ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಸಾಮಾನ್ಯವಾಗಿ ತೆರಿಗೆ ಸರಕುಪಟ್ಟಿ ಮತ್ತು ಪೂರೈಕೆಯ ಬಿಲ್ ಎಂಬ ಎರಡು ಸರಕುಪಟ್ಟಿಯನ್ನು ನೀಡಬೇಕಾಗುತ್ತದೆ. ತೆರಿಗೆ ವಿಧಿಸಬಲ್ಲ ಸರಕು ಅಥವಾ ಸೇವೆಯ ಪೂರೈಕೆಗೆ ನೋಂದಾಯಿತ ತೆರಿಗೆದಾರರು ತೆರಿಗೆ ಸರಕುಪಟ್ಟಿ ಸಿದ್ಧಪಡಿಸುತ್ತಾರೆ. ವಿನಾಯಿತಿ ಇರುವ ಸರಕು ಅಥವಾ ಸೇವೆಯನ್ನು ಪೂರೈಕೆ ಮಾಡುವಾಗ ಮತ್ತು ಸಂಯೋಜಿತ ತೆರಿಗೆದಾರರಿಂದ ಪೂರೈಕೆ ಮಾಡುವಾಗ ನೋಂದಾಯಿತ ತೆರಿಗೆದಾರ ವ್ಯಕ್ತಿ ಪೂರೈಕೆ ಬಿಲ್ ನೀಡಬೇಕಾಗುತ್ತದೆ.
ಈ ಬ್ಲಾಗಿನಲ್ಲಿ ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಹೊಸದಾಗಿ ಸೇರಿರುವುದನ್ನು ಪರಿಗಣಿಸಿಕೊಂಡು, ಕೆಲವು ನಿರ್ದಿಷ್ಟ ವ್ಯವಹಾರಗಳ ಸಂದರ್ಭದಲ್ಲಿ ಸರಕುಪಟ್ಟಿ ನೀಡುವುದು ಮತ್ತು ಇಂತಹ ನಿರ್ದಿಷ್ಟ ಸರಕುಪಟ್ಟಿಗಳಿಗೆ ಅಗತ್ಯವಿರುವ ವಿವರಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಜಿಎಸ್ಟಿಯಡಿಯಲ್ಲಿರುವ ವಿವಿಧ ಸರಕುಪಟ್ಟಿಗಳು

ಮುಂಗಡ ಪಾವತಿ ಸ್ವೀಕೃತಿ ರಸೀದಿ

ಪೂರೈಕೆಗಾಗಿ ನೋಂದಾಯಿತ ವಿತರಕರು ಮುಂಗಡ ಪಾವತಿ ಸ್ವೀಕರಿಸುವಾಗ, ವಿತರಕರು ಕಡ್ಡಾಯವಾಗಿ ಸ್ವೀಕೃತಿದಾರರಿಂದ ಮುಂಗಡ ಹಣ ಪಡೆದಿರುವುದಕ್ಕೆ “ಸ್ವೀಕೃತಿ ರಸೀದಿ’’ ನೀಡಬೇಕು. ಸ್ವೀಕೃತಿ ರಸೀದಿ ಸ್ಯಾಂಪಲ್ ಕೆಳಗೆ ನೀಡಲಾಗಿದೆ:

Receipt Voucher GST

ವಿತರಕರೊಬ್ಬರು ಸ್ವೀಕೃತಿ ರಸೀದಿ ಸ್ವೀಕರಿಸಿದ ನಂತರ, ಎಲ್ಲಾದರೂ ಪೂರೈಕೆ ಮಾಡಲಾಗದೆ ಇದ್ದರೆ, ಮುಂಗಡ ಸ್ವೀಕರಿಸಿರುವುದಕ್ಕೆ ಪ್ರತಿಯಾಗಿ ವಿತರಕರು ಹಣ ಮರುಪಾವತಿಯ ರಸೀದಿಯನ್ನು ನೀಡಬಹುದಾಗಿದೆ.

ಸರಕುಪಟ್ಟಿ ಪಡೆಯದೆ ಸರಕು ಸಾಗಾಟದ ಸಂದರ್ಭ

ಯಾವುದೇ ಸರಕುಪಟ್ಟಿ ಇಲ್ಲದೆ ಕೆಲವೊಮ್ಮೆ ಸರಕು ಸಾಗಾಟ ನಡೆಸಬೇಕಾಗಬಹುದು. ಅಂತಹ ಸಂದರ್ಭಗಳೆಂದರೆ:
1. ದ್ರವೀಕೃತ ಅನಿಲ ಪೂರೈಕೆಯ ಸಂದರ್ಭ, ಆ ಸಮಯದಲ್ಲಿ ಪೂರೈಕೆಯ ಸ್ಥಳದಿಂದ ರಿಮೂವಲ್ ಸಮಯದವರೆಗೆ ಸರಕಿನ ಪ್ರಮಾಣವು ಪೂರೈಕೆದಾರರಿಗೆ ಅರಿವಿರುವುದಿಲ್ಲ.
2. ಜಾಬ್ ವರ್ಕ್ ಗಾಗಿ ಸರಕುಗಳ ಸಾಗಾಟ
3. ಪೂರೈಕೆ ಹೊರತುಪಡಿಸಿ ಸರಕುಗಳ ಸಾಗಾಟ
4. ಇತರೆ ಯಾವುದೇ ಪ್ರಮುಖ ಪೂರೈಕೆಗಳು

ಇಂತಹ ಸಂದರ್ಭಗಳಲ್ಲಿ, ಸಾಗಾಣೆದಾರರು ಸರಕನ್ನು ಸಾಗಿಸಲು ತೆಗೆಯುತ್ತಿರುವ ಸಂದರ್ಭದಲ್ಲಿ ಡೆಲಿವರಿ ರಸೀದಿ ತಯಾರು ಮಾಡಬೇಕು.

ಈ ಕೆಳಗೆ ನೀಡಿದಂತೆ ಸ್ಯಾಂಪಲ್ ಡೆಲಿವರಿ ಚಲನ್ ಇರುತ್ತದೆ:

GST Delivery Challan

ಡೆಲಿವರಿ ರಸೀದಿಯ ಪ್ರತಿಗಳು

ಡೆಲಿವರಿ ಚಲನ್ ನ ಮೂರು ಪ್ರತಿಗಳನ್ನು ರಚಿಸಬೇಕು, ಅದರ ವಿವರ ಕೆಳಗೆ ನೀಡಲಾಗಿದೆ:

ಮೂಲ ಪ್ರತಿ:- ಇದನ್ನು ಕನ್ಸೈನಿ ಹೊಂದಿರಬೇಕು ಮತ್ತು ಅದರಲ್ಲಿ “ಒರಿಜಿನಲ್ ಫಾರ್ ಕನ್ಸೈನಿ “ ಎಂದು ಉಲ್ಲೇಖಿಸಿರಬೇಕು.

ನಕಲಿ ಪ್ರತಿ: – ಇದನ್ನು ಸಾಗಾಣೆದಾರರಿಗೆ ನೀಡಬೇಕು ಮತ್ತು ಇದರಲ್ಲಿ “ಡುಬ್ಲಿಕೇಟ್ ಫಾರ್ ಟ್ರಾನ್ಸ್ ಪೋರ್ಟರ್’’ ಎಂದು ಉಲ್ಲೇಖಿಸಿರಬೇಕು.

ಮೂರನೇ ನಕಲಿ ಪ್ರತಿ: – ಮೂರನೇ ಪ್ರತಿಯನ್ನು ಕನ್ಸೈನರ್ ಹೊಂದಿರಬೇಕು ಮತ್ತು ಅದರಲ್ಲಿ “ಟ್ರಿಪ್ಲಿಕೇಟ್ ಫಾರ್ ಕನ್ಸೈನರ್ “ ಎಂದು ನಮೋದಿಸಿರಬೇಕು.

ಟಿಪ್ಪ ಣಿಗಳು:
1. ಎಲ್ಲಾದರೂ ಸರಕನ್ನು ಸರಕುಪಟ್ಟಿ ಬದಲಿಗೆ ರಸೀದಿ ನೀಡಿ ಸಾಗಾಟ ಮಾಡುತ್ತಿದ್ದರೆ, ಈ ವಿವರವನ್ನು ಇ-ವೇ ಬಿಲ್ ನಲ್ಲಿ ನಮೋದಿಸಬೇಕು.
2. ಎಲ್ಲಾದರೂ ಸರಕನ್ನು ಸ್ವೀಕೃತಿದಾರರಿಗೆ ಪೂರೈಸುವ ಸಲುವಾಗಿ ಸರಕುಪಟ್ಟಿ ಇಲ್ಲದೆ ಸಾಗಾಟ ಮಾಡಿದರೂ, ಸರಕು ಡೆಲಿವರಿ ಆದ ನಂತರವಾದರೂ ಪೂರೈಕೆದಾರರು ಸರಕುಪಟ್ಟಿ ರಚಿಸಬೇಕು.

ಸರಕು ಸಾರಿಗೆ ಏಜೆನ್ಸಿಯು ಸಾಗಾಟ ಸೇವೆಯನ್ನು ನೀಡುವ ಸಂದರ್ಭ

ಸರಕನ್ನು ಟ್ರಾನ್ಸ್ ಪೋರ್ಟೇಷನ್ ಸೇವೆಯ ಮೂಲಕ ರಸ್ತೆಯ ಮೂಲಕ ಗೂಡ್ಸ್ ಕ್ಯಾರೇಜಿನಲ್ಲಿ ಪೂರೈಕೆ ಮಾಡುತ್ತಿರುವ ಸಂದರ್ಭದಲ್ಲಿ ಪೂರೈಕೆದಾರರು ಕಡ್ಡಾಯವಾಗಿ ಒಂದು ತೆರಿಗೆ ಸರಕುಪಟ್ಟಿ ಅಥವಾ ಇತರೆ ಯಾವುದೇ ದಾಖಲೆಯನ್ನು ಸರಕುಪಟ್ಟಿಯ ಬದಲಿಗೆ ಹೊಂದಿರಬೇಕು.

ಗೂಡ್ಸ್ ಸಾಗಾಟ ಏಜೆನ್ಸಿ ರಚಿಸಬೇಕಾದ ಸ್ಯಾಂಪಲ್ ದಾಖಲೆ ಈ ಮುಂದಿನಂತೆ ಇದೆ:
GST invoice format Goods transportation agency

ಪ್ರಯಾಣಿಕರ ಸಾಗಾಟ ಸೇವೆಯ ಪೂರೈಕೆ

ಎಲ್ಲಾದರೂ ವ್ಯಕ್ತಿಯೊಬ್ಬರು ಪ್ರಯಾಣಿಕರ ಸಾಗಾಟ ಸೇವೆ ನೀಡುತ್ತಿರುವ ಸಂದರ್ಭದಲ್ಲಿ ಟಿಕೇಟ್ ಸೇರಿದಂತೆ ಸರಕುಪಟ್ಟಿ ಹೊಂದಿರಬೇಕು. ಟಿಕೇಟ್ ಯಾವುದೇ ನಮೂನೆಯಲ್ಲಿರಬಹುದು, ಅದು ಸೀರಿಯಲ್ ಸಂಖ್ಯೆ ಹೊಂದಿರಬಹುದು ಅಥವಾ ಹೊಂದಿರದೆ ಇರಬಹುದು ಮತ್ತು ಸ್ವೀಕೃತಿದಾರರ ವಿಳಾಸ ಹೊಂದಿರಬಹುದು ಅಥವಾ ಹೊಂದಿರದೆಯೂ ಇರಬಹುದು.

ಪ್ರಯಾಣಿಕ ಸಾಗಾಟ ಸೇವೆ ಪೂರೈಕೆದಾರರು ಸರಕುಪಟ್ಟಿಯಲ್ಲಿ ನೀಡಬೇಕಾದ ವಿವರಗಳು
ಪೂರೈಕೆದಾರರ ಜಿಎಸ್ಟಿಐಎನ್ ಹೆಸರು, ವಿಳಾಸ
ನೀಡಿದ ದಿನಾಂಕ
ಎಲ್ಲಾದರೂ ಸ್ವೀಕೃತಿದಾರರು ನೋಂದಾಯಿಸಿಕೊಂಡಿದ್ದರೆ- ಸ್ವೀಕೃತಿದಾರರ ಹೆಸರು ಮತ್ತು ಜಿಎಸ್ಟಿಐಎನ್/ಯುಐಎನ್
ಅಕೌಂಟಿಂಗ್ ಕೋಡ್ ಆಫ್ ಸರ್ವೀಸ್ (ನಿಗದಿಪಡಿಸಿದ ವ್ಯಕ್ತಿಗಳಿಗೆ ಮಾತ್ರ ಇದರ ಅಗತ್ಯವಿದೆ)
ಸೇವೆಯ ಟಿಪ್ಪಣಿ
ಒಟ್ಟು ಮೌಲ್ಯ
ತೆರಿಗೆ ವಿಧಿಸಬಹುದಾದ ಮೌಲ್ಯ, ಅಕೌಂಟ್ ವಿನಾಯಿತಿ ಮೌಲ್ಯ, ಇತರೆ
ತೆರಿಗೆ ದರ (ಸಿಜಿಎಸ್ಟಿ, ಎಸ್ಜಿಎಸ್ಟಿ, ಐಜಿಎಸ್ಟಿ, ಯುಟಿಜಿಎಸ್ಟಿ ಅಥವಾ ಸೆಸ್)
ತೆರಿಗೆಯ ಮೊತ್ತ (ಸಿಜಿಎಎಸ್ಟಿ, ಎಸ್ಜಿಎಸ್ಟಿ, ಐಜಿಎಸದ್ಟಿ, ಯುಟಿಜಿಎಸ್ಟಿ ಅಥವಾ ಸೆಸ್)
ಸಹಿ

Are you GST ready yet?

Get ready for GST with Tally.ERP 9 Release 6

286,315 total views, 2 views today