ಗ್ರಾಹಕರಿಗೆ ಇದು ಕಡಿಮೆ ದರದ ಭರವಸೆ ನೀಡುತ್ತದೆ; ವ್ಯವಹಾರಗಳಿಗೆ ಪರೋಕ್ಷ ತೆರಿಗೆಯನ್ನು ಸರಳಗೊಳಿಸುವುದರಿಂದ ಮತ್ತು ಭಾರತ ಸರಕಾರಕ್ಕೆ ಇದು ಅತ್ಯಧಿಕ ತೆರಿಗೆ ಆದಾಯದ ಭರವಸೆ ನೀಡುವುದರಿಂದ ಯಾರಾದರೂ ಜಿಎಸ್ಟಿಯನ್ನು ಅವಲೋಕಿಸಿದರೆ ಅದು ಗ್ರಾಹಕರಿಗೆ ಅನುಗ್ರಹದಂತೆ ಕಾಣಿಸುತ್ತದೆ. ಜಿಎಸ್ಟಿ ಜಾರಿಗೆ ತರುವುದರಿಂದ ವ್ಯವಹಾರ ಅರ್ಥವ್ಯವಸ್ಥೆಯಲ್ಲಿ ಲಾಭ ಪಡೆಯುವ ಮತ್ತೊಬ್ಬರು ಎಂದರೆ- ಚಾರ್ಟೆಡ್ ಅಕೌಟೆಂಟ್.
ಇಲ್ಲಿ, ನಾನು ಜಿಎಸ್ಟಿಯಿಂದ ಪ್ರಮುಖ ಪ್ರಯೋಜನಗಳನ್ನು ಪಟ್ಟಿ ಮಾಡುತ್ತೇನೆ- ಮುಂಬರುವ ಕೆಲವೇ ತಿಂಗಳಲ್ಲಿ ಮತ್ತು ಭವಿಷ್ಯದಲ್ಲಿ ಇದು ಸಿಎ ಜೀವನವನ್ನು ಮತ್ತಷ್ಟು ಸುಲಭ ಮತ್ತು ಸರಳಗೊಳಿಸಲಿದೆ.

ಗ್ರಾಹಕರ ಸಂಖ್ಯೆ ಹೆಚ್ಚಳ

ಈಗ ನಾವು ಹೊಂದಿರುವ ಪರೋಕ್ಷ ತೆರಿಗೆ ವ್ಯವಸ್ಥೆಯು ಸಂಪೂರ್ಣ ಹೊಸ ತೆರಿಗೆ ವ್ಯವಸ್ಥೆಯಾಗಿದೆ. ಇದನ್ನು ಪ್ರಕಟಿಸಿದ ನಂತರ, ವ್ಯವಹಾರಗಳು ನರ್ವಸ್ ಆಗಲು ಆರಂಭಿಸಿವೆ ಮತ್ತು ಸಹಾಯಕ್ಕಾಗಿ ಸಿಎ ಸಮುದಾಯದ ಬಳಿಗೆ ಬಂದು ತಮ್ಮ ವ್ಯಾಪಾರದ ಮೇಲೆ ಜಿಎಸ್ಟಿ ಹೇಗೆ ಅನ್ವಯವಾಗುತ್ತದೆ ಮತ್ತು ನೋಂದಣಿ ಪ್ರಕ್ರಿಯೆ ಹೇಗೆ ಮಾಡಬೇಕೆಂದು ಸಹಾಯ ಕೇಳುತ್ತಾರೆ. ಈಗ ಪರೋಕ್ಷ ತೆರಿಗೆ ಪಾವತಿಸುವ ಸಂದರ್ಭದಲ್ಲಿ ಹೊಸದಾಗಿ ಬಂದಿರುವ ಜಿಎಸ್ಟಿ ಕುರಿತು ಎಲ್ಲರೂ ಸಿಎ ಬಳಿ ಕೇಳುತ್ತಿದ್ದಾರೆ.

ಇಂತಹ ಸಂದರ್ಭಗಳಲ್ಲಿ, ಗ್ರಾಹಕರಿಗೆ ಸಲಹೆ ನೀಡುವುದು ಮಾತ್ರವಲ್ಲದೆ ಗ್ರಾಹಕರನ್ನು ಜಿಎಸ್ಟಿ ಕುರಿತು ಶಿಕ್ಷಿತರನ್ನಾಗಿ ಮಾಡುವ ಮಹತ್ವದ ಪಾತ್ರವನ್ನು ಸಿಎ ಹೊಂದಿದ್ದಾರೆ. ಜಿಎಸ್ಟಿ ಅನುಸರಣೆಗೆ ಜಿಎಸ್ಟಿ ಕಾನೂನು ಅರ್ಥಮಾಡಿಕೊಳ್ಳುವುದು ಮತ್ತು ವ್ಯವಹಾರಕ್ಕೆ ಅನ್ವಯಿಸುವುದು ನಿರ್ಣಾಯಕ ಸಂಗತಿಯಾಗಿದ್ದು, ಸಿಎ ಈ ಅಂತರವನ್ನು ಕಡಿಮೆ ಮಾಡಬಹುದಾಗಿದೆ. ಸರಳವಾಗಿ ಹೇಳುವುದಾದರೆ, ಜಿಎಸ್ಟಿ ಸಲಹೆ ಪಡೆಯಲು ಮತ್ತು ಜಿಎಸ್ಟಿಯಡಿಯಲ್ಲಿ ನೋಂದಣಿ, ರಿಟರ್ನ್ ಸಲ್ಲಿಸುವಿಕೆ ಮತ್ತು ಅಕೌಂಟಿಂಗ್ ಕಾರ್ಯಗಳಿಗಾಗಿ ಹೆಚ್ಚು ಹೆಚ್ಚು ವ್ಯಾಪಾರಿಗಳು ಸಿಎ ಸಮುದಾಯದತ್ತ ಬರಲಿದ್ದಾರೆ. ಇದೆಲ್ಲದಕ್ಕಿಂತ, ಅನಿವಾರ್ಯವಾಗಿ ಸಿಎಗಳಿಗೆ ಗ್ರಾಹಕರ ಸಂಖ್ಯೆಯು ಹೆಚ್ಚಾಗಲಿದೆ ಮತ್ತು ಇದರಿಂದ ಅವರ ಒಟ್ಟಾರೆ ವ್ಯವಹಾರವು ಉತ್ತಮಗೊಳ್ಳಲಿದೆ.

ಹೊಸ ಚಾರ್ಟೆಡ್ ಅಕೌಟೆಂಟ್ ಗಳಿಗೆ ಅನುಗ್ರಹ

ಹೊಸ ಉತ್ಸಾಹಿ ಚಾರ್ಟೆಡ್ ಅಕೌಟೆಂಟ್ ಗಳಿಗೆ ಇದು ಜೀವ ಉಳಿಸುವ ಔಷಧವಾಗಿದೆ. ಜಿಎಸ್ಟಿಯನ್ನು ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅಳವಡಿಸುತ್ತಿರುವುದು ಇದರ ಹಿಂದಿರುವ ಪ್ರಮುಖ ಕಾರಣವಾಗಿದೆ. ಇತರ ಮಾತುಗಳಲ್ಲಿ ಹೇಳುವುದಾದರೆ, ಇದು ಅನುಭವಿ ಚಾರ್ಟೆಡ್ ಅಕೌಟೆಂಟ್ ಗಳಿಗೆ ಮತ್ತು ಹೊಸಬರಿಗೆ ಇದು ಹೊಸದಾಗಿದ್ದು, ಎಲ್ಲರೂ ಒಂದೇ ದೋಣಿಯಲ್ಲಿ ಪ್ರಯಾಣಿಸಬೇಕಿದೆ. ಹೊಸದಾಗಿ ಚಾರ್ಟೆಡ್ ಅಕೌಟೆಂಟ್ ಶಿಕ್ಷಣ ಪಡೆದವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಜಿಎಸ್ಟಿ ಅಲೆಯಲ್ಲಿ ಅವರ ಕರಿಯರ್ ಸುಲಭವಾಗಿ ಉತ್ತಮಗೊಳ್ಳುವ ಅವಕಾಶವಿದೆ.

GST is a life-saving pill for new as well as aspiring chartered accountants Click To Tweet

ಜಿಎಸ್ಟಿ ಆಗಮಿಸಿದ ಬಳಿಕ ಸಲಹೆ ನೀಡುವುದು ಮತ್ತು ಅನುಸರಣೆ ಸಂಬಂಧಿತ ಕೆಲಸಗಳಿಂದ ಸಿಎ ಕೆಲಸದ ವ್ಯಾಪ್ತಿ ಹೆಚ್ಚಾಗಲಿದೆ. ಹಳೆಯ ತೆರಿಗೆ ಪದ್ಧತಿಯಿಂದ ಹೊಸ ತೆರಿಗೆ ಪದ್ಧತಿಗೆ ಸರಳವಾಗಿ ವಲಸೆ ಬರುವುದು ಅತ್ಯಂತ ಪ್ರಮುಖವಾದ ವಿಷಯವಾಗಿದೆ. ಸರಳವಾದ ವರ್ಗಾವಣೆಯಿಂದ ಗ್ರಾಹಕರ ವ್ಯಾಪಾರದ ವೇಗ ಹೆಚ್ಚಾಗಲಿದೆ, ಯಾಕೆಂದರೆ, ಜಿಎಸ್ಟಿಯು ಸರಕುಗಳ ದರವನ್ನು ತಗ್ಗಿಸಲು ಬಯಸಿದೆ ಮತ್ತು ಇದರಿಂದ ಲಾಭ ಹೆಚ್ಚಾಗಲಿದೆ. ಹೀಗಾಗಿ ಯುವ ಸಿಎಗಳು ಉತ್ತಮ ಅವಕಾಶ ಪಡೆಯಲು ಗ್ರಾಹಕರಿಗೆ ಅತ್ಯುತ್ತಮ ಸಲಹೆ ನೀಡಿ ಮತ್ತು ಅವರಿಗೆ ಜಿಎಸ್ಟಿ ಶಕೆಯಲ್ಲಿ ಉತ್ತಮವಾಗಿ ಮಾರ್ಗದರ್ಶನ ಒದಗಿಸಿ ಉತ್ತಮವಾಗಿ ಬೆಳೆಯಲು ಇದು ಅದ್ಭುತ ಅವಕಾಶವಾಗಿದೆ. ಹೊಸಬರಿಗೆ ಈಗಾಗಲೇ ಇರುವ ಸಿಎಗಳಷ್ಟೇ ಬೇಡಿಕೆ ಇರಲಿದೆ. ಹೊಸ ತಲೆಮಾರಿನ ಸಿಎಗಳು ಆನ್ ಲೈನ್ ಚರ್ಚಾತಾಣಗಳನ್ನು ತೆರೆಯಬಹುದು ಮತ್ತು ಹೊಸ ಗ್ರಾಹಕರನ್ನು ಪಡೆಯಲು ಇಂಟರ್ನೆಟ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಸರಳವಾಗಿ ಹೇಳುವುದಾದರೆ, ಜಿಎಸ್ಟಿ ಕುರಿತು ಸರಿಯಾದ ಜ್ಞಾನ ಹೊಂದಿದ್ದರೆ, ಹೊಸ ಚಾರ್ಟೆಡ್ ಅಕೌಟೆಂಟ್ ಗಳು ಈ ಹೊಸ ಅರ್ಥವ್ಯವಸ್ಥೆಯಲ್ಲಿ ಉತ್ತಮವಾಗಿ ಬೆಳವಣಿಗೆ ಹೊಂದಲಿದ್ದಾರೆ.

ಅನುಸರಣೆಯಿಂದ ಆದಾಯದಲ್ಲಿ ಪ್ರಗತಿ

ಜಿಎಸ್ಟಿಯು ಈ ಮೊದಲು ಚರ್ಚಿಸಿದಂತೆ ಸಿಎಗಳ ಗ್ರಾಹಕರ ಸಂಖ್ಯೆಯನ್ನು ಮಾತ್ರ ಹೆಚ್ಚಿಸುವುದಲ್ಲ, ಅವರ ಆದಾಯದ ಹೆಚ್ಚಳಕ್ಕೂ ಕಾರಣವಾಗಲಿದೆ. ಜಿಎಸ್ಟಿಯಿಂದಾಗಿ ಸಿಎಗಳು ದೊಡ್ಡ ಮಟ್ಟದ ಹಣಕಾಸು ಲಾಭಗಳನ್ನು ಪಡೆಯಬಹುದಾಗಿದೆ.

ಇದನ್ನು ನಿಮಗೆ ಸರಳವಾಗಿ ಹೇಳುತ್ತೇನೆ, ನಿಮ್ಮಲ್ಲಿ ಒಬ್ಬರು ಗ್ರಾಹಕರು ಜಿಎಸ್ಟಿ ಕುರಿತು ಸಲಹೆ ಕೇಳಲು ಬಂದಾಗ, ಅವರಿಗೆ ಬೇರೆ ವೃತ್ತಿಪರ ಸೇವೆ ನೀಡುವ ಅವಕಾಶವೂ ದೊರಕಬಹುದು. ಜಿಎಸ್ಟಿ ಜೊತೆ ಇತರೆ ಅವಕಾಶಗಳನ್ನು ಅಂದರೆ, ಅಕೌಟಿಂಗ್ ಸರ್ವೀಸಸ್, ಜಿಎಸ್ಟಿ ನೊಂದಣಿ, ಸಮಯಕ್ಕೆ ಸರಿಯಾಗಿ ರಿಟರ್ನ್ ಸಲ್ಲಿಸುವಿಕೆ, ತೆರಿಗೆ ಪಾವತಿ ಇತ್ಯಾದಿ ಇತರೆ ಸೇವೆಗಳನ್ನು ನೀಡುವ ಅವಕಾಶವೂ ದೊರಕಬಹುದಾಗಿದೆ. ಇದರಿಂದ ಆದಾಯವೂ ಹೆಚ್ಚಾಗುತ್ತ ಹೋಗುತ್ತದೆ, ಹೊಸ ಗ್ರಾಹಕರ ಬದಲಾಗಿ ಹಳೆಯ ಗ್ರಾಹಕರಿಂದ ಭಿನ್ನ ಸೇವೆಗಳಿಗೆ ಮತ್ತೆ ಮತ್ತೆ ಆದಾಯ ದೊರಕುವುದರಿಂದ ಆದಾಯದ ಪ್ರಗತಿ ಉತ್ತಮಗೊಳ್ಳುತ್ತದೆ. ಅತ್ಯಂತ ಪ್ರಮುಖವಾಗಿ, ಒಮ್ಮೆ ಗ್ರಾಹಕರಿಗೆ ಜಿಎಸ್ಟಿ ಕುರಿತು ಸಂಪೂರ್ಣವಾಗಿ ಶಿಕ್ಷಣ ನೀಡಿ ಜಿಎಸ್ಟಿಗೆ ವರ್ಗಾವಣೆ ಮಾಡಿದ ಬಳಿಕ ಅನುಸರಣೆಯ ಕೆಲಸ ಆರಂಭವಾಗುತ್ತದೆ. ಜಿಎಸ್ಟಿ ಕಾರ್ಯಗಳನ್ನು ನಡೆಸುವುದರಿಂದ ಸಿಎ ಸಮುದಾಯದ ಆದಾಯ ಹೆಚ್ಚುತ್ತದೆ. ಹೀಗೆ ಹೆಚ್ಚಾಗುತ್ತಿರುವ ಆದಾಯದಿಂದ ಹೊಸ ಸಿಎ ಮಾತ್ರವಲ್ಲದೆ ಈಗಾಗಲೇ ಇರುವ ಚಾರ್ಟೆಡ್ ಅಕೌಟೆಂಟ್ ಗಳ ಜೀವನಮಟ್ಟದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ.

ಸುಲಭವಾಗಿ ಕೆಲಸ ಮಾಡುವಿಕೆ

ಈಗಿನ ತೆರಿಗೆ ಪದ್ಧತಿಯಲ್ಲಿ, ನಾವು ಅಬಕಾರಿ ಸುಂಕ, ಸೇವಾ ತೆರಿಗೆ, ವ್ಯಾಟ್, ಸಿಎಸ್ಟಿ, ಜೊತೆಗೆ ಇತರೆ ಹಲವು ಬಗೆಯ ತೆರಿಗೆ ನಿಯಮಗಳನ್ನು ಮತ್ತು ನಿಬಂದನೆಗಳನ್ನು ಹೊಂದಿದ್ದೇವೆ. ಇದು ಸಾಕಾಗದೆ, ಪ್ರತಿಯೊಂದು ರಾಜ್ಯವು ಭಿನ್ನ ವ್ಯಾಟ್ ಕಾಯಿದೆಗಳನ್ನು ಮತ್ತು ವಿವಿಧ ತೆರಿಗೆಗಳನ್ನು ಮತ್ತು ಇ-ಕಾಮರ್ಸ್ ಗಳಿಗೆ ಬೇರೆ ಬೇರೆ ನಿಯಮಗಳನ್ನು ಹೊಂದಿವೆ. ಈ ಸಂಕೀರ್ಣತೆಯು ದೋಷಗಳು ಇಲ್ಲದೆ ಅನುಸರಣೆ ಮಾಡುವ ಹೊಣೆಯಿರುವ ಚಾರ್ಟೆಡ್ ಅಕೌಟೆಂಟ್ ಗಳಿಗೆ ಮತ್ತು ಅವರ ಗ್ರಾಹಕರಿಗೆ ತೊಂದರೆ ಉಂಟು ಮಾಡುತ್ತಿತ್ತು. ಸರಳವಾಗಿ, ಕಾನೂನು ಬಗ್ಗೆ ಜ್ಞಾನವಿಲ್ಲದೆ ಇದ್ದರೂ ಅದರಲ್ಲಿ ಕೆಲವೊಮ್ಮೆ ಕಾರ್ಯನಿರ್ವಹಿಸಬೇಕಿತ್ತು.

ಈ ಸಂಕೀರ್ಣತೆ ಮತ್ತು ಗೊಂದಲಗಳು ಜಿಎಸ್ಟಿಯಲ್ಲಿ ಸಂಪೂರ್ಣವಾಗಿ ಹೋಗಲಿದೆ, ಯಾಕೆಂದರೆ ಕೇಂದ್ರ ಮತ್ತು ರಾಜ್ಯಗಳು ಒಂದೇ ಕಾನೂನಿಡಿ ಸಾಗಲಿವೆ, ಇದರಿಂದ ಗೊಂದಲಗಳು ಕಡಿಮೆಯಾಗಲಿದೆ ಮತ್ತು ಉತ್ತಮ ತೆರಿಗೆ ಆಡಳಿತ ನಡೆಸಲು ಸಾಧ್ಯವಾಗಲಿದೆ. ಹೀಗಾಗಿ, ಜಿಎಸ್ಟಿ ಶಕೆ ಆರಂಭವಾದ ಬಳಿಕ ಸಿಎ ಸಮುದಾಯಕ್ಕೆ ಕೆಲಸದ ಒತ್ತಡವು ತುಂಬಾ ಕಡಿಮೆಯಾಗಲಿದೆ ಮತ್ತು ಅತ್ಯುತ್ತಮ ಅನುಸರಣೆ ಕುರಿತು ಮಾರ್ಗದರ್ಶನ ನೀಡುವುದು ಇನ್ನೂ ಸುಲಭವಾಗಿದೆ.

ಉಪಸಂಹಾರ

ಇಂದು ಇಡೀ ದೇಶವು ಜಿಎಸ್ಟಿಯನ್ನು ಮುಕ್ತವಾಗಿ ಸ್ವಾಗತಿಸುತ್ತಿದೆ. ಇದು ನನ್ನನ್ನು ಸಂತೋಷ ಗೊಳಿಸುತ್ತದೆ. ಜುಲೈ 1ರಿಂದ ಭಾರತಾದ್ಯಂತ ಇದನ್ನು ಜಾರಿಗೆ ತಂದ ನಂತರ ನಾನು ಇನ್ನಷ್ಟು ಸಂತೋಷಗೊಳ್ಳುತ್ತೇನೆ. ಇದು ದೇಶದ ಪ್ರಗತಿ ಮತ್ತು ಅಭಿವೃಧ್ಧೀಗೆ ಸಾಕಷ್ಟು ಕೊಡುಗೆ ನೀಡಲಿದೆ ಮತ್ತು ಜಿಎಸ್ಟಿ ಜಗತ್ತಿನಲ್ಲಿ ಸಿಎಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ. ಇದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ. ಈ ಜಗತ್ತಿನಲ್ಲಿ ಎಲ್ಲವೂ ಆನ್ ಲೈನ್ ಮಯವಾಗುತ್ತಿರುವ ಸಂದರ್ಭದಲ್ಲಿಯೂ ಚಾರ್ಟೆಡ್ ಅಕೌಟೆಂಟ್ ಗಳು ವ್ಯವಹಾರದ ಬೆನ್ನೆಲುಬಾಗಿರುವುದು ಮುಂದುವರೆಯಲಿದೆ. ಕೇವಲ ವ್ಯವಹಾರ ಮಾರ್ಗದರ್ಶನ ಮಾತ್ರವಲ್ಲದೆ ಇದು ಮೊದಲ ಬಾರಿಗೆ ಪರಿಚಯಿಸುತ್ತಿರುವುದು ಇದಕ್ಕೆ ಕಾರಣ. ಜಿಎಸ್ಟಿಯು ಚಾರ್ಟೆಡ್ ಅಕೌಟೆಂಟ್ ಗಳ ಜೀವನವನ್ನು ಹಿಂದೆಂದಿಗಿಂತಲೂ ಇನ್ನಷ್ಟು ಅದ್ಭುತಗೊಳಿಸಲಿದೆ.

GST promises to make the life of chartered accountants more glorious than ever.Click To Tweet

ಜಿಎಸ್ಟಿಯು ಚಾರ್ಟೆಡ್ ಅಕೌಟೆಂಟ್ ಗಳ ಜೀವನವನ್ನು ಹಿಂದೆಂದಿಗಿಂತಲೂ ಅದ್ಭುತಗೊಳಿಸಲಿದೆ.

ಲೇಖಕರ ಪರಿಚಯ
ರಿಷಿತ್ ಶಾ ಅವರು ಸಿಎ ಫೈನಲಿಸ್ಟ್ ಆಗಿದ್ದು, ಟ್ಯಾಲಿಯ ದೊಡ್ಡಅಭಿಮಾನಿಯಾಗಿದ್ದಾರೆ. ಇವರು ಟ್ಯಾಲಿಯನ್ನು ಸರಳವಾಗಿ ತನ್ನ ವೆಬ್ ಸೈಟ್ ನಲ್ಲಿ ಹೇಳಿಕೊಡುತ್ತಾರೆ.– www.tallyschool.com
ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಮತ್ತು ದೃಷ್ಟಿಕೋನಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು ಇದು ಟ್ಯಾಲಿ ಸೊಲ್ಯುಷನ್ಸ್ ಪ್ರೈವೇಟ್ ಲಿಮಿಟೆಡ್ ನ ನೀತಿ ನಿಯಮಗಳನ್ನು ಪ್ರತಿಫಲಿಸುವುದಿಲ್ಲ.

Are you GST ready yet?

Get ready for GST with Tally.ERP 9 Release 6

46,628 total views, 1 views today