ವ್ಯಕ್ತಿಯೊಬ್ಬರ ತೆರಿಗೆ ಬಾಧ್ಯತೆಯನ್ನು ನಿರ್ಧರಿಸುವುದು ತೆರಿಗೆ ಮೌಲ್ಯಮಾಪನದ ಅರ್ಥವಾಗಿದೆ. ವ್ಯಕ್ತಿಯೊಬ್ಬರು ತೆರಿಗೆ ಅವಧಿಯಲ್ಲಿ ಪಾವತಿಸಿರುವ ತೆರಿಗೆ ಮೊತ್ತವನ್ನು ತೆರಿಗೆ ಬಾಧ್ಯತೆ ಎನ್ನಲಾಗುತ್ತದೆ. ಈಗಿನ ತೆರಿಗೆ ಪದ್ಧತಿಯಲ್ಲಿರುವಂತೆ ಜಿಎಸ್ಟಿಯಲ್ಲಿಯೂ ತೆರಿಗೆ ಮೌಲ್ಯಮಾಪನ ಅದೇ ರೀತಿ ಇದೆ. ಪ್ರಮುಖವಾಗಿ ಇದರಲ್ಲಿ ಎರಡು ಬಗೆಯ ಮೌಲ್ಯಮಾಪನಗಳಿವೆ. ತೆರಿಗೆ ಪಾವತಿದಾರರಾಗಿರುವ ಆತ/ಆಕೆ ಸ್ವತಃ ತೆರಿಗೆ ಮೌಲ್ಯಮಾಪನ ಮಾಡುವ ಸ್ವಯಂ ಮೌಲ್ಯಮಾಪನ ಮತ್ತು ತೆರಿಗೆಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಮಾಡುವ ಮೌಲ್ಯಮಾಪನವೆಂಬ ಎರಡು ಪ್ರಮುಖ ವಿಭಾಗಗಳಿವೆ.
ತೆರಿಗೆ ಪ್ರಾಧಿಕಾರವು ಮಾಡುವ ಮೌಲ್ಯಮಾಪನದಲ್ಲಿ 4 ಬಗೆಗಳಿವೆ:
1. ತಾತ್ಕಾಲಿಕ ಮೌಲ್ಯಮಾಪನ
2. ಸೂಕ್ಷ್ಮ ಪರಿಶೀಲನೆಯ ಮೌಲ್ಯಮಾಪನ
3. ಅತ್ಯುತ್ತಮ ನ್ಯಾಯತೀರ್ಮಾನದ ಮೌಲ್ಯಮಾಪನ
4. ಸಾರಾಂಶ ಮೌಲ್ಯಮಾಪನ

ಇದನ್ನು ವಿವರವಾಗಿ ಅರ್ಥಮಾಡಿಕೊಳ್ಳೋಣ

ಸ್ವಯಂ ಮೌಲ್ಯಮಾಪನ

ಪಾವತಿಸಬೇಕಾದ ತೆರಿಗೆಗಳ ಕುರಿತು ಪ್ರತಿಯೊಬ್ಬ ತೆರಿಗೆ ಪಾವತಿದಾರ ವ್ಯಕ್ತಿಯು ಆತನೇ/ಆಕೆಯೇ ಸ್ವಯಂ ಮೌಲ್ಯಮಾಪನ ಮಾಡಬೇಕು ಮತ್ತು ಪ್ರತಿಯೊಂದು ತೆರಿಗೆ ಅವಧಿಯಲ್ಲಿಯು ಸಂಬಂಧಪಟ್ಟ ರಿಟರ್ನ್ ಗಳನ್ನು ಸಲ್ಲಿಸಬೇಕು. ತೆರಿಗೆಪಾವತಿದಾರರ ವಿಧಕ್ಕೆ ಅನುಗುಣವಾಗಿ ನಿರ್ದಿಷ್ಟವಾದ ತೆರಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಇದನ್ನು ನಮ್ಮ ಬ್ಲಾಗ್ ನಲ್ಲಿ ಜಿಎಸ್ಟಿಯಡಿ ವಿವಿಧ ತೆರಿಗೆ ರಿಟರ್ನ್ ಗಳು ವಿವರಿಸಲಾಗಿದೆ.

ಉದಾಹರಣೆಗೆ: ನೋಂದಾಯಿತ ನಿಯಮಿತ ವಿತರಕರು ಕಡ್ಡಾಯವಾಗಿ ಪ್ರತಿತಿಂಗಳು ನಮೂನೆ GSTR-3 ಯನ್ನು ಮತ್ತು ವಾರ್ಷಿಕವಾಗಿ ನಮೂನೆ GSTR-9 ಯನ್ನು ಸಲ್ಲಿಸಬೇಕು. ಇದು ತೆರಿಗೆ ಪಾವತಿದಾರರು ಸ್ವಯಂ ತೆರಿಗೆ ಮೌಲ್ಯಮಾಪನ ಮಾಡುವುದಕ್ಕೆ ಉದಾಹರಣೆಯಾಗಿದೆ.

ತೆರಿಗೆ ಪಾವತಿದಾರರಿಂದ ಮೌಲ್ಯಮಾಪನ

1. ತಾತ್ಕಾಲಿಕ ಮೌಲ್ಯಮಾಪನ

ಎಲ್ಲಾದರೂ ತೆರಿಗೆ ಪಾವತಿದಾರ ವ್ಯಕ್ತಿಗೆ ಸರಕು ಮತ್ತು/ಅಥವಾ ಸೇವೆಯ ಮೌಲ್ಯವನ್ನು ನಿರ್ಧರಿಸಲು ಸಾಧ್ಯವಾಗದೆ ಇದ್ದರೆ ಅಥವಾ ಅನ್ವಯವಾಗುವ ತೆರಿಗೆ ದರವನ್ನು ನಿರ್ಧರಿಸಲು ಸಾಧ್ಯವಾಗದೆ ಹೋದರೆ ಆತನು ಒಬ್ಬರು ತೆರಿಗೆ ಅಧಿಕಾರಿಗೆ ತಾತ್ಕಾಲಿಕ ಅವಧಿಗೆ ತೆರಿಗೆ ಪಾವತಿಯನ್ನು ಮೌಲ್ಯಮಾಪನ ಮಾಡಿ ನೀಡುವಂತೆ ತಿಳಿಸಬಹುದು. ಆ ಅಧಿಕಾರಿಯು ವ್ಯಕ್ತಿಗೆ ತಾತ್ಕಾಲಿಕ ಆಧಾರದಲ್ಲಿ ತೆರಿಗೆ ಪಾವತಿಸಲು ಆದೇಶ ಹೊರಡಿಸುತ್ತಾರೆ. ತೆರಿಗೆಯ ದರವನ್ನು ಮತ್ತು ತೆರಿಗೆ ವಿಧಿಸಬಲ್ಲ ಮೌಲ್ಯವನ್ನು ಅಧಿಕಾರಿಯು ತಿಳಿಸುತ್ತಾರೆ. ಅಧಿಕಾರಿಯು ತಿಳಿಸುವ ಬಾಂಡ್ ಅಥವಾ ಭದ್ರತಾ ಪತ್ರವನ್ನು ವ್ಯಕ್ತಿಯು ನೀಡಬೇಕು. ಆ ಕರಾರು ಪತ್ರದಲ್ಲಿ ತಾತ್ಕಾಲಿಕವಾಗಿ ತೆರಿಗೆ ಮೊತ್ತವನ್ನು ಮೌಲ್ಯಮಾಪನ ಮಾಡುವುದಕ್ಕೂ ಮತ್ತು ಅಂತಿಮವಾಗಿ ಮೌಲ್ಯಮಾಪನ ಮಾಡಿ ಪಾವತಿಗೆ ಇರುವ ವ್ಯತ್ಯಾವನ್ನು ನಮೋದಿಸಬೇಕು.
ತಾತ್ಕಾಲಿಕ ಮೌಲ್ಯಮಾಪನ ಆದೇಶ ಹೊರಡಿಸಿದ 6 ತಿಂಗಳಿನ ಒಳಗೆ ಅಧಿಕಾರಿಯು ಕಡ್ಡಾಯವಾಗಿ ಅಂತಿಮ ಮೌಲ್ಯಮಾಪನ ಆದೇಶವನ್ನು ಹೊರಡಿಸಬೇಕು.

ತಾತ್ಕಾಲಿಕ ಮೌಲ್ಯಮಾಪನದಡಿ ಯಾವುದೇ ಹೆಚ್ಚುವರಿ ತೆರಿಗೆ ಪಾವತಿಸಬೇಕಿದ್ದರೆ ವ್ಯಕ್ತಿಯು ಆ ತೆರಿಗೆಗೆ ಬಡ್ಡಿ ಪಾವತಿಸುವ ಬಾಧ್ಯತೆ ಹೊಂದಿರುತ್ತಾನೆ. ಅಂದರೆ, ನಿಗದಿಪಡಿಸಿದ ಕೊನೆಯ ದಿನಾಂಕವಾದ, ಉದಾಹರಣೆಗೆ ತಿಂಗಳ 20ನೇ ತಾರೀಖು ಪಾವತಿಸದೆ ಇದ್ದರೆ ಅದಕ್ಕೆ ಬಡ್ಡಿ ಪಾವತಿಸಬೇಕು. ಬಡ್ಡಿದರವು ಅಂತಿಮ ಆದೇಶ ಬರುವ ಮೊದಲು ಅಥವಾ ನಂತರ ನಿರ್ಧರಿಸಿ ತಿಂಗಳ 21ನೇ ತಾರೀಖಿನಿಂದ ತೆರಿಗೆ ಪಾವತಿಸುವ ತನಕ ಇರುತ್ತದೆ. ಅಂತಿಮ ಮೌಲ್ಯಮಾಪನ ಆದೇಶದ ಪ್ರಕಾರ ವ್ಯಕ್ತಿಗೆ ಮರುಪಾವತಿಗೆ ಅರ್ಹತೆ ಇದ್ದರೆ, ಪಾವತಿಸಿದ ಬಡ್ಡಿಯು ಮರುಪಾವತಿ ರೂಪದಲ್ಲಿ ವಾಪಸ್ ದೊರಕುತ್ತದೆ.

ಉದಾಹರಣೆಗೆ: ನೋಂದಾಯಿತ ವ್ಯಕ್ತಿಯೊಬ್ಬರು ಹೊಸ ಉತ್ಪನ್ನವೊಂದನ್ನು ತಯಾರಿಸಿದ್ದು, ಅದು ಹೊಸ ಎಚ್ ಎಸ್ ಎನ್ ಕೋಡ್ ಹೊಂದಿದೆ ಮತ್ತು ತೆರಿಗೆ ದರವು ಇನ್ನೂ ಲಭ್ಯವಿರುವುದಿಲ್ಲ. ಈ ಸಂದರ್ಭದಲ್ಲಿ ವ್ಯಕ್ತಿಯು ತಾನು ಪಾವತಿಸಬೇಕಾದ ತೆರಿಗೆಯನ್ನು ತಿಳಿಯಲು ತಾತ್ಕಾಲಿಕ ಮೌಲ್ಯಮಾಪನದ ಮೊರೆ ಹೋಗಬಹುದು.

2. ಸೂಕ್ಷ್ಮ ಪರಿಶೀಲನೆಯ ಮೌಲ್ಯಮಾಪನ

ಸೂಕ್ಷ್ಮ ಪರಿಶೀಲನೆಯ ಮೌಲ್ಯಮಾಪನದಡಿ, ಅಧಿಕಾರಿಯೊಬ್ಬರು ರಿಟರ್ನ್ ಮತ್ತು ವ್ಯಕ್ತಿಯು ಸಿದ್ಧಪಡಿಸಿದ ಇತರ ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ.

ಎಲ್ಲಾದರೂ ಯಾವುದಾದರೂ ಅಸಹಜತೆ ಕಂಡುಬಂದರೆ, ಅಧಿಕಾರಿಯು ತೆರಿಗೆದಾರರಿಗೆ ಮಾಹಿತಿ ನೀಡುತ್ತಾರೆ ಮತ್ತು ಅವರ ವಿವರ ಕೇಳುತ್ತಾರೆ. ಎಲ್ಲಾದರೂ ಈ ವಿವರಣೆ ತೃಪ್ತಿದಾಯಕವಾಗಿದ್ದರೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದಿಲ್ಲ. ಎಲ್ಲಾದರೂ ಮಾಹಿತಿ ನೀಡಿರುವ 30 ದಿನದೊಳಗೆ ತೃಪ್ತಿದಾಯಕವಾಗಿ ಉತ್ತರ ನೀಡದೆ ಇದ್ದರೆ ಅಥವಾ ತಪ್ಪನ್ನು ಒಪ್ಪಿದ ಮೇಲೆ ರಿಟರ್ನ್ ನಲ್ಲಿ ಯಾವುದೇ ತಿದ್ದುಪಡಿ ಮಾಡದೆ ಇದ್ದರೆ ಅಧಿಕಾರಿಯು ಸಂಬಂಧಪಟ್ಟ ಕ್ರಮಕೈಗೊಳ್ಳಲು ಮುಂದಾಗುತ್ತಾರೆ.
ಉದಾಹರಣೆಗೆ: ನಿಯಮಿತ ಸೂಕ್ಷ್ಮ ಪರಿಶೀಲನೆಯ ಮೌಲ್ಯಮಾಪನದಡಿ, ನೋಂದಾಯಿತ ವ್ಯಕ್ತಿಯು ನೀಡಿರುವ GSTR-3 ನಮೂನೆಯನ್ನು ಪರಿಶೀಲಿಸುತ್ತಾರೆ ಮತ್ತು ವಹಿವಾಟಿನ ಕುರಿತು ಮತ್ತು ತೆರಿಗೆ ಪಾವತಿಸಿರುವ ಕುರಿತು ಯಾವುದಾದರೂ ಸಂಶಯ ಬಂದರೆ ವಿತರಕರಿಂದ ಅಧಿಕಾರಿಯು ವಿವರಣೆ ಕೇಳುತ್ತಾರೆ.

3. ಅತ್ಯುತ್ತಮ ನ್ಯಾಯತೀರ್ಮಾನದ ಮೌಲ್ಯಮಾಪನ

ಅತ್ಯುತ್ತಮ ನ್ಯಾಯತೀರ್ಮಾನದ ಮೌಲ್ಯಮಾಪನದಡಿ, ಅಧಿಕಾರಿಯು ಆತನ/ಆಕೆಯ ಅತ್ಯುತ್ತಮ ನ್ಯಾಯತೀರ್ಮಾನದ ಮೂಲಕ ವ್ಯಕ್ತಿಯ ತೆರಿಗೆ ಬಾಧ್ಯತೆಯನ್ನು ಪರಿಶೀಲನೆ ಮಾಡುತ್ತಾರೆ. ಇದಕ್ಕಿರುವ ಸಂದರ್ಭಗಳು ಈ ಮುಂದಿನಂತೆ ಇವೆ:

ಎ. ರಿಟರ್ನ್ ಭರ್ತಿ ಮಾಡದವರ ಮೌಲ್ಯಮಾಪನ- ಎಲ್ಲಾದರೂ ನೋಟಿಸ್ ನೀಡಿದ ನಂತರವೂ ವ್ಯಕ್ತಿಯೊಬ್ಬರು ರಿಟರ್ನ್ ಸಲ್ಲಿಸಲು ವಿಫಲವಾದರೆ, ತನ್ನ ಅತ್ಯುತ್ತಮ ನ್ಯಾಯತೀರ್ಮಾನದ ಮೂಲಕ ವ್ಯಕ್ತಿಯ ತೆರಿಗೆ ಬಾಧ್ಯತೆಯನ್ನು ಪರಿಶೀಲಿಸುತ್ತಾರೆ. ಸಂಬಂಧಪಟ್ಟ ವಸ್ತುಗಳನ್ನು ಪರಿಶೀಲಿಸಿ ಅಥವಾ ಅಧಿಕಾರಿಯು ಪರಿಶೀಲಿಸಿ ಕ್ರಮಕೈಗೊಳ್ಳುತ್ತಾರೆ. ತೆರಿಗೆ ರಿಟರ್ನ್ ಸಲ್ಲಿಸದೆ ಇರುವ ವರ್ಷವನ್ನು ಲೆಕ್ಕಹಾಕಿ 5 ವರ್ಷಗಳಿಗೆ ಮೌಲ್ಯಮಾಪನ ಆದೇಶವನ್ನು ಹೊರಡಿಸುತ್ತಾರೆ.
ಎಲ್ಲಾದರೂ ಮೌಲ್ಯಮಾಪನ ಆದೇಶ ಹೊರಡಿಸಿದ 30 ದಿನದೊಳಗೆ ರಿಟರ್ನ್ ಸಲ್ಲಿಕೆ ಮಾಡಿದರೆ, ಈ ಮೌಲ್ಯಮಾಪನ ಆದೇಶವನ್ನು ವಾಪಸ್ ಪಡೆಯಲಾಗುತ್ತದೆ.

ಉದಾಹರಣೆಗೆ: ಹಣಕಾಸು ವರ್ಷವೊಂದರಲ್ಲಿ ತೆರಿಗೆ ಇಲಾಖೆಯಿಂದ ನೋಟಿಸ್ ತಲುಪಿದ ನಂತರವೂ ನಿಯಮಿತ ವಿತರಕರೊಬ್ಬರು ನಮೂನೆ GSTR-9 ಯನ್ನು ಸಲ್ಲಿಸದೆ ಇರುತ್ತಾರೆ. ಇಂತಹ ಸಂದರ್ಭದಲ್ಲಿ ತೆರಿಗೆ ಪಾವತಿಸಬಲ್ಲ ವ್ಯಕ್ತಿಯು ತೆರಿಗೆ ಪಾವತಿಸುವ ಕುರಿತು ಅತ್ಯುತ್ತಮ ನ್ಯಾಯತೀರ್ಮಾನ ನೀಡುತ್ತಾರೆ.

b. ನೋಂದಾಯಿಸದೆ ಇರುವ ವ್ಯಕ್ತಿಯ ಮೌಲ್ಯಮಾಪನ- ತೆರಿಗೆ ಪಾವತಿದಾರ ವ್ಯಕ್ತಿ ಅವನು/ಅವಳು ನೋಂದಾಯಿಸಲು ಬಾಧ್ಯತೆ ಹೊಂದಿದ್ದರೂ ನೋಂದಾಯಿಸಲು ವಿಫಲವಾದರೆ, ಸಂಬಂಧಪಟ್ಟ ತೆರಿಗೆ ಅವಧಿಯವರೆಗೆ ತನ್ನ ಅತ್ಯುತ್ತಮ ನ್ಯಾಯತೀರ್ಮಾನದ ಮೂಲಕ ಆ ವ್ಯಕ್ತಿಯ ತೆರಿಗೆ ಬಾಧ್ಯತೆಯನ್ನು ತೀರ್ಮಾನಿಸುತ್ತಾರೆ ಮತ್ತು ತೆರಿಗೆ ಪಾವತಿಸದೆ ಇರುವ ಹಣಕಾಸು ವರ್ಷದಿಂದ 5 ವರ್ಷದೊಳಗಿನ ಮೌಲ್ಯಮಾಪನ ಆದೇಶವನ್ನು ಹೊರಡಿಸುತ್ತಾರೆ.

ಉದಾಹರಣೆಗೆ: ಪರಿಶೀಲನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ವಹಿವಾಟು ನಿಗದಿತ ಮಿತಿಯನ್ನು ದಾಟಿದ್ದರೂ ಜಿಎಸ್ಟಿಯಡಿ ನೋಂದಾಯಿಸದೆ ಇರುವುದನ್ನು ಅಧಿಕಾರಿಯು ಗಮನಿಸುತ್ತಾರೆ. ಆ ಅಧಿಕಾರಿಯು ಅತ್ಯುತ್ತಮ ನ್ಯಾಯತೀರ್ಮಾನದ ಮೌಲ್ಯಮಾಪನ ಮಾಡುತ್ತಾರೆ ಮತ್ತು ವ್ಯಕ್ತಿಗೆ ತೆರಿಗೆ ಬಾಧ್ಯತೆಯನ್ನು ನೀಡುತ್ತಾರೆ.

4. ಸಾರಾಂಶ ಮೌಲ್ಯಮಾಪನ

ಕೆಲವೊಂದು ವಿಶೇಷ ಪ್ರಕರಣಗಳಲ್ಲಿ, ವ್ಯಕ್ತಿಯೊಬ್ಬರ ತೆರಿಗೆ ಬಾಧ್ಯತೆಯನ್ನು ಅಧಿಕಾರಿ ಕಂಡು ಹಿಡಿಯುತ್ತಾರೆ ಅಥವಾ ಅಧಿಕಾರಿಯ ಗಮನಕ್ಕೆ ಬರುತ್ತದೆ, ಹೆಚ್ಚುವರಿ/ಜಂಟಿ ಆಯುಕ್ತರ ಅನುಮತಿಯೊಂದಿಗೆ ಆ ವ್ಯಕ್ತಿಯ ತೆರಿಗೆ ಬಾಧ್ಯತೆಯನ್ನು ಮತ್ತು ಆದಾಯದ ಮೇಲಿನ ಬಡ್ಡಿಯನ್ನು ತೀರ್ಮಾನಿಸುತ್ತಾರೆ.

ಉದಾಹರಣೆಗೆ: ನೋಂದಾಯಿತ ನಿಯಮಿತ ವಿತರಕರೊಬ್ಬರು ಸಲ್ಲಿಸಿದ ನಮೂನೆ GSTR-3 ಆಧಾರದಲ್ಲಿ, ಅಧಿಕಾರಿಯು ಸಾರಾಂಶದ ಮೌಲ್ಯಮಾಪನ ಮಾಡುತ್ತಾರೆ ಮತ್ತು ಆದಾಯ ನಷ್ಟದ ಕುರಿತು ಸಾಕಷ್ಟು ಸಾಕ್ಷ್ಯ ಗುರುತಿಸುತ್ತಾರೆ ಮತ್ತು ಆ ನಷ್ಟವನ್ನು ವ್ಯಕ್ತಿಯಿಂದ ಭರಿಸುತ್ತಾರೆ.

ಜಿಎಸ್ಟಿಯಡಿ ಇರುವ ವಿವಿಧ ಬಗೆಯ ಮೌಲ್ಯಮಾಪನಗಳ ಕುರಿತು ಮತ್ತು ಅಗತ್ಯವಾಗಿರುವ ತೆರಿಗೆ ಅನುಸರಣೆಗಳನ್ನು ತೆರಿಗೆದಾರ ವ್ಯಕ್ತಿಯು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು ಸ್ವಯಂ ಮೌಲ್ಯಮಾಪನ ಮಾಡುವುದು ಅತ್ಯಂತ ಅವಶ್ಯವಾದ ವಿಷಯವಾಗಿದೆ. ನಿಖರ ಮಾಹಿತಿಯನ್ನು ಒದಗಿಸುವುದು ಅತ್ಯಂತ ಅಗತ್ಯವಾಗಿದೆ ಮತ್ತು ನಿಗದಿತ ಸಮಯದೊಳಗೆ ಡ್ಯೂ ಆಗುವ ಮೊದಲು ತೆರಿಗೆ ಪಾವತಿಸುವುದು ಕರ್ತವ್ಯವಾಗಿದೆ. ತೆರಿಗೆ ಪ್ರಾಧಿಕಾರದಿಂದ ಮುಂದಿನ ಕ್ರಮಗಳಿಗೆ ಒಳಗಾಗುವುದನ್ನು ಸ್ವಯಂ ಮೌಲ್ಯಮಾಪನ ತಡೆಯುತ್ತದೆ. ಎಲ್ಲಾದರೂ ತೆರಿಗೆ ಪ್ರಾಧಿಕಾರವು ಮೌಲ್ಯಮಾಪನ ಮಾಡಿದರೆ, ಸಂಬಂಧಪಟ್ಟ ವ್ಯಕ್ತಿಯು ಅವರು ಕೇಳಿದ ಮಾಹಿತಿಗಳನ್ನು ನಿಗದಿತ ಸಮಯದೊಳಗೆ ಸಮರ್ಪಕವಾಗಿ ಒದಗಿಸಬೇಕು. ಜಿಎಸ್ಟಿಯಡಿ ಸಂಶಯ ಬಗೆಹರಿಸಲು ವ್ಯಾಪಾರಿಗಳು ಕಡ್ಡಾಯವಾಗಿ ಅನುಸರಣೆ ಮತ್ತು ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಬೇಕು.

Are you GST ready yet?

Get ready for GST with Tally.ERP 9 Release 6

115,327 total views, 289 views today