ನಮ್ಮ ಹಿಂದಿನ ಲೇಖನದಲ್ಲಿ, ನಾವು ದೇಶಾದ್ಯಂತ ಜಿಎಸ್‍ಟಿಯು ತಯಾರಕರ ಮೇಲೆ ಬೀರುವ ಸಕಾರಾತ್ಮಕ ಪರಿಣಾಮಗಳ ಕುರಿತು ಚರ್ಚಿಸಿದ್ದೇವು. ವ್ಯವಹಾರ ನಡೆಸುವಿಕೆಯಲ್ಲಿ ಸುಲಭಗೊಳ್ಳುವಿಕೆ ಮತ್ತು ವಿವಿಧ ಬಗೆಯಲ್ಲಿ ವೆಚ್ಚ ಕಡಿಮೆಯಾಗುವುದರ ಕುರಿತು ಅಲ್ಲಿ ಮಾಹಿತಿ ನೀಡಲಾಗಿತ್ತು ಆದರೆ, ಜಿಎಸ್‍ಟಿಯಲ್ಲಿ ಅಷ್ಟೇ ಇರುವುದಲ್ಲ. ಇದರ ನಕಾರಾತ್ಮಕ ಪರಿಣಾಮಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

.<!–more–>

ನಕಾರಾತ್ಮಕ ಪರಿಣಾಮ

ಕೆಲಸದ ಬಂಡವಾಳ ಇಳಿಕೆ

ಕೆಲಸದ ಬಂಡವಾಳ ಇಳಿಕೆ

ಈಗಿನ ತೆರಿಗೆ ಪದ್ಧತಿಯಲ್ಲಿ, ದಾಸ್ತಾನು ರವಾನೆಗೆ ತೆರಿಗೆ ವಿಧಿಸಲಾಗುವುದಿಲ್ಲ, ನಮೂನೆ ಎಫ್ ಅನ್ನು ಸಲ್ಲಿಸಬೇಕು. ಖರೀದಿಯ ಮೇಲೆ ಪಾವತಿಸಿದ ಶೇಕಡ 4ಕ್ಕಿಂತ ಅಧಿಕ ತೆರಿಗೆಗೆ ಆದಾನ ವ್ಯಾಟ್ ಪಾವತಿ ದೊರಕುತ್ತದೆ, ಮತ್ತು ಶೇಕಡ 4 ಪಾವತಿಸಿರುವುದು ವಾಪಸ್ ದೊರಕುತ್ತದೆ, ಇದರಿಂದ ಉತ್ಪಾದನಾ ವೆಚ್ಚಕ್ಕೆ ಪ್ರಯೋಜನವಾಗುತ್ತದೆ. ಆದರೂ, ಜಿಎಸ್‍ಟಿ ತೆರಿಗೆ ಪದ್ಧತಿಯಲ್ಲಿ, ದಾಸ್ತಾನು ರವಾನೆಯನ್ನು `ಪೂರೈಕೆ’ ಎಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ಜಿಎಸ್‍ಟಿ ಪಾವತಿಸಬೇಕಾಗುತ್ತದೆ. ಆದರೂ, ಜಿಎಸ್‍ಟಿ ಪಾವತಿಸಿರುವುದು ಕ್ರೆಡಿಟ್ ಆಗಿ ವಾಪಸ್ ದೊರಕುತ್ತದೆಯಲ್ಲವೇ ಎಂದು ಯಾರಾದರೂ ವಾದ ಮಾಡಬಹುದು, ಆದರೆ, ಇದು ಅಂತಿಮವಾಗಿ ಪೂರೈಕೆ ಪೂರ್ಣಗೊಂಡ ನಂತರ ದೊರಕುವುದಾಗಿದೆ. ಇದರಿಂದ ಹಣದ ಹರಿವಿಗೆ ತಡೆ ಉಂಟಾಗುತ್ತದೆ ಮತ್ತು ತಯಾರಕರ ಕೆಲಸದ ಬಂಡವಾಳದ ಮೇಲೆ ಪರಿಣಾಮ ಬೀರುತ್ತದೆ.

Under the GST regime, stock transfers are deemed to be ‘supply’ and are subject to GSTClick To Tweet

ಜಿಎಸ್ಟಿಯಲ್ಲಿ ಪೆಟ್ರೋಲಿಯಂ ಅನ್ನು ಕೈಬಿಟ್ಟಿರುವುದು

5 ಪೆಟ್ರೋಲಿಯಂ ಉತ್ಪನ್ನಗಳನ್ನು- ಕಚ್ಚಾ ಪೆಟ್ರೋಲಿಯಂ, ಹೈಸ್ಪೀಡ್ ಡೀಸೆಲ್, ಮೋಟಾರ್ ಸ್ಪಿರಿಟ್, ನೈಸರ್ಗಿಕ ಅನಿಲ ಮತ್ತು ವೈಮಾನಿಕ ಇಂಧನ-ಜಿಎಸ್‍ಟಿಯಿಂದ ಹೊರಗಿಡಲಾಗಿದೆ. ಅಂದರೆ, ಇದರ ಮೇಲೆ ಕೇಂದ್ರ ಸರಕಾರವು ಅಬಕಾರಿ ಸುಂಕ ವಿಧಿಸುವುದನ್ನು ಮುಂದುವರೆಸಲಿದೆ ಮತ್ತು ರಾಜ್ಯ ಸರಕಾರಗಳು ಮೌಲ್ಯವರ್ಧಿತ ತೆರಿಗೆ ವಿಧಿಸುವುದನ್ನು ಮುಂದುವರೆಸಲಿವೆ. ಆದರೂ, ನಿಜವಾದ ತೊಂದರೆಯು ಭಿನ್ನವಾಗಿದೆ- ಈಗ ಈ ಉತ್ಪನ್ನಗಳಿಗೆ ಪಾವತಿಸಿದ ಅಬಕಾರಿ ಸುಂಕವು ಆದಾನವಾಗಿ ಲಭ್ಯವಿರಲಿದೆ; ಜಿಎಸ್‍ಟಿ ಬಂದ ಬಳಿಕ ಆದಾನ ಪಾವತಿ ಲಭ್ಯವಿರುವುದಿಲ್ಲ. ಈ ಪೆಟ್ರೋಲಿಯಂ ಉತ್ಪನ್ನಗಳು ಸಾಮಾನ್ಯವಾಗಿ ವಿವಿಧ ತಯಾರಿಕಾ ಪ್ರಕ್ರಿಯೆಗಳಲ್ಲಿ, ಉತ್ಪನ್ನಗಳನ್ನು ಸಾಗಿಸುವ ಸಾರಿಗೆ ವ್ಯವಸ್ಥೆಗಳಲ್ಲಿ ವಿವಿಧ ಹಂತಗಳಲ್ಲಿ ಬಳಸಲ್ಪಡುತ್ತದೆ- ಇದರಿಂದ ಬಹುಶಃ ತಯಾರಿಕಾ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ. ಇದು ದೂರಸಂಪರ್ಕ, ರಸಗೊಬ್ಬರ, ವಿದ್ಯುತ್ ಮತ್ತು ಲಾಜಿಸ್ಟಿಕ್ಸ್‍ನಂತಹ ಉದ್ಯಮಗಳಿಗೆ ವಿಶೇಷವಾಗಿ ಹೊಡೆತ ನೀಡಲಿದೆ, ಯಾಕೆಂದರೆ ಇವುಗಳಲ್ಲಿ ಪೆಟ್ರೋಲಿಯಂ ಪ್ರಮುಖ ಪಾತ್ರ ವಹಿಸುತ್ತದೆ. ಪರಿಷತ್‍ನ ಶಿಫಾರಸ್ಸಿನ ಮೇರೆಗೆ ಮುಂದಿನ ದಿನಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸರಕಾರವು ಜಿಎಸ್‍ಟಿ ವಿಧಿಸುವ ಸಾಧ್ಯತೆಯಿದೆ.

ವಿನಾಯತಿಗೆ ವಹಿವಾಟು ಮಿತಿ ಕಡಿಮೆಯಾಗಿರುವುದು

ಈಗಿನ ತೆರಿಗೆ ಪದ್ಧತಿಯಲ್ಲಿ, ಬಹುತೇಕ ರಾಜ್ಯಗಳಲ್ಲಿ ಮೌಲ್ಯವರ್ಧಿತ ತೆರಿಗೆ ಪಾವತಿಸಲು ವಹಿವಾಟು ಮಿತಿಯು 5-10 ಲಕ್ಷ ರೂಪಾಯಿಯಲ್ಲಿದೆ; ತಯಾರಿಕಾ ಘಟಕವು 1.5 ಕೋಟಿ ಮತ್ತು ಅದಕ್ಕಿಂತ ಹೆಚ್ಚು ವಹಿವಾಟು ಹೊಂದಿದ್ದರೆ ಅಬಕಾರಿ ಸುಂಕ ಪಾವತಿಸಬೇಕು, 10 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ತೆರಿಗೆ ವಿಧಿಸಬಲ್ಲ ಸೇವೆ ಒದಗಿಸಿದರೆ ಸೇವಾ ತೆರಿಗೆ ಪಾವತಿಸಬೇಕು. ಆದರೆ, ಜಿಎಸ್‍ಟಿ ತೆರಿಗೆ ಪದ್ಧತಿಯಲ್ಲಿ, ವಿಶೇಷ ವಿಭಾಗದ ರಾಜ್ಯಗಳಿಗೆ ವಹಿವಾಟಿನ ಗರಿಷ್ಠ ಮಿತಿ 10 ಲಕ್ಷ ರೂಪಾಯಿ ಮತ್ತು ದೇಶದ ಉಳಿದ ಎಲ್ಲಾ ರಾಜ್ಯಗಳಿಗೆ ಈ ಮಿತಿಯು 20 ಲಕ್ಷ ರೂಪಾಯಿ ಆಗಿದೆ- ಇದರಿಂದಾಗಿ ಇಲ್ಲಿಯವರೆಗೆ ತೆರಿಗೆ ವಿನಾಯಿತಿಯನ್ನು ಸಂತೋಷದಿಂದ ಆನಂದಿಸುತ್ತಿದ್ದ ಬೃಹತ್ ಸಂಖ್ಯೆಯ ತಯಾರಕರನ್ನು ತೆರಿಗೆಯೊಳಗೆ ತರುತ್ತದೆ. ಈ ಹಿಂದೆ ನೋಂದಾಯಿಸದೆ ಇದ್ದ ಮಧ್ಯವರ್ತಿಗಳು, ಜಿಎಸ್‍ಟಿಯಡಿಯಲ್ಲಿ ನೋಂದಾಯಿಸಿಕೊಳ್ಳಬೇಕು, ಇದರಿಂದ ಇವರಿಗೆ ವ್ಯವಹಾರದಲ್ಲಿ ಬೃಹತ್ ಅವಕಾಶ ದೊರಕಲಿದೆ, ಯಾಕೆಂದರೆ ಅವರು ನೋಂದಾಯಿಸಿರುವ ಬೃಹತ್ ಜಾಲದೊಳಗೆ ಬರುತ್ತಾರೆ.

GST will bring a huge number of manufacturers who were enjoying exemptions earlier into the taxable bracket.Click To Tweet

ಇರಬೇಕೆ ಅಥವಾ ಇರಬಾರದೆ?

ತಯಾರಕರ ಮೇಲೆ ಜಿಎಸ್‍ಟಿಯ ಹಲವು ಅಂಶಗಳು ನೇರವಾಗಿ ಸಕಾರಾತ್ಮಕ ಅಥವಾ ನಕಾರಾತ್ಮಕ ಪರಿಣಾಮ ಬೀರುತ್ತದೆ, ಕೆಲವೊಂದು ಸನ್ನಿವೇಶಗಳಲ್ಲಿ ಇದರಲ್ಲಿ ಸರಿಯಾದ ಉತ್ತರ ದೊರಕುವುದಿಲ್ಲ, ಮತ್ತು ಇದು ಊಹಾಪೆÇೀಹಗಳಿಗೆ ಉತ್ತಮವಾಗಿದೆ. ಜಿಎಸ್‍ಟಿ ಪರಿಚಯಿಸುವುದರಿಂದ ತಯಾರಕರು ಲಾಭ ಗಳಿಸುವ ಅಥವಾ ನಷ್ಟಗಳಿಸುವ ಸಾಧ್ಯತೆಯಿದೆ ಮತ್ತು ಅದು ಅವರ ನಿಲುವಿಗೆ ತಕ್ಕಂತೆ ಇರುತ್ತದೆ.

ರಾಜ್ಯಗಳ ಪ್ರೋತ್ಸಾಹಕಗಳು

ಈಗಿನ ತೆರಿಗೆ ಪದ್ಧತಿಯಲ್ಲಿ,  ಕೆಲವು ಸಂದರ್ಭಗಳಲ್ಲಿ ಆಯಾ ರಾಜ್ಯಗಳು ನೀಡಿರುವ ತಮ್ಮ ಹೂಡಿಕೆಯ ಉತ್ತೇಜನ ನೀತಿಗಳಿಂದಾಗಿ ನೀಡಿರುವ ಪ್ರೋತ್ಸಾಹದ ಆಧಾರದಲ್ಲಿ  ಕಂಪನಿಗಳು  ಘಟಕಗಳನ್ನು ಸ್ಥಾಪಿಸಿರುತ್ತವೆ. ಪ್ರಮುಖವಾಗಿ ಈ ಪ್ರೋತ್ಸಾಹಕಗಳು ಎರಡು ಬಗೆಯಲ್ಲಿರುತ್ತವೆ- ಸುಂಕದ ಪ್ರೋತ್ಸಾಹ (ಕಡಿಮೆ ತೆರಿಗೆ ದರಗಳು, ತೆರಿಗೆ ಮರುಪಾವತಿ/ಮುಂದೂಡಿಕೆ ಇತ್ಯಾದಿ) ಮತ್ತು ಸುಂಕವಲ್ಲದ ಪ್ರೋತ್ಸಾಹಕಗಳು (ಕಡಿಮೆ ದರದಲ್ಲಿ ಭೂಮಿಯನ್ನು ಭೋಗ್ಯಕ್ಕೆ ನೀಡುವುದು, ಕಡಿಮೆ ವಿದ್ಯುತ್ ಶುಲ್ಕ ಇತ್ಯಾದಿಗಳು). ಈಗ ರಾಜ್ಯಗಳು ಇಂತಹ ಪ್ರೋತ್ಸಾಹಕಗಳ ವಿಷಯಗಳಿಗೆ ನಮ್ಯತೆ ಅಥವಾ ಹೊಂದಿಕೊಂಡಿವೆ, ಆದರೆ, ಜಿಎಸ್‍ಟಿ ತೆರಿಗೆ ಪದ್ಧತಿಯಲ್ಲಿ, ಇಂತಹ ಎಲ್ಲಾ ಪ್ರೋತ್ಸಾಹಕಗಳು ಎಲ್ಲಾ ರಾಜ್ಯಗಳಲ್ಲಿಯೂ ಏಕೀಕೃತ ಅಥವಾ ಒಂದೇ ರೀತಿ ಇರಬೇಕಿದೆ. ಜಿಎಸ್‍ಟಿ ಕಾನೂನು ರಾಜ್ಯಗಳಿಗೆ ಅಲ್ಲವಾದರೂ, ಈಗಿರುವ ಪ್ರೋತ್ಸಾಹಕಗಳ ಮರುಮಾಪನ ಮಾಡಬೇಕಿದೆ- ಹೀಗಾಗಿ ತಯಾರಿಕರಿಗೆ ಎಲ್ಲಾ ರಾಜ್ಯಗಳು ಮತ್ತೊಂದರಂತೆ ಅತ್ಯುತ್ತಮವೆನಿಸಲಿವೆ.

ಮತ್ತೊಂದು ಪ್ರಮುಖ ಬದಲಾವಣೆಯೆಂದರೆ, ಜಿಎಸ್ಟಿಯು ಅನುಭೋಗಿ ಆಧಾರದ ತೆರಿಗೆಯಾಗಿದೆ, ಮತ್ತು ಅನುಭೋಗ ಹೆಚ್ಚಿರುವ ರಾಜ್ಯವು ಹೆಚ್ಚು ಲಾಭ ಪಡೆಯುತ್ತದೆ. ಹೀಗಾಗಿ, ಉತ್ಪಾದಕರ ರಾಜ್ಯವು, ಅನುಭೋಗಿ ರಾಜ್ಯಕ್ಕೆ ಹೋಲಿಸಿದರೆ ಕಡಿಮೆ ಹಣಕಾಸು ಪ್ರೋತ್ಸಾಹಕಗಳನ್ನು ಹೊಂದಿರಬಹುದು. ಹೀಗಾಗಿ, ಎಲ್ಲಾ ಪ್ರೋತ್ಸಾಹಕಗಳು ಮುಂದಕ್ಕೆ ಹೋಗುವುದನ್ನು ಸುಂಕರಹಿತವಾಗಿ ಮಾಡುವ ಮೂಲಕ ಸುರಕ್ಷಿತವಾಗಿ ಮುಂದಡಿ ಇಡಬೇಕಾಗಿದೆ.

ಪ್ರದೇಶ ಆಧಾರಿತ ವಿನಾಯಿತಿ

ಕೆಲವೊಂದು ತಯಾರಿಕಾ ಘಟಕಗಳು ಕೆಲವೊಂದು ಪ್ರದೇಶಗಳಲ್ಲಿ ನೀಡಲಾದ ವಿನಾಯಿತಿಯನ್ನು ಆನಂದಿಸಲಿವೆ, ಉದಾಹರಣೆಗೆ, ವಿಶೇಷವಾಗಿ ಹಿಂದುಳಿತ ಪ್ರದೇಶಗಳು, ಈಶಾನ್ಯ, ಮತ್ತು ಗುಡ್ಡಗಾಡು ಪ್ರದೇಶಗಳು. ಇಂತಹ ಪ್ರದೇಶವಾರು ವಿನಾಯಿತಿ ಕುರಿತು ಜಿಎಸ್ಟಿ ಕಾನೂನು ಸರಿಯಾಗಿ ಯಾವುದೇ ಸ್ಪಷ್ಟತೆಯನ್ನು ಒದಗಿಸಿಲ್ಲ- ಆದರೆ ಜಿಎಸ್ಟಿಯ ಉದ್ದೇಶವು ಜಿಎಸ್ಟಿಯಿಂದ ಏಕೀಕೃತ ಮಾರುಕಟ್ಟೆಯಾಗಿ ದೇಶವನ್ನು ರೂಪಿಸುವುದಾಗಿದೆ,  ಹೀಗಾಗಿ ಬಹುತೇಕ ವಿನಾಯಿತಿಗಳನ್ನು ತೆಗೆದುಹಾಕುವ ನಿರೀಕ್ಷೆಯಿದೆ ಮತ್ತು ಕೆಲವೊಂದು ಮರುಪಾವತಿ ರೂಪದಲ್ಲಿ ಉಳಿಯಬಹುದಾಗಿದೆ. ಕಂಪನಿಗಳು ಯಾವಾಗಲೂ ಸರಕಾರದ ಮುಂದೆ ಸಮರ್ಪಕ ಬಳಕೆಗಾಗಿ ಹೋರಾಡಲಿವೆ, ಅವರಿಗೆ ಜಿಎಸ್ಟಿಯು ಆಗಮಿಸಿದ ಬಳಿಕ ತಕ್ಷಣ ನಷ್ಟದ ಅನುಭವವಾಗಲಿದೆ.

ಇ-ಹಾದಿ ಬೆಲೆಪಟ್ಟಿ

ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರಹ್ಮಣಿಯನ್ ಅವರು ನೀಡಿರುವ ಆದಾಯ ತಟಸ್ಥ ದರ ವರದಿ ಪ್ರಕಾರ- ಟ್ರಕ್ ಗಳು ಅಮೆರಿಕದ ಪ್ರತಿದಿನದ 800 ಕಿ.ಮೀ.ಗೆ ಹೋಲಿಸಿದರೆ ದೇಶದಲ್ಲಿ ಪ್ರತಿದಿನ ಸರಾಸರಿ 280 ಕಿ.ಮೀ. ದೂರ ಸಾಗುತ್ತವೆ. ಇದಕ್ಕೆ ಕಾರಣವೇನು?- ನಮ್ಮೆಲ್ಲ ರಾಜ್ಯಗಳ ಗಡಿಗಳಲ್ಲಿರುವ ಸುಂಕ ಪರಿಶೀಲನೆ ಠಾಣೆಗಳು ಅಮೂಲ್ಯ ಸಮಯವನ್ನು ಸರಕುಗಳನ್ನು ಪರಿಶೀಲನೆ ಮಾಡುವ ಮೂಲಕ  ಮತ್ತು ಸಂಬಂಧಪಟ್ಟ ತೆರಿಗೆ ಅನುಸರಣೆಗಳನ್ನ, ದಾರಿಯ ಬೆಲೆಪಟ್ಟಿ, ಪ್ರವೇಶ ಪರವಾನಿಗೆ ಇತ್ಯಾದಿಗಳನ್ನು ಅವಲೋಕಿಸುವ ಮೂಲಕ ಕಳೆಯುತ್ತವೆ.  ಇದು ದೇಶದ ತಯಾರಕರ ದಕ್ಷತೆಯನ್ನು ಕಡಿಮೆ ಮಾಡುತ್ತದೆ.

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ- ವಹಿವಾಟು ಎಲ್ಲೆಗಳು ಕಡಿಮೆ ಇರುತ್ತವೆ, ಯಾಕೆಂದರೆ ಅವೆಲ್ಲವೂ ಜಿಎಸ್ಟಿಯೊಳಗೆ ಸೇರ್ಪಡೆಗೊಂಡಿರುತ್ತವೆ, ಇದರಿಂದಾಗಿ ಅನುಷ್ಠಾನವು ಸುಲಭವಾಗಿರುತ್ತದೆ.  ಜಿಎಸ್ಟಿ ತೆರಿಗೆ ಪದ್ಧತಿಯಡಿಯಲ್ಲಿ ನೋಂದಾಯಿತ ವ್ಯಕ್ತಿಯು 50,000 ರೂ.ಗಿಂತ ಹೆಚ್ಚು ಮೌಲ್ಯದ ಸರಕನ್ನು ಸಾಗಿಸಬೇಕಿದ್ದಲ್ಲಿ ಇ-ವೇ ಬಿಲ್ ಅನ್ನು ಸಿದ್ಧಪಡಿಸಬೇಕು. ಇದು ದೇಶದ ಎಲ್ಲಾ ಮಾರುಕಟ್ಟೆಗಳಲ್ಲಿಯೂ ಒಂದೇ ರೀತಿ ಇರುವುದರಿಂದ ಒಟ್ಟಾರೆ ಪ್ರಕ್ರಿಯೆಯು ತೊಡಕಿನಿಂದ ಕೂಡಿದ್ದರೂ ಸರಕುಗಳು ಸರಾಗವಾಗಿ ಹೋಗಲು ಸಾಧ್ಯವಾಗಿಸುತ್ತದೆ.  ಇದು ಪೂರೈಕೆದಾರರ, ಸಾರಿಗೆದಾರರ ಮತ್ತು ಸ್ವೀಕೃತಿದಾರರದ್ದೂ ಸಹ – ಇವರು ಇ-ಹಾದಿ ಬೆಲೆಪಟ್ಟಿಯಲ್ಲಿ ನಮೋದಿಸಿದ ವಿಷಯವನ್ನು ಒಪ್ಪುವ ಅಥವಾ ನಿರಾಕರಿಸುವ ಹಕ್ಕು ಹೊಂದಿರುತ್ತಾರೆ- ಪಾಲ್ಗೊಳ್ಳುವಿಕೆಯನ್ನು ಬಯಸುತ್ತದೆ. ಹೀಗಾಗಿ, ಅನುಸರಣೆ ಮತ್ತು ಸಂಬಂಧಪಟ್ಟ ತಂತ್ರಜ್ಞಾನ ಅಳವಡಿಕೆ ವೆಚ್ಚದಿಂದಾಗಿ ಕಡಿಮೆ ದಾಸ್ತಾನು ವೆಚ್ಚದ ಗುಣದಿಂದ ಸೃಷ್ಟಿಯಾಗುವ ನ್ಯಾಯೋಚಿತ ಅವಕಾಶವು  ಕರಗಿ ಹೋಗುವ ಸಾಧ್ಯತೆ ಇರುತ್ತದೆ. ಆದರೂ, ಒಮ್ಮೆ ಆರಂಭಿಕ ತಡೆಯನ್ನು ದಾಟಿದ ನಂತರ ಮತ್ತು ಅತ್ಯುತ್ತಮ ತಂತ್ರಜ್ಞಾನವನ್ನು ಅಳವಡಿಸಿದ ಬಳಿಕ, ಈಗಿನ ಲಾಜಿಸ್ಟಿಕ್ ತೊಡಕುಗಳು ಕೆಲವು ದಿನಗಳಲ್ಲಿ ಸರಿಯಾಗುವ ನಿರೀಕ್ಷೆಯಿದೆ.

ಕೊನೆಯದಾಗಿ, ನಕಾರಾತ್ಮಕ ಅಂಶಗಳಿಗಿಂತ ಸಕಾರಾತ್ಮಕ ಅಂಶಗಳ ತೂಕ ಹೆಚ್ಚಿರುವುದರಿಂದ, ಜಿಎಸ್ಟಿಯು ತಯಾರಿಕಾ ವಲಯಕ್ಕೆ ಅನುಕೂಲವಾಗಿದೆ ಎಂದು ಸುರಕ್ಷಿತವಾಗಿ ಹೇಳಬಹುದಾಗಿದೆ.  ಇದರ ಹೆಚ್ಚಿನ ಪ್ರಯೋಜನಗಳು ತಕ್ಷಣದ್ದಾಗಿದ್ದು, ಮತ್ತು ಕೆಲವು ಪ್ರಯೋಜನಗಳು ದೀರ್ಘಕಾಲಿನದ್ದಾಗಿವೆ. ಆದರೂ, ತಾತ್ಕಾಲಿಕ ಅವಧಿಗೆ ಕೆಲವೊಂದು ಅಂಶಗಳು ಸವಾಲಾಗಿ ಪರಿಣಮಿಸಲಿವೆ, ದೊಡ್ಡ ಮಟ್ಟದ ಬದಲಾವಣೆಗೆ ಸಜ್ಜಾದಾಗ ಮತ್ತು ಅತ್ಯುತ್ತಮ ಸಮಯವು ಬರುತ್ತಿರುವಾಗ ಇದು ಸಹಜವಾಗಿ ಆಗುವಂತ್ತದ್ದೇ ಆಗಿರುತ್ತದೆ. ಮತ್ತು ಈ ಎಲ್ಲಾ ಪ್ರಯತ್ನಗಳ ಹಿಂದಿರುವುದು ’’ಭಾರತದಲ್ಲೇ ತಯಾರಿಸಿ!’’ ಆಗಿರುತ್ತದೆ.

Are you GST ready yet?

Get ready for GST with Tally.ERP 9 Release 6

94,481 total views, 9 views today

Pramit Pratim Ghosh

Author: Pramit Pratim Ghosh

Pramit, who has been with Tally since May 2012, is an integral part of the digital content team. As a member of Tally’s GST centre of excellence, he has written blogs on GST law, impact and opinions - for customer, tax practitioner and student audiences, as well as on generic themes such as - automation, accounting, inventory, business efficiency - for business owners.