ರಾಜ್ಯದ ಎಲ್ಲೆಡೆ ಗ್ರಾಹಕರನ್ನು ಹೊಂದಿದ್ದೀರಾ? ಹಾಗಿದ್ದರೆ, ಜಿಎಸ್ಟಿ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಬಹುದು?

ಪ್ರತಿಯೊಂದು ವ್ಯವಹಾರವೂ ಪ್ರಗತಿ ಮತ್ತು ವಿಸ್ತರಣೆಯ ಕನಸಿನಲ್ಲಿರುತ್ತದೆ. ಒಬ್ಬರು ವ್ಯವಹಾರ ಆರಂಭಿಸುತ್ತಾರೆ, ಲಾಭ ಗಳಿಸುತ್ತಾರೆ, ಮರು ಹೂಡಿಕೆ ಮಾಡುತ್ತಾರೆ, ಮತ್ತೆ ಹೆಚ್ಚು ಹೂಡಿಕೆ ಮಾಡುತ್ತಾರೆ ಮತ್ತು ಈ ಆವರ್ತನ ಮುಂದುವರೆಯುತ್ತದೆ. ನೀವು ಮೊದಲ ಗ್ರಾಹಕರನ್ನು ಪಡೆಯುವಿರಿ, ನಂತರ 10, ನಂತರ 100 ಗ್ರಾಹಕರನ್ನು ಪಡೆಯುವಿರಿ. ನೀವು ನಿಮ್ಮ ತಕ್ಷಣದ ಸ್ಥಳದಿಂದ, ವ್ಯವಹಾರ ಪ್ರಗತಿ ಹೆಚ್ಚಾದಂತೆ, ನಿಮ್ಮ ವ್ಯವಹಾರವನ್ನು ನಗರದಲ್ಲಿ ವಿಸ್ತರಿಸುವಿರಿ, ನಂತರ ರಾಜ್ಯಾದ್ಯಾಂತ ವಿಸ್ತರಿಸುವಿರಿ, ನಂತರ ಪಕ್ಕದ ರಾಜ್ಯಗಳಿಗೂ ವಹಿವಾಟು ವಿಸ್ತರಿಸುವಿರಿ, ನಂತರ ಇಡೀ ದೇಶವೇ ನಿಮ್ಮ ಮೈದಾನವಾಗುತ್ತದೆ.

ಆದರೂ, ಈಗಿನ ತೆರಿಗೆ ಪದ್ಧತಿಯಲ್ಲಿ ಇದು ಅತ್ಯಂತ ಸುಲಭವಾದ ಸಂಗತಿಯಾಗಿದೆ. ಹಣಕಾಸು ಮತ್ತು ಪ್ರಯತ್ನದ ಫಲವಾಗಿ ವ್ಯವಹಾರಗಳು ಹಲವು ರಾಜ್ಯಗಳಿಂದ ಗ್ರಾಹಕರನ್ನು ಪಡೆಯುತ್ತವೆ, ಇದೇ ಸಮಯದಲ್ಲಿ ಗ್ರಾಹಕರು ಮತ್ತು ಮಾರಾಟಗಾರರು ಒಂದಿಷ್ಟು ಅನುಸರಣೆ ಮೊತ್ತವನ್ನು ಪಾವತಿಸುತ್ತಾರೆ.

ಇತರ ರಾಜ್ಯಗಳಲ್ಲಿರುವ ಗ್ರಾಹಕರಿಗೆ ಸರಕು ಮಾರಾಟ

ಈಗಿನ ತೆರಿಗೆ ಪದ್ಧತಿ ಜಿಎಸ್ಟಿ ತೆರಿಗೆ ಪದ್ಧತಿ
ಅಂತರ್ ರಾಜ್ಯದೊಳಗಿನ ಮಾರಾಟದಲ್ಲಿ ಕೇಂದ್ರವು ಕೇಂದ್ರ ಮಾರಾಟ ತೆರಿಗೆ(ಸಿಎಸ್ಟಿ) ವಿಧಿಸಿದರೂ ಅದನ್ನು ರಾಜ್ಯ ಸಂಗ್ರಹಿಸುತ್ತದೆ ಮತ್ತು ಎಲ್ಲಿ ಮಾರಾಟ ನಡೆಯಲಾಗುತ್ತದೆಯೋ ಆ ರಾಜ್ಯವು ಸಂಗ್ರಹಿಸುತ್ತದೆ. ಅಂತರ್ ರಾಜ್ಯ ಮಾರಾಟದಲ್ಲಿ ಐಜಿಎಸ್ಟಿ ತೆರಿಗೆ ವಿಧಿಸಲಾಗುತ್ತದೆ. ಇಲ್ಲಿ ತೆರಿಗೆಯು “ಮಾರಾಟ’’ ವು “ಪೂರೈಕೆ’’ಗೆ ಶಿಫ್ಟ್ ಆಗುತ್ತದೆ.
ಒಮ್ಮೆ ಸರಕು ರಾಜ್ಯದ ಗಡಿ ದಾಟಿದರೆ, ಅದನ್ನು ಗಡಿ ಚೆಕ್ ಪೋಸ್ಟ್ ಮೂಲಕ ಪರಿಶೀಲನೆ ಮತ್ತು ದೃಢೀಕರಣ ಮಾಡಲಾಗುತ್ತದೆ. ಮತ್ತೆ, ಪ್ರವೇಶ ತೆರಿಗೆ ವಿಧಿಸಲಾಗುತ್ತದೆ, ಇದನ್ನು ಖರೀದಿದಾರರಿಗೆ, ಅಂದರೆ, ನಿಮ್ಮ ಗ್ರಾಹಕರಿಗೆ ನೀಡಲಾಗುತ್ತದೆ. ಒಮ್ಮೆ ಸರಕು ತಲುಪಿ ಮತ್ತು ರಾಜ್ಯದ ಗಡಿ ದಾಟಿದರೆ-ಇದರಲ್ಲಿ ಪರಿಶೀಲನೆ ಮತ್ತು ದೃಢೀಕರಣ ಕಡಿಮೆ ಇರುತ್ತದೆ, ಮತ್ತು ಯಾವುದೇ ಪ್ರವೇಶ ತೆರಿಗೆ ವಿಧಿಸಲಾಗುವುದಿಲ್ಲ. ಇದು ನಿಮ್ಮ ಖರೀದಿದಾರರಿಗೆ, ಅಂದರೆ, ನಿಮ್ಮ ಗ್ರಾಹಕರಿಗೆ ದರ ಕಡಿಮೆಯಾಗುತ್ತದೆ.
ನೀವು ಅಂತರ್-ರಾಜ್ಯದೊಳಗೆ ನಿಮ್ಮ ಬಿ2ಬಿ ಗ್ರಾಹಕರಿಗೆ ಮಾರಾಟ ಮಾಡಿದಾಗ, ಸಿಎಸ್ಟಿ ವಿಧಿಸಲಾಗುತ್ತದೆ. ಇದು ಯಾಕೆಂದರೆ- ಎಲ್ಲಾದರೂ ಆತ ವಾಪಸ್ ನೀಡಿದಾಗ, ಸ್ಥಳೀಯವಾಗಿ ಮಾರಾಟ ಮಾಡಿದಾಗ ಆತ ಪಾವತಿಸಿರುವ ಸಿಎಸ್ಟಿಗೆ ಟ್ಯಾಕ್ಸ್ ಕ್ರೆಡಿಟ್ ಕೇಳುವಂತೆ ಇಲ್ಲ. ಇದೇ ರೀತಿ, ಆತನು ಪಾವತಿಸಿರುವ ಸಿಎಸ್ಟಿಯ ಮೌಲ್ಯವನ್ನು ಗ್ರಾಹಕರಿಗೆ ವರ್ಗಾಯಿಸುತ್ತಾನೆ. ಇದರಿಂದ ಸರಕಿನ ವೆಚ್ಚ ಹೆಚ್ಚಾಗುತ್ತದೆ. ಇದರಿಂದ ಸ್ಥಳೀಯವಾಗಿ ಇರುವ ವಿತರಕರಿಗೆ ಹೋಲಿಸಿದರೆ ಮತ್ತು ಅವರು ಕಡಿಮೆ ದರಕ್ಕೆ ಸರಕು ನೀಡಿದಾಗ ನೀವು ಮತ್ತು ನಿಮ್ಮ ಗ್ರಾಹಕರು ಒಂದೇ ರೀತಿಯ ಅವಗುಣವನ್ನು ಪಡೆಯುವಿರಿ. ಅಂತರ್ ರಾಜ್ಯದೊಳಗಿನ ಮಾರಾಟದಲ್ಲಿ ನಿಮ್ಮ ಬಿ2ಬಿ ಗ್ರಾಹಕರಿಗೆ ವಿಧಿಸಿರುವ ಐಜಿಎಸ್ಟಿಯ ಕ್ರೆಡಿಟ್ ಅನ್ನು ಕೇಳಲು ಅವಕಾಶವಿರುತ್ತದೆ ಮತ್ತು ಕಾನೂನಿನಲ್ಲಿ ಅವಕಾಶ ನೀಡಿದಂತೆ ಜಿಎಸ್ಟಿ ಬಾಧ್ಯತೆಗೆ ಸೆಟ್-ಆಫ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಹೀಗಾಗಿ ಆತನಿಗೆ ಯಾವುದೇ ಹೆಚ್ಚುವರಿ ವೆಚ್ಚವಾಗುವುದಿಲ್ಲ, ಮತ್ತು ಇದು ಆತನ ಮತ್ತು ಆತನ ಗ್ರಾಹಕರ ವೆಚ್ಚವನ್ನು ತಗ್ಗಿಸುತ್ತದೆ. ಸ್ಥಳೀಯ ವಿತರಕರಿಂದ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ ಮತ್ತು ಅವರೊಂದಿಗೆ ಸುಲಭವಾಗಿ ಸ್ಪರ್ಧಿಸಬಹುದಾಗಿದೆ.
ತಮ್ಮ ಸ್ಪರ್ಧಾತ್ಮಕ ದರವನ್ನು ನಿರ್ವಹಿಸುವ ಸಲುವಾಗಿ, ಬಹುತೇಕ ಅಂತರ್-ರಾಜ್ಯ ಮಾರಾಟಗಾರರು ರಾಜ್ಯದೊಳಗೆ ತಮ್ಮ ವೇರ್ ಹೌಸ್/ಶಾಖೆಗಳನ್ನು ಹೊಂದಿರುತ್ತವೆ-ಇದರಿಂದ ಖರೀದಿದಾರರಿಗೆ ಸಿಎಸ್ಟಿಯ ಹೊರೆ ಇರುವುದಿಲ್ಲ. ಆದರೂ, ಮಾರಾಟಗಾರರಿಗೆ ಇದರಿಂದ ಹೆಚ್ಚುವರಿ ಮೂಲಸೌಕರ್ಯ ವೆಚ್ಚ ಉಂಟಾಗುತ್ತದೆ ಮತ್ತು ಇದರಿಂದ ಅನುಸರಣೆಗಿಂತ ಹೆಚ್ಚಾಗಿ ವ್ಯವಹಾರದ ದಕ್ಷತೆಯಾಗುತ್ತದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಮಾರಾಟ ಮಾಡಿದರೆ ಮತ್ತು ರಾಜ್ಯದೊಳಗೆ ಮಾರಾಟ ಮಾಡಿದರೆ, ಇನ್ಪುಟ್ ಕ್ರೆಡಿಟ್ ಒಂದೇ ರೀತಿ ಲಭ್ಯವಿರುವುದರಿಂದ ಖರೀದಿದಾರರಿಗೆ ಎರಡೂ ಒಂದೇ ರೀತಿ ಇರುತ್ತದೆ. ಹೀಗಾಗಿ, ಮಾರಾಟದಾರರು ಮೂಲಸೌಕರ್ಯಕ್ಕೆ ಹೆಚ್ಚುವರಿ ಹೂಡಿಕೆ ಮಾಡಬೇಕಿಲ್ಲ, ಕೇವಲ ಅನುಸರಣೆಗೆ ಮಾತ್ರ ಯೋಚಿಸಬಹುದು, ವ್ಯವಹಾರದ ದಕ್ಷತೆಗೆ ಶಾಖೆಗಳು/ವೇರ್ ಹೌಸ್ ನಿರ್ಮಿಸುವ ಬಗ್ಗೆ ಆತ ಮರು ಯೋಚನೆ ಮಾಡಬಹುದು.
ಇಲ್ಯುಸ್ಟ್ರೇಷನ್

ಉತ್ತರ ಪ್ರದೇಶದ ಶೂ ವಿತರಕರಾದ ರಾಮ್ ಎಂಟರ್ ಪ್ರೈಸಸ್, ಕರ್ನಾಟಕದ ವಿತರಕರಿಗೆ ಮಾರಾಟ ಮಾಡುತ್ತದೆ.

ಜಿಎಸ್ಟಿಗಿಂತ ಮೊದಲು
ರಾಮ್ ಎಂಟರ್ ಪ್ರೈಸಸ್ ಸರಕುಪಟ್ಟಿ ನೀಡುವಾಗ:

  • ಉತ್ಪನ್ನ ದರ = 5000 ರೂ.
  • ಸಿಎಸ್ಟಿ @ 2% = 100 ರೂ.
  • ಅಂತಿಮ ದರ = 5000 ರೂ. + 100 = 5100 ರೂ.

ಮಾತ್ರವಲ್ಲದೆ, ಕರ್ನಾಟಕದ ವಿತರಕರು ಪ್ರವೇಶ ತೆರಿಗೆ @ 2% (ಕರ್ನಾಟಕದ ಫೂಟ್ ವೇರ್ ಗಳ ಸರಾಸರಿ ದರಕ) = 102 ರೂ. ಪಾವತಿಸಬೇಕು.

ಕರ್ನಾಟಕದ ವಿತರಕರಿಗೆ ಒಟ್ಟು ವೆಚ್ಚ = 5100 ರೂ. + ರೂ. 102 = 5202 ರೂ.

ಕರ್ನಾಟಕದ ವಿತರಕರು ಅದನ್ನು ಕರ್ನಾಟಕದಲ್ಲಿಯೇ ಮಾರಾಟ ಮಾಡುವಾಗ, ಗ್ರಾಹಕರಿಗೆ 5202 ರೂ.ಗೆ + ಲಾಭ + ಅನ್ವವಾಗುವ ತೆರಿಗೆ ಸೇರಿಸಿ ಶೂ ಮಾರಾಟ ಮಾಡುತ್ತಾರೆ. (ಸಿಎಸ್ಟಿ ಮತ್ತು ಪ್ರವೇಶ ತೆರಿಗೆ ಅನುಮತಿ ಇಲ್ಲದೆ ಇರುವುದರಿಂದ ಮತ್ತು ಇದನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತದೆ)

ಜಿಎಸ್ಟಿ ತೆರಿಗೆ ಪದ್ಧತಿ ಅನ್ವಯ
ರಾಮ್ ಎಂಟರ್ ಪ್ರೈಸಸ್ ಸರಕುಪಟ್ಟಿ ಸಿದ್ಧಪರಿಸಿದಾಗ:

    • ಉತ್ಪನ್ನ ದರ= 5000 ರೂ.
    • ಐಜಿಎಸ್ಟಿ @ 18% = 900 ರೂ.
    • ಅಂತಿಮ ದರ = 5000 ರೂ. + 900 ರೂ = 5900 ರೂ.

ಕರ್ನಾಟಕದ ವಿತರಕರು ತನ್ನ ಗ್ರಾಹಕರಿಗೆ ಸ್ಥಳೀಯವಾಗಿ ಮಾರಾಟ ಮಾಡಿದಾಗ, ಅವರು ಶೂ ಅನ್ನು 5000 ರೂ. + ಲಾಭ+ ಅನ್ವಯವಾಗುವ ತೆರಿಗೆ ಸೇರಿಸಿ ಮಾರಾಟ ಮಾಡುತ್ತಾರೆ (ಐಜಿಎಸ್ಟಿ ಕ್ರೆಡಿಟ್ ಗೆ ಅನುಮತಿ ನೀಡುವುದರಿಂದ, ಮತ್ತು ಅದನ್ನು ತನ್ನ ಗ್ರಾಹಕರಿಗೆ ವರ್ಗಾಯಿಸುವುದಿಲ್ಲ)
ಹೀಗಾಗಿ, ಜಿಎಸ್ಟಿಯು ಖಂಡಿತವಾಗಿಯೂ ಅಂತರ್ ರಾಜ್ಯದೊಳಗಿನ ಸರಕುಗಳ ಮಾರಾಟ ಅನುಸರಣೆ ವಿಧಾನವನ್ನು ಸರಳಗೊಳಿಸುತ್ತದೆ ಮತ್ತು ಹೆಚ್ಚು
ಉತ್ತೇಜಿಸುತ್ತದೆ. ಹೀಗಾಗಿ, ಮೊದಲನೆಯದಾಗಿ ಅಂತರ್ ರಾಜ್ಯದೊಳಗಿನ ವಹಿವಾಟಿನಲ್ಲಿ ಇನ್ಪುಟ್ ತೆರಿಗೆ ಕ್ರೆಡಿಟ್ ಸರಣಿಗೆ ಏನೂ ಹಾನಿಯಾಗುವುದಿಲ್ಲ, ಇದರಿಂದ ಕ್ಯಾಸ್ಕೇಡಿಂಗ್ ಪರಿಣಾಮವನ್ನು ಹೋಗಲಾಡಿಸುತ್ತದೆ. ಇದರಿಂದ ಖರೀದಿದಾರರಿಗೂ, ಮಾರಾಟಗಾರರಿಗೂ ಪ್ರಯೋಜನವಾಗುತ್ತದೆ. ಆದರೂ, ಎಲ್ಲಾ ಸರಣಿಯು ಮೃದುವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು, ತೆರಿಗೆ ವಿಧಿಸಬಲ್ಲ ಸರಕುಗಳನ್ನು ಅಂತರ್ ರಾಜ್ಯದೊಳಗೆ ಪೂರೈಕೆ ಮಾಡುವಾಗ ವ್ಯವಹಾರದ ವಹಿವಾಟು ಮಿತಿಗೆ ಅನುಗುಣವಾಗಿ ಕಡ್ಡಾಯವಾಗಿ ಜಿಎಸ್ಟಿ ನೋಂದಣಿ ಮಾಡಬೇಕೆಂದು ತಿಳಿಸಿದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಸಂಯೋಜಿತ ಯೋಜನೆಯು ಅಂತರ್ ರಾಜ್ಯ ಮಾರಾಟಗಾರರಿಗೆ ಆಯ್ಕೆಯಾಗಿರುವುದಿಲ್ಲ.

ಇತರ ರಾಜ್ಯಗಳಲ್ಲಿರುವ ಗ್ರಾಹಕರಿಗೆ ಸೇವೆಗಳ ಪೂರೈಕೆ

ಈಗಿನ ತೆರಿಗೆ ಪದ್ಧತಿಯಲ್ಲಿ, ಅಂತರ್ ರಾಜ್ಯ ಸೇವೆಯ ಪೂರೈಕೆಗೆ ಸೇವಾ ತೆರಿಗೆ ವಿಧಿಸಲಾಗುತ್ತದೆ. ಕೇಂದ್ರವು ಸೇವಾ ತೆರಿಗೆ ವಿಧಿಸುತ್ತದೆ ಮತ್ತು ಸಂಗ್ರಹಿಸುತ್ತದೆ., ಮತ್ತು ನೋಂದಣಿಯು ಏಕೀಕೃತವಾಗಿದೆ ಮತ್ತು ಕೇಂದ್ರೀಕೃತವಾಗಿದೆ.

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿಯೂ, ಸರಕು ಮತ್ತು ಸೇವೆಗಳಿಗೆ ಒಂದೇ ಬಗೆಯ ಉಪಚಾರ ನೀಡಲಾಗುತ್ತದೆ, ಅಂತರ್ ರಾಜ್ಯದೊಳಗಿನ ಸೇವೆಯ ಪೂರೈಕೆಗೆ ಐಜಿಎಸ್ಟಿ ಅನ್ವಯವಾಗುತ್ತದೆ. ಆದರೂ, ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಸೇವೆಯ ಪೂರೈಕೆಯ ಸ್ಥಳಕ್ಕೆ ಅನುಗುಣವಾಗಿ ಕೆಲವೊಮ್ಮೆ ಸಂಕೀರ್ಣತೆ ಇರಬಹುದಾಗಿದೆ. ಹೀಗಾಗಿ, ನೀವು ಸೇವಾ ಪೂರೈಕೆದಾರರಾಗಿದ್ದರೆ, ನಿಮ್ಮ ರಾಜ್ಯದಿಂದ ಬೇರೆ ರಾಜ್ಯದಲ್ಲಿರುವ ಗ್ರಾಹಕರಿಗೆ ಸೇವೆಯನ್ನು ಪೂರೈಸಿದರೆ –ಐಜಿಎಸ್ಟಿ ತೆರಿಗೆಯು ಅನ್ವಯವಾಗುತ್ತದೆ. ಆದಗ್ಯೂ, ಸೇವೆಯ ವಿಧಕ್ಕೆ ಅನುಗುಣವಾಗಿ ಗ್ರಾಹಕರ ಸ್ಥಳದಲ್ಲಿ ನಿಮ್ಮ ಸಂಸ್ಥೆಯ ಶಾಖೆ ಇದ್ದರೆ, ಅಂದರೆ, ಗ್ರಾಹಕರ ರಾಜ್ಯದಲ್ಲಿ ನಿಮ್ಮ ಪ್ರಸೆನ್ಸ್ ಇದ್ದರೆ, ಇದನ್ನು ರಾಜ್ಯದೊಳಗಿನ ಪೂರೈಕೆ ಎಂದೇ ಪರಿಗಣಿಸಲಾಗುತ್ತದೆ; ಇದಕ್ಕೆ ಎಸ್ಜಿಎಸ್ಟಿ/ಯುಟಿಜಿಎಸ್ಟಿ ಮತ್ತು ಸಿಜಿಎಸ್ಟಿ ವಿಧಿಸಲಾಗುತ್ತದೆಯೇ ಹೊರತು, ಐಜಿಎಸ್ಟಿ ವಿಧಿಸಲಾಗುವುದಿಲ್ಲ. ಇದಕ್ಕಾಗಿ, ಇದು ಸಂಭವಿಸಬೇಕಾದರೆ, ನೀವು ನಿಮ್ಮ ಗ್ರಾಹಕರು ಇರುವ ರಾಜ್ಯಗಳಲ್ಲಿಯೂ ನೋಂದಾಯಿಸಿಕೊಳ್ಳಬೇಕಾಗುತ್ತದೆ.

I ಇಲ್ಯುಸ್ಟ್ರೇಷನ್

ನವದೆಹಲಿಯಲ್ಲಿ ನೋಂದಾಯಿಸಿರು ಸಿಎ ಆಗಿರುವ ಶ್ರೀಯುತ ಪ್ರಸಾದ್ ಅವರು, ಗುರುಗಾಂವ್(ಹರ್ಯಾಣ) ಮತ್ತು ನೋಯ್ಡಾ(ಉತ್ತರ ಪ್ರದೇಶ)ದಲ್ಲಿಯೂ ಗ್ರಾಹಕರನ್ನು ಹೊಂದಿದ್ದಾರೆ ಎಂದಿರಲಿ. ಈ ಮೂರು ರಾಜ್ಯಗಳು ರಾಷ್ಟ್ರೀಯ ರಾಜಧಾನಿಯ ಭಾಗವಾಗಿರುವುದರಿಂದ ಮತ್ತು ಒಂದೊಂದು ರಾಜ್ಯದ ನಗರಗಳಿಗೂ ಹತ್ತಿರದಲ್ಲಿರುತ್ತದೆ.
ತನ್ನ ಹರ್ಯಾಣದ ಗುರ್ ಗಾಂವ್ ನ ಒಬ್ಬರು ಗ್ರಾಹಕರಿಗೆ (ಕ್ಲಯೆಂಟ್-1) ಅವರು ಕನ್ಸಲ್ಟೆನ್ಸಿ ಸೇವೆಯನ್ನು ದೂರದಿಂದಲೇ ನೀಡುತ್ತಾರೆ.
ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಕ್ಲಯೆಂಟ್ 2ಗೆ ಅವರು ಆಂತರಿಕ ಲೆಕ್ಕಪರಿಶೋಧನೆ ಸೇವೆಯನ್ನು ನೀಡುತ್ತಾರೆ. ಇದಕ್ಕಾಗಿ ಗ್ರಾಹಕರು ಇರುವ ಸ್ಥಳಕ್ಕೆ ಹೋಗಿ ಸೇವೆ ಒದಗಿಸುತ್ತಾರೆ.

ಜಿಎಸ್ಟಿಗಿಂತ ಮೊದಲು
Selling goods to customers across states before GST

ಇಲ್ಲಿನ ಸನ್ನಿವೇಶದಲ್ಲಿ, ಇಲ್ಲಿ ಸೇವಾ ತೆರಿಗೆಗೆ ಕೇವಲ ಒಂದು ಏಕೀಕೃತ ಕೇಂದ್ರದ ನೋಂದಣಿ ಇದೆ, ಈತ 2 ಅಥವಾ 3 ರಾಜ್ಯಗಳಿಗೂ ಸೇವೆ ನೀಡುತ್ತಾನೆ. ಈಗಿನ ತೆರಿಗೆ ಪದ್ಧತಿಯಲ್ಲಿ ಶ್ರೀಯುತ ಪ್ರಸಾದ್ ಅವರು ವರ್ಷಕ್ಕೆ ಕೇವಲ 2 ಬಾರಿ ಸೇವಾ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ್ದರೆ ಸಾಕು.

ಜಿಎಸ್ಟಿ ಬಂದ ನಂತರ
Selling Goods to Customers in Other States_2
ಜಿಎಸ್ಟಿಯಡಿಯಲ್ಲಿ, ಶ್ರೀಯುತ ಪ್ರಸಾದ್ ಅವರು ತನ್ನ ನೊಂದಾಯಿತ ರಾಜ್ಯದ ವ್ಯವಹಾರಕ್ಕೆ ಅಂದರೆ ದೆಹಲಿಯಲ್ಲಿ ವರ್ಷಕ್ಕೆ 13 ರಿಟರ್ನ್ (ವಾರ್ಷಿಕ ರಿಟರ್ನ್ ಸೇರಿದಂತೆ) ಸಲ್ಲಿಸುವ ಬಾಧ್ಯತೆ ಹೊಂದಿದ್ದಾರೆ. ಆದರೆ, ಈಗ ಅವರು ಗುರ್ ಗಾಂವ್ ಮತ್ತು ನೋಯ್ಡಾದ ಗ್ರಾಹಕರಿಗೆ ತನ್ನ ದೈಹಿಕ ಉಪಸ್ಥಿತಿಯ ಮೂಲಕ ಸೇವೆ ಸಲ್ಲಿಸಬೇಕಾದರೆ, ಉತ್ತರ ಪ್ರದೇಶ ಮತ್ತು ಹರ್ಯಾಣದಲ್ಲಿ ನೋಂದಾಯಿಸುವುದು ಮಾತ್ರವಲ್ಲ, ವರ್ಷಕ್ಕೆ 39 ರಿಟರ್ನ್ಸ್ ಸಲ್ಲಿಸುವ ಅವಶ್ಯಕತೆಯಿದೆ! ಹೀಗಾಗಿ, ಎಲ್ಲಾ ಸೇವಾ ಪೂರೈಕೆದಾರರು ಬಹು ರಾಜ್ಯಗಳಲ್ಲಿ ಹೊಂದಿರುವ ಗ್ರಾಹಕರಿಂದ ಆದಾಯವನ್ನು ಕಳೆದುಕೊಳ್ಳಬೇಕು ಅಥವಾ ವಿವಿಧ ರಾಜ್ಯಗಳಲ್ಲಿ ನೋಂದಣಿ ಮಡಿಕೊಳ್ಳಬೇಕು ಮತ್ತು ಹಲವು ರಿಟರ್ನ್ ಸಲ್ಲಿಕೆ ಮಾಡಬೇಕು.

ಕೊನೆಯ ಮಾತು

ಅಂತಿಮವಾಗಿ, ಇತರೆ ರಾಜ್ಯಗಳ ಗ್ರಾಹಕರಿಗೆ ಸರಕುಗಳ ಮಾರಾಟ ಅಥವಾ ಸೇವೆಯನ್ನು ಪೂರೈಕೆ ಮಾಡುವುದು ಕಲಸುಮೇಲೋಗರದಂತೆ ಕಾಣಿಸುತ್ತದೆ. ಆದರೆ, ರಾಜ್ಯದೊಳಗಿನ ಮಾರಾಟದ ವಿಷಯದಲ್ಲಿ ಇದು ಖಂಡಿತವಾಗಿಯೂ ಉತ್ತಮವಾಗಲಿದೆ. ಇದರಿಂದ ಸರಕುಗಳ ಮಾರಾಟಕ್ಕೆ ರಾಜ್ಯಗಳ ಎಲ್ಲೆ ಸಂಭಾವ್ಯವಾಗಿ ಕಡಿಮೆಯಾಗಲಿದೆ ಮತ್ತು ವ್ಯವಹಾರಕ್ಕೆ ಸಾಕಷ್ಟು ಹಣ ದೊರಕಲಿದೆ. ಸೇವೆಯ ಪೂರೈಕೆಯ ವಿಷಯಕ್ಕೆ ಬಂದಾಗ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ಜಿಎಸ್ಟಿಯಡಿಯಲ್ಲಿ ತನ್ನ ಗ್ರಾಹಕರಿರುವ ಎಲ್ಲಾ ರಾಜ್ಯಗಳಿಗೂ ದೈಹಿಕ ಉಪಸ್ಥಿತಿಯ ಮೂಲಕ ಸೇವೆ ನೀಡಲು ಉದ್ದೇಶಿಸಿದರೆ ಎಲ್ಲಾ
ಸೇವಾದಾರರು ಕೇಂದ್ರೀಕೃತ ನೋಂದಣಿಯಿಂದ ರಾಜ್ಯಾವಾರು ನೋಂದಣಿಗೆ ಹೋಗುತ್ತಾರೆ. ಒಂದು ರಾಜ್ಯದ ಸಿಜಿಎಸ್ಟಿ+ಎಸ್ಜಿಎಸ್ಟಿ/ಯುಟಿಜಿಎಸ್ಟಿ ಕ್ರೆಡಿಟ್ ಅನ್ನು ಮತ್ತೊಂದು ರಾಜ್ಯದ ಸಿಜಿಎಸ್ಟಿ+ಎಸ್ಜಿಎಸ್ಟಿ/ಯುಟಿಜಿಎಸ್ಟಿ ಬಾಧ್ಯತೆಗೆ ಬಳಕೆ ಮಾಡಲು ಸಾಧ್ಯವಿರದೆ ಇರುವುದು ಇದರ ಇನ್ನೊಂದು ಸಂಭಾವ್ಯ ತಡೆಯಾಗಿದ್ದು, ಹಣದ ಹರಿವಿಗೆ ತೊಡಕಾಗಲಿದೆ..
ದೀರ್ಘಕಾಲದಲ್ಲಿ ಜಿಎಸ್ಟಿಯು ಖಂಡಿತವಾಗಿಯೂ ಹಲವು ಪ್ರಯೋಜನಗಳನ್ನು ನೀಡಲಿದೆ, ಆದರೆ, ಇದರಲ್ಲಿ ಅಷ್ಟೇ ಸವಾಲುಗಳು ಇರುವುದು ಸುಳ್ಳಲ್ಲ, ಇದನ್ನು ನಾವು ಎದುರಿಸಬೇಕು ಮತ್ತು ಅತ್ಯುತ್ತಮವಾಗಿ ಅರ್ಥಮಾಡಿಕೊಳ್ಳಬೇಕು.

Are you GST ready yet?

Get ready for GST with Tally.ERP 9 Release 6

91,387 total views, 110 views today

Pramit Pratim Ghosh

Author: Pramit Pratim Ghosh

Pramit, who has been with Tally since May 2012, is an integral part of the digital content team. As a member of Tally’s GST centre of excellence, he has written blogs on GST law, impact and opinions - for customer, tax practitioner and student audiences, as well as on generic themes such as - automation, accounting, inventory, business efficiency - for business owners.