ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಸರಕುಪಟ್ಟಿ ಹೊಂದಾಣಿಕೆಯು ಒಂದು ಅನನ್ಯ ಮತ್ತು ನಿರ್ಣಾಯಕ ಸಂಗತಿಯಾಗಿದೆ. ಇದರಿಂದಾಗಿ, ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಜಿಎಸ್ಟಿ ಬೆಲೆಪಟ್ಟಿ ಸಂಖ್ಯೆಯನ್ನು ಹೇಗೆ ನಿರ್ವಹಿಸುವುದು ಎಂದು ಹೆಚ್ಚಿನ ವ್ಯವಹಾರಗಳು ಚಿಂತಿತವಾಗಿವೆ ಎಂದು ನಾವು ಅರ್ಥಮಾಡಿಕೊಳ್ಳಬಹುದು.

ಬೆಲೆಪಟ್ಟಿಗೆ ಸಂಖ್ಯೆ ನೀಡುವಿಕೆ ಕುರಿತು ಕಾನೂನು ಏನು ಹೇಳುತ್ತದೆ?

ಜಿಎಸ್ಟಿ ತಂತ್ರಾಂಶದಲ್ಲಿ ಕೆಲವೊಂದು ಸಂದರ್ಭಗಳನ್ನು ಹೇಗೆ ನಿರ್ವಹಿಸುವುದು ಎಂದು ವಿವರವಾಗಿ ತಿಳಿದುಕೊಳ್ಳುವ ಮೊದಲು, ವ್ಯವಹಾರಗಳಿಂದ ಕಾನೂನು ಏನು ಬಯಸುತ್ತದೆ ಎಂದು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
ನಿಮ್ಮ ದಾಖಲೆಗಳಿಗೆ ನಿರಂತರವಾಗಿ ಸಂಖ್ಯೆಯನ್ನು ನಿರ್ವಹಿಸುವುದನ್ನು ಮತ್ತು ಒಂದು ಹಣಕಾಸು ವರ್ಷದಲ್ಲಿ ನಮೋದಿಸಿದ ಸಂಖ್ಯೆಯು ಮರುಬಳಕೆ ಮಾಡದೆ ಇರುವುದನ್ನು ಕಾನೂನು ಬಯಸುತ್ತದೆ. ಮಾರಾಟ ಸರಕುಪಟ್ಟಿ, ಪಾವತಿ ಲೆಕ್ಕಪತ್ರ ಮತ್ತು ಡೆಬಿಟ್ ಲೆಕ್ಕಪತ್ರ ಇತ್ಯಾದಿ ಎಲ್ಲಾ ದಾಖಲೆಗಳಿಗೂ ಇದು ಅನ್ವಯವಾಗುತ್ತದೆ.
ಆದರೂ, ಲೆಕ್ಕ ಪಟ್ಟಿಗಳ ಭಿನ್ನ ಗುಣಗಳಿಗೆ ತಕ್ಕಂತೆ ಅಥವಾ ಒಂದೇ ಜಿಎಸ್ಟಿಎನ್ ಸಂಖ್ಯೆಯಲ್ಲಿ ರಾಜ್ಯವೊಂದರೊಳಗೆ ಭಿನ್ನ ಶಾಖೆಗಳು ಹೊಂದಿರುವ ಲೆಕ್ಕಪಟ್ಟಿಗಳಿಗೆ ಬೇರೆ ಬೇರೆ ರೀತಿಯ ಭಿನ್ನ ಲೆಕ್ಕ ಪಟ್ಟಿ ಸರಣಿ ಸಂಖ್ಯೆಯನ್ನು ನೀಡಲು ಕಾನೂನು ಅನುಮತಿಸುತ್ತದೆ.
ಉದಾಹರಣೆಗೆ, ಬಿ2ಬಿ ಸರಕುಪಟ್ಟಿ, ಬಿ2ಸಿ ಸರಕುಪಟ್ಟಿ, ಪುನಾರವರ್ತನೆ ಶುಲ್ಕದ ಸರಕುಪಟ್ಟಿ ಮತ್ತು ಇತ್ಯಾದಿ ಬೇರೆ ಬೇರೆಯ ಲೆಕ್ಕಪುಸ್ತಕ ಸರಣಿ ಸಂಖ್ಯೆಯನ್ನು ನೀವು ಹೊಂದಿರಬಹುದು.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಮತ್ತು ಪುಣೆಯಲ್ಲಿ ಶಾಖೆಯನ್ನು ಹೊಂದಿರುವ ಸಂಸ್ಥೆಯು ಒಂದೇ ಜಿಎಸ್ಟಿಎನ್ ಮೂಲಕ ತಮ್ಮ ಮಾಹಿತಿಗಳನ್ನು ಕೇಂದ್ರೀಕೃತವಾಗಿ ಅಥವಾ ವಿಕೇಂದ್ರಕೃತವಾಗಿ ನಿರ್ವಹಿಸುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂತಹ ಸಂದರ್ಭಗಳಲ್ಲಿ, ತಮ್ಮ ಲೆಕ್ಕಪಟ್ಟಿಗೆ ಇವರು ಭಿನ್ನ ಸರಣಿ ಸಂಖ್ಯೆಯನ್ನು ನೀಡುವ ಮೂಲಕ ಇವರು ಸುಲಭವಾಗಿ ಬೆಲೆಪಟ್ಟಿಯನ್ನು ಗುರುತಿಸಬಹುದಾಗಿದೆ. ಉದಾಹರಣೆಗೆ: ಮುಂಬೈನಲ್ಲಿರುವ ಬೆಲೆಪಟ್ಟಿ ಸರಣಿ Mum/001/17-18 ಈ ರೀತಿ ಇರುತ್ತದೆ ಮತ್ತು ಪುಣೆಯಲ್ಲಿರುವ ಬೆಲೆಪಟ್ಟಿ ಸಂಖ್ಯೆ Pun/001/17-18 ಈ ರೀತಿ ಇರುತ್ತದೆ.

ಮೇಲಿನ ಸಂದರ್ಭವನ್ನು ನಿರ್ವಹಿಸುವ ಸಲುವಾಗಿ, ಟ್ಯಾಲಿ.ಇಆರ್ಪಿ 9 ಬಳಕೆದಾರರಿಗೆ ಭಿನ್ನ ಗುಣದ ಬೆಲೆಪಟ್ಟಿ ಮತ್ತು ಶಾಖೆಯ ಬೆಲೆಪಟ್ಟಿ ರಚಿಸಲು ಭಿನ್ನ ರಸೀದಿ ಬಗೆಯನ್ನು ರಚಿಸುವ ಅವಕಾಶವನ್ನು ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ ಬೆಲೆಪಟ್ಟಿಯನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಪೂರ್ವ ಪ್ರತ್ಯಯ ಮತ್ತು ಪ್ರತ್ಯಯ ವಿವರಗಳನ್ನು ನೀಡುವ ಆಯ್ಕೆಯನ್ನು ಬಳಕೆ ಮಾಡಬಹುದಾಗಿದೆ.

ಇಲ್ಲಿ ಕ್ಲಿಕ್ ಮಾಡಿರಿಹೊಸ ರಸೀದಿ ಬಗೆಯನ್ನು ರಚಿಸಲು .

ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿರಿಜಿಎಸ್ಟಿ ಬೆಲೆಪಟ್ಟಿ ಸಂಖ್ಯೆ ಸಿದ್ಧಪಡಿಸುವ ಕುರಿತು .

ಜುಲೈ 1 ರ ಬಳಿಕೆ ಜಿಎಸ್ಟಿ ಸರಕುಪಟ್ಟಿಯಲ್ಲಿ ಹೊಸದಾಗಿ ಸಂಖ್ಯೆ ನೀಡುವ ಅವಶ್ಯಕತೆ ನಿಮಗಿದೆಯೇ?

ಜಿಎಸ್ಟಿ ಕಾನೂನು ಇದನ್ನು ಕಡ್ಡಾಯಗೊಳಿಸಿಲ್ಲ. ಆದರೆ, ನೀವು ಯಾವುದೇ ಸಂಖ್ಯೆಯ ಮೂಲಕ ಸಂಖ್ಯೆ ನೀಡುವಿಕೆಯನ್ನು ನೀವು ಆರಂಭಿಸಬಹುದು ಮತ್ತು ನೀಡಿರುವ ಸಂಖ್ಯೆಯು ಪ್ರತಿ ಹಣಕಾಸು ವರ್ಷದಲ್ಲಿಯೂ ಮರುಕಳಿಸಬಾರದು.

ಟ್ಯಾಲಿಯ ಜಿಎಸ್ಟಿ ಸಿದ್ಧ ತಂತ್ರಾಂಶವು ಅನನ್ಯವಾಗಿದೆ ಮತ್ತು ಈಗ ಇರುವ ಸಂಖ್ಯೆಯ ಮುಂದುವರಿಸಲು ಬಯಸಿದರೆ ಜುಲೈ 1ರಿಂದ ನಿಮಗೆ ಇದು ಹೊಸದಾಗಿ ಅವಕಾಶ ನೀಡುತ್ತದೆ.

ಆದರೂ, ನೀವು ನೀಡುವ ಸಂಖ್ಯೆಯು ನಿರಂತರವಾಗಿರುವಂತೆ ನೋಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬಹುದು. ಆದ್ದರಿಂದ, ನೀವು ಅಳಿಸುವಿಕೆ ಮತ್ತು ಸೇರಿಸುವಿಕೆಯನ್ನು ತಪ್ಪಿಸಬೇಕು.
ಬೆಲೆಪಟ್ಟಿಯನ್ನು ಅಳಿಸುವ ಬದಲು, ಬೆಲೆಪಟ್ಟಿಯನ್ನು ರದ್ದುಗೊಳಿಸುವ ಆಯ್ಕೆಯನ್ನು ನೀವು ಮಾಡಿಕೊಳ್ಳಬಹುದು ಮತ್ತು ಅದೇ ಬೆಲೆಪಟ್ಟಿಯಲ್ಲಿ ಅಥವಾ ಪರಿಷ್ಕøತ ಬೆಲೆಪಟ್ಟಿಯ ಸಂಖ್ಯೆಯಲ್ಲಿ ನೀವು ಸುಲಭವಾಗಿ ರಚಿಸಬಹುದು. ಅಳಿಸಿರುವ ಬೆಲೆಪಟ್ಟಿಯ ವರದಿ ಮಾಡುವುದು ಜಿಎಸ್ಟಿ ಆದಾಯ ಸಲ್ಲಿಕೆಯಲ್ಲಿ ಸಲ್ಲಿಸುವ ಅಗತ್ಯವಿರುತ್ತದೆ.

ಬೆಲೆಪಟ್ಟಿಯು ಅಳಿಸಿ ಹೋಗಿದ್ದರೆ ಅಥವಾ ಸೇರಿಸಿದ್ದರೆ ಏನಾಗುತ್ತದೆ?

ಬೆಲೆಪಟ್ಟಿಯನ್ನು ಅಳಿಸಿದ್ದರೆ ನಿಮಗೆ ಉಂಟಾಗುವ ಸವಾಲುಗಳನ್ನು ನಾವು ಅರ್ಥಮಾಡಿಕೊಳ್ಳೋಣ ಮತ್ತು ನೀವು ಸಲ್ಲಿಸಿದ ಆದಾಯ ಸಲ್ಲಿಕೆಯಲ್ಲಿ ಲೆಕ್ಕಪುಸ್ತಕದ ಹೊಂದಾಣಿಕೆಯನ್ನು ಖಚಿತಪಡಿಸಲು ನೀವು ಗಮನಿಸಬೇಕಾದ ಸಂಗತಿಗಳನ್ನು ತಿಳಿದುಕೊಳ್ಳೋಣ:

    1. ನೀವು ಸರಕುಪಟ್ಟಿ ಸಂಖ್ಯೆ 234 ರಚಿಸಿದ್ದೀರಿ ಮತ್ತು ಜಿಎಸ್ಟಿಎನ್ನಲ್ಲಿ ಲಗ್ಗತ್ತಿಸಿದ್ದೀರಿ ಎಂದು ಊಹಿಸೋಣ. ಸಹಿ ಹಾಕುವುದು ಮತ್ತು ಭರ್ತಿ ಮಾಡಿಕೊಳ್ಳುವುದು ಇನ್ನೂ ಬಾಕಿ ಉಳಿದಿದೆ. ನೀವು ಈಗ ನಿಮ್ಮ ಪುಸ್ತಕದಿಂದ ಇದನ್ನು ಅಳಿಸಲು ಬಯಸಿದ್ದರೆ, ನೀವು ಜಿಎಸ್ಟಿಎನ್ ವೆಬ್ಸೈಟ್ನಿಂದಲೂ ಇದನ್ನು ಅಳಿಸಿದ್ದೀರಿ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳುವ ಅಗತ್ಯವಿದೆ. ಇದೇ ಸಮಯದಲ್ಲಿ, ಉಳಿದ ಬೆಲೆಪಟ್ಟಿಗಳಲ್ಲಿ ರಸೀದಿ ಸಂಖ್ಯೆಗಳು ಬದಲಾಗಿಲ್ಲ ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು.
    2. ನೀವು ಸರಕುಪಟ್ಟಿಯನ್ನು ರಚಿಸಿದ್ದೀರಿ, ಜಿಎಸ್ಟಿಎನ್ ವೆಬ್ಸೈಟ್ನಲ್ಲಿ ಲಗ್ಗತ್ತಿಸಿದ್ದೀರಿ ಮತ್ತು ಅದಕ್ಕೆ ಸಹಿ ಹಾಕಿದ್ದೀರಿ. ಆದರೂ, ಈ ಸರಕುಪಟ್ಟಿಯನ್ನು ಖರೀದಿದಾರರು ಸಮ್ಮತಿಸಿಲ್ಲ ಎಂದಿರಲಿ. ಈ ಕಾರಣಕ್ಕಾಗಿ ನೀವು ಪುಸ್ತಕದಿಂದ ಸರಕುಪಟ್ಟಿಯನ್ನು ಅಳಿಸುವಿರಿ. ಇಂತಹ ಸಂದರ್ಭದಲ್ಲಿ, ನೀವು ಸರಕುಪಟ್ಟಿಯ ತಿದ್ದುಪಡಿಯನ್ನು ಸೂಚಿಸುವ ಶೂನ್ಯ ಮೌಲ್ಯದ ಸರಕುಪಟ್ಟಿಯನ್ನು ಲಗ್ಗತ್ತಿಸಬೇಕು, ಇದನ್ನು ಈ ಹಿಂದಿನ ತಿಂಗಳೇ ಲಗ್ಗತ್ತಿಸಿರಬೇಕು.
    3. ನೀವು ಸರಕುಪಟ್ಟಿಯನ್ನು ರಚಿಸಿದ್ದೀರಿ, ಜಿಎಸ್ಟಿಎನ್ ವೆಬ್ಸೈಟ್ನಲ್ಲಿ ಲಗ್ಗತ್ತಿಸಿದ್ದೀರಿ ಮತ್ತು ಅದಕ್ಕೆ ಸಹಿ ಹಾಕಿದ್ದೀರಿ. ನಿಮ್ಮ ಖರೀದಿದಾರರು ಮಾರಾಟವನ್ನು ಸಮ್ಮತಿಸಿದ್ದಾರೆ. ಇಂತಹ ಬೆಲೆಪಟ್ಟಿಯನ್ನು ಪುಸ್ತಕದಿಂದ ಅಳಿಸಿ ಹಾಕಬೇಡಿ. ಇದರ ಪರಿಣಾಮವನ್ನು ನಿರಾರ್ಥಕಗೊಳಿಸಲು ನೀವು ಪೂರ್ಣ ಮೌಲ್ಯದ ಕ್ರೆಡಿಟ್ ಟಿಪ್ಪಣಿಯನ್ನು ನೀವು ನೀಡಬೇಕಾಗುತ್ತದೆ.
    4. ನೀವು ನಿರಂತರವಾಗಿ ಅಥವಾ ಸತತವಾಗಿ ಸಂಖ್ಯೆಯನ್ನು ನಿರ್ವಹಿಸುತ್ತ ಹೋಗಬೇಕಿರುವುದರಿಂದ, ಬೆಲೆಪಟ್ಟಿಯನ್ನು ಸೇರಿಸುವುದನ್ನು ನಾವು ಶಿಫಾರಸು ಮಾಡುವುದಿಲ್ಲ. ಸರಣಿಯ ನಡುವೆ ನೀವು ಬೆಲೆಪಟ್ಟಿಯನ್ನು ಸೇರ್ಪಡೆ ಮಾಡಿದ್ದರೆ, ತೆರಿಗೆ ಇಲಾಖೆಗೆ ನೀವು ವರದಿ ಮಾಡಿದ್ದಕ್ಕೂ ಇದಕ್ಕೂ ಯಾವುದೇ ಹೊಂದಾಣಿಕೆಯಾಗುವುದಿಲ್ಲ. ಉದಾಹರಣೆಗೆ ನೀವು ಸರಕುಪಟ್ಟಿ 3ಎಯನ್ನು ಸರಕುಪಟ್ಟಿ ಸಂಖ್ಯೆ 3 ಮತ್ತು 4ರ ನಡುವೆ ಸೇರ್ಪಡೆ ಮಾಡಿದ್ದರೆ, ನೀವು ವರದಿ ಮಾಡಿದ ಬೆಲೆಪಟ್ಟಿಗಳ ಸಂಖ್ಯೆ ಹೆಚ್ಚಾಗುತ್ತದೆ.

ಗಮನಿಸಿ:

ಪ್ರತಿಕೂಲಪಕ್ಷದ ಜಿಎಸ್ಟಿಎನ್, ಸರಕುಪಟ್ಟಿ ಸಂಖ್ಯೆ ಮತ್ತು ಸರಕುಪಟ್ಟಿ ದಿನಾಂಕದ ಆಧಾರದಲ್ಲಿ ಸರಕುಪಟ್ಟಿ ಹೋಲಿಕೆ ಮಾಡಲಾಗುತ್ತದೆ. ಕೇಂದ್ರ ಜಿಎಸ್ಟಿ ಕಾಯಿದೆ ಪರಿಚ್ಛೇಧ ಸಂಖ್ಯೆ 31ರಡಿಯಲ್ಲಿ ತೆರಿಗೆ ಸರಕುಪಟ್ಟಿ , ಡೆಬಿಟ್ ಟಿಪ್ಪಣಿ, ಕ್ರೆಡಿಟ್ ಟಿಪ್ಪಣಿ ಇತ್ಯಾದಿಗಳನ್ನು ವ್ಯಾಖ್ಯಾನಿಸಲಾಗಿದೆ ಮತ್ತು ಸರಕುಪಟ್ಟಿ ಆಡಳಿತದ ಕುರಿತು ನಿಯಮಗಳು ಸಿಬಿಇಸಿ ವೆಬ್ ಸೈಟ್ನ ಲಭ್ಯವಿದೆ.

ಟ್ಯಾಲಿಯ ಜಿಎಸ್ಟಿ ತಂತ್ರಾಂಶವಾಗಿರುವ ಟ್ಯಾಲಿ.ಇಆರ್ಪಿ 9 ರಿಲೀಸ್ 6 ಅನ್ನು ಈ ಎಲ್ಲಾ ಸಾಮಾರ್ಥ್ಯವನ್ನು ನಿಭಾಯಿಸುವಂತೆ ರೂಪಿಸಲಾಗಿದೆ. www.tallysolutions.com/downloads ಈ ಕೊಂಡಿಗೆ ಭೇಟಿ ನೀಡುವ ಮೂಲಕ ಜಿಎಸ್ಟಿ ಸಿದ್ಧ ತಂತ್ರಾಂಶದ ಅನುಭವವನ್ನು ಪಡೆಯಿರಿ. ನಿಮ್ಮ ಪ್ರತಿಕ್ರಿಯೆ ನಮಗೆ ಅತ್ಯಂತ ಅಗತ್ಯವಾಗಿದೆ. ಈ ಲೇಖನದ ಕಾಮೆಂಟ್ ವಿಭಾಗದಲ್ಲಿ ನಿಮ್ಮ ಪ್ರತಿಕ್ರಿಯೆ ಬರೆಯಿರಿ

ಟ್ಯಾಲಿಯ ಜಿಎಸ್ಟಿ-ಸಿದ್ಧ ತಂತ್ರಾಂಶವನ್ನು ಖರೀದಿಸಲು ಅಥವಾ ಮೇಲ್ದರ್ಜೆಗೆ ಏರಿಸಲು ಇಲ್ಲಿ ಕ್ಲಿಕ್ ಮಾಡಿರಿ..

Are you GST ready yet?

Get ready for GST with Tally.ERP 9 Release 6

195,082 total views, 128 views today

Avatar

Author: Shailesh Bhatt