ಈಗಿನ ತೆರಿಗೆ ಪದ್ಧತಿಯಲ್ಲಿ, ತೆರಿಗೆ ವಿಧಿಸಬಲ್ಲ ಸೇವೆಗಳು ಸೇವಾ ತೆರಿಗೆಯ ವಿಷಯಗಳಾಗಿವೆ. ಸೇವಾ ತೆರಿಗೆಯನ್ನು ಕೇಂದ್ರ ಸರಕಾರ ನಿರ್ಧರಿಸುತ್ತದೆ ಮತ್ತು ಅಂತರ್ ರಾಜ್ಯ ಅಥವಾ ರಾಜ್ಯದೊಳಗೆ ಸೇವೆ ನೀಡಲಾಗುತ್ತದೆಯೇ ಎನ್ನುವುದರ ಮೇಲೆ ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ.

ಆದರೂ, ಜಿಎಸ್ಟಿಯಡಿಯಲ್ಲಿ, ಸೇವೆಯ ಪೂರೈಕೆಯ ಸ್ಥಳವು ಯಾವ ಬಗೆಯ ತೆರಿಗೆಯನ್ನು ವಿಧಿಸಬೇಕೆನ್ನುವುದನ್ನು ನಿರ್ಧರಿಸುತ್ತದೆ. ಇದು ಜಿಎಸ್ಟಿಟಿಯ “ಗಮ್ಯ ಆಧರಿತ ಅನುಭೋಗ ತೆರಿಗೆ’ ಪರಿಕಲ್ಪನೆ ಆಧರಿತವಾಗಿದ್ದು, ಪೂರೈಕೆ ಯಾವ ರಾಜ್ಯಕ್ಕೆ, ಎಲ್ಲಿಗೆ ಮಾಡಲಾಗಿದೆ ಎನ್ನುವುದರ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ, ಸೇವೆಯಲ್ಲಿ ಪೂರೈಕೆಯ ಸ್ಥಳವನ್ನು ನಿರ್ಧರಿಸುವುದು ಅತ್ಯಂತ ಅವಶ್ಯಕವಾಗಿದೆ.

ಸೇವೆಯಲ್ಲಿ ಪೂರೈಕೆಯ ಸ್ಥಳವನ್ನು ನಿರ್ಧರಿಸುವುದಕ್ಕೂ, ಸರಕು ಪೂರೈಕೆಯ ಸ್ಥಳವನ್ನು ನಿರ್ಧರಿಸುವ ನಿಯಮಗಳಿಗೂ ವ್ಯತ್ಯಾಸವಿದೆ. ಸರಕುಗಳಲ್ಲಿಯಾದರೆ, ಸರಕಿನ ಚಲನೆಯು ಪೂರೈಕೆಯ ಸ್ಥಳವನ್ನು ನಿರ್ಧರಿಸುತ್ತದೆ.. ಸೇವೆಯು ಇದಕ್ಕಿಂತ ಭಿನ್ನವಾಗಿದ್ದು, ಡೆಲಿವರಿ ವಿಷಯದಲ್ಲಿ ಇದಮಿತ್ತಂ ಎನ್ನುವಂತಹ ಗುಣಲಕ್ಷಣಗಳು ಅದಕ್ಕಿಲ್ಲ. ಇದರೊಂದಿಗೆ, ಸೇವೆಯ ಪೂರೈಕೆಯ ಕೆಲವು ಪ್ರಕರಣಗಳಲ್ಲಿ, ಪೂರೈಕೆದಾರರು ಮತ್ತು/ಅಥವಾ ಸೇವೆಯ ಸ್ವೀಕೃತಿದಾರರ ಸ್ಥಳವನ್ನು ನಿಗದಿಪಡಿಸಲಾಗುವುದಿಲ್ಲ ಅಥವಾ ಅನಿಶ್ಚಿತವಾಗಿರುತ್ತದೆ.

ಈ ಬ್ಲಾಗ್ ಬರಹದಲ್ಲಿ ಸೇವೆಯ ಪೂರೈಕೆಯ ಸ್ಥಳವನ್ನು ಗುರುತಿಸುವುದು ಹೇಗೆ ಎನ್ನುವುದನ್ನು ಚರ್ಚಿಸೋಣ.

ಜಿಎಸ್ಟಿಯು “ಗಮ್ಯ ಆಧರಿತ ಅನುಭೋಗ ತೆರಿಗೆ’ಯಾಗಿದ್ದು, ಪೂರೈಕೆಯನ್ನು ಎಲ್ಲಿ ಅನುಭೋಗಸಲಾಗುತ್ತದೆಯೋ ಆ ರಾಜ್ಯದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಟ್ವಿಟ್ ಮಾಡಿರಿClick To Tweet

ನೋಂದಾಯಿತ ವ್ಯಕ್ತಿಗೆ ಸೇವೆಯನ್ನು ಪೂರೈಕೆ ಮಾಡುವ ಸಂದರ್ಭ

ಪ್ರಸಕ್ತ ತೆರಿಗೆ ಪದ್ಧತಿಯಲ್ಲಿ, ನೋಂದಾಯಿತ ವ್ಯಕ್ತಿಗೆ ಅದೇ ರಾಜ್ಯದೊಳಗೆ ಅಥವಾ ರಾಜ್ಯದ ಹೊರಗಡೆ ತೆರಿಗೆ ವಿಧಿಸಬಲ್ಲ ಸೇವೆಯನ್ನು ನೀಡಿದಾಗ ಸೇವಾ ತೆರಿಗೆಯು ಅನ್ವಯಿಸುತ್ತದೆ.

ಉದಾಹರಣೆ:ಒಡಿಶಾದ ಭುವನೇಶ್ವರದಲ್ಲಿ ನೋಂದಾಯಿತ ವ್ಯವಹಾರವನ್ನು ಹೊಂದಿರುವ ಮನೀಶ್ ಡಿಸೈನರ್ಸ್, ಹೈದರಾಬಾದ್, ತೆಲ್ಲಂಗಾಣದಲ್ಲಿ ತನ್ನ ನೋಂದಾಯಿತ ವ್ಯವಹಾರದ ಸ್ಥಳವನ್ನು ಹೊಂದಿರುವ ರಾಜೇಶ್ ಅಪರಲ್ಸ್ ಎಂಬ ಸಂಸ್ಥೆಗೆ ಫ್ಯಾಷನ್ ವಿನ್ಯಾಸ ಸೇವೆಯನ್ನು ಒದಗಿಸುತ್ತದೆ. ಇದು ತೆರಿಗೆ ವಿಧಿಸಬಲ್ಲ ಸೇವೆಯಾಗಿರುವುದರಿಂದ ಸೇವಾ ತೆರಿಗೆ (ಸ್ವಚ್ಛ ಭಾರತ ಸೆಸ್ ಮತ್ತು ಕೃಷಿ ಕಲ್ಯಾಣ ಸೆಸ್ ಸೇರಿದಂತೆ) ಶೇಕಡ 15ನ್ನು ಈ ವಹಿವಾಟಿಗೆ ಒದಗಿಸಲಾಗುತ್ತದೆ.

ಜಿಎಸ್ಟಿ ಪದ್ಧತಿಯಲ್ಲಿ, ಯಾವ ಬಗೆಯ ಜಿಎಸ್ಟಿಯನ್ನು ವಿಧಿಸಬೇಕೆನ್ನುವುದಕ್ಕೆ ಪೂರೈಕೆಯ ಸ್ಥಳವನ್ನು ಗುರುತಿಸುವುದು ಅತ್ಯಂತ ಅವಶ್ಯಕವಾಗಿದೆ. ತೆರಿಗೆ ವಿಧಿಸಬಲ್ಲ ಸೇವೆಯನ್ನು ನೋಂದಾಯಿತ ವ್ಯಕ್ತಿಗೆ (ನಿಯಮಿತ/ಸಂಯೋಜಿತ ಮಧ್ಯವರ್ತಿ) ಪೂರೈಕೆ ಮಾಡಿದ ಸಂದರ್ಭದಲ್ಲಿ ಸ್ವೀಕೃತಿದಾರರ ವ್ಯವಹಾರದ ನೋಂದಾಯಿತು ಸ್ಥಳವು ಪೂರೈಕೆಯ ಸ್ಥಳವಾಗಿರುತ್ತದೆ.

ತೆರಿಗೆ ವಿಧಿಸಬಲ್ಲ ಸೇವೆಯನ್ನು ನೋಂದಾಯಿತ ವ್ಯಕ್ತಿಗೆ (ನಿಯಮಿತ/ಸಂಯೋಜಿತ ಮಧ್ಯವರ್ತಿ) ಪೂರೈಕೆ ಮಾಡಿದ ಸಂದರ್ಭದಲ್ಲಿ ಸ್ವೀಕೃತಿದಾರರ ವ್ಯವಹಾರದ ನೋಂದಾಯಿತು ಸ್ಥಳವು ಪೂರೈಕೆಯ ಸ್ಥಳವಾಗಿರುತ್ತದೆ. ಟ್ವಿಟ್ ಮಾಡಿ.Click To Tweet
ಒಂದೇ ರಾಜ್ಯದೊಳಗೆ ನೋಂದಾಯಿತ ವ್ಯಕ್ತಿಗೆ ಪೂರೈಕೆ

ಎಲ್ಲಾದರೂ ನೋಂದಾಯಿತ ವ್ಯಕ್ತಿಗೆ ಒಂದೇ ರಾಜ್ಯದೊಳಗೆ ಸೇವೆಯನ್ನು ಪೂರೈಸಿದರೆ ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ತೆರಿಗೆ ಅನ್ವಯಿಸುತ್ತದೆ.

ಉದಾಹರಣೆ: ಒಡಿಶಾದ ಭುವನೇಶ್ವರದಲ್ಲಿ ನೋಂದಾಯಿತ ವ್ಯವಹಾರ ಹೊಂದಿರುವ ಮನೀಶ್ ಡಿಸೈನರ್ಸ್ ಗೆ ಒಡಿಶಾದ ಕಟಕ್ ನಲ್ಲಿ ತಯಾರಿಕಾ ಘಟಕ ಹೊಂದಿರುವ ಮುರಳಿ ಫ್ಯಾಷನ್ಸ್ ಸಂಸ್ಥೆಯು ಫ್ಯಾಷನ್ ವಿನ್ಯಾಸ ಸೇವೆಗಳನ್ನು ಒದಗಿಸುತ್ತದೆ.

ಪೂರೈಕೆದಾರರ ಸ್ಥಳ: ಭುವನೇಶ್ವರ, ಒಡಿಶಾ

ಪೂರೈಕೆಯ ಸ್ಥಳ: ಪೂರೈಕೆಯ ಸ್ಥಳ

ಇದು ರಾಜ್ಯದೊಳಗಿನ ಪೂರೈಕೆಯಾಗಿರುವುದರಿಂದ ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.

Intraste supply of services under GST

ವಿಭಿನ್ನ ರಾಜ್ಯಗಳಲ್ಲಿ ನೋಂದಾಯಿತ ವ್ಯಕ್ತಿಗೆ ಪೂರೈಕೆ

ಭಿನ್ನ ರಾಜ್ಯದಲ್ಲಿ ನೋಂದಾಯಿತ ವ್ಯಕ್ತಿಗೆ ಪೂರೈಕೆ ಮಾಡುವಾಗ ಐಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.

ಉದಾಹರಣೆ:ಒಡಿಶಾದ ಭುವನೇಶ್ವರದಲ್ಲಿ ನೋಂದಾಯಿತ ಸ್ಥಳ ಹೊಂದಿರುವ ಮನೀಶ್ ಡಿಸೈನರ್ಸ್, ತೆಲಂಗಾಣದ ಹೈದರಾಬಾದ್ ನಲ್ಲಿ ನೋಂದಾಯಿತ ವ್ಯವಹಾರದ ಸ್ಥಳವನ್ನು ಹೊಂದಿರುವ ರಾಜೇಶ್ ಅಪರೆಲ್ಸ್ ಗೆ ಫ್ಯಾಷನ್ ಡಿಸೈನಿಂಗ್ ಸೇವೆಯನ್ನು ಒದಗಿಸುತ್ತದೆ.

ಪೂರೈಕೆದಾರರ ಸ್ಥಳ: ಒಡಿಶಾದ, ಭುವನೇಶ್ವರ

ಪೂರೈಕೆಯ ಸ್ಥಳ: ತೆಲ್ಲಂಗಾಣದ, ಹೈದರಾಬಾದ್.

ಇದು ಅಂತರ್ ರಾಜ್ಯದ ಪೂರೈಕೆಯಾಗಿರುವುದರಿಂದ ಐಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.

Services place of supply gst

ಎಲ್ಲಾದರೂ ನೋಂದಾಯಿಸದೆ ಇರುವ ವ್ಯಕ್ತಿಗೆ ಸೇವೆಯನ್ನು ಪೂರೈಕೆ ಮಾಡುವ ಸಂದರ್ಭ.

ಈಗಿನ ತೆರಿಗೆ ಪದ್ಧತಿಯಲ್ಲಿ, ನೋಂದಾಯಿಸದೆ ಇರುವ ವ್ಯಕ್ತಿಗೆ ಸೇವೆಯನ್ನು ಒದಗಿಸಿದರೆ ಸೇವಾ ತೆರಿಗೆ ವಿಧಿಸಲಾಗುತ್ತದೆ. ಅಲ್ಲಿ ತೆರಿಗೆ ವಿಧಿಸಲು ಸ್ವೀಕೃತಿದಾರರು ನೋಂದಾಯಿಸಿರಬೇಕೋ ಅಥವಾ ಇಲ್ಲವೇ ಎನ್ನುವ ಕುರಿತು ಯಾವುದೇ ಗೊಂದಲಗಳು ಇಲ್ಲ.

ಈಗಿನ ಜಿಎಸ್ಟಿ ಪದ್ಧತಿಯಲ್ಲಿ, ನೋಂದಾಯಿಸದೆ ಇರುವ ವ್ಯಕ್ತಿಗೆ ಸೇವೆಯನ್ನು ಪೂರೈಕೆ ಮಾಡಿದರೆ, ಅದರಲ್ಲಿ ಎರಡು ಸನ್ನಿವೇಶಗಳು ಇರುತ್ತವೆ:

ಸನ್ನಿವೇಶ 1: ಪೂರೈಕೆದಾರರಲ್ಲಿ ಸ್ವೀಕೃತಿದಾರರ ವಿಳಾಸ ಇರುತ್ತದೆ.

ಸನ್ನಿವೇಶ 2: ಪೂರೈಕೆದಾರರಲ್ಲಿ ಸ್ವೀಕೃತಿದಾರರ ವಿಳಾಸ ಇರುವುದಿಲ್ಲ.

ಸನ್ನಿವೇಶ 1 ನೋಂದಾಯಿಸದೆ ಇರುವ ವ್ಯಕ್ತಿಗೆ ಸೇವೆಯನ್ನು ಪೂರೈಕೆ ಮಾಡಿದಾಗ ಪೂರೈಕೆದಾರರ ದಾಖಲೆಗಳಲ್ಲಿ ಸ್ವೀಕೃತಿದಾರರ ವಿಳಾಸವಿರುತ್ತದೆ, ದಾಖಲೆಗಳಲ್ಲಿರುವ ಮಾಹಿತಿಯ ಪ್ರಕಾರ ಸ್ವೀಕೃತಿದಾರರ ಸ್ಥಳವನ್ನು ಸೇವೆಯ ಪೂರೈಕೆಯ ಸ್ಥಳ ಎಂದು ಪರಿಗಣಿಸಲಾಗುತ್ತದೆ.

ನೋಂದಾಯಿಸದೆ ಇರುವ ವ್ಯಕ್ತಿಗೆ ಸೇವೆಯನ್ನು ಪೂರೈಕೆ ಮಾಡಿದಾಗ ಪೂರೈಕೆದಾರರ ದಾಖಲೆಗಳಲ್ಲಿ ಸ್ವೀಕೃತಿದಾರರ ವಿಳಾಸವಿರುತ್ತದೆ, ದಾಖಲೆಗಳಲ್ಲಿರುವ ಮಾಹಿತಿಯ ಪ್ರಕಾರ ಸ್ವೀಕೃತಿದಾರರ ಸ್ಥಳವನ್ನು ಸೇವೆಯ ಪೂರೈಕೆಯ ಸ್ಥಳ ಎಂದು ಪರಿಗಣಿಸಲಾಗುತ್ತದೆ.ಟ್ವಿಟ್ ಮಾಡಿ.Click To Tweet
ಒಂದೇ ರಾಜ್ಯಕ್ಕೆ ಮಾಡುವ ಪೂರೈಕೆ

ಒಂದೇ ರಾಜ್ಯದೊಳಗೆ ಸೇವೆಯನ್ನು ನೋಂದಾಯಿಸದೆ ಇರುವ ವ್ಯಕ್ತಿಗೆ ಪೂರೈಕೆ ಮಾಡುವಾಗ ಆತನ ವಿಳಾಸವು ಪೂರೈಕೆದಾರರಲ್ಲಿ ಇರುತ್ತದೆ, ಇದರ ಮೇಲೆ ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.

ಉದಾಹರಣೆ: ಒಡಿಶಾದ ಭುವನೇಶ್ವರದಲ್ಲಿ ನೋಂದಾಯಿತ ವ್ಯವಹಾರದ ಸ್ಥಳ ಹೊಂದಿರುವ ಮನೀಶ್ ಡಿಸೈನರ್ಸ್, ನೋಂದಾಯಿಸದೆ ಇರುವ ರಮೇಶ್ ಕ್ಲೋಥಿಂಗ್ ಗೆ ಫ್ಯಾಷನ್ ಡಿಸೈನಿಂಗ್ ಸೇವೆಯನ್ನು ಒದಗಿಸುತ್ತದೆ, ರಮೇಶ್ ಕ್ಲೋಥಿಂಗ್ ನ ವಿಳಾಸ ಒಡಿಶಾದ ಪುರಿಯಾಗಿದೆ.

ಪೂರೈಕೆದಾರರ ಸ್ಥಳ : ಒಡಿಶಾದ,ಭುವನೇಶ್ವರ

ಪೂರೈಕೆಯ ಸ್ಥಳ: ಒಡಿಶಾದ,ಪುರಿ

ಇದು ರಾಜ್ಯದೊಳಗಿನ ಪೂರೈಕೆಯಾಗಿದ್ದು, ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ತೆರಿಗೆ ಅನ್ವಯಿಸಲಾಗುತ್ತದೆ.

GST on services to unregistered person

ಭಿನ್ನ ರಾಜ್ಯಕ್ಕೆ ಪೂರೈಕೆ

ಬೇರೆ ರಾಜ್ಯದ ವಿಳಾಸ ಹೊಂದಿರುವ ನೋಂದಾಯಿಸದೆ ಇರುವ ವ್ಯಕ್ತಿಗೆ ಸೇವೆಯನ್ನು ಪೂರೈಕೆ ಮಾಡುವಾಗ ಐಜಿಎಸ್ಟಿ ತೆರಿಗೆ ವಿಧಿಸಲಾಗುತ್ತದೆ.

ಉದಾಹರಣೆ: ಒಡಿಶಾದ ಭುವನೇಶ್ವರದಲ್ಲಿ ನೋಂದಾಯಿತ ವ್ಯವಹಾರ ಹೊಂದಿರುವ ಮನೀಶ್ ಡಿಸೈನರ್ಸ್, ನೋಂದಾಯಿಸಿದೆ ಇರುವ ಮಧ್ಯವರ್ತಿ ಲಕ್ಷ್ಮಿ ಅಪರೆಲ್ ಗೆ ಫ್ಯಾಷನ್ ವಿನ್ಯಾಸ ಸೇವೆಯನ್ನು ಒದಗಿಸುತ್ತದೆ. ಲಕ್ಷ್ಮಿ ಅಪರೆಲ್ ವಿಳಾಸವು ಪಶ್ಚಿಮ ಬಂಗಾಳದ ಕೋಲ್ಕೊತ್ತಾದಲ್ಲಿದೆ.

ಪೂರೈಕೆದಾರರ ಸ್ಥಳ: ಭುವನೇಶ್ವರ, ಒಡಿಶಾ

ಪೂರೈಕೆಯ ಸ್ಥಳ: ಕೋಲ್ಕೊತ್ತಾ, ಪಶ್ಚಿಮ ಬಂಗಾಳ

ಇದು ಅಂತರ್-ರಾಜ್ಯ ಪೂರೈಕೆಯಾಗಿದೆ ಮತ್ತು ಐಜಿಎಸ್ಟಿ ತೆರಿಗೆ ಅನ್ವಯಿಸುತ್ತದೆ.

Example of GST Interstate Supply of Services

ಸನ್ನಿವೇಶ 2: ಎಲ್ಲಾದರೂ ನೋಂದಾಯಿಸದೆ ಇರುವ ವ್ಯಕ್ತಿಗೆ ಸೇವೆಯನ್ನು ಪೂರೈಕೆ ಮಾಡಿದರೆ, ಅವರ ವಿಳಾಸ ಪೂರೈಕೆದಾರರ ದಾಖಲೆಯಲ್ಲಿ ಇಲ್ಲದೆ ಇದ್ದರೆ ಪೂರೈಕೆಯ ಸ್ಥಳವು ಪೂರೈಕೆದಾರರ ಸ್ಥಳವೇ ಆಗಿರುತ್ತದೆ.

ಉದಾಹರಣೆ: ಒಡಿಶಾದ ಭುವನೇಶ್ವರದಲ್ಲಿ ನೋಂದಾಯಿತ ವ್ಯವಹಾರದ ಸ್ಥಳ ಹೊಂದಿರುವ ಮನೀಶ್ ಡಿಸೈನರ್ಸ್, ಫ್ಯಾಷನ್ ವಿನ್ಯಾಸ ಗ್ರಾಹಕರೊಬ್ಬರಿಗೆ ಸೇವೆಯನ್ನು ಒದಗಿಸುತ್ತದೆ, ಅವರ ವಿಳಾಸವು ಪೂರೈಕೆದಾರರ ದಾಖಲೆಯಲ್ಲಿ ಇರುವುದಿಲ್ಲ.

ಪೂರೈಕೆದಾರರ ಸ್ಥಳ : ಒಡಿಶಾದ,ಭುವನೇಶ್ವರ

ಪೂರೈಕೆಯ ಸ್ಥಳ: ಒಡಿಶಾದ,ಭುವನೇಶ್ವರ

ಇದು ರಾಜ್ಯದೊಳಗಿನ ಪೂರೈಕೆಯಾಗಿದೆ ಮತ್ತು ಇದಕ್ಕೆ ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.

Supply of services in GST

ಗಮನಿಸಿ: ಸೇವೆಯನ್ನು ಪೂರೈಕೆ ಮಾಡುವ ವ್ಯಕ್ತಿಯು ಸಂಯೋಜಿತ ಮಧ್ಯವರ್ತಿಯಾಗಿ ನೋಂದಾಯಿಸಲು ಅವಕಾಶವಿಲ್ಲ. ಆದರೆ, ಮಾರ್ಚ್ 4, 2017ರಂದು ಜಿಎಸ್ಟಿ ಸಭೆಯಲ್ಲಿ ಜಿಎಸ್ಟಿ ಸಮಿತಿಯು, 50 ಲಕ್ಷ ರೂ.ಗಿಂತ ಕಡಿಮೆ ವ್ಯವಹಾರ ಹೊಂದಿರುವ ಸಣ್ಣ ಹೋಟೆಲ್ ಗಳು, ರೆಸ್ಟೊರೆಂಟ್ ಗಳು ಮತ್ತು ಢಾಭಾಗಳು ಸಂಯೋಜಿತ ಮಧ್ಯವರ್ತಿಗಳಾಗಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದನ್ನು ಇನ್ನೂ ಜಿಎಸ್ಟಿ ಕಾನೂನಿಗೆ ಅಳವಡಿಸಲಾಗಿಲ್ಲ.

ಇವು ಸೇವೆಯನ್ನು ಪೂರೈಕೆ ಮಾಡುವ ಸ್ಥಳದ ಕುರಿತು ಇರುವ ಪ್ರಮುಖ ನಿಯಮಗಳಾಗಿವೆ. ಆದರೆ, ಪೂರೈಕೆಯ ಸ್ಥಳದ ಕುರಿತು ಕೆಲವೊಂದು ಸೇವೆಗಳಿಗೆ ನಿರ್ಧರಿಸುವುದು ಭಿನ್ನವಾಗಿರುತ್ತದೆ. ಇದನ್ನು ನಮ್ಮ ಮುಂದಿನ ಬ್ಲಾಗ್ ಬರಹಗಳಲ್ಲಿ ವಿವರಿಸಲಾಗುವುದು.

Are you GST ready yet?

Get ready for GST with Tally.ERP 9 Release 6

111,464 total views, 32 views today