ವ್ಯವಹಾರಗಳು ದೇಶಾದ್ಯಂತ ತಯಾರಿಕಾ ಘಟಕಗಳ ವಿತರಣೆ ವ್ಯವಸ್ಥೆಯೊಂದನ್ನು ಹೊಂದಿರುವುದು ಅಥವಾ ಸೇವಾ ಘಟಕಗಳನ್ನು ಹೊಂದಿರುವುದು ಸಾಮಾನ್ಯವಾದ ಸಂಗತಿಯಾಗಿದೆ. ಸರಳವಾಗಿ ಹೇಳುವುದಾದರೆ, ಪ್ರಧಾನ ಕಚೇರಿ(ಎಚ್ಒ) ಮತ್ತು ಶಾಖೆ ಕಚೇರಿ(ಬಿಒ) ದೇಶಾದ್ಯಂತ ವ್ಯಾಪಿಸಿರುತ್ತವೆ-ಇದು ಒಂದೇ ರಾಜ್ಯದಲ್ಲಿ ಇರುತ್ತದೆ ಅಥವಾ ಹಲವು ರಾಜ್ಯಗಳಿಗೆ ವ್ಯಾಪಿಸಿರುತ್ತದೆ. ಈ ವ್ಯವಸ್ಥೆಯಡಿ, ಅತ್ಯುತ್ತಮ ನಿರ್ವಹಣಾ ದಕ್ಷತೆ ಮತ್ತು ನಿಯಂತ್ರಣ ಹೊಂದುವುದಕ್ಕಾಗಿ, ಪ್ರಧಾನ ಕಚೇರಿಯಲ್ಲಿ ಸಾಮಾನ್ಯ ಸೇವೆಗಳನ್ನು ನೀಡಿ ಕೇಂದ್ರೀಕರಣ ಮಾಡುವುದನ್ನು ಸಾಮಾನ್ಯವಾಗಿ ಮಾಡಲಾಗುತ್ತದೆ. ಇದರಿಂದಾಗಿ ಶಾಖಾ ಘಟಕಗಳು ಬಳಕೆ ಮಾಡಿದ ಇನ್ವಾರ್ಡ್ ಪೂರೈಕೆಗೆ ಪ್ರಧಾನ ಕಚೇರಿ ಆದಾನ ತೆರಿಗೆ ಪಾವತಿ ಪಡೆಯುವ ಸ್ಥಿತಿಗೆ ತಂದೊಡ್ಡುತ್ತದೆ.

ಮೇಲೆ ತಿಳಿಸಿದ ಪರಿಸ್ಥಿತಿಯನ್ನು ತಪ್ಪಿಸುವ ಸಲುವಾಗಿ, “ಆದಾನ ಸರ್ವೀಸ್ ಡಿಸ್ಟ್ರಿಬ್ಯೂಟರ್(ಐಎಸ್ ಡಿ) ಪರಿಕಲ್ಪನೆಯನ್ನು ಸೆನ್ ವ್ಯಾಟ್ ಪಾವತಿ ನಿಯಮದಲ್ಲಿ ತರಲಾಗಿದ್ದು, ತಯಾರಿಕೆ ಅಥವಾ ತೆರಿಗೆ ವಿಧಿಸಬಲ್ಲ ಕಾರ್ಯನಿರ್ವಹಿಸುತ್ತಿರುವ ಸಂಬಂಧಪಟ್ಟ ಘಟಕಗಳಿಗೆ ಪ್ರಧಾನ ಕಚೇರಿಯು ಆದಾನ ತೆರಿಗೆ ವಿತರಣೆಯನ್ನು ವಿತರಣೆ ಮಾಡಲು ಅವಕಾಶ ದೊರಕುತ್ತದೆ. ಸಾಮಾನ್ಯ ಸೇವೆಗಳನ್ನು ನಡೆಸಲು ಪ್ರಧಾನ ಕಚೇರಿಯು ಕೇಂದ್ರೀಕೃತ ಬಿಲ್ಲಿಂಗ್ ವಿಧಾನವಾದ “ಆದಾನ ಸೇವಾ ವಿತರಣೆ’ಯನ್ನು ಮಾಡಿದೆ. ಕ್ರೆಡಿಟ್ ವಿತರಣೆ ಮಾಡಲು ಎಚ್ ಕ್ಯೂ ಐಎಸ್ ಡಿ ಯೆಂಬ ಪ್ರತ್ಯೇಕ ನೋಂದಣಿ ಮಾಡಿದೆ ಮತ್ತು ಅರ್ಧವರ್ಷಕ್ಕೊಮ್ಮೆ ಆದಾಯ ನಮೂನೆಸಲ್ಲಿಸುತ್ತದೆ.
ಐಎಸ್ ಡಿಯಾಗಿ, ಪ್ರಧಾನ ಕಚೇರಿಯು ಪ್ರಮುಖವಾಗಿ ಈ ಮುಂದಿನ ಕಾರ್ಯಗಳನ್ನು ಮಾಡಬೇಕಿದೆ:

  • ಸಾಮಾನ್ಯ ಆದಾನ ಸೇವೆಯನ್ನು ಪಡೆಯುವ ಸಲುವಾಗಿ ಸೇವಾ ತೆರಿಗೆ ಸರಕಪಟ್ಟಿಯನ್ನು ಸ್ವೀಕರಿಸುವುದು.
  • ಅಗತ್ಯಕ್ಕೆ ತಕ್ಕಂತೆ ಸರಕುಪಟ್ಟಿ/ಚಲನ್ ಇತ್ಯಾದಿಗಳನ್ನು ಪಡೆದು ಆದಾನ ತೆರಿಗೆ ಪಾವತಿ ಅನ್ನು ಹಂಚುವುದು.

ಜಿಎಸ್ಟಿಯಡಿಯಲ್ಲಿ ಆದಾನ ಸೇವೆಯ ವಿತರಕರು

ಜಿಎಸ್ಟಿಯಲ್ಲಿ ಸಹ ಆದಾನ ಸೇವೆ ವಿತರಣೆ(ಐಎಸ್ ಡಿ ) ಸೌಲಭ್ಯವನ್ನು ನೀಡಲಾಗಿದೆ. ಇದನ್ನು “ಸರಕು ಮತ್ತು/ ಅಥವಾ ಸೇವೆಯ ಪೂರೈಕೆದಾರರ ಕಚೇರಿಯು, ತೆರಿಗೆ ಸರಕುಪಟ್ಟಿಯ ಮೂಲಕ ಆದಾನ ಸೇವೆಯನ್ನು ಪಡೆದರೆ, ಮತ್ತು ಒಂದೇ ಪ್ಯಾನ್ ನಡಿ ನೋಂದಾಯಿಸಿರುವ ಸರಕು ಮತ್ತು/ಅಥವಾ ಸೇವೆಯ ಪೂರೈಕೆದಾರರಿಗೆ ತೆರಿಗೆ ಕ್ರೆಡಿಟ್ ಆಗಿರುವುದನ್ನು ವಿತರಣೆ ಮಾಡಲು ಅವಕಾಶ ನೀಡಲಾಗಿದೆ’’ ಎಂದು ವ್ಯಾಖ್ಯಾನಿಸಲಾಗಿದೆ ಐಎಸ್ಡಿಯು ಈ ಮುಂದಿನವುಗಳನ್ನು ಕಚೇರಿ ಎಂದು ಪರಿಗಣಿಸುತ್ತದೆ:

  • ಇದು ಪ್ರಧಾನ ಕಚೇರಿ, ಆಡಳಿತ ಕಚೇರಿ, ಕಂಪನಿ ಕಚೇರಿ, ಪ್ರಾದೇಶಿಕ ಕಚೇರಿ, ಡಿಪೊ ಮತ್ತು ಇತರೆ ಕಚೇರಿಗಳಾಗಿರಬಹುದು, ಮತ್ತು ನೋಂದಾಯಿತ ವ್ಯಕ್ತಿಯಿಂದ ಇವು ನೋಂದಾಯಿತವಾಗಿದ್ದರೆ ತೆರಿಗೆ ಕ್ರೆಡಿಟ್ ಅನ್ನು ವಿತರಣೆ ಮಾಡಲು ಅವಕಾಶವಿದೆ.
  • ಆಂತರಿಕ ಸೇವೆಯ ಪೂರೈಕೆಗೆ ಸ್ವೀಕೃತಿಯಾಗಿ ತೆರಿಗೆ ಸರಕುಪಟ್ಟಿಯನ್ನು ಪಡೆಯುವ ಕಚೇರಿಯಾಗಿರಬೇಕು
  • ಸೇವೆಯನ್ನು ಅನುಭೋಗಿಸುವ ಶಾಖಾ ಘಟಕಕ್ಕೆ ಆಂತರಿಕ ಸೇವಾ ಪೂರೈಕೆಗಾಗಿ ತೆರಿಗೆ ಕ್ರೆಡಿಟ್ ವಿತರಣೆ ಮಾಡಲು, ಸರಕುಪಟ್ಟಿ ಪಡೆಯಬೇಕು.
ಜಿಎಸ್ಟಿಯಡಿ ನೋಂದಣಿ

ಪ್ರತ್ಯೇಕ ನೋಂದಣಿಗೆ ಒಂದು ಐಎಸ್ಡಿ ಅಗತ್ಯವಿದೆ. ಈ ನೋಂದಣಿಯು ಕಡ್ಡಾಯವಾಗಿದೆ ಮತ್ತು ಐಎಸ್ಡಿ ನೋಂದಾಯಿಸಿಕೊಳ್ಳಲು ವ್ಯವಹಾರದ ಹಣದ ಮಿತಿ ಇರುವುದಿಲ್ಲ. ಈಗಿನ ತೆರಿಗೆ ಪದ್ಧತಿಯಲ್ಲಿ (ಉದಾಹರಣೆಗೆ ಸೇವಾ ತೆರಿಗೆಯಡಿಯಲ್ಲಿ) ಈಗಾಗಲೇ ನೋಂದಾಯಿಸಿರುವ ವ್ಯವಹಾರಗಳು ಜಿಎಸ್ಟಿಯಡಿ ಹೊಸ ಐಎಸ್ಡಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿದೆ. ಇದು ಯಾಕೆಂದರೆ, ಹಳೆಯ ಐಎಸ್ಡಿ ನೋಂದಣಿಯನ್ನು ಜಿಎಸ್ಟಿ ಪದ್ಧತಿಗೆ ಕೊಂಡೊಯ್ಯಲು ಸಾಧ್ಯವಿಲ್ಲದೆ ಇರುವುದು ಇದಕ್ಕೆ ಕಾರಣವಾಗಿದೆ.

Businesses who are already registered as an Input Service Distributor under the existing regime (i.e. under Service Tax), will be required obtain a new ISD registration under GST.Click To Tweet
ವಿತರಣೆ ವಿಧಾನ

ಜಿಎಸ್ಟಿಯಡಿಯಲ್ಲಿ, ರಾಜ್ಯದೊಳಗಿನ ವಹಿವಾಟಿಗೆ ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ಅನ್ವಯವಾಗಲಿದೆ. ಎಲ್ಲಾದರೂ, ವಹಿವಾಟು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದರೆ ಸಿಜಿಎಸ್ಟಿ ಮತ್ತು ಯುಟಿಜಿಎಸ್ಟಿ ಅನ್ವಯವಾಗುತ್ತದೆ. ಎಲ್ಲಾದರೂ ಅಂತರ್ ರಾಜ್ಯದೊಳಗಿನ ವಹಿವಾಟು ಮತ್ತು ಆಮದು ವಹಿವಾಟು ಆಗಿದ್ದರೆ ಐಜಿಎಸ್ಟಿ ಅನ್ವಯವಾಗಲಿದೆ. ಐಎಸ್ಡಿಯಲ್ಲಿ ಕ್ರೆಡಿಟ್ ವಿತರಣೆ ಮಾಡಲು ಈ ಮುಂದಿನ ಸನ್ನಿವೇಶಗಳು ಅಥವಾ ಸಂದರ್ಭಗಳು ಇರಬಹುದು:

  • ಐಎಸ್ ಡಿ ಮತ್ತು ಕ್ರೆಡಿಟ್ ಸ್ವೀಕರಿಸುವವರು ಒಂದೇ ರಾಜ್ಯದಲ್ಲಿ ಇದ್ದಾಗ.
  • ಐಎಸ್ ಡಿ ಮತ್ತು ಕ್ರೆಡಿಟ್ ಸ್ವೀಕರಿಸುವವರು ಬೇರೆ ಬೇರೆ ರಾಜ್ಯದಲ್ಲಿ ಇದ್ದಾಗ.

ಯಾವ ಶಾಖೆಗೆ ಆದಾನ ತೆರಿಗೆ ಪಾವತಿ ವಿತರಣೆ ಮಾಡಲಾಗುತ್ತೋ ಅದನ್ನು “ಕ್ರೆಡಿಟ್ ಸ್ವೀಕರಿಸುವವರು’’ ಎನ್ನಲಾಗುತ್ತದೆ.

ಐಎಸ್ ಡಿ ಮತ್ತು ಕ್ರೆಡಿಟ್ ಸ್ವೀಕರಿಸುವವರು ಒಂದೇ ರಾಜ್ಯದಲ್ಲಿ ಇದ್ದಾಗ.

ಐಎಸ್ ಡಿ ಮತ್ತು ಕ್ರೆಡಿಟ್ ಸ್ವೀಕರಿಸುವವರು ಒಂದೇ ರಾಜ್ಯದಲ್ಲಿ /ಕೇಂದ್ರಾಡಳಿತ ಪ್ರದೇಶದಲ್ಲಿ ಇದ್ದಾಗ ಐಜಿಎಸ್ಟಿ, ಸಿಜಿಎಸ್ಟಿ, ಎಸ್ಜಿಎಸ್ಟಿ ಮತ್ತು ಯುಟಿಜಿಎಸ್ಟಿಯ ಆದಾನ ತೆರಿಗೆ ಪಾವತಿ ಯನ್ನು ಸ್ವೀಕೃತಿದಾರರಿಗೆ ಈ ಮುಂದಿನ ವಿಧಾನಗಳ
ಮೂಲಕ ವಿತರಣೆ ಮಾಡಲಾಗುತ್ತದೆ
GST Input Service Distributor same state

*ಕೇಂದ್ರಾಡಳಿತದ ಪ್ರದೇಶದೊಳಗಿನ ವಹಿವಾಟಿಗೆ ಅನ್ವಯವಾಗುತ್ತದೆ.

ಇದನ್ನು ಒಂದು ಉದಾಹರಣೆ ಮೂಲಕ ಅರ್ಥಮಾಡಿಕೊಳ್ಳೋಣ.

ಟಾಪ್-ಇನ್-ಟೌನ್ ಹೋಂ ಅಪ್ಲಿಯೆನ್ಸ್ ಲಿಮಿಟೆಡ್, ಕರ್ನಾಟಕದ ಬೆಂಗಳೂರಿನಲ್ಲಿದೆ. ಈ ಕಂಪನಿಯು ಮೈಸೂರು, ಚೆನ್ನೈ ಮತ್ತು ಮುಂಬೈನಲ್ಲಿಯೂ ಘಟಕಗಳನ್ನು ಹೊಂದಿದೆ. ಬೆಂಗಳೂರಿನಲ್ಲಿರುವ ಘಟಕವು ಪ್ರಧಾನ ಕಚೇರಿಯಾಗಿದ್ದು ಮತ್ತು ಐಎಸ್ಡಿಯಾಗಿ ನೋಂದಾಯಿಸಿದೆ. ಈ ಕಚೇರಿಯು ತನ್ನ ಇತರ ಘಟಕಗಳದ್ದ ಸೇರಿದಂತೆ ಬಲ್ಕ್ ಸೇವೆಗಳನ್ನು ಮಾಡುತ್ತದೆ.
ಟಾಪ್-ಇನ್-ಟೌನ್ ಹೋಂ ಅಪ್ಲಿಯೆನ್ಸ್ ಲಿಮಿಟೆಡ್ (ಎಚ್ಒ), ಪ್ರಮುಖವಾಗಿ ಮೈಸೂರು ಘಟಕದಲ್ಲಿ ಒದಗಿಸಿದ ಜಾಹೀರಾತು ಸೇವೆಗಾಗಿ ಜಿಎಸ್ಟಿ 18,000 ರೂ(ಸಿಜಿಎಸ್ಟಿ 9,000 ರೂ.+ಎಸ್ಜಿಎಸ್ಟಿ 9000 ರೂ.) ಸೇರಿದಂತೆ 1,00,000 ಸರಕುಪಟ್ಟಿ ಸ್ವೀಕರಿಸುತ್ತದೆ.
ಸಿಜಿಎಸ್ಟಿ 9000 ರೂ. ಮತ್ತು ಎಸ್ಜಿಎಸ್ಟಿ 9000 ರೂ. ನ ಕ್ರೆಡಿಟ್ ಅನ್ನು ಮೈಸೂರು ಘಟಕಕ್ಕೆ ವಿತರಣೆ ಮಾಡಲಾಗುತ್ತದೆ.

ಐಎಸ್ ಡಿ ಮತ್ತು ಕ್ರೆಡಿಟ್ ಸ್ವೀಕರಿಸುವವರು ಬೇರೆ ಬೇರೆ ರಾಜ್ಯದಲ್ಲಿ ಇದ್ದಾಗ.
ಭಿನ್ನ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದಲ್ಲಿ ಐಎಸ್ ಡಿ ಮತ್ತು ಕ್ರೆಡಿಟ್ ಸ್ವೀಕರಿಸುವವರು ಇದ್ದಾಗ, ಐಜಿಎಸ್ಟಿ, ಸಿಜಿಎಸ್ಟಿ, ಎಸ್ಜಿಎಸ್ಟಿ, ಮತ್ತು ಯುಟಿಜಿಎಸ್ಟಿಗೆ ಆದಾನ ತೆರಿಗೆ ಪಾವತಿ ದೊರಕುತ್ತದೆ, ಇದನ್ನು ಈ ಮುಂದಿನ ವಿಧಾನದಲ್ಲಿ ವಿತರಣೆ ಮಾಡಲಾಗುತ್ತದೆ:
GST ISD

ಉದಾಹರಣೆಗೆ, ಟಾಪ್-ಇನ್-ಟೌನ್ ಹೋಂ ಅಪ್ಲಿಯೆನ್ಸ್ ಲಿಮಿಟೆಡ್ (ಎಚ್ಒ), ಪ್ರಮುಖವಾಗಿ ಚೆನ್ನೈ ಘಟಕದಲ್ಲಿ ಒದಗಿಸಿದ ಜಾಹೀರಾತು ಸೇವೆಗಾಗಿ ಜಿಎಸ್ಟಿ 18,000 ರೂ(ಸಿಜಿಎಸ್ಟಿ 9,000 ರ.+ಎಸ್ಜಿಎಸ್ಟಿ 9000 ರೂ.) ಸೇರಿದಂತೆ 1,00,000 ಸರಕುಪಟ್ಟಿ ಸ್ವೀಕರಿಸುತ್ತದೆ.
ಸಿಜಿಎಸ್ಟಿಯ 9000 ರೂ. ಮತ್ತು ಎಸ್ಜಿಎಸ್ಟಿಯ 9000 ರೂ.ನ ಕ್ರೆಡಿಟ್ ಅನ್ನು ಚೆನ್ನೈ ಘಟಕಕ್ಕೆ ಐಜಿಎಸ್ಟಿಯಾಗಿ 18,000 ರೂ. ನೀಡಲಾಗುತ್ತದೆ.

ಜಿಎಸ್ಟಿಯಡಿ ಆದಾಯ ನಮೂನೆನಮೂನೆ ಸಲ್ಲಿಸುವುದು

ಆದಾಯ ನಮೂನೆಬಗೆ ಆವರ್ತನ ಬಾಕಿ ತೆರಬೇಕಾದ ದಿನಾಂಕ ಭರ್ತಿ ಮಾಡಬೇಕಾದ ವಿವರಗಳು
ಜಿಎಸ್ಟಿಆರ್-6ಎ ನಮೂನೆ ತಿಂಗಳು ಮುಂದಿನ ತಿಂಗಳ 11ನೇ ತಾರೀಕು ಪೂರೈಕೆದಾರರು ಸಲ್ಲಿಸಿದ ನಮೂನೆ ಜಿಎಸ್ಟಿಆರ್-1 ಆಧಾರದಲ್ಲಿ ಐಎಸ್ಡಿ ಸ್ವೀಕೃತರು ಇನ್ವಾರ್ಡ್ ಪೂರೈಕೆಯ ವಿವರಗಳನ್ನು ಬರೆಯಬೇಕು
ಜಿಎಸ್ಟಿಆರ್-6 ನಮೂನೆ ತಿಂಗಳು ಮುಂದಿನ ತಿಂಗಳ 13ನೇ ದಿನಾಂಕ ವಿತರಣೆ ಮಾಡಿದ ಆದಾನ ಕ್ರೆಡಿಟ್ ನ ವಿವರಗಳನ್ನು ಭರ್ತಿ ಮಾಡಬೇಕು.

ಜಿಎಸ್ಟಿಯಲ್ಲಿರುವ ಐಎಸ್ ಡಿ ಪರಿಕಲ್ಪನೆಯು ಈಗಿನ ತೆರಿಗೆ ಪದ್ಧತಿಯಲ್ಲಿರುವ ಕ್ರೆಡಿಟ್ ನಿಯ ಮತ್ತು ಸೇವಾ ತೆರಿಗೆಗಳಂತೆಯೇ ಇದೆ. ಈ ಬ್ಲಾಗ್ ಬರಹದಲ್ಲಿ ನಾವು ಜಿಎಸ್ಡಿಯಲ್ಲಿರುವ ಐಎಸ್ ಡಿಯ ಮೂಲಭೂತ ಅಂಶಗಳನ್ನು ಚರ್ಚೆ ಮಾಡಿದ್ದೇವೆ. ಕ್ರೆಡಿಟ್ ಸ್ವೀಕರಿಸುವರಿಗೆ ಕ್ರೆಡಿಟ್ ವಿತರಣೆ ಮಾಡುವುದು ಹೇಗೆಂಬುದನ್ನು ಮುಂದಿನ ಲೇಖನದಲ್ಲಿ ತಿಳಿಸಲಾಗುವುದು.

Are you GST ready yet?

Get ready for GST with Tally.ERP 9 Release 6

79,974 total views, 50 views today