ನಮ್ಮ ದೇಶವು ಒಂದು ಏಕೀಕೃತ ಪರೋಕ್ಷ ತೆರಿಗೆ ವ್ಯವಸ್ಥೆಗೆ ತೆರೆದುಕೊಳ್ಳಲು ಎದಿರುನೋಡುತ್ತಿದೆ. ಇದು ಪರೋಕ್ಷ ತೆರಿಗೆ ಪದ್ಧತಿಯಲ್ಲಿ ದೊಡ್ಡ ಮಟ್ಟದ ತೆರಿಗೆ ಸುಧರಣೆಯಾಗಿದೆ ಮತ್ತು ಇದು ಪರೋಕ್ಷ ತೆರಿಗೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಿದೆ. ಎಲ್ಲಾ ಪೂರೈಕೆ ಸರಣಿಗಳಲ್ಲಿ (ತಯಾರಿಕಾ ವಲಯದಿಂದ ಅಂತಿಮವಾಗಿ ಗ್ರಾಹಕರಿಗೆ ದೊರಕುವವರೆಗೆ) ಮತ್ತು ರಾಜ್ಯಗಳ ಗಡಿ ಮೇರಿ ಆದಾನ ತೆರಿಗೆ ಪಾವತಿಯ ಹರಿವು ಉಂಟಾಗುವ ಪರಿಕಲ್ಪನೆಯಿಂದ ಜಿಎಸ್ಟಿಯನ್ನು ಪರಿಚಯಿಸಲಾಗಿದೆ. ಎರಡನೆಯದಾಗಿ, ಜಿಎಸ್ಟಿಯಡಿ ಪೂರೈಕೆಯು ತೆರಿಗೆ ವಿಧಿಸಬಹುದಾದ ಕಾರ್ಯಕ್ರಮವಾಗಿದ್ದು, ತಯಾರಕರು, ವ್ಯಾಪಾರ ಮತ್ತು ಸೇವೆ ಒದಗಿಸುವುದಕ್ಕೆ ಇದು ಅಸಮಂಜಸವಾಗಿ ಕಾಣಿಸುತ್ತದೆ. ಪೂರೈಕೆ ಎನ್ನುವುದರಲ್ಲಿ ಸಾಗಾಣೆಯೂ ಒಳಗೊಂಡಿರುತ್ತದೆ. ದಾಸ್ತಾನು ಸಾಗಾಣೆ ಹೊಂದಿರುವ ಕೆಲವೊಂದು ನಿಶ್ಚಿತ ಪೂರೈಕೆಗಳಿಗೆ ಜಿಎಸ್ಟಿಯಡಿ ವಿಧಿಸಬಹುದಾಗಿದೆ. ಇದನ್ನು ಅನುಸರಿಸುವುದನ್ನು ಅರ್ಥಮಾಡಿಕೊಳ್ಳುವುದು ವ್ಯವಹಾರಗಳಿಗೆ ಕಡ್ಡಾಯವಾಗಿದೆ. ವ್ಯವಹಾರದಲ್ಲಿ ದಾಸ್ತಾನು ಸಾಗಾಟದ ಮೇಲೆ ಜಿಎಸ್ಟಿ ಪರಿಣಾಮದ ಕುರಿತು ಇಲ್ಲಿ ನಾವು ಮಾಹಿತಿ ನೀಡಿದ್ದೇವೆ.

ದಾಸ್ತಾನು ಸಾಗಾಟದ ಮೇಲೆ ತೆರಿಗೆ ವಿಧಿಸುವಿಕೆ

ಕೇಂದ್ರ ಅಬಕಾರಿ ಸುಂಕದಡಿ, ನೋಂದಾಯಿತ ತಯಾರಕರು ಅಬಕಾರಿ ಸುಂಕ ವಿಧಿಸಬಹುದಾದ ಸರಕುಗಳ ದಾಸ್ತಾನು ಸಾಗಾಟ ಮಾಡಿದರೆ, ಉತ್ಪಾದನೆ ವೆಚ್ಚ ಮತ್ತು ವ್ಯಾಟ್ ನಡಿ ಶೇಕಡ 100+ಶೇಕಡ 10ಕ್ಕೆ ಕಡ್ಡಾಯವಾಗಿ ಅಬಕಾರಿ ಸುಂಕ ಪಾವತಿಸಬೇಕು, ಎಲ್ಲಾದರೂ ನಮೂನೆ ಎಫ್ ಸಲ್ಲಿಸಿ ಮಾಡುವ ದಾಸ್ತಾನು
ಸಾಗಾಟಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ. ಆದರೂ, ಸರಕುಗಳ ಖರೀದಿಯ ಮೇಲೆ ವಿಧಿಸುವ ಮೌಲ್ಯವರ್ದಿತ ತೆರಿಗೆಯು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.

Branch Stock Transfer under VAT and Excise
ಜಿಎಸ್ಟಿಯಡಿ ಪೂರೈಕೆಯ ಮೇಲೆ ಚಂದಾ ತೆರಿಗೆಯಲ್ಲಿ ಸಾಗಾಟವು ಸೇರಿದೆ ಮತ್ತು ಭಿನ್ನ ವ್ಯಕ್ತಿಯ ವ್ಯಾಖ್ಯಾನದೊಂದಿಗೆ, ಶಾಖೆಗಳನ್ನೂ ಭಿನ್ನವಾಗಿ ನಡೆಸಿಕೊಳ್ಳಲಾಗುತ್ತದೆ. ಇದರ ಪ್ರಕಾರ, ಮುಂದಿನ ಎರಡು ಪ್ರಕರಣಗಳಲ್ಲಿ ಯಾವುದೇ ದಾಸ್ತಾನಿನ ಸಾಗಾಟಕ್ಕೆ ತೆರಿಗೆ ವಿಧಿಸಬಹುದಾಗಿದೆ:

  • ರಾಜ್ಯದೊಳಗಿನ ದಾಸ್ತಾನು ಸಾಗಾಟ: ಸಂಸ್ಥೆಯು ರಾಜ್ಯವೊಂದರಲ್ಲಿ ಒಂದಕ್ಕಿಂತ ಹೆಚ್ಚು ನೋಂದಾಯಿತ ಘಟಕಗಳನ್ನು ಹೊಂದಿದ್ದರೆ.
  • ರಾಜ್ಯದ ಹೊರಗಡೆ ದಾಸ್ತಾನು ಸಾಗಾಟ: ಎರಡು ಭಿನ್ನ ರಾಜ್ಯಗಳಲ್ಲಿ ಇರುವ ಎರಡು ಶಾಖೆಗಳ ನಡುವೆ ಸಾಗಾಟ ನಡೆದರೆ ಅದಕ್ಕೆ ತೆರಿಗೆ

Branch stock transfers under GST
ಜಿಎಸ್ಟಿಯಡಿ ದಾಸ್ತಾನು ಸಾಗಾಟದ ಮೇಲೆ ತೆರಿಗೆ ವಿಧಿಸುವುದರಿಂದ ಹಣದ ಹರಿವಿನ ಮೇಲೆ ಪರಿಣಾಮ ಬೀರಬಹುದು. ಇದು ಯಾಕೆಂದರೆ, ದಾಸ್ತಾನು ಸಾಗಾಟ ಮಾಡಿದಂದು ತೆರಿಗೆ ಪಾವತಿಸಲಾಗುತ್ತದೆ ಮತ್ತು ಸ್ವೀಕರಿಸುವ ಶಾಖೆಯಿಂದ ದಾಸ್ತಾನಿಗೆ ಪಾವತಿ ಮಾಡುವಾಗ ಐಟಿಸಿ ಅನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತದೆ. ಹೀಗಾಗಿ, ಜಿಎಸ್ಟಿಯಡಿ, ದಾಸ್ತಾನು ಸಾಗಾಟದ ವ್ಯವಹಾರದಲ್ಲಿ ತೊಡಗಿದಾಗ, ಪ್ರಮುಖವಾಗಿ ಔಷಧಿ ಮತ್ತು ಎಫ್ಎಂಸಿಜಿ ಸರಕುಗಳಿಗೆ, ತೆರಿಗೆ ಅಳವಡಿಕೆ ಇರುವುದರಿಂದ ಹೆಚ್ಚುವರಿ ಉದ್ಯೋಗಿಗಳ ಅವಶ್ಯಕತೆ ಬೀಳುತ್ತದೆ. ಇದು ಅತ್ಯಂತ ಪುಟ್ಟದಾದ ಮಾನವ ಸಂಪನ್ಮೂಲ ಬಳಸುವ ಎಸ್ಎಂಇಗಳಿಗೆ ಸವಾಲಿನ ಸಂಗತಿಯಾಗಿದೆ.
ಲ್ಲಾದರೂ ಋತು ಆಧಾರಿತ ವ್ಯವಹಾರಗಳನ್ನು ಪರಿಗಣಿಸಿದರೆ, ಅಲ್ಲಿ ಉತ್ಪಾದನೆಯು ವರ್ಷಪೂರ್ತಿ ನಡೆಯುತ್ತದೆ, ಆದರೆ, ಮಾರಾಟವು ವರ್ಷದ ನಿಗಧಿತ ಋತುವಿನಲ್ಲಿ ಅಥವಾ ಸಮಯದಲ್ಲಿ ಮಾತ್ರ ನಡೆಯುತ್ತದೆ. ಇಂತಹ ಪ್ರಕರಣಗಳಲ್ಲಿ, ದೀರ್ಘಕಾಲದವರೆಗೆ ಹಣದ ಕೊರತೆ ಉಂಟಾಗುತ್ತದೆ. ಯಾಕೆಂದರೆ, ಶಾಖೆಗಳ ಘಟಕಗಳ ನಡುವೆ ದಾಸ್ತಾನು ಸಾಗಾಟ ಮಾಡುವಾಗ ಪ್ರತಿತಿಂಗಳು ಜಿಎಸ್ಟಿ ಪಾವತಿಸಬೇಕಾಗುತ್ತದೆ, ಆದರೆ, ಮಾರಾಟ ಮಾಡುವ ಅವಧಿಯಲ್ಲಿ ಪಾವತಿಯನ್ನು ಪರಿಣಾಮಕಾರಿಯಾಗಿ ಮಾಡಬಹುದು.

GST needs to be paid in the month in which branch transfers are doneClick To Tweet

ಆದಾನ ತೆರಿಗೆ ಪಾವತಿ ಮೇಲೆ ಪರಿಣಾಮ

ಸರಕುಗಳ ಮೇಲೆ ಆದಾನ ತೆರಿಗೆಯನ್ನು ಉತ್ಪಾದನೆ ಪೂರ್ಣಗೊಂಡಿರುವ ಸರಕುಗಳ ಸಾಗಾಟ ಮಾಡಿದಾಗ ಲಭ್ಯವಿರುವ ವಿನಾಯಿತಿ ದರದಲ್ಲಿ ವಿಧಿಸಲಾಗುತ್ತದೆ. ರಿವರ್ಸಲ್ ದರವು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಖರೀದಿಗೆ ಪಾವತಿಸಿದ ತೆರಿಗೆಗೆ ಆದಾನ ತೆರಿಗೆ ಪಾವತಿಯು ಶೇಕಡ 4ರಷ್ಟು ಅಬಕಾರಿ ವಿಧಿಸಲಾಗುತ್ತದೆ. ಉದಾಹರಣೆಗೆ, ಎಲ್ಲಾದರೂ ಖರೀದಿಗೆ ಶೇಕಡ 12.5ರಷ್ಟು ಮೌಲ್ಯವರ್ದಿತ ತೆರಿಗೆ ಪಾವತಿಸಿದರೆ, ಅಬಕಾರಿಯು ಶೇಕಡ 4 ಆಗುತ್ತದೆ, ಇದರಿಂದ ಶೇಕಡ 8.5ರಷ್ಟು ಆದಾನ ತೆರಿಗೆ ಆದಾನ ವ್ಯಾಟ್ ಕ್ರೆಡಿಟ್ ಆಗಿ ಪಡೆಯಬಹುದು ಮತ್ತು ಶೇಕಡ 4ರಷ್ಟನ್ನು ರಿವರ್ಸ್ ಅಥವಾ ಪುನಾರವರ್ತನೆ ಮಾಡಬಹುದು. ಐಟಿಸಿ ಪುನಾರವರ್ತನೆಯನ್ನು ಉತ್ಪಾದನೆ ವೆಚ್ಚಕ್ಕೆ ಸೇರಿಸಲಾಗುತ್ತದೆ ಮತ್ತು ಇದರಿಂದ ಕ್ಯಾಸ್ಕೆಂಡಿಂಗ್ ಪರಿಣಾಮ ಉಂಟಾಗಬಹುದು.

ವ್ಯಾಟ್
ಖರೀದಿ ಮೌಲ್ಯ(ಶೇಕಡ 10ಕ್ಕೆ 10 ಸಾವಿರ ರೂ.)1,00,000
ವ್ಯಾಟ್ @ 14.5%14,500
ಒಟ್ಟು 1,14,500
ದಾಸ್ತಾನು ಸಾಗಾಟ (10)
ವ್ಯಾಟ್ (ವಿನಾಯಿತಿ)
ಐಟಿಸಿ ಲಭ್ಯತೆ
ವ್ಯಾಟ್ ಪಾವತಿ @14.5%14,500
ಶೇಕಡ 4 ವ್ಯಾಟಿಗೆ (ಶೇಕಡ 14.5- ಶೇಕಡ 4) ಐಟಿಸಿ 10,500
ಐಟಿಸಿ ಪುನಾರವರ್ತನೆ @ 4%4,000
ಉತ್ಪಾದನೆ ವೆಚ್ಚವಾಗಿ 4,000 ರೂ. ಅನ್ನು ಸೇರಿಸಲಾಗಿದೆ.

ಆದರೂ, ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ದಾಸ್ತಾನು ಸಾಗಾಟಕ್ಕೆ ಪಾವತಿಸಿರುವ ತೆರಿಗೆಗೆ ಪೂರ್ಣವಾಗಿ ಆದಾನ ತೆರಿಗೆ ಪದ್ಧತಿ ಲಭ್ಯವಿರುತ್ತದೆ. ಇದು ಹಲವು ಬಗೆಯ ತೆರಿಗೆ ಪಾವತಿ ಮಾಡುವ ಪರಿಣಾಮವನ್ನು ತೆಗೆದುಹಾಕುತ್ತದೆ, ಈ ಉತ್ಪನ್ನವು ವೆಚ್ಚ ಉಳಿತಾಯಕ್ಕೆ ಸಹಕಾರಿಯಾಗಿದೆ.

GST
ಖರೀದಿ ಮೌಲ್ಯ (10 ಕ್ವಾಲಿಟಿ@10,000/ಸಂಖ್ಯೆ)1,00,000
ಸಿಜಿಎಸ್ಟಿ@ 9%9,000
ಎಸ್ಜಿಎಸ್ಟಿ@ 9%9,000
ಒಟ್ಟು 1,18,000
ದಾಸ್ತಾನು ಸಾಗಾಟ (10 ಕ್ವಾಲಿಟಿ)
ಸಿಜಿಎಸ್ಟಿ@ 9% *9,000
ಎಸ್ಜಿಎಸ್ಟಿ@ 9% *9,000
ITC Eligibility
ಸಿಜಿಎಸ್ಟಿ@ 9%9,000
ಎಸ್ಜಿಎಸ್ಟಿ @ 9%9,000
18,000ವು ಸಂಪೂರ್ಣವಾಗಿ ಐಟಿಸಿಯಾಗಿ ಲಭ್ಯ

*ಈ ಇಲ್ಯುಸ್ಟ್ರೇಷನ್ ಉದ್ದೇಶದಿಂದ ಜಿಎಸ್ಟಿ ದರವನ್ನು ಶೇಕಡ 18 ಎಂದು ನಮೋದಿಸಲಾಗಿದೆ, ದಾಸ್ತಾನು ರವಾನೆ ಮೌಲ್ಯವಾಗಿ ಖರೀದಿ ವೆಚ್ಚ 1,00,000, ಅನ್ನು ಪರಿಗಣಿಸಲಾಗಿದೆ ಮತ್ತು ಜಿಎಸ್ಟಿ ಪ್ರಕಾರ ಲೆಕ್ಕ ಹಾಕಲಾಗಿದೆ.

Under GST, tax paid on stock transfer will be fully available as input tax creditClick To Tweet

ಯಾವುದೇ ಘೋಷಣೆ ನಮೂನೆಯ ರೇಷನ್ ಫಾರ್ಮ್ ಅಗತ್ಯವಿಲ್ಲ=ದಾಸ್ತಾನು ಸಾಗಾಟ ಪ್ರಕ್ರಿಯೆ ವೇಗವಾಗಿ ನಡೆಯುತ್ತದೆ.

ಮೌಲ್ಯವರ್ಧಿತ ತೆರಿಗೆ ಪದ್ಧತಿಯ ಅನ್ವಯ, ದಾಸ್ತಾನು ಸಾಗಾಟಕ್ಕೆ ತೆರಿಗೆ ವಿನಾಯಿತಿ ದೊರಕಬೇಕೆಂದರೆ, ಸ್ವೀಕೃತಿ ಮಾಡುವ ಶಾಖೆಯು ದಾಸ್ತಾನು ಕಳುಹಿಸಿಕೊಡುವ ಮೂಲ ಶಾಖೆಗೆ ನಮೂನೆ ಎಫ್ ಅನ್ನು ಸಲ್ಲಿಸಬೇಕು. ದಾಸ್ತಾನನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡಲಾಗಿಲ್ಲವೆಂದು ಸಂಬಂಧಪಟ್ಟ ಪ್ರಾಧಿಕಾರವು ಅನುಮೋದಿಸಬೇಕಾಗುತ್ತದೆ.

ಜಿಎಸ್ಟಿಯಲ್ಲಿ, ಎಲ್ಲಾ ಘೋಷಣೆಯ ನಮೂನೆಗಳು ಹೋಗುತ್ತವೆ, ಇದರ ಪರಿಣಾಮವಾಗಿ ದಾಸ್ತಾನು ಸಾಗಾಟಕ್ಕೆ ಯಾವುದೇ ನಮೂನೆ ಭರ್ತಿ ಮಾಡಬೇಕಿಲ್ಲ. ಇಂತಹ ಚಟುವಟಿಕೆಯಲ್ಲಿ ಒಳಗೊಂಡಿರುವ ಸಮಯ ಮತ್ತು ಪರಿಣಾಮವನ್ನು ತೆಗೆದು ಹಾಕುವುದರಿಂದ ಇದು ದಾಸ್ತಾನು ಸಾಗಾಟದ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.

With GST, all the declaration forms will be abolished. As a result, there will be no need to furnish any forms for stock transfers.Click To Tweet

ದಾಸ್ತಾನು ಸಾಗಾಣೆಯಲ್ಲಿ ತೆರಿಗೆ ನಿರ್ಧರಿಸುವಿಕೆ

ಸಾಮಾನ್ಯವಾಗಿ, ದಾಸ್ತಾನು ಸಾಗಾಟವೆಂದರೆ ಘಟಕ ಅಥವಾ ಶಾಖೆಗಳಿಗೆ ಸರಕುಗಳ ಚಲನೆಯಾಗಿದೆ. ಯಾವುದೇ ಪರಿಗಣನೆ ಇಲ್ಲದೆ ಇದನ್ನು ಮಾಡಲಾಗುತ್ತದೆ. ಆದರೆ, ಯಾವ ತೆರಿಗೆ ವಿಧಿಸಬೇಕೆನ್ನುವುದು ಸಂಕೀರ್ಣತೆ ಒಡ್ಡುತ್ತದೆ. ಕೇಂದ್ರ ಅಬಕಾರಿ ಸುಂಕದಡಿ, ಸರಕು ಉತ್ಪಾದನೆಗೆ ಶೇಕಡ 100+10 ಅಬಕಾರಿ ಸುಂಕ ಪಾವತಿಸಬೇಕಾಗುತ್ತದೆ ಮತ್ತು ವ್ಯಾಟ್ ನಡಿ ದಾಸ್ತಾನು ಸಾಗಾಟಕ್ಕೆ ಚಂದಾ ತೆರಿಗೆ ಇರುವುದಿಲ್ಲ.
ಜಿಎಸ್ಟಿಯಲ್ಲಿ ವಹಿವಾಟು ಮೌಲ್ಯವನ್ನು ಯಾವ ಜಿಎಸ್ಟಿ ವಿಧಿಸಲಾಗಿದೆ ಎನ್ನುವುದರ ಮೇಲೆ ಪರಿಗಣಿಸಲಾಗುತ್ತದೆ. ದಾಸ್ತಾನು ಸಾಗಾಟ ವಿಷಯದಲ್ಲಿ ಯಾವುದೇ ಪರಿಗಣನೆ ಇಲ್ಲದೆ ಇರುವುದರಿಂದ ಯಾವುದೇ ವಹಿವಾಟು ಮೌಲ್ಯವನ್ನು ಹಾಕಲಾಗುವುದಿಲ್ಲ. ಜಿಎಸ್ಟಿ ಯುಗದಲ್ಲಿ ಸಂಕೀರ್ಣತೆ ಇನ್ನೂ ಉಳಿಯುತ್ತದೆ. ಸರಕಿನ ರೀತಿ ಮತ್ತು ಗುಣಮಟ್ಟ ಅಥವಾ ಇಂತಹ ವಿಧಾನಗಳನ್ನು ಉತ್ಪಾದನೆ ಮತ್ತು ಆದಾಯವನ್ನು ಪರಿಗಣಿಸಿ ತೆರಿಗೆ ವಿಧಿಸಬಹುದಾಗಿದೆ.

ಜಿಎಸ್ಟಿ ನಿಯಮ ಅನುಷ್ಠಾನಕ್ಕೆ ಬಂದ ಬಳಿಕ ಈ ವಿಷಯದಲ್ಲಿ ಸ್ಪಷ್ಟತೆ ದೊರಕಲಿದೆ.

ಜಿಎಸ್ಟಿ ನಿಯಮ ಅನುಷ್ಠಾನಕ್ಕೆ ಬಂದ ಬಳಿಕ ಈ ವಿಷಯದಲ್ಲಿ ಸ್ಪಷ್ಟತೆ ದೊರಕಲಿದೆ.

ಇಂದು, ತೆರಿಗೆ ಪ್ರಯೋಜನಗಳನ್ನು ಪಡೆಯುವ ಸಲುವಾಗಿ, ಸ್ಟೆಷನರಿ ಅಗತ್ಯಗಳಿಗಾಗಿ ಹಲವು ವ್ಯವಹಾರಗಳು ಶಾಖೆಗಳನ್ನು ನಿರ್ಮಿಸಿವೆ. ಸ್ಥಳೀಯ ಮೌಲ್ಯವರ್ದಿತ ತೆರಿಗೆ ಒಳಗೊಂಡಂತೆ ಬಿಲ್ಲಿಂಗ್ ನಡೆಸಲು ಇದರಿಂದ ವ್ಯವಹಾರಗಳಿಗೆ ಸಾಧ್ಯವಾಗುತ್ತದೆ. ಇದು ಖರೀದಿದಾರರಿಗೆ ಪಾವತಿಗೆ ಅವಕಾಶ ನೀಡುತ್ತದೆ. ಜೊತೆಗೆ, ದಾಸ್ತಾನು ಸಾಗಾಟಕ್ಕೆ ತೆರಿಗೆ ವಿಧಿಸಲಾಗದೆ ಇರುವುದರಿಂದ, ಶಾಖೆಗಳ ಸಂಖ್ಯೆಯೂ ಹೆಚ್ಚಾಗಬಹುದು.

ಜಿಎಸ್ಟಿಯಲ್ಲಿ ರಾಜ್ಯಗಳ ಗಡಿಗಳಾದ್ಯಂತ ಆದಾನ ತೆರಿಗೆ ಪದ್ಧತಿಯ ಅವ್ಯಾಹತ ಹರಿವಿಗೆ, ವ್ಯವಹಾರಗಳು ರಾಜ್ಯಗಳಾದ್ಯಂತ ಹಲವು ಶಾಖೆಗಳನ್ನು ತೆರೆಯುವ ಅಗತ್ಯವಿರುವುದಿಲ್ಲ. ವ್ಯವಹಾರ ಅಗತ್ಯಗಳಿಗಾಗಿ ಮಾತ್ರ ಅವರು ಶಾಖೆಗಳನ್ನು ತೆರೆಯಬೇಕಾಗಬಹುದು. ಪರಿಣಾಮಕಾರಿಯಾಗಿ ಶಾಖೆಗಳ ಕುರಿತು ಯೋಜಿಸುವುದರಿಂದ ಶಾಖೆಗಳ ಸಂಖ್ಯೆ ಕಡಿಮೆಯಾಗಬಹುದು, ಮತ್ತು ಶಾಖೆಗಳ ನಡುವಿನ ಸಾಗಾಟವನ್ನು ಗಮನಾರ್ಹವಾಗಿ ಕಡಿಮೆ ಮಾಡಬಲ್ಲದು.

ಕ್ರಾಸ್ ಶಾಖೆ ಸಾಗಾಟದ ಮೇಲೆ ಪರಿಣಾಮವನ್ನು ಅರ್ಥಮಾಡಿಕೊಳ್ಳುವುದು.

ಬೇಡಿಕೆ ಹೊಂದಿರುವುದು ಮತ್ತು ದಾಸ್ತಾನುಗಳ ಲಭ್ಯತೆ ಇರುವುದರಿಂದ ಶಾಖೆಯೊಂದು ಕ್ರಾಸ್ ಶಾಖೆ ಸಾಗಾಟದಲ್ಲಿ ತೊಡಗಿಸಿಕೊಳ್ಳಬಹುದು, ಅಂದರೆ, ವಿವಿಧ ಶಾಖೆಗಳಿಂದ ಹಲವು ಬಾರಿ ಸರಕುಗಳನ್ನು ಸಾಗಾಟ ಮಾಡುತ್ತಿರಬಹುದು. ಉದಾಹರಣೆಗೆ, ಕರ್ನಾಟಕದ ಪ್ರಧಾನ ಕಚೇರಿಯಿಂದ ಚೆನ್ನೈ ಶಾಖೆಗೆ ಸರಕು ಕಳುಹಿಸಲಾಗುತ್ತದೆ. ಈ ಸರಕನ್ನು ಮತ್ತೆ ಚೆನ್ನೈನಿಂದ ಬೆಂಗಳೂರಿಗೆ ಕಳುಹಿಸಲಾಗುತ್ತದೆ. ಇಂದು, ಈ ಸಾಗಾಟಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ. ಆದರೆ, ಜಿಎಸ್ಟಿ ಅನ್ವಯವಾದ ನಂತರ ಇದು ದುಬಾರಿ ಸಂಗತಿಯಾಗಿ ಪರಿಣಮಿಸಬಹುದು. ಯಾಕೆಂದರೆ, ಪ್ರತಿಯೊಂದು ಸಾಗಾಟಕ್ಕೂ ಜಿಎಸ್ಟಿ ಪಾವತಿಸಬೇಕಾಗುತ್ತದೆ ಮತ್ತು ಇದರಿಂದ ಪ್ರತಿಯೊಂದ ಶಾಖೆಯ ಹಣದ ಹರಿವಿನ ಮೇಲೆ ಪರಿಣಾಮ ಬೀರಲಿದೆ. ಇದನ್ನು ತಪ್ಪಿಸಬೇಕು ಮತ್ತು ಸರಕನ್ನು ನೇರವಾಗಿ ಪ್ರಮುಖ ವೇರ್ ಹೌಸ್ ಅಥವಾ ಶಾಖೆಗೆ ನೇರವಾಗಿ ಸಾಗಿಸಿದರೆ ಮಾತ್ರ ಪ್ರಯೋಜನಕಾರಿ.
ಅತ್ಯಧಿಕ ಬೇಡಿಕೆ ಇರುವ ಶಾಖೆಗೆ ಮಾತ್ರ ಸಾಗಾಟ ಮಾಡುವ ಮೂಲಕ ಇದನ್ನು ವ್ಯವಹಾರಗಳು ಹತೋಟಿಯಲ್ಲಿಡಬಹುದು. ಇದರಿಂದ ಸರಕುಗಳು ಬೇಗ ಖಾಲಿಯಾಗುತ್ತವೆ ಮತ್ತು ವ್ಯವಹಾರದ ಕೆಲಸಗಾರರ ಬಂಡವಾಳದ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ.

Under GST, it is better to avoid cross branch transfers as tax needs to paid on each transferClick To Tweet

ಉಪಸಂಹಾರ
ದಾಸ್ತಾನು ಸಾಗಾಟಕ್ಕೆ ಜಿಎಸ್ಟಿಯಡಿ ತೆರಿಗೆ ವಿಧಿಸಲಾಗುವುದರಿಂದ, ಈ ತೆರಿಗೆಗಳು ಪೂರ್ಣವಾಗಿ ಪಾವತಿ ಆಗಲಿವೆ. ಈಗಿನ ತೆರಿಗೆ ಪದ್ಧತಿಯಲ್ಲಿರುವ ಹಲವು ಬಗೆಯ ತೆರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಿದೆ ಮತ್ತು ಇದರ ಫಲಿತಾಂಶವಾಗಿ, ಉತ್ಪನ್ನಗಳು ಕಡಿಮೆ ವೆಚ್ಚದಾಯಕವಾಗಲಿವೆ. ಆದರೂ, ಇದು ಕೆಲಸಗಾರ ಬಂಡವಾಳದ ಮೇಲೆ ನಿರ್ಣಾಯಕವಾಗಬಲ್ಲದು, ಶಾಖೆಗಳ ಪರಿಣಾಮಕಾರಿ ಯೋಜನೆ ಮತ್ತು ಕ್ರಾಸ್ ಬ್ರಾಂಚ್ ಸಾಗಾಟವನ್ನು ತೆಗೆದುಹಾಕುವುದರ ಮೂಲಕ ಉದ್ಯೋಗ ಬಂಡವಾಳದ ಮೇಲಿನ ಹೊರೆಯನ್ನು ತಗ್ಗಿಸಬಹುದಾಗಿದೆ.

Are you GST ready yet?

Get ready for GST with Tally.ERP 9 Release 6

97,417 total views, 109 views today

Yarab A

Author: Yarab A

Yarab is associated with Tally since 2012. In his 7+ years of experience, he has built his expertise in the field of Accounting, Inventory, Compliance and software product for the diverse industry segment. Being a member of ‘Centre of Excellence’ team, he has conducted several knowledge sharing sessions on GST and has written 200+ blogs and articles on GST, UAE VAT, Saudi VAT, Bahrain VAT, iTax in Kenya and Business efficiency.