ಭಾರತದಲ್ಲಿಯೇ ತಯಾರಿಸಿ ” ಅಭಿಯಾನವು ಜಗತ್ತಿನ ಭೂಪಾಟದಲ್ಲಿ ಭಾರತವನ್ನು ತಯಾರಕರ ಹಬ್ ಆಗಿ ಗುರುತಿಸಿದೆ. 2020ರ ವೇಳೆಗೆ ಭಾರತವು ಜಗತ್ತಿನ 5ನೇ ಬೃಹತ್ ತಯಾರಕರ ದೇಶವಾಗಲಿದೆ ಎಂದು ಡೆಲೊಯಿಟ್ ಅಭಿಪ್ರಾಯಪಟ್ಟಿದೆ.


ಆದರೆ, ನಮಗೆ ಅತ್ಯಂತ ಪ್ರಮುಖವಾಗಿ ಇದು ತಯಾರಿಕಾ ವಲಯದಲ್ಲಿ ಅದ್ಭುತ ನಡೆಯುವ ಭರವಸೆಯನ್ನು ನೀಡಿದೆ- ಇದು ಕಳೆದ 2 ದಶಕದಿಂದ ಪ್ರಮುಖವಾಗಿದೆ ಮತ್ತು ನಮ್ಮ ದೇಶದ ಜಿಡಿಪಿಗೆ ಶೇಕಡ 16ರಷ್ಟು ಕೊಡುಗೆ ನೀಡುತ್ತಿದೆ ಎಂದು ಐಬಿಇಎಫ್ . ಮಾಹಿತಿ ಒದಗಿಸಿದೆ. ಮತ್ತು ಇದು ಖಂಡಿತವಾಗಿಯೂ ನಮ್ಮ ದೇಶದ ತಯಾರಕ ವಲಯದವರಿಗೆ ಶುಭ ಸುದ್ದಿಯಾಗಿದೆ.
ಆದರೆ, ಈ ಅಭಿಯಾನದ ಮೂಲಕ ಒಂದು ರಾತ್ರಿ ಬೆಳಗಾಗುವುದರೊಳಗೆ ಎಲ್ಲವೂ ಬದಲಾಗಲಿದೆಯೇ, ಖಂಡಿತವಾಗಿಯೂ ಇಲ್ಲ. ಇದನ್ನು ಸಾಧಿಸಲು “ಭಾರತದಲ್ಲಿ ತಯಾರಿಸಿ’’ ಅನುಷ್ಠಾನಗೊಳಿಸಲು ಸರಕಾರದ ಬತ್ತಳಿಕೆಯಲ್ಲಿ ವಿವಿಧ ಆಲೋಚನೆಗಳು, ಅನ್ವೇಷಣೆಗಳು ಮತ್ತು ಕಾರ್ಯತಂತ್ರಗಳು ಇವೆ- ಇದರ ಮೊದಲ ಆಯುದ್ಧವೇ-ಜಿಎಸ್ಟಿ.

ನೀವು ತಯಾರಕರು ಆಗಿದ್ದರೆ, ಜಿಎಸ್ಟಿಯು ನಿಮಗೆ ಒಳ್ಳೆಯದು ಅಥವಾ ಕೆಟ್ಟದು ಮಾಡಲಿದೆಯೇ? ಜುಲೈ 1ರಿಂದ ಆಗಮಿಸುವ ಜಿಎಸ್ಟಿಗೆ ಸಿದ್ಧಗೊಳ್ಳುವ ಕುರಿತು ಮರು ಆಲೋಚನೆ ಮಾಡುವ ಅಗತ್ಯವಿದೆಯೇ? ತಿಳಿದುಕೊಳ್ಳೋಣ ಬನ್ನಿ.

ಸಕಾರಾತ್ಮಕ ಪರಿಣಾಮಗಳು

ಉತ್ಪಾದನಾ ವೆಚ್ಚದಲ್ಲಿ ಇಳಿಕೆ

ಈಗಿನ ಪರೋಕ್ಷ ತೆರಿಗೆ ಪದ್ಧತಿಯಲ್ಲಿ, ಅಂತರ್ ರಾಜ್ಯ ಪ್ರಕ್ರಿಯೆಯಲ್ಲಿ ಕೇಂದ್ರ ಮಾರಾಟಕ್ಕೆ ತೆರಿಗೆ ಪಾವತಿಸಿರುವುದಕ್ಕೆ ಆದಾನ ತೆರಿಗೆ ಪಾವತಿ ಕೇಳುವ ಅವಕಾಶವಿಲ್ಲ. ಇದೇ ರೀತಿ, ಆಕ್ಟಾಯ್, ಸ್ಥಳೀಯ ತೆರಿಗೆಗಳು, ಪ್ರವೇಶ ತೆರಿಗೆ ಇತ್ಯಾದಿ ಮರುಪಾವತಿ ಕೇಳಲಾಗದ ತೆರಿಗೆಗೂ ಇದು ಅನ್ವಯಿಸುತ್ತದೆ. ಇವೆಲ್ಲವೂ ಉತ್ಪಾದನಾ ತೆರಿಗೆ ಮೇಲೆ ವೆಚ್ಚ ಉಂಟು ಮಾಡುತ್ತದೆ.
ಈ ತೊಂದರೆಯು ತೆರಿಗೆಯ ಮೇಲೆ ತೆರಿಗೆ ವಿಧಿಸುವುದರಿಂದಾಗಿ ತಯಾರಿಕಾ ಹಂತದ ನಂತರವೂ ಮುಂದುವರೆಯುತ್ತದೆ. ತಯಾರಕರಂತೆ- ವಿತರಕರು, ಮಧ್ಯವರ್ತಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೂ ಆದಾನ ತೆರಿಗೆ ಪಾವತಿಯನ್ನು ತಮ್ಮ ಸರಕಿಗೆ ಕೇಳಲಾಗುವಿಲ್ಲ- ಒಟ್ಟಾರೆಯಾಗಿ ಸರಕಿನ ಅಂತಿಮ ವೆಚ್ಚವು ಕೊನೆಯ ಗ್ರಾಹಕನ ಮೇಲೆ ಬರುತ್ತದೆ. ಇದು ಭಾರತದಲ್ಲಿ ತಯಾರಿಸಿದ ಸರಕುಗಳಿಗೂ, ವಿದೇಶದಿಂದ ಆಮದು ಮಾಡಿರುವ ಸರಕಿನ ನಡುವಿನ ಸ್ಪರ್ಧೆಗೂ ನೇರ ಪರಿಣಾಮ ಬೀರುತ್ತದೆ ಮತ್ತು ಪರೋಕ್ಷವಾಗಿ ಭಾರತದ ತಯಾರಕರ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತದೆ.
ದೇಶಕ್ಕೆ ಜಿಎಸ್ಟಿಯ ಪ್ರಮುಖ ಶಕ್ತಿಯೆಂದರೆ, ತೆರಿಗೆಯ ಮೇಲೆ ತೆರಿಗೆ ವಿಧಿಸುವುದನ್ನು ತೆಗೆದು ಹಾಕುವುದಾಗಿದೆ. ಉತ್ಪಾದನಾ ಹಂತದಲ್ಲಿಯೇ ಸರಕು ಮತ್ತು ಸೇವೆಗಳಿಗೆ ತೆರಿಗೆ ವಿಧಿಸಲು ಅವಕಾಶ ನೀಡುವುದರಿಂದ ಪರೋಕ್ಷ ತೆರಿಗೆಯ ಪರಿಣಾಮವನ್ನು ಕಡಿಮೆ ಮಾಡುತ್ತದೆ ಮತ್ತು ತಯಾರಿಕರಿಗೆ ಸ್ಥಿರವಾದ ಹಣದ ಹರಿವಿಗೆ ನೆರವಾಗುತ್ತದೆ. ಇಷ್ಟು ಮಾತ್ರವಲ್ಲದೆ, ಎಲ್ಲಿಂದ ಉತ್ಪನ್ನ ಬಂದಿರುವುದಾಗಿ ತಯಾರಕರು ಚಿಂತೆ ಮಾಡಬೇಕಿಲ್ಲ- ಸ್ಥಳೀಯ, ರಾಜ್ಯದೊಳಗೆ ಅಥವಾ ಆಮದು ಮಾಡಲಾಗಿದೆಯೇ ಎಂದು ಚಿಂತಿಸಬೇಕಿಲ್ಲ (ಸಾಮಾನ್ಯ ಅಬಕಾರಿ ಸುಂಕ ಹೊರತುಪಡಿಸಿ, ಆಮದಿಗೆ ತೆರಿಗೆ ವಿಧಿಸುವುದನ್ನು ಮುಂದುವರೆಯುತ್ತದೆ).

ಹಲವು ಮೌಲ್ಯಮಾಪನ ವಿಧಾನಗಳಿಗೆ ಕೊನೆ

ಈಗ, ತಯಾರಿಸಿದ ಸರಕುಗಳಿಗೆ ಅಬಕಾರಿ ಸುಂಕ ವಿಧಿಸಬಹುದು- ಇದನ್ನು ವಿವಿಧ ವಿಧಾನಗಳ ಮೂಲಕ ಲೆಕ್ಕ ಹಾಕಲಾಗುತ್ತದೆ. ಕೆಲವೊಂದು ಪ್ರಕಾರಣಗಳಲ್ಲಿ ಆಡ್ ವೊಲೊರೆಮ್(ವಹಿವಾಟು ಮೌಲ್ಯಕ್ಕೆ) ಪಡೆಯಲಾಗುತ್ತದೆ; ಇನ್ನು ಕೆಲವು ಸಂದರ್ಭಳಲ್ಲಿ ಆಡ್ ಕ್ವಾಂಟಮ್(ಪ್ರಮಾಣದ ಮೇಲೆ) ವಿಧಿಸಲಾಗುತ್ತದೆ; ಕೆಲವೊಂದು ಸಂದರ್ಭಗಳಲ್ಲಿ ಇವೆರಡನ್ನೂ ಸಂಯೋಜಿಸಿ ಅಳವಡಿಸಲಾಗುತ್ತದೆ. ಬಹುತೇಕ ತಯಾರಿಸಿದ ಸರಕುಗಳು ಎಂಆರ್ ಪಿ ಮೌಲ್ಯಮಾಪನಕ್ಕೆ ಒಳಗಾಗಬೇಕಾಗುತ್ತದೆ, ಇಲ್ಲಿ ಗರಿಷ್ಠ ಸಗಟು ದರಕ್ಕೆ ಸುಂಕವನ್ನು ಲೆಕ್ಕಹಾಕಲಾಗುತ್ತದೆ. ಎಂಆರ್ ಪಿ ಮೌಲ್ಯಮಾಪನವು ತುಂಬಾ ಕ್ಲಿಷ್ಟವಾಗಿದೆ. ಅಂದರೆ, ಪ್ಯಾಕ್ ಮಾಡಿ ವ್ಯಕ್ತಿಗಳಿಗೆ ಮಾರಾಟ ಮಾಡುವುದಕ್ಕೆ, ಪ್ಯಾಕ್ ಮಾಡಿ ಸಂಸ್ಥೆಗಳಿಗೆ ಮಾರಾಟ ಮಾಡುವುದಕ್ಕೆ ವರ್ಸಸ್ ಜೊತೆಯಾಗಿ ಕಾಂಬೊ ಪ್ಯಾಕ್ ಮಾಡಿ ಮಾಡುವುದಕ್ಕೆ ಅಥವಾ ಪ್ರಚಾರದ ಉದ್ದೇಶದಿಂದ ಪ್ಯಾಕ್ ಮಾಡಿರುವುದಕ್ಕೆ ವಿವಿಧ ನಿಯಮಗಳು ಇವೆ.
ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ವಹಿವಾಟು ಮೌಲ್ಯವನ್ನು ಲೆಕ್ಕಹಾಕಿ ತಯಾರಕರು ಜಿಎಸ್ಟಿ ಪಾವತಿಸಬೇಕು. ಇದರಿಂದ ಹಲವು ಮೌಲ್ಯಮಾಪನ ತಂತ್ರಗಳ ಸಂಕೀರ್ಣತೆಯನ್ನು ತೆಗೆದುಹಾಕುತ್ತದೆ ಮತ್ತು ತಯಾರಕರ ಜೀವನವನ್ನು ಸರಳಗೊಳಿಸುತ್ತದೆ. ಎರಡು ಉತ್ಪನ್ನಗಳಿಗೆ ಮಾತ್ರ ಸೆಸ್ ಮೌಲ್ಯಮಾಪನ ಸಾಧ್ಯತೆಯಿದೆ. ಅದರ ಹೆಸರು, -ಕಲ್ಲಿದ್ದಲು, ಇದಕ್ಕೆ ಟನ್ ಗೆ ಗರಿಷ್ಠ ಸೆಸ್ ಮಿತಿಯು 400 ರೂಪಾಯಿ ಆಗಿದೆ; ಮತ್ತೊಂದು ತಂಬಾಕು, ಇದಕ್ಕೆ ಗರಿಷ್ಠ ಸೆಸ್ ಮಿತಿ ಯು 4170 ರೂಪಾಯಿ ಆಗಿರುತ್ತದೆ.

ರಾಜ್ಯವಾರು ನೋಂದಣಿ ವರ್ಸಸ್ ಕಾರ್ಖಾನೆ ಆಧರಿತ ನೋಂದಣಿ

ಈ ಹಿಂದೆ ಹಲವು ಕಾರ್ಖಾನೆಗಳಿಗೆ ತಕ್ಕಂತೆ ತಯಾರಕರು ಹಲವು ತೆರಿಗೆ ಪಾವತಿಸಬೇಕಿತ್ತು, ಇವರು ಒಂದೇ ರಾಜ್ಯದಲ್ಲಿ ಅಸ್ತಿತ್ವ ಹೊಂದಿದ್ದರೂ ಈ ರೀತಿ ಪಾವತಿಸಬೇಕಿತ್ತು. ಉದಾಹರಣೆಗೆ ತಯಾರಕರೊಬ್ಬರು ಕರ್ನಾಟಕದ 10 ಕಾರ್ಕಾನೆಗಳನ್ನು ಹೊಂದಿದ್ದರೂ 10 ಪ್ರತ್ಯೇಕ ನೋಂದಣಿ ಮಾಡಿಸಬೇಕಿತ್ತು. ಬೃಹತ್ ಪ್ರಮಾಣದಲ್ಲಿ ಬೆಳೆಯಲು ಬಯಸುವ ಪ್ರತಿಯೊಬ್ಬ ತಯಾರಕರಿಗೂ ಇದು ಕೆಟ್ಟದ್ದಾಗಿತ್ತು. ಆದರೆ, ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಪೂರೈಕೆಯು ತೆರಿಗೆ ವಿಧಿಸಬಲ್ಲ ಕಾರ್ಯಕ್ರಮವಾಗಿರುವುದರಿಂದ ಅದೇ ತಯಾರಕರು ರಾಜ್ಯದೊಳಗೆ 10 ಘಟಕಗಳಿಗೂ ಒಂದೇ ನೋಂದಣಿ ಮಾಡಿಸಬಹುದು. ಹೀಗೆ, ಒಂದೇ ತೆರಿಗೆ ವಿಧಿಸುವ ತಯಾರಕರು ಹಲವು ನೋಂದಣಿಗಳನ್ನು ರಾಜ್ಯದಲ್ಲಿ ಮಾಡುವ ಅವಶ್ಯಕತೆ ಇನ್ನುಮುಂದೆ ಇರುವುದಿಲ್ಲ.

ಆರ್ಥಿಕ ಕಾರಣಗಳಿಂದ ಪೂರೈಕೆ ಸರಣಿಯ ರಚನೆ

ಈಗಿನ ತೆರಿಗೆ ಪದ್ಧತಿಯಲ್ಲಿ, ವ್ಯವಹಾರಗಳು ಮತ್ತು ಪೂರೈಕೆಯ ಸರಣಿಗಳು ತೆರಿಗೆ ಪಾವತಿಸಲು ಅನುಕೂಲವಾಗುವ ರೀತಿಯಲ್ಲಿ ರಚನೆಯಾಗಿದ್ದವು.
ಜಿಎಸ್ಟಿ ತೆರಿಗೆ ಪದ್ಧತಿ ಬಂದಿರುವುದರಿಂದ, ತಯಾರಕರು ಯಾವುದು ಅಗತ್ಯವೆಂದು ತಿಳಿದುಕೊಂಡು ಅದಕ್ಕೆ ಗಮನ ನೀಡಬಹುದು- ವ್ಯವಹಾರದ ದಕ್ಷತೆಯೋ- ಮತ್ತು ದಾಸ್ತಾನುಗಾರದ ತೀರ್ಮಾನವೋ ಇತ್ಯಾದಿಗಳನ್ನು ಆರ್ಥಿಕ ಮತ್ತು ನಿರ್ವಹಣೆ ವೆಚ್ಚವನ್ನು, ಪ್ರದೇಶಗಳ ಪ್ರಯೋಜನ, ಗ್ರಾಹಕರು ಹೆಚ್ಚಿರುವ ಸ್ಥಳಗಳು ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಮಾಡಬಹುದಾಗಿದೆ. ಈಗ ಪೂರೈಕೆದಾರರು ರಾಜ್ಯದೊಳಗಿನ ಸರಕು ಮತ್ತು ಸೇವೆಯ ಪೂರೈಕೆಗೆ ಆದಾನ ತೆರಿಗೆ ಪಾವತಿ ಕೇಳಬಹುದಾಗಿದೆ, ಇದರಿಂದಾಗಿ ಎಲ್ಲಾ ದಾಸ್ತಾನುಗಾರಗಳು ಹೋಗಲಿದೆ- ಇದರಿಂದ ಸಾಕಷ್ಟು ವೆಚ್ಚ ಕಡಿತಗೊಂಡು ಲಾಭವಾಗಲಿದೆ.

ವರ್ಗೀಕರಣ ವಿವಾದಗಳ ಇಳಿಕೆ

ಈಗ ಹಲವು ಉತ್ಪನ್ನಗಳಿಗೆ ವಿವಿಧ ಬಗೆಯ ಅಬಕಾರಿ ಸುಂಕ ಮತ್ತು ಮೌಲ್ಯವರ್ಧಿತ ತೆರಿಗೆ ವಿಧಿಸಲಾಗುತ್ತದೆ, ಇದರೊಂದಿಗೆ ಅಬಕಾರಿ ಮತ್ತು ಮೌಲ್ಯವರ್ಧಿತ ತೆರಿಗೆಯಲ್ಲಿ ವಿವಿಧ ವಿನಾಯಿತಿಗಳನ್ನೂ ನೀಡಲಾಗಿದೆ, ಇದರಿಂದಾಗಿ ಕೇಂದ್ರ ಅಬಕಾರಿ ಮತ್ತು ಮೌಲ್ಯವರ್ಧಿತ ತೆರಿಗೆಯಲ್ಲಿ ವಿವಿಧ ಉತ್ಪನ್ನಗಳ ವರ್ಗೀಕರಣವು ವಿವಾದವನ್ನು ಉಂಟು ಮಾಡುತ್ತದೆ, ಮುಖ್ಯವಾಗಿ ಇದು ತಯಾರಿಕ ವಲಯದಲ್ಲಿ ಉಂಟಾಗುತ್ತದೆ. ಜಿಎಸ್ಟಿ ಅಳವಡಿಕೆಯಿಂದ ಇದು ಸರಳವಾದ ದರ ರಚನೆ ಹೊಂದಿರುವುದರಿಂದ ಮತ್ತು ವಿನಾಯಿತಿಗಳನ್ನು ಕಡಿಮೆ ಮಾಡಿರುವುದರಿಂದ ವರ್ಗೀಕರಣದ ಉತ್ಪನ್ನಗಳ ತೊಂದರೆಗಳನ್ನು ಮತ್ತು ವಿವಾದಗಳನ್ನು ಬಗೆಹರಿಸಲಿದೆ.

No ಅವಳಿ ನಿಯಂತ್ರಣವಿಲ್ಲ

ಈಗಿನ ತೆರಿಗೆ ಪದ್ಧತಿಯಲ್ಲಿ, ಕೇಂದ್ರ ಅಬಕಾರಿ ಮತ್ತು ರಾಜ್ಯದ ಮೌಲ್ಯವರ್ಧೀತ ತೆರಿಗೆಯಿಂದಾಗಿ ತಯಾರಕರು ಅವಳಿ ನಿಯಂತ್ರಣದಲ್ಲಿ ಇರುತ್ತಾರೆ. ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿಯೂ ತಯಾರಕರು ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ಪಾವತಿಸುವ ಬಾಧ್ಯತೆ ಹೊಂದಿರುವುದರಿಂದ ತಯಾರಕರು ಅವಳಿ ನಿಯಂತ್ರಣದಲ್ಲಿ ಇರುತ್ತಾರೆ. ಈ ಅವಳಿ ನಿಯಂತ್ರಣದ ಕುರಿತು ರಾಜ್ಯಗಳು ಮತ್ತು ಕೇಂದ್ರದ ನಡುವೆ ಆಳವಾಗಿ ಚರ್ಚಿಸಲಾಗಿತ್ತು. ಆದರೂ, ಜನವರಿ 2017ರಂದು ಅವಳಿ ನಿಯಂತ್ರಣದ ಕುರಿತು ಸರಕಾರವು ಒಂದು ರಾಜಿಗೆ ಬಂದಿದೆ. ಈ ಪ್ರಕಾರ, ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, 1.5 ಕೋಟಿ ಮತ್ತು ಅದಕ್ಕಿಂತ ಕಡಿಮೆ ವಹಿವಾಟುಗಳಲ್ಲಿ ಶೇಖಡ 90 ಕಡ್ಡಾಯವಾಗಿ ರಾಜ್ಯದ ಪ್ರಾಧಿಕಾರಗಳಿಂದ ಕಡ್ಡಾಯವಾಗಿ ಲೆಕ್ಕಪರಿಶೋಧನೆಗೆ ಮತ್ತು ವ್ಯಾಪ್ತಿಗೆ ಒಳಪಡಬೇಕು, ಉಳಿದ ಶೇಕಡ 10 ಕೇಂದ್ರ ಸರಕಾರಕ್ಕೆ ಸೇರುತ್ತದೆ. ಈ ಮಿತಿಯಿಂದಾಗಿ ಕೇಂದ್ರ ಮತ್ತು ರಾಜ್ಯಗಳು 50:50 ಅನುಪಾತದಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಹೆಜ್ಜೆಯು ಖಂಡಿತವಾಗಿಯೂ ಸಣ್ಣ ವ್ಯಾಪಾರಿಗಳ ಆಸಕ್ತಿಯನ್ನು ದೀರ್ಘಕಾಲ ಕಾಪಾಡುತ್ತದೆ ಮತ್ತು ಜಿಎಸ್ಟಿ ವ್ಯವಹಾರವನ್ನು ಸರಾಗವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಲಿದೆ.
ಒಟ್ಟಾರೆ, ಜಿಎಸ್ಟಿಯು ಹಲವು ರೀತಿಯಲ್ಲಿ ತಯಾರಿಕ ವಲಯಕ್ಕೆ ಒಳ್ಳೆಯದಾಗಿ ಪರಿಣಮಿಸಲಿದೆ, ವ್ಯವಹಾರವನ್ನು ಸರಾಗವಾಗಿ ನಡೆಸಲು ಮತ್ತು ಹಲವು ವಿಭಾಗಗಳಲ್ಲಿ ವೆಚ್ಚ ಕಡಿತ ಮಾಡುವುದರಿಂದ ತಯಾರಕರಿಗೆ ಒಳ್ಳೆಯದೇ ಆಗಲಿದೆ. ಆದರೆ, ಇಷ್ಟೇ ಅಂದುಕೊಂಡಿರ? ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಮ್ಮ ಮುಂದಿನ ಲೇಖನದಲ್ಲಿ ಪಡೆದುಕೊಳ್ಳಲಿದ್ದೀರಿ.

Are you GST ready yet?

Get ready for GST with Tally.ERP 9 Release 6

119,200 total views, 50 views today

Pramit Pratim Ghosh

Author: Pramit Pratim Ghosh

Pramit, who has been with Tally since May 2012, is an integral part of the digital content team. As a member of Tally’s GST centre of excellence, he has written blogs on GST law, impact and opinions - for customer, tax practitioner and student audiences, as well as on generic themes such as - automation, accounting, inventory, business efficiency - for business owners.