(English) Language

  • English
  • Hindi
  • Marathi
  • Kannada
  • Telugu
  • Tamil
  • Gujarati

ನಮ್ಮ ಮಾನ್ಯ ಹಣಕಾಸು ಸಚಿವರಾದ ಶ್ರೀ ಅರುಣ್ ಜೇಟ್ಲಿಯವರು ತಮ್ಮ ಬಜೆಟ್ ಭಾಷಣದಲ್ಲಿ ಜಿಎಸ್‍ಟಿಯ ಮಾರ್ಗಸೂಚಿಯ ಬಗ್ಗೆ ವಿಸ್ತೃತವಾಗೇನೂ ಚರ್ಚೆ ಮಾಡಲಿಲ್ಲ. ಆದಾಗ್ಯೂ, ಅವರು ಜಿಎಸ್‍ಟಿಯ ಅಂಗೀಕಾರಕ್ಕೆ ಮಸೂದೆಯ ಸಾಂವಿಧಾನಿಕ ತಿದ್ದುಪಡಿ ಮತ್ತು ಅದರ ಅನುಷ್ಠಾನದ ಪ್ರಗತಿಯು ಒಂದು ‘ಟೆಕ್ಟಾನಿಕ್ ಕಾರ್ಯನೀತಿಯ ಉಪಕ್ರಮ’ ಎಂದು ತಿಳಿಸಿದರು.

ಜಿಎಸ್‍ಟಿಯ ಲಾಭಗಳನ್ನು ಸಂಸತ್ತಿಗೆ ತಿಳಿಸುತ್ತಾ, ಅವರು ಹೀಗೆ ಹೇಳಿದರು, ‘ನಮ್ಮ ಆರ್ಥಿಕತೆಯ ಮೇಲೆ ಜಿಎಸ್‍ಟಿ ನುಕೂಲಗಳ ವಿಷಯದಲ್ಲಿ ಉತ್ತೇಜನಾತ್ಮಕ ಬೆಳವಣಿಗೆ, ಸ್ಪರ್ಧಾತ್ಮಕತೆ, ಪರೋಕ್ಷ ತೆರಿಗೆ ಸರಳೀಕರಣ ಮತ್ತು ಹೆಚ್ಚಿನ ಪಾರದರ್ಶಕತೆ ಬಗೆಗೆ ಈಗಾಗಲೇ ಸಂಸತ್ತಿನ ಎರಡೂ ಸದನಗಳಲ್ಲಿ ವ್ಯಾಪಕವಾಗಿ ಚರ್ಚಿಸಲಾಗಿದೆ. ಸಂವಿಧಾನ ತಿದ್ದುಪಡಿಯನ್ನು ಎರಡೂ ಸದನಗಳಲ್ಲಿ ಸರ್ವಾನುಮತದಿಂದ ಅಂಗೀಕರಿಸಿದ ಎಲ್ಲಾ ಸದಸ್ಯರಿಗೆ ನಾನು ಧನ್ಯವಾದ ಹೇಳಬಯಸುತ್ತೇನೆ’ ಎಂದರು. ಜಿಎಸ್‍ಟಿ ಕೌನ್ಸಿಲ್‍ನಲ್ಲಿ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದ್ದಕ್ಕಾಗಿ ರಾಜ್ಯ ಸರ್ಕಾರಗಳಿಗೆ ಅವರು ಧನ್ಯವಾದ ವ್ಯಕ್ತಪಡಿಸಿದರು. ಜಿಎಸ್‍ಟಿ ಅನುಷ್ಟಾನಕ್ಕೆ ಇದ್ದ ಮುಖ್ಯ ಅಡೆತಡೆಗಳು ಜಿಎಸ್‍ಟಿ ಕೌನ್ಸಿಲ್‍ನಿಂದ ನಿವಾರಣೆಯಾಗಿದೆಯೆಂಬುದು ಹಣಕಾಸು ಮಂತ್ರಿಗಳು ನೀಡಿದ ಸ್ಪಷ್ಟ ಇಂಗಿತ.

ಜಿಎಸ್‍ಟಿಗೆ ಸಂಬಂಧಪಟ್ಟಂತೆ ಜಿಎಸ್‍ಟಿ ದರ ವಿನ್ಯಾಸದ ವಿಶಾಲ ಬಾಹ್ಯರೇಖೆಗಳು, ವಿನಾಯಿತಿ ಮಿತಿಗಳು ಮತ್ತು ಸಂಯೋಜನೆಯ ನಿಯತಾಂಕಗಳು, ಜಿಎಸ್‍ಟಿ ಅನುಷ್ಟಾನದಿಂದ ರಾಜ್ಯಗಳಿಗೆ ನೀಡುವ ಪರಿಹಾರಗಳ ವಿವರಗಳು, ಜಿಎಸ್‍ಟಿ ಕಾನೂನಿನ ಕರಡು ಮಾದರಿಯ ಪರೀಕ್ಷೆ, ಐಜಿಎಸ್‍ಟಿ ಕಾನೂನಿನ ಕರಡು ಮತ್ತು ಪರಿಹಾರ ಕಾನೂನು ಮತ್ತು ಜಿಎಸ್‍ಟಿಯ ಆಡಳಿತ ವಿಧಾನ ಮುಂತಾದ ವಿವಿಧ ವಿಷಯಗಳನ್ನು ಚರ್ಚಿಸಲು ಜಿಎಸ್‍ಟಿ ಕೌನ್ಸಿಲ್ 9 ಸಭೆಗಳನ್ನು ನಡೆಸಿದೆ ಎಂದು ಹಣಕಾಸು ಸಚಿವರು ತಿಳಿಸಿದರು. ಅವರು ಮುಂದುವರೆದು, ಸರ್ವಸಮ್ಮತ ಒಪ್ಪಿಗೆಯಂತೆ, ಜಿಎಸ್‍ಟಿ ಕೌನ್ಸಿಲ್ ಬಹುತೇಕ ಎಲ್ಲಾ ವಿಷಯಗಳ ಮೇಲೆ ತನ್ನ ಶಿಫಾರಸುಗಳನ್ನು ಅಂತಿಮಗೊಳಿಸಿತು ಎಂದರು.

ಹೊಸ ಕಾನೂನಿನ ಸಿದ್ಧತೆ ಬಗ್ಗೆ, ಅಬಕಾರಿ ಮತ್ತು ಕಸ್ಟಮ್ಸ್ ವಿಭಾಗದ ಕೇಂದ್ರ ಮತ್ತು ರಾಜ್ಯ ಇಲಾಖೆಯ ಅಧಿಕಾರಿಗಳ ಹಲವಾರು ತಂಡಗಳು ಮಾದರಿ ಜಿಎಸ್‍ಟಿ ಕಾನೂನಿಗೆ ಅಂತಿಮ ರೂಪ ಕೊಡಲು ಹಗಲಿರುಳೂ ಶ್ರಮಿಸುತ್ತಿದ್ದಾರೆ ಎಂದು ಹಣಕಾಸು ಸಚಿವರು ತಿಳಿಸಿದರು. ಹೊಸ ತೆರಿಗೆ ವ್ಯವಸ್ಥೆಯ ಅರಿವು ಮೂಡಿಸಲು 2017ರ ಏಪ್ರಿಲ್ 1 ರಿಂದ ವ್ಯಾಪಾರ ಮತ್ತು ಕೈಗಾರಿಕೆಗಳ ಜಿಎಸ್‍ಟಿ ಜಾರಿಗೆ ಬರುವುದೆಂಬ ಇಂಗಿತವನ್ನು ಸಚಿವರು ವ್ಯಕ್ತಪಡಿಸಿದರು. ಐಜಿಎಸ್‍ಟಿ ನ ಜಿಎಸ್‍ಟಿ ಐಟಿ ವ್ಯವಸ್ಥೆಯು ತಯಾರಿಯಲ್ಲಿವೆ ಎಂದೂ ಅವರು ತಿಳಿಸಿದರು.

ಅನುಷ್ಠಾನದ ದಿನಾಂಕದ ಬಗ್ಗೆ, ಮಂತ್ರಿಗಳು ಹೇಳಿದರು, ಕೇಂದ್ರವು, ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್ ಬೋರ್ಡ್ ಮೂಲಕ, ಜಿಎಸ್‍ಟಿ ಅನುಷ್ಟಾನದ ಗುರಿಯನ್ನು ನಿಗದಿತ ವೇಳೆಗೇ ಸಾಧಿಸಲು ಪ್ರಯತ್ನಿಸುವುದು. ಅನುಷ್ಠಾನದ ದಿನಾಂಕವನ್ನು ಮಂತ್ರಿಗಳು ಹೇಳಲಿಲ್ಲವಾದರೂ, ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಕಾರ್ಯದರ್ಶಿಗಳಾದ ಶ್ರೀ ಹಸ್ಮುಖ್ ಅಧಿಯ ರವರು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜಿಎಸ್‍ಟಿಯು 2017ರ ಜುಲೈ 1 ರಿಂದ ಜಾರಿಗೆ ಬರಲಿದೆಯೆಂದು ಧೃಢಪಡಿಸಿದರು. ಮತ್ತೂ ಮುಂದುವರೆದು ಅವರು, ಆರ್ಥಿಕ ವರ್ಷ 2017-18ರ ಆದಾಯ ಲೆಕ್ಕ ಹಾಕುವಾಗ ಪರೋಕ್ಷ ತೆರಿಗೆಯ ಬೆಳವಣಿಗೆ 8.8% ಎಂದು ನಿಗದಿ ಪಡಿಸಿದೆ ಎಂದರು.

ಹಣಕಾಸು ಮಂತ್ರಿಗಳ ಭಾಷಣದ ಪ್ರಮುಖ ವಿಷಯವೆಂದರೆ, ಅವರು 2017-18ರ ವಿತ್ತೀಯ ಕೊರತೆಯನ್ನು ಜಿಡಿಪಿಯ 3.2 % ನಷ್ಟು ನಿಗದಿ ಪಡಿಸಿದ್ದಾರೆ ಮತ್ತು ಮುಂದಿನ ವರ್ಷದಲ್ಲಿ ಅದನ್ನು 3% ಕ್ಕೆ ಸಾಧಿಸಲು ಬದ್ಧರಾಗಿದ್ದಾರೆ. ಈ ಕ್ರಮೇಣ ಮಾರ್ಗದಲ್ಲಿ, ಹಣಕಾಸು ಮಂತ್ರಿಗಳು ಆರ್ಥಿಕ ಬಲವರ್ಧನೆಯಲ್ಲಿ ಈಖಃಒ ವರದಿ ಶಿಫಾರಸು ಮಾಡಿದ ಮಾರ್ಗಸೂಚಿಯ ಅನುಷ್ಠಾನವನ್ನು ಖಾತರಿ ಪಡಿಸಿದರು. ಈ ಮಾರ್ಗಸೂಚಿಯನ್ನು ಸಾಧಿಸಬೇಕಾದರೆ, ಆದಾಯದ ಗುರಿ ಸಾಧನೆ ಅನಿವಾರ್ಯ, ಮತ್ತು ಆರ್ಥಿಕ ಗುರಿ ಆದಾಯವನ್ನು ಸಾಧಿಸಬೇಕಾದರೆ ಜಿಎಸ್‍ಟಿ ಅನುಷ್ಠಾನದಿಂದ ಮಾತ್ರ ಸಾಧ್ಯ (ಜಿಎಸ್‍ಟಿ ಆಧರಿಸಿ ನಿಗದಿತ ಪರೋಕ್ಷ ತೆರಿಗೆ ಕಂದಾಯದ ಗುರಿ ಸಾಧಿಸಲು). ಸರ್ಕಾರವು ಹಣಕಾಸಿನ ಶಿಸ್ತು ಪಾಲನೆಯಲ್ಲಿ ಮತ್ತು ನಿಗದಿತ ಸಮಯಕ್ಕೆ ಜಿಎಸ್‍ಟಿ ಅನುಷ್ಠಾನಕ್ಕೆ ತರುವಲ್ಲಿ ಉತ್ಸುಕವಾಗಿದೆ ಎಂದು ನಾವು ಭಾವಿಸುತ್ತೇವೆ.

ಇಷ್ಟಾಗಿಯೂ, ಅನುಷ್ಠಾನದ ಮೊದಲ ವರ್ಷದಲ್ಲಿ ಸರ್ಕಾರಕ್ಕೆ ಪರೋಕ್ಷ ತೆರಿಗೆ ಆದಾಯದ ಬೆಳವಣಿಗೆ 8.8% ಗುರಿ ಸಾಧನೆ ಸುಲಭವಲ್ಲ ಅದೂ ಕೇವಲ 9 ತಿಂಗಳಿನಲ್ಲಿ. ಇಲ್ಲಿ ಸರ್ಕಾರವು ಜಿಎಸ್‍ಟಿ ಅನುಷ್ಠಾನವನ್ನು ನಿಗದಿತ ಸಮಯಕ್ಕೆ ಮಾಡುವುದಷ್ಟೇ ಅಲ್ಲ, ಪೂರ್ಣ ಉತ್ಸಾಹದಿಂದ ಮತ್ತು ಉದ್ಯಮ ವಲಯದಿಂದ ಉತ್ತಮ ಅನುಸರಣೆಯ ನಿರೀಕ್ಷೆಗಳಿಂದ ಎಂದು ನಾವು ಊಹಿಸುತ್ತಿದ್ದೇವೆ.

ಈ ಎಲ್ಲದರೊಂದಿಗೆ, ಸರ್ಕಾರವು ಜಿಎಸ್‍ಟಿ ಯನ್ನು 2017ರ ಜುಲೈ 1ರಿಂದ ಜಾರಿಗೆ ತರಲು ಉತ್ಸುಕವಾಗಿದೆ ಎಂಬ ಎಲ್ಲಾ ಸೂಚನೆಗಳಿವೆ. ಬಜೆಟ್ ಭಾಷಣದ ವೇಳೆ ಶ್ರೀ ಜೇಟ್ಲಿಯವರ ಹೇಳಿಕೆ ಪ್ರಸ್ತುತ ಅಬಕಾರಿ ಮತ್ತು ಸೇವಾ ತೆರಿಗೆ ಪದ್ಧತಿಯಲ್ಲಿ ಹೆಚ್ಚಿನ ಬದಲಾವಣೆ ಮಾಡಲು ಇಚ್ಛಿಸುವುದಿಲ್ಲ ಏಕೆಂದರೆ ಶೀಘ್ರದಲ್ಲೇ ಜಿಎಸ್‍ಟಿ ಇವುಗಳ ಸ್ಥಾನವನ್ನು ಆಕ್ರಮಿಸಲಿದೆ ಎಂಬುದು ಕೇಕ್ ಮೇಲೆ ಮಂಜುಗಡ್ಡೆಯಿಟ್ಟಂತಾಗಿದೆ.

ಆದ್ದರಿಂದ, ಇದು ವ್ಯವಹಾರ-ವ್ಯಾಪಾರಸ್ಥರಿಗೆ ಜಿಎಸ್‍ಟಿಗೆ ಅಣಿಯಾಗಿರುವ ಸಮಯ ಏಕೆಂದರೆ ಜಿಎಸ್‍ಟಿ ರೂಪಾಂತರ ರಾತ್ರಿ ಹಗಲಾಗುವುದರಲ್ಲಿ ಆಗುವಂತಹುದಲ್ಲ.

Are you GST ready yet?

Get ready for GST with Tally.ERP 9 Release 6

73,527 total views, 9 views today