ಸರಿಯುತ್ತಿರುವ ಒಂದೊಂದು ದಿನಗಳು, ನಾವು ಜಿಎಸ್ಟಿಯ ಸನಿಹಕ್ಕೆ ಬರುತ್ತಿರುವುದನ್ನು ನಿಜವಾಗಿಸುತ್ತಿದೆ. ಕಾನೂನು ನಿರೂಪಕರು ಜಿಎಸ್ಟಿ ಕಾನೂನಿಗೆ ಅಂತಿಮ ರೂಪುರೇಷೆ ನೀಡುತ್ತಿದ್ದಾರೆ. ಈ ಪ್ರಕ್ರಿಯೆಯ ಭಾಗವಾಗಿ, ಸಾರ್ವಜನಿಕ ಕಾರ್ಯಕ್ಷೇತ್ರದಲ್ಲಿ ಜನರ ಪ್ರತಿಕ್ರಿಯೆಗಳಿಗಾಗಿ ಸರಕಾರವು ಜಿಎಸ್ಟಿ ಕರಡು ಮಸೂದೆಯನ್ನು ಇಟ್ಟಿದೆ. ಟ್ಯಾಲಿ ಸೊಲ್ಯುಷನ್ಸ್ ಸಂಸ್ಥೆಯಾದ ನಾವು, ಈ ಮೂಲಕ ಜಿಎಸ್ಟಿ ಕಾನೂನು, ನಿಯಮಗಳು ಮತ್ತು ಕಾರ್ಯವಿಧಾನಗಳ ಕುರಿತು ಸಾಕಷ್ಟು ತಿಳಿದುಕೊಂಡೆವು. ನಮ್ಮ ಓದುವಿಕೆ ಮತ್ತು ಅರ್ಥಮಾಡಿಕೊಳ್ಳುವಿಕೆಯಿಂದ ಕಾನೂನು ಸಾಕಷ್ಟು ಪರಿಷ್ಕರಣೆಯಾಗಬೇಕೆಂಬ ವಿಷಯ ನಮಗೆ ಗೊತ್ತಾಯಿತು ಮತ್ತು ಮುಖ್ಯವಾಗಿ ದೇಶದ ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗಾಗಿ ಮತ್ತು ನಮ್ಮ ದೇಶದ ಅರ್ಥವ್ಯವಸ್ಥೆಗಾಗಿ ಈಗಿನ ಕರಡು ಮಸೂದೆಯು ಸಾಕಷ್ಟು ಬದಲಾಗಬೇಕೆಂಬ ವಿಷಯವನ್ನು ತಿಳಿದುಕೊಂಡೆವು..

ನಾವು ಕಳೆದ 3 ದಶಕಗಳಲ್ಲಿ ಕೇವಲ ಸಾಫ್ಟ್ ವೇರ್ ಪೂರೈಕೆಯ ಗುಂಪಿನ ವ್ಯವಹಾರಗಳಿಗೆ ಮಾತ್ರ ಸೀಮಿತವಾಗಿರದೆ, ಈ ಪ್ರಯಣದಲ್ಲಿ ವ್ಯವಹಾರಗಳ ನಾಡಿಮಿಡಿತ ಮತ್ತು ಬದುಕಿನ ರೀತಿಗಳನ್ನು ಸಾಕಷ್ಟು ಅರ್ಥಮಾಡಿಕೊಂಡಿದ್ದೇವೆ. ಅವರಿಗೆ ಹೊಸ ಭರವಸೆ ಮತ್ತು ಸ್ಪೂರ್ತಿ ತುಂಬುವ ಸಲುವಾಗಿ ಮತ್ತು ಒಳಿತಾಗುವ ರೀತಿಯಲ್ಲಿ ಜಿಎಸ್ಟಿಯನ್ನು ವಿಮರ್ಶೆಗೆ ಒಳಪಡಿಸುವಂತೆ ನಮ್ಮನ್ನು ಪ್ರೇರೇಪಿಸಿದೆ. ಇದಕ್ಕಾಗಿ ನಾವು ಮುಂದುವರೆದೆವು ಮತ್ತು ಸರಕಾರ, ತೆರಿಗೆ ಮತ್ತು ಆದಾಯ ಪ್ರಾಧಿಕಾರಗಳಿಗೆ ಮತ್ತು ಉದ್ಯಮದ ಮಂಡಳಿಗಳಿಗೆ ನಾವು ಈ ಕರಡು ಮಸೂದೆಯ ಕುರಿತು ನಮ್ಮ ಅಭಿಪ್ರಾಯಗಳನ್ನು ಕಳುಹಿಸಿದ್ದೇವೆ.
ನಾವು ಸಂಸ್ಥೆಯಾಗಿ ಜಿಎಸ್ಟಿಯು ನಮ್ಮ ದೇಶಕ್ಕೆ ಮತ್ತು ನಮ್ಮ ಅರ್ಥವ್ಯವಸ್ಥೆಗೆ ಸಾಕಷ್ಟು ಒಳಿತು ಮಾಡುವುದಾಗಿ ನಂಬಿದ್ದೇವೆ. ಆದರೂ, ನಾವು ಗುರುತಿಸಿರುವ ಕೆಲವೊಂದು ತೊಂದರೆಗಳು ಎಲ್ಲರಿಗೂ ತಿಳಿಯಬೇಕು ಮತ್ತು ಅದು ಉಪಯೋಗಿ ಮತ್ತು ಪರಿಣಾಮಕಾರಿಯಾಗಿ ಬದಲಾಗಬೇಕೆಂದು ಬಯಸಿದ್ದೇವೆ. ಈ ತೊಡಕುಗಳನ್ನು ಸರಿಪಡಿಸುವ ಸಲುವಾಗಿ ಸಂಬಂಧಪಟ್ಟ ಪ್ರಾಧಿಕಾರಗಳು ಮತ್ತು ತೀರ್ಮಾನ ತೆಗೆದುಕೊಳ್ಳುವವರ ಬಳಿಗೆ ಈ ವಿಷಯವನ್ನು ತಲುಪಿಸಿದ್ದೇವೆ ಮತ್ತು ಅವರು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.

ನಾವು ನೀಡಿರುವ ಪ್ರತಿಕ್ರಿಯೆಗಳು ಮತ್ತು ನಮ್ಮ ಪಾಲ್ಗೊಳ್ಳುವಿಕೆಯ ವಿವರವನ್ನು ಈ ಕೆಳಗೆ ನೀಡಲಾಗಿದೆ.

1. ಆದಾನ ತೆರಿಗೆಗೆ ಪಾವತಿಯನ್ನು ಸಂಪರ್ಕಿಸಿರುವುದು.

ಕಾನೂನು: ವಿಧಿ : 16(1): ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ನಿಗದಿಪಡಿಸಿರುವ ನಿಬಂಧನೆಗಳು ಮತ್ತು ಕಟ್ಟುಪಾಡುಗಳಿಗೆ ತಕ್ಕಂತೆ ಮತ್ತು ವಿಧಿ 49ನಲ್ಲಿ ನಿರ್ದಿಷ್ಟವಾಗಿ ತಿಳಿಸಿರುವಂತೆ ಸರಕು ಅಥವಾ ಸೇವೆಗೆ ಅಥವಾ ಇವೆರಡಕ್ಕೂ ವಿಧಿಸಿರುವ ಆದಾನ ತೆರಿಗೆ ಪಾವತಿಯನ್ನು ಪಡೆಯಬಹುದಾಗಿದ್ದು, ಇದನ್ನು ಬಳಕೆ ಮಾಡುವುದು ಅಥವಾ ಆತನ ವ್ಯವಹಾರದ ಮುಂದುವರಿಕೆಗೆ ಬಳಸಬಹುದು ಮತ್ತು ಅಂತಹ ಹಣವನ್ನು ಆ ವ್ಯಕ್ತಿಯ ವಿದ್ಯುನ್ಮಾನ ಪಾವತಿ ಖಾತಾ ಪುಸ್ತಕಕ್ಕೆ ಜಮಾ ಮಾಡಲಾಗುವುದು.
(2) ಆದಗ್ಯೂ ಈ ವಿಧಿಯಲ್ಲಿ ಒಳಗೊಂಡಿರುವ ಯಾವುದರ ಪ್ರಕಾರವೂ, ನೋಂದಣಿ ಮಾಡದೆ ಇರುವ ವ್ಯಕ್ತಿಯು ಯಾವುದೇ ಸರಕು ಅಥವಾ ಸೇವೆ ಅಥವಾ ಇವೆರಡರ ಪೂರೈಕೆಗೂ ಯಾವುದೇ ಆದಾನ ತೆರಿಗೆ ಪಾವತಿಯನ್ನು ಪಡೆಯಬಹುದಾಗಿದೆ. ಏನೆಂದರೆ,-

(c) ವಿಧಿ 41ರಲ್ಲಿ ನೀಡಿರುವ ವಿನಾಯಿತಿಗೆ ತಕ್ಕಂತೆ, ಅಂದತಹ ಪೂರೈಕೆಗೆ ಸರಕಾರಕ್ಕೆ ನಿಜವಾಗಿಯೂ ಪಾವತಿ ಮಾಡಿದ್ದರೆ, ಹಣ ಅಥವಾ ಇತರೆ ಬಳಕೆಗೆ ತಕ್ಕಂತೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಮೇಲೆ ತಿಳಿಸಿದ ಪೂರೈಕೆಗೆ ಪಡೆಯಲು ಅನುಮತಿಯಿದೆ; ಮತ್ತು

ಪ್ರತಿಕ್ರಿಯೆ

ಪೂರೈಕೆದಾರರು ತನ್ನ ತೆರಿಗೆ ಬಾಧ್ಯತೆಯನ್ನು ಪಾವತಿಸದೆ ಇದ್ದರೆ ತೆರಿಗೆ ಪಾವತಿದಾರರಿಗೆ ಆದಾನ ಪಾವತಿಯನ್ನು ನೀಡಲು ಜಿಎಸ್ಟಿ ಮಸೂದೆಯು ನಿರಾಕರಿಸುತ್ತದೆ. ಇದು ವ್ಯಾಪಾರದಲ್ಲಿ ಸಾಕಷ್ಟು ಕಂಪನ ಉಂಟು ಮಾಡುತ್ತದೆ, ಕೆಲಸಗಾರರ ಬಂಡವಾಳ ಹೆಚ್ಚಿಸಬೇಕಾಗುತ್ತದೆ, ಪ್ರಮುಖವಾಗಿ ಸಣ್ಣ ಲಾಭದಲ್ಲಿ ಕಾರ್ಯನಿರ್ವಹಿಸುವ ಸಣ್ಣ ವ್ಯಾಪಾರಿಗಳಿಗೆ ತೊಡಕು ಉಂಟು ಮಾಡುತ್ತದೆ. ಇದು ಅರ್ಥವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಮತ್ತು ಯಶಸ್ವಿಯಾಗಿ ಜಿಎಸ್ಟಿ ಅನುಷ್ಠಾನ ಮಾಡಲು ಹಿನ್ನೆಡೆ ಉಂಟು ಮಾಡಬಲ್ಲದು. ಒಮ್ಮೆ ಪೂರೈಕೆದಾರರು ಸಂಬಂಧಪಟ್ಟ ತೆರಿಗೆ ಪಾವತಿಸಿ ಸರಕುಪಟ್ಟಿ ಸಲ್ಲಿಸಿ ಮತ್ತು ಆದಾಯ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದರೆ ಮತ್ತು ಸರಕುಪಟ್ಟಿ ಹೋಲಿಕೆ ಮಾಡಬೇಕಾಗುತ್ತದೆ ಮತ್ತು ಸರಕಾರಕ್ಕೆ ನಿಜವಾದ ತೆರಿಗೆಯು ಪಾವತಿಯಾಗಿದೆಯೇ ಇಲ್ಲವೇ ಎನ್ನುವುದು ಸ್ವೀಕೃತಿದಾರರಿಗೆ ತಿಳಿಯುವುದಿಲ್ಲ. ಇಲ್ಲಿ ಸ್ವೀಕೃತಿದಾರರೇ ಪೂರೈಕೆದಾರರಿಂದ ತೆರಿಗೆ ಪಾವತಿಯಾಗಿದೆಯೇ ಎಂದು ಸಾಬೀತುಪಡಿಸುವುದು ಕಷ್ಟವಾಗುತ್ತದೆ.

ಆದಾನ ಪಾವತಿಗೆ ಪಾವತಿ ಸಂಪರ್ಕ ಮಾಡುವುದರಿಂದ ಪೂರಕ ತೊಂದರೆಗಳು

ಎಸ್ಎಂಇಗಳಿಗೆ ಹೊಸ ಖರೀದಿದಾರರನ್ನು ಹುಡುಕಲು ಸಾಧ್ಯವಾಗುವುದಿಲ್ಲ ಅಥವಾ ಐಟಿಸಿ ಹೊಂದಾಣಿಕೆಯಾಗದ ವರದಿ ನೋಡಿದ ನಂತರವೇ ಖರೀದಿದಾರರನ್ನು ಗುರುತಿಸಬೇಕಾಗುತ್ತದೆ, ಇದರಿಂದಾಗಿ ಯಾರಿಗೂ ಹೊಸ ವ್ಯವಹಾರ ಸ್ಥಾಪಿಸಲು ಸಾಧ್ಯವಾಗದಂತಹ ಅಥವಾ ಈಗಿರುವ ವ್ಯಾಪಾರದಲ್ಲಿ ಪ್ರಗತಿ ಕಾಣದಂತಹ ಪರಿಸ್ಥಿತಿಗೆ ತಂದೊಡ್ಡಬಹುದು.
ಸಾರ್ವಜನಿಕವಾಗಿ ಶ್ರೇಯಾಂಕ ನೀಡುವುದರಿಂದ ತಾವು ತೆರಿಗೆ ಪಾವತಿಸದೆ ಕಳಪೆ ಶ್ರೇಯಾಂಕದವರು ಆಗಬಾರದು ಎಂದು ಎಸ್ಎಂಇಗಳು ಭಯದಿಂದ ಸಾಲ ತೆಗೆದುಕೊಳ್ಳುವ ಒತ್ತಡಕ್ಕೆ ಸಿಲುಕಬಹುದು. ಆಗಾಗ ಹಣದ ಹರಿವಿಗೆ ತೊಂದರೆಯಾಗಿ ಶ್ರೇಯಾಂಕ ಕುಗ್ಗಬಹುದು ಮತ್ತು ಗ್ರಾಹಕರ ದೂರುಗಳಿಂದ ಮತ್ತಷ್ಟು ತೊಂದರೆ ಉಂಟಾಗಿ ಬಲವಂತವಾಗಿ ಭಯದಿಂದ ಎಸ್ಎಂಇಗಳನ್ನು ಸಾಲದ ದವಡೆಗೆ ದೂಡಬಹುದು.

ಸಿಜಿಎಸ್ಟಿ ಕಾನೂನಿನ ಪರಿಚ್ಛೇಧದಲ್ಲಿ ಅನುಸರಣೆ ಶ್ರೇಯಾಂಕದ ವ್ಯಾಖ್ಯಾನವನ್ನು ಈ ಮುಂದೆ ತಿಳಿಸಲಾಗಿದೆ
141(1) ಪ್ರಕಾರ, ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು ಸರಕಾರದ ಅನುಸರಣೆ ದಾಖಲೆ ಆಧರಿಸಿ ಈ ಕಾಯಿದೆಯ ನಿಬಂಧನೆ ಆಧರಿಸಿ ಆತನ ಸರಕು ಮತ್ತು ಸೇವಾ ತೆರಿಗೆ ಅನುಸರಣೆಗೆ ಶ್ರೇಯಾಂಕ ಅಂಕ ನೀಡಲಾಗುತ್ತದೆ. (2). ಅಂತಹ ಮಾನದಂಡಕ್ಕೆ ಅನುಗುಣವಾಗಿ ಸರಕು ಮತ್ತು ಸೇವಾ ತೆರಿಗೆಯ ಅನುಸರಣೆ ಶ್ರೇಯಾಂಕಅಂಕ ನೀಡಲಾಗುತ್ತದೆ. (3) ಸರಕು ಮತ್ತು ಸೇವಾ ತೆರಿಗೆಯ ಅನುಸರಣೆ ಶ್ರೇಯಾಂಕ ಅಂಕವನ್ನು ನಿಗದಿಪಡಿಸಿದ ಸಮಯದಲ್ಲಿ ಅಪ್ ಡೇಟ್ ಮಾಡುವ ಸಾಧ್ಯತೆಯಿದೆ ಮತ್ತು ನೋಂದಾಯಿತ ವ್ಯಕ್ತಿಗೆ ನಿಕಟವಾಗಿರುತ್ತದೆ ಮತ್ತು ಜೊತೆಗೆ ನಿಗದಿಪಡಿಸಿದ ವಿಧಾನದಲ್ಲಿ ಸಾರ್ವಜನಿಕ ಡೊಮೈನಿನಲ್ಲಿ ಶ್ರೇಯಾಂಕಅನ್ನು ಪ್ರದರ್ಶಿಸಲಾಗುತ್ತದೆ.

2. ಪೂರೈಕೆ ಮತ್ತು ವ್ಯವಹಾರ ಸಮಯದ ಮುಂಗಡ ನಿರ್ಧಾರ

ಕಾನೂನು
12. (1) ಈ ಪರಿಚ್ಛೇಧ ನಲ್ಲಿ ತಿಳಿಸಿರುವ ಪ್ರಕಾರ ಸರಕಿನ ತೆರಿಗೆ ಪಾವತಿಸುವ ಬಾಧ್ಯತೆಯು ಪೂರೈಕೆಯ ಸಮಯಕ್ಕೆ ಬರುತ್ತದೆ.
(2) ಸರಕಿನ ಪೂರೈಕೆಯ ಸಮಯವು ಈ ಮುಂದಿನ ದಿನಗಳಿಗಿಂತ ಮೊದಲು ಬರುತ್ತದೆ, ಅವೆಂದರೆ:
(ಎ) ಪೂರೈಕೆದಾರರು ಸರಕುಪಟ್ಟಿ ನೀಡಿದ ದಿನಾಂಕ ಅಥವಾ ನಿಗದಿಪಡಿಸಿದ ಕೊನೆಯ ದಿನಾಂಕ, ಪರಿಚ್ಛೇಧ 31ರ ಉಪ- ಪರಿಚ್ಛೇಧ (1)ದಲ್ಲಿ ಹೇಳಿದಂತೆ, ಸಂಬಂಧಪಟ್ಟ ಪೂರೈಕೆಗೆ ಸರಕುಪಟ್ಟಿ ರಚಿಸಬೇಕು; ಅಥವಾ
(ಬಿ) ಪೂರೈಕೆಗೆ ಸಂಬಂಧಪಟ್ಟಂತೆ ಪೂರೈಕೆದಾರರು ಪಾವತಿಯನ್ನು ಸ್ವೀಕರಿಸಿದ ಸಮಯ: ಪೂರೈಕೆದಾರರಿಂದ ತೆರಿಗೆ ವಿಧಿಸಬಹುದಾದ ಸರಕು ಸ್ವೀಕರಿಸಿದ ಮೊತ್ತವು 1 ಸಾವಿರ ರೂ.ಗಿಂತ ಹೆಚ್ಚಿದ್ದರೆ, ಅದನ್ನು ತೆರಿಗೆ ಸರಕುಪಟ್ಟಿಯಲ್ಲಿ ನಮೋದಿಸಬೇಕು, ಅಂತಹ ಮೊತ್ತದ ಪೂರೈಕೆಯ ಸಮಯ ಸರಕುಪಟ್ಟಿ ನೀಡಿದ ದಿನಾಂಕಕ್ಕೆ ಪೂರಕವಾಗಿರಬೇಕು.
ವಿವರಣೆ-1- ವಿಧಿ(ಎ) ಮತ್ತು (ಬಿ)ಯ ಉದ್ದೇಶ, “ಪೂರೈಕೆ’’ಯು ಸರಕುಪಟ್ಟಿಯಿಂದ ಆವರಿಸಲ್ಪಟ್ಟಿದೆ ಅಥವಾ ಪಾವತಿಯನ್ನು ಪರಿಗಣಿಸಲ್ಪಟ್ಟಿದೆ.

ವಿವರಣೆ-2- ವಿಧಿ(ಬಿ) ಉದ್ದೇಶ, “ಪೂರೈಕೆದಾರರು ಪಾವತಿ ಸ್ವೀಕರಿಸಿದ ದಿನಾಂಕ’’ ವನ್ನು ಅಕೌಂಟ್ ಪುಸ್ತಕದಲ್ಲಿ ಪಾವತಿಯನ್ನು ನಮೋದಿಸಿದ ದಿನಾಂಕವನ್ನು ಪರಿಗಣಿಸಲಾಗುತ್ತದ ಅಥವಾ ಬ್ಯಾಂಕ್ ಖಾತೆಗೆ ಹಣ ಪಾವತಿಯಾದ ದಿನಾಂಕವನ್ನು ಪರಿಗಣಿಸಲಾಗುತ್ತದೆ, ಇದರಲ್ಲಿ ಯಾವುದು ಮೊದಲು ಬರುತ್ತೋ ಅದು.
(3) ಎಲ್ಲಾದರೂ ತೆರಿಗೆ ಪಾವತಿಸಿರುವ ಪೂರೈಕೆಯು ಅಥವಾ ವಾಪಸ್ ಶುಲ್ಕ ಆಧಾರದಲ್ಲಿ ಪಾವತಿಸಲು ಬಾಧ್ಯತೆ ಹೊಂದಿರುವಂತದ್ದು, ಪೂರೈಕೆಯ ಸಮಯವು ಈ ಮುಂದಿನ ದಿನಾಂಕಗಳಲ್ಲಿ ಯಾವುದ ಮೊದಲು ಬರುತ್ತದೋ ಅದು ಆಗಿರುತ್ತದೆ; ಯಾವುದೆಂದರೆ:

(ಎ) ಸರಕು ಸ್ವೀಕರಿಸಿದ ದಿನಾಂಕ ಅಥವಾ
(ಬಿ) ಸ್ವೀಕೃತಿದಾರರ ಅಕೌಂಟ್ ಪುಸ್ತಕದಲ್ಲಿ ಪಾವತಿ ಮಾಡಿರುವ ಕುರಿತು ನಮೋದಿಸಿದ ದಿನಾಂಕದ ಅನ್ವಯ ಅಥವಾ ಬ್ಯಾಂಕ್ ಖಾತೆಗೆ ಪಾವತಿ ಮಾಡಿರುವ ದಿನಾಂಕ; ಇವುಗಳಲ್ಲಿ ಯಾವುದು ಮೊದಲೋ ಅದು; ಅಥವಾ
(ಸಿ) ಸರಕುಪಟ್ಟಿ ಸಿದ್ಧಪಡಿಸಿದ ದಿನಾಂಕದಿಂದ ತಕ್ಷಣದಿಂದ ಅನ್ವಯವಾಗುವಂತೆ ಮುಂದಿನ 30 ದಿನದೊಳಗೆ ಅಥವಾ ಇತರೆ ಯಾವುದೇ ದಾಖಲೆಗಳ ಆಧಾರದಲ್ಲಿ, ಪಾವತಿಸಬೇಕು:
ಎಲ್ಲಾದರೂ ಪೂರೈಕೆಯ ಸಮಯವನ್ನು ಈ ಮುಂದಿನ ವಿಧಿಗಳಲ್ಲಿ ನಿರ್ಧರಿಸಲು ಸಾಧ್ಯವಾಗದೆ ಇದ್ದರೆ ವಿಧಿ(ಎ) ಅಥವಾ ವಿಧಿ (ಬಿ) ಅಥವಾ ವಿಧಿ (ಸಿ), ಅನ್ವಯ ಪೂರೈಕೆಯನ್ನು ಸ್ವೀಕರಿಸಿದ ಸ್ವೀಕೃತಿದಾರರ ಅಕೌಂಟ್ ಪುಸ್ತಕದಲ್ಲಿ ನಮೋದಿಸಿದ ದಿನಾಂಕ.

(4) ಪೂರೈಕೆದಾರರು ಹಣ ಸಂದಾಯದ ರಸೀದಿ ಪೂರೈಕೆ ಮಾಡಿದ್ದರೆ, ಪೂರೈಕೆಯ ಸಮಯವು-(ಎ) ಹಣ ಸಂದಾಯದ ರಸೀದಿ ಪಡೆದ ದಿನಾಂಕ, ಈ ಪೂರೈಕೆಯು ಗುರುತಿಸಬಹುದಾದ ರೀತಿಯಲ್ಲಿದ್ದರೆ; ಅಥವಾ (ಬಿ) ಹಣ ಸಂದಾಯದ ರಸೀದಿ ಅನ್ನು ಬಳಕೆ ಮಾಡಿದ ದಿನಾಂಕವನ್ನು ಪರಿಗಣಿಸಲಾಗುತ್ತದೆ.
(5) ಎಲ್ಲಾದರೂ ಉಪ-ಪರಿಚ್ಛೇಧ (2) ಅಥವಾ ಉಪ-ಪರಿಚ್ಛೇಧ (3) ಅಥವಾ ಉಪ-ಪರಿಚ್ಛೇಧ (4)ನಲ್ಲಿ ಹೇಳಿದಂತೆ ಪೂರೈಕೆಯ ಸಮಯವನ್ನು ನಿರ್ಧರಿಸಲು ಸಾಧ್ಯವಾಗದೆ ಇದ್ದರೆ, ಪೂರೈಕೆಯ ಸಮಯವು ಈ ಮುಂದಿನಂತೆ ಇರುತ್ತದೆ-

(ಎ)ಎಲ್ಲಾದರೂ ನಿಯತಕಾಲಿಕವಾಗಿ ಆದಾಯ ನಮೂನೆ ಸಲ್ಲಿಕೆ ಮಾಡಿದ್ದರೆ, ಅಂತಹ ಆದಾಯ ನಮೂನೆ ಸಲ್ಲಿಕೆ ಮಾಡಿರುವ ದಿನಾಂಕ; ಅಥವಾ
(ಬಿ) ಇತರೆ ಯಾವುದೇ ಸಂದರ್ಭಗಳಲ್ಲಿ, ತೆರಿಗೆ ಪಾವತಿಸಿದ ದಿನಾಂಕದ ಪರಿಗಣಿಸಲಾಗುತ್ತದೆ.

(6) ಪೂರೈಕೆಯ ಸಮಯವು ಹೆಚ್ಚುವರಿಯಾಗಿ ಪೂರೈಕೆಯ ಮೌಲ್ಯದಿಂದ ಬಡ್ಡಿ ಉಂಟಾಗಲು ದಾರಿ ಮಾಡಿಕೊಡುವುದಕ್ಕೂ ನೇರ ಸಂಬಂಧಹೊಂದಿದೆ, ವಿಳಂಬವಾಗಿ ಪಾವತಿ ಪಾಡಿರುವುದಕ್ಕೆ ಶುಲ್ಕ ಅಥವಾ ದಂಡವನ್ನು ವಿಧಿಸಿದ್ದರೆ ಅಂತಹ ಹೆಚ್ಚುವರಿ ಮೌಲ್ಯವನ್ನು ಪಡೆದ ದಿನಾಂಕವನ್ನು ಪರಿಗಣಿಸಲಾಗುತ್ತದೆ.
ಹೀಗೆಯೇ, ಸೇವೆಯ ಪೂರೈಕೆಯ ಸಮಯವೂ ಪರಿಚ್ಛೇಧ 13ರ ಅನ್ವಯ ಇದೆ.

ಪ್ರತಿಕ್ರಿಯೆಗಳು

ಮುಂಗಡ ಪಾವತಿಸಿರುವುದಕ್ಕೆ ಎಚ್ಎಸ್ಎನ್ ಸಂಕೇತ ಗುರುತಿಸುವ ಅವಶ್ಯಕತೆ ಸೇರಿದಂತೆ ಮುಂಗಡ ಪಾವತಿಗೆ ತೆರಿಗೆ ಪಾವತಿಸುವುದು ಆರಂಭದಲ್ಲಿ ಸೂಕ್ತವೆನಿಸದು. ವಿಶೇಷವಾಗಿ, ದೊಡ್ಡ ಆದೇಶ ಗಳು ಹಲವು ಎಚ್ಎಸ್ಎನ್ ಸಂಕೇತ ಗಳನ್ನು ಹೊಂದಿರಬಹುದು, ಆದೇಶ ಮೌಲ್ಯಕ್ಕೆ ತಕ್ಕಂತೆ ಇದನ್ನು ವಿಭಾಗಿಸಬೇಕಾಗುತ್ತದೆ. ಇದನ್ನು ವಿಭಾಗಿಸುವುದಕ್ಕೆ ಮತ್ತು ಖಚಿತಪಡಿಸಿಕೊಳ್ಳುವುದಕ್ಕೆ ಈಗಿನ ನಿಯಮದಲ್ಲಿ ಯಾವುದೇ ವಿಶೇಷ ವಿಧಾನಗಳು ಇಲ್ಲ. ಮುಂಗಡದ ಅವಧಿ 6 ತಿಂಗಳು ದಾಟದೆ ಇದ್ದರೆ ಮುಂಗಡಕ್ಕೆ ತೆರಿಗೆ ವಿಧಿಸಬೇಕಿಲ್ಲ, ಅದನ್ನು ಖರೀದಿ ಎಂದು ಪರಿಗಣಿಸಲಾಗುತ್ತದ ಮತ್ತು ಎಚ್ಎಸ್ಎನ್ ಪಾಲ್ಗೊಳ್ಳುವಿಕೆಯನ್ನು ಬಿಟ್ಟು ಒಟ್ಟು ಮುಂಗಡ ಮೊತ್ತಕ್ಕೆ ಒಂದು ಪ್ರಮಾಣೀತ ದರವನ್ನು ನಿಗದಿಪಡಿಸಿ ತೆರಿಗೆ ಅನ್ವಯಿಸಬಹುದು

3.ಇ-ವೇ ರಸೀದಿ ಉಪಚಾರ

ಕಾನೂನು: : ನಿಯಮ 1(1) ನೋಂದಾಯಿಸಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯು 50 ಸಾವಿರ ರೂ.ಗಿಂತ ಹೆಚ್ಚು ಮೌಲ್ಯದ ಸರಕುಗಳನ್ನು ಸಾಗಿಸುವಂತಹ ಸಂದರ್ಭದಲ್ಲಿ-
(ಅ) ಪೂರೈಕೆಯೊಂದಕ್ಕೆ ಸಂಬಂಧ ಹೊಂದಿರುವುದು; ಅಥವಾ
(ಆ) ಪೂರೈಕೆ ಹೊರತುಪಡಿಸಿದ ಇತರ ಕಾರಣಗಳು; ಅಥವಾ
(ಇ) ನೋಂದಾಯಿಸದೆ ಇರುವ ವ್ಯಕ್ತಿಯಿಂದ ಆಂತರಿಕ ಪೂರೈಕೆ ಮಾಡಿರುವುದರಿಂದ
ಮುಂದೆ, ಇಂತಹ ಸಾಗಾಣೆ ಮಾಡಲು ಮುಂದಾಗುವ ಮೊದಲು, ಸರಕಿನ ಕುರಿತು ಸಂಬಂಧಪಟ್ಟ ಮಾಹಿತಿಗಳನ್ನು ಸಾಮಾನ್ಯ ವೆಬ್ ತಾಣದಲ್ಲಿ ನಮೂನೆ ಜಿಎಸ್ಟಿ ಐಎನ್ಎಸ್-01ರ ಭಾಗ ಒಂದರಲ್ಲಿ, ನಮೋದಿಸಬೇಕು ಮತ್ತು

(ಎ) ನೋಂದಾಯಿತ ವ್ಯಕ್ತಿಯಿಂದ ಬಾಧ್ಯತೆಯಿಂದ ಎಲ್ಲಿಗೆ ಸರಕು ಸಾಗಿಸಲಾಗುತ್ತಿದೆ, ಸ್ವೀಕೃತಿದಾರರು ಸಾಗಿಸುತ್ತಿದ್ದರೋ, ಸ್ವಂತವಾಗಿ ಸಾಗಣೆ ಮಾಡುತ್ತಿದ್ದರೋ ಅಥವಾ ಬಾಡಿಗೆಗೆ ಪಡೆದಿರುವುದರಲ್ಲಿ ಸಾಗಣೆ ಮಾಡಲಾಗುತ್ತಿದೆಯೇ, ಸಂಬಂಧಪಟ್ಟ ವ್ತಕ್ತಿ ಅಥವಾ ಸ್ವೀಕೃತಿದಾರ ವ್ಯಕ್ತಿಯು ಸಾಮಾನ್ಯ ವೆಬ್ ತಾಣದಲ್ಲಿ ನಮೂನೆ ಜಿಎಸ್ಟಿ-1ರ ವಿಭಾಗ-ಬಿಯಲ್ಲಿ ಸಂಬಂಧಪಟ್ಟ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ವಿದ್ಯುನ್ಮಾನ ವಿಧಾನದಿಂದ ನಮೂನೆ ಜಿಎಸ್ಟಿ ಐಎನ್ಎಸ್-1 ಇ-ವೇ ರಸೀದಿ ರಚಿಸಿ ಹೊಂದಿರಬೇಕು. ಅಥವಾ
(ಬಿ) ಷರತ್ತು(ಎ) ಅನ್ವಯ ಇ-ವೇ ರಸೀದಿ ರಚಿಸದೆ ಇದ್ದರೆ ಮತ್ತು ಸರಕನ್ನು ಸಾಗಾಣೆದಾರರಿಗೆ ನೀಡಿದ್ದರೆ, ನೋಂದಾಯಿತ ವ್ಯಕ್ತಿಯು ಸಾಗಾಣೆ ವಿಷಯದ ಮಾಹಿತಿಗಳನ್ನು ಸಾಮಾನ್ಯ ವೆಬ್ ತಾಣದಲ್ಲಿ ನಮೂನೆ ಜಿಎಸ್ಟಿ ಐಎನ್ಎಸ್-01 ವಿಭಾಗ ಎ ಒಂದು ಆಧಾರದಲ್ಲಿ ನಮೂನೆ ಜಿಎಸ್ಟಿ ಐಎನ್ಎಸ್-01 ವಿಭಾಗ ಬಿಯಲ್ಲಿ ಭರ್ತಿ ಮಾಡಬೇಕು:

ಇದನ್ನು ನೋಂದಾಯಿಸಿದ ವ್ಯಕ್ತಿಗೆ ಅಥವಾ ಸಾಗಾಣೆ ಹಾದಿಯಲ್ಲಿ ಇ-ವೇ ರಸೀದಿ ನಲ್ಲಿ ಅನ್ನು ಎಲ್ಲಾದರೂ ಸಾಗಾಣೆಯ ಮೌಲ್ಯವು 50 ಸಾವಿರ ರೂ.ಗಿಂತ ಕಡಿಮೆ ಇದ್ದರೂ ಇ-ವೇ ರಸೀದಿ ಅನ್ನು ಹೊಂದಿರಬೇಕು.
ಇನ್ನಷ್ಟು ಹೇಳುವುದಾದರೆ, ಎಲ್ಲಾದರೂ ನೋಂದಾಯಿಸದೆ ಇರುವ ವ್ಯಕ್ತಿಯಿಂದ ಆತ ಸ್ವಂತವಾಗಿ ಅಥವಾ ಅದಕ್ಕಾಗಿ ಬಾಡಿಗೆಗೆ ಪಡೆದು ವಸ್ತುಗಳನ್ನು ಸಾಗಾಟ ನಡೆಸುವಾಗ, ಅವರು ಅಥವಾ ಸಾಗಾಣೆದಾರರು, ಅದು ಅವರ ಆಯ್ಕೆಯಾಗಿದ್ದು ನಿಗದಿಪಡಿಸಿದ ನಿಯಮದನ್ವಯ ಸಾಮಾನ್ಯ ಪೋರ್ಟಲ್ ನಲ್ಲಿ ನಮೂನೆ ಜಿಎಸ್ಟಿ ಐಎನ್ಎಸ್-01ರಲ್ಲಿ ಇ-ವೇ ರಸೀದಿ ರಚಿಸಬೇಕು ಎಂದು ಈ ನಿಯಮದಲ್ಲಿ ಹೇಳಲಾಗಿದೆ.
ವಿವರಣೆ- ಈ ಉಪ ನಿಯಮದ ಉದ್ದೇಶದ ಪ್ರಕಾರ, ನೋಂದಾಯಿಸದೆ ಇರುವ ವ್ಯಕ್ತಿಯಿಂದ ನೋಂದಾಯಿತ ಸ್ವೀಕೃತಿದಾರರಿಗೆ ಎಲ್ಲಿ ಸರಕು ಸಾಗಿಸಲಾಗುತ್ತಿದೆಯೋ, ಅಂತಹ ಸಾಗಾಟದ ಸ್ವೀಕೃತಿದಾರರಿಗೆ ಸರಕು ಬರುತ್ತಿರುವ ಮಾಹಿತಿಯು ತಿಳಿದಿರಬೇಕು.

ಪ್ರತಿಕ್ರಿಯೆಗಳು
1. ಇ-ವೇ ರಸೀದಿ ರಚನೆಗೆ ಈಗಿನ 50,000 ರೂ. ಮೌಲ್ಯದ ಮಿತಿಯನ್ನುಇನ್ನಷ್ಟು ಅಧಿಕ ಮೌಲ್ಯಕ್ಕೆ ಹೆಚ್ಚಿಸಬೇಕು,
2. ಇ-ವೇ ರಸೀದಿ ಅನ್ನು ಪರ್ಯಾಯವಾಗಿ ಬಿ ಯಿಂದ ಸಿಗೆ ಖರೀದಿಸುವಾಗ ಇಂತಹ ಮಿತಿಯನ್ನು ತಪ್ಪಿಸಬೇಕು. (ಈಗ ಐಫೋನ್ ದರ 80 ಸಾವಿರ ರೂ.ವರೆಗಿದೆ)
ಕಾನೂನು ನಿಯಮ 1(3) ಯಾವುದೇ ಸಾಗಾಣೆದಾರರು ಸರಕನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವಾಗ, ಅಂತಹ ಸರಕು ಸಾಗಿಸುವ ಮೊದಲು ಅಥವಾ ಸಾಗಿಸಲು ಆರಂಭಿಸಿದಾಗ ಹೊಸ ಇ-ವೇ ರಸೀದಿ ಅನ್ನು ಸಾಮಾನ್ಯ ವೆಬ್ ತಾಣದಲ್ಲಿ ನಮೂನೆ ಜಿಎಸ್ಟಿ ಐಎನ್ಎಸ್-01ರಲ್ಲಿ ಸಾಗಾಣೆಯ ವಿವರವನ್ನು ನಮೋದಿಸಿ ರಚಿಸಬೇಕು.

ದೂರುಗಳು: : ದೂರುಗಳು:

ಎಲ್ಲಾದರೂ ಡಿಟಿಡಿಸಿ ಅಥವಾ ಫಸ್ಟ್ ಫೈಟ್ ಇತ್ಯಾದಿಗಳಲ್ಲಿ ಸರಕುಗಳನ್ನುಸಾಗಾಟ ಮಾಡಿರುವಾಗ.

ಕೊರಿಯರ್ ನ ಶಾಖೆ ಅಥವಾ ಬುಕ್ಕಿಂಗ್ ಕೌಂಟರ್, ಸಾಗಾಟಕ್ಕಾಗಿ ಇ-ವೇ ರಸೀದಿ ರಚಿಸುತ್ತದೆ ಮತ್ತು ಹತ್ತಿರದಲ್ಲಿರುವ ಇನ್ನೊಂದು ಶಾಖೆಗೆ ಇದನ್ನು ಸಾಗಿಸುತ್ತದೆ, ಮತ್ತೆ ಆ ಶಾಖೆಯು(ತಮ್ಮ ಲೋಡಿಗೆ ಹಲವು ಬುಕ್ಕಿಂಗ್ ಕೌಂಟರ್ ಹೊಂದಿರುವ) ತಮ್ಮ ಸ್ಥಳಕ್ಕೆ ಗೆ ಸಾಗಿಸುವ ಸಲುವಾಗಿ ಮತ್ತೊಮ್ಮೆ ಇ-ವೇ ರಸೀದಿ ಅನ್ನು ರಚಿಸಬೇಕಾಗುತ್ತದೆ.

ಮತ್ತೆ ಈ ಮುಂದಿನವುಗಳಿಗೆ ಸಂಬಂಧಪಟ್ಟಂತೆ ಕೊರಿಯರ್ ಹಬ್ ಮತ್ತೊಮ್ಮೆ ಇ-ವೇ ರಸೀದಿ ರಚಿಸಬೇಕಾಗುತ್ತದೆ. ಇವುಗಳಿಗೆ ಸಂಬಂಧಪಟ್ಟಂತೆ

1) ವೈಮಾನಿಕ
2) ರೈಲು
3) ರಸ್ತೆ
ವಿಮಾನ ಅಥವಾ ರೈಲು ಅಥವಾ ರಸ್ತೆಯಲ್ಲಿ ಸಾಗಿಸಲು ಮತ್ತೊಮ್ಮೆ ಇ-ವೇ ರಸೀದಿ ರಚಿಸಬೇಕಾಗುತ್ತದೆ. ಒಟ್ಟಾರೆ, ಈ ಸರಕು ಸ್ವೀಕೃತಿದಾರರಿಗೆ ತಲುಪುವ ತನಕ ಹಲವು ಬಾರಿ –ಇ-ರಸೀದಿ ರಚಿಸಬೇಕಾಗುತ್ತದೆ. ಇದು ನಿಜವಾಗಿ ಆಗಿ ಸಾಧ್ಯವಿಲ್ಲದ ಮಾತಾಗಿದೆ.
3.ಕಾನೂನು ನಿಯಮ 1(8)ರ ಅನ್ವಯ ಸಾಮಾನ್ಯ ವೆಬ್ ಸೈಟ್ ನಲ್ಲಿ ನೋಂದಾಯಿಸಿದ್ದರೆ ಉಪ ವಿಭಾಗ(1)ರಲ್ಲಿ ಸೃಜಿಸಿದ ಇ-ವೇ ರಸೀದಿ ಮಾಹಿತಿಯು ಸ್ವೀಕೃತಿದಾರರಿಗೆ ಇರಬೇಕು. ಆ ಸ್ವೀಕೃತಿದಾರರು ಈ ಸಾಗಾಣೆ ಕುರಿತು ಒಪ್ಪುವ ಅಥವಾ ನಿರಾಕರಿಸುವ ಹಕ್ಕನ್ನು ಇ-ವೇ ರಸೀದಿ ನಲ್ಲಿ ಸಂವಹನ ನಡೆಸುವ ಹಕ್ಕನ್ನು ನೀಡಲಾಗಿದೆ.
ಪ್ರತಿಕ್ರಿಯೆಗಳು: ಎಲ್ಲಾದರೂ ಸ್ವೀಕೃತಿದಾರರು ಸಾಗಾಣೆ ಹಾದಿಯಲ್ಲಿ ಇ-ವೇ ರಸೀದಿ ಅನ್ನು ನಿರಾಕರಿಸಿದರೆ, ಸರಕುಪಟ್ಟಿಯಲ್ಲಿರುವಂತೆ ಸರಕನ್ನು ಸಾಗಿಸುತ್ತಿರುವುದನ್ನು ಅರ್ಧದಾರಿಯಲ್ಲೇ ಅಲ್ಲಿಗೆ ನಿಲ್ಲಿಸಬೇಕೇ, ಈ ಕುರಿತು ಸ್ಪಷ್ಟತೆ ಅಗತ್ಯವಿದೆ.
ಕಾನೂನು ನಿಯಮ 3(1) ಆಯುಕ್ತರು ಅಥವಾ ಅಧಿಕಾರಿಯು ಅಥವಾ ಅವರಿಂದ ಅಧಿಕಾರ ಪಡೆದಿರುವ ವ್ಯಕ್ತಿಯು ಇ-ವೇ ಬಿಲ್ ಅನ್ನು ಅಥವಾ ಇ-ವೇ ರಸೀದಿ ಸಂಖ್ಯೆಯನ್ನು ನಮೂನೆಯ ಮೂಲಕ ಎಲ್ಲಾ ರಾಜ್ಯದೊಳಗಿನ ಅಥವಾ ಅಂತರ್ ರಾಜ್ಯದೊಳಗಿನ ಸಾಗಾಟದ ಸಮಯದಲ್ಲಿ ಪರಿಶೀಲನೆ ನಡೆಸುವ ಹಕ್ಕು ಹೊಂದಿರುತ್ತಾರೆ.

ಪ್ರತಿಕ್ರಿಯೆಗಳು- – ಈ ರೀತಿ ಸಂಬಂಧಪಟ್ಟ ಅಧಿಕಾರಿಯು ಇ-ವೇ ರಸೀದಿಯನ್ನು ದೃಢೀಕರಿಸುವ ಕೆಲಸದಿಂದ ಸಾಗಾಟವು ವಿಳಂಬವಾಗುತ್ತದೆ ಮತ್ತು ನಮ್ಮನ್ನು ಮತ್ತೆ ಅಂಚೆಕಾಲದ ಪರಿಶೀಲನೆಯ ಕಾಲಕ್ಕೆ ಕೊಂಡೊಯ್ಯುತ್ತದೆ.

ಅಕೌಂಟ್ಸ್ ಮತ್ತು ದಾಖಲೆಗಳು ಕುರಿತಾದ ಕರಡು ನಿಯಮದಲ್ಲಿರುವ ತೊಡಕುಗಳು

ಅಧ್ಯಾಯ- ಖಾತೆಗಳು ಮತ್ತು ದಾಖಲೆಗಳು

1. ನೋಂದಾಯಿತ ವ್ಯಕ್ತಿಯಿಂದ ಖಾತೆಯ ನಿರ್ವಹಣೆ

ನಿಯಮ – (2 ) ತಯಾರಿಕೆ, ವ್ಯಾಪಾರ ಮತ್ತು ಸೇವೆ ಒದಗಿಸುವಿಕೆ ಇತ್ಯಾದಿಗಳು ಸೇರಿದಂತೆ ಪ್ರತಿಯೊಂದು ಚಟುವಟಿಕೆಗಳನ್ನು ಪ್ರತ್ಯೇಕವಾಗಿ ಅಕೌಂಟ್ ಅಥವಾ ದಾಖಲೆಗಳಲ್ಲಿ ಉಪ-ನಿಯಮ(1)ರಲ್ಲಿ ನಿರ್ದಿಷ್ಟಪಡಿಸಿದಂತೆ ನಮೋದಿಸಬೇಕು.

ಪ್ರತಿಕ್ರಿಯೆಗಳು:
ಅಂತರ್-ಬ್ಯಾಂಕ್ ರವಾನೆ, ಹಣ ಹೂಡಿಕೆ ಮತ್ತು ಹೊರತೆಗೆಯುವಿಕೆ, ಪಾವತಿ, ಸ್ವೀಕೃತಿ, ತೆರಿಗೆಯೇತರ ವ್ಯವಹಾರಗಳಾದ ಸಾಲ, ಮರುಪಾವತಿ ಮತ್ತು ಇತ್ಯಾದಿಗಳು ಸೇರಿದಂತೆ ಎಲ್ಲಾ ಅಕೌಂಟಿಂಗ್ ವಾತಾವರಣದಲ್ಲಿ ಮಾಡಬೇಕಾಗುತ್ತದೆ. ಇದನ್ನು ಚಟುವಟಿಕೆಯಾಗಿ ಮಾಡಲಾಗುವುದಿಲ್ಲ-ಸಂಸ್ಥೆ ಸಹಜವಾಗಿ ಮಾಡುತ್ತದೆ. ಪ್ರತಿಯೊಂದು ಒಂದೊಂದು ಹಣಕಾಸು ವ್ಯವಹಾರವನ್ನು ಖಾತೆ/ದಾಖಲೆಯಲ್ಲಿ ನಿರ್ವಹಿಸುವುದು ಬಹುತೇಕ ಅಸಾಧ್ಯವಾದ ವಿಷಯವಾಗಿದೆ.

ಪ್ರಸ್ತಾಪಿಸಿದ ಸಂಗತಿ:
: ತಯಾರಿಕೆ, ವ್ಯಾಪಾರ ಮತ್ತು ಸೇವಾ ಸೌಲಭ್ಯ ಇತ್ಯಾದಿ ಎಲ್ಲಾ ಪ್ರತ್ಯೇಕ ಚಟುವಟಿಕೆಗಳನ್ನೂ ಉಪ ವಿಭಾಗ(1)ರಲ್ಲಿ ಖಾತೆ ಅಥವಾ ದಾಖಲೆಗಳನ್ನು ಸೂಚಿಸಿದಂತೆ ಅಕೌಂಟ್ ಮತ್ತು ದಾಖಲೆಗಳನ್ನು ನಿರ್ವಹಿಸಬೇಕು.

ನಿಯಮ- (3) ಅನ್ವಯ ಪರಿಚ್ಛೇಧ 10ರಡಿಯಲ್ಲಿ ತೆರಿಗೆ ಪಾವತಿಸುವವರು ಹೊರತುಪಡಿಸಿ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು ತಾನು ಸ್ವೀಕರಿಸಿದ ಮತ್ತು ಪೂರೈಸಿದ ಪ್ರತಿಯೊಂದು ಕಮಾಡಿಟಿಯ ವಿವರದ ಅಕೌಂಟ್ಸ್ ಆಫ್ ಸ್ಟಾಕ್, ಅಥವಾ ದಾಸ್ತಾನು ವಿವರವನ್ನು ನಿರ್ವಹಿಸಬೇಕು ಮತ್ತು ಆ ಖಾತೆಯಲ್ಲಿ ಆರಂಭದ ಬಾಕಿ, ರಸೀದಿ, ಪೂರೈಕೆ, ಕಳೆದು ಹೋಗಿರುವ ಸರಕು, ಕಳ್ಳತನವಾಗಿರುವ, ಹಾಳಾಗಿರುವ ಅಥವಾ ಉಡುಗೊರೆ ಅಥವಾ ಉಚಿತವಾಗಿ ವಿಲೇವಾರಿ ಮಾಡಿರುವ ಪ್ರತಿಯೊಂದು ವಿಷಯವನ್ನೂ ಇದರಲ್ಲಿ ನಮೋದಿಸಬೇಕು ಮತ್ತು ದಾಸ್ತಾನು ಬಾಕಿಯಲ್ಲಿ ಕಚ್ಚಾ ಸಾಮಾಗ್ರಿಗಳು, ಪೂರ್ಣಗೊಂಡಿರುವ ಸರಕುಗಳು, ಗುಜರಿ ಮತ್ತು ವ್ಯರ್ಥಗೊಂಡವು ಇತ್ಯಾದಿಗಳನ್ನು ನಮೋದಿಸಬೇಕು.
ಪ್ರತಿಕ್ರಿಯೆಗಳು

ಹಲವು ಬಗೆಯ ವ್ಯವಹಾರಗಳು ದಾಸ್ತಾನನ್ನು ನಿಗಾ ಮಾಡುವ ಬದಲು “ಖಾಲಿಯಾದ ದಾಸ್ತಾನನ್ನು” ಅವಲಂಬಿಸಿರುತ್ತವೆ ಮತ್ತು ಅದು ಅವುಗಳ ವ್ಯವಹಾರದ ಸರಳವಾದ ರೀತಿ ಆಗಿರುತ್ತದೆ, ಇದು ಅಗಾಧ ಸಂಖ್ಯೆಯ ಎಸ್ಕೆಯು ಅಥವಾ ಉತ್ಪನ್ನಗಳು ಆಗಿರುತ್ತವೆ, ಇವನ್ನು ಲೆಕ್ಕ ಹಾಕುವುದು/ಮರುಲೆಕ್ಕಹಾಕುವುದು ಕಠಿಣವಾಗಿರುತ್ತದೆ. ಇದಕ್ಕೆ ಉದಾಹರಣೆಯಾಗಿ ಔಷಧದ ಅಂಗಡಿಗಳು, ದಿನಸಿ/ಎಫ್ಎಂಸಿಜಿ ಸ್ಟೋರ್ ಗಳು, ಆಹಾರ/ಸಿಹಿತಿಂಡಿ ಅಂಗಡಿಗಳು, ಬಾಲ್ ಬಿಯರಿಂಗ್ ಮತ್ತು ಹಾರ್ಡ್ ವೇರ್ ಸ್ಟೋರ್ ಗಳು, ಗಾರ್ಮೆಂಟ್ ಶಾಪ್ ಗಳು.. ಇದು ಕೆಲವು ಹೆಸರುಗಳಷ್ಟೇ.. ಇಂತಹ ಹಲವು ವ್ಯವಹಾರಗಳಲ್ಲಿ ದಾಸ್ತಾನನ್ನು ಲೆಕ್ಕಹಾಕುವುದು ಸಾಧ್ಯವಿಲ್ಲದ ಮಾತು. ಕೇವಲ ಕೆಲವೇ ಕೆಲವು ರಚನಾತ್ಮಕವಾದ ಸಂಘಟನೆಗಳಲ್ಲಿ ಅಥವಾ ಅತ್ಯಧಿಕ ಮೌಲ್ಯದ ಎಸ್ ಕೆಯುಗಳ ವಹಿವಾಟು ನಡೆಸುವ ಎಸ್ಕೆಯುಗಳಿಗೆ ಮಾತ್ರ ಈ ರೀತಿ ಲೆಕ್ಕಹಾಕುತ್ತಿರಲು ಸಾಧ್ಯ. ಹೀಗಾಗಿ ಇದು ಮೇಲೆ ನಮೋದಿಸಿದಂತಹ ಹಲವು ವ್ಯವಹಾರಗಳು ದಾಸ್ತಾನು ಲೆಕ್ಕ ಹಾಕಬೇಕೆನ್ನುವುದು ಅವಾಸ್ತವಿಕವಾದ ನಿರೀಕ್ಷೆಯಾಗಿದೆ.

ನಿಯಮ – (4) ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು ಮುಂಗಡ ಸ್ವೀಕರಿಸಿರುವುದಕ್ಕೆ, ಪಾವತಿಸಿರುವುದಕ್ಕೆ ಮತ್ತು ಹೋಂದಾಣಿಕೆ ಮಾಡಿರುವುದಕ್ಕೆ ಪ್ರತ್ಯೇಕ ಖಾತೆಯನ್ನು ಇಟ್ಟುಕೊಳ್ಳಬೇಕು ಮತ್ತು ನಿರ್ವಹಿಸಬೇಕು.
ಪ್ರತಿಕ್ರಿಯೆಗಳು: ಇದು ಸಂಪೂರ್ಣ ವ್ಯವಹಾರದ ಪತ್ತೆಹಚ್ಚುವಿಕೆಗೆ ಅತ್ಯುತ್ತಮ, ಆದರೆ, ವಿಸ್ತರಿತ ವಾಯಿದೆ ಮುಗಿದುಹೋಗಿದ್ದರೆ(ಉದಾ: 6ತಿಂಗಳು) ಹೊರತುಪಡಿಸಿ ಇದನ್ನು ನಿವ್ವಳ ತೆರಿಗೆಗೆ ಸೇರಿಸಬಾರದು.ಇಂದು ಈ ನಿಬಂಧನೆಗಳನ್ನು ತೆರಿಗೆ ನಿವ್ವಳಕ್ಕೆ ತಂದಾಗ ಅದೇ ಆದಾಯ ನಮೂನೆ ಅವಧಿಗೆ(ತಿಂಗಳಿಗೆ) ಬಾಕಿ ಉಳಿಯುತ್ತದೆ. ಹೀಗಾಗಿ, ಮೂಲಭೂತವಾಗಿ, ಎಲ್ಲಾದರೂ ಮುಂಗಡವನ್ನು ತಿಂಗಳ 28ನೇ ತಾರೀಕು ಸ್ವೀಕರಿಸಿದರೆ ಮತ್ತು ಮುಂದಿನ ತಿಂಗಳು 3ನೇ ತಾರೀಕು ಸರಕುಪಟ್ಟಿ ರಚಿಸಿದರೆ, ತೆರಿಗ ಪಾವತಿದಾರರು ಪ್ರತ್ಯೇಕವಾಗಿ ಹಿಂದಿನ ತಿಂಗಳ “ತೆರಿಗೆಯನ್ನು ಮುಂಗಡವಾಗಿ” ಪಾವತಿಸಬೇಕು ಮತ್ತು ಮುಂದಿನ ತಿಂಗಳ ಸರಕುಪಟ್ಟಿಯ ಬ್ಯಾಲೆನ್ಸ್ ತಯಾರಿಸುವುದು ಸಂಕೀರ್ಣವಾಗುತ್ತದೆ.

ನಿಯಮ
– (6) ಅನ್ವಯ ಪ್ರತಿಯೊಬ್ಬರ ನೋಂದಾಯಿತ ವ್ಯಕ್ತಿಯು ವಿಷಯಗಳನ್ನು –(ಎ) ಯಾರಿಂದ ಸರಕು ಅಥವಾ ಸೇವೆಯನ್ನು ಸ್ವೀಕರಿಸಿದ್ದಾನೋ ಆ ಪೂರೈಕೆದಾರರ ಹೆಸರು ಮತ್ತು ಸಂಪೂರ್ಣ ವಿಳಾಸವನ್ನು ಕಾಪಾಡಿಕೊಳ್ಳಬೇಕು; (ಬಿ) ಯಾರಿಗೆ ಸರಕು ಅಥವಾ ಸೇವೆಯನ್ನು ಪೂರೈಕೆ ಮಾಡಲಾಗುತ್ತೋ ಆ ಸ್ವೀಕೃತಿದಾರರ ಹೆಸರು ಮತ್ತು ಸಂಪೂರ್ಣ ವಿಳಾಸವನ್ನು ಇಟ್ಟುಕೊಳ್ಳಬೇಕು ; (ಸಿ) ಆತನು ಯಾವ ವಸ್ತುಗಳನ್ನು ಎಲ್ಲಿ ಸಂಗ್ರಹಿಸಿಟ್ಟಿದ್ದಾನೆ, ಸಾಗಾಣೆ ಅವಧಿಯಲ್ಲಿ ಸಂಗ್ರಹಿಸಿಟ್ಟಿರುವುದು ಸೇರಿದಂತೆ ಆತ ದಾಸ್ತಾನು ಮಾಡಿದ ಸ್ಥಳದ ಸಂಪೂರ್ಣ ವಿಳಾಸವನ್ನು ನಮೋದಿಸಬೇಕು.
ಪ್ರತಿಕ್ರಿಯೆಗಳು: ಸರಕು ಅಥವಾ ಸೇವೆಯನ್ನು ಯಾರಿಗೆ ಪೂರೈಕೆ ಮಾಡಲಾಗಿದೆಯೋ ಅವರ ಹೆಸರು ಮತ್ತು ಸಂಪೂರ್ಣ ವಿಳಾಸ ನಿರ್ವಹಿಸುವುದು ಯಾವುದೇ ದಿನಸಿ ಪೂರೈಕೆದಾರಿಗೆ ಸಾಧ್ಯವಿಲ್ಲದ ವಿಷಯವಾಗಿದೆ. ಹೇಗೆಂದರೆ, ತರಕಾರಿ ಮತ್ತು ಹಣ್ಣಿನ ವ್ಯಾಪಾರಿ(ಮಂಡಿ)ಗಳಿಗಂತೂ ಇದು ಸಾಧ್ಯವೇ ಇಲ್ಲ. ಆದರೆ, ಸರಕು ಸಂಗ್ರಹಿಸಿಟ್ಟ ಸ್ಥಳದ ವಿಳಾಸಗಳನ್ನು ಬರೆಯುವುದು ಖಂಡಿತವಾಗಿಯೂ ಸಾಧ್ಯವಿದ್ದರೂ, ತನ್ನ ಯಾವ ದಾಸ್ತಾನು ಸ್ಥಳದಲ್ಲಿ ಯಾವ ವಸ್ತುವನ್ನು ಸಂಗ್ರಹಿಸಲಾಗಿದೆ ಎಂದು ಎಲ್ಲಾ ವಿಳಾಸಗಳನ್ನು ನೋಂದಾಯಿಸಿದ ವ್ಯಕ್ತಿಯು ನಮೋದಿಸುವುದು ಸಾಧ್ಯವಿಲ್ಲವೆನ್ನುವಂತೆ ತೋರುತ್ತದೆ, ಕೆಲವೊಂದು ಆತನ ಸಂಪೂರ್ಣ ನಿಯಂತ್ರಣದಲ್ಲಿರುವುದಿಲ್ಲ, ಅದು ಡೆಲಿವರಿಗೆ ಕೊಂಡೊಯ್ಯುವವರ ನಿಯಂತ್ರಣದಲ್ಲಿರುತ್ತದೆ.
ಪ್ರಸ್ತಾಪ: ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು ಕಡ್ಡಾಯವಾಗಿ–(ಎ) ಯಾರಿಂದ ಸರಕು ಅಥವಾ ಸೇವೆಯನ್ನು ಸ್ವೀಕರಿಸಿದ್ದಾನೋ ಆ ಪೂರೈಕೆದಾರರ ಹೆಸರು ಮತ್ತು ಸಂಪೂರ್ಣ ವಿಳಾಸವನ್ನು ಕಾಪಾಡಿಕೊಳ್ಳಬೇಕು; (ಬಿ) ಯಾರಿಗೆ ಸರಕು ಅಥವಾ ಸೇವೆಯನ್ನು ಪೂರೈಕೆ ಮಾಡಲಾಗುತ್ತೋ ಆ ಸ್ವೀಕೃತಿದಾರರ ಹೆಸರು ಮತ್ತು ಸಂಪೂರ್ಣ ವಿಳಾಸವನ್ನು ಇಟ್ಟುಕೊಳ್ಳಬೇಕು ; (ಸಿ) ಆತನು ಯಾವ ವಸ್ತುಗಳನ್ನು ಎಲ್ಲಿ ಸಂಗ್ರಹಿಸಿಟ್ಟಿದ್ದಾನೆ ಎಂದು ಸ್ಥಳದ ಸಂಪೂರ್ಣ ವಿಳಾಸವನ್ನು ನಮೋದಿಸಬೇಕು.

ನಿಯಮ – (7) ರ ಅನ್ವಯ ಯಾವುದೇ ತೆರಿಗೆ ವಿಧಿಸಲಾಗುವ ಸರಕುಗಳು ಉಪ-ನಿಯಮ(6)ರಲ್ಲಿ ಘೋಷಿಸಿರುವುದನ್ನು ಹೊರತುಪಡಿಸಿ ಯಾವುದೇ ಸಮರ್ಪಕ ದಾಖಲೆಗಳಿಲ್ಲದೆ, ಯಾವುದೇ ಸ್ಥಳ(ಗಳು)ದಲ್ಲಿ ಸಂಗ್ರಹಿಸಲ್ಪಟ್ಟರೆ, ನೋಂದಾಯಿತ ವ್ಯಕ್ತಿಯಿಂದ ಆ ಸರಕುಗಳು ಪೂರೈಕೆ ಮಾಡಿರುವುದಾಗಿದ್ದರೆ ಸೂಕ್ತ ಅಧಿಕಾರಿಗಳು ಅನ್ನು ಪತ್ತೆ ಹಚ್ಚಿ ತೆರಿಗೆ ವಿಧಿಸುತ್ತಾರೆ.

ಪ್ರತಿಕ್ರಿಯೆಗಳು: ಕೆಲವೊಮ್ಮೆ ಸರಕುಗಳು ಬಂದಾಗ ಒಮ್ಮೊಮ್ಮೆ ಸ್ಥಳಾವಕಾಶದ ಕೊರತೆ ಕಾಣಿಸಬಹುದು ಮತ್ತು ವಸ್ತುಗಳನ್ನು ತಾತ್ಕಾಲಿಕವಾಗಿ ಬೇರೆಡೆ ಇರಬೇಕಾಗಬಹುದು, ಕೆಲವೊಮ್ಮೆ ನೈಸರ್ಗಿಕ ಕಾರಣಗಳಿಂದ (ಮಳೆ/ಪ್ರವಾಹ) ವಸ್ತುಗಳನ್ನು ಶಿಫ್ಟ್ ಮಾಡಬೇಕಾಗಬಹುದು, ತಮ್ಮ ಸ್ಥಳದ ಮರುನಿರ್ಮಾಣ/ನಿರ್ಮಾಣ ಸಮಯದಲ್ಲಿ ವಸ್ತುಗಳನ್ನು ಶಿಫ್ಟ್ ಮಾಡಬೇಕಾಗಬಹುದು, ಸೊಳ್ಳೆ ನಿಯಂತ್ರಣ/ಪ್ರಾಣಿಗಳಿಂದ ಹಾನಿಯಾಗುವ ಸಮಯದಲ್ಲಿ ವಸ್ತುಗಳನ್ನು ಬೇರೆಡೆಗೆ ಕೊಂಡೊಯ್ಯಬೇಕಾಗಬಹುದು ಮತ್ತು ಇತ್ಯಾದಿ ಹಲವು ಕಾರಣಗಳು ಇರಬಹುದು. ವಿಷಯವು ಅನಿಯಂತ್ರಿತ ಅರ್ಥವಿವರಣೆಯನ್ನು ಹೊಂದಿರುವುದರಿಂದ ವಿಶಾಲ ಹೇಳಿಕೆಯಂತೆ ಗೋಚರಿಸುತ್ತದೆ.

ಪ್ರಸ್ತಾಪ-: (7) ಅನ್ವಯ ಯಾವುದೇ ತೆರಿಗೆ ವಿಧಿಸಲಾಗುವ ಸರಕುಗಳು ಉಪ-ನಿಯಮ(6)ರಲ್ಲಿ ಘೋಷಿಸಿರುವುದನ್ನು ಹೊರತುಪಡಿಸಿ ಯಾವುದೇ ಸಮರ್ಪಕ ದಾಖಲೆಗಳಿಲ್ಲದೆ, ಯಾವುದೇ ಸ್ಥಳ(ಗಳು)ದಲ್ಲಿ ಸಂಗ್ರಹಿಸಲ್ಪಟ್ಟರೆ, ನೋಂದಾಯಿತ ವ್ಯಕ್ತಿಯಿಂದ ಆ ಸರಕುಗಳು ಪೂರೈಕೆ ಮಾಡಿರುವುದಾಗಿದ್ದರೆ ಸೂಕ್ತ ಅಧಿಕಾರಿಗಳು ಅನ್ನು ಪತ್ತೆ ಹಚ್ಚಿ ತೆರಿಗೆ ವಿಧಿಸುತ್ತಾರೆ.
ನಿಯಮ – (8) ರ ಅನ್ವಯ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು ವ್ಯವಹಾರದ ಪ್ರಧಾನ ಸ್ಥಳದಲ್ಲಿ ಮತ್ತು ಆತನ ನೋಂದಣಿ ದಾಖಲೆಪತ್ರದಲ್ಲಿ ನಮೋದಿಸಿರುವ ಸಂಬಂಧಪಟ್ಟ ಸ್ಥಳ(ಗಳು)ದಲ್ಲಿ ಅಕೌಂಟ್ ಪುಸ್ತಕವನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು ಮತ್ತು ಇಂತಹ ದಾಖಲೆಗಳನ್ನು ಯಾವುದಾದರೂ ವಿದ್ಯುನ್ಮಾನ ಮಾಧ್ಯಮಗಳಾದ ವಿದ್ಯುನ್ಮಾನ ಸಾಧನಗಳಲ್ಲಿ ಇಟ್ಟಿರಬೇಕು.
ಪ್ರತಿಕ್ರಿಯೆಗಳು ಇಂದಿನ ಈ ಜಗತ್ತಿನಲ್ಲಿ “ಮಾಹಿತಿಯ ಸಂಗ್ರಹ’’ಕ್ಕಿಂತ ಎಲ್ಲಿ ಮಾಹಿತಿಯನ್ನು ಪಡೆಯಬಹುದು ಎನ್ನುವುದು ಮುಖ್ಯವಾಗುತ್ತದೆ, ಇದು ಒಂದು ಹಿಂದುಮುಂದಾದ ಅವಕಾಶವಾಗಿದೆ.

ಪ್ರಸ್ತಾಪ: ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು ವ್ಯವಹಾರದ ಪ್ರಧಾನ ಸ್ಥಳದಲ್ಲಿ ಮತ್ತು ಆತನ ನೋಂದಣಿ ದಾಖಲೆ ಪತ್ರದಲ್ಲಿ ನಮೋದಿಸಿರುವ ಸಂಬಂಧಪಟ್ಟ ಸ್ಥಳ(ಗಳು)ದಲ್ಲಿ ಅಕೌಂಟ್ ಪುಸ್ತಕವನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು ಮತ್ತು ಇಂತಹ ದಾಖಲೆಗಳನ್ನು ಯಾವುದಾದರೂ ವಿದ್ಯುನ್ಮಾನ ಮಾಧ್ಯಮಗಳಾದ ವಿದ್ಯುನ್ಮಾನ ಸಾಧನಗಳಲ್ಲಿ ಇಟ್ಟಿರಬೇಕು. ಮಾಹಿತಿ ಸಂಗ್ರಹಿಸಿಟ್ಟಿರುವ ವಿದ್ಯುನ್ಮಾನ ವಿಧಾನವು ಭಾರತದ ಎಲ್ಲೆಗೆ ಅನುಗುಣವಾಗಿರಬೇಕು.
ನಿಯಮ – (9) ನೋಂದಣಿ ಪುಸ್ತಕದಲ್ಲಿ, ಅಕೌಂಟ್ಸ್ ಮತ್ತು ದಾಖಲೆಗಳ್ಲಲಿ ಯಾವುದೇ ಎಂಟ್ರಿ ಮಾಡಿರುವುದು ಸ್ಪಷ್ಟವಾಗಿರಬೇಕು, ಉಜ್ಜಿರಬಾರದು, ವಿನ್ಯಾಸ ನೀಡಿರಬಾರದು ಅಥವಾ ಮೇಲೆ ಮೇಲೆ ಬರೆದಿರಬಾರದು, ಮತ್ತು ಎಲ್ಲಾದರೂ ತಪ್ಪು ಮಾಹಿತಿ ನಮೋದಿಸಿದ್ದರೆ ಅದನ್ನು ಅಳಿಸಿ ಮತ್ತು ಮತ್ತೆ ಸರಿಯಾದ ಮಾಹಿತಿ ನಮೋದಿಸಿರಬೇಕು ಮತ್ತು ಎಲ್ಲಾ ಲೆಕ್ಕ ಪುಸ್ತಕಗಳನ್ನು ಮತ್ತು ಇತರ ದಾಖಲೆಗಳನ್ನು ವಿದ್ಯುನ್ಮಾನ ವಿಧಾನದಲ್ಲಿ ನಿರ್ವಹಿಸಬೇಕು, ಪ್ರತಿಯೊಂದು ದಾಖಲೀಕರಣದಲ್ಲಿಯೂ ಯಾವುದೇ ದೋಷ ಅಥವಾ ಸಂಪಾದಿಸಿದ್ದು ಅಥವಾ ಅಳಿಸಿರುವುದು ಇತ್ಯಾದಿಗಳು ಇರದಂತೆ ನೋಡಿಕೊಳ್ಳಬೇಕು.

ಪ್ರತಿಕ್ರಿಯೆಗಳು: ಇದಕ್ಕೆ ನಮ್ಮ ದೇಶದ ಬೃಹತ್ ಮತ್ತು ಸಣ್ಣ ಕಂಪನಿಗಳು ಯಾವುದೇ ತಕರಾರು ತೆಗೆದಿಲ್ಲ. ಬೃಹತ್ ವ್ಯವಹಾರಗಳಲ್ಲಿ ತಯಾರಕರು, ಪರಿಶೀಲನೆ ಮಾಡುವವರು ಮತ್ತು ಅಂಗೀಕರಿಸುವವರು ಇತ್ಯಾದಿ ಪ್ರಕ್ರಿಯೆಗಳಿದ್ದರೂ, ಮನುಷ್ಯರು ಮಾಡುವ ತಪ್ಪುಗಳನ್ನು ನಿರೀಕ್ಷಿಸಬಹುದು(ಮತ್ತು ಇದಕ್ಕೆ ವಿನಾಯಿತಿ ಇಲ್ಲ). ವಿದ್ಯುನ್ಮಾನ ವಾತಾವರಣದಲ್ಲಿಯೂ ಮನುಷ್ಯರ ತಪ್ಪುಗಳು ಇರುತ್ತವೆ- ಟೈಪ್ ಮಾಡುವಾಗ ತಪ್ಪುಗಳು- ಮನುಷ್ಯರ ಪಾಲ್ಗೊಳ್ಳುವಿಕೆಯಿಂದ ಒಂದಿಷ್ಟು ತಪ್ಪುಗಳು ನುಸುಳಬಹುದು. ದೋಷಗಳು ಇದೆ ಎಂದಾದರೆ ಅದು ಉದ್ದೇಶಪೂರ್ವಕವಾಗಿ ಮಾಡಿರುವ ಮೋಸವೆಂದಿರಬೇಕಿಲ್ಲ. “ದೋಷ ಸರಪಡಿಸುವಿಕೆ’ ಬದಲಾಗಿ ಹಲವು ಬಗೆಯ ವಹಿವಾಟುಗಳನ್ನು ನಮೋದಿಸಲು ಮಾಡಲು ಸಾಧ್ಯವಾಗದ ಪರಿಸ್ಥಿತಿಯಿಂದಾಗಿ ಮತ್ತು/ಅಥವಾ ಬ್ಯಾಂಕ್ ಖಾತೆ ಮತ್ತು/ಅಥವಾ ಇತರೆ ಬೆಂಬಲದ ಕಡೆಗೆ ಗಮನ ನೀಡಬೇಕು. ಇದರ ಬದಲು ಪ್ರತಿಯೊಂದು ದೋಷಗಳು “ಕಾಣುವಂತೆ’ ಇರುವಂತೆ ಮಾಡಬೇಕು, ಇದು ಪ್ರತಿಯೊಂದು ಅವ್ಯವಸ್ಥೆಯನ್ನು ಹೋಗಲಾಡಿಸುತ್ತದೆ, ಮತ್ತು ಜನರನ್ನು ಇಂತಹ ತಪ್ಪುಗಳನ್ನು ಕಡಿಮೆ ಮಾಡುವಂತೆ ಉತ್ತೇಜಿಸಿ, ತಪ್ಪೇ ಮಾಡದಂತೆ ಅವರನ್ನು ರೂಪಿಸಲು ಪ್ರಯತ್ನಿಸಬೇಕು, ಇದರಿಂದ ಹಾನಿಗಿಂತ ಒಳ್ಳೆಯದೇ ಹೆಚ್ಚಾಗುತ್ತದೆ. ಇದು ಹೇಗೆಂದರೆ, ಮೈಕ್ರೊಸಾಫ್ಟ್ ನಂತಹ ಕಂಪನಿಗಳಲ್ಲಿ ವರ್ಡ್ ಅಥವಾ ಎಕ್ಸೆಲ್ ನಲ್ಲಿ ಅಳಿಸುವ ಮತ್ತು ಹಿಂದಕ್ಕೆ ಅಳಿಸಿಹಾಕುವ ಕೀಲಿಗಳನ್ನು ತೆಗೆದುಬಿಡುವಂತೆ ಹೇಳುವಂತೆ ಇದೆ ಮತ್ತು ಜನರಿಗೆ ದೋಷ ಅಳಿಸಲು ತಿಳಿಸಬೇಕು ಮತ್ತು ಅವರನ್ನೇ ಅಳಿಸಬಾರದು.

ಆದಾಯದ ಕಡೆಯಿಂದ ಈ ಷರತ್ತಿನ ಲಾಭ ಮತ್ತು ಉದ್ದೇಶವೂ ಚರ್ಚೆಗೆ ಅರ್ಹವಾದದ್ದು. ಇದು ಏನಾದರೂ ಆದಾಯ ಹೆಚ್ಚಿಸಲು ಮೌಲ್ಯಯುತವಾದ ಇನ್ ಪುಟ್ ಹೊಂದಿದೆಯೇ ಎಂದು ಅವಲೋಕಿಸಬೇಕು. ನಿಯಮಿತವಾಗಿ ದಾಖಲೀಕರಣ ಮಾಡುವುದರಿಂದ ಏನು ಲಾಭವಿದೆ ಅಥವಾ ವ್ಯವಹಾರ ದಕ್ಷತೆ ಕಡಿಮೆ ಮಾಡಲಿದೆಯೇ (ಕಡಿಮೆ ಆದಾಯ ಸಂಗ್ರಹಕ್ಕೆ ಕಾರಣವಾಗುತ್ತದೆ).

ಪ್ರಸ್ತಾಪ: : ರಿಜಿಸ್ಟ್ರಾರ್ ಗಳಲ್ಲಿ, ಖಾತೆಗಳಲ್ಲಿ ಅಥವಾ ದಾಖಲೆಗಳಲ್ಲಿ ಯಾವುದೇ ನಮೋದು ಮಾಡಿರುವುದನ್ನು ಸ್ಕ್ಯಾನ್ ಮಾಡಿರುವ ಅಥವಾ ಬಿಡಿಪ್ರತಿ ಗಳು ಅಥವಾ ಇತರೆ ದಾಖಲೆಗಳು(ಬ್ಯಾಂಕ್ ಇತ್ಯಾದಿ) ಮತ್ತು ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು, ಮಾಡಿರುವ ಬದಲಾವಣೆಗಳು ಸೇರಿದಂತೆ ಎಲ್ಲವನ್ನೂ ಪುನಃಸಂಯೋಜಿಸಬೇಕು.

ನಿಯಮ – (10) ನೋಂದಾಯಿತ ವ್ಯಕ್ತಿಯು ನಿರ್ವಹಿಸುವ ಪ್ರತಿಯೊಂದ ಅಕೌಂಟ್ ಬುಕ್ ಸಂಪುಟಗಳನ್ನು ಕ್ರಮಾನುಗತ ಸಂಖ್ಯೆ ಅಥವಾ ಕ್ರಮಾನುಗತ ಸಂಖ್ಯೆಯಲ್ಲಿ ನಿರ್ವಹಿಸಬೇಕು.

ಪ್ರಸ್ತಾಪ: ನೋಂದಾಯಿತ ವ್ಯಕ್ತಿಯು ನಿರ್ವಹಿಸುವ ಪ್ರತಿಯೊಂದ ಅಕೌಂಟ್ ಬುಕ್ ಸಂಪುಟಗಳನ್ನು ಕ್ರಮಾನುಗತ ಸಂಖ್ಯೆ ಅಥವಾ ಕ್ರಮಾನುಗತ ಸಂಖ್ಯೆಯಲ್ಲಿ ನಿರ್ವಹಿಸಬೇಕು.

ನಿಯಮ – (13) ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು ತಯಾರಿಸುವ ಸರಕುಗಳು ತಿಂಗಳ ಉತ್ಪಾದನಾ ಅಕೌಂಟ್ಸ್ ಗಳನ್ನು ನಿರ್ವಹಿಸಬೇಕು, ತಯಾರಿಕೆಗೆ ಬಳಕೆ ಮಾಡಿದ ಕಚ್ಚಾ ಸಾಮಾಗ್ರಿಗಳು ಅಥವಾ ಸೇವೆಯ ಕುರಿತು ಪರಿಮಾಣಾತ್ಮಕ ಮಾಹಿತಿಯನ್ನು ಅದರಲ್ಲಿ ದಾಖಲಿಸಬೇಕು.

ಪ್ರತಿಕ್ರಿಯೆಗಳು: ಬಹುತೇಕ ಎಸ್ಎಂಇ ತಯಾರಕರಿಗೆ ಇದು ಖಂಡಿತವಾಗಿಯೂ ಸಾಧ್ಯವಿಲ್ಲದ ವಿಚಾರವಾಗಿದೆ. ಪುಡಿ ಮಾಡುವ ಯಂತ್ರ, ಕುಂಬಾರಿಕೆ, ಆಟಿಕೆ/ಕರಕುಶಲ ಸಾಮಾಗ್ರಿ, ಮತ್ತು ಇತರೆ ವ್ಯವಹಾರಗಳನ್ನು ಉದಾಹರಣೆಯನ್ನು ನೀಡಬಹುದು. ಕಚ್ಚಾ ಸಾಮಾಗ್ರಿಗಳ ಅಸಂಘಟಿತ ಗುಣದಿಂದಾಗಿ, ನಿರೀಕ್ಷಿತ ಮಾಹಿತಿಯನ್ನು ದಾಖಲಿಸುವುದು ಸಾಧ್ಯವಿಲ್ಲ.

ನಿಯಮ – (14) ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು ಪೂರೈಸುವ ಸೇವೆಯ ಕುರಿತು ಪರಿಣಾತ್ಮಕ ಮಾಹಿತಿಯನ್ನು ದಾಖಲಿಸಬೇಕು, ಪ್ರತಿಯೊಂದು ಸೇವೆ, ಬಳಸಿಕೊಂಡ ಆದಾನ ಸೇವೆಯ ವಿವರ ಮತ್ತು ಪೂರೈಸಿರುವ ಸೇವೆ ಇತ್ಯಾದಿ ಎಲ್ಲಾ ವಿವರಗಳನ್ನು ನಮೋದಿಸಬೇಕು.

ಪ್ರತಿಕ್ರಿಯೆಗಳು: ಎಸ್ಎಂಇಗಳ ಕುರಿತಾಗಿ ಈ ಹಿಂದಿನ ಅಂಶಗಳನ್ನು ಗಮನಿಸಿದಾಗ, ಬ್ಯೂಟಿ ಪಾರ್ಲರ್ ಗಳು, ರೆಸ್ಟೋರೆಂಟ್ ಗಳು ಮತ್ತು ಇತಂತಹ ಹಲವು ವ್ಯವಹಾರಗಳು ನೆನಪಿಗೆ ಬರುತ್ತವೆ. ಹೀಗಾಗಿ ಈ ನಿಯಮವು ಅಪ್ರಾಯೋಗಿಕ(ಬಹುತೇಕ ವ್ಯವಹಾರಗಳಿಗೆ) ಮತ್ತು ಅಸಾಧ್ಯ(ಕೆಲವು ವ್ಯವಹಾರಗಳಿಗೆ).
ನಿಯಮ – (15) ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯ ಕೆಲಸದ ಗುತ್ತಿಗೆಗಳನ್ನು ಪ್ರತ್ಯೇಕ ಅಕೌಂಟ್ ನಲ್ಲಿ ದಾಖಲಿಸಬೇಕು- (ಎ) ಯಾರಿಗಾಗಿ ಕೆಲಸದ ಗುತ್ತಿಗೆ ಮಾಡಲಾಗುತ್ತದೆ, ಆ ವ್ಯಕ್ತಿಯ ಹೆಸರು ಮತ್ತು ವಿಳಾಸ; (ಬಿ) ಕೆಲಸದ ಗುತ್ತಿಗೆಯ ಕಾರ್ಯದಿಂದ ಸರಕು ಅಥವಾ ಸೇವೆಯ ವಿವರಣೆ, ಮೌಲ್ಯ ಮತ್ತು ಪ್ರಮಾಣ (ಯಾವುದು ಅನ್ವಯವಾಗುತ್ತೋ ಅದು) (ಸಿ) ಪ್ರತಿಯೊಂದು ಕೆಲಸದ ಗುತ್ತಿಗೆಗೆ ಬಳಸಲ್ಪಟ್ಟ ಸರಕು ಅಥವಾ ಸೇವೆಯ ವಿವರಣೆ, ಮೌಲ್ಯ ಮತ್ತು ಪ್ರಮಾಣ (ಯಾವುದು ಅನ್ವಯವಾಗುತ್ತೋ ಅದು); (ಡಿ) ಪ್ರತಿಯೊಂದು ಕೆಲಸದ ಗುತ್ತಿಗೆಗೂ ಪಡೆದ ಪಾವತಿಯ ವಿವರಣೆ (ಇ) ಯಾರಿಂದ ಸರಕು ಅಥವಾ ಸೇವೆಯನ್ನು ಪಡೆದಿರುವಿರೋ ಆ ಪೂರೈಕೆದಾರರ ಹೆಸರು ಮತ್ತು ವಿಳಾಸ.

ಪ್ರತಿಕ್ರಿಯೆಗಳು ಇದು ಮತ್ತೊಮ್ಮೆ ಯಾವುದೇ ಎಸ್ಎಂಇ ಗುತ್ತಿಗೆದಾರರಿಗೆ ಮಾಡಲು ಅಸಾಧ್ಯವಾದ ಕಾರ್ಯ ಮತ್ತು ಬಹುಶಃ ಯಾವುದೇ ಗುತ್ತಿಗೆದಾರರಿಗೆ ಮಾಡಲು ಸಾಧ್ಯವಿರುವಂತಹ ಕಾರ್ಯ(ಪ್ರತಿಯೊಂದು ಗುತ್ತಿಗೆಗೂ ಬೇರೆ ಬೇರೆ ಅಕೌಂಟ್ಸ್ ನಿರ್ವಹಿಸುವುದು). ಹೆಚ್ಚಿನ ಸಂದರ್ಭಗಳಲ್ಲಿ, ಈಗ ನಡೆಯುತ್ತಿರುವ ಬಹುತೇಕ ಗುತ್ತಿಗೆಗಳು ಬಹು ಹಂಚಿಕೆಯ ಸೇವೆಗಳನ್ನು ನೀಡುತ್ತಿವೆ ಮತ್ತು ಎಲ್ಲಾದರೂ ದೊಡ್ಡ ರಚನಾತ್ಮಕವಾಗಿ ಸಂಘಟಿಸಿರುವ ಸಂಸ್ಥೆಗಳಿಗೂ (ಅವರು ಈಗಾಗಲೇ ಹಂಚಿಕೆ ಎನ್ನಬಹುದು) ಇದು ಅಸಾಧ್ಯ, ಇದನ್ನು ಸೂಕ್ಷ್ಮವಾಗಿ ಮಾಡಲು ಯಾವುದೇ ಎಸ್ಎಂಇಗಳಿಗೂ ಸಾಧ್ಯವಿಲ್ಲ. ಆದಾಯದ ದಿಕ್ಕಿನಿಂದ ಈ ಷರತ್ತಿನ ಹಿಂದಿರುವ ಪ್ರಯೋಜನಗಳು ಮತ್ತು ಉದ್ದೇಶಗಳು ಚರ್ಚೆಗೆ ಯೋಗ್ಯವಾಗಿವೆ.

ನಿಯಮ – (16) ಈ ನಿಯಮದ ಪ್ರಕಾರ ನಮೂನೆ ಮತ್ತು ದಾಖಲೆಗಳನ್ನು ವಿದ್ಯುನ್ಮಾನ ರೀತಿಯಲ್ಲಿ ನಿರ್ವಹಿಸಬೇಕು ಮತ್ತು ಡಿಜಿಟಲ್ ಸಹಿಯ ಮೂಲಕ ಅಂಗೀಕಾರ ಪಡೆಯುತ್ತದೆ.
ಪ್ರತಿಕ್ರಿಯೆಗಳು ಅಕೌಂಟಿಂಗ್ ದಾಖಲೆಗಳನ್ನು ಡೇಟಾ ಬೇಸ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು “ಡಿಜಿಟಲ್ ಸಹಿ’’ ಎಂಬ ಪರಿಕಲ್ಪನೆಯು ಸಹಿಯನ್ನು “ದಾಖಲೆ’’ಯ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಹೀಗಾಗಿ, ಇದು ಕಾರ್ಯಗತಗೊಳ್ಳಲು ಸಾಧ್ಯವಿಲ್ಲದ ಷರತ್ತಾಗಿದೆ.

ನಿಯಮ – (17) ನೋಂದಾಯಿತ ವ್ಯಕ್ತಿಯು ಎಲ್ಲಾ ಸರಕುಪಟ್ಟಿಗಳು, ಪೂರೈಕೆಯ ರಸೀದಿ ಗಳು, ಕ್ರೆಡಿಟ್ ಮತ್ತು ಡೆಬಿಟ್ ನೋಟುಗಳು ಮತ್ತು ದಾಸ್ತಾನಿಗೆ ಸಂಬಂಧಪಟ್ಟ ಡೆಲಿವರಿ ರಸೀದಿಗಳು, ಆಂತರಿಕ ಪೂರೈಕೆ ಮತ್ತು ಬಾಹ್ಯಾ ಪೂರೈಕೆ ಎಲ್ಲವನ್ನು ಒಟ್ಟಾಗಿ ನಿರ್ವಹಣೆ ಮಾಡಿ ಪರಿಚ್ಛೇಧ 36ರಲ್ಲಿ ತಿಳಿಸಿದಂತೆ ನಿಗದಿತ ಅವಧಿಯವರೆಗೆ ಕಾಪಾಡಿಕೊಳ್ಳಬೇಕು ಮತ್ತು ಇದನ್ನು ದಾಖಲೆಗಳಲ್ಲಿ ನೋಂದಾಯಿಸಿದ ವ್ಯವಹಾರದ ಸಂಬಂಧಪಟ್ಟ ಎಲ್ಲಾ ಸ್ಥಳಗಳಲ್ಲಿ ಇದನ್ನು ಇಟ್ಟುಕೊಳ್ಳಬೇಕು.

ಪ್ರತಿಕ್ರಿಯೆಗಳು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಂಬಂಧಪಟ್ಟ ಸ್ಥಳಗಳಲ್ಲಿ ಇಟ್ಟುಕೊಳ್ಳುವುದು ಅಪ್ರಾಯೋಗಿಕ- ಮತ್ತು ಪ್ರಮುಖವಾಗಿ ಪೇಪರ್ ದಾಖಲೆಗಳು ಇರುವಾಗ (ವಿದ್ಯುನ್ಮಾನ ರಸೀದಿ ಇತ್ಯಾದಿ ಬೆಂಬಲಿತ ದಾಖಲೆಗಳು) ಇದು ಅಪ್ರಾಯೋಗಿಕ. ಸಂಬಂಧಪಟ್ಟ ನಗರದಲ್ಲಿ ಅಥವಾ ರಾಜ್ಯದಲ್ಲಿ (ವ್ಯವಹಾರಕ್ಕೆ ಸಂಬಂಧಪಟ್ಟ ಸ್ಥಳಗಳಲ್ಲಿ) ನೋಂದಾಯಿತ ವ್ಯಕ್ತಿಯೊಬ್ಬ ಹಲವು ಅಂಗಡಿಗಳನ್ನು ಹೊಂದಿದ್ದರೆ ಪ್ರತಿಯೊಂದು ಸ್ಥಳಗಳಲ್ಲಿಯೂ ದಾಖಲೆಗಳನ್ನು ಇಡುವುದು ಅಪ್ರಾಯೋಗಿಕ. ಜೊತೆಗೆ, ವಿದ್ಯುನ್ಮಾನ ದಾಖಲೆಗಳಲ್ಲಿ, ಪ್ರತಿಯೊಂದು ಸ್ಥಳಗಳಲ್ಲಿಯೂ ಇದು ಇರಬೇಕೆನ್ನುವುದರ ಬದಲು ಬಳಸಲು ಸಾಧ್ಯವಾಗುವಂತೆ ಇರಬೇಕು. ಮತ್ತು ಹಲವು(ಎಲ್ಲವೂ ಅಲ್ಲದಿದ್ದರೂ) ವ್ಯವಹಾರಗಳು ತಮ್ಮ ವಹಿವಾಟನ್ನು ಕೇಂದ್ರೀಕೃತವಾಗಿ ನಿರ್ವಹಿಸುತ್ತವೆ.

2. ವಿದ್ಯುನ್ಮಾನ ದಾಖಲೆಗಳ ತಯಾರಿ ಮತ್ತು ನಿರ್ವಹಣೆ

ನಿಯಮ – (1) ದಾಖಲೆಗಳ ಸಮರ್ಪಕ ಬ್ಯಾಕಪ್ ನಿರ್ವಹಿಸಬೇಕು ಮತ್ತು ಅಂತಹ ವಿಧಾನದಲ್ಲಿ ಇಟ್ಟುಕೊಳ್ಳಬೇಕು, ಎಲ್ಲಾದರೂ ಅಂತಹ ದಾಖಲೆಗಳು ಅಪಘಾತ ಅಥವಾ ನೈಸರ್ಗಿಕ ಕಾರಣಗಳಿಂದ ಹಾನಿಗೀಡಾದರೆ, ಈ ಮಾಹಿತಿಗಳನ್ನು ನಿಗದಿತ ಸಮಯದಲ್ಲಿ ಮರುಸಂಗ್ರಹ ಮಾಡುವಂತೆ ಇರಬೇಕು.

ಪ್ರತಿಕ್ರಿಯೆಗಳು ಇದು ನಿಯಮ ಅಲ್ಲ, ಇದು “ಸಲಹೆ’’ಯಾಗಬಹುದು- ಇದು ಪ್ರತಿಯೊಂದು ಎಸ್ಎಂಇಗಳಿಗೂ ಹಿನ್ನೆಡೆಯಾಗಲಿದೆ ಮತ್ತು ಹೆಚ್ಚಿನ ದೊಡ್ಡ ಕಂಪನಿಗಳಿಗೂ ಹಿನ್ನೆಡೆಯಾಗಲಿದೆ. ಹಿಂದಿಕ್ಕುವ ಸಾಮರ್ಥ್ಯ ಹೊಂದಿದೆ. ವಿಪತ್ತು ಮರುಪಡೆಯುವ ಪರಿಕಲ್ಪನೆ ಹೊಸದಾಗಿದೆ ಮತ್ತು ವೆಚ್ಚದಾಯಕವಾಗಿದೆ, ಮತ್ತು ಜನರು ಯಾವುದೇ ಕಾರಣಕ್ಕೂ ತಮ್ಮ ದಾಖಲೆಗಳನ್ನು ಕಳೆದುಕೊಳ್ಳಬಾರದು, ಕಳೆದುಕೊಂಡರೂ ವಾಪಸ್ ಪಡೆಯಲು ಸಾಧ್ಯವಾಗಬೇಕು ಎಂದಿದೆ. ಹೆಚ್ಚಾಗಿ, ಇದು ಸರಕಾರ, ಜಿಎಸ್ಟಿಎನ್, ಬ್ಯಾಂಕ್, ಮತ್ತು ಯಾವುದೇ ಇತರೆ ಅಥವಾ ವಿದ್ಯುನ್ಮಾನ ರೂಪದಲ್ಲಿರುವ ಈ ಹಿಂದೆ ಸಲ್ಲಿಸಿದ ಮಾಹಿತಿಗಳನ್ನು ಮರುಸಂಗ್ರಹಿಸುವ ಕಾರ್ಯ ಅಥವಾ ಪುನರ್ ಜೀವ ನೀಡುವ ಕಾರ್ಯವಾಗಿದೆ.

ನಿಯಮ – (2) ಅವಶ್ಯಕತೆ ಬಿದ್ದಾಗ ನೋಂದಾಯಿತ ವ್ಯಕ್ತಿಯು ತಾನು ನಿರ್ವಹಿಸಿದ ದಾಖಲೆಗಳನ್ನು ಅಥವಾ ಸಂಬಂಧಪಟ್ಟದಾಖಲೆಗಳನ್ನು, ತನ್ನ ದೃಢೀಕರಣದೊಂದಿಗೆ ಹಾರ್ಡ್ ಪ್ರತಿ ಅಥವಾ ಓದಲು ಸಾಧ್ಯವಿರುವ ಮಾದರಿಯಲ್ಲಿ ನೀಡಬೇಕು.

ಪ್ರತಿಕ್ರಿಯೆಗಳು “ದೃಢೀಕೃತಗೊಳಿಸಿ’’ ಎಂಬ ಪರಿಕಲ್ಪನೆಯ ಪ್ರಕಾರ ವ್ಯವಹಾರದ ದಾಖಲೆಯನ್ನು ತನ್ನ ಪ್ರತಿನಿಧಿಗಳ ಮೂಲಕ ಕಳುಹಿಸುವಾಗ ದೃಢೀಕರಿಸಲಾಗಿದೆ ಎಂಬ ಬರಹವನ್ನು ನೋಂದಾಯಿತ ವ್ಯಕ್ತಿ ಕಳುಹಿಸುವುದಾಗಿದೆ- ಹೊಂದಿರುವ ಮಾಹಿತಿ ಸಂಗ್ರಹ ಯಾವುದೇ ವಿದ್ಯುನ್ಮಾನ ದೃಢೀಕೃತ ಪ್ರಕ್ರಿಯೆಯನ್ನು ಬಳಸಲು ತಿಳಿಸಿಲ್ಲ. ನಾವು ಸಲ್ಲಿಸಿರುವ ದಾಖಲೆಗಳ ಆಧಾರದಲ್ಲಿಯೇ ದಾಖಲೆಗಳ ಅಧಿಕೃತತೆಯನ್ನು ಋಜುವಾತು ಪಡಿಸಬಹುದು- ಹೀಗಾಗಿ ತೆರಿಗೆ ಪಾವತಿದಾರರು ತಾನು ಹಿಂದೆ ಸಲ್ಲಿಸಿದ ಆದಾಯ ನಮೂನೆ ಅಥವಾ ದಾಖಲೆಯ ಪ್ರತಿಯನ್ನೇ ಮತ್ತೆ ಹಾಜರುಪಡಿಸುವಾಗ ಅದನ್ನು ದೃಢೀಕರಿಸುವ ಅಗತ್ಯವಿರುವುದಿಲ್ಲ.
ನಿಯಮ – (3) ನೋಂದಾಯಿತ ವ್ಯಕ್ತಿಯು, ಅವಶ್ಯಕತೆ ಬಿದ್ದಾಗ ಲೆಕ್ಕಪರಿಶೋಧನೆ ಟ್ರಯಲ್ ಮತ್ತು ಅಂತರ್ ಸಂಪರ್ಕಗಳು, ಅಂದರೆ ಮೂಲ ದಾಖಲೆ, ಇದು ಪೇಪರ್ ಅಥವಾ ವಿದ್ಯುನ್ಮಾನ ರೂಪದಲ್ಲಿ ಇರಬಹುದು ಮತ್ತು ಹಣಕಾಸು ಖಾತೆ, ಮತ್ತು ಒಟ್ಟು ಸಂಖ್ಯೆಗಳಲ್ಲಿ ಬಳಸಿರುವ ಸಂಕೇತ ಗಳು ಮತ್ತು ಒಟ್ಟು ದಾಖಲೆಗಳ ಸಂಖ್ಯೆ ಸೇರಿದಂತೆ ಹಲವು ದಾಖಲೆಗಳನ್ನು, ದಾಖಲೆಗಳ ಮಾದರಿ ಪ್ರತಿಗಳ ಜೊತೆಗೆ ಸಲ್ಲಿಸಬೇಕಾಗುತ್ತದೆ.

ಪ್ರತಿಕ್ರಿಯೆಗಳು
ಡೆವಲಪರ್ಗಳ ಮೂಲಕ ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದರೆ ಕೇಳುವ ತಾಂತ್ರಿಕ ಮಾಹಿತಿಗಳನ್ನು ಒದಗಿಸಲು ಸಾಧ್ಯವಾಗಬಹುದು. ಇದು ಹೇಗೆಂದರೆ, ಕಾರು ಖರೀದಿದಾರರಲ್ಲಿ ಬ್ರೇಕಿಂಗ್ ವ್ಯವಸ್ಥೆಯ ಹಿಂದಿರುವ ಹೈಡ್ರಾಲಿಕ್ಸ್ ಮತ್ತು ಇತರೆ ಲೆಕ್ಕಾಚಾರಗಳನ್ನು ವಿವರಿಸಿ ಎಂದು ಕೇಳಿದ ಹಾಗಾಯ್ತು. ಹೆಚ್ಚುವರಿಯಾಗಿ, ಹತ್ತಾರು ಸಾವಿರ(ಅಥವಾ ನೂರಾರು) ಎಸ್ಎಂಇಗಳು ಬಳಸುವ ಸಾಫ್ಟ್ ವೇರ್ ಗಳ ಪ್ರೋಗ್ರಾಂಗಳು ಭಾರತದಲ್ಲಿ ಬರೆದವು ಅಥವಾ ರಚಿತವಾದವು ಅಲ್ಲ ಮತ್ತು ಹೀಗಾಗಿ ಈ ಷರತ್ತು ಪ್ರಶ್ನಾರ್ಹವಾಗಿದೆ. ನಾವು ಈ ಷರತ್ತಿನ ಉದ್ದೇಶ ಮತ್ತು ಲಾಭಗಳನ್ನು ಮರುಪರಿಶೀಲಿಸಬೇಕಿದೆ ಮತ್ತು ಇದು ಯಾವ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಯಬೇಕಿದೆ.

3. ದಾಸ್ತಾನುಗಾರ ಅಥವಾ ವೇರ್ ಹೌಸ್ ಸಾಗಾಣೆದಾರರ ದಾಖಲೆಗಳನ್ನು ಮಾಲೀಕರು ಅಥವಾ ನಿರ್ವಾಹಕರು ನಿರ್ವಹಿಸಬೇಕು.

ನಿಯಮ – (5) ನಿಯಮ 1ರಲ್ಲಿ ಇರುವ ವಿಷಯದಂತೆ, ವೇರ್ ಹೌಸ್, ದಾಸ್ತಾನುಗಾರ ಮಾಲೀಕರು ಅಥವಾ ನಿರ್ವಾಹಕರು ಅಕೌಂಟ್ ಪುಸ್ತಕವನ್ನು ನಿರ್ವಹಿಸಬೇಕು, ವೇರ್ ಹೌಸ್ ಅಥವಾ ದಾಸ್ತಾನುಗಾರ ನಲ್ಲಿ ಎಷ್ಟು ಕಾಲ ಆ ಸರಕು ಇರುತ್ತದೆ, ಅದರ ರವಾಣೆ, ಸಾಗಾಟ, ರಸೀದಿ ಇತ್ಯಾದಿಗಳನ್ನು ಸೇರಿಸಿ ನಮೋದಿಸಬೇಕು.

ಪ್ರತಿಕ್ರಿಯೆಗಳು ಸಾರಿಗೆ-ಸಾಗಾಟ ಡಿಪೊಗಳು ಹೇಗೆ ಕೆಲಸ ಮಾಡುತ್ತವೆ ಎಂದು ಸೂಕ್ಷ್ಮವಾಗಿ ಪರಿಶೀಲಿಸಿ ಈ ನಿಯಮವನ್ನು ಮರುಪರಿಶೀಲಿಸುವ ಅಗತ್ಯವಿದೆ, ಅವರ ವ್ಯವಹಾರ ಪರಿಕಲ್ಪನೆಯನ್ನು ಪರಿಗಣಿಸಿ ಪ್ರಾಯೋಗಿಕವಾಗಿ ನಿರ್ವಹಿಸುವುದು ಹೇಗೆಂಬುದನ್ನು ಮತ್ತು ಇದಕ್ಕಾಗಿ ಬೇಕಾದ ಕೌಶಲಗಳು ಅಲ್ಲಿನವರಲ್ಲಿ ಇರುತ್ತದೆಯೇ ಎಂದು ತಿಳಿದುಕೊಂಡು ಇದನ್ನು ಮರುಪರಿಶೀಲಿಸಬೇಕಿದೆ.

ನಿಯಮ – (6) ದಾಸ್ತಾನುಗಾರ ಮಾಲೀಕರು ಅಥವಾ ನಿರ್ವಾಹಕರು ಸಂಗ್ರಹಿಸಿರುವ ಸರಕುಗಳನ್ನು ಸರಕು ಆಧರಿತವಾಗಿ ಮತ್ತು ಮಾಲೀಕ ಆಧರಿತವಾಗಿ ಗುರುತಿಸುವಂತೆ ಇರಬೇಕು ಮತ್ತು ಅಗತ್ಯಬಿದ್ದಾಗ ಅಧಿಕಾರಿಗಳಿಗೆ ಪರಿಶೀಲನೆ ಸಂದರ್ಭದಲ್ಲಿ ಫಿಸಿಕಲ್ ದೃಢೀಕರಣ ಮಾಡುವಂತೆ ಇರಬೇಕು.

ಪ್ರತಿಕ್ರಿಯೆಗಳು ಇದು ಸಹ ಸಾಮಾನ್ಯವಾಗಿ ಅಪ್ರಾಯೋಗಿಕವಾಗಿದೆ, ಎಲ್ಲಾದರೂ ಸಣ್ಣ ಪ್ರಮಾಣದ ಸರಕನ್ನು-ಸಾಮಾನ್ಯವಾಗಿ ಎಸ್ಎಂಇಗಳ ಸಾಗಾಣೆ ಸಂದರ್ಭದಲ್ಲಿ- ಸಾಗಿಸುವ ಅವಶ್ಯಕತೆ ಇರುತ್ತದೆ. ಇಂತಹ ಸಾಗಾಟ ವಾಹನಗಳನ್ನು/ಕಂಟೈನರ್ ಗಳನ್ನು ಸರಕು ಆಧರಿತವಾಗಿ/ಮಾಲೀಕರ ಆಧರಿತವಾಗಿ ಗುರುತಿಸುವುದು ಕೆಲವೊಮ್ಮೆ ಕಷ್ಟವಾಗಬಹುದು. ಇಲ್ಲಿ “ಸಾಗಾಟದ ಮೂಲ’’ ಮತ್ತು “ಸಾಗಾಟದಲ್ಲಿ ಹೊಂದಿರುವ ದಾಖಲೆ’’ಗಳನ್ನು ನೋಡಿ ಗುರುತಿಸಬಹುದಾಗಿದೆ. ಹೀಗಾಗಿ ಇದನ್ನು ಅಪ್ರಾಯೋಗಿಕ ಷರತ್ತು ಎನ್ನಬಹುದು.

Are you GST ready yet?

Get ready for GST with Tally.ERP 9 Release 6

105,816 total views, 74 views today