ಅಸೋಚಾಮ್-ಫೋರೆಸ್ಟರ್ ಜಂಟಿ ಅಧ್ಯಯನದ ಪ್ರಕಾರ, 2020ರ ವೇಳೆಗೆ ಭಾರತದ ಇ-ವಾಣಿಜ್ಯ ವಲಯವು 12,000 ಕೋಟಿ ರೂ. ಆದಾಯ ದಾಟುವ ನಿರೀಕ್ಷೆ ಇದೆ. ಇದರ ಜೊತೆಗೆ, ಈ ವಲಯವು ವಾರ್ಷಿಕ ಶೇಕಡ 51ರಷ್ಟು ಬೆಳವಣಿಗೆಯ ದರದಲ್ಲಿ ಪ್ರಗತಿ ಕಾಣುವ ನಿರೀಕ್ಷೆಯೂ ಇದೆ, ಇದು ಜಗತ್ತಿನಲ್ಲಿಯೇ ಅತ್ಯಧಿಕವಾಗಿದೆ. ಭಾರತ ಸರಕಾರವು ಇತ್ತೀಚೆಗೆ ನಗದು ಅಮಾಣ್ಯಿಕರಣಗಳಿಸಿದ್ದು ಮತ್ತು ಡಿಜಿಟಲೀಕರಣಕ್ಕೆ ಒತ್ತು ನೀಡಿರುವುದು ಸಹ ಇ-ವಾಣಿಜ್ಯ ವಲಯದ ಉದ್ಯಮಗಳ ಪ್ರಗತಿಗೆ ಇನ್ನಷ್ಟು ಬಲ ತಂದಿದೆ.
ಇ-ವಾಣಿಜ್ಯ ವೇದಿಕೆಯಲ್ಲಿ ಪೂರೈಕೆದಾರರಿಗೆ ವ್ಯವಹಾರ ನಡೆಸಲು ಇದು ನಿಜಕ್ಕೂ ಅತ್ಯುತ್ತಮ ಸಮಯವಾಗಿದೆ., ಇದು ಗ್ರಾಹಕರ ಭೌಗೋಳಿಕ ವ್ಯಾಪ್ತಿ ಮೀರಿ ಸೇವೆ ಸಲ್ಲಿಸಲು ಅನುಮತಿಸುತ್ತದೆ, ಇದರಿಂದ ನಿರ್ವಹಣಾ ವೆಚ್ಚ ತಗ್ಗುತ್ತದೆ ಮತ್ತು ಇ-ಕಾಮರ್ಸ್ ನಿರ್ವಾಹಕರಿಗೆ ಲಾಭ ಹೆಚ್ಚಿಸುತ್ತದೆ. ಇದೇ ಸಮಯದಲ್ಲಿ, ಇ-ವಾಣಿಜ್ಯ ವ್ಯಹಾರಕ್ಕೆ ಈಗಿನ ತೆರಿಗೆ ಪದ್ಧತಿಯಲ್ಲಿ ಸಾಕಷ್ಟು ತೊಡಕುಗಳಿವೆ ಮತ್ತು ವಿವಿಧ ರಾಜ್ಯಗಳಲ್ಲಿ ವಿವಿಧ ಬಗೆಯ ತೆರಿಗೆಗಳನ್ನು ವಿಧಿಸಲಾಗುತ್ತದೆ. ಜಿಎಸ್ಟಿಯ ಆಗಮನವು ಇ-ವಾಣಿಜ್ಯ ವೇದಿಕೆಯಲ್ಲಿ ಕಾರ್ಯನಿರ್ವಹಿಸುವವರಿಗೆ ಸಾಕಷ್ಟು ಪ್ರಶ್ನೆಗಳನ್ನು ತಂದೊಡ್ಡುತ್ತದೆ. ಜಿಎಸ್ಟಿಯು ಇ-ವಾಣಿಜ್ಯಕ್ಕೆ ದೇಶಾದ್ಯಂತ ಏಕೀಕೃತ ತೆರಿಗೆ ವಿಧಿಸಲಿದೆಯೇ? ಇವರ ಲಾಭದ ಭಾಗಕ್ಕೆ ಮತ್ತು ನಿರ್ವಹಣಾ ವೆಚ್ಚದ ಮೇಲೆ ಜಿಎಸ್ಟಿಯು ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ?
ಇ-ವಾಣಿಜ್ಯ ವೇದಿಕೆಯಲ್ಲಿ ಪೂರೈಕೆದಾರರ ಮೇಲೆ ಜಿಎಸ್ಟಿ ಬೀರುವ ಪರಿಣಾಮಗಳನ್ನು ಅರ್ಥಮಾಡಿಕೊಳ್ಳೋಣ.

ಆದಾನ ತೆರಿಗೆಯ ಅವ್ಯಾಹತ ಲಭ್ಯತೆ

ಈಗಿನ ತೆರಿಗೆ ಪದ್ಧತಿ

ಈಗಿನ ತೆರಿಗೆ ಪದ್ಧತಿಯಲ್ಲಿ, ಇ-ವಾಣಿಜ್ಯ ವೇದಿಕೆಗಳು ತಮ್ಮ ವೇದಿಕೆಯ ಮೇಲೆ ಒದಗಿಸುವ ಸೇವೆಗಳಿಗೆ ಸೇವಾ ತೆರಿಗೆಯನ್ನು ಪಾವತಿಸಬೇಕಾಗುತ್ತದೆ, ಅಂದರೆ ವೇರ್ ಹೌಸಿಂಗ್, ಲಾಜಿಸ್ಟಿಕ್, ಮಾರುಕಟ್ಟೆಯ ಕಮಿಷನ್ ಗಳು ಇತ್ಯಾದಿಗಳಿಗೆ ಸೇವಾ ತೆರಿಗೆ ಪಾವತಿಸಬೇಕಾಗುತ್ತದೆ. ತಾವು ಒದಗಿಸಿದ ಸೇವೆಗೆ ಪೂರೈಕೆದಾರರು ಆದಾನ ತೆರಿಗೆ ಪಾವತಿಯನ್ನು ಕೇಳಲು ಅವಕಾಶವಿಲ್ಲ ಮತ್ತು ಇದು ಹೆಚ್ಚು ವೆಚ್ಚದಾಯಕವಾಗಿದೆ. ಇದೇ ರೀತಿ, ಈಗಿನ ತೆರಿಗೆ ಪದ್ಧತಿಯಲ್ಲಿ ಪೂರೈಕೆದಾರರು ಸರಕುಗಳ ಮೇಲೆ ಪಾವತಿಸಿದ ಅಬಕಾರಿ ಸುಂಕವೂ ಪೂರೈಕೆದಾರರ ಮೇಲಿನ ವೆಚ್ಚವಾಗಿದೆ.

ಜಿಎಸ್ಟಿ ತೆರಿಗೆ ಪದ್ಧತಿ

ಪೂರೈಕೆದಾರರಿಗೆ ಅವ್ಯಾಹತವಾಗಿ ಲಭ್ಯವಾಗುವ ಆದಾನ ತೆರಿಗೆ ಪಾವತಿಯು ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಪೂರೈಕೆದಾರರಿಗೆ ದೊರಕುವ ಪ್ರಮುಖ ಸಕಾರಾತ್ಮಕ ಲಾಭವಾಗಿದೆ. ಜಿಎಸ್ಟಿ ತೆರಿಗೆ ಪದ್ಧತಿಯಡಿಯಲ್ಲಿ, ಆದಾನ ತೆರಿಗೆ ಪಾವತಿಯು ವ್ಯವಹಾರದ ಮುಂದುವರಿಕೆಯ ಉದ್ದೇಶದಿಂದ ಎಲ್ಲಾ ಒಳಬರುವ ಸರಕುಗಳಿಗೆ ಆದಾನ ತೆರಿಗೆ ಪಾವತಿಯು ಲಭ್ಯವಾಗುತ್ತದೆ. ಇದರ ಪರಿಣಾಮವಾಗಿ, ಇನ್ಪುಟ್ ಮೇಲೆ ಆದಾನ ತೆರಿಗೆ ಪಾವತಿಯನ್ನು ಪಡೆಯುವ ಅವಕಾಶ ಇರುವುದರಿಂದ ಪೂರೈಕೆದಾರರ ನಿರ್ವಹಣಾ ವೆಚ್ಚವು ಕಡಿಮೆಯಾಗಿ ಲಾಭವಾಗುತ್ತದೆ. ಇಲ್ಲಿಯವರೆಗೆ ಇವರಿಗೆ ಆದಾನ ಪಾವತಿ ಲಭ್ಯವಾಗದೆ ಇದ್ದರಿಂದ ಇದರ ವೆಚ್ಚ ಹೆಚ್ಚಾಗಿತ್ತು.

A great positive for e-commerce suppliers in the GST regime is the seamless availability of input creditClick To Tweet

ಎಲ್ಲಾ ರಾಜ್ಯಗಳಲ್ಲಿಯೂ ಏಕೀಕೃತ ತೆರಿಗೆ ವ್ಯವಸ್ಥೆ

ಈಗಿನ ತೆರಿಗೆ ಪದ್ಧತಿ

ಈಗಿನ ತೆರಿಗೆ ಪದ್ಧತಿಯಲ್ಲಿ, ಪೂರೈಕೆದಾರರು ರಾಜ್ಯವಾರು ತೆರಿಗೆ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗುತ್ತದೆ. ಇದೇ ಉತ್ಪನ್ನಕ್ಕೆ ಬೇರೊಂದು ರಾಜ್ಯದಲ್ಲಿ ಬೇರೆ ತೆರಿಗೆ ಪಾವತಿಸಬೇಕಾಗುತ್ತದೆ. ಇದೇ ಕಾರಣದಿಂದ ಇ-ವಾಣಿಜ್ಯ ವ್ಯವಹಾರದ ಕುರಿತಾದ ಕೆಲವೊಂದು ಸಂದಿಗ್ಧತೆಯಿಂದಾಗಿ, ಒಂದೇ ಉತ್ಪನ್ನಕ್ಕೆ ಹಲವು ತೆರಿಗೆ ಪಾವತಿಸಬೇಕಾಗುತ್ತದೆ. ಹಲವು ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಆನ್ ಲೈನ್ ಮೂಲಕ ಮಾರಾಟ ಮಾಡುವ ಸರಕುಗಳಿಗೆ ಪ್ರವೇಶ ತೆರಿಗೆ ಸಹ ವಿಧಿಸುತ್ತವೆ.

ಜಿಎಸ್ಟಿ ತೆರಿಗೆ ಪದ್ಧತಿ

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ಎಲ್ಲಾ ಸರಕು ಮತ್ತು ಸೇವೆಗಳಿಗೆ ನಿರ್ದಿಷ್ಟ ತೆರಿಗೆ ದರ ವಿಧಿಸಲಾಗುತ್ತದೆ, ಅವು ದೇಶಾದ್ಯಂತ ಒಂದೇ ರೀತಿ ಇರುತ್ತದೆ, ಅಂದರೆ ಅವು ಆನ್ ಲೈನ್ ಮೂಲಕ ಮಾರಾಟವಾಗಲಿ ಅಥವಾ ಅಂಗಡಿಗಳ ಮೂಲಕ ಮಾರಾಟವಾಗಲಿ, ಎಲ್ಲಾ ಕಡೆಯೂ ಒಂದೇ ರೀತಿಯ ತೆರಿಗೆ ಇರುತ್ತದೆ.

For e-commerce suppliers, GST brings greater access to customers across the nationClick To Tweet

ಕಡ್ಡಾಯ ನೋಂದಣಿ

Curr ಈಗಿನ ತೆರಿಗೆ ಪದ್ಧತಿ

ಇ-ವಾಣಿಜ್ಯ ವೇದಿಕೆಯಲ್ಲಿರುವ ಬಹುತೇಕ ಪೂರೈಕೆದಾರರು ಈಗಿನ ತೆರಿಗೆ ಪದ್ಧತಿಗೆ ತಕ್ಕಂತೆ ನೋಂದಾಣಿ ಮಾಡಿಸಿರುವುದಿಲ್ಲ, ಯಾಕೆಂದರೆ ಅವರ ವಹಿವಾಟು ನಿರ್ದಿಷ್ಟ ಮಿತಿ ದಾಟಿರುವುದಿಲ್ಲ. ಇದರಿಂದಾಗಿ ನೋಂದಾಯಿತ ಪೂರೈಕೆದಾರರಿಗಿಂತ ಕಡಿಮೆ ದರದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವರಿಗೆ ಸಾಧ್ಯವಾಗುತ್ತದೆ. ಜೊತೆಗೆ, ಲೆಕ್ಕಪುಸ್ತಕ ಮತ್ತು ಸರಕುಪಟ್ಟಿ ನಿರ್ವಹಣೆ ಮತ್ತು ಆದಾಯ ಸಲ್ಲಿಕೆ ಮಾಡುವುದು ಇತ್ಯಾದಿ ಅನುಸರಣೆಯ ಕೆಲಸವನ್ನೂ ಮಾಡಬೇಕಿಲ್ಲ.

ಜಿಎಸ್ಟಿ ತೆರಿಗೆ ಪದ್ಧತಿ

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ಇ-ವಾಣಿಜ್ಯ ವೇದಿಕೆಯಲ್ಲಿರುವ ಎಲ್ಲಾ ಪೂರೈಕೆದಾರರು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಅವರ ವಹಿವಾಟು, ಸರಕು ಅಥವಾ ಸೇವೆಯ ಪೂರೈಕೆ ಮಾಡುವ ವ್ಯಕ್ತಿಯೊಬ್ಬರು, ತಾವು ನೋಂದಾಯಿಸಿಕೊಂಡೇ ಸಂಬಂಧಪಟ್ಟ ತೆರಿಗೆಗಳನ್ನು ಪಾವತಿಸಬೇಕು. ಅಂದರೆ, ವಿವರವಾದ ಲೆಕ್ಕಪುಸ್ತಕ ಮತ್ತು ದಾಖಲೆಗಳ ನಿರ್ವಹಣೆ, ಆದಾಯ ಸಲ್ಲಿಕೆ ಮತ್ತು ತೆರಿಗೆ ಪಾವತಿಸುವುದು, ತೆರಿಗೆಯನ್ನು ತಿಂಗಳ ಲೆಕ್ಕದಲ್ಲಿ ಪಾವತಿಸುತ್ತ ಇರುವುದು ಇತ್ಯಾದಿಗಳು ಇದರಲ್ಲಿ ಒಳಗೊಂಡಿವೆ. ಅಂಗಡಿಗಳ ಮೂಲಕ ಮಾರಾಟ ಮಾಡುವವರಿಗೆ ಹೋಲಿಸಿದರೆ ಇದು ಇ-ವಾಣಿಜ್ಯ ಪೂರೈಕೆದಾರರಿಗೆ ಇಷ್ಟವಾಗದ ಸಂಗತಿಯಾಗಿದೆ, ಅಂಗಡಿಗಳ ಮೂಲಕ ಮಾರಾಟ ಮಾಡುವವರು ತಮ್ಮ ಆದಾಯದ ನಿರ್ದಿಷ್ಟ ಮಿತಿಯನ್ನು ದಾಟಿದ ನಂತರ ನೋಂದಾಯಿಸಿಕೊಂಡರೆ ಸಾಕು ಮತ್ತು ತಮ್ಮ ವಹಿವಾಟು 50 ಲಕ್ಷ ರೂ. ದಾಟದೆ ಇದ್ದರೆ ತೆರಿಗೆಯನ್ನು ಸಂಯೋಜಿತ ಆಧಾರದಲ್ಲಿ ಪಾವತಿಸುವ ಅವಕಾಶವೂ ಅವರಿಗೆ ಇರುತ್ತದೆ. ಜೊತೆಗೆ, ಸ್ವಂತ ವೆಬ್ ತಾಣ ಹೊಂದಿರುವ ಪೂರೈಕೆದಾರರೂ ಇ-ವಾಣಿಜ್ಯವಾಗಿ ಪರಿಗಣಿಸಲಾಗುವುದಿಲ್ಲ ಮತ್ತು ಅವರ ವಹಿವಾಟು ನಿರ್ದಿಷ್ಟ ಮಿತಿ ದಾಟಿದ ನಂತರ ನೋಂದಾಯಿಸಿದರೆ ಸಾಕಾಗುತ್ತದೆ. ಹೆಚ್ಚುವರಿ ತೆರಿಗೆ ಅನುಸರಣೆ ಮಾಡಲು ಮತ್ತು ಜಿಎಸ್ಟಿ ತರುವ ವೆಚ್ಚಗಳನ್ನು ನಿಭಾಯಿಸಲು ಇ-ವಾಣಿಜ್ಯ ಪೂರೈಕೆದಾರರು ಹೆಚ್ಚು ಸಮಯ ವಿನಿಯೋಗಿಸಬೇಕು. ಇದನ್ನು ಅನುಸರಣೆ ಸುಲಭಗೊಳಿಸಲು ಲಭ್ಯವಿರುವ ತಂತ್ರಜ್ಞಾನಗಳನ್ನು ಬಳಸಿಕೊಂಡು ಸುಲಭವಾಗಿಸಬಹುದು, ಲೆಕ್ಕಪುಸ್ತಕಗಳು ಮತ್ತು ದಾಖಲೆಗಳನ್ನು ಶಿಸ್ತಿನಿಂದ ನಿರ್ವಹಿಸಿಕೊಳ್ಳುವುದರ ಮೂಲಕ s, ಮತ್ತು ಹಣದ ಹರಿವಿನ ಕುರಿತು ಸಮರ್ಪಕವಾದ ಯೋಜನೆ ಮಾಡಿಕೊಳ್ಳಬೇಕು .

Under GST, all suppliers on e-commerce platforms have to mandatorily register.Click To Tweet

ಸಂಯೋಜಿತ ತೆರಿಗೆ ಪಾವತಿದಾರರು ಆಗದೆ ಇರುವುದು

ಈಗಿನ ತೆರಿಗೆ ಪದ್ಧತಿ

ಮೌಲ್ಯವರ್ಧಿತ ತೆರಿಗೆ ಅನ್ವಯ, 50 ಲಕ್ಷ ರೂ.ಗಿಂತ ಕಡಿಮೆ ವಹಿವಾಟು ಹೊಂದಿರುವ ಪೂರೈಕೆದಾರರು ಸಂಯೋಜಿತ ತೆರಿಗೆಯಡಿಗೆ ಬರುತ್ತಾರೆ, ಇದರಲ್ಲಿ ಇವರು ತಮ್ಮ ವಹಿವಾಟಿಗೆ ತಕ್ಕಂತೆ ತಾವು ಯಾವ ರಾಜ್ಯಗಳಲ್ಲಿ ವ್ಯವಹಾರ ನಡೆಸುತ್ತೇವೆ ಎನ್ನುವುದನ್ನು ಅವಲಂಬಿಸಿ ಸಣ್ಣ ಪ್ರಮಾಣದಲ್ಲಿ ತೆರಿಗೆ ಪಾವತಿಸಿದರೆ ಸಾಕು ಮತ್ತು ಹೆಚ್ಚಾಗಿ ಆದಾಯ ಸಲ್ಲಿಕೆಯನ್ನು ತ್ರೈಮಾಸಿಕಕ್ಕೊಮ್ಮೆ ಮಾಡಿದರೆ ಸಾಕು.

ಜಿಎಸ್ಟಿ ತೆರಿಗೆ ಪದ್ಧತಿ

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ತಮ್ಮ ವಹಿವಾಟು 50 ಲಕ್ಷ ರೂ.ಗಿಂತ ಕಡಿಮೆ ಇದ್ದರೂ ಸಂಯೋಜಿತ ತೆರಿಗೆ ಆಯ್ಕೆ ಪಡೆಯುವ ಅವಕಾಶವಿಲ್ಲ. ಇದಕ್ಕಾಗಿ ಅವರು ನಿಯಮಿತ ವಿತರಕರಾಗಿ ನೋಂದಾಯಿಸಬೇಕು. ಇಂತಹ ಪೂರೈಕೆದಾರರೂ ಕೂಡ, ಅನುಸರಣೆ ಚಟುವಟಿಕೆ ಮತ್ತು ವೆಚ್ಚವು ಜಿಎಸ್ಟಿಯಡಿಯಲ್ಲಿ ಹೆಚ್ಚಾಗುತ್ತದೆ, ಇದಕ್ಕೆ ತಿಂಗಳ ಆಧಾರದಲ್ಲಿಆದಾಯ ಸಲ್ಲಿಕೆ ಮತ್ತು ತೆರಿಗೆ ಪಾವತಿ ಮಾಡುವುದು ಹಾಗೂ ಲೆಕ್ಕಪುಸ್ತಕ ಮತ್ತು ದಾಖಲೆಗಳನ್ನು ನಿಗದಿಪಡಿಸಿದ ವಿಧಾನದಲ್ಲಿ ನಿರ್ವಹಿಸುವುದು ಅತ್ಯಂತ ಅಗತ್ಯವಾಗಿದೆ.

ಹಣದ ಹರಿವಿನ ಮೇಲೆ ಪರಿಣಾಮ

ಈಗಿನ ತೆರಿಗೆ ಪದ್ಧತಿ

ಸಾಮಾನ್ಯವಾಗು ಇ-ವಾಣಿಜ್ಯ ಪೂರೈಕೆದಾರರು ಸಣ್ಣ ಪ್ರಮಾಣದ ಲಾಭದಲ್ಲಿ ವ್ಯವಹಾರ ನಡೆಸುತ್ತಾರೆ. ಇ-ವಾಣಿಜ್ಯ ವೇದಿಕೆಯಲ್ಲಿ ಮಾರಾಟ ಮಾಡುವ ಕಾರಣದಿಂದ, ಇ-ವಾಣಿಜ್ಯ ನಿರ್ವಾಹಕರು ಗ್ರಾಹಕರಿಂದ ಹಣ ಸಂಗ್ರಹಿಸಿ, ಮಾರಾಟದ ಕಮಿಷನ್ ಪಡೆದುಕೊಂಡು ಪೂರೈಕೆದಾರರಿಗೆ ನೀಡುತ್ತಾರೆ. ಇದನ್ನು ಒಂದು ಪೂರೈಕೆಯ ಉದಾಹರಣೆಯ ಮೂಲಕ ತಿಳಿದುಕೊಳ್ಳೋಣ.

ಉದಾಹರಣೆ: ಫಾಸ್ಟ್ ಡೀಲ್ಸ್ ಎನ್ನುವುದು ಇ-ವಾಣಿಜ್ಯ ನಿರ್ವಾಹಕರು ಆಗಿದ್ದು ಮತ್ತು ಈ ವೇದಿಕೆಗೆ ರಾಕೇಶ್ ಪ್ರೈವೇಟ್ ಲಿಮಿಟೆಡ್ ನೋಂದಾಯಿತ ಪೂರೈಕೆದಾರರಾಗಿದ್ದಾರೆ. ಮೇ 1, 2017ರಂದು ಫಾಸ್ಟ್ ಡೀಲ್ಸ್ ಗೆ ರಾಕೇಶ್ ಪ್ರೈವೇಟ್ ಲಿಮಿಟೆಡ್ 11,200 ರೂ.ಗೆ (ವ್ಯಾಟ್ ಸೇರಿದಂತೆ) ಒಂದು ಮೊಬೈಲ್ ಫೋನ್ ಮಾರಾಟ ಮಾಡುತ್ತದೆ ಎಂದಿರಲಿ.

ವಿಷಯಗಳು ದರ
ಮಾರಾಟ ಮಾಡಿರುವ ಮೊಬೈಲ್ ಮೌಲ್ಯ 10,000
ಮೌಲ್ಯ ವರ್ದಿತ ತೆರಿಗೆ @12% 1,200
ಮಾರಾಟ ದರ 11,200
(-) ಸೇವಾ ತೆರಿಗೆ ಸೇರಿದಂತೆ ಮಾರುಕಟ್ಟೆಯ ಕಮಿಷನ್ (-) 200
ಇ-ವಾಣಿಜ್ಯ ನಿರ್ವಾಹಕರಿಂದ ಪೂರೈಕೆದಾರರು ಪಡೆದ ಹಣ 11,000

* ಈ ಲೆಕ್ಕಾಚಾರದ ಉದ್ದೇಶದಿಂದ 200 ರೂಪಾಯಿ ಮಾರುಕಟ್ಟೆಯ ಕಮಿಷನ್ ಎಂದು ನಿಗದಿಪಡಿಸಲಾಗಿದೆ.

ಜಿಎಸ್ಟಿ ತೆರಿಗೆ ಪದ್ಧತಿ

ಜಿಎಸ್ಟಿಯಡಿಯಲ್ಲಿ, ಇ-ವಾಣಿಜ್ಯ ಪೂರೈಕೆದಾರರು 2 ಪ್ರಮುಖ ಸವಾಲುಗಳನ್ನು ಎದುರಿಸುತ್ತಾರೆ.

    1. 1.ನಿರ್ವಾಹಕರಿಂದ ಶೇಕಡ 2 ರಷ್ಟು ಮೂಲದಿಂದ ತೆರಿಗೆ ಸಂಗ್ರಹ(ಟಿಸಿಎಸ್) ವು ಅವರ ಹಣದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ತಮ್ಮ ವೇದಿಕೆಯ ಮೂಲಕ ಪೂರೈಕೆದಾರರಿಂದ ತೆರಿಗೆ ಸಂಗ್ರಹಿಸುವ ಬಾಧ್ಯತೆಯನ್ನು ನಿರ್ವಾಹಕರು ಹೊಂದಿರುತ್ತಾರೆ ಮತ್ತು ಉಳಿದ ಮೊತ್ತವನ್ನು ಮಾತ್ರ ಪೂರೈಕೆದಾರರಿಗೆ ರವಾನೆ ಮಾಡುತ್ತಾರೆ.

ಜಿಎಸ್ಟಿ ತೆರಿಗೆ ಪದ್ಧತಿಯನ್ನು ಮೇಲಿನ ಅದೇ ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳೋಣ.

ವಿಷಯಗಳು ದರಗಳು
ಮಾರಾಟ ಮಾಡಿದ ಮೊಬೈಲ್ ಮೌಲ್ಯ 10,000
ಜಿಎಸ್ಟಿ @ 12% 1,200
ಮಾರಾಟ ದರ 11,200
(-) ಜಿಎಸ್ಟಿ ಸೇರಿದಂತೆ ಮಾರುಕಟ್ಟೆಯ ಕಮಿಷನ್*(-) 200
(-)10,000 ರೂ.ಗೆ ಶೇಕಡ 2 ಟಿಸಿಎಸ್ (-)200
ಇ-ವಾಣಿಜ್ಯ ನಿರ್ವಾಹಕರಿಂದ ಪೂರೈಕೆದಾರರು ಪಡೆದ ಹಣ 10,800

* ಈ ಲೆಕ್ಕಾಚಾರದ ಉದ್ದೇಶದಿಂದ 200 ರೂಪಾಯಿ ಮಾರುಕಟ್ಟೆಯ ಕಮಿಷನ್ ಎಂದು ನಿಗದಿಪಡಿಸಲಾಗಿದೆ.

ಇಲ್ಲಿ ಟಿಸಿಎಸ್ ಪಡೆದುಕೊಂಡು ಇ-ವಾಣಿಜ್ಯ ನಿರ್ವಾಹಕರಿಗೆ ಪೂರೈಕೆದಾರರಿಗೆ ರವಾನೆ ಮಾಡಿರುವ ಹಣ 10,800 ರೂ. ಆಗಿದೆ. ಹೀಗಾಗಿ, ಇ-ವಾಣಿಜ್ಯ ಪೂರೈಕೆದಾರರಿಗೆ ಟಿಸಿಎಸ್ ಕಡಿತದಿಂದ ತಿಂಗಳ ಪರಿಣಾಮವು, ಮುಖ್ಯವಾಗಿ ಸಣ್ಣ ಲಾಭವಿಟ್ಟುಕೊಂಡು ನಿರ್ವಹಿಸುವ ಸಣ್ಣ ವಿತರಕರು ಆಗಿದ್ದರೆ ಪರಿಣಾಮ ದೊಡ್ಡದಾಗಿರುತ್ತದೆ. ಪೂರೈಕೆದಾರರಿಗೆ ಪಾವತಿಸಿದ ಈ ತೆರಿಗೆಯು ಮುಂದಿನ 15ನೇ ತಾರೀಕು ಆದಾನ ತೆರಿಗೆಯಾಗಿ ಲಭ್ಯವಿರುತ್ತದೆ, ಇದರಿಂದ 30ರಿಂದ 45 ದಿನ ಹಣದ ತಡೆ ಉಂಟಾಗುತ್ತದೆ.

    1.
  1. ಪೂರೈಕೆದಾರರಿಗೆ ಲಭಿಸುವ ಆದಾನ ತೆರಿಗೆ ಪಾವತಿ(ಐಟಿಸಿ) ಇ-ವಾಣಿಜ್ಯ ಯು ಅವರ ಮಾರಾಟಗಾರರ ಅನುಸರಣೆಗೆ ತಕ್ಕಂತೆ ಇರುತ್ತದೆ. ಅಂದರೆ, ತನ್ನ ಮಾರಾಟಗಾರರಿಂದ ಖರೀದಿಸಿರುವುದಕ್ಕೆ ಇ-ವಾಣಿಜ್ಯ ಪೂರೈಕೆದಾರರು ಪಾವತಿಸಿದ ತೆರಿಗೆಗೆ ಆದಾನ ತೆರಿಗೆಯು ದೊರಕಬೇಕೆಂದರೆ ಮಾರಾಟಗಾರರು ಸರಿಯಾಗಿ ತಿಂಗಳ ಆದಾಯ ಸಲ್ಲಿಕೆ ಮಾಡಬೇಕು ಮತ್ತು ಬಾಕಿ ತೆರಿಗೆಯನ್ನು ಪೂರ್ಣವಾಗಿ ಪಾವತಿಸಿರಬೇಕು. ಎಲ್ಲಾದರೂ ಮಾರಾಟಗಾರರು ಅನುಸರಣೆ ಮಾಡದೆ ಇದ್ದರೆ, ಲಭ್ಯವಿರುವ ಐಟಿಸಿಯನ್ನು ಇ-ವಾಣಿಜ್ಯ ಪೂರೈಕೆದಾರರು ಕಳೆದುಕೊಳ್ಳುತ್ತಾರೆ. ಇಂತಹ ಸನ್ನಿವೇಶಗಳಿಂದಲೂ ಪೂರೈಕೆದಾರರ ಹಣದ ಹರಿವಿಗೆ ತಡೆಯಾಗುತ್ತದೆ.

ಹೀಗಾಗಿ, ಇ-ವಾಣಿಜ್ಯ ಪೂರೈಕೆದಾರರು ಟಿಸಿಎಸ್ ಮೇಲೆ ಉಂಟಾಗುವ ಪರಿಣಾಮವನ್ನು ಪರಿಗಣಿಸಬೇಕು ಮತ್ತು ಮಾರಾಟಗಾರರು ಅನುಸರಣೆ ಮಾಡದೆ ಇದ್ದರೆ ಸರಿಯಾದ ಮಾರಾಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು. ಮಾರಾಟಗಾರರ ಆಯ್ಕೆಯ ಮೇಲೆ ಉತ್ಪನ್ನದ ದರ ಮತ್ತು ಕೆಲಸಗಾರರ ಬಂಡವಾಳ ಇರುತ್ತದೆ.

ಉಪಸಂಹಾರ

ಇ-ವಾಣಿಜ್ಯ ವೇದಿಕೆಯ ಪೂರೈಕೆದಾರರಿಗೆ ಆದಾನ ಪಾವತಿ ಮೂಲಕ ಮತ್ತು ದೇಶಾದ್ಯಂತ ಒಂದೇ ರೀತಿಯ ಮೇಲ್ತೆರಿಗೆ ಮೂಲಕ ಜಿಎಸ್ಟಿಯು ಕೊಂಚ ವೆಚ್ಚ ಕಡಿಮೆ ಮಾಡುತ್ತದೆ. ಇ-ವಾಣಿಜ್ಯ ವ್ಯವಹಾರ ಮತ್ತು ಒಂದೇ ರೀತಿಯ ತೆರಿಗೆ ಪಾವತಿಸುವುದರಿಂದ ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಹೆಚ್ಚು ಸ್ಪಷ್ಟತೆಯಿಂದ ವ್ಯವಹಾರ ನಡೆಸುವುದನ್ನು ನಿರೀಕ್ಷಿಸಲಾಗಿದೆ. ಆದರೂ, ಮೂಲದಿಂದ ತೆರಿಗೆ ಸಂಗ್ರಹ(ಟಿಸಿಎಸ್)ದಿಂದಾಗಿ, ತಮ್ಮ ಮಾರಾಟಗಾರರ ಅನುಸರಣೆರಾಹಿತ್ಯದಿಂದಾಗಿ, ತಿಂಗಳ ಆಧಾರದಲ್ಲಿ ತೆರಿಗೆ ಪಾವತಿಸುವುದಾಂಗಿ, ಪೂರೈಕೆದಾರರು ತಮ್ಮ ಹಣದ ಹರಿವಿನ ಮೇಲೆ ಉಂಟಾಗುವ ಪರಿಣಾಮದ ಕುರಿತು ಎಚ್ಚರಿಕೆಯಿಂದ ಇರಬೇಕು. ಕಡ್ಡಾಯ ನೋಂದಣಿಯಿಂದಾಗಿ ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಅನುಸರಣೆ ಚಟುವಟಿಕೆಯೂ ಹೆಚ್ಚಾಗಲಿದೆ. ಇವರ ಒಟ್ಟು ವಹಿವಾಟು 50 ಲಕ್ಷ ರೂ. ದಾಟದೆ ಇದ್ದರೂ ಅವರಿಗೆ ಸಂಯೋಜಿತ ಮೇಲ್ತೆರಿಗೆ ಪಡೆಯುವ ಅವಕಾಶವಿಲ್ಲ. ನಿಯಮಿತ ವಿತರಕಾರಾಗಿ ಪ್ರತಿತಿಂಗಳ ಆಧಾರದಲ್ಲಿ ಆದಾಯ ಸಲ್ಲಿಕೆ ಮಾಡಬೇಕು ಮತ್ತು ಲೆಕ್ಕಪತ್ರಗಳು ಮತ್ತು ದಾಖಲೆಗಳನ್ನು ನಿರ್ವಹಿಸಬೇಕು. ಪೂರೈಕೆದಾರರಾಗಿ, ಜಿಎಸ್ಟಿ ತೆರಿಗೆ ಪದ್ಧತಿಗೆ ಯೋಜನೆ ಮಾಡುವುದು ಮತ್ತು ಸಿದ್ಧಗೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಲಭ್ಯವಿರುವ ಅನುಸರಣೆಗಳ ಕುರಿತು ಸರಿಯಾದ ಜಾಗೃತಿ ಇರಬೇಕು, ಸಂಪನ್ಮೂಲಗಳ ಕುರಿತು ಸರಿಯಾದ ತರಬೇತಿ ಪಡೆಯಬೇಕು ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡರೆ ಈ ಅಗತ್ಯಗಳನ್ನು ಸರಾಗವಾಗಿ ಪೂರೈಸಬಹುದಾಗಿದ್ದು, ಪೂರೈಕೆದಾರರು ಭಾರತದ ಇ-ವಾಣಿಜ್ಯದ ಹೊಸ ಶಕೆಯಲ್ಲಿ ಹೆಚ್ಚು ಬಂಡವಾಳ ಸಂಗ್ರಹವನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.

Are you GST ready yet?

Get ready for GST with Tally.ERP 9 Release 6

99,544 total views, 267 views today