ವ್ಯವಹಾರವೊಂದರಲ್ಲಿ ಮಾರಾಟ ಮಾಡಿದ ಸರಕನ್ನು ವಾಪಸ್ ನೀಡುವುದು ಸಾಮಾನ್ಯ ಸಂಗತಿ. ಈಗಿನ ತೆರಿಗೆ ಪದ್ಧತಿಯಲ್ಲಿ, ಯಾವುದಾದರೂ ಸರಕನ್ನು ಗ್ರಾಹಕ ವಾಪಸ್ ನೀಡಿದರೆ, ಮಾರಾಟದ ಒಟ್ಟು ವಹಿವಾಟಿನಲ್ಲಿ ವಾಪಸ್ ಬಂದ ಸರಕಿನ ಮೊತ್ತವನ್ನು ಕಡಿಮೆ ಮಾಡಲು ಅವಕಾಶವಿದೆ. ಇದರಿಂದ ತೆರಿಗೆ ವಿನಾಯಿತಿ ಪಡೆಯಲು ರಾಜ್ಯದಿಂದ ರಾಜ್ಯದಲ್ಲಿ ಭಿನ್ನವಾಗಿದ್ದರೂ, ಸಾಮಾನ್ಯವಾಗಿ ಮಾರಾಟಗೊಂಡ 6 ತಿಂಗಳಲ್ಲಿ ಈ ಪ್ರಕ್ರಿಯೆ ಜರುಗುತ್ತದೆ.

ಜುಲೈ 1, 2017ರಂದು ಅನುಷ್ಠಾನಕ್ಕೆ ತರಲಿರುವ ಜಿಎಸ್ಟಿಯಿಂದ ಪರೋಕ್ಷ ತೆರಿಗೆ ವಿಧಾನದಲ್ಲಿ ಒಂದು ಪ್ರಮುಖ ಸುಧಾರಣೆ ಸಂಭವಿಸುವ ನಿರೀಕ್ಷೆಯಿದೆ. “ಪೂರೈಕೆ’’ ಎನ್ನುವುದು ತೆರಿಗೆ ವಿಧಿಸಬಹುದಾದ ಕಾರ್ಯಕ್ರಮ, ಹೀಗಾಗಿ ಜಿಎಸ್ಟಿ ಪೂರ್ವದಲ್ಲಿ ಮಾರಾಟ ಮಾಡಿರುವ ಸರಕುಗಳಿಗೆ, ಆದರೆ, ಜಿಎಸ್ಟಿ ಪರಿಚಯಿಸಿದಾಗ ಅಥವಾ ಪರಿಚಯಿಸಿದ ಬಳಿಕ ವಾಪಸ್ ಬಂದ ಸರಕಿಗೆ ತೆರಿಗೆ ಅಳವಡಿಕೆ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದು ವ್ಯವಹಾರಕ್ಕೆ ಅತ್ಯಂತ ಅಗತ್ಯವಾದ ವಿಷಯವಾಗಿದೆ.

Moving to GST: For Registered Businesses

Moving to GST: Can I Avail Input Credit on Closing Stock?

Supply of Goods and Services: What does it Mean?

ನಿಮ್ಮಲ್ಲಿ ಒಂದಿಷ್ಟು ಪ್ರಶ್ನೆಗಳಿರಬಹುದು

  • ನೋಂದಾಯಿತ ತೆರಿಗೆದಾರ ವ್ಯಕ್ತಿಯಿಂದ ತೆರಿಗೆ ವಿಧಿಸಬಹುದಾದ ಸರಕು ವಾಪಸ್ ಬಂದರೆ ಏನಾಗಬಹುದು?
  • ನೋಂದಾಯಿಸದೆ ಇರುವ ವ್ಯಕ್ತಿಯಿಂದ ತೆರಿಗೆ ವಿಧಿಸಬಹುದಾದ ಸರಕು ವಾಪಸ್ ಬಂದರೆ ಏನಾಗಬಹುದು?
  • ಈಗಿನ ತೆರಿಗೆ ವಿಧಾನದಲ್ಲಿ ವಿನಾಯಿತಿ ಇರಬಹುದಾದ, ಜಿಎಸ್ಟಿಯಡಿಯಲ್ಲಿ ತೆರಿಗೆ ವಿಧಿಸಬಹುದಾದ ಸರಕು ವಾಪಸ್ ಬಂದರೆ ಏನಾಗಬಹುದು?

ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಇದನ್ನು ಈ ರೀತಿ ವಿಭಾಗ ಮಾಡಿಕೊಳ್ಳೋಣ:

  • ತೆರಿಗೆ ವಿಧಿಸಬಲ್ಲ ಸರಕುಗಳ ವಾಪಸಾತಿ
  • ತೆರಿಗೆ ವಿನಾಯಿತಿ ಇರುವ ಸರಕಿನ ವಾಪಸಾತಿ

ತೆರಿಗೆ ವಿಧಿಸಬಲ್ಲ ಸರಕುಗಳ ವಾಪಸಾತಿ

ಜಿಎಸ್ಟಿ ಪೂರ್ವದಲ್ಲಿ ಮಾರಾಟ ಮಾಡಿರುವ ಸರಕಿಗೆ, ಜಿಎಸ್ಟಿ ಪರಿಚಯಿಸಿದಾಗ ಅಥವಾ ಪರಿಚಯಿಸಿದ ಬಳಿಕ ವಾಪಸ್ ಬಂದ ಸರಕಿನ ಸನ್ನಿವೇಶವನ್ನು ಅರ್ಥಮಾಡಿಕೊಳ್ಳೋಣ. ನೋಂದಾಯಿತ ವ್ಯಕ್ತಿ ಅಥವಾ ನೋಂದಾಯಿಸದೆ ಇರುವ ವ್ಯಕ್ತಿ ಸರಕನ್ನು ವಾಪಸ್ ನೀಡಿರಬಹುದು.

ಸನ್ನಿವೇಶ E ವಿವರಣೆ ಉದಾಹರಣೆ ತೆರಿಗೆ ವಿಧಿಸುವಿಕೆ
ನೋಂದಾಯಿತ ವ್ಯಕ್ತಿಯಿಂದ ಹಿಂತುರಿಗಿಸಲ್ಪಟ್ಟ ಸರಕು ನೋಂದಾಯಿತ ವ್ಯಕ್ತಿಯಿಂದ ತೆರಿಗೆ ವಿಧಿಸಬಲ್ಲ ಸರಕು ಹಿಂತುರಿಗಿಸಲ್ಪಟ್ಟರೆ ಅದನ್ನು ಪೂರೈಕೆ ಎಂದು ಪರಿಗಣಿಸಲಾಗುತ್ತದೆ, ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಇದು ಯಾಕೆಂದರೆ, ಸರಕು ಖರೀದಿಸಿ ದಿನಾಂಕದಂದು ತೆರಿಗ ಪಾವತಿಸಿದ ಸ್ವೀಕೃತಿದಾರರಿಗೆ ಆದಾನ ತೆರಿಗೆ ಪದ್ಧತಿಸೌಲಭ್ಯ ನೀಡಲಾಗಿದೆ ಮತ್ತು ಹೆಚ್ಚಾಗಿ ಆತ ಇದನ್ನು
ಬಳಸಿರಬಹುದು ಅಥವಾ ಜಿಎಸ್ಟಿಗೆ ಆದಾನ ತೆರಿಗೆ ಪದ್ಧತಿಅನ್ನು ಮುಂದುವರೆಸಲು ಅವಕಾಶ ನೀಡಲಾಗುತ್ತದೆ.
ಜಿಎಸ್ಟಿಯಡಿ ಅಂತಹ ಸರಕು ಹಿಂತುರುಗಿಸುವಿಕೆಯಾದರೆ, ಸರಕನ್ನು ವಾಪಸ್ ನೀಡಿದವನಿಗೆ ಜಿಎಸ್ಟಿ ವಿಧಿಸಲಾಗುತ್ತದೆ ಮತ್ತು ಜಿಎಸ್ಟಿ ಪಾವತಿಸಿರುವ ಮಾರಾಟ ವಾಪಸಾತಿಗೆ ಮೂಲ ಮಾರಾಟಗಾರ ಆದಾನ ತೆರಿಗೆ ಪದ್ಧತಿಪಡೆಯಬಹುದಾಗಿದೆ..
 

ಕರ್ನಾಟಕದಲ್ಲಿ ನೋಂದಾಯಿಸಿರುವ ರವೀಂದ್ರ ಆಟೋಮೊಬೈಲ್ಸ್ ಸಂಸ್ಥೆಯು ಬಿಡಿಭಾಗಗಳಿಗೆ ನೋಂದಾಯಿತ ಮಧ್ಯವರ್ತಿ ಎಂದಿರಲಿ. ಜೂನ್ 15, 2017ರಂದು ರವೀಂದ್ರ ಆಟೋಮೊಬೈಲ್ಸ್ 1 ಲಕ್ಷ ರೂ. ಮೌಲ್ಯದ 30 ಬಿಡಿಭಾಗಗಳನ್ನು ಶೇಜಡ 14.5ರಷ್ಟು ವ್ಯಾಟ್ ನೊಂದಿಗೆ. ರಾಜೇಶ್ ಆಟೋ ಪಾರ್ಟ್ಸ್ ಗೆ ಮಾರಾಟ ಮಾಡಿದೆ. ಕರ್ನಾಟಕದಲ್ಲಿಯೇ ನೋಂದಾಯಿಸಲ್ಪಟ್ಟ ರಾಜೇಶ್ ಆಟೋ ಪಾರ್ಟ್ಸ್ 15 ಬಿಡಿಭಾಗಗಳನ್ನು ರವೀಂದ್ರ ಆಟೊಮೊಬೈಲಿಗೆ ವಾಪಸ್ ನೀಡಿದೆ.

ರಾಜೇಶ್ ಆಟೋ ಪಾರ್ಟ್ಸ್ ವಾಪಸ್ ನೀಡಿರುವ ಸರಕನ್ನು ಪೂರೈಕೆ ಎಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ಜಿಎಸ್ಟಿ ಅನ್ವಯವಾಗುತ್ತದೆ. ವಾಪಸ್ ಖರೀದಿಸಲು ರಾಜೇಶ್ ಆಟೋ ಪಾರ್ಟ್ಸ್ ಶೇಕಡ 18ರಷ್ಟು ಜಿಎಸ್ಟಿ ವಿಧಿಸುತ್ತದೆ.
ನೋಂದಾಯಿಸದೆ ಇರುವ ವ್ಯಕ್ತಿಯಿಂದ ತೆರಿಗೆ ವಿಧಿಸಬಹುದಾದ ಸರಕು ವಾಪಸ್ ಬಂದರೆ. ನೋಂದಾಯಿಸದೆ ಇರುವ ವ್ಯಕ್ತಿ ತೆರಿಗೆ ವಿಧಿಸಬಹುದಾದ ಸರಕನ್ನು ವಾಪಸ್ ನೀಡಿದರೆ, ಈಗಿನ ತೆರಿಗೆ ಪದ್ಧತಿಯಲ್ಲಿ ತೆರಿಗೆ/ಸುಂಕವನ್ನು ಮರುಪಾವತಿ ಅಥವಾ ವಾಪಸ್ ಪಡೆಯಲು ಮಾರಾಟಗಾರರು ಅರ್ಹರಾಗಿರುತ್ತಾರೆ. ಈ ರೀತಿ ಮರುಪಾವತಿಬಯಸುವ ಮಾರಾಟಗಾರರಿಗೆ ಈ ಮುಂದಿನ ನಿಬಂಧನೆಗಳಿವೆ:

  1. ಹಿಂತುರುಗಿಸಲ್ಪಟ್ಟ ಸರಕನ್ನು ಜಿಎಸ್ಟಿ ಅಳವಡಿಕೆ ಮಾಡಿದ 6 ತಿಂಗಳಿಗಿಂತ ಮೊದಲು ಮಾರಾಟ ಮಾಡಿರಬಾರದು.
  2.
  ಜಿಎಸ್ಟಿ ಅನುಷ್ಠಾನಕ್ಕೆ ಬಂದ ನಂತರ 6 ತಿಂಗಳೊಳಗೆ ಹಿಂತುರಿಗಿಸಲ್ಪಟ್ಟ ಸರಕಾಗಿರಬೇಕು..
ಕರ್ನಾಟಕದಲ್ಲಿ ನೋಂದಾಯಿಸಿರುವ ರವೀಂದ್ರ ಆಟೋಮೊಬೈಲ್ಸ್ ಸಂಸ್ಥೆಯು ಬಿಡಿಭಾಗಗಳ ಮಧ್ಯವರ್ತಿ. ಜೂನ್ 25, 2017ರಂದು ರವೀಂದ್ರ ಆಟೋಮೊಬೈಲ್ಸ್ ತನ್ನ ಗ್ರಾಹಕನಾದ ಶ್ರೀಯುತ ಕುಮಾರ್ ಗೆ ಶೇಕಡ 14.5 ವ್ಯಾಟ್ ನೊಂದಿಗೆ 10 ಸಾವಿರ ರೂ. ಮೌಲ್ಯದ ಬಿಡಿಭಾಗಗಳನ್ನು ಮಾರಾಟ ಮಾಡಿತ್ತು. ಜುಲೈ 2, 2017ರಂದು ಶ್ರೀಯುತ
ಕುಮಾರ್ ಅವರು ರವೀಂದ್ರ ಆಟೋಮೊಬೈಲಿಗೆ ಬಿಡಿಭಾಗಗಳನ್ನು ಹಿಂತುರುಗಿಸಿದರು.
1,450 ರೂ. ಹಣವನ್ನು ಮರುಪಾವತಿಪಡೆಯಲು ರವೀಂದ್ರ ಆಟೋಮೊಬೈಲ್ಸ್ ಅರ್ಹತೆ ಪಡೆಯುತ್ತದೆ. ಯಾಕೆಂದರೆ, ಈ ಮಾರಾಟವು ಜಿಎಸ್ಟಿ ಅನುಷ್ಠಾನಕ್ಕೆ ಬಂದ ಪೂರ್ವದ 6 ತಿಂಗಳ ಒಳಗೆ ನಡೆದ ಮಾರಾಟವಾಗಿದೆ. ಹಾಗೂ ಜಿಎಸ್ಟಿ ಅನುಷ್ಠಾನಕ್ಕೆ ಬಂದ ನಂತರದ 6 ತಿಂಗಳೊಳಗೆ ಸರಕು ಹಿಂತುರಿಗಿಸಲ್ಪಟ್ಟಿದೆ.

ತೆರಿಗೆ ವಿನಾಯಿತಿ ಇರುವ ಸರಕುಗಳ ಹಿಂತುರುಗಿಸುವಿಕೆ

ಜಿಎಸ್ಟಿ ಅನುಷ್ಠಾನಕ್ಕೆ ಬರುವ ಮೊದಲು, ಆದರೆ, ಜಿಎಸ್ಟಿ ಅನುಷ್ಠಾನಕ್ಕೆ ಬಂದ ಬಳಿಕ ತೆರಿಗೆ ವಿಧಿಸಬಹುದಾದ ಸರಕುಗಳ ಮತ್ತು ಜಿಎಸ್ಟಿ ಅಳವಡಿಸಿದ ಬಳಿಕ ವಾಪಸ್ ನೀಡಲ್ಪಟ್ಟ ಈ ಸರಕಿನ ಸನ್ನಿವೇಶವನ್ನು ಪರಿಗಣಿಸೋಣ.

ಸನ್ನಿವೇಶ ವಿತರಣೆ ಉದಾಹರಣೆ ತೆರಿಗೆ ವಿಧಿಸುವಿಕೆ
ನೋಂದಾಯಿತ ವ್ಯಕ್ತಿಯು ಸರಕನ್ನು ಹಿಂತುರುಗಿಸಿದಾಗ ಈಗಿನ ತೆರಿಗೆಯನ್ವಯ ಮಾರಾಟ ಮಾಡಲ್ಪಟ್ಟ ತೆರಿಗೆ ವಿನಾಯಿತಿ ಇರುವ ಸರಕನ್ನು ಜಿಎಸ್ಟಿ ಅಳವಡಿಸಿದ ಬಳಿಕ ವಾಪಸ್ ನೀಡಲಾಗಿದೆ, ಇದಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಇದು ಅನ್ವಯವಾಗಲು ಈ ಮುಂದಿನ ನಿಯಮಗಳಂತೆ ಇರಬೇಕು.

  1. ಹಿಂತುರುಗಿಸಲ್ಪಟ್ಟ ಸರಕನ್ನು ಜಿಎಸ್ಟಿ ಅಳವಡಿಕೆ ಮಾಡಿದ 6 ತಿಂಗಳಿಗಿಂತ ಮೊದಲು ಮಾರಾಟ ಮಾಡಿರಬಾರದು.
  2. ಜಿಎಸ್ಟಿ ಅನುಷ್ಠಾನಕ್ಕೆ ಬಂದ ನಂತರ 6 ತಿಂಗಳೊಳಗೆ ಹಿಂತುರಿಗಿಸಲ್ಪಟ್ಟ
  1. ಜೂನ್ 15, 2017ರಂದು 1,00,000 ರೂ. ಮೌಲ್ಯದ ಮೌಲ್ಯವರ್ಧಿತ ತೆರಿಗೆ ವಿನಾಯಿತಿ ಇರುವ ಸರಕನ್ನು ರವೀಂದ್ರ ಆಟೋಮೊಬೈಲ್ಸ್ ಮಾರಾಟ ಮಾಡಿತ್ತು. ಜುಲೈ 20, 2017ರಂದು ಸರಕನ್ನು ರವೀಂದ್ರ ಆಟೋಮೊಬೈಲ್ಸಿಗೆ ವಾಪಸ್ ನೀಡಲಾಗಿತ್ತು.
  2. ಜೂನ್ 15, 2017ರಂದು ರವೀಂದ್ರ ಆಟೋಮೊಬೈಲ್ಸ್ 1 ಲಕ್ಷ ರೂ. ಮೌಲ್ಯದ ತೆರಿಗೆ ವಿನಾಯಿತಿ ಇರುವ ಸರಕನ್ನು ಮಾರಾಟ ಮಾಡಿದೆ. ಜನವರಿ 20, 2018ರಂದು ರವೀಂದ್ರ ಆಟೋಮೊಬೈಲ್ಸ್ ಬಿಡಿಭಾಗಗಳನ್ನು ವಾಪಸ್ ನೀಡಲಾಗಿದೆ.

 

  1. ಸರಕು ವಾಪಸ್ ನೀಡಿರುವುದಕ್ಕೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ಯಾಕೆಂದರೆ, ಜಿಎಸ್ಟಿ ಅನುಷ್ಠಾನಕ್ಕೆ ಬಂದ 6 ತಿಂಗಳ ಒಳಗೆ ಈ ಮಾರಾಟ ನಡೆದಿತ್ತು ಮತ್ತು ಜಿಎಸ್ಟಿ ಅನುಷ್ಠಾನಕ್ಕೆ ಬಂದ 6 ತಿಂಗಳೊಳಗೆ ಸರಕನ್ನು ವಾಪಸ್ ನೀಡಲಾಗಿತ್ತು.

  1. ಸರಕನ್ನು ವಾಪಸ್ ನೀಡಿದಾಗ ತೆರಿಗೆ ಪಾವತಿಸಬೇಕು. ಇದು ಯಾಕೆಂದರೆ, ಸರಕನ್ನು ವಾಪಸ್ ನೀಡಿರುವುದು ಜಿಎಸ್ಟಿ ಅನುಷ್ಠಾನಕ್ಕೆ ಬಂದ 6 ತಿಂಗಳ ನಂತರವಾಗಿದೆ.
  ವಾಪಸ್ ನೀಡಿರುವುದು ಜಿಎಸ್ಟಿ ಅನುಷ್ಠಾನಕ್ಕೆ ಬಂದ 6 ತಿಂಗಳ ನಂತರವಾಗಿದೆ.

ನೋಂದಾಯಿಸದೆ ಇರುವ ವ್ಯಕ್ತಿಯು ತೆರಿಗೆ ವಿಧಿಸಬಲ್ಲ ಸರಕನ್ನು ವಾಪಸ್ ನೀಡಿದಾಗ. ಈಗಿನ ತೆರಿಗೆ ವಿಧಾನದಲ್ಲಿ ಈ ಸರಕಿಗೆ ತೆರಿಗೆ ವಿಧಿಸಲಾಗುತ್ತಿರಲಿಲ್ಲ ಮತ್ತು ಈ ಸರಕನ್ನು ನೋಂದಾಯಿಸದೆ ಇರುವ ವ್ಯಕ್ತಿಯು ವಾಪಸ್ ನೀಡಿದ್ದಾನೆ. ಇದಕ್ಕೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ.ಜೂನ್ 25, 2017ರಂದು ರವೀಂದ್ರ ಆಟೋಮೊಬೈಲ್ಸ್ ಸುಮಾರು 10, 000 ರೂ. ಮೌಲ್ಯದ ಸರಕನ್ನು ಗ್ರಾಹಕರಾದ ಶ್ರೀಯುತ ಕುಮಾರ್ ಅವರಿಗೆ ಮಾರಾಟ ಮಾಡಲಾಗಿದೆ. ಈ ಸರಕಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಜುಲೈ 2, 2017ರಂದು ಶ್ರೀಯುತ ಕುಮಾರ್ ಅವರು ಈ ಸರಕನ್ನು ರವೀಂದ್ರ ಆಟೋಮೊಬೈಲ್ಸ್ ಗೆ ವಾಪಸ್ ನೀಡಿದ್ದಾರೆ..
.
ಇಂತಹ ವಾಪಸಾತಿಗೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ.

Are you GST ready yet?

Get ready for GST with Tally.ERP 9 Release 6

68,989 total views, 1 views today