ಜಿಎಸ್ಟಿಯ ಆಗಮನವಾಗಿದೆ. ಸ್ವಾತಂತ್ರ್ಯದ ನಂತರ ಆಗಮಿಸಿದ ಬೃಹತ್ ಆರ್ಥಿಕ ಮತ್ತು ತೆರಿಗೆ ಸುಧಾರಣೆಯನ್ನು ಸ್ವಾಗತಿಸಲು ಪೂರ್ತಿ ದೇಶವೇ ಮುಂದಾಗಿದೆ, ಇಲ್ಲಿ ನಿಮಗಾಗಿ ಪರಿಶೀಲನಾಪಟ್ಟಿಯನ್ನು ನೀಡಲಾಗಿದೆ, ಇದರಿಂದ ನೀವು ಜಿಎಎಸ್ಟಿಯಲ್ಲಿ ವ್ಯವಹಾರವನ್ನು ಸುಲಭವಾಗಿ ನಡೆಸಬಹುದಾಗಿದೆ.

ಜಿಎಸ್ಟಿಯಲ್ಲಿ ಪರಿಣಾಮಕಾರಿಯಾಗಿ ಮತ್ತು ತಡೆರಹಿತವಾಗಿ ಮಾಡುವ ಸಲುವಾಗಿ ನೀವು ತಿಳಿದಿರಬೇಕಾದ 5 ಪ್ರಮುಖ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.

1. ನೋಂದಣಿಯ ಪರಿವರ್ತನೆ

ಈಗಿನ ತೆರಿಗೆ ಪದ್ಧತಿಯಲ್ಲಿ ರಾಜ್ಯ ಮೌಲ್ಯವರ್ಧಿತ ತೆರಿಗೆ, ಕೇಂದ್ರ ಅಬಕಾರಿ, ಸೇವಾ ತೆರಿಗೆಯಡಿಯಲ್ಲಿ ನೋಂದಾಯಿಸಿರುವ ಮತ್ತು ಪಾನ್ ಹೊಂದಿರುವ ಯಾವುದೇ ವಿತರಕರಿಗೆ Form GST REG-25 ಮೂಲಕ ಜಿಎಸ್ಟಿಯ ತಾತ್ಕಾಲಿಕ ನೋಂದಣಿಯ ಅವಕಾಶ ನೀಡಲಾಗುತ್ತದೆ. ತಾತ್ಕಾಲಿಕ ನೋಂದಣಿ ದಾಖಲೆಪತ್ರ ನೀಡಿದ ನಂತರ ತಾತ್ಕಾಲಿಕ ನೋಂದಣಿ ಸಂಖ್ಯೆಯನ್ನು ಅಂತಿಮ ನೋಂದಣಿಗೆ ಪರಿವರ್ತಿಸಲು ವಿತರಕರಿಗೆ 90 ದಿನಗಳ ಕಾಲಾವಕಾಶವಿದ್ದು, ಆ ಸಮಯದಲ್ಲಿ ಸಂಬಂಧಪಟ್ಟ ದಾಖಲೆಗಳನ್ನು GST REG-24 ನಮೂನೆಯಲ್ಲಿ ನೀಡಬೇಕು. ಎಲ್ಲಾದರೂ ನೀಡಿರುವ ಮಾಹಿತಿಯು ಸಂಪೂರ್ಣ ಮತ್ತು ತೃಪ್ತಿಕರವಾಗಿದ್ದರೆ ಅಂತಿಮ ನೋಂದಣಿ ದಾಖಲೆಪತ್ರವನ್ನು GST REG-06 ನಮೂನೆಯಲ್ಲಿ ನೀಡಲಾಗುತ್ತದೆ. ಈ ಪರಿವರ್ತನೆಯ ಸಮಯದಲ್ಲಿ, ತೆರಿಗೆ ಪಾವತಿಸುವ ವ್ಯಕ್ತಿಯೊಬ್ಬರು ಜಿಎಸ್ಟಿಯಡಿ ನೋಂದಾಯಿಸುವ ಅಗತ್ಯವಿಲ್ಲವೆಂದು ಗೊತ್ತಾದರೆ, ಆದರೆ, ಈ ಹಿಂದೆ (ಕೇಂದ್ರ ಮತ್ತು ರಾಜ್ಯ ಕಾನೂನಿನಡಿ) ನೋಂದಾಯಿಸಿದ್ದರೆ, ಜಿಎಸ್ಟಿ ಅನುಷ್ಠಾಕ್ಕೆ ಬಂದ ನಂತರದ 30 ದಿನದಲ್ಲಿ, ಅಂದರೆ ಜುಲೈ 31, 2017ರ ಒಳಗೆ GST REG-28 ನಮೂನೆ ಸಲ್ಲಿಸಿ ತಾತ್ಕಾಲಿಕ ನೋಂದಣಿಯನ್ನು ರದ್ದುಪಡಿಸಲು ಅವಕಾಶವಿದೆ.

ಸಹ ಓದಿ:

ಜಿಎಸ್ಟಿ ವಲಸೆ: ನೋಂದಾಯಿತ ವ್ಯಾಪಾರಕ್ಕಾಗಿ

ಈಗಿನ ತೆರಿಗೆ ಪದ್ಧತಿಯಲ್ಲಿ ಕೊನೆಯದಾಗಿ ಸಲ್ಲಿಸಿದ ಐಟಿಸಿ

ಜೂನ್ 30, 2017ರಿಗೆ ಕೊನೆಗೊಂಡ ತಿಂಗಳತ್ರೈಮಾಸಿಕದಲ್ಲಿ ಈ ಹಿಂದಿನ ಕಾನೂನಿನನ್ವಯ ಸಲ್ಲಿಸಿದ ವಿದ್ಯುನ್ಮಾನ ಕ್ರೆಡಿಟ್ ಲೆಡ್ಜರ್, ಕೇಂದ್ರ ವ್ಯಾಟ್, ಮೌಲ್ಯವರ್ಧಿತ ತೆರಿಗೆ ಮತ್ತು ಪ್ರವೇಶ ತೆರಿಗೆಯನ್ನು ನೋಂದಾಯಿತ ತೆರಿಗೆದಾರರು ಮುಂದಕ್ಕೆ ಕೊಂಡೊಯ್ಯಬಹುದಾಗಿದೆ. ಆದರೂ, ವಿತರಕರು ಕೇಳಬಹುದಾದ ಐಟಿಸಿಯು, ಆತನು ಈಗಿನ ಜಿಎಸ್ಟಿ ತೆರಿಗೆ ಪದ್ಧತಿ ಆರಂಭವಾದ 6 ತಿಂಗಳೊಳಗೆ ಅಂದರೆ ಜುಲೈ 1, 2017ರಿಂದ 6 ತಿಂಗಳೊಳಗೆ ಸಂಬಂಧಪಟ್ಟ ಎಲ್ಲಾ ಆದಾಯ ಸಲ್ಲಿಕೆ ಮಾಡಿದ್ದರೆ ಮಾತ್ರ ಐಟಿಸಿ ಪಡೆಯಲು ಅವಕಾಶ ನೀಡಲಾಗಿದೆ.

3.ಬಂಡವಾಳ ಸರಕುಗಳಿಗೆ ಪಾವತಿಸದ ಮೌಲ್ಯವರ್ಧಿತ ತೆರಿಗೆ/ಅಬಕಾರಿಯನ್ನು ಐಟಿಸಿಯಲ್ಲಿ ಕೇಳುವುದು.

ಬಂಡವಾಳ ಸರಕುಗಳ ಖರೀದಿಗೆ ಎದುರಾಗಿ ಐಟಿಸಿಯು, ಈಗ ತಕ್ಷಣ ಲಭ್ಯವಿಲ್ಲ ಮತ್ತು ಲಭ್ಯವಿದ್ದರೂ, ಕೇವಲ ಕೆಲವು ನಿರ್ದಿಷ್ಟಪಡಿಸಿದ ಸರಕುಗಳಿಗೆ ಮಾತ್ರ ಲಭ್ಯವಿರುತ್ತದೆ. 2004ರ ಕೇಂದ್ರ ಮೌಲ್ಯವರ್ಧಿತ ತೆರಿಗೆ ಪಾವತಿ ನಿಯಮದ ಪ್ರಕಾರ ಮೊದಲ ವರ್ಷದಲ್ಲಿ ಕೇವಲ ಶೇಕಡ 50ರಷ್ಟು ಮಾತ್ರ ಪಡೆಯಲು ಅವಕಾಶವಿದೆ, ಉಳಿದ ಶೇಕಡ 50 ಅನ್ನು ಮುಂಬರುವ ಆರ್ಥಿಕ ವರ್ಷದಲ್ಲಿ ಪಡೆಯಬಹುದಾಗಿದೆ ಇದೇ ರೀತಿ, ಬಹುತೇಕ ರಾಜ್ಯಗಳಲ್ಲಿ, ಬಂಡವಾಳ ಸರಕುಗಳಿಗೆ ಐಟಿಸಿಯು ವಿವಿಧ ತಿಂಗಳ ಕಂತುಗಳ ಆಧಾರದಲ್ಲಿ ದೊರಕುತ್ತದೆ; ಇತರ ಕಡೆಗಳಲ್ಲಿ ಬಂಡವಾಳ ಸರಕುಗಳನ್ನು ವ್ಯವಹಾರಕ್ಕೆ ಬಳಸಿಕೊಂಡ ನಂತರವಷ್ಟೇ ದೊರಕುತ್ತದೆ. ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಆಗಿರುವ ಒಂದು ಪ್ರಮುಖ ಬದಲಾವಣೆಯೆಂದರೆ, ಬಂಡವಾಳ ಸರಕುಗಳ ಮೇಲೆ ಪಾವತಿಸಿರುವ ಮೌಲ್ಯವರ್ಧಿತ/ಅಬಕಾರಿ ತೆರಿಗೆಯ ಪೂರ್ತಿ ಹಣವನ್ನು ಐಟಿಸಿ ರೂಪದಲ್ಲಿ ಕೇಳುವ ಅವಕಾಶವನ್ನು ವಿತರಕರಿಗೆ ನೀಡಲಾಗಿದೆ.

ದಾಸ್ತಾನಿನಲ್ಲಿರುವ ಸರಕುಗಳಿಗೆ ಪಾವತಿಸಿರುವ ಅಬಕಾರಿಯನ್ನು ಪಡೆಯುವುದು.

ಎಲ್ಲಾ ವ್ಯವಹಾರದ ನಿಯಮಗಳನ್ನು ಪರಿಶೀಲಿಸಿದಾಗ, ದಾಸ್ತಾನಿನಲ್ಲಿರುವ ಸರಕುಗಳಿಗೆ ಪಾವತಿಸಿರಬಹುದು. ಇದರಲ್ಲಿ ಈ ಮುಂದಿನ ಪ್ರಮುಖ ಸಂದರ್ಭಗಳು ಇರಬಹುದು:

  • ಸಂದರ್ಭ 1: ಅಬಕಾರಿ ಸರಕುಪಟ್ಟಿಯ ಲಭ್ಯತೆ ತಯಾರಕರಿಂದ ಖರೀದಿಸಿದ ವಿತರಕರಲ್ಲಿ- ಮೊದಲ ಹಂತದ ಮತ್ತು ಎರಡನೆಯ ಹಂತದ ವಿತರಕರು ಅಬಕಾರಿ ಸುಂಕ ನಮೋದಿಸಿರುವ ಸರಕುಪಟ್ಟಿಯನ್ನು ಹೊಂದಿರಬಹುದು ಮತ್ತು ಇವರಿಗೆ ಪಾವತಿಸಿರುವ ಶೇಕಡ 100ರಷ್ಟು ಅಬಕಾರಿ ಸುಂಕವನ್ನು ಪಡೆಯಲು ಅವಕಾಶವಿದೆ..
  • ಸಂದರ್ಭ 2: ಪಾವತಿ ರವಾನೆ ಮಾಡಿರುವ ದಾಖಲೆಯ ಲಭ್ಯತೆ – ಚಿಲ್ಲರೆ ವ್ಯಾಪಾರಿಗಳಾಗಿರುವ ವಿತರಕರು ಮತ್ತು ಮೇಲಿನಂತೆ ಇರದೆ ಇರುವ ಕಡೆಯಿಂದ ಖರೀದಿಸಿದ್ದರೆ, ಅವರಲ್ಲಿ ಅಬಕಾರಿ ಪಾವತಿಸಿರುವ ಕುರಿತು ಯಾವುದೇ ಸರಕುಪಟ್ಟಿ ಲಭ್ಯ ಇರದೆ ಇರಬಹುದು. ಆದರೆ, ಅವರಲ್ಲಿ ತಯಾರಕರಿಗೆ ಹಣ ಪಾವತಿಸಿದ ದಾಖಲೆ ಇರಬಹುದು, ಇದು ಸಹ ಅಬಕಾರಿ ಸುಂಕ ಪಾವತಿಸಿರುವುದಕ್ಕೆ ದಾಖಲೆಯಾಗಿದೆ. ಪ್ರತಿ ವಸ್ತುವಿಗೆ 25,000 ರೂ.ನಿಂದ ಹೆಚ್ಚು ಪಾವತಿಸಿದ್ದರೆ, ಬ್ರಾಂಡ್ ಹೆಸರು ತಯಾರಕರದ್ದಾಗಿದ್ದರೆ ಮತ್ತು ಪೂರೈಕೆ ಜಾಲದ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಿದ್ದರೆ ಪಾವತಿಸಿದ ಅಬಕಾರಿಯನ್ನು ಪಡೆಯಬಹುದಾಗಿದೆ.
    .
  • ಸಂದರ್ಭ 3: ಅಬಕಾರಿ ಸರಕುಪಟ್ಟಿ ಅಥವಾ ಸಿಟಿಡಿ ಯಾವುದಾದರೂ ಲಭ್ಯ ಇರುವಿಕೆ- ಇಂತಹ ಸಂದರ್ಭಗಳಲ್ಲಿ ವಿತರಕರು ಜಿಎಸ್ಟಿಯಡಿಯಲ್ಲಿ ಹೊರಗಿನ ಪೂರೈಕೆಗೆ ಸಿಜಿಎಸ್ಟಿ ಪಾವತಿಸಿರುವುದಕ್ಕೆ ಶೇಕಡ 60ರಷ್ಟು ಆದಾನ ತೆರಿಗೆ ಕೇಳಲು ಜಿಎಸ್ಟಿಯಲ್ಲಿ ಸಿಜಿಎಸ್ಟಿ ದರವು ಶೇಕಡ 9 ಮತ್ತು ಅದಕ್ಕಿಂತ ಹೆಚ್ಚಿರಬೇಕು (ಉದಾಹರಣೆಗೆ ಜಿಎಸ್ಟಿ ದರ ಶೇಕಡ 18 ಮತ್ತು ಅದಕ್ಕಿಂತ ಹೆಚ್ಚು ) ಮತ್ತು ಹೊರಗಿನ ಪೂರೈಕೆಗೆ ಉಳಿದ ಶೇಕಡ 40ರಷ್ಟು ಸಿಜಿಎಸ್ಟಿ ಪಾವತಿಸಿರುವುದು, ಇತರೆ ಸಂದರ್ಭದಲ್ಲಿ 6 ತಿಂಗಳವರೆಗೆ, ಈ ಹಿಂದಿನ ತೆರಿಗೆ ಪದ್ಧತಿಯಲ್ಲಿ ವಿನಾಯಿತಿ ಹೊಂದಿರುತ್ತದೆ. ಎಲ್ಲಾದರೂ ಇದು ಹೊರ ರಾಜ್ಯದ ಪೂರೈಕೆಯಾಗಿದ್ದರೆ ಐಜಿಎಸ್ಟಿ ಪಾವತಿಸಿರುವುದಲ್ಲಿ ಕ್ರಮವಾಗಿ ಶೇಕಡ 30ರಷ್ಟು ಮತ್ತು ಶೇಕಡ 20ರಷ್ಟು ವಾಪಸ್ ಪಡೆಯಲು ಅವಕಾಶವಿದೆ..

ಈ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳದೆ ಇದ್ದರೂ, ಅಬಕಾರಿ ತೆರಿಗೆಗೆ ಆದಾಯ ಪಾವತಿ ಪಡೆಯಲು ಅರ್ಹರಾದ ಎಲ್ಲಾ ನೋಂದಾಯಿತ ವ್ಯಕ್ತಿಗಳು GST TRAN- 1 ನಮೂನೆಯಲ್ಲಿ ವಿದ್ಯುನ್ಮಾನ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು, ಇದನ್ನು ಸಂಬಂಧಪಟ್ಟ ವೆಬ್ ತಾಣದಲ್ಲಿ, 90 ದಿನದೊಳಗೆ ಸಲ್ಲಿಸಬೇಕು.

5. ಸಾಗಾಣೆಯಲ್ಲಿರುವ ದಾಸ್ತಾನಿಗೆ ಆದಾನ

ನೋಂದಾಯಿತ ತೆರಿಗೆ ವ್ಯಕ್ತಿಯು ಜಿಎಸ್ಟಿ ಬಂದ ಬಳಿಕ ಸ್ವೀಕರಿಸಿದ ಸರಕು/ಸೇವೆಗೆ ಕೇಂದ್ರ ಮತ್ತು ರಾಜ್ಯದ ತೆರಿಗೆಗಳಿಗೆ(ಈಗಿನ ತೆರಿಗೆ ಪದ್ಧತಿಯಲ್ಲಿ ಅನ್ವಯವಾಗುತ್ತದೆ) ಆದಾನ ತೆರಿಗೆ ಪಾವತಿಯನ್ನು ಪಡೆಯಬಹುದಾಗಿದೆ. ಇದಕ್ಕೆ ಇರುವ ಷರತ್ತು ಏನೆಂದರೆ, ಜಿಎಸ್ಟಿ ಅನುಷ್ಠಾನ ದಿನಾಂಕದಿಂದ 30 ದಿನದೊಳಗೆ ಲೆಕ್ಕಪುಸ್ತಕದಲ್ಲಿ ಸರಕುಪಟ್ಟಿಯನ್ನು ಕಡ್ಡಾಯವಾಗಿ ದಾಖಲಿಸಬೇಕು. ಸೂಕ್ತ ಕಾರಣವನ್ನು ನೀಡಿದರೆ, ಮೂಲ 30 ತಿಂಗಳ ಮಿತಿಯನ್ನು ಮತ್ತೆ 30 ದಿನಗಳವರೆಗೆ ಹೆಚ್ಚಿಸಿಕೊಳ್ಳಬಹುದು. ನೋಂದಾಯಿತ ತೆರಿಗೆದಾರ ವ್ಯಕ್ತಿಯು ಒಂದು ಹೇಳಿಕೆ ಅಥವಾ ಸಂಬಂಧಪಟ್ಟ ದಾಖಲೆಯನ್ನು ಆತ ತೆಗೆದುಕೊಳ್ಳಲು ಉದ್ದೇಶಿಸಿರುವ ಆದಾನಕ್ಕೆ ಅನುಗುಣವಾಗಿ ಆತ ಸಲ್ಲಿಸಬೇಕು.
ಈ ಸ್ಥಳವನ್ನು ಇನ್ನಷ್ಟು ಮಾಹಿತಿಗಾಗಿ ಎದುರು ನೋಡಿ- ನಾವು ಜಿಎಸ್ಟಿ ಶಕೆಯನ್ನು ಇನ್ನಷ್ಟು ಅದ್ಧೂರಿಯಾಗಿ ಸ್ವಾಗತಿಸೋಣ.
ಈ ಲೇಖನದ ಮೂಲ ಲೇಖಕರು ತೇಜಸ್ ಗೋಯೆಂಕಾ, ಕಾರ್ಯನಿರ್ವರ್ಹಕ ನಿರ್ದೇಶಕರು, ಟ್ಯಾಲಿ ಸೊಲ್ಯುಷನ್ಸ್, ಈ ಲೇಖನವು ಎಕಾನಾಮಿಕ್ ಟೈಮ್ಸ್ ನಲ್ಲಿ ಪ್ರಕಟಗೊಂಡಿದೆ.
ಕೊಡುಗೆದಾರರು: ಪುಗಲ್ ಟಿ ಮತ್ತು ಪ್ರಮಿತ್ ಪ್ರತಿಮ್ ಘೋಷ್

Are you GST ready yet?

Get ready for GST with Tally.ERP 9 Release 6

92,586 total views, 39 views today

Pramit Pratim Ghosh

Author: Pramit Pratim Ghosh

Pramit, who has been with Tally since May 2012, is an integral part of the digital content team. As a member of Tally’s GST centre of excellence, he has written blogs on GST law, impact and opinions - for customer, tax practitioner and student audiences, as well as on generic themes such as - automation, accounting, inventory, business efficiency - for business owners.