ಜಿಎಸ್ಟಿ ಕಾಯಿದೆ ಪರಿಚಯಿಸಿರುವುದರಿಂದ ನಿಮ್ಮ ವ್ಯವಹಾರಕ್ಕೆ ಎಚ್ಎಸ್ಎನ್/ಎಸ್ಎಸಿ ಸಂಕೇತಗಳು ಮತ್ತು ತೆರಿಗೆ ದರಗಳು ಅಗತ್ಯವಿದ್ದು, ಇದನ್ನು ನೀವು ಜಿಎಸ್ಟಿ-ಸಿದ್ಧ ತಂತ್ರಾಂಶವಾಗಿರುವ ಟ್ಯಾಲಿ.ಇಆರ್ಪಿ 9 ರಿಲೀಸ್ 6 ಮೂಲಕ ಸುಲಭವಾಗಿ ಪಡೆಯಬಹುದಾಗಿದೆ. ಇದರಲ್ಲಿ ನೀವು ಜಿಎಸ್ಟಿ ದರವನ್ನು ಮತ್ತು ಎಚ್ಎಸ್ಎನ್/ಎಸ್ಎಸಿ ಸಂಕೇತಗಳನ್ನು ನಮ್ಯವಾಗಿ ಸಂರಚಿಸಬಹುದ್ದಾಗಿದೆ.

ಜಿಎಸ್ಟಿ ತೆರಿಗೆ ಪದ್ಧತಿ ಅನ್ವಯ, ನಿಮ್ಮ ವಾರ್ಷಿಕ ವಹಿವಾಟು ಮತ್ತು ವ್ಯವಹಾರದ ಬಗೆಗೆ ತಕ್ಕಂತೆ ನೀವು ಸರಕುಪಟ್ಟಿಯಲ್ಲಿ ಎಚ್ಎಸ್ಎನ್/ಎಸ್ಸಿಸಿ ಸಂಕೇತವನ್ನು ಈ ಕೆಳಗಿನ ಕೋಷ್ಟಕದಲ್ಲಿ ತೋರಿಸಿದಂತೆ ನಮೋದಿಸಬೇಕು:

ವ್ಯವಹಾರದ ಬಗೆ ಎಚ್ಎಸ್ಎನ್ ಸಂಕೇತದಲ್ಲಿ ಇರಬೇಕಾದ ಅಂಕಿಗಳು
1.5 ಕೋಟಿಗಿಂತ ಕಡಿಮೆ(ವರ್ಷಕ್ಕೆ) ಅಗತ್ಯವಿಲ್ಲ
1.5 ಕೋಟಿ ರೂ.ನಿಂದ 5 ಕೋಟಿ ರೂ.ವರೆಗೆ (ವರ್ಷಕ್ಕೆ) ಮೊದಲ 2 ಅಂಕಿಗಳು
5 ಕೋಟಿ ರೂ.ಗಿಂತ ಹೆಚ್ಚು (ವರ್ಷಕ್ಕೆ)ಮೊದಲ 4 ಅಂಕಿಗಳು
ಆಮದು-ರಫ್ತಿಗೆ 8 ಅಂಕಿಗಳು
ಸೇವೆಗೆ 5 ಅಂಕಿಗಳು

ಟ್ಯಾಲಿ.ಇಆರ್ಪಿ 9 ರಿಲೀಸ್ 6ನಲ್ಲಿ ಇವುಗಳನ್ನು ಹೇಗೆ ಸಂರಚನೆ ಮಾಡಬಹುದು ಎಂದು ಅರ್ಥಮಾಡಿಕೊಳ್ಳೋಣ.

  1. ಎಲ್ಲಾ ಸರಕುಗಳು ಮತ್ತು ಸೇವೆಗಳಿಗೆ ನೀವು ಒಂದೇ ರೀತಿಯ ಎಚ್ಎಸ್ಎನ್ ಅಥವಾ ಎಸ್ಎಸಿ ಮತ್ತು ತೆರಿಗೆ ದರವನ್ನು ಹೊಂದಿರುತ್ತೀರಿ, ನೀವು ಇದನ್ನು ಕಂಪನಿಯ ಹಂತದಲ್ಲಿ ಒಮ್ಮೆ ಸರಳವಾಗಿ ಸಿದ್ಧಪಡಿಸಿದರಾಯಿತು.
  2. ಕಂಪನಿಯು ನಿರ್ದಿಷ್ಟಪಡಿಸಿರುವುದಕ್ಕಿಂತ ನಿರ್ದಿಷ್ಟ ಗುಂಪಿನ ವಸ್ತುಗಳಿಗೆ ಭಿನ್ನ ದರಗಳನ್ನು ವಿಧಿಸಲಾಗುತ್ತದೆ, ಇದನ್ನು ನೀವು ದಾಸ್ತಾನು ಗುಂಪು ಹಂತದಲ್ಲಿ ಎಚ್ಎಸ್ಎನ್/ಎಸ್ಎಸಿ ಸಂರಚನೆಯಾಗಿಯೂ ಮಾಡಬಹುದು. ಗುಂಪು ಹಂತದಲ್ಲಿ ನಿರ್ದಿಷ್ಟಪಡಿಸಿದ ದರವು ಗುಂಪಿನಲ್ಲಿರುವ ಎಲ್ಲಾ ವಸ್ತುಗಳಿಗೂ ಅನ್ವಯವಾಗುತ್ತದೆ.
  3. ಎಲ್ಲಾದರೂ ದಾಸ್ತಾನು ಗುಂಪಿನಲ್ಲಿರುವ ಕೆಲವೇ ಕೆಲವು ವಸ್ತುಗಳಿಗೆ ಭಿನ್ನ ದರ ವಿಧಿಸಬೇಕಿದ್ದರೆ, ಈ ದಾಸ್ತಾನು ವಸ್ತುಗಳಿಗೆ ದಾಸ್ತಾನು ವಸ್ತು ಹಂತದಲ್ಲಿ ತೆರಿಗೆ ದರ ಮತ್ತು ಎಚ್ಎಸ್ಎನ್/ಎಚ್ಎಸಿಯನ್ನು ಸಿದ್ಧಗೊಳಿಸಿ. ದಾಸ್ತಾನು ಗುಂಪಿನಲ್ಲಿ ನಿರ್ದಿಷ್ಟಪಡಿಸಿದ ವಸ್ತುಗಳನ್ನು ಇದು ಅತಿಕ್ರಮಿಸುತ್ತದೆ.
  4. ವಿವಿಧ ಭಿನ್ನ ರೀತಿಯ ವ್ಯವಹಾರಗಳಿಗೆ ನೀವು ಒಂದೇ ಎಚ್ಎಸ್ಎನ್/ಎಸ್ಎಸಿ ಮತ್ತು ತೆರಿಗೆ ದರವನ್ನು ಅನ್ವಯ ಮಾಡಲು ನೀವು ಬಯಸಿದದರೆ ಮಾರಾಟಗಳು, ಖರೀದಿಗಳು, ವೆಚ್ಚಗಳು ಮತ್ತು ಆದಾಯ ಗುಂಪುಗಳ ಖಾತಾಪುಸ್ತಕ ಗುಂಪು ಹಂತದಲ್ಲಿ ನೀವು ಎಚ್ಎಸ್ಎನ್/ಎಸ್ಎಸಿ ಸೂಚಿಸಬಹುದಾಗಿದೆ
  5. ರಾಜ್ಯದೊಳಗೆ ಶಾಖೆಗಳಲ್ಲಿ ವಿನಾಯಿತಿ ಇರುವ ಸರಕುಗಳ ವರ್ಗಾವಣೆ ಸೇರಿದಂತೆ ಕೆಲವು ನಿರ್ದಿಷ್ಟಪಡಿಸಿದ ಸಂದರ್ಭಗಳಲ್ಲಿ ವಿನಾಯಿತಿಗೆ ತಕ್ಕಂತೆ ವ್ಯವಹಾರದಲ್ಲಿ ತೆರಿಗೆ ಅನ್ವಯಿಸುವುದನ್ನು ನೀವು ಬದಲಾಯಿಸಲು ಬಯಸಬಹುದು. ಇದನ್ನು ನೀವು ಲೆಕ್ಕ ಪುಸ್ತಕದ ಹಂತದಲ್ಲಿಯೇ ಈ ವಿವರಗಳನ್ನು ನೀವು ಸಂರಚನೆ ಮಾಡಬೇಕು ಅಥವಾ ಇಂತಹ ಬಗೆಯ ವ್ಯವಹಾರದಲ್ಲಿ ನೀವು ಪ್ರತ್ಯೇಕ ಮಾರಾಟ ಮಾಡಲು ಅಥವಾ ವಸ್ತುಗಳನ್ನು ಖರೀದಿ ಮಾಡಲು ಅಥವಾ ಸೇವೆ ನೀಡಲು ಬಯಸಿರಬಹುದು. ಇದಕ್ಕಾಗಿ ಇದೇ ವಸ್ತುಗಳ ಮತ್ತು ಲೆಕ್ಕಪುಸ್ತಕದ ಸೆಟ್ನಲ್ಲಿಯೇ ನೀವು ವ್ಯವಹಾರದ ಹಂತದಲ್ಲಿಯೇ ವ್ಯವಹಾರದ ಬಗೆಯನ್ನು ನೀವು ಮಾರ್ಪಾಡು ಮಾಡಬಹುದಾಗಿದೆ.


ಎಚ್ಎಸ್ಎನ್/ಎಸ್ಎಸಿ ಮತ್ತು ತೆರಿಗೆ ದರ ಮಾಹಿತಿಯನ್ನು ಒಂದೇ ಹಂತದಲ್ಲಿ ನಿರ್ದಿಷ್ಟಪಡಿಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ.

ಕೆಲವೊಮ್ಮೆ ನೀವು ನೀಡಿರುವ ಸೆಟ್ಟಿಂಗ್ಗಳಲ್ಲಿ ಅತಿಕ್ರಮಿಸಲು ಬಯಸಬಹುದು. ಟ್ಯಾಲಿ.ಇಆರ್ಪಿ 9 ರಿಲೀಸ್6.0.2 ಜಿಎಸ್ಟಿ ತಂತ್ರಾಂಶದಲ್ಲಿ ನೀವು ಇದನ್ನು ಅನುಕೂಲಕರಾಗಿ ಮಾಡಬಹುದಾಗಿದೆ.
ಈ ವಿಷಯದ ಕುರಿತು ಅರ್ಥಮಾಡಿಕೊಳ್ಳಲು, ಇದರ ಶಕ್ತಿಶಾಲಿ ನಮ್ಯತೆ ಅರ್ಥಮಾಡಿಕೊಳ್ಳಲು ಮತ್ತು ನಿಮ್ಮ ಅನನ್ಯ ವ್ಯವಹಾರ ಅಗತ್ಯಗಳಿಗೆ ಬಳಕೆ ಮಾಡಿಕೊಳ್ಳುವ ಸಲುವಾಗಿ ಸುಲಭವಾಗಿ ಅರ್ಥಮಾಡಿಕೊಳ್ಳಲು ಈ ಕೆಳಗೆ ನೀಡಿರುವ ವಿಡಿಯೋವನ್ನು ವೀಕ್ಷಿಸಿರಿ ಅಥವಾ ಈ ಸಹಾಯ ವಿಭಾಗಕ್ಕೆ ಭೇಟಿ ನೀಡಿ.


ನಿಮ್ಮ ಪ್ರತಿಕ್ರಿಯೆಗಳಿಗೆ ಯಾವಾಗಲೂ ಸ್ವಾಗತ, ದಯವಿಟ್ಟು ನಿಮ್ಮ ಯೋಚನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿರಿ.
ಟ್ಯಾಲಿಯ ಜಿಎಸ್ಟಿ ಸಿದ್ಧ ತಂತ್ರಾಂಶವನ್ನು ಖರೀದಿಸಲು ಅಥವಾ ಮೇಲ್ದರ್ಜೆಗೆ ಏರಿಸಿಕೊಳ್ಳಲು ಇಲ್ಲಿಗೆ ಭೇಟಿ ನೀಡಿ
.

Are you GST ready yet?

Get ready for GST with Tally.ERP 9 Release 6

249,025 total views, 4 views today

Avatar

Author: Shailesh Bhatt