನಿಸುತ್ತದೆ, “ಎಲ್ಲಾದರೂ ಸಂಯೋಜಿತ ವಿತರಕರು ಜಿಎಸ್ಟಿಯಡಿ ನಿಯಮಿತ ವಿತರಕರಾಗಿ ಬದಲಾದರೆ ಮುಕ್ತಾಯದ ದಾಸ್ತಾನಿಗೆ ಏನಾಗುತ್ತದೆ?’ ಎನ್ನುವುದುನ್ನು ನೀವು ತಿಳಿಯಲು ಬಯಸುತ್ತಿರಬಹುದು.

ಇದನ್ನು ವಿವರವಾಗಿ ಅರ್ಥಮಾಡಿಕೊಳ್ಳೋಣ.

ಒಬ್ಬ ಸಂಯೋಜಿತ ವಿತರಕರು ನಿಯಮಿತ ವಿತರಕರಾಗಿ ಬದಲಾವಣೆಗೊಳ್ಳಲು ಈ ಮುಂದಿನವುಗಳಲ್ಲಿ ಯಾವುದಾದರೂ ಕಾರಣ ಇರಬಹುದು:
• ನಿಯಮಿತ ವಿತರಕರಾಗುವ ಸ್ವಯಂ ಆಯ್ಕೆ
• ಕಾನೂನಿನ ನಿಯಮಗಳಿಗಾಗಿ: ಒಟ್ಟಾರೆ ವ್ಯವಹಾರವು 50 ಲಕ್ಷಕ್ಕಿಂತ ಹೆಚ್ಚಾಗಿರುವುದು ಅಥವಾ ಆತನಿಗೆ ಜಿಎಸ್ಟಿಯಡಿ ಸಂಯೋಜಿತ ಚಂದಾ ತೆರಿಗೆ ಪಡೆಯಲು ಅರ್ಹತೆ ಇರದೆ ಇರುವುದು.
ನೀವು ನಿಯಮಿತ ವಿತರಕರಾದರೆ, ನಿಮಗೆ ಇನ್ಪುಟ್(ಕಚ್ಚಾ-ಸಾಮಾಗ್ರಿಗಳು), ಅರೆ-ಪೂರ್ಣಗೊಂಡ ಸರಕುಗಳು ಮತ್ತು ಪೂರ್ಣಗೊಂಡ ಸರಕುಗಳ ಮುಕ್ತಾಯದ ದಾಸ್ತಾನಿಗೆ ಇನ್ಪುಟ್ ತೆರಿಗೆ ಪಾವತಿ ಪಡೆಯಲು ಅರ್ಹತೆ ಪಡೆಯುವಿರಿ. ನಿಮ್ಮ ಮುಕ್ತಾಯದ ದಾಸ್ತಾನಿಗೆ ಇನ್ಪುಟ್ ತೆರಿಗೆ ಪಾವತಿ ಪಡೆಯಬೇಕಾದರೆ ನೀವು ಈ ಮುಂದಿನ ನಿಬಂಧನೆಗಳನ್ನು ಪೂರೈಸಬೇಕಾಗುತ್ತದೆ.

ಮುಕ್ತಾಯದ ದಾಸ್ತಾನಿಗೆ ಇನ್ಪುಟ್ ತೆರಿಗೆ ಪಾವತಿ ಪಡೆಯಲು ಅರ್ಹತೆ ಪಡೆಯಲು ನಿಯಮಗಳು

ಮುಕ್ತಾಯದ ದಾಸ್ತಾನಿಗೆ ಇನ್ಪುಟ್ ತೆರಿಗೆ ಪಾವತಿ ಪಡೆಯಲು ಈ ಮುಂದಿನ ನಿಬಂಧನೆಗಳನ್ನು ನೀವು ಪಾಲಿಸಬೇಕಾಗುತ್ತದೆ:

• ಕಚ್ಚಾ ವಸ್ತುಗಳು, ಅರೆ ಪೂರ್ಣಗೊಂಡ ಸರಕುಗಳು ಅಥವಾ ಪೂರ್ಣಗೊಂಡ ಸರಕುಗಳಿಗೆ ಮುಕ್ತಾಯದ ದಾಸ್ತಾನು ಮಾಡಬೇಕೆಂದರೆ ಅವು ತೆರಿಗೆ ವಿಧಿಸಬಲ್ಲ ಪೂರೈಕೆಯಾಗಿರಬೇಕು.
Conditions for availing GST ITC on closing stock
• ಮುಕ್ತಾಯದ ದಾಸ್ತಾನಿನ ಇನ್ಪುಟ್ ಮೇಲೆ ವ್ಯಾಟ್ ಪಾವತಿಸಿರುವುದನ್ನು ಕ್ರೆಡಿಟ್ ಆಗಿ ಪಡೆಯಲು ಈ ಹಿಂದಿನ ಕಾನೂನಿನಲ್ಲಿ ಅವಕಾಶವಿತ್ತು. ಇದು ವ್ಯಾಟ್ ನ ಕ್ರೆಡಿಟ್ ಕೇಳಲು ಮಾತ್ರ ಅನ್ವಯವಾಗುತ್ತದೆ.
• ಮುಕ್ತಾಯದ ದಾಸ್ತಾನಿನ ಇನ್ಪುಟ್ ಕುರಿತಾಗಿ( ಅರೆ ಪೂರ್ಣಗೊಂಡ ಸರಕು ಮತ್ತು ಪೂರ್ಣಗೊಂಡ ಸರಕುಗಳು ಸೇರಿದಂತೆ) ನೀವು ಸರಕುಪಟ್ಟಿ ಅಥವಾ ತೆರಿಗೆ/ಸುಂಕ ಪಾವತಿಸಿರುವುದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಹೊಂದಿರಬೇಕು.
Tax documents needed for claiming GST Input tax credit

• ಸರಕುಪಟ್ಟಿಯ ದಿನಾಂಕ ಅಥವಾ ಇತರೆ ಯಾವುದೇ ನಿಗದಿತ ಸುಂಕ/ತೆರಿಗೆ ಪಾವತಿಸದ ದಾಖಲೆಗಳು ಜಿಎಸ್ಟಿಗೆ ವರ್ಗಾವಣೆಗೊಂಡ ಸಮಯಕ್ಕಿಂತ 12 ತಿಂಗಳೊಳಗಿನವು ಆಗಿರಬೇಕು.

Carry forward Input tax credit to GST
ಒಮ್ಮೆ ನೀವು ಈ ಮೇಲಿನ ನಿಬಂಧನೆಗಳನ್ನು ಪೂರೈಸಿದರೆ, ಇನ್ನೂ ನಿಗದಿಪಡಿಸದೆ ಇರುವ ವಿಧಾನದ ಮೂಲಕ ಮೊತ್ತವನ್ನು ಲೆಕ್ಕ ಹಾಕಲು ಅನುಮತಿ ನೀಡಲಾಗುತ್ತದೆ.

Are you GST ready yet?

Get ready for GST with Tally.ERP 9 Release 6

82,885 total views, 32 views today