ವ್ಯವಹಾರದ ಸ್ಥಿರ ಸ್ಥಳವನ್ನು ಹೊಂದಿರದ ಸಂದರ್ಭದಲ್ಲಿ ಕೆಲವೊಮ್ಮೆ ವಹಿವಾಟುಗಳನ್ನು ನಡೆಸಬೇಕಾದ ಸಂದರ್ಭದಲ್ಲಿ ಕೆಲವೊಂದು ವ್ಯವಹಾರಗಳು ಕಾರ್ಯನಿರ್ವಹಿಸಬೇಕಾಗುತ್ತದೆ. ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ಜಿಎಸ್ಟಿ
, ರಾಜ್ಯವೊಂದರಲ್ಲಿ ವ್ಯವಹಾರ ನಡೆಸಲು ಸ್ಥಿರ ಸ್ಥಳ ಹೊಂದಿರುವ ವ್ಯಕ್ತಿಯು, ಆತನ ವಹಿವಾಟು ನಿಗದಿಪಡಿಸಿದಕ್ಕಿಂತ ಹೆಚ್ಚಿದ್ದರೆ ತೆರಿಗೆ ವಿಧಿಸಬಹುದಾದ ಬಾಹ್ಯಾ ವಹಿವಾಟು ನಡೆಸಲು ನೋಂದಾಯಿಸಬೇಕಾಗುತ್ತದೆ. ಆದರೆ, ಎಲ್ಲಾದರೂ ವ್ಯಕ್ತಿಯೊಬ್ಬನು ವ್ಯವಹಾರಕ್ಕೆ ಸ್ಥಿರ ಸ್ಥಳ ಹೊಂದಿರದೆ ಇರುವ ಪಕ್ಷದಲ್ಲಿ ಆತನು/ಆಕೆಯು ತೆರಿಗೆ ವಿಧಿಸಬಹುದಾದ ವಹಿವಾಟು ನಡೆಸಿದರೆ ಏನಾಗುತ್ತದೆ?

ಇದು ಎರಡು ಸಂದರ್ಭಗಳಲ್ಲಿ ಜರುಗುತ್ತದೆ:

 1. ಈ ವ್ಯಕ್ತಿಯು ರಾಜ್ಯವೊಂದರಲ್ಲಿ ಸ್ಥಿರ ವ್ಯವಹಾರದ ಸ್ಥಳವನ್ನು ಹೊಂದಿರುತ್ತಾನೆ ಮತ್ತು ಕೆಲವೊಮ್ಮೆ ತನ್ನ ಸ್ಥಿರ ವ್ಯವಹಾರದ ಸ್ಥಳ ಹೊಂದಿರದ ಮತ್ತೊಂದು ರಾಜ್ಯದಲ್ಲಿಯೂ ವಹಿವಾಟು ನಡೆಸುತ್ತಾನೆ.
 2. ವ್ಯಕ್ತಿಯು ಭಾರತದ ಹೊರಗೆ ನೆಲೆಸಿರುತ್ತಾನೆ. ಆದರೆ, ಕೆಲವೊಮ್ಮೆ ಭಾರತದಲ್ಲಿ ಸ್ಥಿರ ವ್ಯವಹಾರ ಅಥವಾ ನಿವಾಸ ಹೊಂದಿರದೆ ಇದ್ದರೂ ಭಾರತದಲ್ಲಿ ತೆರಿಗೆ ವಿಧಿಸಬಲ್ಲ ವ್ಯವಹಾರವನ್ನು ನಡೆಸುತ್ತಾನೆ.
 3. ಮೊದಲ ಸಂದರ್ಭದಲ್ಲಿ ಉಲ್ಲೇಖಿಸಿರುವ ವ್ಯಕ್ತಿಯನ್ನು ‘`ಸಾಂದರ್ಭಿಕವಾಗಿ ತೆರಿಗೆ ವಿಧಿಸಬಹುದಾದ ವ್ಯಕ್ತಿಗಳು’, ಎಂದು ಕರೆಯಲಾಗುತ್ತದೆ, ಅಂದರೆ, ಈ ವ್ಯಕ್ತಿಯು ತಾನು ಸ್ಥಿರ ವ್ಯವಹಾರದ ಸ್ಥಳ ಹೊಂದಿರದೆ ಬೇರೆ ರಾಜ್ಯದಲ್ಲಿ ಕೆಲವೊಮ್ಮೆ ವಹಿವಾಟು ನಡೆಸುತ್ತಾನೆ. ಉದಾಹರಣೆಗೆ, ಪ್ರದರ್ಶನಗಳಲ್ಲಿ, ವ್ಯಾಪಾರ ಸಮ್ಮೇಳನ, ಸರ್ಕಸ್ ವ್ಯವಹಾರ ಇತ್ಯಾದಿಗಳಲ್ಲಿ ಮಾರಾಟ ಮಾಡುವವರು.

  ಎರಡನೆಯ ಸಂದರ್ಭದಲ್ಲಿ ತಿಳಿಸಲಾದ ವ್ಯಕ್ತಿಗಳನ್ನು ‘ ಅನಿವಾಸಿ ತೆರಿಗೆ ವಿಧಿಸಬಹುದಾದ ವ್ಯಕ್ತಿಗಳು’’, ಎಂದು ಕರೆಯುತ್ತಾರೆ, ಅಂದರೆ, ಈತ ಭಾರತದ ಹೊರಗೆ ನೆಲೆಸಿರುತ್ತಾನೆ ಮತ್ತು ಆಗಾಗ ಭಾರತದಲ್ಲಿ ತೆರಿಗೆ ವಿಧಿಸಬಹುದಾದ ವಹಿವಾಟು ನಡೆಸುತ್ತಾನೆ, ಆದರೆ, ಆತ ಭಾರತದಲ್ಲಿ ಸ್ಥಿರ ವ್ಯವಹಾರದ ಸ್ಥಳ ಅಥವಾ ನಿವಾಸ ಹೊಂದಿರುವುದಿಲ್ಲ.
  ಹಿಂದಿನ ತೆರಿಗೆ ಪದ್ಧತಿಯಲ್ಲಿ ಮತ್ತು ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಸಾಂದರ್ಭಿಕ ಮತ್ತು ಅನಿವಾಸಿ ತೆರಿಗೆ ವಿಧಿಸಬಹುದಾದ ವ್ಯಕ್ತಿಗಳಿಗೆ ವಿಧಿಸಿರುವ ನಿಬಂಧನೆಗಳನ್ನು ನಾವು ಅರ್ಥಮಾಡಿಕೊಳ್ಳೋಣ.

  ಹಿಂದಿನ ತೆರಿಗೆಪದ್ಧತಿ

  ಹಿಂದಿನ ತೆರಿಗೆ ಪದ್ಧತಿಯಲ್ಲಿ, ಮೌಲ್ಯವರ್ಧಿತ ತೆರಿಗೆಯಡಿಯಲ್ಲಿ `ಸಾಂದರ್ಭಿಕ ವಿತರಕರು’ ಮತ್ತು ಅನಿವಾಸಿ ತೆರಿಗೆ ವಿಧಿಸಬಲ್ಲ ವಿತರಕರು’ ಎಂದು ಎರಡು ಪರಿಕಲ್ಪನೆಗಳು ಅಸ್ತಿತ್ವದಲ್ಲಿದ್ದವು. ನೋಂದಣಿ ನಿಯಮಗಳು, ತೆರಿಗೆ ಪಾವತಿ ಮತ್ತು ಆದಾಯ ನಮೂನೆ ಸಲ್ಲಿಕೆಯು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದ್ದವು. ಉದಾಹರಣೆಗೆ, ಕೇರಳದಲ್ಲಿ ತಮ್ಮ ವಹಿವಾಟು ಎಷ್ಟೇ ಇದ್ದರೂ `ಸಾಂದರ್ಭಿಕ ವಿತರಕರು’ ಮತ್ತು ಅನಿವಾಸಿ ತೆರಿಗೆ ವಿಧಿಸಬಲ್ಲ ವಿತರಕರು’ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ವ್ಯವಹಾರ ಆರಂಭಿಸುವ ಕನಿಷ್ಠ 3 ದಿನಗಳ ಮೊದಲು ನೋಂದಣಿಗೆ ಅರ್ಜಿ ಸಲ್ಲಿಸಬೇಕು. ನೋಂದಾಯಿಸಿದ ದಾಖಲೆಗೆ ದಾಖಲೆ ಪಡೆದಂದಿನಿಂದ ಗರಿಷ್ಠ 3 ತಿಂಗಳ ವಾಯಿದೆ ಇರುತ್ತದೆ. ಇಂತಹ ವಿತರಕರು ಕಡ್ಡಾಯವಾಗಿ ತಿಂಗಳ ಆದಾಯ ನಮೂನೆಯನ್ನು (ನಮೂನೆ 10ಇ) ವ್ಯವಹಾರ ಪೂರ್ಣಗೊಂಡ ತಿಂಗಳ ನಂತರದ ತಿಂಗಳ 10ನೇ ತಾರೀಕು ಅಥವಾ ವ್ಯವಹಾರ ಪೂರ್ಣಗೊಂಡ 24 ಗಂಟೆಗಳಲ್ಲಿ ಯಾವುದು ಮೊದಲು ಬರುತ್ತದ್ದೋ ಆ ಸಮಯದಲ್ಲಿ ಸಲ್ಲಿಸಬೇಕು. ತಿಂಗಳ ಆದಾಯ ನಮೂನೆ ಸಲ್ಲಿಕೆ ಜೊತೆಗೆ ತೆರಿಗೆ ಪಾವತಿಸಲಾಗುತ್ತದೆ. ಉತ್ತರ ಪ್ರದೇಶದಂತಹ ಇತರೆ ರಾಜ್ಯಗಳಲ್ಲಿ ನೋಂದಣಿ ಮಾಡುವ ಸಮಯದಲ್ಲಿಯೇ ತೆರಿಗೆ ಪಾವತಿಸುವ ಬಾಧ್ಯತೆ ಇರುತ್ತದೆ, ನೋಂದಣಿಗೆ ಅರ್ಜಿ ಸಲ್ಲಿಸುವಾಗಲೇ ಅಂದಾಜಿಸಿ ಮುಂಗಡವಾಗಿ ತೆರಿಗೆ ಪಾವತಿಸಬೇಕು.

  ಜಿಎಸ್ಟಿ ತೆರಿಗೆ ಪದ್ಧತಿ

  ನೋಂದಣಿ

  ಕಡ್ಡಾಯ ನೋಂದಣಿ- ವಹಿವಾಟು ಎಷ್ಟೇ ಇರಲಿ ಎಲ್ಲರೂ, `ಸಾಂದರ್ಭಿಕ ತೆರಿಗೆಪಾವತಿಸಬೇಕಾದ ವಿತರಕರು’ ಮತ್ತು ಅನಿವಾಸಿ ತೆರಿಗೆ ವಿಧಿಸಬಲ್ಲ ವಿತರಕರು’ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.

  ನೋಂದಣಿ ನಮೂನೆ

  ನೋಂದಣಿಯ ವಿಧ ನೋಂದಣಿಗೆ ಅರ್ಜಿ
  ಸಾಂದರ್ಭಿಕ ತೆರಿಗೆದಾರ ವ್ಯಕ್ತಿ GS ಜಿಎಸ್ಟಿ ಆರ್ ಇಜಿ-01
  ಅನಿವಾಸಿ ತೆರಿಗೆದಾರ ವ್ಯಕ್ತಿ ಜಿಎಸ್ಟಿ ಆರ್ ಇಜಿ-09

  ನೋಂದಣಿ ಪ್ರಕ್ರಿಯೆ

  1. ವ್ಯವಹಾರ ಆರಂಭಿಸುವ ಕನಿಷ್ಠ 5 ತಿಂಗಳ ಮೊದಲು ನೋಂದಣಿ ಅರ್ಜಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸುವಾಗ, ವ್ಯಕ್ತಿಯು ಆ ಅವಧಿಗೆ ತೆರಿಗೆ ಬಾಧ್ಯತೆಯನ್ನು ಅಂದಾಜಿಸಬೇಕು ಮತ್ತು ಮುಂಗಡ ತೆರಿಗೆಗೆ ಸರಿಸಮಾನದ ಮೊತ್ತವನ್ನು ಹೂಡಿಕೆ ಮಾಡಬೇಕು.

  ಉದಾಹರಣೆ: ಶ್ರೀಯುತ ಪ್ರಕಾಶ್ ಅವರು ಕೈಯಿಂದ ಮಾಡಿದ ಆಭರಣಗಳ ಮಾರಾಟದ ಅಂಗಡಿಯೊಂದನ್ನು ನಡೆಸುತ್ತಾರೆ ಮತ್ತು ಅದನ್ನು ಮಹಾರಾಷ್ಟ್ರದಲ್ಲಿ ನೋಂದಾಯಿಸಿದ್ದಾರೆ. ಶ್ರೀಯುತ ಪ್ರಕಾಶ್ ಅವರು ಗುಜರಾತ್ನಲ್ಲಿ ಆಗಸ್ಟ್ 1, 2017ರಿಂದ ಆಗಸ್ಟ್ 15, 2017ರವರೆಗೆ ಪ್ರದರ್ಶನದಲ್ಲಿ ಆಭರಣ ಮಾರಾಟ ಮಾಡಲು ಯೋಜಿಸುತ್ತಾರೆ.
  ಇಲ್ಲಿ, ಆಗಸ್ಟ್ 1, 2017ರ ಪ್ರದರ್ಶನ ಆರಂಭಗೊಳ್ಳುವ 5 ದಿನಗಳ ಮೊದಲು ಸಾಂದರ್ಭಿಕ ತೆರಿಗೆ ಪಾವತಿಸಬೇಕಾದ ವ್ಯಕ್ತಿಯಾಗಿ ಶ್ರೀಯುತ ಪ್ರಕಾಶ್ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಶ್ರೀಯುತ ಪ್ರಕಾಶ್ ಅವರು ಆಗಸ್ಟ್ 1ರಿಂದ ಆಗಸ್ಟ್ 15, 2017ರವರೆಗೆ ಅಂದಾಜು ತೆರಿಗೆ ಬಾಧ್ಯತೆಯನ್ನು ಮುಂಗಡವಾಗಿ ಹೂಡಿಕೆ ಮಾಡಿರಬೇಕು.

  ಗಮನಿಸಿ: ಎಲ್ಲಾದರೂ ಅನಿವಾಸಿ ತೆರಿಗೆದಾರ ವ್ಯಕ್ತಿಯಾಗಿ ವ್ಯಕ್ತಿಯೊಬ್ಬರು ನೋಂದಣಿಗೆ ಅರ್ಜಿ ಸಲ್ಲಿಸುವುದಾದರೆ ಅವರು ಕಡ್ಡಾಯವಾಗಿ ಅಧಿಕೃತ ಸಹಿ ಹೊಂದಿರುವ ಅರ್ಜಿಯನ್ನು ಸಲ್ಲಿಸಬೇಕು, ಆತ ಭಾರತದ ನಿವಾಸಿಯಾಗಿದ್ದರೆ ಅಧಿಕೃತ ಪಾನ್ ಕಾರ್ಡ್ ಸಂಖ್ಯೆಯನ್ನು ನಮೋದಿಸಬೇಕು.

  1. ಒಮ್ಮೆ ವ್ಯಕ್ತಿಯೊಬ್ಬರು ನೋಂದಣಿಗೆ ಅರ್ಜಿ ಸಲ್ಲಿಸಿದರೆ, ನೋಂದಣಿ ದಿನದಿಂದ ಅದರ ವಾಯಿದೆ 90 ದಿನಗಳವರೆಗೆ ಇರುತ್ತದೆ. ಎಲ್ಲಾದರೂ ವಿನಂತಿ ಮೇರೆಗೆ ನಮೂನೆ ಜಿಎಸ್ಟಿ ಆರ್ಇಜಿ-11 ಸಲ್ಲಿಸಿ ಈ ವಾಯಿದೆ ದಿನವನ್ನು ಮತ್ತೆ 90 ದಿನಗಳ ಕಾಲ ವಿಸ್ತರಿಸಿಕೊಳ್ಳಬಹುದಾಗಿದೆ. ಮೊದಲ ನೋಂದಣಿಯ ವಾಯಿದೆ ಮುಗಿಯುವ ಮೊದಲು ವಿಸ್ತರಣೆಯ ನೋಂದಣಿಯ ಅರ್ಜಿಯನ್ನು ಸಲ್ಲಿಸಬೇಕು. ಎಲ್ಲಾದರೂ ನೋಂದಣಿ ಅವಧಿ ಮುಗಿದುಹೋಗಿದ್ದರೆ, ವ್ಯಕ್ತಿಯು ಹೆಚ್ಚುವರಿಯಾಗಿ ನಿಗದಿತ ದಿನಾಂಕದವರೆಗೆ ಅಂದಾಜಿಸಿದ ತೆರಿಗೆ ಮೊತ್ತಕ್ಕೆ ಸರಿಸಮನಾದ ಮೊತ್ತವನ್ನು ಮತ್ತೆ ಹೂಡಿಕೆ ಮಾಡಬೇಕು.
  1. ಎಲ್ಲಾದರೂ, ಮುಂಗಡ ತೆರಿಗೆ ಹೂಡಿಕೆ ಮಾಡಿದ ಮೊತ್ತವು ನಿಜವಾದ ತೆರಿಗೆ ಬಾಧ್ಯತೆಗಿಂತ ಹೆಚ್ಚಿದ್ದರೆ, ಆತ/ಆಕೆ ಆದಾಯ ನಮೂನೆ ಸಲ್ಲಿಸಿದ ಸಮಯದ ನಂತರ ಬಾಕಿ ಉಳಿದ ಮೊತ್ತವನ್ನು ಮರು ಪಾವತಿ ಮಾಡಲಾಗುತ್ತದೆ.
  ಆದಾಯ ಸಲ್ಲಿಕೆ

  ನೋಂದಣಿ ಅವಧಿಯವರೆಗೆ ಸಾಂದರ್ಭಿಕ ತೆರಿಗೆದಾರ ವ್ಯಕ್ತಿಯು ನಿಯಮಿತ ವಿತರಕರಿಗೆ ಅನ್ವಯವಾಗುವಂಹ ತಿಂಗಳ ಆದಾಯ ಸಲ್ಲಿಕೆಯನ್ನು ಮಾಡಬೇಕು. ಇವು ಈ ಮುಂದಿನಂತೆ ಇದೆ:

  ಸಾಂದರ್ಭಿಕ ತೆರಿಗೆದಾರ ವ್ಯಕ್ತಿ ಸಲ್ಲಿಸಬೇಕಾದ ತೆರಿಗೆ ನಮೂನೆ
  ನಮೂನೆ ಆವರ್ತನ ಕೊನೆಯ ದಿನಾಂಕ ವಿವರ
  ಜಿಎಸ್ಟಿಆರ್-1 ತಿಂಗಳು ಮುಂಬರುವ ತಿಂಗಳ 10ನೇ ತಾರೀಕು ತೆರಿಗೆ ವಿಧಿಸಬಲ್ಲ ಸರಕು/ಅಥವಾ ಸೇವೆಯ ಬಾಹ್ಯಾ ಪೂರೈಕೆಯ
  ಜಿಎಸ್ಟಿಆರ್-2ಎ ತಿಂಗಳು ಮುಂಬರುವ ತಿಂಗಳ 11ನೇ ತಾರೀಕು ಪೂರೈಕೆದಾರರು ಸಲ್ಲಿಸಿದ ನಮೂನೆ ಜಿಎಸ್ಟಿಆರ್-1 ಆಧಾರದಲ್ಲಿ ಪೂರೈಕೆ ಸ್ವೀಕೃತಿದಾರರಿಗೆ ಆಂತರಿಕ ಪೂರೈಕೆಯ ಸ್ವಯಂ ಸೃಜಿಸಿದ ವಿವರಗಳು ಲಭಿಸುವಂತೆ
  ಜಿಎಸ್ಟಿಆರ್-2 ತಿಂಗಳು ಮುಂಬರುವ ತಿಂಗಳ 15ನೇ ತಾರೀಕು ಆದಾನ ತೆರಿಗೆ ಪಾವತಿ ಕೇಳಲು ಒಳಗಿನ ಪೂರೈಕೆಯ ವಿವರವನ್ನು ಸಲ್ಲಿಸಿ. ಸೇರಿಸಲಾಗಿರುವುದು ಅಥವಾ ಮಾರ್ಪಾಡು ಮಾಡಲಾದ ವಿಷಯಗಳನ್ನು ನಮೂನೆ ಜಿಎಸ್ಟಿಆರ್-2ಎನಲ್ಲಿ ಸಲ್ಲಿಸಬೇಕು.
  ಜಿಎಸ್ಟಿಆರ್-1ಎ ತಿಂಗಳು ಮುಂಬರುವ ತಿಂಗಳ 17ನೇ ತಾರೀಕು ಸ್ವೀಕೃತಿದಾರರು ಬಾಹ್ಯಾ ಪೂರೈಕೆ ಸೇರಿಸಿರುವುದು, ಸರಿಪಡಿಸಿರುವುದು ಅಥವಾ ರದ್ದುಗೊಳಿಸಿರುವುದನ್ನು ನಮೂನೆ ಜಿಎಸ್ಟಿಆರ್-2ನಲ್ಲಿ ಭರ್ತಿ ಮಾಡಬೇಕು ಮತ್ತು ಪೂರೈಕೆದಾರರಿಗೆ ದೊರಕುವಂತೆ ಮಾಡಬೇಕು. ಸ್ವೀಕೃತಿದಾರರಿಂದ ಮಾರ್ಪಾಡು ಮಾಡಲ್ಪಟ್ಟಿರುವುದನ್ನು ಪೂರೈಕೆದಾರರು ಸಮ್ಮತಿಸಬಹುದು ಅಥವಾ
  ಜಿಎಸ್ಟಿಆರ್-3 ತಿಂಗಳು ಮುಂಬರುವ ತಿಂಗಳ 20ನೇ ತಾರೀಕು ತೆರಿಗೆ ಪಾವತಿ ಜೊತೆಗೆ ಹೊರಗಿನ ಪೂರೈಕೆ ಮತ್ತು ಒಳಗಿನ ಪೂರೈಕೆಯ ಅಂತಿಮ ಮಾಹಿತಿಯನ್ನು ಭರ್ತಿ ಮಾಡಿ ತಿಂಗಳ ಆದಾಯ ನಮೂನೆಯನ್ನು ಸಲ್ಲಿಸಬೇಕು

   

  ಅನಿವಾಸಿ ತೆರಿಗೆದಾರ ವ್ಯಕ್ತಿಗಳು ಸಲ್ಲಿಸಬೇಕಾದ ತೆರಿಗೆ ನಮೂನೆ
  ನಮೂನೆ ಆವರ್ತನ ಕೊನೆಯ ದಿನಾಂಕ ವಿವರ
  ಜಿಎಸ್ಟಿಆರ್-5 ತಿಂಗಳು ಮುಂಬರುವ ತಿಂಗಳ 20ನೇ ತಾರೀಕು ಅಥವಾ ನೋಂದಣಿ ವಾಯಿದೆ ಮುಗಿದ 7 ದಿನದೊಳಗೆ,
  ಯಾವುದು ಮೊದಲೋ ಅದು.
  ಆಮದು, ಹೊರ ಪೂರೈಕೆ, ಲಭ್ಯವಿರುವ ಐಟಿಸಿ, ತೆರಿಗೆ ಪಾವತಿ ಮತ್ತು ಮುಕ್ತಾಯದ ದಾಸ್ತಾನು
  ಉಪಸಂಹಾರ

  ಸಾಂದರ್ಭಿಕ ಮತ್ತು ಅನಿವಾಸಿ ತೆರಿಗೆದಾರ ವ್ಯಕ್ತಿಗಳಿಗೆ, ನೋಂದಣಿಗೆ ಸಂಬಂಧಪಟ್ಟಂತೆ ಅನುಸರಣೆ ಸುಲಭವಾಗಲಿದ್ದು, ತೆರಿಗೆ ಪಾವತಿ ಮಾಡುವುದು ಮತ್ತು ಆದಾಯ ನಮೂನೆ ಸಲ್ಲಿಸುವುದು ಈ ಹಿಂದಿನ ತೆರಿಗೆ ಪದ್ಧತಿಗೆ ಬದಲಾಗಿ ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ದೇಶಾದ್ಯಂತ ಒಂದೇ ರೀತಿ ಆಗಿದೆ. ಈ ಹಿಂದಿನ ತೆರಿಗೆ ಪದ್ಧತಿಯಲ್ಲಿ ಇದು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿತ್ತು. ಸಾಂದರ್ಭಿಕ ಮತ್ತು ಅನಿವಾಸಿ ತೆರಿಗೆಪಾವತಿಸಬೇಕಾದ ವ್ಯಕ್ತಿಗಳು ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ವ್ಯವಹಾರ ಆರಂಭಿಸುವ 5 ದಿನಗಳ ಮೊದಲು ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ನೋಂದಣಿ ಮಾಡಿಸಬೇಕು, ಜೊತೆಗೆ ಅಂದಾಜು ತೆರಿಗೆ ಬಾಧ್ಯತೆಯನ್ನು ಮುಂಗಡ ತೆರಿಗೆಯಾಗಿ ಪಾವತಿಸಬೇಕು, ಈ ನೋಂದಣಿ ದಾಖಲೆಯ ವಾಯಿದೆ ಗರಿಷ್ಠ 90 ದಿನಗಳವರೆಗೆ ಇರುತ್ತದೆ. ಇದನ್ನು ಅವಶ್ಯಕತೆ ಇದ್ದರೆ ಮತ್ತೆ 90 ದಿನಗಳವರೆಗೆ ವಿಸ್ತರಿಸಲು ಅವಕಾಶವಿದೆ ಮತ್ತು ನೋಂದಣಿ ಅವಧಿಯಲ್ಲಿ ತಿಂಗಳ ಆದಾಯ ನಮೂನೆ ಸಲ್ಲಿಕೆ ಮಾಡಬೇಕು.

  Are you GST ready yet?

  Get ready for GST with Tally.ERP 9 Release 6

  137,753 total views, 176 views today