ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ನೀವು ಹೇಗೆ ಲೆಕ್ಕಪುಸ್ತಕವನ್ನು ನಿರ್ವಹಿಸುತ್ತೀರಿ ಎನ್ನುವುದರಲ್ಲಿ ಮೂಲಭೂತವಾಗಿ ಬದಲಾವಣೆಯಾಗಲಿದೆ. ಇಲ್ಲಿಯವರೆಗೆ, ಎಲ್ಲಾ ಬಗೆಯ ತೆರಿಗೆ ಪದ್ಧತಿಯಲ್ಲಿ ನೀವು ಹೇಗೆ ಪುಸ್ತಕವನ್ನು ನಿರ್ವಹಣೆ ಮಾಡಿದ್ದೀರಿ ಎನ್ನುವುದು ಮಾತ್ರ ಸತ್ಯವಾಗಿತ್ತು. ಅದರ ಆಧಾರದಲ್ಲಿಯೇ ನಿಮ್ಮ ಎಲ್ಲಾ ಆದಾಯ ಸಲ್ಲಿಕೆ ನಡೆಸಲಾಗುತ್ತಿತ್ತು.

ಜಿಎಸ್ಟಿ ತೆರಿಗೆ ಪದ್ಧತಿ ಶಕೆಯಲ್ಲಿ, ನೀವು ಏನು ಮಾಡುತ್ತೀರಿ ಎನ್ನುವುದು ಒಂದು ಭಾಗವಾಗಿದೆ, ಇದರ ಜೊತೆಗೆ ಇತರೆ ಹಲವು ಜನರು ನಿಮ್ಮೊಂದಿಗೆ ವ್ಯವಹಾರ ನಡೆಸುವವರು ಮಾಡುವ ವರದಿಯೂ ಅಗತ್ಯವಾಗಿರುತ್ತದೆ. ಜಿಎಸ್ಟಿಎನ್ ಎನ್ನುವುದು ಸಾಮಾನ್ಯ ಮಾಹಿತಿ ಸಂಗ್ರಹವಾಗಿದೆ ಮತ್ತು ಅಲ್ಲಿ ನಿಮ್ಮ ವ್ಯವಹಾರ ಏನೆಂದು ಏಕೀಕೃತ ನೋಟವನ್ನು ಪಡೆಯಬಹುದಾಗಿದೆ. ಇದು ಅಬಕಾರಿ, ಬ್ಯಾಂಕಿಂಗ್ ವಿಭಾಗಗಳು, ಆದಾಯ ತೆರಿಗೆ ಮತ್ತು ಇತರೆ ಹಲವು ವಿಭಾಗಗಳ ಜೊತೆ ಸಂಪರ್ಕ ಹೊಂದಿರುತ್ತದೆ. ನೀವು ಪ್ರತಿಯೊಂದು ವಿಭಾಗದಲ್ಲಿಯೂ ಏನು ವರದಿ ಮಾಡುವಿರಿ ಎಂದು ತೆರಿಗೆದಾರರಿಗೆ ಪೂರ್ಣವಾಗಿ ತಿಳಿಸುತ್ತದೆ.

ಈ ಹಿಂದೆ ತೆರಿಗೆ ಪಾವತಿ ಅನುಸರಣೆ ಮಾಡದೆ ಇರುವುದು ಸುಲಭವಾಗಿತ್ತು. ಅದು ನನ್ನ ಚಾರ್ಟೆಡ್ ಅಕೌಂಟೆಂಟ್ ಕೆಲಸವಾಗಿತ್ತು ಮತ್ತು ಆತನಿಗೆ ತಿಳಿಸಿದರೆ ಸಾಕಿತ್ತು. “ಸರಿ, ಈ ವರ್ಷ ನಾನು ಇಷ್ಟು ತೆರಿಗೆ ಪಾವತಿಸಬೇಕೆಂದಿದ್ದೇನೆ ಮತ್ತು ಇದಕ್ಕೆ ತಕ್ಕಂತೆ ನನ್ನ ಲೆಕ್ಕಪುಸ್ತಕವನ್ನು ಸಿದ್ಧಪಡಿಸಿ’ ಎಂದು ಹೇಳಿದರೆ ಸಾಕಿತ್ತು. ಆದರೆ, ಇತರರು ಜಿಎಸ್ಟಿಎನ್ ನಲ್ಲಿ ವರದಿ ಮಾಡುವುದು ಹೆಚ್ಚು ಕಠಿಣವಾಗಿದೆ ಮತ್ತು ಇಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳೆಲ್ಲವು ವಿವರವನ್ನು ತಿಳಿದಿರುತ್ತವೆ.

ಲೆಕ್ಕಪುಸ್ತಕ ಖಾತೆಯು ಜಿಎಸ್ಟಿಎನ್ ಜೊತೆ ಪೂರ್ತಿಯಾಗಿ ಸಿಂಕ್ ಆಗುವಂತೆ ನಿರ್ವಹಣೆ ಮಾಡುವುದನ್ನು ಕಂಪನಿಗಳು ಖಚಿತಪಡಿಸಿಕೊಳ್ಳಬೇಕಿರುವುದು ಒಂದು ಮೂಲಭೂತ ಬದಲಾವಣೆಯಾಗಿದೆ ಮತ್ತು ಬಾಹ್ಯಾ ಮೂರನೇ ವ್ಯಕ್ತಿಗಳ ಜೊತೆ ಸಮನ್ವಯಗೊಳಿಸಬೇಕಾಗುತ್ತದೆ. ನಿಮ್ಮ ಬ್ಯಾಂಕಿಗೆ ವರ್ಗಾವಣೆಗೊಳ್ಳುವ ಪ್ರತಿಯೊಂದು ವ್ಯವಹಾರದ ಕುರಿತು ಮತ್ತು ಕೆಲವು ಇತರೆ ವ್ಯವಹಾರಗಳ ಕುರಿತು ಯಾರೋ ತಿಳಿದುಕೊಳ್ಳಬಹುದಾಗಿದೆ.

ಆದಾಯ ಸಲ್ಲಿಕೆ ಮತ್ತು ಆದಾಯ ತೆರಿಗೆ ಇತ್ಯಾದಿಗಳು ಮಾತ್ರವಲ್ಲದೆ ನಿಮ್ಮ ಪೂರೈಕೆದಾರರು ಮತ್ತು ನಿಮ್ಮ ಗ್ರಾಹಕರು ಕುರಿತು ನೀವು ಅತ್ಯುತ್ತಮವಾಗಿ ಇನ್ಪುಟ್ ಕ್ರೆಡಿಟ್ . ನಿಮ್ಮ ಪೂರೈಕೆದಾರರು ತೆರಿಗೆ ಪಾವತಿಸದೆ ಇದ್ದರೆ ನಿಮಗೆ ಆದಾನ ಪಾವತಿ ಲಭ್ಯವಾಗುವುದಿಲ್ಲ. ಉದಾಹರಣೆಗೆ, ಎ, ಬಿ ಮತ್ತು ಸಿ ನಡುವೆ ನಡೆಯುವ ಸರಳ ವ್ಯವಹಾರವನ್ನು ಮುಂದೆ ನೀಡಲಾಗಿದೆ.

ಇವರ ವ್ಯವಹಾರವನ್ನು ನೋಡೋಣ. ಪ್ರತಿತಿಂಗಳು “ಎ’’ಯು 1 ಕೋಟಿ ರೂ. ಮೌಲ್ಯದ ಸರಕುಗಳನ್ನು ಮಾರಾಟ ಮಾಡುತ್ತಿದೆ ಮತ್ತು “ಬಿ’’ಯು ಇದರಲ್ಲಿ ಕೊಂಚ ಕೆಲಸ ಮಾಡಿ ಅದನ್ನು 1.2 ಕೋಟಿ ರೂ.ಗೆ ಮಾರಾಟ ಮಾಡುತ್ತದೆ ಮತ್ತು “ಸಿ’’ಯು ಇದನ್ನು 1.5 ಕೋಟಿ ರೂ.ಗೆ ಮಾರಾಟ ಮಾಡುತ್ತದೆ. ಒಟ್ಟಾರೆ 1.5 ಕೋಟಿ ರೂ.ಗೆ ತೆರಿಗೆ ಬಾಧ್ಯತೆಯು ಶೇಕಡ 18 ಆಗಿದ್ದು, ಸರಕಾರಕ್ಕೆ ಪಾವತಿಸಬೇಕು. ಆದರೆ, ಇದರ ನಡುವೆ ಬಿಯು ತೆರಿಗೆ ಪಾವತಿಸುವುದಿಲ್ಲ. ಈಗಾಗಲೇ ಬಿಯು ಸರಕಾರಕ್ಕೆ 18 ಲಕ್ಷ ರೂ. ಮೌಲ್ಯದ ಶೇಕಡ 18 ತೆರಿಗೆ ಪಾವತಿಸಿದೆ. ಆದರೆ, ಮುಂದಿನ ಸರಣಿಗೆ ಅಂದರೆ ಸಿಗೆ ಆದಾನವನ್ನು ವರ್ಗಾಯಿಸಲು ಬಿಗೆ ಸಾಧ್ಯವಾಗುವುದಿಲ್ಲ. ಈ ಹಿಂದೆ ಸಿಯು 5.4 ಕೋಟಿಯ 30 ಲಕ್ಷ ಮೊತ್ತವಾದ ಕೇವಲ ಶೇಕಡ 18 ಪಾವತಿಸುವ ಅವಶ್ಯಕತೆಯಿತ್ತು. ಆದರೆ, ಈಗ ಒಟ್ಟಾರೆ 1.5 ಕೋಟಿಗೆ ತೆರಿಗೆ ಪಾವತಿಸುತ್ತದೆ, ಅಂದರೆ 27 ಲಕ್ಷ ಹೊರಹರಿವು ಉಂಟಾಗುತ್ತದೆ. ಸಿಗೆ ಬಿಯ ತೆರಿಗೆ ತಪ್ಪು ಎರಡು ತಿಂಗಳು ಇರುವಾಗ ತಿಳಿದುಬರುವುದು ಜಿಎಸ್ಟಿಯ ಟ್ರಿಕ್ಕಿ ಅಂಶವಾಗಿದೆ.

ಈ ಸಂದರ್ಭದಲ್ಲಿ ಬಿ ತಪ್ಪು ಮಾಡಿದರೆ, ಆತನ ಆದಾನವು 2 ತಿಂಗಳ ಬಳಿಕ ಆತನ ಆದಾನವು ವ್ಯತಿರಿಕ್ತವಾಗುತ್ತದೆ, ಇದರ ಅರ್ಥವೇನೆಂದರೆ, ಈಗಾಗಲೇ ಬಿಯ ತಪ್ಪು ಅರಿವಾಗುವ 2 ತಿಂಗಳು ಮೊದಲೇ ಸಿಯು ಆತನೊಂದಿಗೆ ವ್ಯವಹಾರ ನಡೆಸಿರುತ್ತದೆ. ಬಿಯು ಇನ್ನಷ್ಟು ತಪ್ಪುಗಳನ್ನು ಮಾಡಿದಾಗ ಹಣದ ಹೊರಹರಿವು 40-50 ಲಕ್ಷಕ್ಕೆ ತಲುಪುತ್ತದೆ ಮತ್ತು ಇದು ವ್ಯವಹಾರವನ್ನು ಸಾಯಿಸಬಹುದು. ಇದಕ್ಕಾಗಿ ನಿಮ್ಮ ಮಾರಾಟಗಾರ ಯಾರು ಎನ್ನುವುದನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯವಾಗಿದೆ ಮತ್ತು ಅವರು ಎಷ್ಟು ಉತ್ತಮವಾಗಿ ಅನುಸರಣೆ ಮಾಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು ಮತ್ತು ಅವರು ಸರಿಯಾಗಿ ತೆರಿಗೆ ಅನುಸರಣೆ ಮಾಡದೆ ಇದ್ದರೆ ನಿಮ್ಮ ಮಾರಾಟಗಾರರನ್ನು ನೀವು ಬದಲಾಯಿಸಿಕೊಳ್ಳಬೇಕು.

ನೀವು ವ್ಯವಹಾರದ ಮಾಲಿಕರಾಗಿ ನಿಮ್ಮಲ್ಲಿ ಎಲ್ಲಾ ಸಮಯದಲ್ಲಿ ಸಾಕಷ್ಟು ಹಣ ಇರುವುದನ್ನೂ ಖಾತ್ರಿಪಡಿಸಿಕೊಳ್ಳಬೇಕೆನ್ನುವುದೂ ಇದರ ಅರ್ಥವಾಗಿದೆ. ಎಲ್ಲಾದರೂ ನೀವು ಕಠಿಣ ಆಯವ್ಯಯದಲ್ಲಿ ವ್ಯವಹಾರ ನಡೆಸುತ್ತ ಇದ್ದರೆ, ಹೆಚ್ಚಿನ ಸಣ್ಣ ಮತ್ತು ಮಧ್ಯಮ ಕಂಪನಿಗಳು ಹೀಗೇ ಇರುತ್ತವೆ, ನೀವು ವ್ಯವಹಾರ ನಡೆಸುವ ಕುರಿತು ಮರು ಆಲೋಚಿಸಬೇಕಾಗುತ್ತದೆ. ನಿಮ್ಮ ತೆರಿಗೆ ಬಾಧ್ಯತೆ 5.4 ಲಕ್ಷವು ನಿಮ್ಮ ಮಾರಾಟಗಾರರ ತಪ್ಪಿನಿಂದ ಒಮ್ಮೆಲ್ಲೇ 27 ಲಕ್ಷ ಆಗಿ ಬಿಟ್ಟರೆ ಉಳಿದ ಜಿಎಸ್ಟಿ ತೆರಿಗೆಯನ್ನು ಹೊಂದಿಸಲು ನೀವು ಕಷ್ಟಪಡಬೇಕಾಗುತ್ತದೆ.
ನೀವು ಅತ್ಯುತ್ತಮವಾಗಿ ತೆರಿಗೆ ಅನುಸರಣೆ ಮಾಡದೆ ಇದ್ದರೆ ನಿಮ್ಮ ಜಿಎಸ್ಟಿ ಶ್ರೇಯಾಂಕವು ಕುಸಿಯಲಿದೆ. ನಿಮ್ಮ ಶ್ರೇಯಾಂಕ ಕಡಿಮೆಯಾದರೆ ನಿಮಗೆ ಹೊಸ ಖರೀದಿದಾರರು ಮತ್ತು ನಿಮ್ಮ ಹಳೆಯ ಖರೀದಿದಾರರು ನಂಬಿಕೆ ಕಳೆದುಕೊಂಡು ನಿಮ್ಮಿಂದ ದೂರ ಹೋಗಲಿದ್ದಾರೆ.

ಈ ಲೇಖನವನ್ನು ಮನೀಶ್ ಚೌಧರಿ ಬರೆದಿದ್ದಾರೆ. ಅವರು ಟ್ಯಾಲಿ ಎಜುಕೇಷನ್ ಸಿಇಒ, ಇದು ಟ್ಯಾಲಿ ಸೊಲ್ಯುಷನ್ಸ್ ಪ್ರೈವೇಟ್ ಲಿಮಿಟೆಡ್ ನ ಅಂಗ ಸಂಸ್ಥೆಯಾಗಿದೆ. ಈ ಲೇಖನವು ಎಕಾನಾಮಿಕ್ ಟೈಮ್ಸ್ ನಲ್ಲಿ ಪ್ರಕಟಗೊಂಡಿದೆ.

Are you GST ready yet?

Get ready for GST with Tally.ERP 9 Release 6

164,129 total views, 60 views today