ವ್ಯವಹಾರಗಳು ತಮ್ಮ ವ್ಯವಹಾರವನ್ನು ನಿರ್ವಹಿಸುವ ಮತ್ತು ಅದನ್ನು ಲಾಭದಾಯಕ ಉದ್ಯಮವಾಗಿ ಮಾಡುವ ನಡುವೆ ಸಮತೋಲನ ಕಾಪಾಡಿಕೊಳ್ಳಬೇಕು. ಇದೇ ಸಮಯದಲ್ಲಿ, ದೇಶದಲ್ಲಿರುವ ವಿವಿಧ ಕಾನೂನಿಗಳಿಗೆ ತಕ್ಕಂತೆ ಅನುಸರಣೆ ಮಾಡುವ ಕುರಿತು ಎಚ್ಚರಿಕೆ ಮತ್ತು ಕಾಳಜಿಯನ್ನು ವಹಿಸಬೇಕು. ಕಳೆದ ದಶಕದಿಂದ ದೇಶದ ತೆರಿಗೆ ಅನುಸರಣೆಯು ತಂತ್ರಜ್ಞಾನದ ಹಾದಿಯಲ್ಲಿದ್ದು, ತುಂಬಬೇಕಾದ ಮಾಹಿತಿಯ ಪ್ರಮಾಣವು ಹೆಚ್ಚಾಗಿದೆ. ಇದಕ್ಕೆ ಪ್ರತಿ ಅವಧಿಯಲ್ಲಿಯೂ ನಿಗದಿತ ಗಡುವು ಇರುವ ಕಾರಣ ಅನುಸರಣೆ ಸಲ್ಲಿಸಲು ಒಂದಿಷ್ಟು ಸಮಯ ಮೀಸಲಿಡುವ ಅಗತ್ಯವಿರುತ್ತದೆ.

ಭಾರತವು ಪ್ರಮುಖವಾಗಿ ಎಸ್ಎಂಇ ಆಧರಿತ ವ್ಯವಹಾರದ ವಾತಾವರಣ ಹೊಂದಿದೆ. ಸಂಪನ್ಮೂಲಕದ ಮಿತಿಯು ಮೂರು ಬಗೆಯಲ್ಲಿದೆ. ಇದನ್ನು 3 ಎಂ ಎನ್ನಬಹುದು.
ಮೆನ್ ಎಂದರೆ ಮನುಷ್ಯ, ಮನಿ ಅಂದರೆ ಹಣ ಮತ್ತು ಮೆಟಿರಿಯಲ್ಸ್ ಎಂದರೆ ಸರಕುಗಳು ಮತ್ತು ವಿಸ್ತಾರವಾದ ಅನುಸರಣೆಯು ಸಣ್ಣ ವಲಯದ ದುಬಾರಿಯಾಗಿ ಪರಿಣಮಿಸಬಹುದು.
ಹಲವು ಸಂಖ್ಯೆಯ ದಾಖಲೆಗಳನ್ನು ಕಾಪಿಡುವುದು, ಪ್ರತಿತಿಂಗಳು ಆದಾಯ ನಮೂನೆ ಸಲ್ಲಿಕೆ ಮಾಡುವುದು ಮತ್ತು ಇನ್ನಿತರೆ ಪ್ರಕ್ರಿಯೆಗಳನ್ನು ನಿರ್ವಹಿಸುವುದು ತಮ್ಮ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸಲು ಬಯಸುವ ಸಣ್ಣ ವ್ಯವಹಾರಗಳಿಗೆ ತ್ರಾಸದಾಯಕವಾಗಿದೆ. ಇದರ ಫಲಿತಾಂಶವಾಗಿ ಸಂಯೋಜಿತ ಯೋಜನೆ ಹೆಸರಿನ ಯೋಜನೆಯೊಂದನ್ನು ಪರಿಚಯಿಸಲಾಗಿದೆ.
ಈ ಯೋಜನೆಯಡಿಯಲ್ಲಿ, ತ್ರೈಮಾಸಿಕದ ಅವಧಿಯಲ್ಲಿ ಆದಾಯ ನಮೂನೆ ಸಲ್ಲಿಸಬೇಕು ಮತ್ತು ನಿಮ್ಮ ವಹಿವಾಟಿನ ನಿರ್ದಿಷ್ಟ ಮೊತ್ತವನ್ನು ತೆರಿಗೆಯಾಗಿ ಪಾವತಿಸಬೇಕು. ಇದರ ಪ್ರಕಾರ, ಹೊರ ಪೂರೈಕೆಗೆ (ಮಾರಾಟಕ್ಕೆ) ಜಿಎಸ್ಟಿ ವಿಧಿಸಲು ನಿಮಗೆ ಅವಕಾಶವಿಲ್ಲ. ಇದರ ಬದಲಾಗಿ, ನೀವು ತ್ರೈಮಾಸಿಕ ಅವಧಿಯಲ್ಲಿ ನಿರ್ದಿಷ್ಟ ಮೊತ್ತವನ್ನು ತೆರಿಗೆಯಾಗಿ ಪಾವತಿಸಬೇಕು ಮತ್ತು ನಿಮ್ಮ ಆಂತರಿಕ ಪೂರೈಕೆಗೆ (ಖರೀದಿಗೆ) ಆದಾನ ತೆರಿಗೆ ಪಾವತಿ ಕೇಳುವ ಅರ್ಹತೆ ನಿಮಗೆ ನೀಡಲಾಗಿಲ್ಲ.

ಇದನ್ನೂ ಓದಿ: ಸಂಯೋಜಿತ ಯೋಜನೆ-ಎಸ್ಎಂಇಗಳ ಮೇಲೆ ಪರಿಣಾಮ

ಸಂಯೋಜಿತ ಯೋಜನೆ ದರ
ಅನ್ವಯವಾಗುವುದು ದರ
ತಯಾರಕರು 2%
ವ್ಯಾಪರಿ 1%
ಮಾನವ ಅನುಭೋಗಕ್ಕೆ ಆಹಾರ ಅಥವಾ ಪಾನೀಯ ಪೂರೈಕೆದಾರರು 5%

ಸಂಯೋಜಿತ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳಲು ನಿಮ್ಮ ಸಂಯೋಜಿತ ಅರ್ಹತೆಗಳ ಅವಲೋಕನ ನಿಮಗೆ ನೆರವಾದೀತು:

1. ಹಿಂದಿನ ಹಣಕಾಸು ವರ್ಷದಲ್ಲಿ ನಿಮ್ಮ ವಹಿವಾಟಿನ ಗರಿಷ್ಠ ಮಿತಿ

ಸಂಯೋಜಿತ ಯೋಜನೆಯಡಿಯಲ್ಲಿ ನಿಮ್ಮ ಈ ಹಿಂದಿನ ಹಣಕಾಸು ವರ್ಷದಲ್ಲಿ ವಹಿವಾಟು 75 ಲಕ್ಷ ರೂ. ಮಿತಿಯನ್ನು ದಾಟಿರಬಾರದು. ಎಲ್ಲಾದರೂ ನಿಮ್ಮ ವ್ಯವಹಾರವು ಈ ಮುಂದಿನ ರಾಜ್ಯಗಳಲ್ಲಿ ಇದ್ದರೆ: ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಝೊರಾಂ, ನಾಗಲೆಂಡ್, ಸಿಕ್ಕಿಂ, ತ್ರಿಪುರ, ಹಿಮಾಚಲ ಪ್ರದೇಶದಲ್ಲಿದ್ದರೆ ನಿಮ್ಮ ಈ ಹಿಂದಿನ ಹಣಕಾಸು ವರ್ಷದ ವಹಿವಾಟು 50 ಲಕ್ಷ ರೂ. ಮಿತಿ ದಾಟಿರಬಾರದು.

2. ಸೇವಾ ಪೂರೈಕೆದಾರರಿಗೆ ಅನ್ವಯಿಸುವುದಿಲ್ಲ

ನೀವು ಸೇವೆಯ ಪೂರೈಕೆದಾರರಾಗಿದ್ದರೆ ನಿಮಗೆ ಜಿಎಸ್ಟಿಯಲ್ಲಿ ಸಂಯೋಜಿತ ಯೋಜನೆ ಅನ್ವಯವಾಗುವುದಿಲ್ಲ. ಆದರೂ, ಮಾನವರ ಅನುಭೋಗದ ಆಹಾರ ಮತ್ತು ಪಾನೀಯ ಸೇವೆ ಪೂರೈಕೆದಾರರಾಗಿದ್ದರೆ ನಿಮಗೆ ಸಂಯೋಜಿತ ಯೋಜನೆಯ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ.
3. ಸೂಚಿತ ಸರಕುಗಳ ತಯಾರಕರಿಗೆ ಅನ್ವಯವಾಗುವುದಿಲ್ಲ

ಐಸ್ ಕ್ರೀಮ್ ಮತ್ತು ಇತರೆ ತಿನ್ನಬಹುದಾದ ಐಸ್, ಪಾನ್ ಮಸಲಾ, ಎಲ್ಲಾ ತಂಬಾಕು ಉತ್ಪನ್ನಗಳು ಮತ್ತು ತಂಬಾಕಿನ ಅಂಶ ಇರುವ ಸರಕುಗಳ ವಸ್ತುಗಳಿಗೆ ಈ ಯೋಜನೆಯು ಅನ್ವಯವಾಗುವುದಿಲ್ಲ.
4. ಸರಕುಗಳ ಪೂರೈಕೆಗೆ ಮಿತಿ ಇದ್ದರೆ

ಎಲ್ಲಾದರೂ ನಿಮ್ಮ ವ್ಯವಹಾರವು ಈ ಮುಂದಿನ ಪೂರೈಕೆಯಲ್ಲಿ ತೊಡಗಿಸಿಕೊಂಡಿದ್ದರೆ, ಸಂಯೋಜಿತ ಯೋಜನೆಯು ನಿಮಗೆ ಅನ್ವಯವಾಗುವುದಿಲ್ಲ:
•ಹೊರರಾಜ್ಯಕ್ಕೆ ಸರಕುಗಳ ಬಾಹ್ಯ ಪೂರೈಕೆ.
• ತೆರಿಗೆ ವಿಧಿಸಲಾಗದ ಸರಕುಗಳ ಪೂರೈಕೆ.
• ಅಮೇಝಾನ್, ಫ್ಲಿಪ್ ಕಾರ್ಟ್ ಮತ್ತು ಇತರೆ ಇ-ಕಾಮರ್ಸ್ ವ್ಯವಹಾರಗಳ ಮೂಲಕ ಪೂರೈಕೆ

5. ಮುಕ್ತಾಯದ ದಾಸ್ತಾನು ಆಧಾರದ ಮೇಲೆ ಅರ್ಹತೆ

ನಿಮ್ಮಲ್ಲಿರುವ ಮುಕ್ತಾಯದ ದಾಸ್ತಾನು ಈ ಮುಂದಿನ ಖರೀದಿಯಿಂದ ಪಡೆದ ದಾಸ್ತಾನು ಆಗಿರಬಾರದು:
ಹೊರರಾಜ್ಯದ ಖರೀದಿ, ಭಾರತದಿಂದ ಹೊರಗಡೆಯಿಂದ ಆಮದು ಮಾಡಿಕೊಂಡಿರುವುದು ಅಥವಾ ಹೊರರಾಜ್ಯದಲ್ಲಿರುವ ನಿಮ್ಮ ಶಾಖೆ/ ದಳ್ಳಾಲಿ/ಮುಖ್ಯಸ್ಥರಿಂದ ಪಡೆದಿರುವುದು ಆಗಿರಬಾರದು: ಈ ಹಿಂದಿನ ತೆರಿಗೆ ಪದ್ಧತಿಯಲ್ಲಿ ನೋಂದಾಯಿಸಿದ್ದು, ಈಗ ಸಂಯೋಜಿತ ಯೋಜನೆಗೆ ಜಿಎಸ್ಟಿಯಲ್ಲಿ ವಲಸೆ ಬರಲು ಬಯಸುವವರಿಗೆ ಇದು ವಿಶೇಷವಾಗಿ ಅನ್ವಯವಾಗುತ್ತದೆ.
ನೋಂದಾಯಿಸದೆ ಇರುವ ವಿತರಕರಿಂದ(ಯುಆರ್ ಡಿ) ಖರೀದಿ – ನಿಮ್ಮಲ್ಲಿರುವ ಮುಕ್ತಾಯದ ದಾಸ್ತಾನು ಅನ್ನು ನೋಂದಾಯಿಸದೆ ಇರುವ ವಿತರಕರಿಂದ ಖರೀದಿಸಿದ ನೀವು ವಿಲೋಮ ಶುಲ್ಕ ಆಧಾರದಲ್ಲಿ ಜಿಎಸ್ಟಿ ತೆರಿಗೆ ಪಾವತಿಸಬೇಕು.

6. ಎಲ್ಲಾದರೂ ನಿಮ್ಮ ವ್ಯವಹಾರವು ಸಾಂದರ್ಭಿಕ ತೆರಿಗೆದಾರ ವ್ಯಕ್ತಿ ಅಥವಾ ಅನಿವಾಸಿ ತೆರಿಗೆದಾರ ವ್ಯಕ್ತಿಯಡಿಯಲ್ಲಿ ನೋಂದಾಯಿಸಿದರೆ ನೀವು ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಸಂಯೋಜಿತ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಇಲ್ಲ.

ಮೇಲಿನ ಎಲ್ಲಾ ನಿಬಂಧನೆಗಳನ್ನು ನೀವು ತಲುಪಿದರೆ ಮಾತ್ರ ನೀವು ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಸಂಯೋಜಿತ ವಿತರಕರಾಗಿ ನೋಂದಾಯಿಸಿಕೊಳ್ಳಲು ಅವಕಾಶ ದೊರಕುತ್ತದೆ.

ಮೇಲಿನ ಎಲ್ಲಾ ಮಾನದಂಡಗಳಿಗೆ ನೀವು ಸೂಕ್ತರಾಗಿದ್ದರೆ, ನೀವು ಈ ಮುಂದಿನ ನಮೂನೆಗಳನ್ನು ಸಲ್ಲಿಸುವ ಅವಶ್ಯಕತೆ ಇರುತ್ತದೆ:

1. ನಮೂನೆ ಜಿಎಸ್ಟಿ ಸಿಎಂಪಿ-1 ಈ ಹಿಂದಿನ ತೆರಿಗೆ ಪದ್ಧತಿಯಲ್ಲಿ ನೋಂದಾಯಿಸಿದ ವ್ಯವಹಾರಗಳು ಮತ್ತು ಜಿಎಸ್ಟಿ ತೆರಿಗೆಗೆ ವಲಸೆ ಬಂದಾಗ ಸಂಯೋಜಿತ ಯೋಜನೆಯನ್ನು ಆಯ್ಕೆ ಮಾಡಲು ಬಯಸುವವರು. ಈ ಸೂಚನೆಯನ್ನು ಜೂನ್ 21, 2017ರಿಂದ 30 ದಿನದೊಳಗೆ ನಡೆಸಬೇಕು.

2. ನಮೂನೆ ಜಿಎಸ್ಟಿ ಸಿಎಂಪಿ-2 ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ನಿಯಮಿತ ವಿತರಕರಾಗಿ ನೋಂದಾಯಿಸಿ, ಸಂಯೋಜಿತ ಯೋಜನೆಗೆ ಬರಲು ಬಯಸುವ ವ್ಯವಹಾರಗಳಿಗೆ ಇದು ಅನ್ವಯವಾಗುತ್ತದೆ. ಹಣಕಾಸು ವರ್ಷ ಆರಂಭವಾಗುವ ಮೊದಲು ಈ ನಮೂನೆಯ ಮೂಲಕ ತಿಳಿಸಬೇಕು

ಹೊಸದಾಗಿ ಜಿಎಸ್ಟಿಗೆ ನೋಂದಣಿ ಮಾಡುವವರು , ವ್ಯವಹಾರಕ್ಕೆ ಅರ್ಜಿ ಸಲ್ಲಿಸಿ, ಸಂಯೋಜಿತ ಯೋಜನೆ ಆಯ್ಕೆ ಮಾಡಲು ಬಯಸುವವರು ಜಿಎಸ್ಟಿ ಆರ್ ಇಜಿ-1 ನಮೂನೆ ಸಲ್ಲಿಸಬೇಕು. .
ಉಪಸಂಹಾರ
ಸಣ್ಣ ವ್ಯವಹಾರಗಳಿಗೆ ಸಂಯೋಜಿತ ಯೋಜನೆಯು ಸುಲಭ ತೆರಿಗೆ ಅನುಸರಣೆಯ ಅವಕಾಶ ನೀಡುವುದು ಖಚಿತ. ಆದರೆ, ಇಲ್ಲಿ ತಿಳಿಸಲಾದ ಸೂಚನೆಗಳನ್ನು, ನಿಯಮಗಳನ್ನು ಮತ್ತು ನಿಬಂಧನೆಗಳನ್ನು ಪರಿಶೀಲಿಸಿ ಅದಕ್ಕೆ ತಕ್ಕಂತೆ ಮುಂದುವರೆಯಲು ಸಲಹೆ ನೀಡಲಾಗುತ್ತಿದೆ.

ಬಿ2ಸಿಯಂತಹ ಸಣ್ಣ ವ್ಯವಹಾರಗಳು ಸಾಮಾನ್ಯವಾಗಿ ಈ ಯೋಜನೆಯಿಂದ ಪ್ರಮುಖವಾದ ಪ್ರಯೋಜನ ಪಡೆಯುತ್ತವೆ. ಎಲ್ಲಾದರೂ ಬಿ2ಬಿ ವ್ಯವಹಾರವಾಗಿದ್ದರೆ, ನಿಮ್ಮ ಗ್ರಾಹಕರಿಗೆ ಆದಾನ ತೆರಿಗೆ ಪಾವತಿ ದೊರಕುವುದಿಲ್ಲ. ನಿಮ್ಮ ಆದಾನ ತೆರಿಗೆಯ ವೆಚ್ವವು ಬಿ2ಬಿ ಉತ್ಪನ್ನಗಳ ವೆಚ್ಚಕ್ಕೆ ತಾಳೆಯಾಗದೆ ಸ್ಪರ್ಧೆ ಹೆಚ್ಚಾಗಬಹುದು

Are you GST ready yet?

Get ready for GST with Tally.ERP 9 Release 6

218,456 total views, 18 views today

Yarab A

Author: Yarab A

Yarab is associated with Tally since 2012. In his 7+ years of experience, he has built his expertise in the field of Accounting, Inventory, Compliance and software product for the diverse industry segment. Being a member of ‘Centre of Excellence’ team, he has conducted several knowledge sharing sessions on GST and has written 200+ blogs and articles on GST, UAE VAT, Saudi VAT, Bahrain VAT, iTax in Kenya and Business efficiency.