ಜೂನ್ 18, 2017ರಂದು 17ನೇ ಜಿಎಸ್ಟಿ ಪರಿಷತ್ ನ ಸಭೆ ನಡೆದಿದ್ದು, ದೇಶಾದ್ಯಂತ ವ್ಯವಹಾರಗಳಿಗೆ ಸಾಕಷ್ಟು ನೆಮ್ಮದಿಯನ್ನು ನೀಡಿದೆ. ವಿವಿಧ ವ್ಯಾಪಾರ ಮತ್ತು ಉದ್ಯಮ ಅಂಗಸಂಸ್ಥೆಗಳ ದೂರುಗಳನ್ನು ಆಲಿಸಲಾಯಿತು. ಜಿಎಸ್ಟಿಯ ಸುಗಮ ಆರಂಭಕ್ಕಾಗಿ ಜಿಎಸ್ಟಿ ಸಮಿತಿಯು ಸರಕುಪಟ್ಟಿ ಆಧರಿತವಾಗಿ ನಮೂನೆ ಜಿಎಸ್ಟಿಆರ್-1 ಮತ್ತು ನಮೂನೆ ಜಿಎಸ್ಟಿಆರ್-2 ಮೂಲಕ ಆದಾಯ ನಮೂನೆ ಸಲ್ಲಿಸಲು ಮೊದಲ ಎರಡು ತಿಂಗಳ ಸಮಯವನ್ನು ವಿಸ್ತರಿಸಲಾಗಿದೆ. ಈ ಸಮಯದಲ್ಲಿ ಸರಳವಾದ ನಮೂನೆಯೊಂದರ ಮೂಲಕ ವಿವರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಮೊದಲ ಎರಡು ತಿಂಗಳಿಗೆ- ಜುಲೈ 17 ಮತ್ತು ಆಗಸ್ಟ್ 17, ವ್ಯವಹಾರಗಳು ಆಂತರಿಕ ಮತ್ತು ಬಾಹ್ಯಾ ಪೂರೈಕೆ ಕುರಿತು ಸರಳವಾದ “ನಮೂನೆ ಜಿಎಸ್ಟಿಆರ್-3ಬಿ’ಯಲ್ಲಿ ವಿವಿರ ಸಲ್ಲಿಸಿದರೆ ಸಾಕು. ಆದರೂ, ಜುಲೈ ಮತ್ತು ಆಗಸ್ಟ್ ತಿಂಗಳ ಸರಕುಪಟ್ಟಿ ಆಧರಿತ ವಿವರಗಳನ್ನು ನಮೂನೆ ಜಿಎಸ್ಟಿಆರ್-1 ಮತ್ತು ನಮೂನೆ ಜಿಎಸ್ಟಿಆರ್-2ರಲ್ಲಿ ಸೆಪ್ಟೆಂಬ್ 5ರಿಂದ ಸೆಪ್ಟೆಂಬರ್ 20, 2017ರ ಒಳಗೆ ಪ್ರತ್ಯೇಕವಾಗಿ ಸಲ್ಲಿಸಬೇಕು.

ಪರಿಷ್ಕೃತ ನಮೂನೆಯ ಕಾಲಾವಧಿ
ತಿಂಗಳು ಜಿಎಸ್ಟಿಆರ್-3ಬಿ ಜಿಎಸ್ಟಿಆರ್-1 ಜಿಎಸ್ಟಿಆರ್-2 ಜಿಎಸ್ಟಿಆರ್-3
ಜುಲೈ, 2017ಆಗಸ್ಟ್ 25, 20172017ರ ಸೆಪ್ಟೆಂಬರ್ ರಿಂದ 52017ರ ಅಕ್ಟೋಬರ್ 312017ರ ನವೆಂಬರ್ 10

ಆಗಸ್ಟ್ ೨೦೧೭ ತಿಂಗಳ ಜಿಎಸ್ಟಿಆರ್-೩ಬಿ ಭರ್ತಿ ಮಾಡಿ ಸಲ್ಲಿಸಲು ಸೆಪ್ಟೆಂಬರ್ ೨೦, ೨೦೧೭ ಕೊನೆಯ ದಿನಾಂಕವಾಗಿದೆ

ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯ ವಿವಿಧ ಅವಶ್ಯಕತೆಗಳಾದ ಸಲಕರಣೆಗಳು ಮತ್ತು ಸಂಬಂಧಪಟ್ಟ ವ್ಯವಸ್ಥೆಯನ್ನು ಸಿದ್ಧಪಡಿಸಿಕೊಳ್ಳಲು ಪರಿಷ್ಕೃತ ಸಲ್ಲಿಕೆ ದಿನಾಂಕದಲ್ಲಿ ಹೆಚ್ಚುವರಿಯಾಗಿ 25 ದಿನಗಳನ್ನು ನೀಡಲಾಗಿದೆ. ಈ ಮೇಲಿನದರ ಜೊತೆಗೆ ಹೆಚ್ಚುವರಿಯಾಗಿ, ಆರಂಭಿಕ ಅವಧಿಯಲ್ಲಿ ರಿಟರ್ನ್ ಸಲ್ಲಿಕೆಯಲ್ಲಿ ವೈಫಲ್ಯಗಳು ಆದರೆ ಯಾವುದೇ ತಡವಾದ ಶುಲ್ಕ ಮತ್ತು ದಂಡವನ್ನು ವಿಧಿಸಲಾಗುವುದಿಲ್ಲ.

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ವ್ಯವಹಾರಗಳು ಮೊದಲು ನಮೂನೆ ಜಿಎಸ್ಟಿಆರ್-3ಬಿ ಅನ್ನು ಸಲ್ಲಿಸಬೇಕು. ಈ ಲೇಖನದಲ್ಲಿ ನಮೂನೆ ಜಿಎಸ್ಟಿಆರ್-3ಬಿಯನ್ನು ಹೇಗೆ ಸಲ್ಲಿಸಬೇಕೆಂದು ಅರ್ಥಮಾಡಿಕೊಳ್ಳೋಣ.

ನೀವು ಟ್ಯಾಲಿ.ಇಆರ್ಪಿ 9 ರಿಲೀಸ್ 6 ಬಳಕೆ ಮಾಡುತ್ತಿದ್ದರೆ ಮುಂದಿನ ಲೇಖನಗಳನ್ನು ಓದಬೇಕೆಂದಿಲ್ಲ. ನಮೂನೆ ಜಿಎಸ್ಟಿಆರ್-3ಬಿಗೆ ಬೆಂಬಲ ನೀಡುವ ನಮ್ಮ ಹೊಸ ಉತ್ಪನ್ನ ಬಿಡುಗಡೆಗೊಂಡಿದೆ- ಡೌನ್ ಲೋಡ್ ಮಾಡಿಕೊಳ್ಳಿ. ಪರ್ಯಾಯವಾಗಿ, ಟ್ಯಾಲಿ.ಇಆರ್ಪಿ 9 ಪ್ಯಾನಲ್ ನಲ್ಲಿ ಆವೃತ್ತಿಯನ್ನು ಕ್ಲಿಕ್ ಮಾಡಿ ಮತ್ತು ಅಪ್ ಡೇಟ್ ವಿಭಾಗವನ್ನು ಕ್ಲಿಕ್ ಮಾಡಿ.

ನಮೂನೆ ಜಿಎಸ್ಟಿಆರ್-3ಬಿಯು 6 ಕೋಷ್ಟಕಗಳನ್ನು ಹೊಂದಿದೆ. ಹೊರ ಪೂರೈಕೆ, ಆಂತರಿಕ, ಲಭ್ಯವಿರುವ ಐಟಿಸಿ ಮತ್ತು ತೆರಿಗೆ ಪಾವತಿ ವಿವರ ಇತ್ಯಾದಿ ಒಟ್ಟು ವಿವರವನ್ನು ಇದರಲ್ಲಿ ಭರ್ತಿ ಮಾಡಬೇಕು. ಇದನ್ನು ವಿವರವಾಗಿ ಅರ್ಥಮಾಡಿಕೊಳ್ಳೋಣ:

1.ಹೊರಗಿನ ಪೂರೈಕೆ ಮತ್ತು ಒಳಗಿನ ಪೂರೈಕೆಗಳ ವಿವರಗಳು ರಿವರ್ಸ್ ಚಾರ್ಜ್ ಗೆ ಬಾಧ್ಯತೆ ಹೊಂದಿವೆ.

Outward Inward Supplies

ಮೇಲಿನ ಕೋಷ್ಟಕದಲ್ಲಿ (3.1), ನೀವು ಒಟ್ಟು ತೆರಿಗೆಯ ಜೊತೆಗೆ (ಐಜಿಎಸ್ಟಿ, ಸಿಜಿಎಸ್ಟಿ, ಎಸ್ಜಿಎಸ್ಟಿ/ಯುಟಿಜಿಎಸ್ಟಿ) ಈ ಮುಂದಿನ ಪೂರೈಕೆಯ ಲಕ್ಷಣಗಳಿಗೆ ತಕ್ಕಂತೆ ಒಟ್ಟು ತೆರಿಗೆ ವಿಧಿಸಬಹುದಾದ ಮೌಲ್ಯವನ್ನು (ರಾಜ್ಯದೊಳಗೆ ಮತ್ತು ಹೊರರಾಜ್ಯಗಳೆರಡಕ್ಕೂ) ಕಂಡುಹಿಡಿಯಬೇಕು:

   1. ಇತರೆ ಶೂನ್ಯ ದರ, ನಿಲ್ ದರ ಮತ್ತು ವಿನಾಯಿತಿ ಇತ್ಯಾದಿ ತೆರಿಗೆ ವಿಧಿಸಬಲ್ಲ ಹೊರ ಪೂರೈಕೆಗಳು

 

   2. ಹೊರಗಿನ ತೆರಿಗೆವಿಧಿಸಬಲ್ಲ ಪೂರೈಕೆಗಳು (ಶೂನ್ಯ ದರಗಳು)

 

   3. ನಿಲ್ ಶ್ರೇಯಾಂಕ ಮತ್ತು ವಿನಾಯಿತಿ ಇರುವ ಹೊರ ಪೂರೈಕೆಗಳು

 

   4. ರಿವರ್ಸ್ ಶುಲ್ಕ ಆಧಾರದಲ್ಲಿ ಬಾಧ್ಯತೆಯ ಪಾವತಿಯ ಒಳಗಿನ ಪೂರೈಕೆಗಳು

 

  5. ಜಿಎಸ್ಟಿಯೇತರ ಹೊರಗಿನ ಪೂರೈಕೆಗಳು

2. ನೋಂದಾಯಿಸದೆ ಇರುವ ವ್ಯಕ್ತಿಗಳಿಗೆ, ಸಂಯೋಜಿತ ವಿತರಕರಿಗೆ ಮತ್ತು ಯುಐಎನ್ ಹೊಂದಿರುವವರಿಗೆ ಮಾಡಿರುವ ಹೊರ ರಾಜ್ಯಕ್ಕೆ ಪೂರೈಕೆಗಳು

Inter state supply
ಕೋಷ್ಟಕ 3.1ರಲ್ಲಿ ಬಾಹ್ಯಾಪೂರೈಕೆಯನ್ನು ಘೋಷಿಸಲಾಗಿದ್ದು, ಮೊದಲ ಪಾಯಿಂಟ್ ನಲ್ಲಿ ಚರ್ಚಿಸಲಾಗಿದೆ, ನೋಂದಾಯಿಸದೆ ಇರುವ ವ್ಯಕ್ತಿಗಳಿಗೆ, ಸಂಯೋಜಿತ ವಿತರಕರಿಗೆ ಮತ್ತು ಯುಐಎನ್ ಹೊಂದಿರುವವರಿಗೆ ಹೊರರಾಜ್ಯಕ್ಕೆ ಬಾಹ್ಯಾ ಪೂರೈಕೆ ಮಾಡುವ ಸಂದರ್ಭದಲ್ಲಿ ನೀವು ಬ್ರೇಕ್ ಅಪ್ ಮಾಡುವ ಅಗತ್ಯವಿರುತ್ತದೆ. ಈ ಪೂರೈಕೆಗಳಿಗೆ ರಾಜ್ಯವಾರು/ಕೇಂದ್ರಾಡಳಿತ ಪ್ರದೇಶವಾರು ತೆರಿಗೆ ವಿಧಿಸಬಹುದಾದ ಮೌಲ್ಯ ಮತ್ತು ಒಟ್ಟು ಐಜಿಎಸ್ಟಿಯ ವಿವರವನ್ನು ನೀವು ಗ್ರಹಿಸುವ ಅವಶ್ಯಕತೆ ಇರುತ್ತದೆ.

3. ಲಭ್ಯ ಆದಾನ ತೆರಿಗೆ ಪಾವತಿಯ ವಿವರಗಳು

eligible ITC
ಮೇಲಿನ ಕೋಷ್ಟಕದಲ್ಲಿ ನೀವು ಐಟಿಸಿ ಲಭ್ಯತೆ, ವಿಲೋಮವಾದ ಐಟಿಸಿಯನ್ನು ಮತ್ತು ಬರಲಿರುವ ನಿವ್ವಳ ಐಟಿಸಿ ಲಭ್ಯತೆಯನ್ನು ನೀವು ಗ್ರಹಿಸುವ ಅವಶ್ಯಕತೆ ಇರುತ್ತದೆ. ಈ ಮುಂದಿನ ವಿವರಗಳನ್ನು ನೀವು ಗ್ರಹಿಸಬೇಕಾಗುತ್ತದೆ:

 1. ಲಭ್ಯವಿರುವ ಐಟಿಸಿ(ಪೂರ್ತಿ ಅಥವಾ ಭಾಗಶಃ): : ಐಟಿಸಿ ಲಭ್ಯತೆ ಇರುವ ಆಂತರಿಕ ಪೂರೈಕೆಗೆ ನೀವು ಬ್ರೇಕ್ ಅಪ್ ನೀಡುವ ಅವಶ್ಯಕತೆ ಇರುತ್ತದೆ. ಈ ಮುಂದಿನ ಅಂಶಗಳನ್ನು ನೀವು ಗ್ರಹಿಸಬೇಕಾದ ಅವಶ್ಯಕತೆ ಇರುತ್ತದೆ:
 • ಸರಕುಗಳ ಆಮದು: ಆಮದು ಮಾಡಿದ ಸರಕುಗಳಿಗೆ ಪಾವತಿಸಿದ ಐಜಿಎಸ್ಟಿಗೆ ಆದಾನ ತೆರಿಗೆ ಪಾವತಿ.
 • ಸೇವೆಗಳ ಆಮದು: ಆಮದು ಮಾಡಿದ ಸೇವೆಗಳಿಗೆ ಪಾವತಿಸಿದ ಐಜಿಎಸ್ಟಿಗೆ ಆದಾನ ತೆರಿಗೆ ಪಾವತಿ.
 • ಆಂತರಿಕ ಪೂರೈಕೆಗಳು ಪ್ರತಿಲೋಮ ಶುಲ್ಕದ ಬಾಧ್ಯತೆ ಹೊಂದಿವೆ: : ಸರಕು ಅಥವಾ ಸೇವೆಯ ಆಮದು ಹೊರತುಪಡಿಸಿದ ಪ್ರಾಯೋಜಕ ಸೇವೆಗಳು, ಯುಆರ್ಡಿಯಿಂದ ಖರೀದಿ ಮತ್ತು ಇತರೆ ಪ್ರತಿಲೋಮ ಶುಲ್ಕಗಳ ಬಾಧ್ಯತೆ ಹೊಂದಿರುವ ಆಂತರಿಕ ಪೂರೈಕೆಗಳಿಗೆ ಜಿಎಸ್ಟಿ ಪಾವತಿಸಿರುವುದಕ್ಕೆ ಐಟಿಸಿಯನ್ನು ನೀವು ಗ್ರಹಿಸಬೇಕು. ಹೆಚ್ಚಿನ ಮಾಹಿತಿ ತಿಳಿಯಲು ಪ್ರತಿಲೋಮ ಶುಲ್ಕದ ಬಾಧ್ಯತೆ ಹೊಂದಿರುವ ಆಂತರಿಕ ಪೂರೈಕೆಗಳು ಲೇಖನವನ್ನು ಓದಿರಿ.
 • ಐಎಸ್ಟಿಯಿಂದ ಆಂತರಿಕ ಪೂರೈಕೆಗಳು: ಆದಾನ ಸೇವೆ ವಿತರಕರಿಂದ (ಐಎಸ್ ಡಿ)ಯಿಂದ ದೊರಕಿರುವ ಆದಾನ ತೆರಿಗೆ ಪಾವತಿ. ಹೆಚ್ಚಿನ ಮಾಹಿತಿಗೆ ನಮ್ಮ ISD for more details.
 • ಇತರೆ ಎಲ್ಲಾ ಐಟಿಸಿ: ಮೇಲಿನವುಗಳನ್ನು ಹೊರತುಪಡಿಸಿ, ಇತರೆ ಒಳಗಿನ ಪೂರೈಕೆಗಳಿಗೆ ಐಟಿಸಿಯ ವಿವರವನ್ನು ಇಲ್ಲಿ ನೀಡಲಾಗಿದೆ.
 1. ವಿಲೋಮವಾದ ಆದಾನ ತೆರಿಗೆಯ ವಿವರ: ಕೆಳಗೆ ನೀಡಲಾದ ಕೋಷ್ಟಕದಲ್ಲಿ ನೀವು ವ್ಯವಹಾರದ ಉದ್ದೇಶಕ್ಕೆ ಅಲ್ಲದ ಅಥವಾ ವಿನಾಯಿತಿ ಇರುವ ಪೂರೈಕೆಗೆ ಭಾಗಶಃ ಬಳಕೆ ಮಾಡಿರುವ ಆದಾನಗಳಿಗೆ/ಆದಾನ ಸೇವೆಗಳಿಗೆ/ ಬಂಡವಾಳ ಸರಕುಗಳಿಗೆ ಐಟಿಸಿ ಹಿಂತುರುಗುವುದನ್ನು ನೀವು ಗ್ರಹಿಸಬೇಕು. ಇದರೊಂದಿಗೆ, ಬಂಡವಾಳ ಸರಕುಗಳಿಗೆ ಮತ್ತು ಘಟಕ ಮತ್ತು ಯಂತ್ರಗಳ ತೆರಿಗೆ ಭಾಗದ ಸವಕಲಿ ಇದ್ದರೆ, ಐಟಿಸಿಗೆ ಅವಕಾಶ ಇರುವುದಿಲ್ಲ.

ITC Reverse
ಕೋಷ್ಟಕ 4(ಎ)ನಲ್ಲಿ ವರದಿ ಮಾಡಿದ ಐಟಿಸಿ ಲಭ್ಯತೆಯನ್ನು ಮೇಲಿನ ಕೋಷ್ಟಕದಲ್ಲಿ ವಿಲೋಮ ಮಾಡಿದ ಐಟಿಸಿಯನ್ನು ಕಡಿಮೆ ಮಾಡುವ ಅಗತ್ಯವಿದೆ. ಬಾಕಿ ಉಳಿದ ಮೊತ್ತವು ನಿಮಗೆ ಲಭ್ಯವಿರುವ ಐಟಿಸಿಯಾಗಿದೆ.

 1. ಐಟಿಸಿ ಅಲಭ್ಯತೆಯ ವಿವರ: ಐಟಿಸಿಗೆ ಅನರ್ಹವಾದ ಪೂರೈಕೆಯ ಪಟ್ಟಿಗೆ ಹೋಗಿ ಪರಿಶೀಲಿಸಿರಿ..

Ineligible ITC

4. ವಿನಾಯಿತಿ ಇರುವ, ನಿಲ್-ಶ್ರೇಯಾಂಕದ ಮತ್ತು ಜಿಎಸ್ಟಿಯೇತರ ಆಂತರಿಕ ಪೂರೈಕೆಯ ವಿವರ

ಸಂಯೋಜಿತ ವಿತರಕರಿಂದ, ನಿಲ್ ದರ ಮತ್ತು ವಿನಾಯಿತಿ ಇರುವ ಆಂತರಿಕ ಪೂರೈಕೆಯ ವಿವರವನ್ನು ನೀವು ಗ್ರಹಿಸುವ ಅಗತ್ಯವಿರುತ್ತದೆ. ಇದರೊಂದಿಗೆ ಜಿಎಸ್ಟಿಯೇರ ಆಂತರಿಕ ಪೂರೈಕೆಯನ್ನು ಪ್ರತ್ಯೇಕವಾಗಿ ನಮೋದಿಸುವ ಅಗತ್ಯವಿರುತ್ತದೆ. ಮೇಲೆ ಚರ್ಚಿಸಿದ ಪೂರೈಕೆ ಮೌಲ್ಯಗಳನ್ನು ರಾಜ್ಯದೊಳಗಿನ ಮತ್ತು ಹೊರರಾಜ್ಯದ ಪೂರೈಕೆಗಳ ಕುರಿತು ಪ್ರತ್ಯೇಕವಾಗಿ ಕಂಡುಹಿಡಿಯಬೇಕು
non gst supply

ತೆರಿಗೆ ಪಾವತಿ

Tax Payment

ಮೇಲಿನ ಕೋಷ್ಟಕದಲ್ಲಿ (6.1), ನೀವು ಪಾವತಿಸಬೇಕಿರುವ ಸ್ವಯಂ ಗುರುತಿಸಲ್ಪಟ್ಟ ತೆರಿಗೆಯನ್ನು ಘೋಷಿಸಬೇಕು. ಇದು ಕೋಷ್ಟಕ ಸಂಖ್ಯೆ 3.1ರಲ್ಲಿ ಕಂಡುಹಿಡಿದಿರುವ ಆಂತರಿಕ ಮತ್ತು ಬಾಹ್ಯಾ ಪೂರೈಕೆಗೆ ವಿಲೋಮ ಶುಲ್ಕ ಪಾವತಿಸುವ ಬಾಧ್ಯತೆ ಇರುವುದನ್ನು ಆಧರಿಸಿದೆ. ಈ ತೆರಿಗೆವಾರು ತೆರಿಗೆ ಪಾವತಿ ಬ್ರೇಕ್ ಅಪ್ ಐಟಿಸಿ ಬಳಸಲು ಇರುವ ದಾರಿ ಮಯಗಯು ಹಣದ ಹೂಡಿಕೆಯನ್ನು ಒದಗಿಸಬೇಕು.

6 ಟಿಡಿಎಸ್/ಟಿಸಿಎಸ್ ಪಾವತಿ

TDS, TCS Credit

ಮೇಲಿನ ಕೋಷ್ಟಕದಲ್ಲಿ, ನೀವು ಟಿಡಿಎಸ್ (ಸರಕಾರ ತಡೆಹಿಡಿದ ತೆರಿಗೆ) ಮತ್ತು ಟಿಸಿಎಸ್ (ಇ-ವಾಣಿಜ್ಯ ನಿರ್ವಾಹಕರು ತಡೆಹಿಡಿದ ತೆರಿಗೆ)ಯ ವಿವರವನ್ನು ನೀವು ಗ್ರಹಿಸಬೇಕು. ಆದರೂ, ಜಿಎಸ್ಟಿ ಆರಂಭದಲ್ಲಿ ಈ ನಿಬಂಧನೆಯನ್ನು ತಡೆಹಿಡಿಯಲಾಗಿದೆ. ಇದರ ಪ್ರಕಾರ, ಸರಕಾರ ಸೂಚಿಸುವವರೆಗೆ ಟಿಡಿಎಸ್ ಮತ್ತು ಟಿಸಿಎಸ್ ಅನ್ವಯವಾಗುವುದಿಲ್ಲ.

ಅಪ್ ಡೇಟ್: ನಮೂನೆ ಜಿಎಸ್ಟಿಆರ್-3ಬಿಗೆ ಬೆಂಬಲ ನೀಡುವ ನಮ್ಮ ಹೊಸ ಉತ್ಪನ್ನ ಲಭ್ಯವಿದೆ- ಈಗಲೇ ಡೌನ್ ಲೋಡ್ ಮಾಡಿಕೊಳ್ಳಿ. ಹೆಚ್ಚಿನ ಮಾಹಿತಿಗೆ ಜಿಎಸ್ಟಿ-ರೆಡಿ ಟ್ಯಾಲಿ.ಇಆರ್ಪಿ 9 ರಿಲೀಸ್ 6ನಲ್ಲಿ ನಮೂನೆ ಜಿಎಸ್ಟಿಆರ್ 3ಬಿ ನಿರ್ವಹಣೆ ವಿಭಾಗಕ್ಕೆ ಹೋಗಿರಿ.

ಪ್ರಮುಖವಾಗಿ ಗಮನಿಸಿ:

ತೆರಿಗೆ ವಿಧಿಸಬಲ್ಲ ಪೂರೈಕೆಯ ಮೌಲ್ಯವನ್ನು ನಿವ್ವಳ ತೆರಿಗೆವಿಧಿಸಬಲ್ಲ ಮೌಲ್ಯವೆಂದು ಹೇಳಲಾಗುತ್ತದೆ. ಇದನ್ನು ಲೆಕ್ಕಹಾಕಲು ಈ ಕೆಳಗಿನ ಸೂತ್ರವನ್ನು ಬಳಸಿರಿ:

ತೆರಿಗೆ ವಿಧಿಸಬಲ್ಲ ಮೌಲ್ಯ = ಸರಕುಪಟ್ಟಿಯ ಮೌಲ್ಯ + ಡೆಬಿಟ್ ನೋಟ್ಸ್ ಮೌಲ್ಯಗಳು – ಕ್ರೆಡಿಟ್ ನೋಟ್ ಗಳ ಮೌಲ್ಯಗಳು + ಸರಕುಪಟ್ಟಿ ಪಡೆದ ತಿಂಗಳಲ್ಲಿ ಅಲ್ಲದೆ ಮುಂಗಡ ಸ್ವೀಕರಿಸಿದ ಮೌಲ್ಯ- ಸರಕುಪಟ್ಟಿಗೆ ತಕ್ಕಂತೆ ಮುಂಗಡ ಹೊಂದಾ

Are you GST ready yet?

Get ready for GST with Tally.ERP 9 Release 6

466,271 total views, 210 views today

Yarab A

Author: Yarab A

Yarab is associated with Tally since 2012. In his 7+ years of experience, he has built his expertise in the field of Accounting, Inventory, Compliance and software product for the diverse industry segment. Being a member of ‘Centre of Excellence’ team, he has conducted several knowledge sharing sessions on GST and has written 200+ blogs and articles on GST, UAE VAT, Saudi VAT, Bahrain VAT, iTax in Kenya and Business efficiency.