ಈ ಹಿಂದಿನ ಲೇಖನದಲ್ಲಿ ನಾವು ಪೂರೈಕೆಯ ಸ್ಥಳ ಮತ್ತು ಪೂರೈಕೆಯ ಸ್ಥಳವನ್ನು ನಿರ್ಧರಿಸುವುದು ಯಾಕೆ ಅಗತ್ಯವೆಂದು ಚರ್ಚಿಸಿದ್ಧೇವು. ಮುಂದಿನ ಕೆಲವು ಲೇಖನಗಳಲ್ಲಿ ಪೂರೈಕೆಯ ಸ್ಥಳವನ್ನು ಗುರುತಿಸಲು ಇರುವ ಮಾನದಂಡಗಳ ಕುರಿತು ಚರ್ಚಿಸಲಿದ್ದೇವೆ. ಇಲ್ಲಿ ನಾವು ಸರಕುಗಳು ಸಂಚರಿಸುತ್ತ ಇರುವಾಗ ಪೂರೈಕೆಯ ಸ್ಥಳವನ್ನು ಗುರುತಿಸುವ ಕುರಿತು ಕಲಿಯೋಣ.
ಯಾವಾಗ ಪೂರೈಕೆಯು ಸರಕುಗಳ ಚಲನೆಯಲ್ಲಿ ಭಾಗಿಯಾಗುತ್ತೋ, ಸ್ವೀಕೃತಿದಾರರು ಇರುವ ಪೂರೈಕೆ ಅಂತ್ಯಗೊಳ್ಳುವ ಸ್ಥಳವು ಪೂರೈಕೆಯ ಸ್ಥಳವಾಗಿರುತ್ತದೆ.

When a supply involves movement of goods, the place of supply is the location at which the movement of goods terminates for delivery to the recipient.Click To Tweet
ಉದಾಹರಣೆ 1

ಮಹಾರಾಷ್ಟ್ರದ ಮುಂಬೈನಲ್ಲಿರುವ ಜಾರ್ಜ್ ಎಲೆಕ್ಟ್ರಾನಿಕ್ಸ್ ಕಂಪನಿಯು ಮಹಾರಾಷ್ಟ್ರದ ಪುಣೆಯಲ್ಲಿರುವ ಅರವಿಂದ್ ಎಲೆಕ್ಟ್ರಾನಿಕ್ಸ್ ಗೆ 10 ಕಂಪ್ಯೂಟರ್ ಗಳನ್ನು ಪೂರೈಕೆ ಮಾಡುತ್ತದೆ.

ಇಲ್ಲಿ,
ಪೂರೈಕೆದಾರರ ಸ್ಥಳ: ಮಹಾರಾಷ್ಟ್ರದ ಮುಂಬೈ
ಪೂರೈಕೆದಾರರ ಸ್ಥಳ: ಅರವಿಂದ್ ಎಲೆಕ್ಟ್ರಾನಿಕ್ಸ್ ವ್ಯವಹಾರ ನಡೆಸುವ ಸ್ಥಳ ಪುಣೆ, ಮಹಾರಾಷ್ಟ್ರ ಮತ್ತು ಕಂಪ್ಯೂಟರ್ ಸಾಗಾಣೆಯು ಇಲ್ಲಿ ಡೆಲಿವರಿಗೊಳ್ಳಲಿದೆ. ಹೀಗಾಗಿ, ಪೂರೈಕೆಯ ಸ್ಥಳವು ಮಹಾರಾಷ್ಟ್ರದ ಪುಣೆಯಾಗಿದೆ.

intrastate supply
ಇದು ರಾಜ್ಯದೊಳಗಿನ ಪೂರೈಕೆಯಾಗಿದೆ. ಹೀಗಾಗಿ, ಇಲ್ಲಿ ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ತೆರಿಗೆಯು ಅನ್ವಯಿಸುತ್ತದೆ.

ಉದಾಹರಣೆ 2

ಜಾರ್ಜ್ ಎಲೆಕ್ಟ್ರಾನಿಕ್ಸ್ ಮಹಾರಾಷ್ಟ್ರದ ಮುಂಬೈನಲ್ಲಿದ್ದು, ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿರುವ ಮನೋಜ್ ಎಲೆಕ್ಟ್ರಾನಿಕ್ಸ್ ಗೆ 20 ಕಂಪ್ಯೂಟರ್ ಗಳನ್ನು ಪೂರೈಕೆ ಮಾಡುತ್ತದೆ.

ಪೂರೈಕೆದಾರರ ಸ್ಥಳ: ಮಹಾರಾಷ್ಟ್ರದ ಮುಂಬೈ
ಪೂರೈಕೆ ಮಾಡಬೇಕಾದ ಸ್ಥಳ: ಗುಜರಾತ್ ನ ಅಹಮದಾಬಾದ್.

interstate supply
ಇದು ಅಂತರ್ ರಾಜ್ಯ ಪೂರೈಕೆಯಾಗಿದೆ. ಈ ಪೂರೈಕೆಗೆ ಅನ್ವಯವಾಗುವ ತೆರಿಗೆ ಐಜಿಎಸ್ಟಿಯಾಗಿದೆ.

ಸ್ವೀಕೃತಿದಾರರ ಸ್ಥಳದಿಂದ ಪೂರೈಕೆದಾರರ ಸ್ಥಳವು ಭಿನ್ನವಾಗಿದ್ದರೆ ಸರಕುಗಳ ಚಲನೆಯ ಮುಕ್ತಾಯದ ಪರಿಕಲ್ಪನೆಯನ್ನು ನಾವು ಅರ್ಥಮಾಡಿಕೊಳ್ಳೋಣ.

ಉದಾಹರಣೆ 3

ಮಹಾರಾಷ್ಟ್ರದ ಮುಂಬೈನಲ್ಲಿರುವ ಜಾರ್ಜ್ ಎಲೆಕ್ಟ್ರಾನಿಕ್ಸ್ ಗೆ ಗೋವಾದಲ್ಲಿರುವ ಕಂಪ್ಯೂಟರ್ ವರ್ಲ್ಡ್ ನಿಂದ 50 ಕಂಪ್ಯೂಟರುಗಳಿಗೆ ಆದೇಶವನ್ನು ಪಡೆಯುತ್ತದೆ. ನಮ್ಮ ಹಳೆ ಕಾರ್ಖಾನೆಯು ಜಾರ್ಜ್ ಎಲೆಕ್ಟ್ರಾನಿಕ್ಸ್ ಗೆ ಹತ್ತಿರದಲ್ಲಿರುವುದರಿಂದ ನಾವೇ ಸರಕನ್ನು ತೆಗೆದುಕೊಳ್ಳುತ್ತೇವೆ ಎಂದು ಕಂಪ್ಯೂಟರ್ ವರ್ಲ್ಡ್ ಮಾಹಿತಿ ನೀಡುತ್ತದೆ.
ಇಲ್ಲಿ ತೆರಿಗೆಯ ಶುಲ್ಕವನ್ನು ನಿರ್ಧರಿಸುವುದನ್ನು ಅರ್ಥಮಾಡಿಕೊಳ್ಳೋಣ.
ಪೂರೈಕೆಯ ಸ್ಥಳ: ಮಹಾರಾಷ್ಟ್ರದ ಮುಂಬೈ
ಪೂರೈಕೆ ಮಾಡಬೇಕಾದ ಸ್ಥಳ: ಸ್ವೀಕೃತಿದಾರರು ವ್ಯವಹಾರ ನಡೆಸುವ ಸ್ಥಳ, ಕಂಪ್ಯೂಟರ್ ವರ್ಲ್ಡ್, ಗೋವಾ. ಇದನ್ನು ಗಮನಿಸಬೇಕಾದ ವಿಚಾರವಾದರೂ, ಪೂರೈಕೆದಾರರಾದ ಜಾರ್ಜ್ ಎಲೆಕ್ಟ್ರಾನಿಕ್ಸ್ ನ ಫ್ಯಾಕ್ಟರಿಯಿಂದಲೇ (ಮುಂಬೈ) ಸರಕನ್ನು ತೆಗೆದುಕೊಳ್ಳುವುದಾಗಿ ಕಂಪ್ಯೂಟರ್ ವರ್ಲ್ಡ್ ಒಪ್ಪಿದೆ. ಹೀಗಾಗಿ, ಪೂರೈಕೆಯ ಸ್ಥಳ ಮುಂಬೈನಿಂದಾಗಿದೆ.

intrastate supply scenarios
ಇದು ರಾಜ್ಯದ ಹೊರಗಿನ ಪೂರೈಕೆಯಾಗಿದೆ ಮತ್ತು ಇದಕ್ಕೆ ಅನ್ವಯವಾಗಲಿರುವ ತೆರಿಗೆ “ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ’’ ಯಾಗಿದೆ.
ಮುಂದೆ ಪ್ರಕಟವಾಗುವ ಬರಹ:
ಸರಕಿನ ಸಾಗಾಟ ಇಲ್ಲದೆ ಇದ್ದಾಗ ಪೂರೈಕೆಯ ಸ್ಥಳವನ್ನು ಗುರುತಿಸುವುದು.

Are you GST ready yet?

Get ready for GST with Tally.ERP 9 Release 6

82,043 total views, 22 views today