ಶಾಖೆ ವರ್ಗಾವಣೆ ಎಂದರೆ ಒಂದೇ ವ್ಯವಹಾರದ ಅಸ್ತಿತ್ವದ ನಡುವೆ ಸರಕುಗಳನ್ನು ಒಂದು ಘಟಕ/ಸ್ಥಳದಿಂದ ಮತ್ತೊಂದು ಘಟಕ/ಸ್ಥಳಕ್ಕೆ ವರ್ಗಾಯಿಸುವುದನ್ನು ಶಾಖೆ ವರ್ಗಾವಣೆ ಎನ್ನಲಾಗುತ್ತದೆ. ಇದಕ್ಕೆ ದಾಸ್ತಾನು ವರ್ಗಾವಣೆ ಎಂಬ ಹೆಸರೂ ಇದೆ. ವಿವಿಧ ಸಂದರ್ಭಗಳಲ್ಲಿ ಶಾಖೆ ವರ್ಗಾವಣೆ ಮಾಡಲಾಗುತ್ತದೆ, ಅವುಗಳೆಂದರೆ:

 • ಮುಂದಿನ ಪ್ರಕ್ರಿಯೆಗಾಗಿ ಅರೆ-ಪೂರ್ಣಗೊಂಡ ಸರಕನ್ನು ಒಂದು ತಯಾರಿಕಾ ಘಟಕದಿಂದ ಮತ್ತೊಂದು ಘಟಕಕ್ಕೆ ಸಾಗಿಸುವುದು.
 • ಮುಂದಿನ ಪೂರೈಕೆಗಾಗಿ ಸರಕುಗಳನ್ನು ದಾಸ್ತಾನುಗಾರ/ಗೋದಾಮಿಗೆ ವರ್ಗಾವಣೆ ಮಾಡುವುದು
 • ಬೇಡಿಕೆಯ ಕಾರಣದಿಂದಾಗಿ ವ್ಯಾಪಾರಿಯು ಸರಕನ್ನು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ವರ್ಗಾಯಿಸುವುದು.
 • ಅನುಸರಣೆಯ ಉದ್ದೇಶಕ್ಕಾಗಿ- ಗ್ರಾಹಕರಿಗೆ (ಬಿ2ಬಿ) ಆದಾನ ತೆರಿಗೆ ಪಾವತಿ ಕೇಳಲು ಅವಕಾಶ ನೀಡುವ ಸಲುವಾಗಿ, ಶಾಖೆಗಳ ವರ್ಗಾವಣೆ ಮಾಡಲಾಗುತ್ತದೆ ಮತ್ತು ಇದರಿಂದ ಮಾರಾಟದ ಮೇಲೆ ಪರಿಣಾಮ ಬೀರುತ್ತದೆ.
  ಇನ್ಪುಟ್ ತೆರಿಗೆ ಕ್ರೆಡಿಟ್

ಯಾವುದೇ ಕಾರಣಕ್ಕೆ ಸರಕುಗಳ ವರ್ಗಾವಣೆ ನಡೆಸಿದರೂ, ಇಂತಹ ವರ್ಗಾವಣೆಗೆ ಅನ್ವಯವಾಗುವ ತೆರಿಗೆಗಳನ್ನು ಅರ್ಥಮಾಡಿಕೊಳ್ಳುವುದು ವ್ಯವಹಾರಗಳಿಗೆ ಅತ್ಯಂತ ಅಗತ್ಯವಾಗಿದೆ.

 • ಈ ವರ್ಗಾವಣೆಗಳು ಶಾಸನಬದ್ಧ ಅನುಸರಣೆಯಲ್ಲಿ ಹೇಗೆ ನೋಡಲ್ಪಡುತ್ತವೆ? ಇವುಗಳಿಗೆ ತೆರಿಗೆ ವಿಧಿಸಲಾಗುತ್ತದೆಯೇ?
 • ಎಲ್ಲಾದರೂ ತೆರಿಗೆ ವಿಧಿಸಿದರೆ, ಈ ತೆರಿಗೆ ಪಾವತಿಸಲು ಯಾವ ಮೌಲ್ಯವನ್ನು, ಉದ್ದೇಶವನ್ನು ಪರಿಗಣಿಸಲಾಗುತ್ತದೆ?

ಪರೋಕ್ಷ ತೆರಿಗೆ ಪದ್ಧತಿಯಲ್ಲಿ ಮತ್ತು ಜಿಎಸ್ಟಿಯಲ್ಲಿ ಈ ವರ್ಗಾವಣೆಗಳನ್ನು ಹೇಗೆ ಪರಿಗಣಿಸಲಾಗುತ್ತದೆ ಎಂದು ನಾವು ಅರ್ಥಮಾಡಿಕೊಳ್ಳೋಣ.

ಈಗಿನ ತೆರಿಗೆ ಪದ್ಧತಿ

ಕೇಂದ್ರ ಅಬಕಾರಿ

ಕೇಂದ್ರ ಅಬಕಾರಿ ಸುಂಕದನ್ವಯ, ದಾಸ್ತಾನು ರವಾನೆಯ ಮೌಲ್ಯಮಾಪನವು ತಯಾರಕರು ಅದನ್ನು ಯಾವ ವಿಷಯಕ್ಕೆ ಮತ್ತು ಯಾವ ಉದ್ದೇಶಕ್ಕೆ ವರ್ಗಾವಣೆ ಮಾಡುತ್ತಾರೆ ಎನ್ನುವುದನ್ನು ಅವಲಂಬಿಸಿದೆ. ಈ ವರ್ಗಾವಣೆಯು ಈ ಮುಂದಿನ ಯಾವುದಾದರೂ ಉದ್ದೇಶಕ್ಕಾಗಿ ಆಗಿರಬಹುದು:

  • ಮತ್ತೊಂದು ತಯಾರಿಕಾ ಘಟಕದಲ್ಲಿ ಇನ್ನಷ್ಟು ಪ್ರಕ್ರಿಯೆಗಳಿಗಾಗಿ
  • ಡಿಪೊಗೆ ಸಾಗಾಣೆ
  • ಎಲ್ಲಿ ಮಾರಾಟ ನಡೆಸಲಾಗುತ್ತದೆಯೋ ಆ ಸ್ಥಳಕ್ಕೆ ಸಾಗಾಟ.
ವರ್ಗಾವಣೆ ಬಗೆ ಮೌಲ್ಯಮಾಪನ ಉದಾಹರಣೆ
ತಯಾರಿಕಾ ಘಟಕದಿಂದ ಪೂರ್ಣಗೊಂಡಿರುವ ಉತ್ಪನ್ನಗಳ ಸಾಗಾಟ:

 • ಡಿಪೊಗೆ
 • ವ್ಯವಹಾರದ ಏಜೆಂಟ್ ಇರುವ ಸ್ಥಳಕ್ಕೆ
 • ಇತರೆ ಯಾವುದೇ ಸ್ಥಳ ಅಥವಾ ಪ್ರದೇಶಕ್ಕೆ, ಎಲ್ಲಿ ಸರಕು ಮಾರಾಟ ಮಾಡಲಾಗುತ್ತದೋ ಅಲ್ಲಿಗೆ.
ಈ ಸರಕುಗಳು ಅದೇ ಸ್ಥಳದಲ್ಲಿ ಅಥವಾ ಅದೇ ಸಮಯದಲ್ಲಿ ಮಾರಾಟಮಾಡುವ ಸಾಮಾನ್ಯ ವ್ಯವಹಾರದ ಮೌಲ್ಯವನ್ನು ಹೊಂದಿರುತ್ತದೆ. ದೆಹಲಿಯ ನೋಂದಾಯಿತ ತಯಾರಕರಾದ ರೋಸ್ ಪಾಲಿಮರ್ಸ್, ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ತನ್ನ ಡಿಪೊಗೆ ಪೂರ್ಣಗೊಂಡಿರುವ ಸರಕುಗಳನ್ನು ಸಾಗಿಸುತ್ತದೆ. ಅಲ್ಲಿಂದ ತೆಗೆಯುವಾಗ ಡಿಪೊದಲ್ಲಿರುವ ಸರಕುಗಳ ಮಾರಾಟ ಬೆಲೆಯು20000 ರೂ. ಆಗಿರುತ್ತದೆ.
ಹೀಗಾಗಿ, ತಯಾರಕಾ ಘಟಕದಿಂದ ನೋಯ್ಡಾದ ಡಿಪೊಗೆ ಸಾಗುವಾಗ ಪೂರ್ಣಗೊಂಡ ಸರಕಿನ ಮೌಲ್ಯವು 20,000 ರೂಪಾಯಿ ಆಗಿರುತ್ತದೆ.
ಅರೆ-ಪೂರ್ಣಗೊಂಡಿರುವ ಸರಕುಗಳನ್ನು ಮತ್ತಷ್ಟು ಪೂರ್ಣಗೊಳಿಸುವ ಉದ್ದೇಶದಿಂದ ಅಥವಾ ಪೂರ್ಣವಾಗಿ ತಯಾರಿಸುವ ಉದ್ದೇಶದಿಂದ ಒಂದು ತಯಾರಿಕಾ ಘಟಕದಿಂದ ಮತ್ತೊಂದು ಘಟಕಕ್ಕೆ ಸಾಗಿಸಲಾಗುತ್ತದೆ. ಇಂತಹ ಸರಕುಗಳ ಉತ್ಪಾದನಾ ವೆಚ್ಚಕ್ಕಿಂತ ಸಾಗಾಣೆ ಮೌಲ್ಯವು ಶೇಕಡ 110ರಷ್ಟು ಇರುತ್ತದೆ ದೆಹಲಿಯ ನೋಂದಾಯಿತ ತಯಾರಕರಾದ ರೋಸ್ ಪಾಲಿಮರ್ಸ್, ಅರೆ ಪೂರ್ಣಗೊಂಡ ಸರಕುಗಳನ್ನು ಮತ್ತಷ್ಟು ಪ್ರಕ್ರಿಯೆ ನಡೆಸಲು ಉತ್ತರಪ್ರದೇಶದ ನೋಯ್ಡಾದಲ್ಲಿರುವ ಘಟಕಕ್ಕೆ ವರ್ಗಾವಣೆ ಮಾಡುತ್ತದೆ. ಇಂತಹ ಅರೆ-ಪೂರ್ಣಗೊಂಡ ಸರಕುಗಳ ಉತ್ಪಾದನೆಯ ವೆಚ್ಚವು 25,000 ರೂ. ಆಗಿರುತ್ತದೆ.
ಈ ರೀತಿ ರವಾಣೆಗೊಂಡ ಸರಕಿನ ಮೌಲ್ಯವು 27,500 ರೂ. ಆಗಿರುತ್ತದೆ (25,000 *110/100 )
ಮೌಲ್ಯವರ್ಧಿತ ತೆರಿಗೆ

ಮೌಲ್ಯವರ್ಧಿತ ತೆರಿಗೆಯನ್ವಯ, “ನಮೂನೆ ಎಫ್’ ಸಲ್ಲಿಸುವ ದಾಸ್ತಾನು ಸಾಗಾಟಕ್ಕೆ ತೆರಿಗೆ ವಿಧಿಸಲಾಗುಚುದಿಲ್ಲ. ಆದರೂ, ಸರಕುಗಳ ಖರೀದಿ ಮೇಲೆ ಆದಾನ ಮೌಲ್ಯವರ್ಧಿತ ತೆರಿಗೆಯು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಇರುತ್ತದೆ. ಉದಾಹರಣೆಗೆ, ಎಲ್ಲಾದರೂ ಖರೀದಿ ಮೇಲೆ ಮೌಲ್ಯವರ್ಧಿತ ತೆರಿಗೆ ಶೇಕಡ 12.5 ಆಗಿದ್ದರೆ, ಅಬಕಾರಿ ಶೇಕಡ 4 ಆಗಿರುತ್ತದೆ, ಅಂದರೆ ಶೇಕಡ 8.5ರಷ್ಟು ಆದಾನ ಮೌಲ್ಯವರ್ಧಿತ ತೆರಿಗೆ ಪಾವತಿಯಾಗಿ ಪಡೆಯಲು ಅವಕಾಶ ನೀಡಲಾಗುತ್ತದೆ ಮತ್ತು ಶೇಕಡ 4ರಷ್ಟು ವಾಪಸ್ ಹಿಮ್ಮುಖವಾಗುತ್ತದೆ.

ವಿವರಣೆ ಮೌಲ್ಯಮಾಪನ ಉದಾಹರಣೆ
ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ಸರಕುಗಳ ಸಾಗಾಣೆ ನಮೂನೆ ಎಫ್ ಸಲ್ಲಿಸಿದರೆ, ದಾಸ್ತಾನು ರವಾನೆಗೆ ವಿನಾಯಿತಿ ನೀಡಲಾಗುತ್ತದೆ. ಕರ್ನಾಟಕದಲ್ಲಿರುವ ಗಣೇಶ್ ಟ್ರೇಡಿಂಗ್, ಸರಕುಗಳನ್ನು ಮಹಾರಾಷ್ಟ್ರದಲ್ಲಿರುವ ಮತ್ತೊಂದು ಶಾಖೆಗೆ ವರ್ಗಾವಣೆ ಮಾಡುತ್ತದೆ.
ಈ ದಾಸ್ತಾನು ಸಾಗಾಟಕ್ಕೆ ನಮೂನೆ ಎಫ್ ಸಲ್ಲಿ ಮಾಡುವುದರಿಂದ ವಿನಾಯಿತಿ ನೀಡಲಾಗುತ್ತದೆ.

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ದಾಸ್ತಾನು ವರ್ಗಾವಣೆ

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ಪೂರೈಕೆಯ ಮೇಲೆ ವಿಧಿಸುವ ಚಂದಾ ತೆರಿಗೆಯಲ್ಲಿ ಭಿನ್ನ ವ್ಯಕ್ತಿಗಳಿಗೆ ವರ್ಗಾವಣೆಯೂ ಒಳಗೊಂಡಿದೆ ಮತ್ತು ಈ ಮುಂದಿನ ಎರಡು ಸಂದರ್ಭಗಳಲ್ಲಿ ವರ್ಗಾವಣೆಗಳಿಗೆ ತೆರಿಗೆ ವಿಧಿಸಲಾಗುತ್ತದೆ:

 • ರಾಜ್ಯದೊಳಗಿನ ದಾಸ್ತಾನು ವರ್ಗಾವಣೆ: ಒಂದು ರಾಜ್ಯದೊಳಗೆ ಒಂದಕ್ಕಿಂತ ಹೆಚ್ಚು ನೋಂದಾಯಿತ ಅಸ್ತಿತ್ವಗಳು ಇದ್ದರೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಈ ಬೇರೆಬೇರೆ ಅಸ್ತಿತ್ವಗಳನ್ನು “ಭಿನ್ನ ವ್ಯಕ್ತಿಗಳು’’ ಎಂದು ಪರಿಗಣಿಸಲಾಗುತ್ತದೆ.
 • ಹೊರರಾಜ್ಯಕ್ಕೆ ದಾಸ್ತಾನು ವರ್ಗಾವಣೆ : ಒಂದೇ ಪಾನ್ ಕಾರ್ಡ್ ಸಂಖ್ಯೆಯಡಿಯಲ್ಲಿ ಬೇರೆಬೇರೆ ರಾಜ್ಯದಲ್ಲಿ ಇರುವ ಎರಡು ಶಾಖೆಗಳು/ಘಟಕಗಳ ನಡುವೆ ವರ್ಗಾವಣೆ ಮಾಡಿದರೆ ತೆರಿಗೆ ವಿಧಿಸಲಾಗುತ್ತದೆ.

ಒಂದೇ ಪಾನ್ ಕಾರ್ಡ್ ಸಂಖ್ಯೆಯಡಿಯಲ್ಲಿ ಬೇರೆಬೇರೆ ರಾಜ್ಯದಲ್ಲಿ ಇರುವ ಎರಡು ಶಾಖೆಗಳು/ಘಟಕಗಳ ನಡುವೆ ವರ್ಗಾವಣೆ ಮಾಡಿದರೆ ತೆರಿಗೆ ವಿಧಿಸಲಾಗುತ್ತದೆ.
ಸಹ ಓದಿ
ಸರಕುಗಳ ಮೌಲ್ಯ GST ಅಡಿಯಲ್ಲಿ ನಿರ್ಧರಿಸಲಾದ ಸೇವೆಗಳು?

ವಿಶಾಲವಾಗಿ, ದರ ಏಕಮಾತ್ರ ಪರಿಗಣಿಸಿ ಸ್ವೀಕರಿಸುವುದಾದರೆ ಮತ್ತು ಪೂರೈಕೆಯು ಭಿನ್ನ ವ್ಯಕ್ತಿಗಳು ಹಾಗೂ ಸಂಬಂಧಪಟ್ಟ ವ್ಯಕ್ತಿಗಳ ನಡುವೆ ನಡೆಯದೆ ಇದ್ದರೆ ಜಿಎಸ್ಟಿ ವಿಧಿಸಲಾಗುತ್ತದೆ. ಇದರ ಫಲಿತಾಂಶವಾಗಿ, ದಾಸ್ತಾನು ವರ್ಗಾವಣೆಯಲ್ಲಿ ಒಂದೇ ಅಸ್ತಿತ್ವದಲ್ಲಿರುವ 2 ಶಾಖೆಗಳ ನಡುವೆ ಪೂರೈಕೆಗಳು ನಡೆದರೆ ಅಂದರೆ ಭಿನ್ನ ವ್ಯಕ್ತಿಗಳ ನಡುವೆ ನಡೆದರೆ ವಹಿವಾಟು ಮೌಲ್ಯ ಅನ್ವಯವಾಗುವುದಿಲ್ಲ. ಹೀಗಾಗಿ, ದಾಸ್ತಾನು ವರ್ಗಾವಣೆಗೆ ಈ ಮುಂದಿನ ಛಂದಶಾಸ್ತ್ರ ಬಳಸಿ ಪೂರೈಕೆಯ ಮೌಲ್ಯವನ್ನು ಲೆಕ್ಕ ಹಾಕಲಾಗುತ್ತದೆ:

ಕ್ರಮ.ಸಂಖ್ಯೆ ಮೌಲ್ಯದ ಬಗೆ ವಿವರಣೆ
1 ಮುಕ್ತ ಮಾರುಕಟ್ಟೆ ಮೌಲ್ಯ ಸರಕು ಅಥವಾ ಸೇವೆಯ ಪೂರೈಕೆಯ ಮುಕ್ತ ಮಾರುಕಟ್ಟೆ ಮೌಲ್ಯವು ಪೂರ್ಣ ಪ್ರಮಾಣದಲ್ಲಿ ಹಣದ ಮೌಲ್ಯವಾಗಿದ್ದು, ಜಿಎಸ್ಟಿ ಮತ್ತು ಚಂದಾತೆರಿಗೆ ಹೊರತುಪಡಿಸಿ ವಹಿವಾಟಿನಲ್ಲಿ ವ್ಯಕ್ತಿಯು ಪಾವತಿಸಬೇಕಾಗುತ್ತದೆ.
ಎಲ್ಲಾದರೂ ಸ್ವೀಕೃತಿದಾರರಿಗೆ ಪೂರ್ಣಪ್ರಮಾಣದಲ್ಲಿ ಆದಾನ ತೆರಿಗೆ ಪಾವತಿ ಪಡೆಯಲು ಅರ್ಹತೆ ಪಡೆದರೆ ಈ ಮೌಲ್ಯವನ್ನು ಸರಕುಪಟ್ಟಿಯಲ್ಲಿ ಮುಕ್ತ ಮಾರುಕಟ್ಟೆ ಮೌಲ್ಯವಾಗಿ ಘೋಷಿಸಲಾಗುತ್ತದೆ.
2 ಇಷ್ಟದ ಮತ್ತು ಗುಣಮಟ್ಟದಂತೆ ಸರಕು ಮತ್ತು/ಅಥವಾ ಸೇವೆಯ ಪೂರೈಕೆಯ ಮೌಲ್ಯ ಸರಕು ಅಥವಾ ಸೇವೆಯ ಮುಕ್ತ ಮಾರುಕಟ್ಟೆ ಮೌಲ್ಯ ಲಭ್ಯವಿರದಿದ್ದರೆ ಈ ವಿಧಾನವನ್ನು ಅನ್ವಯ ಮಾಡಲಾಗುತ್ತದೆ.
.
3 ಸಂಬಂಧಿತ ವ್ಯಕ್ತಿಯಾಗಿರದ ಸ್ವೀಕೃತಿದಾರ ಗ್ರಾಹಕರ ಇಷ್ಟದ ಮತ್ತು ಗುಣಮಟ್ಟದ ಸರಕು ಮತ್ತು/ಅಥವಾ ಸೇವೆಯ ಪೂರೈಕೆಗೆ ಶೇಕಡ 90ರಷ್ಟು ದರ ವಿಧಿಸುವುದು. ಈ ಛಂದಶಾಸ್ತ್ರವು ಪೂರೈಕೆದಾರರಿಗೆ ಆಯ್ಕೆಯಾಗಿದೆ ಮತ್ತು ಸ್ವೀಕೃತಿದಾರರ ಮುಂದಿನ ಪೂರೈಕೆಯ ಉದ್ದೇಶದಿಂದ ಸರಕು ಇದ್ದರೆ ಮಾತ್ರ ಇದು ಅನ್ವಯವಾಗುತ್ತದೆ.

ವಿವಿಧ ಸಂದರ್ಭಗಳಲ್ಲಿ ಮೇಲಿನ ಮೌಲ್ಯಮಾಪನವು ಹೇಗೆ ಅನ್ವಯವಾಗತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ.

ಸಂದರ್ಭಗಳು ಉದಾಹರಣೆ ಮೌಲ್ಯಮಾಪನ
ತಯಾರಿಕಾ ಘಟಕದಿಂದ ಡಿಪೊಗೆ, ಅಂದರೆ ಯಾವ ಸ್ಥಳದಲ್ಲಿ ಸರಕುಗಳನ್ನು ಮಾರಾಟ ಮಾಡಲಾಗುತ್ತೋ ಅಲ್ಲಿಗೆ ಪೂರ್ಣಗೊಂಡ ಸರಕುಗಳನ್ನು ವರ್ಗಾವಣೆ ಮಾಡುವುದು. ದೆಹಲಿಯಲ್ಲಿ ನೋಂದಾಯಿಸಿರುವ ತಯಾರಕರಾದ ರೋಸ್. ಪಾಲಿಮಾರ್ಸ್ ಪೂರ್ಣಗೊಂಡ ಸರಕನ್ನು ಉತ್ತರಪ್ರದೇಶದ ನೋಯ್ಡಾದಲ್ಲಿರುವ ತನ್ನ ಡಿಪೊಗೆ ರವಾನೆ ಮಾಡುತ್ತದೆ.

ಇದೇ ಸಮಯದಲ್ಲಿ, ಪೂರ್ಣಗೊಂಡ ಸರಕಿನ ಮುಕ್ತ ಮಾರುಕಟ್ಟೆ ಮೌಲ್ಯ 20,000 ರೂ. ಆಗಿರುತ್ತದೆ. ಜೊತೆಗೆ ಡಿಪೊಗೆ ಸರಕನ್ನು ಪೂರೈಕೆ ಮಾಡಿರುವುದರಿಂದ ಇದರ ದರ 22,000 ರೂ. ಆಗುತ್ತದೆ.

ಮುಕ್ತ ಮಾರುಕಟ್ಟೆ ದರ 20,000 ರೂ.ನಲ್ಲಿ ದಾಸ್ತಾನು ಸಾಗಾಣೆಯಲ್ಲಿ ಪರಿಗಣಿಸಲಾಗುತ್ತದೆ. ಆದರೂ,. ಪಾಲಿಮಾರ್ಸ್ ಗೆ ಪೂರೈಕೆಗೆ ವಿಧಿಸಿದ ದರದಲ್ಲಿ ಶೇಕಡ 90ರಷ್ಟನ್ನು ಪಾವತಿಸುವ ಆಯ್ಕೆ ಅಂದರೆ 19,800 ರೂ. ಪಾವತಿಸಲೂ ಅವಕಾಶವಿದೆ. ಇದು ಯಾಕೆಂದರೆ, ಪೂರ್ಣಗೊಂಡ ಸರಕನ್ನು ಮತ್ತಷ್ಟು ಪೂರೈಕೆಗಾಗಿ ವರ್ಗಾವಣೆ ಮಾಡಲಾಗಿದೆ.
ಮತ್ತಷ್ಟು ಸಂಸ್ಕರಿಸುವ ಉದ್ದೇಶದಿಂದ ತಯಾರಿಕಾ ಘಟಕದಿಂದ ಅರೆ-ಪೂರ್ಣಗೊಂಡ ಸರಕನ್ನು ಮತ್ತೊಂದು ಘಟಕಕ್ಕೆ ವರ್ಗಾವಣೆ ಮಾಡುವುದು.. ದೆಹಲಿಯಲ್ಲಿ ನೋಂದಾಯಿಸಿರುವ ಘಟಕವಾದ ರೋಸ್ ಪಾಲಿಮಾರ್ಸ್ , ಉತ್ತರ ಪ್ರದೇಶದ ನೋಯ್ಡಾದಲ್ಲಿ ನೋಂದಾಯಿಸಿರುವ ತನ್ನ ಮತ್ತೊಂದು ಘಟಕಕ್ಕೆ ಅರೆ-ಪೂರ್ಣಗೊಂಡ ಸರಕುಗಳನ್ನು ವರ್ಗಾವಣೆ ಮಾಡುತ್ತದೆ. ಇಂತಹ ಸರಕುಗಳ ಸರಕುಪಟ್ಟಿ ಮೌಲ್ಯ 18,000 ರೂ. ಆಗಿರುತ್ತದೆ..ನೋಯ್ಡಾದಲ್ಲಿ ನೋಂದಾಯಿಸಿರುವ ತಯಾರಿಕಾ ಘಟಕ ಹೊಂದಿರುವುದರಿಂದ ಪೂರ್ತಿ ಆದಾನ ತೆರಿಗೆ ಪಾವತಿ ಪಡೆಯಲು ಅವಕಾಶವಿದೆ, ಇದರ ಸರಕುಪಟ್ಟಿ ಮೌಲ್ಯ 18,000 ರೂ. ಆಗಿರುವುದರಿಂದ ರೋಸ್ ಪಾಲಿಮಾರ್ಸ್ ಪೂರ್ತಿ 18,000 ರೂ.ಗೆ ಜಿಎಸ್ಟಿ ಪಾವತಿಸುವ ಅಗತ್ಯವಿರುತ್ತದೆ.
.
ಪೂರ್ಣಗೊಂಡ ಸರಕನ್ನು ತಯಾರಿಕಾ ಘಟಕದಿಂದ, ಶೇಕಡ 100 ತಯಾರಿಕೆ ಮತ್ತು ವಿನಾಯಿತಿ ಇರುವ ಸರಕುಗಳ ಪೂರೈಕೆಯಲ್ಲಿ. ತೊಡಗಿರುವ ಮತ್ತೊಂದು ಘಟಕಕ್ಕೆ ವರ್ಗಾವಣೆ ಮಾಡುವುದು. ದೆಹಲಿಯಲ್ಲಿ ನೋಂದಾಯಿಸಿರುವ ರೋಸ್ ಪಾಲಿಮಾರ್ಸ್, ವಿನಾಯಿತಿ ಇರುವ ಸರಕುಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಹರ್ಯಾಣದಲ್ಲಿ ನೋಂದಾಯಿಸಿರುವ ಮತ್ತೊಂದು
ಘಟಕಕ್ಕೆ ಪೂರ್ಣಗೊಂಡ ಸರಕುಗಳನ್ನು ಸಾಗಿಸುತ್ತದೆ.
ಈ ಸಮಯದಲ್ಲಿ ಮುಕ್ತ ಮಾರುಕಟ್ಟೆ ಮೌಲ್ಯ ಲಭ್ಯವಿಲ್ಲವೆಂದು ಭಾವಿಸುವುದಾದರೆ ಮತ್ತು ಸರಕಿನ ರೀತಿ ಮತ್ತು ಗುಣಮಟ್ಟದ ದರ 25,000 ರೂ. ಆಗಿರುತ್ತದೆ.
ಇಂತಹ ವರ್ಗಾವಣೆಗೆ ತೆರಿಗೆ ವಿಧಿಸಬಹುದಾದ ಮೌಲ್ಯ ದೊರಕುವುದರಿಂದ ರೋಸ್ ಪಾಲಿಮಾರ್ಸ್ ಸರಕಿನ ರೀತಿ ಮತ್ತು ಗುಣಮಟ್ಟದ ಸರಕು/ ಮತ್ತು ಸೇವೆಯ ಪೂರೈಕೆಯ ಮೌಲ್ಯ ಮಾಡಬೇಕಾಗುತ್ತದೆ. ಹೀಗಾಗಿ, ಶಾಖೆ ವರ್ಗಾವಣೆಯ ಮೌಲ್ಯ 25,000 ರೂ. ಆಗುತ್ತದೆ ಮತ್ತು ಅದಕ್ಕೆ ಜಿಎಸ್ಟಿ ವಿಧಿಸಲಾಗುತ್ತದೆ.
ಇಲ್ಲಿ, ಸರಕುಪಟ್ಟಿಯಲ್ಲಿ ಮುಕ್ತ ಮಾರುಕಟ್ಟೆ ಮೌಲ್ಯವನ್ನು ಪರಿಗಣಿಸಲಾಗುವುದಿಲ್ಲ. ಯಾಕೆಂದರೆ, ಹರ್ಯಾಣದಲ್ಲಿ ನೋಂದಾಯಿಸಿರುವ ಘಟಕವು ಶೇಕಡ 100ರಷ್ಟು ವಿನಾಯಿತಿ ಇರುವ ಸರಕುಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ ಮತ್ತು ಅದಕ್ಕೆ ಆದಾನ ತೆರಿಗೆ ಪಾವತಿ ಕೇಳಲು ಅವಕಾಶ ಇರುವುದಿಲ್ಲ.

ಎಲ್ಲಾದರೂ ಯಾವುದೇ ಕಾರಣಗಳಿಂದ ಮೇಲಿನ ಯಾವುದೇ ವಿಧಾನಗಳಿಂದ ಪೂರೈಕೆಯ ಮೌಲ್ಯ ಗುರುತಿಸಲು ಸಾಧ್ಯವಾಗದೆ ಇದ್ದರೆ ಉತ್ಪನ್ನದ ವೆಚ್ಚ + ಶೇಕಡ 10 ಎಂಬ ವಿಧಾನವನ್ನು ಬಳಸಲಾಗುತ್ತದೆ. ಇದನ್ನು ಮುಂದೆ ಪ್ರಕಟಗೊಳ್ಳಲಿರುವ ಲೇಖನದಲ್ಲಿ ವಿವರಿಸಲಾಗುವುದು.

Are you GST ready yet?

Get ready for GST with Tally.ERP 9 Release 6

177,149 total views, 250 views today

Yarab A

Author: Yarab A

Yarab is associated with Tally since 2012. In his 7+ years of experience, he has built his expertise in the field of Accounting, Inventory, Compliance and software product for the diverse industry segment. Being a member of ‘Centre of Excellence’ team, he has conducted several knowledge sharing sessions on GST and has written 200+ blogs and articles on GST, UAE VAT, Saudi VAT, Bahrain VAT, iTax in Kenya and Business efficiency.