ಎಲೆಕ್ಟ್ರಾನಿಕ್ ಕಾಮರ್ಸ್ ಅಥವಾ ಇ-ಕಾಮರ್ಸ್ ದೇಶದ ವ್ಯವಹಾರದ ರೀತಿ ರಿವಾಜನ್ನೇ ಬದಲಾಯಿಸಿದೆ. ಈಗ ಭಾರತದ ಇ-ಕಾಮರ್ಸ್ ಉದ್ಯಮವು ಹಲವು ತೆರಿಗೆಗಳಿಗೆ ಒಳಗಾಗಿದೆ. ಪ್ರತಿಯೊಂದು ರಾಜ್ಯವು ಇ-ಕಾಮರ್ಸ್ ಉದ್ಯಮದ ಮೇಲೆ ತಮ್ಮ ಸ್ವಂತ ನಿಯಮ ಮತ್ತು ತೆರಿಗೆಗಳನ್ನು ಹಾಕಿದೆ. ವಿವಿಧ ಬಗೆಯ ಇ-ಕಾಮರ್ಸ್ ವಹಿವಾಟುಗಳಿಗೆ ವಿಧಿಸುವ ತೆರಿಗೆಗಳ ಕುರಿತು ಬಹುತೇಕರಿಗೆ ಸ್ಪಷ್ಟತೆಯಿಲ್ಲ ಮತ್ತು ಇ-ವ್ಯಾಲೆಟ್ ಮತ್ತು ಕ್ಯಾಶ್ ಬ್ಯಾಕ್ ಇತ್ಯಾದಿ ಹೊಸ ವಿಧಾನಗಳು ಬಂದಿರುವುದರಿಂದ ಉದ್ಯಮದ ತೆರಿಗೆ ಪರಿಸರದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ.

ಅತ್ಯುತ್ತಮ ಸ್ಪಷ್ಟತೆಯ ನಿರೀಕ್ಷೆಯಲ್ಲಿ ಮತ್ತು ರಾಜ್ಯಗಳು ವಿಧಿಸುವ ವಿಶೇಷ ನೀತಿ ನಿಯಮಗಳು ಮತ್ತು ತೆರಿಗೆಗಳನ್ನು ತೆಗೆದುಹಾಕುವ ಸಲುವಾಗಿ ಇ-ಕಾಮರ್ಸ್ ಕಂಪನಿಗಳು ಜಿಎಸ್ಟಿಯತ್ತ ವಿಶೇಷವಾಗಿ ನೋಡುತ್ತಿವೆ. ಇ-ಕಾಮರ್ಸ್ ಉದ್ಯಮಕ್ಕೆ ನಿರ್ದಿಷ್ಟವಾದ ನಿಯಮಗಳ ಅಗತ್ಯವಿರುವುದನ್ನು ಜಿಎಸ್ಟಿ ಕಾನೂನಿನ ಕರಡು ಮಸೂದೆಯು ಗುರುತಿಸಿದೆ. ಈ ಬ್ಲಾಗ್ ಬರಹದಲ್ಲಿ ಜಿಎಸ್ಟಿಯಲ್ಲಿ ಇ-ಕಾಮರ್ಸ್ ವಲಯಕ್ಕೆ ನೀಡಿರುವ ವಿಶೇಷ ಅವಕಾಶಗಳನ್ನು ನೋಡೋಣ.

 • ಇ-ಕಾಮರ್ಸ್ ನಿರ್ವಹಿಸುವವರು
 • ಇ-ಕಾಮರ್ಸ್ ವೇದಿಕೆಯಲ್ಲಿರುವ ಪೂರೈಕೆದಾರರು

ಜಿಎಸ್ಟಿಯಡಿ ಇ-ಕಾಮರ್ಸ್ ವೇದಿಕೆಯಲ್ಲಿ ಇ-ಕಾಮರ್ಸ್ ನಿರ್ವಹಿಸುವರು ಮತ್ತು ಪೂರೈಕೆದಾರರಿಗೆ ಅವಶ್ಯವಿರುವ ವಿಷಯಗಳನ್ನು ಗಮನಹರಿಸೋಣ.

ಇ-ಕಾಮರ್ಸ್ ನಿರ್ವಾಹಕರು

ಎಲೆಕ್ಟ್ರಾನಿಕ್ ಕಾಮರ್ಸ್ ವೇದಿಕೆಯನ್ನು ಎಲೆಕ್ಟ್ರಾನಿಕ್ ಸೌಲಭ್ಯದಲ್ಲಿ ಅಥವಾ ಡಿಜಿಟಲ್ ರೂಪದಲ್ಲಿ ನಿರ್ವಹಿಸುವ ವ್ಯಕ್ತಿಯನ್ನು ಇ-ಕಾಮರ್ಸ್ ನಿರ್ವಾಹಕ ಎಂದು ಕರೆಯಬಹುದು. ಜಿಎಸ್ಟಿಯಡಿ ಇ-ಕಾಮರ್ಸ್ ನಿರ್ವಾಹಕರಾಗಲು ಇರಬೇಕಾದ ಅಗತ್ಯತೆಗಳು ಇಂತಿವೆ-

1. ಕಡ್ಡಾಯವಾಗಿ ನೋಂದಣಿ
ಎಲ್ಲಾ ಇ-ಕಾಮರ್ಸ್ ನಿರ್ವಾಹಕರು ಕಡ್ಡಾಯವಾಗಿ ಜಿಎಸ್ಟಿಯಡಿ ನೋಂದಾಯಿಸಿಕೊಳ್ಳಬೇಕು. ಇದರ ಅರ್ಥವೇನೆಂದರೆ ಅವರ ಎಲ್ಲಾ ವಹಿವಾಟುಗಳು ಜಿಎಸ್ಟಿಯಡಿ ನೋಂದಣಿಯಾಗಬೇಕು.

2. ಗುರುತಿಸಲ್ಪಟ ಸೇವೆಗಳಿಗೆ ಇ-ಕಾಮರ್ಸ್ ನಿರ್ವಾಹಕರು ತೆರಿಗೆ ಪಾವತಿಸಬೇಕು
ಕೆಲವೊಂದು ಸೇವಾ ವಿಭಾಗಗಳಿಗೆ ಪೂರೈಕೆದಾರರ ಬದಲಿಗೆ ಇ-ಕಾಮರ್ಸ್ ನಿರ್ವಾಹಕರು ತೆರಿಗೆ ಪಾವತಿಸಬೇಕಾಗುತ್ತದೆ. ಈ ಕಾರಣದಿಂದ,

  • ಎಲ್ಲಾದರೂ ಇ-ಕಾಮರ್ಸ್ ನಿರ್ವಾಹಕರು ರಾಜ್ಯವೊಂದರಲ್ಲಿ ಕಚೇರಿ ಹೊಂದಿರದೆ ಇದ್ದರೆ, ಇ-ಕಾಮರ್ಸ್ ಕಂಪನಿಯನ್ನು ಪ್ರತಿನಿಧಿಸುವ ಯಾವುದೇ ವ್ಯಕ್ತಿಯು ರಾಜ್ಯವು ನಿಗದಿಪಡಿಸಿದ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
  • ಎಲ್ಲಾದರೂ ಇ-ಕಾಮರ್ಸ್ ನಿರ್ವಾಹಕರು ರಾಜ್ಯದಲ್ಲಿ ಕಚೇರಿಯನ್ನು ಹೊಂದಿರದೆ ಇದ್ದರೆ, ಮತ್ತು ರಾಜ್ಯದಲ್ಲಿ ಯಾವುದೇ ಪ್ರತಿನಿಧಿಗಳನ್ನು ಹೊಂದಿರದೆ ಇದ್ದರೆ, ಇ-ಕಾಮರ್ಸ್ ನಿರ್ವಾಹಕರು ತೆರಿಗೆ ಪಾವತಿಸುವ ಉದ್ದೇಶದಿಂದ ರಾಜ್ಯವೊಂದರಲ್ಲಿ ವ್ಯಕ್ತಿಯೊಬ್ಬರನ್ನು ನೇಮಿಸಬೇಕಾಗುತ್ತದೆ ಮತ್ತು ಆ ವ್ಯಕ್ತಿಯು ತೆರಿಗೆ ಪಾವತಿಸಲು ಬಾಧ್ಯತೆ ಹೊಂದಿರುತ್ತಾನೆ.

3. ಇ-ಕಾಮರ್ಸ್ ನಿರ್ವಾಹಕರು ಮೂಲದಿಂದ ತೆರಿಗೆ ಸಂಗ್ರಹಿಸಬೇಕು
ತಮ್ಮ ವೇದಿಕೆಯ ಮೂಲಕ ತೆರಿಗೆ ವಿಧಿಸಬಲ್ಲ ನಿವ್ವಳ ಮೌಲ್ಯದ ಪೂರೈಕೆ ಮಾಡಿದರೆ ಪ್ರತಿಯೊಬ್ಬ ಇ-ಕಾಮರ್ಸ್ ನಿರ್ವಾಹಕರು ಶೇಕಡ 2ರಷ್ಟು ತೆರಿಗೆ ಸಂಗ್ರಹಿಸಬೇಕು, ಪರಿಗಣನೆಗೆ ಒಳಪಟ್ಟು, ಅಂತಹ ಪೂರೈಕೆಗಾಗಿ ಇ-ಕಾಮರ್ಸ್ ನಿರ್ವಾಹಕರು ತೆರಿಗೆ ಸಂಗ್ರಹಿಸಬೇಕು.

ತೆರಿಗೆ ವಿಧಿಸಬಲ್ಲ ಪೂರೈಕೆಯ ನಿವ್ವಳ ಮೌಲ್ಯ= ನಿರ್ವಾಹಕರ ಮೂಲಕ ಎಲ್ಲಾ ನೋಂದಾಯಿತ ತೆರಿಗೆ ಪಾವತಿಸುವ ವ್ಯಕ್ತಿಗಳು ಮಾಡುವ ಎಲ್ಲಾ ಪೂರೈಕೆಯ ನಿವ್ವಳ ಮೌಲ್ಯವು ತೆರಿಗೆ ವಿಧಿಸಬಹುದಾದ ಪೂರೈಕೆಗಳಾಗಿವೆ, ಇಲ್ಲವಾದರೆ ನಿರ್ವಾಹಕರು ಯಾವ ಪೂರೈಕೆಗೆ ತೆರಿಗೆ ಪಾವತಿಸಲಾಗಿದೆ ಎಂದು ತಿಳಿಸಬೇಕಾಗುತ್ತದೆ (-) ತೆರಿಗೆ ವಿಧಿಸಬಲ್ಲ ಪೂರೈಕೆಯ ಮೌಲ್ಯವನ್ನು ಪೂರೈಕೆದಾರರಿಗೆ ಹಿಂತುರಿಗಿಸಬೇಕಾಗುತ್ತದೆ

ಉದಾಹರಣೆ: ಫಾಸ್ಟ್ ಡೀಲ್ಸ್ ಒಂದು ಇ-ಕಾಮರ್ಸ್ ಕಂಪನಿಯಾಗಿದೆ. ರಾಕೇಶ್ ಪ್ರೈವೇಟ್ ಲಿಮಿಟೆಡ್ ಮತ್ತು ರೋಹಾನ್ ಪ್ರೈವೇಟ್ ಲಿಮಿಟೆಡ್ ಗಳು ಫಾಸ್ಟ್ ಡೀಲ್ಸ್ ಗೆ ಪೂರೈಕೆದಾರ ಕಂಪನಿಗಳಾಗಿವೆ. 2017ರ ಆಕ್ಟೋಬರ್ನಿಂದ ಫಾಸ್ಟ್ ಡೀಲ್ಸ್ ನಿಂದ ಈ ಮುಂದಿನ ಪೂರೈಕೆಗಳು ನಡೆದಿವೆ.

ಫಾಸ್ಟ್ ಡೀಲ್ಸ್ ನಿಂದ ನೋಂದಾಯಿಸಿದ ಹೊರಗಿನ ಪೂರೈಕೆ
ಪೂರೈಕೆದಾರರು
ತೆರಿಗೆ ವಿಧಿಸಬಲ್ಲ ಪೂರೈಕೆ (ರೂ.ಗಳಲ್ಲಿ)ತೆರಿಗೆ ವಿಧಿಸಬಲ್ಲ ಪೂರೈಕೆ ವಾಪಸ್ ನೀಡಲಾಗಿರು ವುದು (ರೂ.)ನಿವ್ವಳ ತೆರಿಗೆ ವಿಧಿಸಬಲ್ಲ ಪೂರೈಕೆಗಳು (ತೆರಿಗೆ ವಿಧಿಸಬಲ್ಲ ಕಡಿಮೆ ತೆರಿಗೆ ವಿಧಿಸಬಲ್ಲ ಪೂರೈಕೆಗಳ ವಾಪಸಾತಿ (ರೂ.)ಶೇಕಡ 2ರಲ್ಲಿ ಟಿಸಿಎ ಸಂಗ್ರಹಿಸಿರುವುದು (ರೂ.)
ರಾಕೇಶ್ ಪ್ರೈವೇಟ್ ಲಿಮಿಟೆಡ್1,00,00,00010,00,00090,00,0001,80,000
ರೋಹನ್ ಪ್ರೈವೇಟ್ ಲಿಮಿಟೆಡ್2,00,00,00020,00,0001,80,00,0003,60,000
ಒಟ್ಟು3,00,00,00030,00,0002,70,00,0005,40,000

ಇಲ್ಲಿ, 2,70,000 ರೂ. ಮೌಲ್ಯದ ನಿವ್ವಳ ತೆರಿಗೆ ವಿಧಿಸಬಲ್ಲ ಪೂರೈಕೆ ಮಾಡಲಾಗಿದೆ ಮತ್ತು 5,40,000 ರೂ.ನ ಜಿಎಸ್ಟಿ ಸಂಗ್ರಹಿಸಲಾಗಿದೆ.

4. ರಿಟರ್ನ್ಸ್ ಮತ್ತು ತೆರಿಗೆ ಪಾವತಿ ಪ್ರಕ್ರಿಯೆ

  • ತಿಂಗಳೊಂದರ 10ನೇ ತಾರೀಕು ಇ-ಕಾಮರ್ಸ್ ಆಪರೇಟರ್ Form GSTR-8 ಅನ್ನು ಕಳೆದ ತಿಂಗಳು ನಡೆಸಿದ ಪೂರೈಕೆಯ ಕುರಿತು ಅರ್ಜಿ ನಮೂನೆಯಲ್ಲಿರುವ ಹೊರಗಿನ ಪೂರೈಕೆಯ, ವಾಪಸ್ ಬಂದ ಪೂರೈಕೆಯು ಸೇರಿದಂತೆ 8 ಪ್ರಮುಖ ಮಾಹಿತಿಗಳನ್ನು ಭರ್ತಿ ಮಾಡಬೇಕು. ನಮೂನೆ GSTR-8ನಲ್ಲಿ ಸರಕುಪಟ್ಟಿ ಯಾದಿಯಂತೆ ನೋಂದಾಯಿತ ತೆರಿಗೆ ಪಾವತಿದಾರರ ವಿವರವನ್ನು ಮತ್ತು ನೋಂದಾಯಿಸದೆ ಇರುವ ವ್ಯಕ್ತಿಯ ವಿವರವನ್ನು ಕಡ್ಡಾಯವಾಗಿ ನೀಡಬೇಕು. ಇ-ಕಾಮರ್ಸ್ ನಿರ್ವಾಹಕರು ಪೂರೈಕೆದಾರರಿಂದ ತೆರಿಗೆ ಸಂಗ್ರಹಿಸಿರುವುದನ್ನೂ ಪಾವತಿಸಬೇಕು.
   GST-Ecommerce-Operator
  • ತಿಂಗಳ 21ನೇ ದಿನದಂದು, ಪೂರೈಕೆಯಲ್ಲಿ ಇ-ಕಾಮರ್ಸ್ ನಿರ್ವಹಕರು ತಿಳಿಸಿರುವುದಕ್ಕೂ ಮತ್ತು ಪೂರೈಕೆದಾರರು ನೀಡಿರುವುದಕ್ಕೂ ಏನಾದರೂ ವ್ಯತ್ಯಾಸವಿದ್ದರೆ ಅದನ್ನು GST ITC-1 ನಮೂನೆಯಲ್ಲಿ ತಿಳಿಸಬೇಕು. ಮುಂಬರುವ ತಿಂಗಳಿನಲ್ಲಿ ರಿಟರ್ನ್ ಸಲ್ಲಿಕೆಯ ಸಮಯದಲ್ಲಿ ಈ ವ್ಯತ್ಯಾಸವನ್ನು ಸರಿಪಡಿಸಿ ಸಲ್ಲಿಸಬೇಕು. ಈ ಮೇಲಿನ ಉದಾಹರಣೆಯಲ್ಲಿ ಫಾಸ್ಟ್ ಡೀಲ್ಸ್ ಅಕ್ಟೋಬರ್ ನ ಪೂರೈಕೆಯನ್ನು ನಮೂನೆ GSTR-8 ಯಲ್ಲಿ ನವೆಂಬ 21, 2017ರಂದು ನಮೂನೆ GST ITC-1 ಯಲ್ಲಿ ವ್ಯತ್ಯಾಸವನ್ನು ದಾಖಲಿಸಿದೆ. ಸರಿಪಡಿಸಿದ ವ್ಯತ್ಯಾಸದ ಮಾಹಿತಿಯನ್ನು ಡಿಸೆಂಬರ್ 10, 2017ರಂದು ಕಡ್ಡಾಯವಾಗಿ ಸಲ್ಲಿಸಬೇಕು.

ಇ-ಕಾಮರ್ಸ್ ವೇದಿಕೆಯಲ್ಲಿ ಪೂರೈಕೆದಾರರು

ಇ-ಕಾಮರ್ಸ್ ವೇದಿಕೆಗೆ ಸರಕು ಅಥವಾ ಸೇವೆಯನ್ನು ಪೂರೈಕೆ ಮಾಡುವವರನ್ನು ಇ-ಕಾಮರ್ಸ್ ವೇದಿಕೆಯಲ್ಲಿ ಪೂರೈಕೆದಾರರು ಎಂದು ಹೇಳಬಹುದು. ಇ-ಕಾಮರ್ಸ್ ವೇದಿಕೆಯಲ್ಲಿ ಪೂರೈಕೆದಾರರಾಗಲು ಇರಬೇಕಾದ ಅಗತ್ಯತೆಗಳು ಈ ರೀತಿ ಇವೆ –

1. ಕಡ್ಡಾಯ ನೋಂದಣಿ
ಇ-ಕಾಮರ್ಸ್ ವೇದಿಕೆಯಲ್ಲಿ ಎಲ್ಲಾ ಪೂರೈಕೆದಾರರು ಕಡ್ಡಾಯವಾಗಿ ಜಿಎಸ್ಟಿಯಡಿ ನೋಂದಾಯಿಸಿಕೊಳ್ಳಬೇಕು. ಮಾತ್ರವಲ್ಲದೆ, ಯಾವ ಪೂರೈಕೆದಾರರ ವಹಿವಾಟಿನ ಮಿತಿಯು ನೋಂದಾಯಿಸಿಕೊಳ್ಳಲು ಬೇಕಾದಷ್ಟು ಮಿತಿಯನ್ನು ಹೊಂದಿಲ್ಲದೆ ಇದ್ದರೂ ಅಂತವರೂ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು

2. ಸಂಯೋಜಿತ ಯೋಜನೆಗೆ ಅರ್ಹರಾಗದೆ ಇರುವುದು
ಇ-ಕಾಮರ್ಸ್ ನಿರ್ವಾಹಕರ ಮೂಲಕ ಯಾವ ವ್ಯಕ್ತಿಯ ಸರಕು ಮತ್ತು ಸೇವೆಯ ಪೂರೈಕೆಯನ್ನು ಮಾಡುತ್ತಾನೋ ಅವರು ಸಂಯೋಜಿತ ಯೋಜನೆ ಮೂಲಕ ನೋಂದಾಯಿಸಿಕೊಳ್ಳಲು ಅರ್ಹತೆ ಪಡೆಯುವುದಿಲ್ಲ. ಎಲ್ಲಾದರೂ ಆ ವ್ಯಕ್ತಿಯ ವಹಿವಾಟು 50 ಲಕ್ಷ ರೂ. ದಾಟದೆ ಇದ್ದರೂ ಅವನು/ಅವಳು ಸಂಯೋಜಿತ ತೆರಿಗೆ ಪಾವತಿದಾರರಾಗಲು ಅವಕಾಶವಿಲ್ಲ

3. ನಮೂನೆ ಸಲ್ಲಿಕೆಯ ಪ್ರಕ್ರಿಯೆ

ಇ-ಕಾಮರ್ಸ್ ವೇದಿಕೆಯಲ್ಲಿರುವ ಒಬ್ಬ ಪೂರೈಕೆದಾರರು ಮಧ್ಯವರ್ತಿಗೆ ಅನ್ವಯವಾಗುವ ಜಿಎಸ್ಟಿ ರಿಟರ್ನ್ ಪ್ರಕ್ರಿಯೆಯನ್ನು ಅನುಸರಿಸಬೇಕು. ಇದರೊಂದಿಗೆ ಇ-ಕಾಮರ್ಸ್ ವೇದಿಕೆಯ ಮೂಲಕ ಈ ಮುಂದಿನ ಮಾಹಿತಿಯನ್ನು ನೀಡಬೇಕು –

  • ತಿಂಗಳ 1ನೇ ತಾರೀಕು, ಪೂರೈಕೆದಾರರು ಹೊರಗಿನ ಪೂರೈಕೆಯ ಮಾಹಿತಿ ಹೊಂದಿರುವ ನಮೂನೆ GSTR-1 ನ್ನು ಭರ್ತಿ ಮಾಡಿ ಸಲ್ಲಿಸಬೇಕು. ಈ ನಮೂನೆ ಜಿಎಸ್ಟಿಆರ್-1ರಲ್ಲಿ ನೋಂದಾಯಿತ ತೆರಿಗೆ ವಿಧಿಸಬಹುದಾದ ವ್ಯಕ್ತಿಯ ಮಾಹಿತಿಯನ್ನು ಸರಕುಪಟ್ಟಿ ಯಾದಿಯಂತೆ ತಯಾರಿಸಬೇಕು ಮತ್ತು ನೋಂದಾಯಿತ ವ್ಯಕ್ತಿಯು ಇ-ಕಾಮರ್ಸ್ ವೇದಿಕೆಯಲ್ಲಿ ನಡೆಸಿದ ಪೂರೈಕೆಯ ಸರಿಯಾದ ಮೌಲ್ಯವನ್ನು ನಮೋದಿಸಬೇಕು.
  • ತಿಂಗಳ 11ನೇ ತಾರೀಕು, ನಮೂನೆ GSTR-2A ಅನ್ನು ಪೂರೈಕೆದಾರರಿಗೆ ಲಭಿಸುವಂತೆ ಮಾಡಬೇಕು. ಹಿಂದಿನ ತಿಂಗಳಲ್ಲಿ ಇ-ಕಾಮರ್ಸ್ ನಿರ್ವಾಹಕರ ಮೂಲಕ ಸಂಗ್ರಹಿಸಿದ ತೆರಿಗೆಯ ಒಟ್ಟು ಮೊತ್ತವನ್ನು ಇ-ಕಾಮರ್ಸ್ ನಿರ್ವಾಹಕರು ಸಲ್ಲಿಸಿದ ನಮೂನೆ GSTR-8 ಆಧಾರದಲ್ಲಿ ಸ್ವಯಂ ದಾಖಲಿಸಿ ಸಲ್ಲಿಸಬೇಕು.
   GST-Ecommerce-Suppliers
  • ತಿಂಗಳ 15ನೇ ತಾರೀಕು, ಒಬ್ಬ ಪೂರೈಕೆದಾರರು ಇ-ಕಾಮರ್ಸ್ ನಿರ್ವಾಹಕರಿಂದ ಅಂಗೀಕರಿಸಲ್ಪಟ್ಟ ಅಥವಾ ಪರಿಷ್ಕೃತವಾದ ತೆರಿಗೆ ಸಂಗ್ರಹಿಸಿದ ವಿವರವನ್ನು ನಮೂನೆ GSTR-2ನ್ನು ಭರ್ತಿ ಮಾಡುತ್ತಾರೆ. ತೆರಿಗೆ ಸಂಗ್ರಹಿಸಿರುವ ಮೊತ್ತವನ್ನು ಪೂರೈಕೆದಾರರ ಎಲೆಕ್ಟ್ರಾನಿಕ್ ಕ್ಯಾಶ್ ಲೆಡ್ಜರಿಗೆ ಪಾವತಿ ಮಾಡಲಾಗಿದೆ, ಇದನ್ನು ತೆರಿಗೆ ಬಾಧ್ಯತೆಗೆ ಒಳಪಡಿಸಬಹುದು.
  • ತಿಂಗಳ 21ನೇ ತಾರೀಕಿನಂದು, ಪೂರೈಕೆದಾರರಿಗೆ GST ITC-1 ನಮೂನೆಯು ಲಭ್ಯವಾಗುವಂತೆ ಮಾಡಬೇಕು. ಪೂರೈಕೆಯ ಕುರಿತಾದ ಯಾವುದೇ ವ್ಯತ್ಯಾಸಗಳಿದ್ದರೂ ಇ-ಕಾಮರ್ಸ್ ನಿರ್ವಾಹಕರು ವರದಿ ಮಾಡಿರುವುದನ್ನು ಕಾಣಿಸಬೇಕು. ವ್ಯತ್ಯಾಸವಾದ ಮೌಲ್ಯವನ್ನು ಮುಂದಿನ ತಿಂಗಳ ರಿಟರ್ನ್ ಸಲ್ಲಿಕೆಯ ಸಮಯದಲ್ಲಿ ಸರಿಪಡಿಸಿ ಸಲ್ಲಿಸಬೇಕು. ಎಲ್ಲಾದರೂ ಇದನ್ನು ಸರಿಪಡಿಸದೆ ಇದ್ದರೆ ಮತ್ತು ಪೂರೈಕೆದಾರರು ನಮೋದಿಸಿದಕ್ಕಿಂತ ಹೆಚ್ಚು ಮೌಲ್ಯವನ್ನು ನಿರ್ವಾಹಕರು ನಮೋದಿಸಬೇಕು. ಈ ವ್ಯತ್ಯಾಸದ ಮೊತ್ತದ ಜೊತೆಗೆ ಬಡ್ಡಿಯನ್ನು ಸೇರಿಸಿ ಮುಂದಿನ ತಿಂಗಳಲ್ಲಿ ಪೂರೈಕೆದಾರರ ತೆರಿಗೆ ಬಾಧ್ಯತೆಯಾಗಿ ಸೇರಿಸಲಾಗುತ್ತದೆ.

   ಮೇಲಿನ ಉದಾಹರಣೆಯ ಪ್ರಕಾರ, ರಾಕೇಶ್ ಪ್ರೈವೇಟ್ ಲಿಮಿಟೆಡ್ ನಮೂನೆ ಜಿಎಸ್ಟಿಆರ್-1ನ್ನು ನವೆಂಬರ್ 10, 2017ರಂದು ಸಲ್ಲಿಸಿದೆ. ವ್ಯತ್ಯಾಸದ ಕುರಿತು ನವೆಂಬರ್ 21, 2017ರಂದು ಜಿಎಸ್ಟಿ ಐಟಿಸಿ-1 ನಮೂನೆಯಲ್ಲಿ ವರದಿ ಮಾಡಲಾಗಿದೆ. ನವೆಂಬರ್ 17ರಂದು ಸಲ್ಲಿಸಿದ ನಮೂನೆಯನ್ನು ಸರಿಪಡಿಸಿ ಡಿಸೆಂಬರ್ 10, 2017ರಂದು ಸಲ್ಲಿಸಬೇಕು.

Are you GST ready yet?

Get ready for GST with Tally.ERP 9 Release 6

107,086 total views, 6 views today