(English) Language

  • English
  • Hindi
  • Marathi
  • Kannada
  • Telugu
  • Tamil
  • Gujarati

ಈ ಅಂಚೆಯನ್ನು ಇತ್ತೀಚಿನ ಬದಲಾವಣೆಗೆ ಅನುಗುಣವಾಗಿ ಡಿಸೆಂಬರ್ 2, 2016ರಂದು ಪರಿಷ್ಕರಣೆ ಮಾಡಲಾಗಿದೆ.

ಪ್ರಸಕ್ತ ರಾಜ್ಯ ಪರೋಕ್ಷ ತೆರಿಗೆಯಲ್ಲಿ ಸಣ್ಣ ವಿತರಕರಿಗೆ ನೀಡುವ ಸರಳ ಕಾಂಪ್ಲಿಯೆನ್ಸ್ ಅಥವಾ ಅನುಸರಣೆಗೆ ಸಂಯೋಜಿತ ಯೋಜನೆ ಎಂದು ಹೆಸರು. ಈ ಯೋಜನೆಯನ್ವಯ ನಿಮಗೆ,

  • ನಿಮ್ಮ ವ್ಯವಹಾರದ ಟರ್ನೊವರ್ನಲ್ಲಿ ನಿಗದಿತ ಶೇಕಡಭಾಗವನ್ನು ತೆರಿಗೆ ಪಾವತಿ ಮಾಡಿದರೆ ಸಾಕು.
  • ನಿಗದಿತ ಅವಧಿಯಲ್ಲಿ ಮಾತ್ರ ರಿಟರ್ನ್ ಸಲ್ಲಿಕೆಗೆ ಅವಕಾಶ( ಹೆಚ್ಚಾಗಿ ತ್ರೈಮಾಸಿಕದ ಅವಧಿಯಲ್ಲಿ)
  • ವಿವರಣಾತ್ಮಕ ದಾಖಲೆಗಳ ನಿರ್ವಹಣೆ ಹೊಂದಿಲ್ಲ ಎಂಬ ಒಂದು ಆಯ್ಕೆ ಇದೆ ಅಥವಾ ತೆರಿಗೆ ಇನ್ವಾಯ್ಸ್ ನಿಯಮವನ್ನು ಪಾಲನೆ ಮಾಡಬೇಕಿಲ್ಲ.
  • ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್(ಐಟಿಸಿ) ಪಡೆಯುವ ಅವಕಾಶವನ್ನು ಇವರಿಗೆ ನೀಡಲಾಗುವುದಿಲ್ಲ.
  • ಇವರಿಗೆ ಮಾರಾಟದ ಸಮಯದಲ್ಲಿ ತೆರಿಗೆ ಸಂಗ್ರಹಿಸುವ ಅವಕಾಶ ಇಲ್ಲ.

ಸಣ್ಣ ಪ್ರಮಾಣದ ವ್ಯವಹಾರಗಳಿಗೆ ತೆರಿಗೆ ಭಾದ್ಯತೆಯ ಲೆಕ್ಕಚಾರ ಮಾಡಲು ಇದು ಸರಳ ಹಾದಿಯಾಗಿದೆ. ವಿವರಣಾತ್ಮಕ ದಾಖಲೆಗಳ ನಿರ್ವಹಣೆ ಮಾಡುವ ಸಮಯ ಮತ್ತು ಶಕ್ತಿಯನ್ನು ಇದರಿಂದ ಉಳಿಸಬಹುದಾಗಿದೆ.

ಸಂಯೋಜಿತ ಯೋಜನೆ ಅಥವಾ ಕಾಂಪೊಷಿಸನ್ ಸ್ಕೀಮ್ ಎನ್ನುವುದು ಹೇಗೆ ಭಿನ್ನ ಎನ್ನುವುದನ್ನು ಈ ಮುಂದಿನ ಉದಾಹರಣೆಗಳಿಂದ

Composition levy

Composition Levy in the GST Regime

ಹೀಗೆಯೇ, ಜಿಎಸ್ಟಿಯಲ್ಲಿಯೂ ಇದೇ ರೀತಿ ಸೌಲಭ್ಯವನ್ನು ನೀಡಲಾಗುತ್ತದೆ. ಸಣ್ಣ ವಿತರಕರು ಅಥವಾ ವ್ಯಾಪರಸ್ಥರಿಗೆ ಸಂಯೋಜಿತ ಯೋಜನೆಯನ್ನು ಸಂಯೋಜಿತ ಲೆವಿ ಅಥವಾ ಕಾಂಪೊಸಿಷನ್ ಲೆವಿ ಹೆಸರಿನ ಆಯ್ಕೆ ಇದೆ. ಈ ಯೋಜನೆಯಡಿ, ತನ್ನ ವಹಿವಾಟಿನಲ್ಲಿ ನಿರ್ದಿಷ್ಟ ಶೇಕಡಾವಾರು ಪ್ರಮಾಣವನ್ನು ಮಾತ್ರ ಸಂಯೋಜಿತ ತೆರಿಗೆ ಪಾವತಿದಾರರು ತೆರಿಗೆ ರೂಪದಲ್ಲಿ ನೀಡಿದರೆ ಸಾಕಾಗುತ್ತದೆ.

ಆರಂಭಿಕ ಮಿತಿ

  • ಈಶಾನ್ಯ ಭಾರತ+ ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಖಂಡಾ- ಕಳೆದ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ಪಾನ್ ಕಾರ್ಡ್ ಹೊಂದಿರುವ ವ್ಯಕ್ತಿಯೊಬ್ಬರ ಒಟ್ಟು ವಹಿವಾಟು 10 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ ಮತ್ತು 50 ಲಕ್ಷ ರೂಪಾಯಿ ಮೀರದೆ ಇದ್ದರೆ.
  • ದೇಶದ ಉಳಿದ ಕಡೆಗಳಲ್ಲಿ- ಕಳೆದ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ಪಾನ್ ಕಾರ್ಡ್ ಹೊಂದಿರುವ ವ್ಯಕ್ತಿಯೊಬ್ಬರ ಒಟ್ಟು ವಹಿವಾಟು 10 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ ಮತ್ತು 50 ಲಕ್ಷ ರೂಪಾಯಿ ಮೀರದೆ ಇದ್ದರೆ.

ಲೆವಿ ದರ

  • ಲೆವಿ ದರದ ಕುರಿತು ಅಧಿಸೂಚನೆ ಇನ್ನೂ ಪ್ರಕಟವಾಗಿಲ್ಲ
  • ದರ
    • ತಯಾರಕರು– ವರ್ಷದಲ್ಲಿ ಆಯಾ ರಾಜ್ಯದಲ್ಲಿ ತಮ್ಮ ಒಟ್ಟು ವಹಿವಾಟಿನ ಶೇಕಡ 2.5ಕ್ಕಿಂತ ಕಡಿಮೆ ಇಲ್ಲದಂತೆ.
    • ತಯಾರಕರನ್ನು ಹೊರತುಪಡಿಸಿದ ಇತರರು- ವರ್ಷದಲ್ಲಿ ಆಯಾ ರಾಜ್ಯದಲ್ಲಿ ತಮ್ಮ ಒಟ್ಟು ವಹಿವಾಟಿನ ಶೇಕಡ 1ಕ್ಕಿಂತ ಕಡಿಮೆ ಇಲ್ಲದಂತೆ

ಸಂಯೋಜಿತ ತೆರಿಗೆ ಪಾವತಿದಾರರಿಗೆ ಷರತ್ತುಗಳು

ಆರಂಭಿಕ ಅಥವಾ ಥಸ್ರೋಲ್ಡ್ ಮಿತಿಯನ್ನು ಹೊರತುಪಡಿಸಿ ಕಾಂಪೋಸಿಟ್ ತೆರಿಗೆ ಪಾವತಿದಾರರಿಗೆ ಈ ಮುಂದಿನ ಷರತ್ತುಗಳನ್ನು ವಿಧಿಸಲಾಗಿರುತ್ತದೆ. :

  • ಸೇವೆಗಳ ಪೂರೈಕೆಯಲ್ಲಿ ತೊಡಗಿಸಿಕೊಳ್ಳುವಂತೆ ಇಲ್ಲ
  • ಕೆಲವೊಂದು ಗುರುತಿಸಿದ ಸರಕುಗಳ ತಯಾರಿಕೆಯಲ್ಲಿ ತೊಡಗುವಂತೆ ಇಲ್ಲ.
  • ಜಿಎಸ್ಟಿಯಡಿ ತೆರಿಗೆ ವಿಧಿಸಲಾಗದ ವಸ್ತುಗಳನ್ನು ಪೂರೈಕೆ ಮಾಡುವಂತೆ ಇಲ್ಲ.
  • ಇ-ಕಾಮರ್ಸ್ ಆಪರೇಟರ್ಗಳ ಮೂಲಕ ಸರಕುಗಳನ್ನು ಪೂರೈಕೆ ಮಾಡುವಂತೆ ಇಲ್ಲ
  • ಅಂತರ್ರಾಜ್ಯ ಪೂರೈಕೆಗೆ ಅವಕಾಶವಿಲ್ಲ- ಸಂಯೋಜಿತ ತೆರಿಗೆ ಪಾವತಿದಾರರು ಅಂತರ್ರಾಜ್ಯ ಸರಕು ಮತ್ತು/ ಅಥವಾ ಸೇವೆ ಮತ್ತು ಆಮದು ಪೂರೈಕೆ ವ್ಯವಹಾರಗಳಲ್ಲಿ ತೊಡಗುವಂತೆ ಇಲ್ಲ.
  • ಸಂಯೋಜಿತ ತೆರಿಗೆಯ ಪೇಮೆಂಟ್– ಎಲ್ಲಾದರೂ ಸಂಯೋಜಿತ ತೆರಿಗೆ ಪಾವತಿದಾರರು ಸರಕು ಮತ್ತು ಸೇವೆಗಳನ್ನು ಪೂರೈಸುವ ಟ್ರೇಡ್ನಲ್ಲಿದ್ದರೆ, ಸರಕುಗಳ ಪೂರೈಕೆ ಮತ್ತು ಸೇವೆಗಳ ಪೂರೈಕೆ ಎರಡಕ್ಕೂ ಸಂಯೋಜಿತ ಅಥವಾ ಕಾಂಪೆÇಸಿಷನ್ ಲೆವಿ ಅನ್ವಯವಾಗುತ್ತದೆ
  • ತೆರಿಗೆ ಸಂಗ್ರಹ ಮಾಡುವ ಅವಕಾಶವಿಲ್ಲ- ಸಂಯೋಜಿತ ತೆರಿಗೆ ಪಾವತಿದಾರರು ಸರಕು ಮತ್ತು/ಅಥವಾ ಸೇವೆಯ ಔಟ್ವಾರ್ಡ್ ಅಥವಾ ಹೊರಗಿನ ಪೂರೈಕೆಗೆ ತೆರಿಗೆ ಸಂಗ್ರಹಿಸುವ ಅವಕಾಶವನ್ನು ನೀಡಲಾಗಿಲ್ಲ.
  • ಒಂದೇ ಪ್ಯಾನ್ನಲ್ಲಿ ಎಲ್ಲಾ ವ್ಯಾಪಾರವನ್ನು ನಡೆಸಬೇಕು– ರಾಜ್ಯದೊಳಗೆ ಅಥವಾ ಅಂತರ್ರಾಜ್ಯದೊಳಗೆ ಎಲ್ಲಾ ವ್ಯವಹಾರಗಳನ್ನು ಒಂದೇ ಪ್ಯಾನ್ನಡಿ ನಿರ್ವಹಿಸಿದರೆ ಮಾತ್ರ ಸಂಯೋಜಿತ ಲೆವಿ ಅನ್ವಯವಾಗುತ್ತದೆ.
    ಇದರ ಅರ್ಥ ಏನು?

    ಯಾವುದೇ ವ್ಯಕ್ತಿಯು ಭಿನ್ನವಾದ ಬಿಸ್ನೆಸ್ ವರ್ಟಿಕಲ್ಗಳನ್ನು ಹೊಂದಿದ್ದರೆ, ಇದರಂತೆ:

    • ಮೊಬೈಲ್ಗಳು ಮತ್ತು ಆಕ್ಸೆಸರಿಗಳು
    • ಸ್ಟೇಷನರಿ
    • ಫ್ರಾಂಚೈಸಿ

    ಮೇಲಿನ ಸನ್ನಿವೇಶದಲ್ಲಿ ಈ ಮೂರು ವ್ಯವಹಾರ ಹಂತಗಳಿಗೂ ಸಂಯೋಜಿತ ಯೋಜನೆಯು ಅನ್ವಯವಾಗಲಿದೆ. ಯಾವುದಾದರೂ ಒಂದು ವ್ಯವಹಾರವನ್ನು ಕಾಂಪೊಷಿಸನ್ ಸ್ಕೀಮ್ನಡಿ ತರಲು ವಿತರಕರಿಗೆ ಯಾವುದೇ ಆಯ್ಕೆ ನೀಡಲಾಗಿಲ್ಲ. ಉದಾಹರಣೆಗೆ, ಒಂದೇ ಪ್ಯಾನ್ನಲ್ಲಿ ಕರ್ನಾಟಕ ಮತ್ತು ಕೇರಳವೆಂಬ ಎರಡು ವರ್ಟಿಕಲ್ ಸ್ಥಳದಲ್ಲಿ ವ್ಯವಹಾರ ನಡೆಸುತ್ತಿದ್ದರೆ, ಪ್ರತಿಯೊಂದು ಬಿಸ್ನೆಸ್ ವರ್ಟಿಕಲ್ಗೂ ನಿಗದಿತ ರಾಜ್ಯದಲ್ಲಿ (ರಾಜ್ಯದೊಳಗೆ ಮಾತ್ರ) ಮಾತ್ರ ಪೂರೈಕೆ ಮಾಡಲು ಅವಕಾಶವಿರುತ್ತದೆ.

  • ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ಗೆ ಕ್ಲೇಮ್ ಮಾಡುವಂತೆ ಇಲ್ಲ– ಸಂಯೋಜಿತ ತೆರಿಗೆ ಪಾವತಿದಾರರು ಎಲ್ಲಾ ಒಳಗಿನ(ಇನ್ವಾರ್ಡ್) ಸರಕು ಮತ್ತು/ಅಥವಾ ಸೇವೆಗಳ ಪೂರೈಕೆಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ನೀಡುವಂತೆ ಕ್ಲೇಮ್ ಮಾಡಲು ಅವಕಾಶವಿಲ್ಲ.
    ಏನಿದರ ಅರ್ಥ?

    ಎಲ್ಲಾದರೂ ವಿತರಕರು ಸಂಯೋಜಿತ ತೆರಿಗೆ ಪಾವತಿಯನ್ನು ಆಯ್ಕೆ ಮಾಡಿಕೊಂಡರೆ, ಅವರು ನಿಗದಿತ ತೆರಿಗೆ ಪಾವತಿಸುವ ವಿತರಕರಿಂದ ತೆರಿಗೆ ವಿಧಿಸಬಲ್ಲ ಖರೀದಿಯನ್ನು ನಡೆಸಿದರೂ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ಗೆ ಕ್ಲೇಮ್ ಮಾಡಲು ಅವಕಾಶ ನೀಡಲಾಗಿಲ್ಲ. ಆದ್ದರಿಂದ, ತೆರಿಗೆ ವಿಧಿಸಿದ ಹಣವನ್ನು ಸಂಯೋಜಿತ ತೆರಿಗೆ ಪಾವತಿದಾರರ ವೆಚ್ಚಕ್ಕೆ ಸೇರಿಸಲಾಗುತ್ತದೆ.

ಸಂಯೋಜಿತ ತೆರಿಗೆ ಪಾವತಿದಾರರ ರಿಟರ್ನ್ ಫಾರ್ಮ್

ಸಂಯೋಜಿತ ತೆರಿಗೆ ಪಾವತಿದಾರರು ತ್ರೈಮಾಸಿಕ ರಿಟರ್ನ್ ಮತ್ತು ವಾರ್ಷಿಕ ರಿಟರ್ನ್ ಅನ್ನು ಸಲ್ಲಿಸುವ ಅಗತ್ಯವಿರುತ್ತದೆ. ವಿವಿಧ ಬಗೆಯ ರಿಟರ್ನ್ಗಳು ಮತ್ತು ಅವುಗಳ ವಿವರಣೆಯನ್ನು ಈ ಮುಂದೆ ನೀಡಲಾಗಿದೆ:

ರಿಟರ್ನ್ ಬಗೆಅವಧಿಪಾವತಿಗೆ ಅಂತಿಮ ದಿನಾಂಕಭರ್ತಿ ಮಾಡಬೇಕಾದ ವಿವರಗಳು
ಫಾರ್ಮ್ ಜಿಎಸ್ಟಿಆರ್-4ಎತ್ರೈಮಾಸಿಕಕ್ಕೊಮ್ಮೆಪೂರೈಕೆದಾರರು ನೀಡಿರುವ ಫಾರ್ಮ್ ಜಿಎಸ್ಟಿಆರ್-1ರ ಆಧಾರದಲ್ಲಿ ಕಾಂಪೆÇಸಿಟ್ ಸ್ಕೀಮ್ನಡಿಯಲ್ಲಿ ದಾಖಲಿಸಿ ಸ್ವೀಕೃತಿದಾರರಿಗೆ ಸ್ವಯಂ ರಚಿಸಲ್ಪಟ್ಟ ಇನ್ವಾರ್ಡ್ ಮಾಹಿತಿಯು ಲಭಿಸುವಂತೆ ಇರಬೇಕು
ಫಾರ್ಮ್ ಜಿಎಸ್ಟಿಆರ್ -4ತ್ರೈಮಾಸಿಕಕ್ಕೊಮ್ಮೆಮುಕ್ತಾಯಗೊಂಡ ತಿಂಗಳ 18ನೇ ತಾರೀಖುಫಾರ್ಮ್ ಜಿಎಸ್ಟಿಆರ್-4ಎ ಮತ್ತು ತೆರಿಗೆ ವಿಧಿಸಿರುವ ವಿವರದವರೆಗೆ ಸ್ವಯಂ ಪಾಪ್ಯುಲೆಟೆ ಆಗಿರುವ ಮಾಹಿತಿ ಸೇರಿದಂತೆ ಎಲ್ಲಾ ಸರಕು ತಮ್ತು ಸೇವೆಗಳ ಔಟ್ವಾರ್ಡ್ ಪೂರೈಕೆಯ ಮಾಹಿತಿ. ಫಾರ್ಮ್ ಜಿಎಸ್ಟಿಆರ್-4ಎನಲ್ಲಿ ಯಾವುದಾದರೂ ಹೊಸ ಸೇರ್ಪಡೆ, ಬದಲಾವಣೆ ಅಥವಾ ಡಿಲೇಟ್ ಮಾಡಿರುವ ವಿವರಗಳನ್ನು ಫಾರ್ಮ್ ಜಿಎಸ್ಟಿಆರ್-4ನಲ್ಲಿ ನೀಡಬೇಕು.
ಫಾರ್ಮ್ ಜಿಎಸ್ಟಿಆರ್-9ಎವಾರ್ಷಿಕಮುಂದಿನ ಆರ್ಥಿಕ ವರ್ಷದ ಡಿಸೆಂಬರ್ 31ನೇ ತಾರೀಖುತೆರಿಗೆ ಪಾವತಿಯ ಮಾಹಿತಿಯ ಜೊತೆಗೆ ತ್ರೈಮಾಸಿಕವಾಗಿ ಭರ್ತಿ ಮಾಡಿ ಸಲ್ಲಿಸಿರುವ ರಿಟರ್ನ್ನ ಒಟ್ಟುಗೂಡಿಸಿದ ವಿವರ.

 

ಪ್ರಸಕ್ತ ಸಂಯೋಜಿತ ಯೋಜನೆ ಅಥವಾ ಕಾಂಪೆÇಸಿಟ್ ಸ್ಕೀಮ್ನಲ್ಲಿ, ಸಂಯೋಜಿತ ವಿತರಕರು ಮಾರಾಟದ ಒಟ್ಟು ವಹಿವಾಟನ್ನು ಮಾತ್ರ ಘೋಷಿಸಬೇಕು. ಅವರು ಇನ್ವಾಯ್ಸ್ ಥವಾ ಸರಕುಪಟ್ಟಿಯ ಮಾಹಿತಿಗಳ ಜೊತೆಗಿನ ಜೊತೆಗಿನ ಮಾಹಿತಿಯನ್ನು ಘೋಷಿಸುವ ಅಗತ್ಯವಿರುವುದಿಲ್ಲ. ಜಿಎಸ್ಟಿಯಲ್ಲಿ ಸಂಯೋಜಿತ ತೆರಿಗೆ ಪಾವತಿದಾರರು ತಮ್ಮ ಸರಕುಪಟ್ಟಿ ಅಥವಾ ಇನ್ವಾಯ್ಸ್ ಜೊತೆಗಿನ ಇನ್ವಾರ್ಡ್ ಪೂರೈಕೆಯ ವಿವರವನ್ನು ರಿಟನ್ರ್ಸ್ನಲ್ಲಿ ಫೈಲ್ ಮಾಡಬೇಕು. ಅಂದರೆ, ಔಟ್ವಾರ್ಡ್ ಅಥವಾ ಹೊರಗಿನ ಪೂರೈಕೆಯ ಒಟ್ಟು ವಹಿವಾಟು ಸೇರಿದಂತೆ ತನ್ನ ಪೂರೈಕೆದಾರರು ನೀಡಿರುವ ಫಾರ್ಮ್ ಜಿಎಸ್ಟಿಆರ್-1 ಆಧರಿತ ಆಟೋ ಪಾಪ್ಯುಲೆಟ್ ಆಗಿರುವ ಇನ್ವಾರ್ಡ್ ಪೂರೈಕೆಯ ಮಾಹಿತಿಯನ್ನು ನೀಡಬೇಕು.

ಜಿಎಸ್ಟಿ ಕಾನೂನಿನಲ್ಲಿ ಸಂಯೋಜಿತ ಲೆವಿ ಕುರಿತಾದ ಹೆಚ್ಚಿನ ಉದಾಹರಣೆಗಳನ್ನು ಪಡೆಯಲು ಈ ಬ್ಲಾಗ್ ಅಂಚೆಗೆ ಭೇಟಿ ನೀಡಿರಿ.

Are you GST ready yet?

Get ready for GST with Tally.ERP 9 Release 6

192,053 total views, 3 views today

Yarab A

Author: Yarab A

Yarab is associated with Tally since 2012. In his 7+ years of experience, he has built his expertise in the field of Accounting, Inventory, Compliance and software product for the diverse industry segment. Being a member of ‘Centre of Excellence’ team, he has conducted several knowledge sharing sessions on GST and has written 200+ blogs and articles on GST, UAE VAT, Saudi VAT, Bahrain VAT, iTax in Kenya and Business efficiency.