ಪ್ರತಿದಿನ ವ್ಯವಹಾರ ಸುಸೂತ್ರವಾಗಿ ನಡೆದುಕೊಂಡು ಹೋಗಲು ವ್ಯವಹಾರಗಳಿಗೆ ಉದ್ಯೋಗ ಬಂಡವಾಳವು ಜೀವಸೆಲೆಯಾಗಿದೆ. ಸಣ್ಣ ಮತ್ತು ಬೃಹತ್ ವಹಿವಾಟುಗಳಿಗೆ ಕೆಲಸಗಾರರ ದಕ್ಷತೆಯನ್ನು ನಿರ್ವಹಿಸುವುದು ಅತ್ಯಂತ ಪ್ರಮುಖ ತೊಂದರೆಯಾಗಿದೆ. ಉದ್ಯೋಗ ಬಂಡವಾಳವನ್ನು ನಿರ್ವಹಿಸಲು ಸಾಧ್ಯವಾಗದೆ ಇದ್ದರೆ ವ್ಯವಹಾರ ಮುಚ್ಚುವುದು ಸೇರುವುದಂತೆ ಹಲವು ಕೆಟ್ಟ ಪರಿಣಾಮಗಳು ಎದುರಾಗಬಹುದು.
ಜಿಎಸ್ಟಿಯು ಸಮಗ್ರ ಪರೋಕ್ಷ ತೆರಿಗೆ ವ್ಯವಸ್ಥೆಯಾಗಿದ್ದು, ಇದನ್ನು ಪರಿಚಯಿಸಲು ಕೆಲವೇ ದಿನಗಳು ಬಾಕಿ ಉಳಿದಿವೆ. ವಿವಿಧ ಪ್ರತಿನಿತ್ಯದ ವ್ಯವಹಾರಗಳಲ್ಲಿ ಜಿಎಸ್ಟಿ ಅಳವಡಿಕೆ ಕುರಿತು ಅರ್ಥಮಾಡಿಕೊಳ್ಳುವುದು ವ್ಯವಹಾರಗಳಿಗೆ ಅಗತ್ಯವಾಗಿದೆ.

ಎಸ್ಎಂಇಗಳ ಉದ್ಯೋಗ ಬಂಡವಾಳದ ಮೇಲೆ ಜಿಎಸ್ಟಿ ಪರಿಣಾಮವನ್ನು ನಾವು ಅವಲೋಕಿಸೋಣ ಮತ್ತು ನಿಮ್ಮ ಅನುಕೂಲಕ್ಕೆ ಜಿಎಸ್ಟಿಯನ್ನು ಹೇಗೆ ಬಳಸಿಕೊಳ್ಳಬಹುದೆಂದು ತಿಳಿದುಕೊಳ್ಳೋಣ.

ಇನ್ಪುಟ್ ತೆರಿಗೆ ಕ್ರೆಡಿಟ್ ನ ಪರಿಕಲ್ಪನೆಯಾಗಿರುವ “ವ್ಯಾಪಾರದ ಮುಂದುವರಿಕೆ’’ ಪೀಠಿಕೆ

ಈಗಿನ ತೆರಿಗೆ ಪದ್ಧತಿಯಲ್ಲಿ, ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕೇವಲ ನಿಮ್ಮ ತೆರಿಗೆ ವಿಧಿಸಬಹುದಾದ ಔಟ್ ಪುಟ್ ಗಳಿಗೆ ಮಾತ್ರ ಬಳಕೆಯಾಗುತ್ತದೆ ಅಥವಾ ಕೊಂಡಿಯಾಗಿದೆ. ಉದಾಹರಣೆಗೆ, ವ್ಯಾಪಾರಿಯೊಬ್ಬರು ಸರಕು ಖರೀದಿಗೆ ಇನ್ಪುಟ್ ವ್ಯಾಟ್ ಪಾವತಿ ಮಾಡಿದ್ದರೆ ತೆರಿಗೆ ವಿಧಿಸಬಲ್ಲ ಮಾರಾಟ ಮಾಡಿದರೆ ಮಾತ್ರ ಕ್ರೆಡಿಟ್ ಪಡೆಯಬಹುದಾಗಿದೆ. ಆದರೂ, ಇದಕ್ಕಿಂತ ಹೆಚ್ಚಾಗಿ ಯಾವುದೇ ವ್ಯವಹಾರ ತೆರಿಗೆ ಪಾವತಿಸಿದ್ದರೆ ಕ್ರೆಡಿಟ್ ಪಡೆಯಲು ಅವಕಾಶವಿಲ್ಲ. ಉದಾಹರಣೆಗೆ, ವ್ಯವಹಾರದ ಉದ್ದೇಶಕ್ಕಾಗಿ ವ್ಯಾಪಾರಿಯು ಜಾಹೀರಾತು ಸೇವೆಗೆ ತೆರಿಗೆ ಪಾವತಿ ಮಾಡಿದ್ದರೆ ಅದನ್ನು ಕ್ರೆಡಿಟ್ ಆಗಿ ವಾಪಸ್ ಪಡೆಯಲು ಸಾಧ್ಯವಿಲ್ಲ ಮತ್ತು ಅದನ್ನು ವ್ಯಾಪಾರದ ವೆಚ್ಚವೆಂದು ಪರಿಗಣಿಸಲಾಗುತ್ತದೆ.

ಜಿಎಸ್ಟಿಯಲ್ಲಿ”ವ್ಯಾಪಾರದ ಉದ್ದೇಶದಿಂದ ಅಥವಾ ವ್ಯಾಪಾರದ ಮುಂದುವರಿಕೆಗೆ ಬಳಕೆ ಮಾಡಲಾಗಿದೆ ಅಥವಾ ಲಿಂಕ್ ಮಾಡಲಾಗಿದೆ’’ ಎಂದುಕೊಂಡು ಯಾವುದೇ ಇನ್ಪುಟ್ ಅಥವಾ ಸೇವೆಯನ್ನು ಪರಿಗಣಿಸಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪರಿಕಲ್ಪನೆಯನ್ನು ಹಿಗ್ಗಿಸಲಾಗಿದೆ . ಹೀಗಾಗಿ, ಈಗಿನ ತೆರಿಗೆ ಪದ್ಧತಿಯಲ್ಲಿ ಇನ್ಪುಟ್ ಮತ್ತು ಔಟ್ ಪುಟ್ ಸೇವೆಗಳಿಗೆ ನಿಮ್ಮ ತೆರಿಗೆ ವಿಧಿಸಬಲ್ಲ ಔಟ್ ಪುಟ್ ಕೇಳಲು ಮಾತ್ರ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನುಮತಿ ನೀಡಲಾಗಿದೆ. ಮೇಲಿನ ಉದಾಹರಣೆಯಲ್ಲಿ ವ್ಯಾಪಾರಿಯೊಬ್ಬರು ಜಾಹೀರಾತು ಸೇವೆಗಾಗಿಯೂ ತೆರಿಗೆ ಪಾವತಿಸಿರುವುದಕ್ಕೆ ಕ್ರೆಡಿಟ್ ಕೇಳಬಹುದಾಗಿದೆ.
ಕೆಲಸದ ಲೆಕ್ಕಾಚಾರದಲ್ಲಿ ಇದನ್ನು ಇನ್ನಷ್ಟು ಅರ್ಥಮಾಡಿಕೊಳ್ಳೋಣ.

ವಿಷಯ ಈಗಿನ ತೆರಿಗೆ ಪದ್ಧತಿ ಜಿಎಸ್ಟಿ
ನಿವ್ವಳ ಲಾಭ10,00,00010,00,000
ಪರೋಕ್ಷ ವೆಚ್ಚ
ರಿಪೇರಿ ಮತ್ತು ನಿರ್ವಹಣೆ*1,15,0001,00,000
ಜಾಹೀರಾತು ವೆಚ್ಚ*#1,15,0001,00,000
ಪ್ರಿಂಟಿಂಗ್ ಮತ್ತು ಸ್ಟೆಷನರಿ**1,15,0003,45,0001,00,0003,00,000
ನಿವ್ವಳ ಲಾಭ 6,55,0007,00,000
ಶೇಕಡವಾರು ಹೆಚ್ಚಿಸಿದ ಲಾಭ 7%

(*ಈಗಿನ ತೆರಿಗೆ ಪದ್ಧತಿಯಲ್ಲಿ ಶೇಕಡ 15 ತೆರಿಗೆ ದರವನ್ನು ಪರಿಗಣಿಸಲಾಗಿದೆ.. #ಜಿಎಸ್ಟಿಯಡಿ ಶೇಕಡ 18 ತೆರಿಗೆ ದರ ಪರಿಗಣಿಸಲಾಗಿದೆ – **ಜಿಎಸ್ಟಿ ದರ @ 12%)

ನೀವು ಅವಲೋಕಿಸಿದರೆ, ಈಗಿನ ತೆರಿಗೆ ಪದ್ಧತಿಯಲ್ಲಿ ತೆರಿಗೆ ಸೇರಿದಂತೆ ವ್ಯಾಪಾರದ ವೆಚ್ಚವನ್ನು ಲಾಭ ಮತ್ತು ನಷ್ಟದ ಖಾತೆಗೆ ಹಾಕಲಾಗುತ್ತದೆ. ವ್ಯವಹಾರ ಓವರ್ ಹೆಡ್ಸ್ ಗೆ ಇನ್ಪುಟ್ ತೆರಿಗೆ ಕ್ರೆಡಿಟ್ ಸೌಲಭ್ಯ ಪಡೆಯಲು ಅವಕಾಶ ನೀಡಲಾಗುವುದಿಲ್ಲ. ಸಾಮಾನ್ಯವಾಗಿ, ಯಾರ ಇನ್ಪುಟ್ ಸೇವೆ ಅಥವಾ ಸರಕು ನೇರವಾಗಿ ತೆರಿಗೆ ವಿಧಿಸಬಲ್ಲ ಔಟ್ ಪುಟ್ ಗೆ ಸಂಪರ್ಕಗೊಂಡಿರುತ್ತದೆಯೇ ಅವರಿಗೆ ಮಾತ್ರ ಇನ್ಪುಟ್ ತೆರಿಗೆ ಕ್ರೆಡಿಟ್ ಪಡೆಯಲು ಅವಕಾಶ ನೀಡಲಾಗುತ್ತದೆ.

ಜಿಎಎಸ್ಟಿಯಡಿಯಲ್ಲಿ,”ವ್ಯಾಪಾರದ ಉದ್ದೇಶದಿಂದ ಅಥವಾ ವ್ಯಾಪಾರದ ಮುಂದುವರಿಕೆಗೆ ಬಳಕೆ ಮಾಡಲಾಗಿದೆ ಅಥವಾ ಸಂಪರ್ಕ ಮಾಡಲಾಗಿದೆ’’ ಎಂದುಕೊಂಡು ಯಾವುದೇ ಇನ್ಪುಟ್ ಅಥವಾ ಸೇವೆಯನ್ನು ಪರಿಗಣಿಸಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕೇಳಲು ಅನುಮತಿ ನೀಡಲಾಗಿದೆ. ಇದರ ಫಲಿತಾಂಶವಾಗಿ, ಮೇಲಿನ ಕೋಷ್ಠಕದಲ್ಲಿ ತೆರಿಗೆ ಹೊರತುಪಡಿಸಿದ ನಿಜವಾದ ವೆಚ್ಚವನ್ನು ಲಾಭ ಮತ್ತು ನಷ್ಟದ ಖಾತೆಗೆ ಹಾಕಲಾಗಿರುತ್ತದೆ.

“ವ್ಯವಹಾರದ ಮುಂದುವರಿಕೆಗೆ’’ ಎಂಬ ಈ ಪರಿಕಲ್ಪನೆಯು ನಿಮ್ಮ ವ್ಯವಹಾರ ನಿರ್ವಹಣೆಯ ವೆಚ್ಚವನ್ನು ತಗ್ಗಿಸುತ್ತದೆ ಮತ್ತು ನೇರವಾಗಿ ನಿವ್ವಳ ಲಾಭವನ್ನು ಹೆಚ್ಚಿಸುತ್ತದೆ, ಈ ಮೂಲಕ ನಿಮ್ಮ ಉದ್ಯೋಗ ಬಂಡವಾಳವನ್ನು ಬಲಪಡಿಸಿಕೊಳ್ಳಬಹುದಾಗಿದೆ.

ಇದನ್ನು ಹತೋಟಿಯಲ್ಲಿಟ್ಟುಕೊಳ್ಳುವ ಉದ್ದೇಶದಿಂದ ವ್ಯವಹಾರಗಳು ನೋಂದಾಯಿತ ವ್ಯವಹಾರಗಳಿಂದ ಸರಕು ಅಥವಾ ಸೇವೆಯನ್ನು ಪಡೆಯಬೇಕು ಮತ್ತು ವ್ಯವಹಾರ ಓವರ್ ಹೆಡ್ಸ್ ಗೆ ತೆರಿಗೆಯ ಮೊತ್ತವನ್ನು ಪಾವತಿಸಬೇಕು.

ಇನ್ಪುಟ್ ತೆರಿಗೆ ಕ್ರೆಡಿಟ್ ನ ಪರಿಣಾಮಗಳೇನು?

ಈಗಿನ ತೆರಿಗೆ ಪದ್ಧತಿಯಲ್ಲಿ, ಪೂರೈಕೆದಾರರ ತೆರಿಗೆ ಬಾಧ್ಯತೆಯ “ನಿಜವಾದ ಸಮಯ’’ಕ್ಕೆ ಅಂಗೀಕಾರ ದೊರಕಿದ ನಂತರ ಇನ್ಪುಟ್ ಕ್ರೆಡಿಟ್ ಮೊತ್ತವನ್ನು ಪಡೆಯುವುದನ್ನು ಅವಲಂಬಿಸಬೇಕಿಲ್ಲ.
ಆದರೆ, ಜಿಎಸ್ಟಿಯನ್ವಯ ಇನ್ಪುಟ್ ತೆರಿಗೆ ಪಾವತಿಯು ಪೂರೈಕೆದಾರರ ಅನುಸರಣೆಯನ್ನು ಅವಲಂಬಿಸಿರುತ್ತದೆ. ಅಂದರೆ, ನಿಮ್ಮ ಪೂರೈಕೆದಾರು ತೆರಿಗೆ ಪಾವತಿಯ ಜೊತೆಗೆ ಬಾಹ್ಯಾ ಪೂರೈಕೆಯನ್ನು ಘೋಷಿಸಿ ರಿಟರ್ನ್ ಸಲ್ಲಿಸಬೇಕು.

ಎಲ್ಲಾದರೂ ನಿಮ್ಮ ಪೂರೈಕೆದಾರರು ಇದನ್ನು ಪೂರೈಸದೆ ಇದ್ದರೆ, ಇದು ನಿಮ್ಮ ಹಣದ ಹರಿವಿಗೆ ದೊಡ್ಡ ಹೊಡೆತ ನೀಡಬಹುದು. ಕೆಲವೊಂದು ಕಾರಣಗಳಿಂದ, ನಿಮ್ಮ ಪೂರೈಕೆದಾರರು ಸಮರ್ಪಕ ರಿಟರ್ನ್ ಸಲ್ಲಿಸಲು ವಿಫಲವಾದರೆ, ನೀವು ಸಲ್ಲಿಸಿದ ಇನ್ಪುಟ್ ತೆರಿಗೆ ಕ್ರೆಡಿಟ್ ನಿಮಗೆ ತಿರುಗುಬಾಣವಾಗಬಹುದು ಮತ್ತು ನೀವೇ ಬಡ್ಡಿದರದೊಂದಿಗೆ ಇನ್ಪುಟ್ ಮೊತ್ತವನ್ನು ಮರುಪಾವತಿ ಮಾಡಬೇಕಾಗಬಹುದು. ಇದು ನಿಮ್ಮ ವ್ಯವಹಾರಕ್ಕೆ ಎರಡು ಹೊಡೆತ ನೀಡಬಹುದು:
• ನೀವು ಈಗಾಗಲೇ ಪೂರೈಕೆದಾರರಿಗೆ ಪಾವತಿಸಿರುವ ಮೊತ್ತ..
• ಐಟಿಸಿ ಕೇಳಿದ್ದು ವಾಪಸ್ ಬಂದರೆ, ನೀವು ಬಡ್ಡಿದರದೊಂದಿಗೆ ನೀವು ಪಾವತಿಸಬೇಕು.
ಆದರೂ, ಇದರಲ್ಲಿಯೂ ಕೊಂಚ ಉಸಿರಾಡಲು ಸಮಯವಿದೆ. ಐಟಿಸಿ ಕ್ಲೇಮ್ ಮಾಡಿರುವುದನ್ನು ಸಾಬೀತುಪಡಿಸಲು ನಿಮಗೆ 2 ತಿಂಗಳ ಕಾಲಾವಕಾಶ ನೀಡಲಾಗಿರುತ್ತದೆ.

ಹೀಗಾಗಿ, ಜಿಎಸ್ಟಿಯಡಿ ವೆಂಡರ್ ನಿರ್ವಹಣೆ ಕಠಿಣವಾಗಿದೆ. ಇದರಿಂದ ಪಾರಾಗಲು ಸರಿಯಾದ ಸಮಯದಲ್ಲಿ ಇನ್ವಾರ್ಡ್ ಪೂರೈಕೆಗೆ ಇನ್ಪುಟ್ ತೆರಿಗೆ ಪಾವತಿಯನ್ನು ಕೇಳುವುದು ನಿಮಗಿರುವ ದಾರಿಯಾಗಿದೆ. ಇದರಲ್ಲಿ ಪೂರೈಕೆದಾರರಿಗ ಒಂದು ಬಾರಿಯ ಕ್ರೆಡಿಬಿಲಿಟಿ ಮಾತ್ರ ಇರುತ್ತದೆ. ನಿಮ್ಮ ಈಗಿನ ವ್ಯಾಪಾರಿಯನ್ನು ಮರುಪರಿಶೀಲನೆ ಮಾಡಬೇಕಾಗುತ್ತದೆ ಮತ್ತು ಯಾವ ಪೂರೈಕೆದಾರರ ಬಗ್ಗೆ ದೂರುಗಳಿವೆ ಎಂದು ಗುರುತಿಸಬೇಕು. ಯಾರು ಉತ್ತಮವೆಂದು ತಿಳಿದುಕೊಳ್ಳಲು ಅನುಸರಣೆ ರೇಟಿಂಗ್ ಸಹಯವಾಗುತ್ತದೆ.

ಇದೆಲ್ಲದರ ಒಟ್ಟು ಅರ್ಥವೇನು?

ನೀವು ನಿಮ್ಮ ಅನುಸರಣೆಯ ಕುರಿತು ಶಿಸ್ತು ಕಾಪಾಡಿಕೊಳ್ಳದೆ ಇದ್ದರೆ ನಿಮ್ಮ ಗ್ರಾಹಕರನ್ನು ಕಳೆದುಕೊಳ್ಳಬೇಕಾಗಬಹುದು. ಇದೇ ರೀತಿ, ನಿಮ್ಮ ಪೂರೈಕೆದಾರ ಉತ್ತಮವಾಗಿರದೆ ಇದ್ದರೆ, ಆತ ನಿಮ್ಮನ್ನು ಕಳೆದುಕೊಳ್ಳಬೇಕಾಗಬಹುದು.
ಜಿಎಸ್ಟಿಯಡಿಯಲ್ಲಿ, ವ್ಯವಹಾರಗಳು ತಾವು ಅಸಡ್ಡೆ ವಹಿಸುತ್ತಿಲ್ಲವೆಂದು ಖಚಿತಪಡಿಸಿಕೊಳ್ಳಬೇಕು. ಇಲ್ಲವಾದರೆ, ಅದು ಅವರ ವ್ಯಾಪಾರವನ್ನು ಸಾಯಿಸಬಹುದು.

Under GST, businesses must ensure that they do not default because they might lose their rating, and this might eventually kill the business.Click To Tweet

ಮುಂಗಡಕ್ಕೆ ತೆರಿಗೆ ವಿಧಿಸುವಿಕೆ

ಜಿಎಸ್ಟಿಯಡಿಯಲ್ಲಿ, ಮುಂಬರುವ ದಿನಾಂಕದಲ್ಲಿ ಪೂರೈಸು ಸರಕು ಅಥವಾ ಸೇವೆಗೆ ಪ್ರತಿಯಾಗಿ ಮುಂಗಡ ಹಣ ಪಾವತಿಸಿದ್ದರೆ, ಮುಂಗಡ ಪಡೆದುಕೊಂಡ ದಿನಾಂಕಕ್ಕೆ ಅನ್ವಯವಾಗುವಂತೆ ತೆರಿಗೆ ಪಾವತಿಸಬೇಕು. ಈಗ ಮುಂಗಡ ಹಣ ಪಾವತಿಗೆ ತೆರಿಗೆ ಪಾವತಿಸುವುದು ಕೇವಲ ಸೇವಾ ತೆರಿಗೆಯಲ್ಲಿ ಮಾತ್ರ ಅನ್ವಯವಾಗುತ್ತದೆ. ಈ ವಿಸ್ತರಿತ ಸೌಲಭ್ಯದಿಂದಾಗಿ ಸರಕು ಪೂರೈಕೆಯಲ್ಲಿ ತೊಡಗಿಸಿಕೊಳ್ಳಲು ಹಣದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಇದು ಯಾಕೆಂದರೆ,ತಯಾರಕರು ಅಥವಾ ವ್ಯಾಪಾರಿಯು ಮುಂಗಡವಾಗಿ ತೆರಿಗೆ ಪಾವತಿಸುವ ಬಾಧ್ಯತೆ ಇರುವುದಿಲ್ಲ, ಆದರೆ, ಜಿಎಸ್ಟಿಯಲ್ಲಿ ನೀವು ಪಾವತಿಸಬೇಕು.

ಎರಡನೆಯದಾಗಿ, ಮುಂಗಡ ಹಣ ಸ್ವೀಕೃತಿಗೆ ಪೂರೈಕೆದಾರರು ತೆರಿಗೆ ಪಾವತಿಸಿದ್ದರೂ, ತಕ್ಷಣಕ್ಕೆ ಸ್ವೀಕೃತಿದಾರರು ಇನ್ಪುಟ್ ತೆರಿಗೆ ಮೊತ್ತವನ್ನು ಕೇಳಲು ಅವಕಾಶವಿಲ್ಲ. ಇದು ಯಾಕೆಂದರೆ, ಐಟಿಸಿಯು ತೆರಿಗೆ ಸರಕುಪಟ್ಟಿ ದೊರಕಿದ ನಂತರ ಮಾತ್ರ ನೀಡಲಾಗುತ್ತದೆ ಮತ್ತು ಆತನಿಂದ ಸರಕು ಅಥವಾ ಸೇವೆಯನ್ನು ಸ್ವೀಕರಿಸಿದ ನಂತರ ಮಾತ್ರ ನೀಡಲಾಗುತ್ತದೆ.

ಇದರ ಫಲಿತಾಂಶವಾಗಿ, “ಮುಂಗಡ ಷರತ್ತು’ ಮೂಲಕ ಗುತ್ತಿಗೆ ಕೆಲಸ ಮಾಡಬೇಕಾಗುತ್ತದೆ. ರಚನಾತ್ಮಕ ಸಂಪರ್ಕದ ಸಹಾಯವನ್ನು ದಯವಿಟ್ಟು ಪಡೆಯಿರಿ. ಎಲ್ಲಾದರೂ ಶೇಕಡವಾರು ಪೂರ್ಣಗೊಂಡ ವಿಧಾನದಲ್ಲಿ ಸರಕುಪಟ್ಟಿ ನೀಡಿದ್ದರೆ, ಅದನ್ನು ಪರಿಶೀಲನೆ ಮಾಡಬೇಕಾಗುತ್ತದೆ.

ಶಾಖೆಗಳಿಗೆ ದಾಸ್ತಾನು ಸಾಗಾಟದ ಮೇಲೆ ಪರಿಣಾಮ

ಕೇಂದ್ರ ಅಬಕಾರಿ ತೆರಿಗೆಯಡಿ, ನೋಂದಾಯಿತ ತಯಾರಕರು ತೆರಿಗೆ ವಿಧಿಸಬಹುದಾದ ಸರಕಿನ ದಾಸ್ತಾನು ಸಾಗಾಟಕ್ಕೆ ಶೇಕಡ 100+ಶೇ 10 ಉತ್ಪಾದನೆ ವೆಚ್ಚದ್ದು ಸೇರಿಸಿ ಅಬಕಾರಿ ಸುಂಕ ಪಾವತಿಸಬೇಕು, ಮತ್ತು ವ್ಯಾಟ್ ನಡಿ ನಮೂನೆ ಎಫ್ ಸಲ್ಲಿಸಬೇಕು, ದಾಸ್ತಾನು ಸಾಗಾಟಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ.

ಜಿಎಸ್ಟಿಯಡಿಯಲ್ಲಿ “ಪೂರೈಕೆ’’ಯಲ್ಲಿ ಸಾಗಾಟವೂ ಸೇರಿದೆ. ಪರಿಗಣನೆಗೆ ತೆಗೆದುಕೊಳ್ಳದೆ ಕೆಲವೊಂದು ಪೂರೈಕೆಗಳಿಗೆ ತೆರಿಗೆ ವಿಧಿಸಬಹುದು ಮತ್ತು ಭಿನ್ನ ವ್ಯಕ್ತಿ ಪರಿಕಲ್ಪನೆಯಡಿ ದಾಸ್ತಾನು ಸಾಗಾಟಕ್ಕೆ ಜಿಎಸ್ಟಿಯಡಿ ತೆರಿಗೆ ವಿಧಿಸಬಹುದಾಗಿದೆ. ಜಿಎಸ್ಟಿಯಡಿ ದಾಸ್ತಾನು ಸಾಗಾಟದ ಮೇಲೆ ತೆರಿಗೆ ವಿಧಿಸುವುದರಿಂದ ಹಣದ ಹರಿವಿಗೆ ತೊಂದೆರೆಯಾಗಬಹುದು. ಇದು ಯಾಕೆಂದರೆ, ಎಲ್ಲಾದರೂ ದಾಸ್ತಾನು ಸಾಗಾಟದ ಸಮಯದಲ್ಲಿ ತೆರಿಗೆ ಪಾವತಿ ಮಾಡಲಾಗುತ್ತದೆ, ಮತ್ತು ಸ್ವೀಕರಿಸುವ ಶಾಖೆಯಲ್ಲಿ ದಾಸ್ತಾನನ್ನು ಲಿಕ್ವಿಡೆಟ್ ಮಾಡಿದರೆ ಐಟಿಸಿಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬಹುದಾಗಿದೆ.
ತೆರಿಗೆ ಕಾರಣಗಳಿಂದ, ಹೆಚ್ಚುವರಿ ಉದ್ಯೋಗ ಬಂಡವಾಳ ಹರಿದು ಬರುವ ಅಗತ್ಯವಿರುತ್ತದೆ ಮತ್ತು ಸಣ್ಣ ಉದ್ಯೋಗ ಬಂಡವಾಳದ ಜೊತೆ ಕಾರ್ಯ ನಿರ್ವಹಿಸುವ ಎಸ್ಎಂಇಗಳಿಗೆ ಇದು ಸವಾಲಿನ ಸಂಗತಿಯಾಗಬಹುದು. ಶಾಖೆಗಳ ಅಗತ್ಯಗಳನ್ನು ಪರಿಶೀಲನೆ ಮಾಡಿದಾಗ, ಶಾಖೆಗಳಿಂದ ಪರಿಣಾಮಕಾರಿ ಯೋಜನೆ ಮತ್ತು ಕ್ರಾಸ್ ಶಾಖೆಗಳ ಸಾಗಾಟವನ್ನು ಕಡಿಮೆ ಮಾಡಿದರೆ ಉದ್ಯೋಗ ಬಂಡವಾಳದ ಮೇಲೆ ಪರಿಣಾಮ ತಗ್ಗಬಹುದು.

ಹೀಗಾಗಿ, ನಿಮ್ಮ ವ್ಯವಹಾರ ಕಾರ್ಯನಿರ್ವಹಿಸುವ ವಿವಿಧ ಸ್ಥಳಗಳಲ್ಲಿ ಆಗುವ ಪರಿಣಾಮಗಳ ಕುರಿತು ಖಚಿತಪಡಿಸಿಕೊಳ್ಳಿರಿ.

ಜೊತೆಗೆ, ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿಗೆ ಪ್ರತಿಯಾಗಿ ಐಜಿಎಸ್ಟಿ(ಅಂತರ್ ನಿರ್ವಹಣೆ ಸಾಧ್ಯವಿದೆ) ಸೇರಿದಂತೆ ಯಾವ ಬಗೆಯ ತೆರಿಗೆಯನ್ನು ನೀವು ಪಾವತಿಸಬೇಕೆಂದು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ.

ಸೇವಾ ವಲಯದಲ್ಲಿರುವ ಎಸ್ಎಂಇಗಳು

ಈಗ ಸೇವಾ ತೆರಿಗೆಯಡಿಯಲ್ಲಿ, ನೋಂದಣಿಯು ಕೇಂದ್ರಿಕೃತವಾಗಿದೆ ಮತ್ತು ಪಾನ್ ಇಂಡಿಯಾವಾಗಿರುತ್ತದೆ. ಇದರ ಫಲಿತಾಂಶವಾಗಿ, ಇನ್ಪುಟ್ ಸೇವೆಗೆ ದೊರಕಿರುವ ಇನ್ಪುಟ್ ಸೇವಾ ತೆರಿಗೆಯನ್ನು ದೇಶಾದ್ಯಂತ ಸೇವಾ ತೆರಿಗೆ ಬಾಧ್ಯತೆಯಾಗಿ ಯಾವುದೇ ನಿರ್ಬಂಧಗಳು ಇಲ್ಲದೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಜಿಎಸ್ಟಿಯಡಿಯಲ್ಲಿ, ನೋಂದಣಿಯು ರಾಜ್ಯವಾರು ಆಗಿರುತ್ತದೆ. ಇಲ್ಲಿ ರಾಜ್ಯವೊಂದರಲ್ಲಿ ನೋಂದಾಯಿಸಿರುವ ಸೇವಾ ಪೂರೈಕೆದಾರರು ಸೇವೆಯನ್ನು ಹೊರಗೆ ಪೂರೈಕೆ ಮಾಡಬಹುದಾಗಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬದಲಾಯಿಸಲು ಇದರಲ್ಲಿ ಸಿಜಿಎಸ್ಟಿ + ಎಸ್ಜಿಎಸ್ಟಿ ಎಂಬ ನಿರ್ಬಂಧ ಇದರಲ್ಲಿದೆ. ಇದರಲ್ಲಿ ಒಂದು ತೊಂದರೆ ಎದುರಾಗುತ್ತದೆ, ಎಲ್ಲಾದರೂ ಒಂದು ಶಾಖೆಯಲ್ಲಿ ಇನ್ಪುಟ್ ತೆರಿಗೆ ಕ್ರೆಡಿಟ್ ಪಡೆದರೆ ಮತ್ತು ಬೇರೆ ರಾಜ್ಯದಲ್ಲಿರುವ ಇನ್ನೊಂದು ಶಾಖೆಯಲ್ಲಿ ತೆರಿಗೆ ಬಾಧ್ಯತೆ ಸೆಟ್ ಆಫ್ ಮಾಡಲು ಇದರಲ್ಲಿ ಸಾಧ್ಯವಾಗುವುದಿಲ್ಲ. ಇದು ವ್ಯವಹಾರಗಳ ಹಣದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ.

ಹೀಗಾಗಿ, ಜಿಎಸ್ಟಿಯಡಿ ಲಭ್ಯವಿರುವ ಇನ್ಪುಟ್ ಸೇವಾ ವಿತರಕರು(ಐಎಸ್ಡಿ) ಸೌಲಭ್ಯವು ಮೇಲಿನ ಪರಿಸ್ಥಿತಿಯಲ್ಲಿ ಸಹಕಾರಿಯಾಗುವುದಿಲ್ಲ.

ಎರಡನೆಯದಾಗಿ, ತೆರಿಗೆ ದರ ರಚನೆಯನ್ನು ಶೇಕಡ 5, ಶೇಕಡ 12, ಶೇಕಡ 18 ಮತ್ತು ಶೇಕಡ 28 ಅಂತಿಮಗೊಳಿಸಿದಾಗ ಮತ್ತು ಸೇವೆಗೆ ಶೇಕಡ 18ರಷ್ಟು ತೆರಿಗೆಯಾಗುತ್ತದೆ ಮತ್ತು ಈಗಿನ ತೆರಿಗೆ ಪದ್ಧತಿಗೆ ಹೋಲಿಸಿದರೆ ಸೇವೆಗೆ ತೆರಿಗೆಯು ಶೇಕಡ 3ರಷ್ಟು ದುಬಾರಿಯಾಗುತ್ತದೆ. ಹೊರಗೆ ಹಣದ ಹರಿವು ಹೆಚ್ಚುವರಿಯಾಗುವುದರಿಂದ ಕೆಲಸದ ಬಂಡವಾಳವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ.

ನಿಮ್ಮ ಚಾರ್ಟೆಡ್ ಅಕೌಟೆಂಟಟ್ ಗಳು ಮತ್ತು ತೆರಿಗೆ ಸಲಹೆಗಾರರಿಂದ ಈ ಕುರಿತು ಮಾರ್ಗದರ್ಶನ ಪಡೆದರೆ ನೀವು ಅತ್ಯುತ್ತಮವಾಗಿ ಸಿದ್ಧರಾಗಬಹುದು..

ತಲೆಕೆಳಗಾದ ಸುಂಕದ ರಚನೆ

ತಲೆಕೆಳಗಾದ ಸುಂಕದ ರಚನೆಯೆಂದರೆ ಇನ್ಪುಟ್ ಮೇಲಿನ ತೆರಿಗೆಯು ಔಟ್ ಪುಟ್ ಮೇಲಿನ ತೆರಿಗೆಗಿಂತ ಅಧಿಕವಾಗುವಂತಹ ಪರಿಸ್ಥಿತಿಯಾಗಿದೆ. ಉದಾಹರಣೆಗೆ, ಕಚ್ಚಾ ಸಾಮಾಗ್ರಿಗಳ ಮೇಲಿನ ಅಬಕಾರಿ ಸುಂಕವು ಶೇಕಡ 12.5 ಮತ್ತು ಪೂರ್ಣಗೊಂಡ ಸರಕುಗಳ ಮೇಲೆ ಅಬಕಾರಿ ಸುಂಕ ಶೇಕಡ 6 ಇದೆ ಎಂದಿರಲಿ. ಹೆಚ್ಚಾಗಿ, ಇದು ಔಷಧ ಉದ್ಯಮಗಳಲ್ಲಿ ಹೆಚ್ಚಿರುತ್ತದೆ ಮತ್ತು ಕಚ್ಚಾ ಸಾಮಾಗ್ರಿಗಳನ್ನು ಆಮದು ಮಾಡಿಕೊಂಡಾಗಲೂ ಹೀಗಾಗುತ್ತದೆ. ಇದರಿಂದ ಕ್ರೆಡಿಟ್ ಅನ್ನು ಬಳಕೆ ಮಾಡಲಾಗದಂತಹ ಪರಿಸ್ಥಿತಿ ಉಂಟಾಗಬಹುದು. ಈ ಉದಾಹರಣೆಯ ಪ್ರಕಾರ ಶೇಕಡ 6ಕ್ಕಿಂತ ಶೇಕಡ 12.5 ಹೆಚ್ಚಿದೆ. ಅಂದರೆ, ಶೇಕಡ 6.5 ಯಾವಾಗಲೂ ಬಳಕೆ ಮಾಡಲಾಗದಂತೆ ಆಗುತ್ತದೆ ಮತ್ತು ಸಂಗ್ರಹಗೊಳ್ಳುತ್ತದೆ.
ಕೇಂದ್ರ ಅಬಕಾರಿಯಡಿ, ರಫ್ತು ವಿಷಯಕ್ಕೆ ಮಾತ್ರ ಮರುಪಾವತಿ ಪಡೆಯಲು ಅನುಮತಿ ನೀಡಲಾಗುತ್ತದೆ, ಮತ್ತು ಇನ್ವರ್ಟೆಡ್ ಡ್ಯೂಟಿ ರಚನೆಯಲ್ಲಿ ಕ್ರೆಡಿಟ್ ಇರುವುದರಿಂದ ಮರುಪಾವತಿ ಪಡೆಯಲು ಅವಕಾಶ ಇರುವುದಿಲ್ಲ. ಇದರಿಂದ ಹಣಕಾಸು ನಿಧಿಗೆ ತಡೆ ಉಂಟಾಗುತ್ತದೆ.
ಜಿಎಸ್ಟಿಯಡಿ, ತಲೆಕೆಳಗಾದ ಸುಂಕದ ರಚನೆಯ ಲಾಭವು ಅತ್ಯುತ್ತಮ ಹಣದ ಹರಿವಿಗೆ ನೆರವಾಗುತ್ತದೆ. ಜಿಎಸ್ಟಿಯಲ್ಲಿ, ತಲೆಕೆಳಗಾದ ಸುಂಕದ ರಚನೆಯಿಂದ ಬಳಕೆ ಮಾಡಿರದ ಇನ್ಪುಟ್ ತೆರಿಗೆ ಕ್ರೆಡಿಟ್ ಅನ್ನು ಕೇಳಲು ಅವಕಾಶವಿದೆ. ಇದು ವ್ಯವಹಾರಕ್ಕೆ ಸಿಕ್ಕಿರುವ ಪ್ರಮುಖ ನಿರಾಳತೆಯಾಗಿದೆ ಮತ್ತು ಮರುಪಾವತಿಯ ಪ್ರಕ್ರಿಯೆಯೂ ವೇಗವಾಗಿರುತ್ತದೆ. ಅಂದರೆ, ತಾತ್ಕಾಲಿಕ ಅವಧಿಗೆ ಶೇಕಡ 90ರಷ್ಟು ಮರುಪಾವತಿ ಮತ್ತು ದೃಢೀಕರಣವಾದ ತರುವಾಯ ಬಾಕಿ ಶೇಕಡ 10ರಷ್ಟು ಮರುಪಾವತಿಯನ್ನು ನೀಡಲಾಗುತ್ತದೆ.

ಜಿಎಸ್ಟಿಯಲ್ಲಿ ವರ್ಗಾವಣೆಗೆ ಇನ್ಪುಟ್ ತೆರಿಗೆ ಕ್ರೆಡಿಟ್

ಜಿಎಸ್ಟಿಯಡಿಯಲ್ಲಿ ಪರಿವರ್ತನೆಯ ದಿನಾಂಕವೆಂದರೆ, ಸೆನ್ ವ್ಯಾಟ್ ಮುಕ್ತಾಯದ ಬ್ಯಾಲೆನ್ಸಿಗೆ ಮತ್ತು ಇನ್ಪುಟ್ ವ್ಯಾಟ್ ಅನ್ನು ಕಳೆದ ರಿಟರ್ನ್ ಸಲ್ಲಿಕೆ(ಜಿಎಸ್ಟಿಗಿಂತ ಪೂರ್ವದಲ್ಲಿ)ಯನ್ನು ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿಗೆ ಇನ್ಪುಟ್ ತೆರಿಗೆ ಕ್ರೆಡಿಟ್ ಆಗಿ ಮುಂದುವರೆಸಲಾಗುತ್ತದೆ. ಇದರಿಂದಾಗಿ, ಇದು ಎಲ್ಲಾ ವ್ಯವಹಾರಗಳಿಗೂ ಖರೀದಿಯ ಸಂದರ್ಭದಲ್ಲಿ ಅತ್ಯಂತ ಅಗತ್ಯವಾಗಿದೆ, ಹೀಗಾಗಿ ಲಭ್ಯವಿರುವ ಇನ್ಪುಟ್ ತೆರಿಗೆ ಕ್ರೆಡಿಟ್ ಅನ್ನು ಸಂಪೂರ್ಣವಾಗಿ ಪಡೆಯಲಾಗುತ್ತದೆ, ಮತ್ತು ಜಿಎಸ್ಟಿಗೆ ವರ್ಗಾವಣೆಗೊಳ್ಳುವಾಗ ಇನ್ಪುಟ್ ತೆರಿಗೆ ಕ್ರೆಡಿಟ್ ನಲ್ಲಿ ಯಾವುದೇ ನಷ್ಟವಾಗುವುದಿಲ್ಲ.
ಈಗಿನ ತೆರಿಗೆ ಪದ್ಧತಿಯಲ್ಲಿ, ವ್ಯವಹಾರಗಳು ಪಾವತಿಸಿರುವ ಅಬಕಾರಿ ಸುಂಕ ಮತ್ತು ಪ್ರವೇಶ ತೆರಿಗೆ ಪಾವತಿಯಂತಹ ಕೆಲವು ಸುಂಕ ಮತ್ತು ತೆರಿಗೆಗಳಿಗೆ ಕ್ರೆಡಿಟ್ ಪಡೆಯಲು ಅವಕಾಶ ನೀಡಲಾಗುವುದಿಲ್ಲ. ಇದಕ್ಕೆ ಹಲವು ಕಾರಣಗಳು ಇರಬಹುದು:
• ನೀವು ಈಗ ತಯಾರಿಕೆಯಲ್ಲಿ ತೊಡಗಿರಬಹುದು ಮತ್ತು ತೆರಿಗೆ ವಿನಾಯಿತಿ ಇರುವ ಸರಕು ಮಾರಾಟ ಅಥವಾ ವಿನಾಯಿತಿ ಇರುವ ಸೌಲಭ್ಯ ಪಡೆಯುತ್ತಿರಬಹುದು. ಜಿಎಸ್ಟಿಯಡಿ ಇಂತಹ ಸರಕು ಮತ್ತು ಸೇವೆಗಳಿಗೂ ತೆರಿಗೆ ವಿಧಿಸಬಹುದು.
• ನಿಮ್ಮ ಒಟ್ಟರೆ ಕ್ಲಿಯರೆನ್ಸ್ ಮೌಲ್ಯವು 1.5 ಕೋಟಿ ರೂ.ಗಿಂತ ಕಡಿಮೆ ಇರುವುದರಿಂದ ನೀವು ನೋಂದಾಯಿಸದೆ ಇರುವ ತಯಾರಕರು ಆಗಿರಬಹುದು. ಜಿಎಸ್ಟಿಯಡಿ ಕೆಲವು ವಿಭಾಗದ ರಾಜ್ಯಗಳಲ್ಲಿ (ಅರುಣಾಚಲ ಪ್ರದೇಶ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಮಣಿಪುರ, ಮೇಘಾಲಯ, ಮಿಝೊರಾಂ, ನಾಗಲ್ಯಾಂಡ್, ಸಿಕ್ಕಿಂ, ತ್ರಿಪುರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ) 10 ಲಕ್ಷ ರೂಪಾಯಿ ಮಿತಿ ಮತ್ತು ದೇಶದ ಉಳಿದ ರಾಜ್ಯಗಳಲ್ಲಿ ಇದು 20 ಲಕ್ಷ ಮೀರಿರಬಾರದು.
• ನೀವು ಅಬಕಾರಿ ಸುಂಕ ಪಾವತಿಸುವ ಟ್ರೇಡರ್ ಆಗಿರಬಹುದು. ಇದಕ್ಕೆ ಈಗ ಇನ್ಪುಟ್ ಕ್ರೆಡಿಟ್ ಪಡೆಯಲು ಅವಕಾಶವಿಲ್ಲ.

ಕಾನೂನಿನ್ವಯ ನೀಡಿರುವ ಕೆಲವೊಂದು ನಿರ್ದಿಷ್ಟ ನಿಬಂಧನೆಗಳನ್ನು ಪೂರ್ತಿಗೊಳಿಸಿದರೆ ಜಿಎಸ್ಟಿಗೆ ವರ್ಗಾವಣೆಗೊಳ್ಳುವಾಗ ಮುಕ್ತಾಯದ ದಾಸ್ತಾನಿಗೆ ಸುಂಕ ಮತ್ತು ತೆರಿಗೆ ಪಾವತಿಸಿದ್ದರೆ ಇನ್ಪುಟ್ ತೆರಿಗೆ ಪಾವತಿಯಾಗಿ ಪಡೆಯಲು ಅವಕಾಶವಿದೆ ಎನ್ನುವುದು ಶುಭ ಸುದ್ದಿ.
ಇದು ಕ್ಯಾಸ್ಕೆಡಿಂಗ್ ಪರಿಣಾಮ ಮತ್ತು ಎರಡು ತೆರಿಗೆ ಪಾವತಿಸುವುದನ್ನು ತೆಗೆದು ಹಾಕುತ್ತದೆ, ಮತ್ತು ಎಸ್ಎಂಇಗಳಿಗೆ ವ್ಯವಹಾರಕ್ಕೆ ಅಗತ್ಯವಾಗಿರುವ ಹೆಚ್ಚುವರಿ ಕೆಲಸದ ಬಂಡವಾಳವನ್ನು ನೀಡುತ್ತದೆ. ಕೆಲವೊಂದು ಸಲಹೆಗಳು ಹೀಗಿವೆ:
• ಎಲ್ಲಾ ಖರೀದಿಗಳನ್ನು ನಿಯಮ 11ಕ್ಕೆ ತಕ್ಕಂತೆ ಅಥವಾ ನಿಮ್ಮ ಪುಸ್ತಕದಲ್ಲಿ ನಮೋದಿಸಿರುವ ತೆರಿಗೆ ಸರಕುಪಟ್ಟಿಗೆ ತಕ್ಕಂತೆ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ.
• ಪಾವತಿಸಲು ಯಾವುದಾದರೂ ಬಾಕಿ ಇದೆಯೇ ಎಂದು ಸಮಗ್ರವಾಗಿ ಪರಿಶೀಲನೆ ಮಾಡಿ ಗುರುತಿಸಿರಿ.
• ಬ್ಯಾಲೆನ್ಸ್ ಅನ್ನು ಸರಿಯಾಗಿ ಮುಂದುವರೆಸಲು ಡೆಬಿಟ್ ನೋಟುಗಳು/ಕ್ರೆಡಿಟ್ ನೋಟುಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಉಪಸಂಹಾರ

ಕೆಲಸದ ಬಂಡವಾಳ ಎನ್ನುವುದು ಯಾವುದೇ ವ್ಯವಹಾರಗಳಿಗೂ ಇಂಧನವಿದ್ದಂತೆ, ಮತ್ತು ಎಸ್ಎಂಇಗಳಿಗೆ, ಹೊಸ ಪರೋಕ್ಷ ತೆರಿಗೆ ಪದ್ಧತಿಯನ್ನು ಅಳವಡಿಸಲು ಜಿಎಸ್ಟಿಯ ಮೇಲೆ ಇರುವ ಕೆಲಸದ ಬಂಡವಾಳದ ಪರಿಣಾಮಗಳು ಪ್ರಮುಖ ಸವಾಲಾಗಿವೆ. ಇನ್ಪುಟ್ ತೆರಿಗೆ ಕ್ರೆಡಿಟ್ ನಲ್ಲಿ ಯಾವುದೇ ನಷ್ಟವನ್ನು ಅನುಭವಿಸದೆ ತಯಾರಿ ಸರಳವಾದ ವ್ಯವಹಾರಕ್ಕೆ ನೆರವಾಗುತ್ತದೆ ಮತ್ತು ಪರಿಣಾಮಕಾರಿ ವೆಂಡರ್ ನಿರ್ವಹಣೆಗೆ ನೆರವಾಗುತ್ತದೆ. ಇದು ಕೆಲಸದ ಬಂಡವಾಳದ ಮೇಲಿನ ಅಪಾಯಗಳನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಈ ಲೇಖನವನ್ನು ಬರೆದವರು ಟ್ಯಾಲಿ ಸೊಲ್ಯುಷನ್ಸ್ ನ ಸಿಎಫ್ಒ ಆಗಿರುವ ಸತ್ಯ ಪ್ರಮೋದ್ ಅವರು ಬರೆದಿದ್ದಾರೆ. ಇದು ಎಕಾನಾಮಿಕ್ ಟೈಮ್ಸ್ ನಲ್ಲಿ ಪ್ರಕಟಗೊಂಡಿದೆ.
ಕೊಡುಗೆದಾರರು: ಪುಗಲ್ ಟಿ ಮತ್ತು ಯರಬ್ ಎ

Are you GST ready yet?

Get ready for GST with Tally.ERP 9 Release 6

63,447 total views, 10 views today

Yarab A

Author: Yarab A

Yarab is associated with Tally since 2012. In his 7+ years of experience, he has built his expertise in the field of Accounting, Inventory, Compliance and software product for the diverse industry segment. Being a member of ‘Centre of Excellence’ team, he has conducted several knowledge sharing sessions on GST and has written 200+ blogs and articles on GST, UAE VAT, Saudi VAT, Bahrain VAT, iTax in Kenya and Business efficiency.