ಭಾರತವು ಸಂಯುಕ್ತ ರಾಷ್ಟ್ರವಾಗಿದ್ದು, ತಯಾರಿಕೆ ಮತ್ತು ಸೇವೆಯನ್ನು ಪಡೆಯುವುದಕ್ಕೆ ಸುಂಕ ಮತ್ತು ತೆರಿಗೆ ವಿಧಿಸಲು ಸಂವಿಧಾನವು ಕೇಂದ್ರ ಸರಕಾರದಿಂದ ಅಧಿಕಾರ ಪಡೆದಿದೆ. ರಾಜ್ಯದೊಳಗಿನ ನ್ಯಾಯ ವ್ಯಾಪ್ತಿಯಲ್ಲಿ ಯಾವ ಸರಕುಗಳ ಸಾಗಾಟ ಇದೆಯೋ ಅಂತಹ ಸರಕುಗಳಿಗೆ ತೆರಿಗೆ ವಿಧಿಸುವ ಅಧಿಕಾರವನ್ನು ರಾಜ್ಯ ಸರಕಾರ ಹೊಂದಿದೆ. ಎಲ್ಲಾದರೂ ಅಂತರ್ ರಾಜ್ಯದೊಳಗೆ ಸರಕುಗಳ ಚಲನೆಯಾಗಿ ಮಾರಾಟಗೊಳ್ಳುವುದಕ್ಕೆ ಕೇಂದ್ರ ಸರಕಾರವು ತೆರಿಗೆ ವಿಧಿಸುವ ಅಧಿಕಾರ ಹೊಂದಿದೆ ಮತ್ತು ಕೇಂದ್ರ ಸರಕಾರವೇ ಆದಾಯ ಸಂಗ್ರಹಿಸುತ್ತದೆ, ನಂತರ ಈ ಆದಾಯವನ್ನು ಕೇಂದ್ರ ಮತ್ತು ರಾಜ್ಯಗಳು ಹಂಚಿಕೊಳ್ಳುತ್ತಿವೆ.

ಸಂವಿಧಾನವು ಸ್ಪಷ್ಟವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಧಿಕಾರವನ್ನು ಸ್ಪಷ್ಟವಾಗಿ ತಿಳಿಸಿದ್ದರೂ, ಸರಕು ರಾಜ್ಯದೊಳಗೆ ಚಲಿಸುತ್ತಿದ್ದೆಯೇ ಮತ್ತು ಅಂತರ್ ರಾಜ್ಯದೊಳಗೆ ಚಲಿಸುತ್ತಿದೆಯೇ ಎಂದು ಸರಕುಗಳ ಚಲನೆಯನ್ನು ಅವಲೋಕಿಸಿಸುವುದು ಪ್ರಮುಖವಾಗಿ ರಾಜ್ಯ ಸರಕಾರಗಳ ಮುಂದಿರುವ ಪ್ರಮುಖ ಸವಾಲು.

ಇದರಲ್ಲಿ ಅತಿಯಾದ ತೆರಿಗೆ ತಪ್ಪಿಸಿಕೊಳ್ಳುವಿಕೆ ಇದೆ ಮತ್ತು ರಾಜ್ಯಗಳ ಆದಾಯದ ಸೋರಿಕೆ ಉಂಟಾಗುತ್ತದೆ. ತೆರಿಗೆ ತಪ್ಪಿಸಿಕೊಳ್ಳುವಿಕೆಯನ್ನು ತಡೆಯಲು ಮತ್ತು ವ್ಯವಸ್ಥೆಯ ದುರ್ಬಳಕೆ ತಡೆಯುವ ಸಲುವಾಗಿ, ಬಹುತೇಕ ರಾಜ್ಯಗಳು ರಾಜ್ಯ ಹೆದ್ದಾರಿಗಳಲ್ಲಿ ಮತ್ತು ಗಡಿಗಳಲ್ಲಿ ಹಲವು ಪರಿಶೀಲನಾ ಕೇಂದ್ರಗಳನ್ನು ಸ್ಥಾಪಿಸಿವೆ.

ಈ ಪರಿಶೀಲನಾ ಕೇಂದ್ರಗಳು ಪ್ರಮುಖವಾಗಿ ಸರಕುಗಳ ಚಲನೆಯ ಮೇಲೆ ನಿಗಾ ವಹಿಸುತ್ತವೆ ಮತ್ತು ಸರಕುಗಳಿಗೆ ಸಂಬಂಧಪಟ್ಟ ಸುಂಕ/ತೆರಿಗೆಗಳನ್ನು ಪಾವತಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುತ್ತವೆ.

ಸರಕುಗಳನ್ನು ಸಾಗಾಟ ಮಾಡುತ್ತಿರುವ ವ್ಯಕ್ತಿಯು ಸರಕುಪಟ್ಟಿ, ಚಲನ್, ರಸ್ತೆ ಪರವಾನಿಗೆ, ವೇ ಬೆಲೆಪಟ್ಟಿಮತ್ತು ಇತರೆ ದಾಖಲೆಗಳನ್ನು ಹೊಂದಿದ್ದು, ಪರಿಶೀಲನಾ ಕೇಂದ್ರಗಳಲ್ಲಿ ಪರಿಶೀಲನೆಯ ಸಂದರ್ಭದಲ್ಲಿ ಹಾಜರುಪಡಿಸಬೇಕಾಗುತ್ತದೆ.

ಈಗಿನ ತೆರಿಗೆ ಪದ್ಧತಿ

ಇಂದು, ವಿವಿಧ ರಾಜ್ಯ ಸರಕಾರಗಳು ಸರಕುಗಳು ರಾಜ್ಯದೊಳಗೆ ಚಲಿಸುತ್ತಿವೆಯೇ ಅಥವಾ ರಾಜ್ಯದ ಗಡಿ ದಾಟಿ ಹೋಗುತ್ತಿದೆಯೇ ಎಂದು ಪತ್ತೆಹಚ್ಚಲು ತಮ್ಮ ಸ್ವಂತ ವ್ಯವಸ್ಥೆಯನ್ನು ವಿಭಾಗಿಸಿವೆ. ಉದಾಹರಣೆಗೆ, ನೋಂದಾಯಿತ ವಿತರಕರು ಸರಕುಗಳ ಮೌಲ್ಯ ಅಥವಾ ಯಾವ ಬಗೆಯ ಸರಕುಗಳನ್ನು ಸಾಗಾಟ ಮಾಡುತ್ತೇವೆ ಎನ್ನುವ ಆಧಾರದಲ್ಲಿ ಸರಕುಗಳ ವಿವರವನ್ನು ನೀಡಬೇಕಾಗುತ್ತದೆ. ಇದಕ್ಕಾಗಿ ಪರವಾನಿಗೆ ನಮೂನೆ, ವೇ ಬೆಲೆಪಟ್ಟಿಮತ್ತು ಇತರೆ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಇವು ಮಾತ್ರವಲ್ಲದೆ ಸರಕುಗಳನ್ನು ಸಾಗಿಸುವ ಸಾಗಾಟ ಪಾಸ್ ಅಥವಾ ದೃಢೀಕರಣ ನಮೂನೆಯನ್ನು ಹೊಂದಿರುವುದನ್ನು ಕೆಲವು ರಾಜ್ಯಗಳು ಕಡ್ಡಾಯಗೊಳಿಸಿವೆ.

ತಂತ್ರಜ್ಞಾನದ ವಿಕಾಸದಿಂದಾಗಿ,, ಕರ್ನಾಟಕ ಪರಿಚಯಿಸಿದ ಇ-ಸುಗಮ್ ನಂತೆ ವಿವಿಧ ರಾಜ್ಯಗಳು ಈ ಪ್ರಕ್ರಿಯೆಗಳ ಡಿಜಿಟಲೀಕರಣ ಮಾಡಲು ಪ್ರಯತ್ನಿಸುತ್ತಿವೆ. ಇ-ಸುಗಮ್ ಅನ್ವಯ ನೋಂದಾಯಿತ ವಿತರಕರು 20,000 ರೂ. ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಸರಕು ಸಾಗಾಟ ಮಾಡುವಾಗ ಅದರ ವಿವರ ನಮೋದಿಸಬೇಕು ಮತ್ತು ಅನನ್ಯ ಉಲ್ಲೇಖ ಸಂಖ್ಯೆಯನ್ನು ಪಡೆಯಬೇಕು. ಈ ಸಂಖ್ಯೆಯನ್ನು ಸಾಗಾಟ ಮಾಡುವವರಿಗೆ ನೀಡಲಾಗುತ್ತದೆ ಮತ್ತು ಸರಳವಾಗಿ ಪರಿಶೀಲನಾ ಕೇಂದ್ರದ ಅಧಿಕಾರಿಗೆ ಈ ಸಂಖ್ಯೆಯನ್ನು ತಿಳಿಸಿದರೆ ಸಾಕಾಗುತ್ತದೆ.
ಇತರೆ ರಾಜ್ಯಗಳಲ್ಲಿ ಕೂಡ, ಇಂತಹದ್ದೇ ವಿಧಾನವನ್ನು ಪರಿಚಯಿಸಲಾಗಿದ್ದು, ನೋಂದಾಯಿತ ವಿತರಕರು ವಿದ್ಯುನ್ಮಾನ ವಿಧಾನದಲ್ಲಿ ತಮ್ಮ ಸರಕು ಸಾಗಾಟದ ಮಾಹಿತಿಯನ್ನು ನೀಡಲು ಮತ್ತು ಸರಕು ಚಲನೆಯ ವಿವರವನ್ನು ನಮೂನೆಯಲ್ಲಿ ಭರ್ತಿ ಮಾಡಬೇಕು.

ಜಿಎಸ್ಟಿ ಅನ್ವಯ

ಜಿಎಸ್ಟಿ ಅನ್ವಯ, ಸರಕುಗಳ ಸಾಗಾಟದ ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನಗಳು ಇ-ವೇ ಬೆಲೆಪಟ್ಟಿನಿಯಮಗಳಂತೆ ಇರಲಿದೆ. ಇ-ವೇ ಬೆಲೆಪಟ್ಟಿವಿಸ್ತೃತ ರೂಪ ವಿದ್ಯುನ್ಮಾನ ಹಾದಿಯ ಬಿಲ್. ಕನ್ನಡದಲ್ಲಿ ಇದನ್ನು ವಿದ್ಯುನ್ಮಾನ ದಾರಿ ಬೆಲೆಪಟ್ಟಿ ಎನ್ನಬಹುದು. ಸಾಗಾಟಕ್ಕೆ ಸಂಬಂಧಪಟ್ಟಂತೆ ಆಯಾ ಸರಕುಗಳಿಗೆ ಅನುಗುಣವಾಗಿ ನೀಡುವ ವಿಶೇಷ ಬೆಲೆಪಟ್ಟಿಸಂಖ್ಯೆ ಇದಾಗಿದೆ. ಜಿಎಸ್ಟಿಯ ಅನ್ವಯ, ನೋಂದಾಯಿತ ವ್ಯಕ್ತಿಯು 50,000 ರೂ.ಗಿಂತ ಹೆಚ್ಚಿನ ಮೊತ್ತದ ಸರಕನ್ನು ಸಾಗಾಟ ಮಾಡುವುದಿದ್ದರೆ ಇ-ವೇ ಬೆಲೆಪಟ್ಟಿಪಡೆಯಬೇಕು.

Under GST, a registered person who intends to initiate a movement of goods of value exceeding Rs 50,000 should generate an e-Way bill. Click To Tweet
ಅನ್ವಯಿಸುವಿಕೆ ಮತ್ತು ಇ-ವೇ ಬೆಲೆಪಟ್ಟಿಪಡೆಯುವಿಕೆ
QuestionsAnswers
ಯಾವಾಗ ಇ-ವೇ ಬೆಲೆಪಟ್ಟಿಅನ್ವಯವಾಗುತ್ತದೆ? ಯಾವುದೇ ರವಾನೆಯ ಮೌಲ್ಯವು 50,000 ರೂ. ದಾಟಿದ್ದರೆ ಇದು ಅನ್ವಯವಾಗುತ್ತದೆ. ನೋಂದಾಯಿಸದೆ ಇರುವ ವ್ಯಕ್ತಿಯಿಂದಲೂ ಸರಕುಗಳ ಇನ್ವಾರ್ಡ್ ಪೂರೈಕೆ ನಡೆಸಿದಾಗಲೂ ಇ-ವೇ ಬೆಲೆಪಟ್ಟಿಅನ್ವಯವಾಗುತ್ತದೆ.
ಯಾವಾಗ ನಾನು ಇ-ವೇ ಬೆಲೆಪಟ್ಟಿಪಡೆಯಬೇಕು? ಸರಕು ರವಾನೆ ಆರಂಭವಾಗುವ ಮೊದಲು ಇ-ವೇ ಬೆಲೆಪಟ್ಟಿಅನ್ನು ತಯಾರಿಸಬೇಕು ಅಥವಾ ಪಡೆಯಬೇಕು.
ಇ-ವೇ ಬೆಲೆಪಟ್ಟಿಅನ್ನು ಯಾರು ಪಡೆಯಬೇಕು? ನೋಂದಾಯಿತ ವ್ಯಕ್ತಿಯಿಂದ ಸರಕು ಸಾಗಿಸಲ್ಪಟ್ಟರೆ, ಆತನು ತನ್ನದೇ ವಾಹನ ಅಥವಾ ಬಾಡಿಗೆ ವಾಹನದಲ್ಲಿ ಸಾಗಿಸುತ್ತಿದ್ದರೆ, ಪೂರೈಕೆದಾರರು ಅಥವಾ ಸ್ವೀಕೃತಿದಾರರು ಇ-ವೇ ಬೆಲೆಪಟ್ಟಿಅನ್ನು ಪಡೆಯಬೇಕು.
ಎಲ್ಲಾದರೂ ಸರಕನ್ನು ಸಾಗಾಣೆದಾರರ ವಶಕ್ಕೆ ನೀಡುವಾಗ, ಇ-ವೇ ಬೆಲೆಪಟ್ಟಿಅನ್ನು ಸಾಗಾಣೆದಾರರೇ ಪಡೆಯಬೇಕು. ಈ ಸಂದರ್ಭದಲ್ಲಿ ಕಾಮನ್ ಪೋರ್ಟಲ್ ನಲ್ಲಿ ನೋಂದಾಯಿತ ವ್ಯಕ್ತಿಯು ಸರಕುಗಳ ಮಾಹಿತಿಯನ್ನು ಘೋಷಿಸಬೇಕು.
ಎಲ್ಲಾದರೂ ಇನ್ವಾರ್ಡ್ ಪೂರೈಕೆಯನ್ನು ನೋಂದಾಯಿಸದೆ ಇರುವ ವ್ಯಕ್ತಿ ಮಾಡಿದ್ದರೆ, ಪೂರೈಕೆಯನ್ನು ಸ್ವೀಕರಿಸುವವರು ಅಥವಾ ಸರಕು ಸಾಗಾಣೆದಾರರು ಇ-ವೇ ಬೆಲೆಪಟ್ಟಿಅನ್ನು ಪಡೆಯಬೇಕು.

ಇ-ವೇ ಬೆಲೆಪಟ್ಟಿಅನ್ನು ಪಡೆಯಲು ಯಾವ ನಮೂನೆ ಅನ್ವಯವಾಗುತ್ತದೆ?

ನಮೂನೆ GST INS-1 ಯು ಇ-ವೇ ಬೆಲೆಪಟ್ಟಿನಮೂನೆಯಾಗಿದೆ. ಇದರ ಭಾಗ-ಎನಲ್ಲಿ ಸರಕಿನ ಮಾಹಿತಿ ಬರೆಯಬೇಕು ಮತ್ತು ಭಾಗ-ಬಿಯಲ್ಲಿ ಸಾಗಾಣೆದಾರರ ವಿವರ ನಮೋದಿಸಬೇಕು.
50,000 ರೂ.ಗಿಂತ ಕಡಿಮೆಯ ಸಾಗಾಣೆ ಇದ್ದಾಗಲೂ ಇ-ವೇ ಬೆಲೆಪಟ್ಟಿಪಡೆಯಬಹುದೇ?/td>

ಹೌದು, ನೋಂದಾಯಿಸಿದ ವ್ಯಕ್ತಿ ಅಥವಾ ಸಾಗಾಣೆದಾರರು ಇ-ವೇ ಬೆಲೆಪಟ್ಟಿಪಡೆಯಬಹುದು, ಇದು ಕಡ್ಡಾಯವಲ್ಲ.
ಒಂದು ವಾಹನದಲ್ಲಿ ಹಲವು ಬಗೆಯ ಸರಕುಗಳ ಸಾಗಾಟವಿದ್ದರೆ ಏನು ಮಾಡಬೇಕು? ಸಾಗಾಣೆದಾರರು GST INS 02 ನಮೂನೆಯಲ್ಲಿ ಇ-ವೇ ಬೆಲೆಪಟ್ಟಿಅನ್ನು ಪಡೆಯಬೇಕು ಮತ್ತು ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ಸೀರಿಯಲ್ ಸಂಖ್ಯೆ ಇರುತ್ತದೆ.
ಇ-ವೇ ಬೆಲೆಪಟ್ಟಿಪಡೆಯುವಾಗ ಅದರಲ್ಲಿ ಯಾವುದಾದರೂ ರೆಫರೆನ್ಸ್ ಸಂಖ್ಯೆ ದೊರಕುವುದೇ? ಸಾಮಾನ್ಯ ಪೋರ್ಟಲ್ ನಲ್ಲಿ ಇ-ವೇ ಬೆಲೆಪಟ್ಟಿಪಡೆಯುವಾಗ, “ಇಬಿಎನ್” ಎಂಬ ಒಂದು ವಿಶೇಷ ಗುರುತಿನ ಸಂಖ್ಯೆ ಪೂರೈಕೆದಾರರಿಗೆ, ಸ್ವೀಕೃತಿದಾರರಿಗೆ ಮತ್ತು ಸಾಗಾಣೆದಾರರಿಗೆ ದೊರಕುತ್ತದೆ.
ಸಾಗಾಣೆ ಸಂದರ್ಭದಲ್ಲಿ ಸರಕನ್ನು ಒಂದು ವಾಹನದಿಂದ ಇನ್ನೊಂದು ವಾಹನಕ್ಕೆ ವರ್ಗಾವಣೆ ಮಾಡುವಾಗ ಏನಾಗುತ್ತದೆ? ಒಂದು ವಾಹನದಿಂದ ಸರಕನ್ನು ಮತ್ತೊಂದು ವಾಹನಕ್ಕೆ ಹಾಕುವ ಮೊದಲು, ಸಾಗಾಣೆದಾರರು ಹೊಸ ಇ-ವೇ ಬೆಲೆಪಟ್ಟಿ ಅನ್ನು ನಮೂನೆ GST INS 01ಯಲ್ಲಿ ಸಾಗಾಣೆ ವಿವರ ಬರೆದು ಪಡೆಯಬೇಕು.
ಎಲ್ಲಾದರೂ 50,000 ರೂ.ಗಿಂತ ಹೆಚ್ಚು ಮೌಲ್ಯಯುತವಾದ ಸರಕಿಗೆ ಸಾಗಾಣೆದಾರರು ಇ-ವೇ ಬೆಲೆಪಟ್ಟಿಪಡೆಯದಿದ್ದರೆ ಏನು ಮಾಡಬೇಕು? ಸಾಗಾಣೆದಾರರು ಸರಕುಪಟ್ಟಿ, ಪೂರೈಕೆಯ ರಸೀದಿ ಅಥವಾ ಡೆಲಿವರಿ ರಸೀದಿ ಆಧಾರದಲ್ಲಿ ನಮೂನೆ ಜಿಎಸ್ಟಿ ಐಎನ್ಎಸ್ 1ರಲ್ಲಿಇ-ವೇ ಬೆಲೆಪಟ್ಟಿರಚಿಸಬೇಕು.
ಎಲ್ಲಾದರೂ ಇ-ವೇ ಬೆಲೆಪಟ್ಟಿಪಡೆಯಲಾಗಿದೆ, ಆದರೆ, ಸರಕು ಸಾಗಿಸಲಿಲ್ಲವೆಂದಾದರೆ ಏನಾಗುತ್ತದೆ? ಇ-ವೇ ಬೆಲೆಪಟ್ಟಿಪಡೆದ 24 ಗಂಟೆಯೊಳಗೆ ಅದನ್ನು ವಿದ್ಯುನ್ಮಾನ ವಿಧಾನದಿಂದ ರದ್ದುಪಡಿಸಲಾಗುವುದಿಲ್ಲ. ಸಾಗಣೆ ಸಮಯದಲ್ಲಿ ಅಧಿಕಾರಿಯು ದೃಢೀಕರಿಸಿದರೆ ಇ-ವೇ ಬೆಲೆಪಟ್ಟಿಅನ್ನು ರದ್ದುಪಡಿಸಲು ಸಾಧ್ಯವಿಲ್ಲ.
ಇ-ವೇ ಬೆಲೆಪಟ್ಟಿಅನ್ನು ಸ್ವೀಕೃತಿದಾರರು ಸರಕನ್ನು ಸಮ್ಮತಿಸಲು ಬಳಕೆ ಮಾಡಬಹುದೇ? ಹೌದು, ಎಲ್ಲಾದರೂ ಸ್ವೀಕೃತಿದಾರರು ನೋಂದಾಯಿಸಿದ್ದರೆ ಮಾತ್ರ ಇ-ವೇ ಬೆಲೆಪಟ್ಟಿ ಸ್ವೀಕೃತಿದಾರರಿಗೆ ದೊರಕುತ್ತದೆ. ಇ-ವೇ ಬಿಲ್ನಲ್ಲಿ 72 ಗಂಟೆಯೊಳಗೆ ಕವರ್ ಆಗಿರುವ ಸರಕನ್ನು ಇ-ವೇ ಬೆಲೆಪಟ್ಟಿಆಧಾರದಲ್ಲಿ ಒಪ್ಪಲು ಅಥವಾ ನಿರಾಕರಿಸಲು ಸ್ವೀಕೃತಿದಾರರಿಗೆ ಅವಕಾಶವಿದೆ.
72 ಗಂಟೆಯೊಳಗೆ ಸ್ವೀಕೃತಿದಾರರು ಸ್ವೀಕೃತದಾರರು ಸರಕನ್ನು ನಿರಾಕರಿಸಲು ಒಪ್ಪಿರುವ ಕುರಿತು ಯಾವುದೇ ಸಂವಹನ ನಡೆಸದೆ ಇದ್ದರೆ ಏನಾಗುತ್ತದೆ?72 ಗಂಟೆಯೊಳಗೆ ಸ್ವೀಕೃತಿದಾರರು ಸ್ವೀಕೃತದಾರರು ಸರಕನ್ನು ನಿರಾಕರಿಸಿರುವ ಅಥವಾ ಸಮ್ಮತಿಸಿುವ ಕುರಿತು ಯಾವುದೇ ಸಂವಹನ ನಡೆಸದೆ ಇದ್ದರೆ, ಇದನ್ನು ಸರಕು ಸ್ವೀಕೃತಿದಾರರು ಸರಕನ್ನು ಒಪ್ಪಿದ್ದಾರೆ ಎಂದು ಪರಿಗಣಿಸಲಾಗುತ್ತದೆ.
ಇ-ವೇ ಬೆಲೆಪಟ್ಟಿಅನ್ನು ಎಸ್ಎಂಎಸ್ ಮೂಲಕ ಪಡೆಯಲು ಅಥವಾ ರದ್ದು ಪಡಿಸುವ ಯಾವುದಾದರೂ ಸೌಲಭ್ಯ ಇದೆಯೇ?ಇ-ವೇ ಬೆಲೆಪಟ್ಟಿಅನ್ನು ಎಸ್ಎಂಎಸ್ ಮೂಲಕ ಪಡೆಯಲು ಅಥವಾ ರದ್ದು ಪಡಿಸುವ ಅವಕಾಶ ಇರುತ್ತದೆ.

ಇ-ವೇ ಬೆಲೆಪಟ್ಟಿಪಡೆಯುವ ಪ್ರಕ್ರಿಯೆಯನ್ನು ಉದಾಹರಣೆ ಸಹಿತ ಅರ್ಥಮಾಡಿಕೊಳ್ಳೋಣ.

ರಾಣಾ ಟ್ರೇಡರ್ಸ್, ಮಹಾರಾಷ್ಟ್ರದಲ್ಲಿರುವ ನೋಂದಾಯಿತ ವಿತರಕರಾಗಿದ್ದು, ಕರ್ನಾಟಕದಲ್ಲಿ ನೋಂದಾಯಿಸಿರುವ ಶಿವ ಟ್ರೇಡರ್ಸ್ ಗೆ 75,000 ರೂ. ಮೌಲ್ಯದ ಬಾಹ್ಯಾ ಪೂರೈಕೆ ಮಾಡಲು ಸಮ್ಮತಿಸಿದೆ. ಶಿವ ಟ್ರೇಡರ್ಸ್ ಗೆ ಸರಕನ್ನು ತಲುಪಿಸಲು ಸರಕನ್ನು ಸ್ಪೀಡ್ ಟ್ರಾರ್ನ್ಸ್ ಪೋರ್ಟ್ ಗೆ ರಾಣಾ ಟ್ರೇಡರ್ಸ್ ಒಪ್ಪಿಸಿದೆ
GST e-way bill generarion

ಇ-ವೇ ಬೆಲೆಪಟ್ಟಿನ ವಾಯಿದೆ
ದೂರ ವಾಯಿದೆ ಅವಧಿ
100 ಕಿ.ಮೀ.ಗಿಂತ ಕಡಿಮೆ 1 ದಿನ
100 ಕಿ.ಮೀ. ಅಥವಾ ಹೆಚ್ಚು, ಆದರೆ, 300 ಕಿ.ಮೀ.ಗಿಂತ ಕಡಿಮೆ 3 ದಿನಗಳು
300 ಕಿ.ಮೀ. ಅಥವಾ ಹೆಚ್ಚು, ಆದರೆ, 500 ಕಿ.ಮೀ.ಗಿಂತ ಕಡಿಮೆ.5 ದಿನಗಳು
500 ಕಿ.ಮೀ. ಅಥವಾ ಹೆಚ್ಚು, ಆದರೆ, 1000 ಕಿ.ಮೀ.ಗಿಂತ ಕಡಿಮೆ.10 ದಿನಗಳು
1000 ಕಿ.ಮೀ. ಅಥವಾ ಹೆಚ್ಚು 15 ದಿನಗಳು

ಇ-ವೇ ಬೆಲೆಪಟ್ಟಿಪಡೆದ ಸಮಯದಿಂದ ವಾಯಿದೆ ಅವಧಿ ಲೆಕ್ಕಹಾಕಲಾಗುತ್ತದೆ, ಕೆಲವೊಂದು ವಿಭಾಗದ ಸರಕುಗಳಿಗೆ, ಇದಕ್ಕಾಗಿ ವಿಶೇಷ ಅಧಿಸೂಚನೆ ಹೊರಡಿಸಲಾಗುತ್ತದೆ, ಇಂತಹ ಸರಕುಗಳಿಗೆ ಇ-ವೇ ಬೆಲೆಪಟ್ಟಿಅವಧಿ ವಿಸ್ತರಿಸಲಾಗುತ್ತದೆ.

ದಾಖಲೆಗಳು, ಪರಿಶೀಲನೆ ಮತ್ತು ದೃಢೀಕರಣ

ಸಾಗಾಟಗಾರರು ಅಥವಾ ಸಾಗಾಣೆ ಜವಾಬ್ದಾರಿ ಹೊಂದಿರುವ ವ್ಯಕ್ತಿಯು ಈ ಮುಂದಿನ ದಾಖಲೆಗಳನ್ನು ಹೊಂದಿರಬೇಕು:

  • ಸರಕುಪಟ್ಟಿ ಅಥವಾ ಪೂರೈಕೆಯ ಬೆಲೆಪಟ್ಟಿಅಥವಾ ಪೂರೈಕೆಯ ಚಲನೆ ಅಥವಾ
  • ಇ-ವೇ ಬೆಲೆಪಟ್ಟಿಅಥವಾ ಇ-ವೇ ಬೆಲೆಪಟ್ಟಿಸಂಖ್ಯೆಯ ಪ್ರತಿ.
    ರಾಜ್ಯದೊಳಗಿನ ಸಾಗಾಟ ಅಥವಾ ಅಂತರ್ ರಾಜ್ಯ ಸಾಗಾಟಕ್ಕೆ ದೃಢೀಕರಣದ ಸ್ಥಳದಲ್ಲಿ, ಇ-ವೇ ಬೆಲೆಪಟ್ಟಿಅಥವಾ ಇ-ವೇ ಬೆಲೆಪಟ್ಟಿಸಂಖ್ಯೆ ಪ್ರತಿ ಪರಿಶೀಲನೆ ನಡೆಸಲು ಅಧಿಕಾರಿಯು ವಾಹನವನ್ನು ಪರಿಶೀಲಿಸಬಹುದು.

ಇ-ವೇ ಬೆಲೆಪಟ್ಟಿಪ್ರತಿಯ ಮೂಲಕ ಪರಿಶೀಲನೆಯನ್ನು ತಪ್ಪಿಸುವ ಸಲುವಾಗಿ ವಾಹನಕ್ಕೆ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಸಾಧನ(ಆರ್ ಎಫ್ ಐಡಿ)ಯನ್ನು ವಾಹನಕ್ಕೆ ಸಿಲುಕಿಸಬಹುದು ಮತ್ತು ಅದಕ್ಕೆ ಇ-ವೇ ಬೆಲೆಪಟ್ಟಿಮ್ಯಾಪ್ ಮಾಡಬೇಕು. ದೃಢೀಕರಣದ ಸ್ಥಳದಲ್ಲಿ ಆರ್ ಎಫ್ ಐಡಿ ರೀಡರ್ಸ್ ಮೂಲಕ ಈ ಸಾಧನಕ್ಕೆ ಇ-ವೇ ಬೆಲೆಪಟ್ಟಿಮ್ಯಾಪ್ ಮಾಡಬೇಕು. ಕೆಲವೊಂದು ಬಗೆಯ ಸಾರಿಗೆಗೆ ವಾಹನಕ್ಕೆ ಆರ್ ಎಫ್ ಐಡಿ ಸಾಧನ ಅಳವಡಿಸುವುದು ಮತ್ತು ಅದಕ್ಕೆ ಇ-ವೇ ಬೆಲೆಪಟ್ಟಿಮ್ಯಾಪ್ ಮಾಡುವುದು ಕಡ್ಡಾಯವಾಗಿದೆ. ಇದನ್ನು ಆಯುಕ್ತರು ಘೋಷಿಸಲಿದ್ದಾರೆ.
ಎಲ್ಲಾದರೂ ತೆರಿಗೆ ತಪ್ಪಿಸುತ್ತಿರುವ ಸಂಶಯ ಬಂದರೆ, ಆಯುಕ್ತರು ಅಥವಾ ಅವರ ಪರವಾಗಿ ಅಧಿಕಾರಿಯು ಅನುಮತಿ ಪಡೆದು ವಾಹನವನ್ನು ತಪಾಸಣೆ ನಡೆಸಬಹುದು. ವಾಹನದ ದೃಢೀಕರಣವನ್ನು ರಾಜ್ಯದೊಳಗೆ ಅಥವಾ ಬೇರೆ ರಾಜ್ಯದ ಒಂದು ಸ್ಥಳದಲ್ಲಿ ಪರಿಶೀಲನೆ ನಡೆಸಲಾಗುತ್ತದೆ, ಕೆಲವೊಮ್ಮೆ ತೆರಿಗೆ ವಂಚಿಸುವ ವಿಶೇಷ ಮಾಹಿತಿ ಆಧಾರದಲ್ಲಿ ಹೊರತುಪಡಿಸಿ, ಸಾಗಾಟದ ಸಮಯದಲ್ಲಿ ಮತ್ತೆ ವಾಹನದ ತಪಾಸಣೆ ನಡೆಸಲಾಗುವುದಿಲ್ಲ.

ಪ್ರತಿಯೊಂದು ತಪಾಸಣೆಯಾದ ಬಳಿಕ, ಅಧಿಕಾರಿಯು ತಪಾಸಣೆ ನಡೆಸಿದ ವಿವರವನ್ನು GST INS-03 ನಮೂನೆಯ ಭಾಗ-ಎನಲ್ಲಿ ತಪಾಸಣೆ ನಡೆಸಿದ 24 ಗಂಟೆಯೊಳಗೆ ನಮೋದಿಸಬೇಕು ಮತ್ತು ಅಂತಿಮ ವರದಿಯನ್ನು ತನಿಖೆ ನಡೆಸಿದ 3 ದಿನದೊಳಗೆ GST INS-03 ನಮೂನೆ ಭಾಗ- ಬಿಯಲ್ಲಿ ನಮೋದಿಸಬೇಕು.
ಜಿಎಸ್ಟಿ ಅನ್ವಯ, ಈಗಿರುವ ರಾಜ್ಯವಾರು ದಾಖಲೆಗಳನ್ನು, ಸರಕು ಸಾಗಿಸುವಾಗ ಜೊತೆಗೆ ಕೊಂಡೊಯ್ಯುವುದನ್ನು ತೆಗೆದು ಹಾಕಲಾಗುತ್ತದೆ ಮತ್ತು ದೇಶಾದ್ಯಂತ ಇ-ವೇ ಬೆಲೆಪಟ್ಟಿಅನ್ನು ಕಡ್ಡಾಯ ಮಾಡಲಾಗುತ್ತದೆ. ಇದರಿಂದಾಗಿ, ರಾಜ್ಯದ ಗಡಿಗಳಾದ್ಯಂತ ಇರುವ ಮತ್ತು ಹೆದ್ದಾರಿಗಳಾದ್ಯಂತ ಇರುವ ಪರಿಶೀಲನಾ ಕೇಂದ್ರಗಳ ಸಂಖ್ಯೆ ತಗ್ಗಲಿದೆ. ಇದರ ಫಲಿತಾಂಶವಾಗಿ ಸರಕು ಸಾಗಾಟದ ಪ್ರಕ್ರಿಯೆ ಸರಳ, ಸುಸೂತ್ರವಾಗಲಿದೆ..

Are you GST ready yet?

Get ready for GST with Tally.ERP 9 Release 6

198,676 total views, 1 views today

Yarab A

Author: Yarab A

Yarab is associated with Tally since 2012. In his 7+ years of experience, he has built his expertise in the field of Accounting, Inventory, Compliance and software product for the diverse industry segment. Being a member of ‘Centre of Excellence’ team, he has conducted several knowledge sharing sessions on GST and has written 200+ blogs and articles on GST, UAE VAT, Saudi VAT, Bahrain VAT, iTax in Kenya and Business efficiency.