ನಮ್ಮ ಹಿಂದಿನ ಬ್ಲಾಗ್ ಬರಹದಲ್ಲಿ ಫಾರ್ವಾರ್ಡ್ ಶುಲ್ಕದಲ್ಲಿ ಸರಕಿನ ಪೂರೈಕೆಯ ಸಮಯ ಯಾವುದು? ಎಂಬ ವಿಷಯದಲ್ಲಿ ಫಾರ್ವಾರ್ಡ್ ಚಾರ್ಜ್ ನಲ್ಲಿ ಸರಕುಗಳ ಪೂರೈಕೆಯ ಸಮಯದ ಕುರಿತು ಚರ್ಚೆ ಮಾಡಿದ್ದೇವೆ. ಈ ಬ್ಲಾಗ್ ಬರಹದಲ್ಲಿ, ರಿವರ್ಸ್ ಚಾರ್ಜ್ ನಲ್ಲಿ ಸರಕುಗಳ ಪೂರೈಕೆಯ ಸಮಯದ ಕುರಿತು ಚರ್ಚಿಸೋಣ.

ವಿವಿಧ ಅಸಂಘಟಿತ ವಲಯದಿಂದ ಸರಕು ಅಥವಾ ಸೇವೆಗೆ ತೆರಿಗೆ ಸಂಗ್ರಹಿಸುವ ಸಲುವಾಗಿ ಸರಕಾರವು ರಿವರ್ಸ್ ಚಾರ್ಜ್ ವಿಧಾನವನ್ನು ಬಳಕೆ ಮಾಡಿದೆ. ಇದರಲ್ಲಿಸರಕು ಅಥವಾ ಸೇವೆಗಳ ಸ್ವೀಕೃತಿದಾರರು ಅಥವಾ ಖರೀದಿದಾರರು ಸರಕಾರಕ್ಕೆ ತಲುಪುವಂತೆ ತೆರಿಗೆ ಪಾವತಿಸಬೇಕು. ಫಾರ್ವಾರ್ಡ್ ಶುಲ್ಕಕ್ಕಿಂತ ಇದು ಭಿನ್ನವಾಗಿದೆ. ಫಾರ್ವಾರ್ಡ್ ಶುಲ್ಕದಲ್ಲಿ ಪೂರೈಕೆದಾರರು ತೆರಿಗೆ ಪಾವತಿಸುವ ಬಾಧ್ಯತೆ ಹೊಂದಿರುತ್ತಾರೆ. ಹೀಗಾಗಿ ರಿವರ್ಸ್ ಚಾರ್ಜ್ ನಲ್ಲಿ ತೆರಿಗೆ ಪಾವತಿಸುವ ಬಾಧ್ಯತೆಯಲ್ಲಿ ಬದಲಾವಣೆಯಾಗಿದೆ. ಇಲ್ಲಿಪೂರೈಕೆದಾರರ ಬದಲಾಗಿ ಖರೀದಿದಾರರು ತೆರಿಗೆ ಪಾವತಿಸಬೇಕು.

ಈಗಿನ ತೆರಿಗೆ ಪದ್ಧತಿಯ ಅನ್ವಯ

ಮೌಲ್ಯವರ್ಧಿತ ತೆರಿಗೆಯಾದ ವ್ಯಾಟ್ ನಲ್ಲಿ ನೋಂದಾಯಿಸದೆ ಇರುವ ವಿತರಕರಿಂದ ಖರೀದಿಸಿದ ಸಂದರ್ಭದಲ್ಲಿ ಸರಕಿನ ಸ್ವೀಕೃತಿದಾರರು (ನೋಂದಾಯಿತ ವಿತರಕ) ಖರೀದಿ ತೆರಿಗೆ ಎಂಬ ತೆರಿಗೆಯನ್ನು ಪಾವತಿಸಬೇಕು.

ಉದಾಹರಣೆಗೆ, ಕರ್ನಾಟಕದಲ್ಲಿ ನೋಂದಾಯಿಸಿರುವ ವಿತರಕರಾಗಿರುವ ರಾಮ್ ಟ್ರೇಡರ್ಸ್, ನೋಂದಾಯಿಸದೆ ಇರುವ ವ್ಯಾಪಾರಿಯಾದ ಶ್ರೀಯುತ ಶಿವ್ ಕುಮಾರ್ ಅವರಿಂದ ಸರಕು ಖರೀದಿಸುತ್ತದೆ. ಈ ಖರೀದಿಯಲ್ಲಿ ರಾಮ್ ಟ್ರೇಡರ್ಸ್ ಖರೀದಿ ತೆರಿಗೆ ಪಾವತಿಸುವ ಬಾಧ್ಯತೆ ಹೊಂದಿರುತ್ತದೆ.

ಜಿಎಸ್ಟಿ ಅನ್ವಯ

ಜಿಎಸ್ಟಿಯಡಿಯಲ್ಲಿ, ರಿವರ್ಸ್ ಚಾರ್ಜ್ ವಿಧಾನದ ಪರಿಕಲ್ಪನೆಯೇ ಉಳಿದಿದೆ. ಇದು ನಿರ್ದಿಷ್ಟ ಸರಕು ಮತ್ತು ಸೇವೆಗಳಿಗೆ ಅನ್ವಯಿಸಲಿದ್ದು, ಇದನ್ನು ಸರಕಾರ ಇನ್ನೂ ಸ್ಪಷ್ಟಪಡಿಸಿಲ್ಲ.

ರಿವರ್ಸ್ ಚಾರ್ಜ್ ಮೆಕಾನಿಸಂನಡಿ ಸರಕು ಪೂರೈಕೆಯ ಸಮಯವನ್ನು ಅರ್ಥಮಾಡಿಕೊಳ್ಳೋಣ.

ಜಿಎಸ್ಟಿಯ ಬಾಧ್ಯತೆ (ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ಅಥವಾ ಐಜಿಎಸ್ಟಿಯೂ ಅನ್ವಯವಾಗುತ್ತದೆ) ಈ ಮುಂದಿನಂತೆ ಇರುತ್ತದೆ:

ಇವುಗಳಲ್ಲಿ ಯಾವುದು ಮೊದಲೋ ಅದು

Earliest of the following
ಸರಕುಪಟ್ಟಿ ಸ್ವೀಕರಿಸಿದ ದಿನಾಂಕ ಸ್ವೀಕೃತಿದಾರರಿಂದ ಸರಕನ್ನು ಸ್ವೀಕರಿಸಿದ ದಿನಾಂಕ.
ಪಾವತಿ ಮಾಡಿದ ದಿನಾಂಕ ಹಣ ಪಾವತಿಸಿರುವ ದಿನಾಂಕ. ಸ್ವೀಕೃತಿದಾರರ ಲೆಕ್ಕ ಪುಸ್ತಕದಲ್ಲಿ ಪಾವತಿ ನಮೋದಿಸಿದ ದಿನಾಂಕ ಅಥವಾ ಆತನ ಬ್ಯಾಂಕ್ ಖಾತೆಗೆ ಹಣ ಪಾವತಿಯಾದ ದಿನಾಂಕ, ಇವುಗಳಲ್ಲಿ ಯಾವುದು ಮೊದಲೋ ಅದು.
ಸರಕುಪಟ್ಟಿ ಸಿದ್ಧಪಡಿಸಿದಾಗಿನಿಂದ 30 ದಿನಗಳೊಳಗೆ ಪೂರೈಕೆದಾರರು ಸರಕುಪಟ್ಟಿ ನೀಡಿದ ತಕ್ಷಣದಿಂದ ನಂತರದ 30 ದಿನಗಳ ಒಳಗೆ.

ಎಲ್ಲಾದರೂ ಬೇರಾವ ಕಾರಣಗಳಿಂದ ಮೇಲಿನ ದಿನಾಂಕಗಳನ್ನು ಗುರುತಿಸದೆ ಇದ್ದರೆ, ಪೂರೈಕೆಯ ಸಮಯವನ್ನು ಸ್ವೀಕೃತಿದಾರರ ಲೆಕ್ಕ ಪುಸ್ತಕದಲ್ಲಿ ನಮೋದಿಸಿದಂತೆ ಪೂರೈಕೆಯ ಸಮಯವನ್ನು ನಿರ್ಧರಿಸಲಾಗುತ್ತದೆ.

ಇದನ್ನು ಈ ಮುಂದಿನ ಉದಾರಣೆಗಳ ಮೂಲಕ ಅರ್ಥಮಾಡಿಕೊಳ್ಳೋಣ.

ಸರಕು ಸ್ವೀಕರಿಸಿದ ದಿನಾಂಕ ಸರಕುಪಟ್ಟಿ ನೀಡಿದ ದಿನಾಂಕ ಪಾವತಿ ಮಾಡಿರುವ ದಿನಾಂಕ ಸರಕು ಪೂರೈಕೆ ಮಾಡಿರುವ ದಿನಾಂಕ ವಿವರಣೆ
ಜುಲೈ 29, 2017 ಆಗಸ್ಟ್ 5, 2017 ನವೆಂಬರ್ 10, 2016 ಜುಲೈ 29, 2017 ಸರಕು ಸ್ವೀಕರಿಸಿದ ದಿನಾಂಕ, ಈ ಪ್ರಕರಣದಲ್ಲಿ ಪಾವತಿ ಮಾಡಿರುವ ದಿನಾಂಕಕ್ಕಿಂತ ಮೊದಲು ಸರಕು ಪಟ್ಟಿ ನೀಡಿರುವ ನಂತರದ 30 ದಿನಗಳೊಳಗಿನ ದಿನಾಂಕ ಬಂದಿದೆ. ಹೀಗಾಗಿ, ಪೂರೈಕೆಯ ಸಮಯವು ಜುಲೈ 29, 2017 ಆಗಿರುತ್ತದೆ.
ಆಗಸ್ಟ್ 15, 2017 ಆಗಸ್ಟ್ 25, 2017 ಜುಲೈ 30, 2017 ಜುಲೈ 30, 2017 ಸರಕು ಸ್ವೀಕರಿಸಿದ ದಿನಾಂಕ ಮತ್ತು ಸರಕುಪಟ್ಟಿ ನೀಡಿದ 30 ದಿನದೊಳಗಿನ ಗಡವಿಗಿಂತ ಪಾವತಿ ಮಾಡಿರುವ ದಿನಾಂಕವು ಮೊದಲು ಬಂದಿದೆ. ಹೀಗಾಗಿ ಜುಲೈ 30, 2017 ಪೂರೈಕೆಯ ಸಮಯವಾಗಿದೆ.
ಆಗಸ್ಟ್ 10, 2017 ಜುಲೈ 1, 2017 ಆಗಸ್ಟ್ 15, 2017 ಜುಲೈ 31, 2017 ಈ ಪ್ರಕರಣದಲ್ಲಿ, ಸರಕು ಸ್ವೀಕರಿಸಿದ ದಿನಾಂಕ ಮತ್ತು ಪಾವತಿ ಸ್ವೀಕರಿಸಿದ ದಿನಾಂಕಕ್ಕಿಂತ ಮೊದಲು ಸರಕು ಪಟ್ಟಿ ನೀಡಿದ ಬಳಿಕದ 30 ದಿನದೊಳಗಿನ ಆಯ್ಕೆ ಮೊದಲು ಬಂದಿದೆ. ಹೀಗಾಗಿ, ಇಲ್ಲಿ ಜುಲೈ 31, 2017 ಪೂರೈಕೆಯ ಸಮಯವಾಗಿದೆ.
ಮುಂದಿನ ಬ್ಲಾಗ್ ಬರಹ

ರಿವರ್ಸ್ ಚಾರ್ಜ್ ವಿಧಾನದಲ್ಲಿ ಸೇವೆಯ ಪೂರೈಕೆಯ ಸಮಯ

Are you GST ready yet?

Get ready for GST with Tally.ERP 9 Release 6

72,081 total views, 91 views today

Yarab A

Author: Yarab A

Yarab is associated with Tally since 2012. In his 7+ years of experience, he has built his expertise in the field of Accounting, Inventory, Compliance and software product for the diverse industry segment. Being a member of ‘Centre of Excellence’ team, he has conducted several knowledge sharing sessions on GST and has written 200+ blogs and articles on GST, UAE VAT, Saudi VAT, Bahrain VAT, iTax in Kenya and Business efficiency.