ಪ್ರತಿಯೊಂದು ವ್ಯವಹಾರಕ್ಕೂ ತೆರಿಗೆ ಅನುಸರಿಸುವಿಕೆಯನ್ನು ಅಳವಡಿಸಲು ಇನ್ವಾಯ್ಸ್ ಎನ್ನುವುದು ಅತ್ಯಂತ ನಿರ್ಣಯಕ ಸಂಗತಿಯಾಗಿದೆ. ಜಿಎಸ್ಟಿಯಡಿ ಇನ್ವಾಯ್ಸ್ ಸಿದ್ಧ ಮಾಡಲು ಇರುವ ನಿಯಮಗಳ ಕುರಿತು ತಿಳಿದಿರುವುದು ಅತ್ಯಂತ ಅವಶ್ಯಕವಾಗಿದೆ. ಇದನ್ನು ವಿವರವಾಗಿ ಅರ್ಥಮಾಡಿಕೊಳ್ಳೋಣ.

ಈಗಿನ ತೆರಿಗೆ ಪದ್ಧತಿಯಲ್ಲಿ ಇನ್ವಾಯ್ಸ್ ಪ್ರಕ್ರಿಯೆ

ಈಗಿನ ತೆರಿಗೆ ಪದ್ಧತಿಯಲ್ಲಿ ಎರಡು ಬಗೆಯ ಇನ್ವಾಯ್ಸ್ ಪ್ರಕ್ರಿಯೆ ಚಾಲ್ತಿಯಲ್ಲಿದೆ:

  1. ತೆರಿಗೆ ಇನ್ವಾಯ್ಸ್– ಇದನ್ನು ನೋಂದಾಯಿಸಿಕೊಂಡಿರುವ ವಿತರಕರಿಗೆ ನೀಡಲಾಗುತ್ತದೆ, ಮತ್ತು ತೆರಿಗೆ ಪಾವತಿಯನ್ನು ಪಡೆಯಲು ಇದನ್ನು ಬಳಸಬಹುದಾಗಿದೆ. ಈಗಿನ ತೆರಿಗೆ ಪದ್ಧತಿಯಲ್ಲಿ `ರೂಲ್ 11 ಎಕ್ಸೈಸ್ ಇನ್ವಾಯ್ಸ್ ಮತ್ತು ತೆರಿಗೆ ಇನ್ವಾಯ್ಸ್ ‘ ಎರಡು ಪ್ರಮುಖ ಬಗೆಯ ತೆರಿಗೆ ಇನ್ವಾಯ್ಸ್ ಅಸ್ತಿತ್ವದಲ್ಲಿದ್ದು, ಅವುಗಳ ಮಾದರಿ ರಚನೆಯನ್ನು ಕೆಳಗೆ ನೀಡಲಾಗಿದೆ.
   Tax-invoice-in-the-current-tax-regime

 

 1. ವಾಣಿಜ್ಯ ಇನ್ವಾಯ್ಸ್ – ನೋಂದಾಯಿಸಿರದ ವಿತರಕರು ಅಥವಾ ರಿಟೇಲ್ ಗ್ರಾಹಕರಿಗೆ ಈ ಇನ್ವಾಯ್ಸ್ ನೀಡಲಾಗುತ್ತದೆ, ಮತ್ತು ಈ ಇನ್ವಾಯ್ಸ್ಗೆ ಯಾವುದೇ ತೆರಿಗೆ ಪಾವತಿ ಪಡೆಯಲು ಅವಕಾಶವಿಲ್ಲ. ಈಗಿನ ತೆರಿಗೆ ಪದ್ಧತಿಯಲ್ಲಿ ಅಸ್ತಿತ್ವದಲ್ಲಿರುವ ವ್ಯಾಪಾರ ಇನ್ವಾಯ್ಸ್ ಮಾದರಿ ರಚನೆಯನ್ನು ಕೆಳಗೆ ನೀಡಲಾಗಿದೆ.
  Retail-Invoice

 

ಜಿಎಸ್ಟಿ ಪದ್ಧತಿಯಲ್ಲಿ ಇನ್ವಾಯ್ಸ್ ನೀಡುವುದು

ಜಿಎಸ್ಟಿ ಪದ್ಧತಿಯಲ್ಲಿ ಎರಡು ಬಗೆಯ ಇನ್ವಾಯ್ಸ್ ಅನ್ನು ನೀಡಲಾಗುತ್ತದೆ:

 1. ತೆರಿಗೆ ಇನ್ವಾಯ್ಸ್
 2. ಪೂರೈಕೆಯ ಬಿಲ್

ತೆರಿಗೆ ಇನ್ವಾಯ್ಸ್

ನೋಂದಾಯಿಸಿಕೊಂಡಿರುವ ತೆರಿಗೆ ಪಾವತಿಸುವ ವ್ಯಕ್ತಿಯು ತೆರಿಗೆ ವಿಧಿಸಬಲ್ಲ ಸರಕು ಅಥವಾ ಸೇವೆಗಳನ್ನು ಪೂರೈಕೆ ಮಾಡಿದರೆ, ಒಂದು ತೆರಿಗೆ ಇನ್ವಾಯ್ಸ್ ಅನ್ನು ನೀಡಲಾಗುತ್ತದೆ. ತೆರಿಗೆ ಇನ್ವಾಯ್ಸ್ ನಲ್ಲಿ ಇರಬೇಕಾದ ವಿವರಗಳನ್ನು ನಿಯಮಗಳ ಆಧಾರದಲ್ಲಿ, ಈ ಕೆಳಗಿನ ಮಾದರಿ ತೆರಿಗೆ ಇನ್ವಾಯ್ಸ್ ನಲ್ಲಿ ನೀಡಲಾಗಿದೆ:
Sample of a tax invoice under GST

ತೆರಿಗೆ ಇನ್ವಾಯ್ಸ್ ನೀಡುವ ಸಂಬಂಧ ಇರುವ ಸಮಯದ ಮಿತಿಯೇನು?

ಸರಕುಗಳ ಪೂರೈಕೆಸರಕುಗಳ ಪೂರೈಕೆಗೆ ಸಂಬಂಧಪಟ್ಟ ಪ್ರಕ್ರಿಯೆ ಆರಂಭವಾಗುವ ಸಮಯದಲ್ಲಿ ಅಂದರೆ,

ಸರಕುಗಳನ್ನು ತೆಗೆದು ಹಾಕುವ ಸಮಯದಲ್ಲಿ ಅಥವಾ ಅದಕ್ಕಿಂತ ಮೊದಲು ತೆರಿಗೆ ಇನ್ವಾಯ್ಸ್ ಅನ್ನು ನೀಡಬೇಕು.

ಉದಾಹರಣೆಗೆ: ಒಂದು ಕಾರು ತಯಾರಿಕಾ ಕಂಪನಿಯಾದ ಸೂಪರ್ ಕಾರ್ಸ್ ಲಿಮಿಟೆಡ್, ತನ್ನ ವಿತರಕರಾದ ರವೀಂದ್ರ ಆಟೋಮೊಬೈಲ್ಸ್ಗೆ ಕಾರನ್ನು ಪೂರೈಕೆ ಮಾಡುವ ಸಂದರ್ಭದಲ್ಲಿ ನೀಡಬೇಕು. ಅಂದರೆ, ಸೂಪರ್ ಕಾರ್ಸ್ ಲಿಮಿಟೆಡ್ನ ಸ್ಥಳದಿಂದ ಕಾರನ್ನು ಹೊರಕ್ಕೆ ತೆಗೆಯುವ ಸಮಯದಲ್ಲಿ ಇನ್ವಾಯ್ಸ್ ಅನ್ನು ಕಡ್ಡಾಯವಾಗಿ ನೀಡಬೇಕು.

ಅಥವಾ

ಸರಕನ್ನು ಹೊರಕ್ಕೆ ತೆಗೆಯುವ ಸಂದರ್ಭ ಎದುರಾಗದೆ ಇದ್ದಾಗ, ಸ್ವೀಕೃತಿದಾರರಿಗೆ ಸರಕನ್ನುಪೂರೈಕೆ ಮಾಡುವ ಸಂದರ್ಭದಲ್ಲಿ ನೀಡಬೇಕು.

ಉದಾಹರಣೆಗೆ: ಸೂಪರ್ ಕಾರ್ಸ್ ಲಿಮಿಟೆಡ್ ಒಂದು ಜನರೇಟರ್ ಸೆಟ್ ಅನ್ನು ಖರೀದಿಸಿದೆ ಎಂದಿರಲಿ. ಇದನ್ನು ಪೂರೈಕೆದಾರರು ಕಾರ್ಖಾನೆ ಆಸುಪಾಸಿನಲ್ಲಿ ಜೋಡಣೆ ಮಾಡಲಿದ್ದಾರೆ. ಆದರೆ, ಇಲ್ಲಿ ಇನ್ವಾಯ್ಸ್ ನೀಡಲು ಜನರೇಟರ್ ಸೆಟ್ ಅನ್ನು ಕಾರ್ ಫ್ಯಾಕ್ಟರಿಯ ಸ್ಥಳಕ್ಕೆ ಕೊಂಡೊಯ್ಯಬೇಕೆಂದಿಲ್ಲ. ಜನರೇಟರ್ ಸೆಟ್ ಅನ್ನು ಸೂಪರ್ ಕಾರ್ಸ್ ಲಿಮಿಟೆಡ್ಗೆ ದೊರಕಿಸಿ ಕೊಟ್ಟ ಸಂದರ್ಭದಲ್ಲಿ(ಖರೀದಿಸಿದಾಗಲೇ) ಇನ್ವಾಯ್ಸ್ ಅನ್ನು ಕಡ್ಡಾಯವಾಗಿ ನೀಡಬೇಕು.

ಸೇವೆಯ ಪೂರೈಕೆಸೇವೆಯನ್ನು ಪೂರೈಸಿದ ದಿನಾಂಕದ 30 ದಿನದೊಳಗೆ ತೆರಿಗೆ ಇನ್ವಾಯ್ಸ್ ಅಥವಾ ಇನ್ವಾಯ್ಸ್ ಅನ್ನು ನೀಡಬೇಕಾಗುತ್ತದೆ.
ಎಲ್ಲಾದರೂ ಪೂರೈಕೆದಾರರು ಒಂದು ಬ್ಯಾಂಕ್ ಅಥವಾ ಯಾವುದೇ ಹಣಕಾಸು ಸಂಸ್ಥೆಯಾಗಿದ್ದಲ್ಲಿ, ಸೇವೆ ಪೂರೈಸಿದ 45 ದಿನದೊಳಗೆ ಇನ್ವಾಯ್ಸ್ಯನ್ನು ಕಡ್ಡಾಯವಾಗಿ ನೀಡುವ ಅಗತ್ಯವಿರುತ್ತದೆ.

ಗಮನಿಸಿ: ಎಲ್ಲಾದರೂ ನೋಂದಾಯಿಸಿದೆ ಇರುವ ವಿತರಕರ ಮೂಲಕ ಸರಕು ಅಥವಾ ಸೇವೆಯನ್ನು ಪಡೆಯುವಾಗ ವಿಲೋಮ ಶುಲ್ಕ ಮೂಲಕ ವ್ಯಕ್ತಿಯೊಬ್ಬರು ತೆರಿಗೆಯನ್ನು ಪಾವತಿಸಿದರೆ, ಸ್ವೀಕರಿಸುವವರು ಕಡ್ಡಾಯವಾಗಿ ಸರಕು ಅಥವಾ ಸೇವೆಯನ್ನು ಸ್ವೀಕರಿಸುವ ದಿನಾಂಕದಂದು ಇನ್ವಾಯ್ಸ್ ಅನ್ನು ನೀಡಬೇಕಾಗುತ್ತದೆ.

ತೆರಿಗೆ ಇನ್ವಾಯ್ಸ್ನ ಎಷ್ಟು ಪ್ರತಿಗಳ ಅಗತ್ಯವಿರುತ್ತದೆ?

ಸರಕುಗಳನ್ನು ಪೂರೈಕೆ ಮಾಡುವಲ್ಲಿ ಸರಕು ಪಟ್ಟಿಯ ಮೂರು ಪ್ರತಿಗಳು ಅಗತ್ಯವಿರುತ್ತದೆ- ಮೂಲಪ್ರತಿ, ನಕಲುಪ್ರತಿ ಮತ್ತು ತ್ರಿಪ್ರತಿ.

ಇನ್ವಾಯ್ಸ್ ಮೂಲಪ್ರತಿ: : ಮೂಲ ಇನ್ವಾಯ್ಸ್ ಅನ್ನು ಗ್ರಾಹಕರಿಗೆ ನೀಡಬೇಕು, ಮತ್ತು ಅದರಲ್ಲಿ `ಒರಿಜಿನಲ್ ಫಾರ್ ರಿಸಿಪಿಯೆಂಟ್’ ಎಂದು ಮಾರ್ಕ್ ಮಾಡಿರಬೇಕು.

ನಕಲು ಪ್ರತಿ: : ನಕಲು ಪ್ರತಿಯನ್ನು ಸಾಗಾಣೆದಾರರಿಗೆ ನೀಡಬೇಕು ಮತ್ತು ಅದರಲ್ಲಿ `ಡೂಪ್ಲಿಕೇಟ್ ಫಾರ್ ಟ್ರಾನ್ಸ್ಪೋರ್ಟರ್ ಗೆ ‘ ಎಂದು ಮಾರ್ಕ್ ಮಾಡಿರಬೇಕು. ಎಲ್ಲಾದರೂ ಇನ್ವಾಯ್ಸ್ ಉಲ್ಲೇಖ ಸಂಖ್ಯೆಯನ್ನು ಪೂರೈಕೆದಾರರು ನೀಡಿದ್ದರೆ ಇದರ ಅವಶ್ಯಕತೆ ಇರುವುದಿಲ್ಲ. ನೀಡಿರುವ ಇನ್ವಾಯ್ಸ್ಯ ರೆಫರೆನ್ಸ್ ಸಂಖ್ಯೆಯನ್ನು ಜಿಎಸ್ಟಿಪೋರ್ಟಲ್ಗೆ ತೆರಿಗೆ ಇನ್ವಾಯ್ಸ್ ಅನ್ನು ಅಪ್ಲೋಡ್ ಮಾಡುವ ಸಂದರ್ಭದಲ್ಲಿ ನೀಡಬೇಕು. ಇನ್ವಾಯ್ಸ್ ಅನ್ನು ಅಪ್ಲೋಡ್ ಮಾಡಿದ ದಿನಾಂಕದಿಂದ 30 ದಿನಗಳ ಕಾಲ ಇದರ ಕಾಲಾವಧಿ ಇರುತ್ತದೆ.

ತ್ರಿಪ್ರತಿ: ಇದನ್ನು ಪೂರೈಕೆದಾರರು ತನ್ನಲ್ಲಿ ಇಟ್ಟುಕೊಳ್ಳಬೇಕು, ಮತ್ತು ಅದರಲ್ಲಿ `ಟ್ರಿಪ್ಲಿಕೇಟ್ ಫಾರ್ ಸಪ್ಲೈಯರ್’ ಎಂದು ಮಾರ್ಕ್ ಮಾಡಿರಬೇಕು.
Copies-of-tax-invoice-for-supply-of-goods

ಸೇವೆಯೊಂದನ್ನು ಪೂರೈಕೆ ಮಾಡುವ ಸಂದರ್ಭದಲ್ಲಿ ಎರಡು ಬಗೆಯ ಇನ್ವಾಯ್ಸನ ಪ್ರತಿಯ ಅಗತ್ಯವಿರುತ್ತದೆ:

 • ಮೂಲ ಪ್ರತಿ:ಗ್ರಾಹಕರಿಗೆ ನೀಡಬೇಕಾಗಿರುವ ಇನ್ವಾಯ್ಸ್ನ ಮೂಲ ಪ್ರತಿ, ಮತ್ತು ಇದರಲ್ಲಿ `ಒರಿಜಿನಲ್ ಫಾರ್ ರಿಸಿಪಿಯೆಂಟ್’ ಎಂದು ಮಾರ್ಕ್ ಮಾಡಿರಬೇಕು.
 • ನಕಲು ಪ್ರತಿ:ಇದನ್ನು ಪೂರೈಕೆದಾರರು ಇಟ್ಟುಕೊಳ್ಳಬೇಕು, ಮತ್ತು ಅದರಲ್ಲಿ `ಡುಪ್ಲಿಕೇಟ್ ಫಾರ್ ಸಪ್ಲೈಯರ್’ ಎಂದು ಮಾರ್ಕ್ ಮಾಡಿರಬೇಕು.

Copies-of-tax-invoice-for-supply-of-services_1

ರಫ್ತು ಮಾಡುವಾಗ ತೆರಿಗೆ ಇನ್ವಾಯ್ಸ್ ನಲ್ಲಿ ಯಾವ ವಿವರಗಳನ್ನು ಕಡ್ಡಾಯವಾಗಿ ನಮೋದಿಸಬೇಕು?

ರಫ್ತು ಇನ್ವಾಯ್ಸ್ ನಲ್ಲಿ ಕಡ್ಡಾಯವಾಗಿ , ತೆರಿಗೆ ಇನ್ವಾಯ್ಸ್ ನಲ್ಲಿ ಇರುವ ಮಾಹಿತಿಗಿಂತ ಹೆಚ್ಚುವರಿಯಾಗಿ ಈ ಮುಂದಿನ ವಿವರಗಳನ್ನು ತುಂಬಿರಬೇಕು:

ರಫ್ತು ಇನ್ವಾಯ್ಸ್
“ಐಜಿಎಸ್ಟಿಯ ಪಾವತಿಯ ಪೂರೈಕೆಯ ರಫ್ತು” ಅಥವಾ “ಐಜಿಎಸ್ಟಿ ಪಾವತಿ ಇಲ್ಲದ ಬಾಂಡ್ನಡಿ ಪೂರೈಕೆಗಾಗಿ ರಫ್ತು” ಎಂದು ಪದಗಳಲ್ಲಿ ಬರೆದಿರಬೇಕು.
ಗ್ರಾಹಕರ ಹೆಸರು ಮತ್ತು ವಿಳಾಸ
ಪೂರೈಕೆ ಮಾಡಬೇಕಾದ ವಿಳಾಸ
ಎಆರ್ಇ-1(ರಫ್ತಿಗಾಗಿ ಸರಕನ್ನು ಹೊರತೆಗೆಯಲು ಅರ್ಜಿ) ಸಂಖ್ಯೆ ಮತ್ತು ದಿನಾಂಕ

ಪೂರೈಕೆಯ ಬಿಲ್

ಈ ಮುಂದಿನ ಪ್ರಕರಣಗಳಲ್ಲಿ ನೋಂದಾಯಿಸಿರುವ ಪೂರೈಕೆದಾರರಿಗೆ ಪೂರೈಕೆಯ ಬಿಲ್ ಅನ್ನು ನೀಡಬೇಕು:

 • ರಿಯಾಯಿತಿಯ ಸರಕು ಅಥವಾ ಸೇವೆಯ ಪೂರೈಕೆಗೆ
 • ಸಂಯೋಜಿತ ಯೋಜನೆಯಡಿ ಪೂರೈಕೆದಾರರು ತೆರಿಗೆ ಪಾವತಿಸುತ್ತಿದ್ದರೆ

ಪೂರೈಕೆಯ ಬಿಲ್ ಗೆ ಇರುವ ನಿಯಮಗಳ ಆಧಾರದಲ್ಲಿ, ಪೂರೈಕೆಯ ಬಿಲ್ನ ಒಂದು ಸ್ಯಾಂಪಲ್ ಅನ್ನು ಈ ಮುಂದೆ ನೀಡಲಾಗಿದೆ.
SampleofBillofSupply

ಗ್ರಾಹಕರು ಬಿಲ್ಗೆ ಒತ್ತಾಯಿಸದೆ ಇದ್ದರೆ, ನೂರು ರೂಪಾಯಿಗಿಂತ ಕಡಿಮೆ ಇರುವ ಸರಕು ಅಥವಾ ಸೇವೆಯ ಪೂರೈಕೆ ಮಾಡುವ ಸಂದರ್ಭದಲ್ಲಿ ಪೂರೈಕೆಯ ಬಿಲ್ ಅನ್ನು ನೀಡುವ ಅಗತ್ಯವಿರುವುದಿಲ್ಲ. ಆದಗ್ಯೂ, ಪೂರೈಕೆಯ ಬಿಲ್ ನೀಡದೆ ಇರುವಂತಹ ಎಲ್ಲಾ ಪೂರೈಕೆಗಳ ಸಮಗ್ರ ಬಿಲ್ ಆಫ್ ಸಪ್ಲೈ ಅನ್ನು ವ್ಯವಹಾರದ ದಿನದ ಕೊನೆಯಲ್ಲಿ ಸಿದ್ಧಪಡಿಸಬೇಕು.

ಈಗಾಗಲೇ ಸಿದ್ಧಪಡಿಸಿರುವ ಇನ್ವಾಯ್ಸ್ ನಲ್ಲಿ ಮೌಲ್ಯವನ್ನು ಪರಿಷ್ಕರಿಸುವುದು ಹೇಗೆ?

ತೆರಿಗೆ ವಿಧಿಸಿರುವ ಮೌಲ್ಯವನ್ನು ಅಥವಾ ಇನ್ವಾಯ್ಸ್ ನಲ್ಲಿ ವಿಧಿಸಿರುವ ಜಿಎಸ್ಟಿಯನ್ನು ಪರಿಷ್ಕರಿಸಬೇಕಾದರೆ, ಒಂದು ಡೆಬಿಟ್ ನೋಟ್ ಅಥವಾ ಹೆಚ್ಚುವರಿ ಇನ್ವಾಯ್ಸ್ ಅಥವಾ ಕ್ರೆಡಿಟ್ ನೋಟ್ ಅನ್ನು ಪೂರೈಕೆದಾರರು ಕಡ್ಡಾಯವಾಗಿ ಸಿದ್ಧಪಡಿಸಬೇಕು.

ಪೂರಕ ಇನ್ವಾಯ್ಸ್ – ಮೂಲ ಇನ್ವಾಯ್ಸ್ನ ದಾಖಲೆಯಲ್ಲಿ ತೆರಿಗೆ ವಿಧಿಸಿರುವ ಮೌಲ್ಯ ಮತ್ತು/ಅಥವಾ ಜಿಎಸ್ಟಿ ವಿಧಿಸಿರುವುದನ್ನು ಹೆಚ್ಚಿಸಲು ಪೂರೈಕೆದಾರರು ಸಿದ್ಧಪಡಿಸುವ ಇನ್ವಾಯ್ಸ್ ಆಗಿದೆ.

ಕ್ರೆಡಿಟ್ ನೋಟ್- -ಮೂಲ ಇನ್ವಾಯ್ಸ್ನ ದಾಖಲೆಯಲ್ಲಿ ತೆರಿಗೆ ವಿಧಿಸಿರುವ ಮೌಲ್ಯ ಮತ್ತು/ಅಥವಾ ಜಿಎಸ್ಟಿ ವಿಧಿಸಿರುವುದನ್ನು ಇಳಿಕೆ ಮಾಡಲು ಅಥವಾ ಕಡಿಮೆ ಮಾಡಲು ಪೂರೈಕೆದಾರರು ಸಿದ್ಧಪಡಿಸುವ ಇನ್ವಾಯ್ಸ್ ಆಗಿದೆ. ಪೂರೈಕೆ ನಡೆಸಿದ ಅಥವಾ ಸಂಬಂಧಪಟ್ಟ ವಾರ್ಷಿಕ ಆದಾಯ ನಮೂನೆಯನ್ನು ಭರ್ತಿ ಮಾಡಿದ (ಯಾವುದು ಮೊದಲು ಬರುತ್ತದೋ ಅದರ) ದಿನಾಂಕದ ಮುಂದಿನ ತ್ರೈಮಾಸಿಕ ವರ್ಷದ ಸೆಪ್ಟೆಂಬರ್ 30ರ ಮೊದಲು ಕ್ರೆಡಿಟ್ ನೋಟ್ ಅನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಕ್ರೆಡಿಟ್ ನೋಟ್ ಅನ್ನು ಸಲ್ಲಿಸಲು ಇರುವ ಸಮಯದ ಮಿತಿಯನ್ನು ಮುಂದಿನ ಒಂದು ಉದಾಹರಣೆ ಮೂಲಕ ಅರ್ಥಮಾಡಿಕೊಳ್ಳೋಣ.

ಉದಾಹರಣೆ

ಸೂಪರ್ ಕಾರ್ಸ್ ಲಿಮಿಟೆಡ್, ನವೆಂಬರ್ 1, 2017ರಂದು ತನ್ನ ವಿತರಕರಾದ ರವೀಂದ್ರ ಆಟೋಮೊಬೈಲ್ಸ್ಗೆ 6,00,000 ರೂಪಾಯಿ ಮೌಲ್ಯದ ಬಿಡಿಭಾಗಗಳನ್ನು ಮಾರಾಟ ಮಾಡಲಿದೆ. ನವೆಂಬರ್ 2, 2017ರಂದು ರವೀಂದ್ರ ಆಟೋಮೊಬೈಲ್ಸ್ 1,00,000 ರೂ. ಮೌಲ್ಯದ ಬಿಡಿಭಾಗಗಳನ್ನು ಹಾನಿಗೊಂಡಿರುವ ಸರಕುಗಳೆಂದು ವಾಪಸ್ ನೀಡಿತ್ತು. ಸೂಪರ್ ಕಾರ್ಸ್ ಲಿಮಿಟೆಡ್ ಈ ರೀತಿ ವಾಪಸ್ ಬಂದ ಉತ್ಪನ್ನಗಳಿಗಾಗಿ ಒಂದು ಕ್ರೆಡಿಟ್ ನೋಟ್ ಅನ್ನು ಬಿಡುಗಡೆ ಮಾಡಲು ಬಯಸಿದೆ.

ಸೂಪರ್ ಕಾರ್ಸ್ ಲಿಮಿಟೆಡ್ ಎರಡು ಕೊನೆಯ ದಿನಾಂಕಗಳಲ್ಲಿ ಕ್ರೆಡಿಟ್ ನೋಟ್ ಅನ್ನು ಸಲ್ಲಿಸುವ ಎರಡು ಸನ್ನಿವೇಶಗಳನ್ನು ಈ ಮುಂದೆ ನೀಡಲಾಗಿದೆ

ಸನ್ನಿವೇಶ 1- ಅವರು 2017-18 ಆರ್ಥಿಕ ವರ್ಷದ ವಾರ್ಷಿಕ ರಿಟರ್ನ್ ಅನ್ನು ಡಿಸೆಂಬರ್ 1, 2018ಕ್ಕೆ ಸಲ್ಲಿಸುತ್ತಾರೆ.

ಸನ್ನಿವೇಶ 2- ಅವರು 2017-18 ಆರ್ಥಿಕ ವರ್ಷದ ವಾರ್ಷಿಕ ರಿಟರ್ನ್ ಅನ್ನು ಮೇ 31, 2018ಕ್ಕೆ ಸಲ್ಲಿಸುತ್ತಾರೆ.

ಸನ್ನಿವೇಶ ಮೂಲ ಪೂರೈಕೆ ಮಾಡಿದ ದಿನಾಂಕವಾರ್ಷಿಕ ರಿಟರ್ನ್ ಸಲ್ಲಿಸುವ ದಿನಾಂಕಕ್ರೆಡಿಟ್ ನೋಟ್ ನೀಡಲು ಕೊನೆಯ ದಿನಾಂಕ ನಿರ್ಧರಿಸಲು ನಿಬಂಧನೆಗಳುಕ್ರೆಡಿಟ್ ನೋಟ್ ನೀಡಲು ಕೊನೆಯ ದಿನಾಂಕ
ಸನ್ನಿವೇಶ 1ನವೆಂಬರ್ 1, 2017ಡಿಸೆಂಬರ್ 1, 2018ಸೆಪ್ಟೆಂಬರ್ 30 ನಂತರದ ಹಣಕಾಸು ವರ್ಷದ ಅಂತ್ಯದಲ್ಲಿ. ಯಾವಾಗ ಪೂರೈಕೆ ಮಾಡಲಾಗಿತ್ತೋ ಅಥವಾ ವಾರ್ಷಿಕ ರಿಟರ್ನ್ ಸಲ್ಲಿಸುವ ಸಮಯ(ಯಾವುದು ಮೊದಲೋ ಅದು) .ಸೆಪ್ಟೆಂಬರ್ 30, 2018
ಸನ್ನಿವೇಶ 2ಮೇ 31, 2018ಮೇ 31, 2018

 

ಡೆಬಿಟ್ ನೋಟ್, ಪೂರಕ ಇನ್ವಾಯ್ಸ್ ಮತ್ತು ಕ್ರೆಡಿಟ್ ನೋಟ್ ನಲ್ಲಿ ಯಾವ ವಿವರಗಳು ಹೊಂದಿರಬೇಕು?

ಡೆಬಿಟ್ ನೋಟ್, ಪೂರಕ ಇನ್ವಾಯ್ಸ್ ಮತ್ತು ಕ್ರೆಡಿಟ್ ನೋಟ್ ಗಳು ಕಡ್ಡಾಯವಾಗಿ ಈ ಮುಂದಿನ ವಿವರಗಳನ್ನು ಹೊಂದಿರಬೇಕು:

ಡೆಬಿಟ್ ನೋಟ್/ ಸಪ್ಲಿಮೆಂಟರಿ ಇನ್ವಾಯ್ಸ್/ ಕ್ರೆಡಿಟ್ ನೋಟ್
ಪರಿಷ್ಕೃತ ಇನ್ವಾಯ್ಸ್ ಅಥವಾ ಪೂರಕ ಇನ್ವಾಯ್ಸ್ ನಂತಹ ದಸ್ತಾವೇಜಿನ ಸ್ವರೂಪ ಎದ್ದುಕಾಣುವಂತೆ ಇರಬೇಕು.
ಪೂರೈಕೆದಾರರ ಹೆಸರು, ವಿಳಾಸ ಮತ್ತು ಜಿಎಸ್ಟಿಐಎನ್
ಹಣಕಾಸು ವರ್ಷಕ್ಕೆ ಅನನ್ಯವಾದ ಕೇವಲ ವರ್ಣಮಾಲೆಗಳು ಮತ್ತು/ಅಥವಾ ಅಂಕಿಗಳನ್ನು ಮಾತ್ರ ನೀಡಬೇಕು.
ದಾಖಲೆ ಪಡೆದ ದಿನಾಂಕ
ಎಲ್ಲಾದರೂ ಗ್ರಾಹಕರು ನೋಂದಾಯಿಸಿಕೊಂಡಿದ್ದರೆ- ಗ್ರಾಹಕ ಹೆಸರು, ವಿಳಾಸ ಮತ್ತು ಜಿಎಸ್ಟಿಐಎನ್/ಯೂನಿಕ್ ಐಡಿ.
ಎಲ್ಲಾದರೂ ಗ್ರಾಹಕ ನೋಂದಾಯಿಸಿಲ್ಲದಿದ್ದರೆ- ಗ್ರಾಹಕರ ಹೆಸರು, ವಿಳಾಸ ಮತ್ತು ರಾಜ್ಯದ ಹೆಸರು ಮತ್ತು ಕೋಡ್ ಜೊತೆಗೆ ಪೂರೈಕೆ ಮಾಡಬೇಕಾದ ಸ್ಥಳದ ವಿಳಾಸ.
ಪೂರೈಕೆಯ ಬಿಲ್ ಅಥವಾ ತೆರಿಗೆ ಇನ್ವಾಯ್ಸ್ಯ ಮೂಲ ಪ್ರತಿಯ ಕ್ರಮ ಸಂಖ್ಯೆ ಮತ್ತು ದಿನಾಂಕ.
ಸರಕು ಅಥವಾ ಸೇವೆಯ ತೆರಿಗೆ ವಿಧಿಸಬಹುದಾದ ಮೌಲ್ಯ, ತೆರಿಗೆ ದರ ಮತ್ತು ಗ್ರಾಹಕರಿಗೆ ತೆರಿಗೆ ಕ್ರೆಡಿಟ್ ಅಥವಾ ಡೆಬಿಟ್ ಆದ ಮೊತ್ತ.
ಪೂರೈಕೆದಾರರು ಅಥವಾ ಅಧಿಕೃತ ಪ್ರತಿನಿಧಿಗಳ ಸಹಿ ಅಥವಾ ಡಿಜಿಟಲ್ ಸಹಿ.

 

Are you GST ready yet?

Get ready for GST with Tally.ERP 9 Release 6

367,553 total views, 74 views today