ಯಾವುದೇ ಸಂಸ್ಥೆಯಲ್ಲಿ ಅಕೌಂಟ್ಸ್ ಅಥವಾ ಜಮಾಖರ್ಚಿನ ಪಟ್ಟಿ ಮತ್ತು ಇತರೆ ದಾಖಲೆಗಳು ಹಣಕಾಸು ವರದಿಗಾರಿಕೆಗೆ ಪ್ರಾಥಮಿಕ ಮೂಲಗಳಾಗಿವೆ. ನಮ್ಮ ದೇಶದ ಪ್ರತಿಯೊಂದು ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಯ ಕಾನೂನುಗಳು ಈ ಮಾಹಿತಿಗಳನ್ನು ನಿಗದಿತ ನಮೂನೆಯಲ್ಲಿ ರಚಿಸಿರಬೇಕು ಮತ್ತು ನಿಗದಿತ ಸಮಯದವರೆಗೆ ಕಾಪಾಡಿಕೊಳ್ಳಬೇಕು ಎಂದು ಕಡ್ಡಾಯಗೊಳಿಸಿವೆ. ಪ್ರತಿಯೊಂದು ಕಾನೂನಿನ ಅನ್ವಯ ತೆರಿಗೆ ಪಾವತಿದಾರರು ರಿಟರ್ನ್ ಭರ್ತಿ ಮಾಡಲು ಈ ಅಕೌಂಟ್ಸ್ ಮತ್ತು ದಾಖಲೆಗಳನ್ನು ಇಟ್ಟುಕೊಳ್ಳಬೇಕು.

ಈಗಿನ ತೆರಿಗೆ ಪದ್ಧತಿ

ಈಗಿನ ಪರೋಕ್ಷ ತೆರಿಗೆ ಪದ್ಧತಿಯನ್ವಯ, ಸಾಮಾನ್ಯ ಬುಕ್ಸ್ ಆಫ್ ಅಕೌಂಟ್ಸ್ ಮಾತ್ರವಲ್ಲದೆ, ನಿರ್ದಿಷ್ಟ ವ್ಯವಹಾರಗಳ ಕೆಲವು ಜಮಾ ಲೆಕ್ಕ ಅಥವಾ ಅಕಔಂಟ್ಸ್ ಮತ್ತು ದಾಖಲೆಗಳನ್ನು ನಿಗದಿತ ಸಮಯದವರೆಗೆ ಕಡ್ಡಾಯವಾಗಿ ಕಾಪಾಡಬೇಕು ಎಂದು ಕಡ್ಡಾಯ ಮಾಡಲಾಗಿದೆ.

ಅಬಕಾರಿ ಸುಂಕದಡಿ, ಪ್ರಮುಖ ದಾಖಲೆಗಳನ್ನು ಆರ್ ಜಿ-1 ರಿಜಿಸ್ಟ್ರಾರ್(ಅಬಕಾರಿ ಸರಕುಗಳ ಪ್ರತಿದಿನ ದಾಸ್ತಾನು ಖಾತೆ), ನಮೂನೆ IV ರಿಜಿಸ್ಟರ್ (ಕಚ್ಚಾ ಸರಕುಗಳ ರಸೀದಿ ಅಥವಾ ರಸೀದಿ ನೋಂದಣಿ), ಸರಕುಪಟ್ಟಿ ಪುಸ್ತಕ ಮತ್ತು ಜಾಬ್ ವರ್ಕ್ ನೋಂದಣಿ ಪುಸ್ತಕವನ್ನು ನಿರ್ವಹಿಸಬೇಕು.

ಸೇವಾ ತೆರಿಗೆಯ ಅನ್ವಯ, ಬಿಲ್ ರಿಜಿಸ್ಟರ್, ರಸೀದಿ ರಿಜಿಸ್ಟರ್, ಡೆಬಿಟ್/ಕ್ರೆಡಿಟ್ ನೋಟ್ಸ್ ರಿಜಿಸ್ಟರ್, ಸೆನ್ ವ್ಯಾಟ್ ಪಾವತಿ ರಿಜಿಸ್ಟರ್ ಇತ್ಯಾದಿಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ನಿರ್ವಹಿಸಬೇಕು.

ವ್ಯಾಟ್ ಅನ್ವಯ, ಖರೀದಿ ದಾಖಲೆಗಳು, ಮಾರಾಟ ದಾಖಲೆಗಳು, ದಾಸ್ತಾನು ದಾಖಲೆಗಳು, ಇನ್ಪುಟ್ ಮತ್ತು ಔಟ್ ಪುಟ್ ತೆರಿಗೆಯ ಮಾಹಿತಿ ಹೊಂದಿರುವ ವ್ಯಾಟ್ ಖಾತೆ, ಕೆಲಸದ ಗುತ್ತಿಗೆ ಅಕೌಂಟ್ ಇತ್ಯಾದಿ ದಾಖಲೆಗಳನ್ನು ನಿರ್ವಹಿಸಬೇಕು.
ಈ ಪ್ರತಿಯೊಂದು ದಾಖಲೆಗಳು ದಾಖಲೀಕರಣಗೊಂಡ ಹಣಕಾಸು ವರ್ಷದಿಂದ ಕನಿಷ್ಠ ಮುಂದಿನ 5 ವರ್ಷಗಳವರೆಗೆಯಾದರೂ ಕಾಪಾಡಿಕೊಳ್ಳಲೇಬೇಕು.

ಜಿಎಸ್ಟಿ ಪದ್ಧತಿ

ಜಿಎಸ್ಟಿ ಅನ್ವಯ, ತಯಾರಕರ ಚಟುವಟಿಕೆಗಳು, ತೆರಿಗೆ ವಿಧಿಸಬಲ್ಲ ಸೇವೆಗಳು ಮತ್ತು ಸರಕುಗಳ ಮಾರಾಟಗಳಿಗೆ ಸಾಮಾನ್ಯ ಕಾನೂನಿದೆ ಮತ್ತು ವ್ಯವಹಾರಗಳು ಸಂಬಂಧಪಟ್ಟ ದಾಖಲೆಗಳನ್ನು ಪ್ರತ್ಯೇಕವಾಗಿ ಆದಷ್ಟು ಬೇಗ ನಿರ್ವಹಿಸಬೇಕು.

ಜಿಎಸ್ಟಿಯನ್ವಯ, ಪ್ರತಿಯೊಬ್ಬ ನೋಂದಾಯಿತ ತೆರಿಗೆ ಪಾವತಿದಾರರು ಪ್ರಮುಖ ವ್ಯವಹಾರದ ಸ್ಥಳದಲ್ಲಿ ಈ ಮುಂದಿನ ಮಾಹಿತಿಗಳನ್ನು ಹೊಂದಿರುವ ದಾಖಲೆಗಳನ್ನು ಇಟ್ಟಿರಬೇಕು:-
1. ಸರಕುಗಳ ತಯಾರಿಕೆ
2. ಸರಕು ಮತ್ತು ಸೇವೆಯ ಆಂತರಿಕ ಮತ್ತು ಬಾಹ್ಯಾ ಪೂರೈಕೆ
3. ಸರಕುಗಳ ದಾಸ್ತಾನು
4. ಲಭ್ಯವಿರುವ ಇನ್ಪುಟ್ ತೆರಿಗೆ ಮೊತ್ತ
5. ಪಾವತಿಸಬೇಕಿರುವ ಮತ್ತು ಪಾವತಿಸಿರುವ ಔಟ್ ಪುಟ್ ತೆರಿಗೆ
ಎಲ್ಲಾದರೂ ಒಂದಕ್ಕಿಂತ ಹೆಚ್ಚಿನ ಸ್ಥಳದಲ್ಲಿ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನಮೋದಿಸಿದ ವ್ಯವಹಾರಗಳು ಇದ್ದರೆ, ಪ್ರತಿಯೊಂದು ಸ್ಥಳದ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಆಯಾ ಸ್ಥಳಗಳಲ್ಲಿ ಸಂಬಂಧಪಟ್ಟ ದಾಖಲೆಗಳು ಇರಬೇಕು.
ಪುಸ್ತಕಗಳು ಮತ್ತು ದಾಖಲೆಗಳನ್ನು ಎಲೆಕ್ಟ್ರಾನಿಕ್ ವಿಧಾನದಲ್ಲಿ ರಚಿಸಿಡುವುದು ಜಿಎಸ್ಟಿಯಡಿ ಅನುಸರಣೆಯನ್ನು ಸರಿಯಾದ ಸಮಯಕ್ಕೆ ಮತ್ತು ನಿಖರವಾಗಿ ಸಲ್ಲಿಸಲು ಅನುಕೂಲಕರವಾಗಿದೆ.

ಎಲ್ಲಾದರೂ ವ್ಯಕ್ತಿಯೊಬ್ಬರ ಹಣಕಾಸು ವರ್ಷದ ವಹಿವಾಟು 1 ಕೋಟಿ ರೂ.ಗಿಂತಲೂ ಹೆಚ್ಚಿರುವ ಸಂದರ್ಭ

ಹಣಕಾಸು ವರ್ಷವೊಂದರಲ್ಲಿ ವ್ಯಕ್ತಿಯೊಬ್ಬರ ವಹಿವಾಟು 1 ಕೋಟಿ ರೂ.ಗಿಂತಲೂ ಹೆಚ್ಚಿದ್ದರೆ ಮೇಲೆ ತಿಳಿಸಿರುವ ಅಕೌಂಟ್ಸ್ ರೀತಿಯನ್ನು ಅನುಸರಿಸುವುದರ ಜೊತೆಗೆ ಹೆಚ್ಚುವರಿಯಾಗಿ ಒಂದಿಷ್ಟು ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ. ಅವುಗಳೆಂದರೆ,
• ಅಕೌಂಟ್ಸ್ ಅನ್ನು ಚಾರ್ಟೆಡ್ ಅಕೌಂಟೆಂಟ್ ಅಥವ ಕಾಸ್ಟ್ ಅಕೌಂಟೆಂಟ್ ರಿಂದ ಲೆಕ್ಕಪರಿಶೋಧನೆ ನಡೆಸಿರಬೇಕು ಮತ್ತು
• ವಾರ್ಷಿಕ ರಿಟರ್ನ್ GSTR-9 ಸಲ್ಲಿಕೆ ಸಮಯದಲ್ಲಿ GSTR- 9B ನಮೂನೆಯಲ್ಲಿ ಲೆಕ್ಕಪರಿಶೋಧನೆ ಮಾಡಿರುವ ಒಂದು ಪ್ರತಿಯನ್ನು ಸಲ್ಲಿಸಬೇಕು.
ಖಾತೆಗಳ ಸಾಮರಸ್ಯ ಪ್ರಕಟಣೆಯಲ್ಲಿ, ಚಾರ್ಟೆಡ್ ಅಕೌಂಟೆಂಟ್ ಅಥವ ಕಾಸ್ಟ್ ಅಕೌಂಟೆಂಟ್ ಅವರು ವಾರ್ಷಿಕ ರಿಟರ್ನ್ ನಲ್ಲಿ ನಮೋದಿಸಿರುವ ಪೂರೈಕೆಯ ಮೌಲ್ಯದ ಸಮರ್ಪಕತೆಯನ್ನು ಲೆಕ್ಕಪರಿಶೋಧಣೆ ಮಾಡಿರುವ ಹಣಕಾಸು ಹೇಳಿಕೆಯ ದೃಢೀಕರಿಸಿದ ಹೇಳಿಕೆ ಲಗ್ಗತ್ತಿಸಬೇಕು.

ಗೋಡಾನ್ ಅಥವಾ ವೇರ್ ಹೌಸ್ ಅನ್ನು ಹೊಂದಿರುವ ಅಥವಾ ನಿರ್ವಹಿಸುವ ವ್ಯಕ್ತಿ

ಗೋಡಾನ್ ಅಥವಾ ವೇರ್ ಹೌಸ್ ಮಾಲೀಕರು ಅಥವಾ ನಿರ್ವಾಹಕರು ಅಥವಾ ಸರಕುಗಳನ್ನು ಸಂಗ್ರಹಿಸಲು ಬಳಕೆ ಮಾಡುವ ಯಾವುದೇ ಸ್ಥಳ, ಇವು ನೋಂದಾಯಿಸಿದ್ದರೂ ಅಥವ ನೋಂದಾಯಿಸದೆ ಇಲ್ಲದಿದ್ದರೂ ಇದರ ಸಮರ್ಪಕ ದಾಖಲೆಯನ್ನು ಈ ಕಾನೂನಿನ್ವಯ ದಾಖಲಿಸಿಡಬೇಕು.

ಎಷ್ಟು ಕಾಲದವರೆಗೆ ಅಕೌಂಟ್ಸ್ ಮತ್ತು ದಾಖಲೆಗಳನ್ನು ಇಟ್ಟುಕೊಳ್ಳಬೇಕು?

ವುದರ ಲೆಕ್ಕಪತ್ರ ಮತ್ತು ದಾಖಲೆಗಳ ಕುರಿತು ವಾರ್ಷಿಕ ರಿಟರ್ನ್ ನಲ್ಲಿ ನಮೋದಿಸಲಾಗಿದೆಯೋ ಅದಕ್ಕೆ ಸಂಬಂಧಪಟ್ಟ ಆರ್ಥಿಕ ವರ್ಷದಿಂದ ಕನಿಷ್ಠ 5 ವರ್ಷಗಳ ಕಾಲ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು ಸಂಬಂಧಪಟ್ಟ ಲೆಕ್ಕಪತ್ರ ಮತ್ತು ದಾಖಲೆಪತ್ರಗಳನ್ನು ಇಟ್ಟುಕೊಳ್ಳಬೇಕು.

ಉದಾಹರಣೆಗೆ: 2017-18ರ ಹಣಕಾಸು ವರ್ಷದ ಅಕೌಂಟ್ಸ್ ಮತ್ತು ದಾಖಲೆಗಳನ್ನು ಕಡ್ಡಾಯವಾಗಿ ಡಿಸೆಂಬರ್ 31, 2018ರಂದು ರಿಟರ್ನ್ ಸಲ್ಲಿಸಬೇಕು. ಈ ಲೆಕ್ಕಪತ್ರ ಮತ್ತು ದಾಖಲೆಗಳನ್ನು ಡಿಸೆಂಬರ್ 31, 2023ರವರೆಗೆ ಕಾಪಾಡಿಕೊಳ್ಳಬೇಕು.

Are you GST ready yet?

Get ready for GST with Tally.ERP 9 Release 6

144,706 total views, 108 views today