ಅಕ್ಟೋಬರ್ 14, 2016ರಂದು ಭಾರತೀಯ ವ್ಯಾಪಾರಿಗಳ ಒಕ್ಕೂಟ(ಸಿಐಎಟಿ)ವು ಟ್ಯಾಲಿ ಸೊಲ್ಯುಷನ್ ಜೊತೆ ತಮ್ಮ ವ್ಯವಹಾರದ ಸದಸ್ಯರಿಗೆ-ದೇಶಾದ್ಯಂತ ಇರುವ ಸುಮಾರು 6 ಲಕ್ಷ ವ್ಯಾಪಾರಿಗಳಿಗೆ ಜಿಎಸ್ಟಿ ಕುರಿತು ತರಬೇತಿ ನೀಡುವ ಸಲುವಾಗಿ ಎಂಒಯು ಒಪ್ಪಂದಕ್ಕೆ ಸಹಿ ಹಾಕಿದೆ. ವ್ಯಾಪಾರ ಸಮುದಾಯವು ಬಹುಮಟ್ಟಿಗೆ ಡಿಜಿಟಲ್ ತಂತ್ರಜ್ಞಾನವನ್ನು ಅನುಸರಿಸಲು ಮತ್ತು ಬಳಸುವುದನ್ನು ಬೃಹತ್ ಪ್ರಮಾಣದಲ್ಲಿ ಸಾಧ್ಯವಾಗಿಸುವತ್ತ ಗಮನ ನೀಡುವ ಸಲುವಾಗಿ, ಈ ಒಕ್ಕೂಟವು ದೇಶಾದ್ಯಂತ ಇರುವ ವ್ಯಾಪಾರಿಗಳಿಗೆ ಜುಲೈ 1ರ ನಂತರ ಜಿಎಸ್ಟಿ ಅನುಸರಣೆ ಸಾಧ್ಯವಾಗುವಂತೆ ಮಾರ್ಗದರ್ಶನ ನೀಡುತ್ತಿದೆ.

ದೇಶದ ಬೃಹತ್ ವ್ಯಾಪಾರಿಗಳ ಒಕ್ಕೂಟವೊಂದು ತಮ್ಮ ವ್ಯಾಪಾರಿಗಳಿಗೆ ಸರಿಯಾದ ತರಬೇತಿ ನೀಡುವ ಸಲುವಾಗಿ ಜಿಎಸ್ಟಿ ಬರುವ 8 ತಿಂಗಳ ಮುಂದೆಯೇ ಯೋಜನೆ ರೂಪಿಸಿದೆ ಎಂದಾದರೆ, ದೇಶದಲ್ಲಿರುವ ಹಲವು ಲಕ್ಷ ವ್ಯಾಪಾರಿಗಳ ಮೇಲೆ ಜಿಎಸ್ಟಿಯ ಪರಿಣಾಮ ಯಾವ ರೀತಿ ಇರಬಹುದು ಎಂದು ತಿಳಿದುಕೊಳ್ಳಬಹುದು. ಇಲ್ಲಿ, ಜಿಎಸ್ಟಿಯು ವ್ಯಾಪಾರಿಗಳ ಬದುಕಿನಲ್ಲಿ ಏನೆಲ್ಲ ಬದಲಾವಣೆಗಳನ್ನು ತರಬಹುದೆಂದು ವಿವರವಾಗಿ ಅರ್ಥಮಾಡಿಕೊಳ್ಳೋಣ ಬನ್ನಿ.

ಸಂತೋಷದ ಅಂಶಗಳು

ನೋಂದಣಿಗೆ ನಿಗದಿತ ಮಿತಿಯು ಹೆಚ್ಚಾಗಿರುವುದು

ಈಗಿನ ತೆರಿಗೆ ಪದ್ಧತಿಯಲ್ಲಿ, ಮೌಲ್ಯವರ್ಧಿತ ತೆರಿಗೆ ನೋಂದಣಿಗೆ ಹೆಚ್ಚಿನ ರಾಜ್ಯಗಳಲ್ಲಿ 5-20 ಲಕ್ಷ. ಸರಕು ಮತ್ತು ಸೇವಾ ತೆರಿಗೆ , ಸರಕು ಮತ್ತು ಸೇವಾ ತೆರಿಗೆಯಡಿಯಲ್ಲಿ, ವಿಶೇಷ ವಿಭಾಗದ ರಾಜ್ಯಗಳಲ್ಲಿ (ಉತ್ತರಾಖಂಡ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಇತರೆ 7 ಎನ್ಇ ರಾಜ್ಯಗಳಲ್ಲಿ) ಏಕೀಕೃತ ವ್ಯವಹಾರ ಮಿತಿ 10 ಲಕ್ಷ ರೂಪಾಯಿ ಮತ್ತು ದೇಶದಲ್ಲಿರುವ ಇತರೆ ರಾಜ್ಯಗಳಲ್ಲಿ 20 ಲಕ್ಷ ರೂಪಾಯಿ ಗರಿಷ್ಠ ಮಿತಿಯಾಗಿದೆ- ಇದರಿಂದಾಗಿ ಬಹುತೇಕ ಸಂಖ್ಯೆಯ ವ್ಯಾಪಾರಿಗಳು ತೆರಿಗೆಯಿಂದ ಮುಕ್ತಿ ಪಡೆದು ಆನಂದಿಸಬಹುದು. ಇದರಿಂದ ಪ್ರಮುಖವಾಗಿ ನವೋದ್ಯಮಗಳಿಗೆ ಮತ್ತು ಹೊಸ ವ್ಯವಹಾರಗಳಿಗೆ ಪ್ರಮುಖವಾಗಿ ಸಹಾಯವಾಗಲಿದ್ದು, ಆರಂಭಿಕ ದಿನದಲ್ಲಿಯೇ ಅನುಸರಣೆಯ ಕುರಿತು ಚಿಂತೆ ಮಾಡಿಕೊಳ್ಳುವ ಬದಲಾಗಿ ತಮ್ಮ ವ್ಯವಹಾರದ ನಿರ್ಮಾಣಕ್ಕೆ ಹೆಚ್ಚು ಗಮನ ನೀಡಬಹುದು.

ಸಂಯೋಜಿತ ಚಂದಾತೆರಿಗೆ ಹೆಚ್ಚಳ

ಈಗಿನ ಪರೋಕ್ಷ ತೆರಿಗೆ ಪದ್ಧತಿಯ ವ್ಯವಸ್ಥೆಯಲ್ಲಿ, ಬಹುತೇಕ ರಾಜ್ಯಗಳಲ್ಲಿ ಸಂಯೋಜಿತ ಚಂದಾ ತೆರಿಗೆ ಯೋಜನೆಯು 50 ಲಕ್ಷ ರೂಪಾಯಿ ಆಗಿದೆ. ಇತ್ತೀಚೆಗೆ ನಡೆದ ಜಿಎಸ್ಟಿ ಪರಿಷತ್ನ ಸಭೆಯಲ್ಲಿ, ಸಂಯೋಜಿತ ಗರಿಷ್ಠ ಮಿತಿಯನ್ನು 50 ಲಕ್ಷ ರೂಪಾಯಿಯಿಂದ 75 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ, ವಿಶೇಷ ಪ್ರಾತಿನಿದ್ಯದ ರಾಜ್ಯಗಳಿಗೆ ಇದು 50 ಲಕ್ಷ ರೂಪಾಯಿಗಳಲ್ಲಿಯೇ ಉಳಿದಿದೆ. ಯಾವುದೇ ವ್ಯಾಪಾರಿಗಳಿಗೂ 25 ಲಕ್ಷ ರೂಪಾಯಿ ಮಿತಿ ಹೆಚ್ಚಿರುವುದು ಸಕಾರಾತ್ಮಕ ಕೊಡುಗೆಯಾಗಿದೆ, ಸಣ್ಣ ಹೋಟೇಲ್ ನಡೆಸುವವರು ಶೇಕಡ 5 ಜಿಎಸ್ಟಿ ಪಾವತಿಸಿದರೆ ಸಾಕು ಅಥವಾ ಸಣ್ಣ ಲಾಭದ ವ್ಯವಹಾರ ನಡೆಸುವವರು ಶೇಕಡ 1 ಜಿಎಸ್ಟಿ ಪಾವತಿಸಿದರೆ ಸಾಕು. ಭಾರತೀಯ ವ್ಯಾಪಾರಿಗಳಿಗೆ ಜಿಎಸ್ಟಿ ಪರಿಷತ್ನ ಶಿಫಾರಸ್ಸಿನಂತೆ ಇನ್ನಷ್ಟು ಶುಭ ಸುದ್ದಿಗಳು ಕಾದಿದ್ದು, ಸರಕಾರವು ಸಂಯೋಜಿತ ಮಿತಿಯನ್ನು ಈಗಿನ 75 ಲಕ್ಷ ರೂ.ನಿಂದ 1 ಕೋಟಿ ರೂ.ಗೂ ಹೆಚ್ಚಿಸುವ ಸಾಧ್ಯತೆಗಳಿವೆ.

ಅಬಕಾರಿಗೆ ಐಟಿಸಿ ಲಭ್ಯತೆ

ಈಗ, ದೇಶದ್ಯಾಂತ ಇರುವ ಬಹುತೇಕ ವ್ಯಾಪಾರಿಗಳು ಮೌಲ್ಯವರ್ಧಿತ ತೆರಿಗೆಯ ಆಯ್ಕೆ ಮಾತ್ರ ಹೊಂದಿರುತ್ತಾರೆ ಮತ್ತು ಹೆಚ್ಚಿನವರು ಅಬಕಾರಿಯಡಿ ನೊಂದಾಯಿಸಿರುವುದಿಲ್ಲ. ಇದರ ಫಲಿತಾಂಶವಾಗಿ, ಅಬಕಾರಿಗೆ ವ್ಯಾಪಾರಿಯು ಆದಾನ ತೆರಿಗೆ ಪಾವತಿ(ಐಟಿಸಿ) ಪಡೆಯಲು ಸಾಧ್ಯವಾಗುವುದಿಲ್ಲ, ಆತನು ಈ ವೆಚ್ಚವನ್ನು ಸಹಜವಾಗಿ ಗ್ರಾಹಕರ ಮೇಲೆ ವರ್ಗಾಯಿಸುತ್ತಾನೆ, ಇದರಿಂದ ಸರಕಿನ ದರ ದುಬಾರಿಯಾಗುತ್ತದೆ. ಜಿಎಸ್ಟಿ ಪೂರ್ವದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುವ ತೆರಿಗೆಯಿಂದಾಗಿ ತೆರಿಗೆಯ ಪರಿಣಾಮ ಇರಲಿಲ್ಲ- ಸಿಜಿಎಸ್ಟಿಯು ಅಬಕಾರಿಗೆ ಸರಿಸಮಾನಾಗಿದೆ. ಸಿಜಿಎಸ್ಟಿಯ ಪೂರ್ತಿ ಆದಾನ ತೆರಿಗೆ ದೊರಕುವುದರಿಂದ, ಎಲ್ಲಾ ಸರಣಿಗಳಲ್ಲಿಯೂ ಐಟಿಸಿಗೆ ಯಾವುದೇ ನಿರ್ಬಂಧಗಳು ಇಲ್ಲ. ಎಸ್ಎಂಇಯು ಇದನ್ನು ತನ್ನ ತೆರಿಗೆ ಬಾಧ್ಯತೆಯಾಗಿ ಕೇವಲ ಒಂದು ನೋಂದಣಿಯ ಮೂಲಕವೇ ಪಡೆದುಕೊಳ್ಳಬಹುದಾಗಿದೆ.

ಆದಾನ ಸೇವೆ/ವ್ಯವಹಾರ ವೆಚ್ಚಕ್ಕೆ ಐಟಿಸಿ ಲಭ್ಯತೆ

ವ್ಯವಹಾರದ ಉದ್ದೇಶಕ್ಕಾಗಿ ಬಳಸಿದ ಆದಾನ ವೆಚ್ಚವನ್ನು ಈಗ ವ್ಯಾಪಾರಿಗಳು ಐಟಿಸಿ ರೂಪದಲ್ಲಿ ಪಡೆಯಲು ಅವಕಾಶವಿಲ್ಲ. ಆದರೂ, ಜಿಎಸ್ಟಿ ತೆರಿಗೆ “ವ್ಯವಹಾರದ ಮುಂದುವರಿಕೆಗೆ’ ಎಂಬ ಪರಿಕಲ್ಪನೆ ಪರಿಚಯಿಸಿರವುದರಿಂದ, ಜಾಹೀರಾತು ಸೇವೆ, ವ್ಯಾಪಾರಕ್ಕೆ ಉತ್ತೇಜನ ಇತ್ಯಾದಿ ವ್ಯವಹಾರಕ್ಕೆ ಬಳಸಿದ ವೆಚ್ಚಕ್ಕೆ ವ್ಯಾಪಾರಿಯು ಐಟಿಸಿ ಪಡೆಯಲು ಅವಕಾಶ ಇರುತ್ತದೆ. ಇದರಿಂದ ಆತನ ಆದಾಯ ಹೆಚ್ಚುತ್ತದೆ ಮತ್ತು ಆತನ ಕೆಲಸದ ಬಂಡವಾಳದ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಬಂಡವಾಳ ಸರಕು ಖರೀದಿ ಮೇಲೆ ಪೂರ್ಣ ಮತ್ತು ತಕ್ಷಣ ಐಟಿಸಿ ಲಭ್ಯತೆ

ಈಗ, ಬಂಡವಾಳ ಸರಕು ಖರೀದಿಗೆ ವ್ಯಾಪಾರಿಗೆ ತಕ್ಷಣ ಐಟಿಸಿ ಲಭ್ಯವಾಗುವುದಿಲ್ಲ ಮತ್ತು ದೊರಕಿದರೂ ಕೆಲವು ನಿರ್ದಿಷ್ಟಪಡಿಸಿದ ಬಂಡವಾಳ ಸರಕುಗಳಿಗೆ ಮಾತ್ರ ದೊರಕುತ್ತದೆ. ಬಹುತೇಕ ರಾಜ್ಯಗಳಲ್ಲಿ, ಐಟಿಸಿಯನ್ನು ಕಂತಿನ ರೂಪದಲ್ಲಿ ಹಲವು ತಿಂಗಳಲ್ಲಿ ನೀಡಲಾಗುತ್ತದೆ; ಉಳಿದೆಡೆ ಬಂಡವಾಳ ಸರಕನ್ನು ವ್ಯವಹಾರದ ಉದ್ದೇಶಕ್ಕೆ ಬಳಸಿದ ನಂತರವಷ್ಟೇ ದೊರಕುತ್ತದೆ. ಆದರೆ, ಒಮ್ಮೆ ಜಿಎಸ್ಟಿ ಬಂದ ಬಳಿಕ, ಬಂಡವಾಳ ಸರಕುಗಳು ಮತ್ತು ವ್ಯಾಪಾರದ ಸರಕುಗಳ ಮೇಲೆ ಉಪಚಾರ ಒಂದೇ ರೀತಿ ಇರುತ್ತದೆ ಮತ್ತು ಬಂಡವಾಳ ಸರಕು ಖರೀದಿಗೆ ಪೂರ್ತಿ ಐಟಿಸಿ ಲಭ್ಯತೆ ಇರುತ್ತದೆ- ಮತ್ತೆ ವ್ಯಾಪಾರಿಯ ಲಾಭದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ, ಗಮನಿಸಬೇಕಾದ ವಿನಾಯಿತಿ ಇರುವುದು ಮೋಟಾರ್ ವಾಹನಗಳಿಗೆ ಮಾತ್ರ. ಇಲ್ಲಿ ತೆರಿಗೆ ವಿಧಿಸಬಲ್ಲ ಸೇವೆಗಳಿಗೆ ಬಳಸಿದರೆ ಮಾತ್ರ- ಪ್ರಯಾಣಿಕರನ್ನು ಕೊಂಡೊಯ್ಯಲು ಅಥವಾ ಸರಕು ಸಾಗಾಣಿಕೆ ಅಥವಾ ವಾಹನ ತರಬೇತಿ ನೀಡಲು ಬಳಸುವುದನ್ನು ಹೊರತುಪಡಿಸಿ ಬೇರೆ ವಾಹನಗಳಿಗೆ ಇಲ್ಲಿ ಐಟಿಸಿ ದೊರಕುವುದಿಲ್ಲ.

ದೇಶದ್ಯಾಂತ ಇರುವ ಮಾರುಕಟ್ಟೆಗಳಿಗೆ ಮುಕ್ತವಾಗುವುದು

ಈಗಿನ ಸಂದರ್ಭದಲ್ಲಿ,ರಾಜ್ಯದೊಳಗೆ ಮಾರಾಟ ಮತ್ತು ಖರೀದಿ ವ್ಯವಹಾರ ನಡೆಸಲು ಪೂರೈಕೆದಾರರ ಜೊತೆ ವ್ಯವಹಾರ ನಡೆಸಲು ಹೆಚ್ಚಿನವರು ಆದ್ಯತೆ ನೀಡುತ್ತಾರೆ ಮತ್ತು ಇತರೆ ರಾಜ್ಯಗಳಾದ್ಯಂತ ಇರುವ ಗ್ರಾಹಕರ ಜೊತೆ ವ್ಯವಹಾರ – – ನಡೆಸುತ್ತಾರೆ- ಇದರಲ್ಲಿ ಐಟಿಸಿ ಕೇಳಲು ಸಾಧ್ಯವಾಗದೆ ಇರುವುದರಿಂದ ಕೊನೆಯಲ್ಲಿರುವ ಗ್ರಾಹಕರ ಮೇಲೆ ದರ ಹೆಚ್ಚಳದ ಪರಿಣಾಮ ವರ್ಗಾಯಿಸಲಾಗುತ್ತದೆ. ಆದರೂ, ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ಸಿಎಸ್ಟಿಗೆ ಬದಲಿಯಗಿ ಐಜಿಎಸ್ಟಿ ಬಂದಿದ್ದು, ರಾಜ್ಯದೊಳಗಿನ ಅಥವಾ ಸ್ಥಳೀಯ ವ್ಯಾಪಾರಿಗಳು ಎಂಬ ಬೇಧವಿಲ್ಲದೆ ಎಲ್ಲರಿಗೂ ಆದಾನ ಪಾವತಿ ಕೇಳಲು ಅವಕಾಶ ನೀಡುತ್ತದೆ. ರಾಜ್ಯದ ಗಡಿ ದಾಟಿದ ನಂತರ ನೀಡಬೇಕಿರುವ ಪ್ರವೇಶ ತೆರಿಗೆಯನ್ನು ತೆಗೆದು ಹಾಕಿರುವುದು ಮತ್ತೊಂದು ಹೆಚ್ಚುವರಿ ಪ್ರಯೋಜನವಾಗಿದೆ. ದೇಶದ ಒಂದು ಭಾಗದಲ್ಲಿ ತಯಾರಿಸಿದ ಉತ್ತಮ ಗುಣಮಟ್ಟದ ಉತ್ಪನ್ನಕ್ಕೆ ದೇಶದ ಇನ್ನೊಂದು ಭಾಗದಲ್ಲಿ ಮಾರುಕಟ್ಟೆ ದೊರಕಿಸಿಕೊಡುತ್ತದೆ- ಇದರಿಂದ ಎಲ್ಲಾ ವ್ಯಾಪಾರಿಗಳಿಗೆ ಪೂರ್ತಿ ದೇಶವೇ ಮುಕ್ತ ಮಾರುಕಟ್ಟೆಯಾಗುತ್ತದೆ.

ಅಪಾಯಕಾರಿ ಅಂಶಗಳು

ಪೂರೈಕೆದಾರರು ಅನುಸರಣೆ ಸಲ್ಲಿಸದೆ ಇದ್ದರೆ ಐಟಿಸಿ ಲಭ್ಯತೆಗೆ ತಡೆ

ಐಟಿಸಿ ತೆರಿಗೆ ಪದ್ಧತಿಯಲ್ಲಿ ಅನುಸರಣೆಯು ಅತ್ಯಂತ ಅಗತ್ಯವಾಗಿದೆ ಮತ್ತು ಸರಕುಪಟ್ಟಿಯ ಮಾಹಿತಿ ಆಧಾರಿತವಾಗಿ ಐಟಿಸಿಯು ದೊರಕುತ್ತದೆ- ಸಮರ್ಪಕ ಐಟಿಸಿ ದೊರಕಲು ಸರಕುಪಟ್ಟಿ ಹೋಲಿಕೆಯಾಗುವುದು ಅತ್ಯಂತ ಅಗತ್ಯವಾಗಿದೆ. ತನ್ನ ಪೂರೈಕೆದಾರರು ತೆರಿಗೆ ಪಾವತಿ ಮಾಡದೆ ಇದ್ದರೆ, ಜಿಎಸ್ಟಿಯಲ್ಲಿ ವ್ಯಾಪಾರಿಗೆ ತೊಡಕಾಗಲಿದೆ. ಜಿಎಸ್ಟಿ ತೆರಿಗೆ ಕಾನೂನಿನ ಅನ್ವಯ, ಪೂರೈಕೆದಾರರು ಸಮರ್ಪಕ ಸರಕುಪಟ್ಟಿಯನ್ನು ಸಲ್ಲಿಸಿದರೆ ಮತ್ತು ಸ್ವೀಕೃತಿದಾರರು ಖರೀದಿಸಿರುವುದಕ್ಕೆ ಆ ಸರಕುಪಟ್ಟಿಯು ಸರಿಯಾಗಿ ಹೋಲಿಕೆಯಾದರೆ ಮಾತ್ರ ವ್ಯಾಪಾರಿಗೆ ಐಟಿಸಿಯು ದೊರಕುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಪೂರೈಕೆದಾರರು ತಟಸ್ಥವಾಗಿದ್ದರೆ, ವ್ಯಾಪಾರಿಗೆ ಐಟಿಸಿ ನಷ್ಟವಾಗಲಿದೆ. ಅನುಸರಣೆ ಸರಿಯಾಗಿ ಸಲ್ಲಿಸದೆ ಇರುವ ಪೂರೈಕೆದಾರರೊಂದಿಗೆ ವ್ಯಾಪಾರಿಯು ವ್ಯವಹಾರ ನಿಲ್ಲಿಸಬಹುದಾಗಿದ್ದರೂ,, ಆತ ಒಮ್ಮೆ ಆದಾನ ತೆರಿಗೆ ಪಾವತಿಯ ನಷ್ಟಕ್ಕೆ ಈಡಾಗಬೇಕಾಗುತ್ತದೆ. ಆದರೆ, ವ್ಯಾಪಾರಿಯು ಇಂತಹ ಸಮಸ್ಯೆಯಿಂದ ಹೊರಬರಲು ಅತ್ಯುತ್ತಮ ಮಾರಾಟಗಾರರ ಜೊತೆ ವ್ಯವಹಾರ ನಡೆಸಲು ಮುಂಚೆಯೇ ಆದ್ಯತೆ ನೀಡಬೇಕು- ಯಾರ ಜೊತೆಯಾದರೂ ವ್ಯವಹಾರ ನಡೆಸುವ ಮೊದಲು ಅವರಿಗೆ ದೊರಕಿರುವ ರೇಟಿಂಗ್ ಅಥವಾ ಇತರರು ನೀಡಿರುವ ಶ್ರೇಯಾಂಕವನ್ನು ಗಮನಿಸಿಕೊಂಡು ವ್ಯವಹಾರ ನಡೆಸಬೇಕೋ ಅಥವಾ ಬೇಡವೇ ಎಂದು ತೀರ್ಮಾನಿಸಬೇಕು.

ದಾಸ್ತಾನು ಸಾಗಾಣೆಗೆ ತೆರಿಗೆ ಪಾವತಿಸಬೇಕು

ಈಗಿನ ತೆರಿಗೆ ಪದ್ಧತಿಯಲ್ಲಿ, ದಾಸ್ತಾನು ವರ್ಗಾವಣೆಗೆ ತೆರಿಗೆ ವಿಧಿಸಲಾಗುತ್ತಿರಲಿಲ್ಲ- ಇದಕ್ಕೆ ನಮೂನೆ ಎಫ್ ಸಲ್ಲಿಸಿದರೆ ಸಾಕಿತ್ತು, ಮೌಲ್ಯವರ್ಧಿತ ತೆರಿಗೆ ಸಲ್ಲಿಸಬೇಕಿರಲಿಲ್ಲ. ಆದರೆ, ಆದಾನ ತೆರಿಗೆ ಪಾವತಿಯು ಕೆಲವು ಶೇಕಡ ಪುನಾರವರ್ತನೆಯಾಗುತ್ತಿತ್ತು (ಬಹುತೇಕ ರಾಜ್ಯಗಳಲ್ಲಿ ಶೇಕಡ 4ರಷ್ಟು) ಮತ್ತು ಉಳಿದವು ಪಾವತಿಯಾಗಿ ವ್ಯಾಪಾರಿಗೆ ದೊರಕುತ್ತಿತ್ತು. ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ದಾಸ್ತಾನು ವರ್ಗಾವಣೆಯು ತೆರಿಗೆ ಪಾವತಿಸಬೇಕಾದ ವಿಷಯವಾಗಿದೆ. . ಪಾವತಿಸಿರುವ ತೆರಿಗೆಯು ಪೂರ್ತಿಯಾಗಿ ಆದಾನವಾಗಿ ದೊರಕುತ್ತದೆ, ಮತ್ತು ಇದರೊಂದಿಗೆ ತೆರಿಗೆ ಪುನಾರವರ್ತನೆಯ ಅಗತ್ಯವಿರುವುದಿಲ್ಲ- ಇದರಿಂದ ಬಂಡವಾಳ ಸರಕುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಯಾಕೆಂದರೆ, ದಾಸ್ತಾನು ವರ್ಗಾವಣೆಯ ದಿನಾಂಕದಂದು ಪಾವತಿಸಿದ ತೆರಿಗೆಗೆ, ದಾಸ್ತಾನು ಸ್ವೀಕರಿಸಿದ ಶಾಖೆಯು ದಾಸ್ತಾನು ಬಳಸಿಕೊಂಡ ನಂತರವಷ್ಟೇ ಐಟಿಸಿ ದೊರಕುತ್ತದೆ. ಎಲ್ಲಾದರೂ ದಾಸ್ತಾನು ಕಂಪನಿಯು ಸರಿಯಾಗಿ ಯೋಜನೆ ಮಾಡದೆ ಇದ್ದರೆ, ಶಾಖೆಯಲ್ಲಿ ದಾಸ್ತಾನಿನ ಸಂಗ್ರಹ ಹೆಚ್ಚಾಗಿ ಹೋಗುತ್ತದೆ, ಇದರಿಂದ ದೀರ್ಘಕಾಲದವರೆಗೆ ಕೆಲಸದ ಬಂಡವಾಳಕ್ಕೆ ತಡೆ ಉಂಟಾಗುತ್ತದೆ- ಕೆಲಸದ ಬಂಡವಾಳದ ಜೊತೆ ಕೆಲಸ ಮಾಡುವ ಎಸ್ಎಂಇಗೆ ಇದು ಸವಾಲಾಗಿ ಪರಿಣಮಿಸುತ್ತದೆ ಬೇರೆ ರಾಜ್ಯದಿಂದ ಖರೀದಿಗೆ ಆದಾನವು ಸಾಕಷ್ಟು ದೊರಕುವುದರಿಂದ ಮತ್ತು ರಾಜ್ಯದ ಗಡಿಯ ಎಲ್ಲೆಯನ್ನು ತೆಗೆಯುವುದರಿಂದ ಸಾಕಷ್ಟು ಶಾಖೆಗಳ/ದಾಸ್ತಾನುಗಾರದ ಸಂಖ್ಯೆಯಲ್ಲಿ ಸಾಕಷ್ಟು ಕಡಿಮೆಯಾಗುತ್ತದೆ- ನಿಧಾನವಾಗಿ ಅನುಸರಣೆಯ ಉದ್ದೇಶದಿಂದ ಇಂತಹ ದಾಸ್ತಾನುಗಾರವನ್ನು ಮಾಡುವುದಕ್ಕಿಂತ ವ್ಯವಹಾರದ ಅಗತ್ಯಕ್ಕಾಗಿ ಮಾತ್ರ ದಾಸ್ತಾನುಗಾರವನ್ನು ರೂಪಿಸಿಕೊಳ್ಳುತ್ತಾರೆ. ಇದರಿಂದ ದಾಸ್ತಾನು ವರ್ಗಾವಣೆ ಇಳಿಮುಖವಾಗುತ್ತದೆ, ಇದು ವ್ಯಾಪಾರಿಗಳ ಮೇಲೆ ದಾಸ್ತಾನು ವರ್ಗಾವಣೆಯಿಂದ ಕೆಲಸದ ಬಂಡವಾಳದ ಮೇಲೆ ಉಂಟಾಗುವ ಪರಿಣಾಮವನ್ನು ಕಡಿಮೆಗೊಳಿಸುತ್ತದೆ.

ಅನುಸರಣೆ ಚಟುವಟಿಕೆ ಮತ್ತು ವೆಚ್ಚಗಳು

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ವ್ಯಾಪಾರಿಯ ತೆರಿಗೆ ಅನುಸರಣೆ ಚಟುವಟಿಕೆಯು ಹೆಚ್ಚಾಗಲಿದೆ- ವರ್ಷಕ್ಕೆ(ತ್ರೈಮಾಸಿಕಕ್ಕೆ ಒಂದರಂತೆ) 4 ಮೌಲ್ಯವರ್ಧಿತ ತೆರಿಗೆ ಸಲ್ಲಿಕೆ ಮಾಡುವ ಬದಲಾಗಿ, ಕೆಲವು ರಾಜ್ಯಗಳಲ್ಲಿ ವರ್ಷಕ್ಕೆ 12 ಮೌಲ್ಯವರ್ಧಿತ ತೆರಿಗೆ ಸಲ್ಲಿಕೆ ಮಾಡುವ ಬದಲಾಗಿ ಜಿಎಸ್ಟಿಯಲ್ಲಿ ಪ್ರತಿ ವರ್ಷಕ್ಕೆ 37 ಆದಾಯ ಸಲ್ಲಿಕೆ ಮಾಡಬೇಕುತ್ತದೆ (3 ತಿಂಗಳಿಗೊಮ್ಮೆ ಮತ್ತು ವರ್ಷಕ್ಕೊಮ್ಮೆ). ಆದರೂ, ಈಗಿನ ಅನುಸರಣೆ ಚಟುವಟಿಕೆಯನ್ನು ನೋಡಿದರೆ- ಈಗ ಹೆಚ್ಚಾಗಿ ಕಾಗದದ ನಮೂನೆಯ ಮೂಲಕ ಸಲ್ಲಿಸಬೇಕು, ಇದರೊಂದಿಗೆ ಸರಿಯಾದ ಐಟಿಸಿಯನ್ನು ಸಲ್ಲಿಸಲು ಮಾರಾಟ/ಖರೀದಿಯ ವಿವರವನ್ನು ಪರಿವಿಡಿಗಳ ಮೂಲಕ ಸಲ್ಲಿಸಬೇಕು. ಜಿಎಸ್ಟಿಯಲ್ಲಿಯೂ ಈ ಚಟುವಟಿಕೆ ಇದೇ ರೀತಿ ಇರುತ್ತದೆ. ಆದರೆ, ಈ ಚಟುವಟಿಕೆಯ ಆಳವು ಜಿಎಸ್ಟಿಯಲ್ಲಿ ಹೆಚ್ಚಾಗುತ್ತದೆ. ಜಿಎಸ್ಟಿಯಲ್ಲಿ ಐಟಿಸಿ ದೊರಕಲು ವ್ಯವಹಾರವು ಹೊಂದಾಣಿಕೆಯಾಗಬೇಕು ಮತ್ತು ಸರಿಯಾದ ಅನುಸರಣೆಯಾಗಲು ಸರಿಯಾಗಿ ಭರ್ತಿ ಮಾಡುವ ಅವಶ್ಯಕತೆ ಇರುತ್ತದೆ. ರಾಜ್ಯದ್ಯಾಂತ ಯಾರಾದರೂ ವ್ಯವಹಾರ ಹೊಂದಿದ್ದರೆ ಮಾತ್ರ, ಪ್ರತ್ಯೇಕ ನೋಂದಣಿ ಅಗತ್ಯವಿರುವುದರಿಂದ ಸಂಕೀರ್ಣತೆ ಹೆಚ್ಚಾಗಲಿದೆ. ಇದರಿಂದ ಸೇವೆಯ ಪೂರೈಕೆದಾರರಿಗೆ ಕೇಂದ್ರದ ಸೇವಾ ತೆರಿಗೆಯ ಬದಲಾಗಿ ಕೇಂದ್ರದಿಂದ ಹೊರತುಪಡಿಸಿದ ಸೇವಾ ತೆರಿಗೆಗೆ ಒಳಗಾಗಬೇಕಾಗುತ್ತದೆ. ಇದಕ್ಕಾಗಿ ವ್ಯಾಪಾರಿಗಳು ಸಮರ್ಪಕ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಸರಿಯಾದ ಜಿಎಸ್ಟಿ ತಂತ್ರಾಂಶ ಮತ್ತು ತಂತ್ರಜ್ಞಾನವನ್ನು ಸರಿಯಾದ ಸಮಯಕ್ಕೆ ಅಳವಡಿಸಿಕೊಳ್ಳಲು ಹಣ ಹೂಡಿಕೆ ಮಾಡಬೇಕಾಗುತ್ತದೆ.

ವಿವಾದದ ಅಂಶಗಳು

ಇ-ಕಾಮರ್ಸ್

ಇ-ವಾಣಿಜ್ಯ ವೇದಿಕೆಯಡಿಯಲ್ಲಿ ವ್ಯಾಪಾರಿಗಳಿಗೆ, ಜಿಎಸ್ಟಿಯು ಆದಾನ ತೆರಿಗೆ ಪಾವತಿ ಮತ್ತು ದೇಶಾದ್ಯಂತದ ಪೂರೈಕೆಗೆ ಒಂದೇ ತೆರಿಗೆಯ ಮೂಲಕ ವೆಚ್ಚವನ್ನು ಕಡಿಮೆಗೊಳಿಸುತ್ತದೆ. ಿ-ವಾಣಿಜ್ಯ ವ್ಯವಹಾರದ ಕುರಿತು ಹೆಚ್ಚು ಸ್ಪಷ್ಟತೆ ಇರುವುದರಿಂದ ಮತ್ತು ಏಕೀಕೃತವಾಗಿ ತೆರಿಗೆ ವಿಧಿಸುವುದರಿಂದ ಜಿಎಸ್ಟಿಯು ವ್ಯವಹಾರವನ್ನು ಸುಲಭಗೊಳಿಸುವುದನ್ನು ನಿರೀಕ್ಷಿಸಲಾಗುತ್ತಿದೆ. ಆದರೂ, ವ್ಯಾಪಾರಿಗಳು ಇ-ವಾಣಿಜ್ಯ ನಿರ್ವಾಹಕರ ಮೂಲಕ ಮೂಲದಿಂದ ತೆರಿಗೆ ಸಂಗ್ರಹ(ಟಿಸಿಎಸ್), ವ್ಯಾಪಾರಿಗಳ ಅನುಸರಣೆರಾಹಿತ್ಯ ಮತ್ತು ತಿಂಗಳ ಆಧಾರದಲ್ಲಿ ತೆರಿಗೆ ಸಲ್ಲಿಸಬೇಕಿರುವ ಪರಿಣಾಮದ ಕುರಿತು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಹೆಚ್ಚು ಮುಖ್ಯವಾಗಿ, ಕಡ್ಡಾಯ ನೊಂದಣಿಯ ಹಿನ್ನೆಲೆಯಲ್ಲಿ ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಇ-ವಾಣಿಜ್ಯ ವ್ಯಾಪಾರಿಗಳಿಗೆ ತೆರಿಗೆ ಅನುಸರಣೆ ಚಟುವಟಿಕೆಯೂ ಹೆಚ್ಚಾಗಲಿದೆ; ಇವರ ಒಟ್ಟು ವಹಿವಾಟು 75 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೂ ಅವರಿಗೆ ಸಂಯೋಜಿತ ಚಂದಾ ತೆರಿಗೆಯ ಆಯ್ಕೆ ಇರುವುದಿಲ್ಲ. ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಈ ಕುರಿತು ಜಾಗೃತಿ ಇರಬೇಕೆಂದರೆ, ಅಗತ್ಯವಾಗಿ ನಿರ್ವಹಿಸಬೇಕಾದ ಸಂಪನ್ಮೂಲಗಳ ಕುರಿತು ಮತ್ತು ತಂತ್ರಜ್ಞಾನಗಳ ಬಳಕೆಯ ಕುರಿತು ಸೂಕ್ತ ತರಬೇತಿಯ ಅಗತ್ಯವಿದ್ದು, ಇದರಿಂದ ಇ-ವಾಣಿಜ್ಯ ವ್ಯಾಪಾರಿಗಳು ಭಾರತದ ಇ-ವಾಣಿಜ್ಯ ಶಕೆಯಲ್ಲಿ ಹೆಚ್ಚು ಬಂಡವಾಳ ಖಚಿತಪಡಿಸಿಕೊಳ್ಳಬಹುದಾಗಿದೆ.

ಪ್ರತಿಲೋಮ ಶುಲ್ಕ

ಮೌಲ್ಯವರ್ಧಿತ ತೆರಿಗೆ ಪದ್ಧತಿಯಲ್ಲಿ, ನೋಂದಾಯಿಸದೆ ಇರುವ ವಿತರಕರಿಂದ, ಸ್ವೀಕೃತಿದಾರರು(ನೋಂದಾಯಿಸಿರುವ ವಿತರಕರು) ಸರಕು ಖರೀದಿ ನಡೆದರೆ ಅದಕ್ಕೆ “ಖರೀದಿ ತೆರಿಗೆ’’ ಎಂಬ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಇದೇ ಪರಿಕಲ್ಪನೆಯು “ಪ್ರತಿಲೋಮ ಶುಲ್ಕ(ರಿವರ್ಸ್ ಚಾರ್ಜ್)’’ ಹೆಸರಿನಡಿ ಉಳಿದಿದೆ- ಪ್ರಾಥಮಿಕವಾಗಿ ವಿವಿಧ ನೋಂದಾಯಿಸದೆ ಇರುವ ವಲಯಗಳಿಂದ ಸರಕುಗಳ ಮಾರಾಟಕ್ಕೆ ಅಥವಾ ಸೇವೆಯನ್ನು ಪೂರೈಕೆ ಮಾಡುವ ಸಂದರ್ಭದಲ್ಲಿ ಈ ತೆರಿಗೆ ವಿಧಿಸಲಾಗುತ್ತದೆ. ಇದು, ಸರಕಾರ ನಿರ್ದಿಷ್ಟಪಡಿಸಿದ . ಸರಕು ಮತ್ತು ಸೇವೆಯ ಪೂರೈಕೆಗೆ ಅನ್ವಯವಾಗುತ್ತದೆ. ಇದು ನಿರ್ದಿಷ್ಟಪಡಿಸಿದ ಸರಕು ಮತ್ತು ಸೇವೆಗೆ ಮಾತ್ರ ಅನ್ವಯವಾದರೂ, ಪ್ರತಿಲೋಮ ಶುಲ್ಕದಡಿಯಲ್ಲಿ ಯಾರಾದರೂ ತೆರಿಗೆ ಪಾವತಿಸಬೇಕಿದ್ದರೆ ಅವರು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.

ಇ-ಹಾದಿ ಬೆಲೆಪಟ್ಟಿ

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ- ವ್ಯಾಪಾರದ ಗಡಿರೇಖೆಗಳು ಕಡಿಮೆ ಇದ್ದರೂ ಸಂಬಂಧಪಟ್ಟ ತೆರಿಗೆಗಳು ಜಿಎಸ್ಟಿಯಲ್ಲಿ ಅಂತರ್ಗತವಾಗಿದ್ದು, ಇದರ ಅನುಷ್ಠಾನವು ಸುಲಭವಾಗಿ ಮಾಡಬಹುದಾಗಿದೆ. ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ನೋಂದಾಯಿತ ವ್ಯಕ್ತಿಯೊಬ್ಬರು 50,000 ರೂ.ಗಿಂತ ಹೆಚ್ಚಿನ ಮೊತ್ತದ ಸರಕನ್ನು ಸಾಗಿಸುವ ಸಂದರ್ಭದಲ್ಲಿ ಇ-ಹಾದಿ ಬೆಲೆಪಟ್ಟಿಯನ್ನು ಹೊಂದಿರಬೇಕು. ಭಾರತೀಯ ಮಾರುಕಟ್ಟೆಯನ್ನು ಏಕೀಕೃತಗೊಳಿಸಲು ಮತ್ತು ಸರಕುಗಳ ಸರಾಗ ಸಾಗಾಟದ ಒಟ್ಟಾರೆ ಪ್ರಕ್ರಿಯೆ ತೊಡಕಿನಿಂದ ಕೂಡಿತ್ತು ಇ-ವೇ ಬಿಲ್ . ಇದಕ್ಕೆ ಪೂರೈಕೆದಾರರ, ಸಾರಿಗೆದಾರರ ಮತ್ತು ಇದರೊಂದಿಗೆ ಸ್ವೀಕೃತಿದಾರರ ಪಾಲ್ಗೊಳ್ಳುವಿಕೆಯ ಅಗತ್ಯವೂ ಇರುತ್ತದೆ- ಸ್ವೀಕೃತಿದಾರರು ಅತ್ಯಂತ ಕಡಿಮೆ ಅವಧಿಯಲ್ಲಿ ಸರಕನ್ನು ಇ-ಹಾದಿ ಬೆಲೆಪಟ್ಟಿಯ ಮೂಲಕ ಒಪ್ಪಿಕೊಳ್ಳಲು ಮತ್ತು ನಿರಾಕರಿಸಲು ಸಂವಹನ ನಡೆಸಬೇಕಾಗುತ್ತದೆ. ಇದರಿಂದಾಗಿ, ನಿರ್ಮಾಣದ ವೆಚ್ಚಗಳು, ಅನುಸರಣೆಯ ವೆಚ್ಚಗಳು ಮತ್ತು ತಂತ್ರಜ್ಞಾನ ಅನುಷ್ಠಾನದ ವೆಚ್ಚ ಇತ್ಯಾದಿಗಳನ್ನು ಸರಿದೂಗಿಸಿದ ಉಳಿತಾಯಗಳು ಸಹ ಆವಿಯಾಗಿ ಹೋಗುವ ಸಾಧ್ಯತೆ ಇರುತ್ತದೆ. ಆದರೆ, ಒಮ್ಮೆ ಆರಂಭಿಕ ತಡೆಯನ್ನು ದಾಟಿದ ನಂತರ ಮತ್ತು ತಂತ್ರಜ್ಞಾನವನ್ನು ಸರಿಯಾಗಿ ಅಳವಡಿಸಿದ ಬಳಿಕ ಕೊಂಚ ಸಮಯದಲ್ಲಿ ಈಗಿನ ದಾಸ್ತಾನು ತೊಂದರೆಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಇತ್ತೀಚಿನ ಅಧಿಸೂಚನೆಯ ಪ್ರಕಾರ ವ್ಯವಸ್ಥೆ ಸಿದ್ಧಗೊಳ್ಳುವರೆಗೆ ಇ-ಹಾದಿ ಬೆಲೆಪಟ್ಟಿಯನ್ನು ಸ್ಥಿರಗೊಳಿಸಲು ಸರಕಾರ ನಿರ್ಧರಿಸಿದೆ.

ಉಪ ಸಂಹಾರ

ಇವೆಲ್ಲದರ ನಡುವೆಯೂ ವ್ಯಾಪಾರಿ ಸಮುದಾಯಕ್ಕೆ ಜಿಎಸ್ಟಿಯು ಶುಭ ಸುದ್ದಿಯಾಗಿದೆ. ಎಲ್ಲಿಯವರೆಗೆ, ತನ್ನ ವ್ಯವಹಾರದ ಪರಿಸರವನ್ನು ವ್ಯಾಪಾರಿ ಸರಾಗವಾಗಿ ನಿರ್ವಹಿಸುತ್ತಾನೋ, ತನ್ನ ಪೂರೈಕೆ ಜಾಲವನ್ನು ದಕ್ಷವಾಗಿ ನಿರ್ವಹಿಸುತ್ತಾರೋ ಮತ್ತು ಜಿಎಸ್ಟಿ ಅನುಸರಣೆಯನ್ನು ಸರಿಯಾಗಿ ಮಾಡುತ್ತಾರೋ- ಅಲ್ಲಿಯವರೆಗೆ ಜಿಎಸ್ಟಿಯು ಅವರಿಗೆ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ. ಆದರೂ, ಇದರ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನವು ಬದಲಾವಣೆಯ ಹರಿಕಾರವಾಗಲಿದೆ. ಭಾರತೀಯ ವಾಪಾರಿಗೆ ಹೆಚ್ಚು ವ್ಯವಹಾರದ ಪ್ರಯೋಜನಗಳನ್ನು ಜಿಎಸ್ಟಿಯು ಈ ಮೂಲಕ ಕೊಡಲಿದೆ.

Are you GST ready yet?

Get ready for GST with Tally.ERP 9 Release 6

384,980 total views, 751 views today

Pramit Pratim Ghosh

Author: Pramit Pratim Ghosh

Pramit, who has been with Tally since May 2012, is an integral part of the digital content team. As a member of Tally’s GST centre of excellence, he has written blogs on GST law, impact and opinions - for customer, tax practitioner and student audiences, as well as on generic themes such as - automation, accounting, inventory, business efficiency - for business owners.