ಜಿಎಸ್ಟಿ ಪರಿಚಯಿಸಲು ಕೇವಲ ಕೆಲವೇ ದಿನಗಳು ಇರುವುದರಿಂದ, ಹೆಚ್ಚಿನ ವ್ಯವಹಾರಗಳಿಗೆ ಪರಿವರ್ತನೆಯ ನಿಯಮಗಳು ಮತ್ತು ನಿಬಂಧನೆಗಳ ಕುರಿತು, ಪ್ರಮುಖವಾಗಿ ವರ್ಗಾವಣೆಯ ದಿನದಂದು ಮುಕ್ತಾಯದ ದಾಸ್ತಾನಿಗೆ ಸಂಬಂಧಪಟ್ಟಂತೆ ಸಂದಿಗ್ಧತೆಗಳು ಇವೆ. ಮುಕ್ತಾಯದ ದಾಸ್ತಾನಿಗೆ ಆದಾನ ತೆರಿಗೆ ಪಾವತಿ ಲಭಿಸುವ ಕುರಿತು ಈ ನಿಯಮಗಳು ನಿರ್ಧರಿಸುವುದರಿಂದ ಇದು ವ್ಯವಹಾರಗಳಿಗೆ ಹೆಚ್ಚು ನಿರ್ಣಾಯಕವಾಗಿದೆ ಮತ್ತು ಇದರ ಆಧಾರದಲ್ಲಿ ಈಗಿನ ತೆರಿಗೆ ಪದ್ಧತಿಯಲ್ಲಿ ಕೊನೆಯ ಕೆಲವು ದಿನಗಳಲ್ಲಿ ತಮ್ಮ ದಾಸ್ತಾನುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮೂಲಕ ತಮ್ಮನ್ನು ತಾವು ಮರು ಸಂಘಟಿಸಿಕೊಳ್ಳಬೇಕಿದೆ.

ಪ್ರಮುಖ ಕಾಳಜಿ

ಈಗಿನ ತೆರಿಗೆ ಕಾನೂನಿನಲ್ಲಿ ನೋಂದಾಯಿಸದೆ ಇರುವ, ಆದರೆ, ಆದಾನ ತೆರಿಗೆ ಪಾವತಿ(ಐಟಿಸಿ) ಪಡೆಯಲು ಅರ್ಹರಾಗಿರುವ ವಿತರಕರ ಮುಕ್ತಾಯದ ದಾಸ್ತಾನಿಗೆ ಆದಾನ ತೆರಿಗೆ ದೊರಕುವುದೇ ಎನ್ನುವುದು ನಿರ್ಣಾಯಕ ಪ್ರಕರಣವಾಗಿದೆ. ಪರಿವರ್ತನೆಯ ನಿಯಮಗಳ ಪ್ರಕಾರ, ತೆರಿಗೆ ವಿಧಿಸಬಲ್ಲ ಸರಕುಗಳನ್ನು ಈ ವಿತರಕರು ನೇರವಾಗಿ ತಯಾರಕರಿಂದ/1ನೇ ಹಂತದ ವಿತರಕರಿಂದ/ 2ನೇ ಹಂತದ ವಿತರಕರಿಂದ- ಪಡೆದಿದ್ದರೆ ಇವರು ಮುಕ್ತಾಯದ ದಾಸ್ತಾನಿಗೆ ಪಾವತಿಸಿದ ತೆರಿಗೆಯಲ್ಲಿ ಶೇಕಡ 100ರಷ್ಟು ಆದಾನವನ್ನು ಪಡೆಯಬಹುದಾಗಿದೆ. ಇನ್ನೊಂದು ಬಗೆಯಲ್ಲಿ ನೋಡುವುದಾದರೆ, ಈ ವಿತರಕರು, ಸಗಟು ಮಾರಾಟದಾರರಿಂದ- ಅಬಕಾರಿ ಸುಂಕವನ್ನು ವೆಚ್ಚವಾಗಿ ಹಾದು ಹೋಗುವುದರಿಂದ- ಸುಂಕ ವಿಧಿಸಬಲ್ಲ ಸರಕುಗಳನ್ನು ಖರೀದಿಸಿದರೆ ಒಂದು ಭಾಗದ ಆದಾನವನ್ನು ಮಾತ್ರ ಪಡೆಯಲು ಅರ್ಹರಾಗುತ್ತಾರೆ, ಇವರು ಜಿಎಸ್ಟಿ ಪೂರ್ವದಲ್ಲಿ ಸರಕನ್ನು ಮಾರಾಟ ಮಾಡಿದರೆ- ಜಿಎಸ್ಟಿ ದರ ಶೇಕಡ 18 ಅಥವಾ ಹೆಚ್ಚು ಇದ್ದರೆ ಶೇಕಡ 60, ಮತ್ತು ಜಿಎಸ್ಟಿ ದರವು ಶೇಕಡ 12 ಅಥವಾ ಕಡಿಮೆ ಇದ್ದರೆ ಶೇಕಡ 40ರಷ್ಟು ಆದಾನ ಪಾವತಿಯು ದೊರಕುತ್ತದೆ.

Also Read: Migrating to GST for registered businesses

ಎರಡು ಸಂದರ್ಭಗಳಲ್ಲಿ ಇದನ್ನು ವಿವರವಾಗಿ ಅರ್ಥಮಾಡಿಕೊಳ್ಳೋಣ.

ಸಂದರ್ಭ 1

ನೇರವಾಗಿ ತಯಾರಕರಿಂದ/1ನೇ ಹಂತದ ವಿತರಕರಿಂದ/ 2ನೇ ಹಂತದ ವಿತರಕರಿಂದ ನೋಂದಾಯಿಸಿದ ವಿತರಕರು ಅಬಕಾರಿ ತೆರಿಗೆ ವಿಧಿಸಬಲ್ಲ ಸರಕನ್ನು ಪಡೆದಿದ್ದರೆ ಮತ್ತು ಸುಂಕ ಪಾವತಿಸಿರುವುದಕ್ಕೆ ಸರಕುಪಟ್ಟಿಯ ಸಾಕ್ಷ್ಯ ಇರುವ ಸಂದರ್ಭ.

ಶಿವ ಎಂಟರ್ಪ್ರೈಸಸ್ ಎಂಬ ವಿತರಕರು ಜೂನ್ 15, 2017ರಂದು ಕುನ್ಲಾ ಇಂಡಸ್ಟ್ರೀಸ್ ಎಂಬ ತಯಾರಕರಿಂದ ಉತ್ಪನ್ನವೊಂದನ್ನು ಖರೀದಿಸುತ್ತದೆ ಎಂದಿರಲಿ. ಈ ಸರಕುಪಟ್ಟಿಯು ಈ ಮುಂದಿನಂತೆ ಇರುತ್ತದೆ-
ವೆಚ್ಚ = 1000.00 INR

ಶೇಕಡ 12.5ರಷ್ಟು ಅಬಕಾರಿ = 125.00 ರೂಪಾಯಿ

ಅಬಕಾರಿ ಜೊತೆಗೆ ವೆಚ್ಚ = 1125.00 ರೂಪಾಯಿ

ಶೇಕಡ 5ರಷ್ಟು ಮೌಲ್ಯವರ್ಧಿತ ತೆರಿಗೆ = 56.25 ರೂಪಾಯಿ

ಒಟ್ಟು = 1181.25 ರೂಪಾಯಿ

ಜಿಎಸ್ಟಿಯು ಜುಲೈ 1, 2017ರಂದು ಬಳಿಕ ಈಗ, ಆತನಲ್ಲಿ ಮುಕ್ತಾಯದ ದಾಸ್ತಾನು ಆಗಿ ಇರುತ್ತದೆ. ಈ ಉತ್ಪನ್ನಕ್ಕೆ ಶೇಕಡ 12 ಜಿಎಸ್ಟಿ ದರ ಅನ್ವಯವಾಗುತ್ತದೆ ಎಂದುಕೊಳ್ಳೋಣ. ಶಿವ ಎಂಟರ್ಪ್ರೈಸಸ್ ಇದಕ್ಕೆ ಸಂಬಂಧಪಟ್ಟಂತೆ ತೆರಿಗೆ ಪಾವತಿಸಿರುವುದಕ್ಕೆ ಸರಕುಪಟ್ಟಿ ಹೊಂದಿದೆ, ಇದರಿಂದ ಇವರಿಗೆ ಕೇವಲ ಮೌಲ್ಯವರ್ಧಿತ ಅಂಶ ಮಾತ್ರ ಪೂರ್ತಿ ದೊರಕದೆ, ಅಭಕಾರಿ ಅಂಶವೂ ದೊರಕುತ್ತದೆ.

ಹೀಗಾಗಿ, ಜಿಎಸ್ಟಿ ಪೂರ್ವದಲ್ಲಿ ಅವರು ಉತ್ಪನ್ನವನ್ನು 1000 ರೂ. ವೆಚ್ಚದಲ್ಲಿ ಮಾತ್ರ ಮಾರಾಟ ಮಾಡಲು ಅವರಿಗೆ ಸಾಧ್ಯವಾಗುತ್ತದೆ.
ಜುಲೈ 15, 2017ರಿಂದ ಶಿವ ಎಂಟರ್ಪ್ರೈಸಸ್ ಸಂಸ್ಥೆಯು ಮಹೀಂದ್ರ ಏಜೆನ್ಸಿಗೆ ಮಾರಾಟ ಮಾಡುತ್ತದೆ. ಇದರ ಸರಕು ಪಟ್ಟಿ ಈ ಮುಂದಿನಂತೆ ಇರುತ್ತದೆ-

ಮಾರಾಟ ದರ = 1000.00 INR (assuming no profits)

ಶೇಕಡ 6ರಷ್ಟು ಸಿಜಿಎಸ್ಟಿ = 60.00 INR
ಶೇಕಡ 6 ಎಸ್ಜಿಎಸ್ಟಿ = 60.00 INR

ಒಟ್ಟು = 1120.00 INR

ಈಗ, ಹಿಂದಿನ ತೆರಿಗೆ ಪಾವತಿಗೆ ಬದಲಾಗಿ ಜಿಎಸ್ಟಿಯಲ್ಲಿ ಹೇಗೆ ತೆರಿಗೆ ಪ್ರತಿಭಾರ ಹೊಂದಿದೆ ಎನ್ನುವುದನ್ನು ನೋಡೋಣ.

ಸಿಜಿಎಸ್ಟಿಯು ಅಬಕಾರಿ ಪಾವತಿಗೆ ವಿರುದ್ಧವಾಗಿ ಪ್ರತಿಭಾರ ಹೊಂದಿರುವವರೆಗೆ,

ಸಿಜಿಎಸ್ಟಿ ಪಾವತಿ ತುಲನೆ= ಅಸ್ತಿತ್ವದಲ್ಲಿರುವ ಅಬಕಾರಿ ಪಾವತಿ- ಸಿಜಿಎಸ್ಟಿ ಬಾಧ್ಯತೆ= 125 ರೂಪಾಯಿ- 60 ರೂಪಾಯಿ= 65 ರೂಪಾಯಿ (ಇದು ವಿದ್ಯುನ್ಮಾನ ಲೆಡ್ಜರ್ ಬಳಕೆಯಿಂದ ಇದರ ಲಭ್ಯತೆ ಇದೆ).

ಮೌಲ್ಯವರ್ಧಿತ ತೆರಿಗೆ ಪಾವತಿಗೆ ವಿರುದ್ಧವಾಗಿ ಎಸ್ಜಿಎಸ್ಟಿ ಪ್ರತಿಭಾರ

ಎಸ್ಜಿಎಸ್ಟಿ ಪಾವತಿ ತುಲನೆ= ಅಸ್ತಿತ್ವದಲ್ಲಿರುವ ತೆರಿಗೆ ಪಾವತಿ- ಎಸ್ಜಿಎಸ್ಟಿ ಬಾಧ್ಯತೆ= 56.25 -60 ರೂಪಾಯಿ= 3.75 ರೂಪಾಯಿ (ಇದನ್ನು ಶಿವ ಎಂಟರ್ಪ್ರೈಸಸ್ ಪಾವತಿಸುವ ಅಗತ್ಯವಿರುತ್ತದೆ).

ಒಟ್ಟಾರೆಯಾಗಿ, ಶಿವ ಎಂಟರ್ಪ್ರೈಸಸ್ ದೃಷ್ಟಿಕೋನದಿಂದ ನೋಡಿದರೆ, ನಿವ್ವಳ ತೆರಿಗೆ ಪಾವತಿ ಈಗಲೂ ಸಕಾರಾತ್ಮಕವಾಗಿದೆ. ಆದರೂ, ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ಪಾವತಿಯು ಸಂಬಂಧಪಟ್ಟ ವಿದ್ಯುನ್ಮಾನ ಖಾತಾ ಪುಸ್ತಕದಲ್ಲಿ ನಿರ್ದೇಶಿಸುವುದರಿಂದ, ನಿವ್ವಳ ತೆರಿಗೆ ಪಾವತಿಯ ಅರ್ಥವು ಶಿವ ಎಂಟರ್ಪ್ರೈಸಸ್ನಿಂದ ಹಣದ ಹೊರಹರಿವಿಗೆ ಯಾವುದೇ ಪರಿಣಾಮ ಬೀರಿಲ್ಲ.

ಈ ಉದಾಹರಣೆಯಲ್ಲಿ ಮೌಲ್ಯವರ್ಧಿತ ತೆರಿಗೆಯು ಶೇಕಡ 5 ಎಂದು ಮತ್ತು ಜಿಎಸ್ಟಿ ದರವು ಶೇಕಡ 12 ಎಂದು ಊಹಿಸಲಾಗುತ್ತದೆ. ವ್ಯಾಟ್ ಮತ್ತು ಜಿಎಸ್ಟಿಯ ಇತರೆ ದರಗಳನ್ನು ಪರಿಗಣಿಸುವುದಾದರೆ, ಈ ಮುಂದಿನವುಗಳು ನಿವ್ವಳ ತೆರಿಗೆ ಪಾವತಿ ಮೌಲ್ಯವಾಗುತ್ತದೆ-

Tax RatesVAT @ 5%
GST @ 12%
VAT @ 5%
GST @ 18%
VAT @ 5%
GST @ 28%
VAT @ 14.5%
GST @ 12%
VAT @ 14.5%
GST @ 18%
VAT@ 14.5%
GST @ 28%
Cost1000.001000.001000.001000.001000.001000.00
Excise @ 12.5 %125.00125.00125.00125.00125.00125.00
VAT56.2556.2556.25163.13163.13163.13
CGST60.0090.00140.0060.0090.00140.00
SGST60.0090.00140.0060.0090.00140.00
CGST Bal.65.0035.0015.0065.0035.0015.00
SGST Bal.3.7533.7583.75103.1373.1323.13
Net Tax Credit61.251.25168.13108.138.13
ಸಂದರ್ಭ 2

ಸಗಟು ಮಾರಾಟಗಾರರಿಂದ ಮೌಲ್ಯವರ್ಧಿತ ತೆರಿಗೆ ನೋಂದಾಯಿತ ವಿತರಕರು ಅಬಕಾರಿ ತೆರಿಗೆ ವಿಧಿಸಬಲ್ಲ ಸರಕನ್ನು ಖರೀದಿಸುತ್ತಾರೆ ಮತ್ತು ಈ ಅಬಕಾರಿಯನ್ನು ವೆಚ್ಚವಾಗಿ ವರ್ಗಾಯಿಸಲಾಗುತ್ತದೆ ಮತ್ತು ಅಬಕಾರಿ ವಿಧಿಸಿರುವುದನ್ನು ಸರಕುಪಟ್ಟಿಯಲ್ಲಿ ನಮೋದಿಸಲಾಗಿರುವುದಿಲ್ಲ.


ಭಲ್ಲಾ ಎಂಟರ್ಪ್ರೈಸಸ್ ಜೂನ್ 15, 2017ರಂದು ಕಪಿಲ್ ವೋಲ್ಸೇಲರ್ಸ್ರಿಂದ ಉತ್ಪನ್ನವನ್ನು ಖರೀದಿಸುತ್ತಾರೆ. ಇದರ ಸರಕುಪಟ್ಟಿಯ ಈ ಮುಂದಿನಂತೆ ಇರುತ್ತದೆ-

ವೆಚ್ಚ = 1125.00 ರೂಪಾಯಿ (ಯಾಕೆಂದರೆ, ಸರಕು ಅಬಕಾರಿ ತೆರಿಗೆ ಅನುಭವಿಸಿದೆ, ವೆಚ್ಚವಾಗಿ ಹೀರಿಕೊಳ್ಳಲಾಗಿದೆ)
ತೆರಿಗೆ ಅನುಭವಿಸಿದೆ, ವೆಚ್ಚವಾಗಿ ಹೀರಿಕೊಳ್ಳಲಾಗಿದೆ)
ಶೇಕಡ 5 ಮೌಲ್ಯವರ್ಧಿತ ತೆರಿಗೆ = 56.25 ರೂಪಾಯಿ

ಒಟ್ಟು = 1181.25 ರೂಪಾಯಿ.

ಈಗ, ಜುಲೈ 1, 2017ರಿಂದ ಜಿಎಸ್ಟಿ ಆರಂಭವಾಗಿರುವುದರಿಂದ ಆತನಲ್ಲಿರುವ ಉತ್ಪನ್ನವು ಮುಕ್ತಾಯದ ದಾಸ್ತಾನು ಆಗುತ್ತದೆ. ಈತನಲ್ಲಿರುವ ಉತ್ಪನ್ನಕ್ಕೆ ಶೇಕಡ 12ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ ಎಂದು ಊಹಿಸುವುದಾದರೆ, ಭಲ್ಲಾ ಆದಾನ ಪಾವತಿ ಪಡೆಯುವುದಿಲ್ಲ, ಆದರೆ, ಸಿಜಿಎಸ್ಟಿಯನ್ನು ಕ್ರೆಡಿಟ್ ಆಗಿ ಪಾವತಿಸಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ,
ಭಲ್ಲಾ
ಹೀಗಾಗಿ, ಜಿಎಸ್ಟಿ ಪೂರ್ವದಲ್ಲಿ ಅವರು ಉತ್ಪನ್ನವನ್ನು 1000 ರೂ. ವೆಚ್ಚದಲ್ಲಿ ಮಾತ್ರ ಮಾರಾಟ ಮಾಡಲು ಅವರಿಗೆ ಸಾಧ್ಯವಾಗುತ್ತದೆ.
ಜುಲೈ 15, 2017ರಿಂದ ಶಿವ ಎಂಟರ್ಪ್ರೈಸಸ್ ಸಂಸ್ಥೆಯು ಮಹೀಂದ್ರ ಏಜೆನ್ಸಿಗೆ ಮಾರಾಟ ಮಾಡುತ್ತದೆ. ಇದರ ಸರಕು ಪಟ್ಟಿ ಈ ಮುಂದಿನಂತೆ ಇರುತ್ತದೆ-

Selling Price = 1125.00 INR (assuming no profits)

CGST @ 6% = 67.50 INR

SGST @ 6% = 67.50 INR

Total = 1260.00 INR

Now, since Bhalla Enterprises does not have an invoice with an excise component, and the rate of GST is 12%, he will be able to claim only 40% of the CGST he is liable to pay, as tax credit.

Hence, CGST credit available = 40% of CGST paid = 40 * 67.50 /100 = 27.00 INR

Now effectively, Bhalla Enterprises had borne the cost of excise worth 125 INR. So equating that with the credit of 27 INR available, we can see that, the effective percentage of credit available in reality, is only = 27 * 100 / 125 = 21.6%. Thus, Bhalla Enterprises, and dealers in this category, will not be getting 40% of the credit, but in essence, much less. Needless to say, they will be in a loss, if they pass on the benefit to the buyers, assuming they have got 40% credit, whereas the actual percentage of credit is lower / different.

This example assumes the rate of VAT as 5%, and the GST rate as 12%, and thus the excise credit available is 40%. Similarly, dealers need to evaluate the scenario for products which were rated at 14.5% VAT and also the scenario for products which may be rated at 18% or higher – which will fetch an excise credit of 60%.

Considering other rates of VAT and GST, the following are the values of the potential benefit, which a dealer in this category can pass on to this customer, without any loss.

ತೆರಿಗೆ ದರಗಳು ವ್ಯಾಟ್ @ 5%
ಜಿಎಸ್ಟಿ @ 12%
ಅಬಕಾರಿ ಪಾವತಿ
@ 40%
ವ್ಯಾಟ್ @ 5%
ಜಿಎಸ್ಟಿ @ 18%
ಅಬಕಾರಿ ಪಾವತಿ
@ 60%
ವ್ಯಾಟ್ @ 14.5%
ಜಿಎಸ್ಟಿ @ 12%
ಅಬಕಾರಿ ಪಾವತಿ @ 40%
ವ್ಯಾಟ್ @ 14.5%
ಜಿಎಸ್ಟಿ @ 18%
ಅಬಕಾರಿ ಪಾವತಿ
@ 60%
ವ್ಯಾಟ್ @ 14.5%
ಜಿಎಸ್ಟಿ @ 28%
ಅಬಕಾರಿ ಪಾವತಿ @ 60%
ವೆಚ್ಚ 1000.001000.001000.001000.001000.001000.00
ಅಬಕಾರಿ @ 12.5 %125.00125.00125.00125.00125.00125.00
ವ್ಯಾಟ್ 56.2556.2556.25163.13163.13163.13
ಮಾರಾಟದ ದರ 1125.00
ಸಿಜಿಎಸ್ಟಿ 67.50101.25157.5067.50101.25157.50
ಎಸ್ಜಿಎಸ್ಟಿ 67.50101.25157.5067.50101.25157.50
ಸಿಜಿಎಸ್ಟಿ ಪಾವತಿt

ಲಭ್ಯ/ಸಂಭಾವ್ಯ ವರ್ಗಾಯಿಸುವ ಪ್ರಯೋಜನ

27.0060.7594.5027.0060.7594.50
ಪರಿಣಾಮಕಾರಿ ಶೇಕಡವಾರು ಸಿಜಿಎಸ್ಟಿ ಪಾವತಿಯ ಲಭ್ಯತೆ 21.648.675.621.648.675.6

ಹೀಗಾಗಿ, ಮೇಲಿನ ಚಿತ್ರಣದಿಂದ ಇದು ಹೆಚ್ಚು ಸ್ಪಟವಾಗಿದೆ- ಶೇಕಡ 18 ಜಿಎಸ್ಟಿಗಿಂತ ಕಡಿಮೆ ದರದಲ್ಲಿರುವ ಉತ್ಪನ್ನಗಳಿಗೆ, ದೊರಕುವ ಆದಾನ ತೆರಿಗೆ ಪಾವತಿಯು ಶೇಕಡ 40ರಷ್ಟು ಆದಾನದ ಲಭ್ಯತೆಗೆ ವಿರುದ್ಧವಾಗಿ ಶೇಕಡ 30ಕ್ಕಿಂತ ಹೆಚ್ಚಾಗುವುದಿಲ್ಲ. ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಎಲ್ಲಾದರೂ ಉತ್ಪನ್ನದ ದರಕ್ಕೆ ಶೇಕಡ 28ಕ್ಕಿಂತ ಹೆಚ್ಚಿನ ಜಿಎಸ್ಟಿ ದರವಿದ್ದರೆ, ಆದಾನವಾಗಿ ದೊರಕುವ ಸೌಲಭ್ಯವು ಶೇಕಡ 60 ದಾಟುತ್ತದೆ. ಆದರೆ, ನಿವ್ವಳ ತೆರಿಗೆ ಪಾವತಿಯು ನಕಾರಾತ್ಮಕವಾಗಿರುವುದರಿಂದ ವ್ಯವಹಾರಗಳಿಗೆ ಹಣದ ಹರಿವು ಕಡಿಮೆಯಾಗುವುದರಿಂದ ಇದು ನಿಜಕ್ಕೂ ಮೇಲಿನ ಎರಡೂ ಸಂದರ್ಭಗಳಲ್ಲಿಯೂ ಪ್ರಯೋಜನಕಾರಿಯಾಗುವುದಿಲ್ಲ. ಒಟ್ಟಾರೆಯಾಗಿ, ಎಲ್ಲಾ ಸಂದರ್ಭಗಳಲ್ಲಿಯೂ ವಿತರಕರಿಗೆ ಒಂದಿಷ್ಟು ನಷ್ಟ ಆಗುತ್ತದೆ.

ಷರತ್ತುಗಳು

ಪರಿವರ್ತನೆಯು ಪ್ರಗತಿಯಲ್ಲಿರುವಾಗ ತೆರಿಗೆ ಪಾವತಿಸಿರುವುದಕ್ಕೆ ಆದಾನವನ್ನು ಕೇಳುವ ಸಲುವಾಗಿ, ಈ ಮುಂದಿನ ಷರತ್ತುಗಳನ್ನು ವಿತರಕರು ಗಮನದಲ್ಲಿಟ್ಟುಕೊಳ್ಳುವ ಅವಶ್ಯಕತೆ ಇದೆ.

  • ನೋಂದಾಯಿತ ವಿತರಕರೊಬ್ಬರು ಮುಕ್ತಾಯದ ಸರಕಿಗೆ ಶೇಕಡ 40ರಷ್ಟು ಐಟಿಸಿಯನ್ನು ಈ ಯೋಜನೆಯಲ್ಲಿ ಪಡೆಯಬೇಕಾದರೆ, ಅವರು ತನ್ನಲ್ಲಿರುವ ಎಲ್ಲಾ ಸರಕುಗಳ ವಿವರವನ್ನು ನಿಗದಿಪಡಿಸಿದ ದಿನಾಂಕದಿಂದ 90 ದಿನದೊಳಗೆ ದಾಖಲಿಸಬೇಕು; ಮತ್ತು ಜೊತೆಗೆ, ವಿದ್ಯುನ್ಮಾನವಾಗಿ ನಮೂನೆ ಜಿಎಸ್ಟಿ ಟ್ರಾನ್ 1ನ್ನು ಸಹಿಹಾಕಿ, ಜಿಎಸ್ಟಿ ವೆಬ್ತಾಣದಲ್ಲಿ ನಿರ್ದಿಷ್ಟವಾಗಿ ಪ್ರತ್ಯೇಕವಾಗಿ ನಿಗದಿಗೊಳಿಸಿದ ವಿಭಾಗದಲ್ಲಿ ತೆರಿಗೆ ಅಥವಾ ಸುಂಕದ ಮೊತ್ತವನ್ನು ಸಲ್ಲಿಸಬೇಕು.
  • ಹೆಚ್ಚುವರಿಯಾಗಿ, ತಿಂಗಳ ಲೆಕ್ಕದಲ್ಲಿ ವಿತರಕರು ಯೋಜನೆಯು ಕಾರ್ಯನಿರ್ವಹಿಸುವ 6 ಅವಧಿಯಲ್ಲಿ ವಿತರಕರು ನಮೂನೆ ಜಿಎಸ್ಟಿ ಟ್ರಾನ್ 2ನಲ್ಲಿ ಹೇಳಿಕೆ ಸಲ್ಲಿಸಬೇಕು- ಇದರಲ್ಲಿ ತೆರಿಗೆ ಅವಧಿಯಲ್ಲಿ ಸರಕುಗಳ ಪೂರೈಕೆ ಮೇಲೆ ಬೀರಿದ ಪರಿಣಾಮಗಳ ವಿವರನ್ನು ದಾಖಲಿಸಬೇಕು.
  • ಇಂತಹ ಸರಕುಗಳ ದಾಖಲೆಗಳ ಸಂಗ್ರಹವು ನೋಂದಾಯಿತ ವ್ಯಕ್ತಿಗೆ ಲಭ್ಯವಿರುತ್ತದೆ.
  • ಆದಾನ ದೊರಕಿಸಿಕೊಡುವ ದಾಸ್ತಾನು ಸರಕುಗಳು, ನೋಂದಾಯಿತ ವ್ಯಕ್ತಿಯು ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ ದಾಸ್ತಾನು ಮಾಡಿಡುವ ಅವಶ್ಯಕತೆ ಇರುತ್ತದೆ.

ಪರಿಹಾರ- ಪಾವತಿ ವರ್ಗಾವಣೆ ದಾಖಲೆ

ಈ ಎಲ್ಲಾ ಸವಾಲುಗಳನ್ನು ಎದುರಿಸುವ ಸಲುವಾಗಿ, ಜಿಎಸ್ಟಿ ಕಾನೂನು ಹೊಸ ಪರಿಕಲ್ಪನೆಯಾದ “ಪಾವತಿ ವರ್ಗಾವಣೆ ದಾಖಲೆ(ಸಿಟಿಡಿ)’ಯಡಿಯಲ್ಲಿ ಬಂದಿದೆ. ಇದರ ಪ್ರಕಾರ, ಅಬಕಾರಿ ತೆರಿಗೆಯಡಿ ನೋಂದಾಯಿಸಿರುವ ತಯಾರಕರು ಅಬಕಾರಿಯಡಿ ನೋಂದಾಯಿಸದೆ ಇರುವ ನೋಂದಾಯಿತ ವಿತರಕರಿಗೆ ಅಬಕಾರಿ ಸುಂಕ ಪಾವತಿಸಿರುವುದಕ್ಕೆ ಸಾಕ್ಷಿಯಾಗಿ ಪಾವತಿ ವರ್ಗಾವಣೆ ದಾಖಲೆಯನ್ನು ಸಲ್ಲಿಸಬಹುದು, ಆದರೆ, ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಅವರು ಸಿಜಿಎಸ್ಟಿ ಪಾವತಿಸಲು ಬಾಧ್ಯರಾಗಿರುತ್ತಾರೆ.
ಈ ದಾಖಲೆಯು ಈ ಮುಂದಿನವುಗಳನ್ನು ನೀಡಬಹುದು–

  • ಅಂತಹ ಸರಕುಗಳು 25000 ರೂ. ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ್ದಾಗಿರಬಹುದು, ಅದು ತಯಾರಕರ ಬ್ರಾಂಡ್ ಹೆಸರನ್ನು ಹೊಂದಿರಬಹುದು ಅಥವಾ ತಯಾರಕರ ಪ್ರಿನ್ಸಿಪಾಲ್ ಹೊಂದಿರಬಹುದು, ಇದನ್ನು ಭಿನ್ನ ಸಂಖ್ಯೆಯ ಮೂಲಕ ಗುರುತಿಸಲಾಗುತ್ತದೆ. ಉದಾಹರಣೆಗೆ- ಛಾಸಿ/ಕಾರಿನ ಎಂಜಿನ್ ಸಂಖ್ಯೆ.
  • ದೃಢೀಕರಣಕ್ಕಾಗಿ ಪರಿಶೀಲಿಸಬಹುದಾದ ದಾಖಲೆಗಳು ಮತ್ತು ಅಬಕಾರಿ ಪಾವತಿಗೆ ಸಂಬಂಧಿಸಿದ ಅಂತಹ ಸರಕುಗಳ ಪ್ರತಿಯೊಂದು ತುಣಕುಗಳನ್ನು ತಯಾರಕರು ನಿರ್ವಹಿಸಬೇಕು ಮತ್ತು ಕೇಂದ್ರ ಅಬಕಾರಿ ಅಧಿಕಾರಿಗಳು ಬೇಡಿಕೆ ಇಟ್ಟಾಗ ದೃಢೀಕರಣಕ್ಕೆ ಇವು ಲಭ್ಯವಿರುವಂತೆ ಇರಬೇಕು.
  • ಸಿಟಿಡಿಯ ಸಂಖ್ಯೆಯನ್ನು ಸರಣಿಯಾಗಿ ನಮೋದಿಸಬೇಕು ಮತ್ತು ಅದರಲ್ಲಿ ಕೇಂದ್ರ ಅಬಕಾರಿ ನೋಂದಣಿ ಸಂಖ್ಯೆ, ಸಂಬಂಧಪಟ್ಟ ಕೇಂದ್ರ ಅಬಕಾರಿ ವಿಭಾಗದ ವಿಳಾಸ, ಹೆಸರು, ವಿಳಾಸ ಮತ್ತು ಯಾರು ಸಲ್ಲಿಸುವರೋ ಅವರಜಿಎಸ್ಟಿಎನ್ ಸಂಖ್ಯೆಯನ್ನು, ವಿವರಣೆ, ವಿಭಾಗ, ತೆಗೆದಿರುವ ದಿನಾಂಕದ ಜೊತೆಗೆ ಸರಕುಪಟ್ಟಿ ಸಂಖ್ಯೆ, ಸಾಗಾಣೆ ಮಾಡಿದ ವಿಧಾನ ಮತ್ತು ವಾಹನದ ನೋಂದಣಿ ಸಂಖ್ಯೆ, ಅಬಕಾರಿ ಸುಂಕ ದರ, ಪ್ರಮಾಣ, ಮೌಲ್ಯ, ಮತ್ತು ಅಬಕಾರಿ ಸುಂಕದ ಮೌಲ್ಯವನ್ನು ಕ್ರಮಾನುಗತವಾಗಿ ಬರೆಯಬೇಕು.
  • ಸಿಟಿಡಿ ಸಲ್ಲಿಸಿದ ವಿತರಕರ ಕುರಿತು ತಯಾರಕರು ತೃಪ್ತಿಯಾದರೆ, ಅಂತಹ ತಯಾರಿಸಿದ ಸರಕುಗಳನ್ನು ಆತನು ತೆರವುಗೊಳಿಸಲು ಅವಕಾಶ ನೀಡುತ್ತಾನೆ.
  • ನೇಮಕ ಮಾಡಿದ ದಿನಾಂಕದಿಂದ ಜಿಎಸ್ಟಿ ಬಂದ ದಿನಾಂಕದ ನಂತರದ 30 ದಿನದೊಳಗೆ ಸಿಟಿಡಿಯನ್ನು ಸಲ್ಲಿಸಬೇಕು ಮತ್ತು ಸಿಟಿಡಿ ಜೊತೆ ಇದಕ್ಕೆ ಸಂಬಂಧಪಟ್ಟ ಸರಕುಪಟ್ಟಿಯನ್ನು ಲಗ್ಗತ್ತಿಸಬೇಕು.
  • ತಯಾರಕರಿಂದ ವಿತರಕರಿಗೆ, ಮಧ್ಯವರ್ತಿ ವಿತರಕರ ಮೂಲಕ ನಡೆಸಿದ ಖರೀದಿ ಮತ್ತು ಮಾರಾಟ ಮಾಡಿರುವುದಕ್ಕೆ ಸಂಬಂಧಪಟ್ಟ ಎಲ್ಲಾ ಸರಕುಪಟ್ಟಿಗಳ ಪ್ರತಿಗಳನ್ನು ಸಿಟಿಡಿ ಮೂಲಕ ಆದಾನ ಪಡೆಯುವ ಸಲುವಾಗಿ ವಿತರಕರು ನಿರ್ವಹಿಸಬೇಕು.
  • ನಿಗದಿಪಡಿಸಿದ ದಿನಾಂಕಕ್ಕೆ ಮೊದಲು ಅದೇ ಸರಕಿಗೆ ಪಡೆದ ಸರಕುಪಟ್ಟಿಗೆ ಸಿಟಿಡಿಯನ್ನು ವಿತರಕರ ಪರವಾಗಿ ಪಡೆಯದೆ ಇರುವುದು.
  • ಅಂತಹ ಸರಕುಗಳ ಪೂರೈಕೆಯ ಸಮಯದಲ್ಲಿ ಸಿಟಿಡಿ ಆಧಾರದಲ್ಲಿ ವಿತರಕರು ಆದಾನ ಪಡೆಯಲು, ಆತನು ರಚಿಸುವ ಸರಕುಪಟ್ಟಿಯಲ್ಲಿ ಮುಂಬರುವ ಸಿಟಿಡಿ ಸಂಖ್ಯೆಯನ್ನು ನಮೋದಿಸಬೇಕು.

ಉಪಸಂಹಾರ

ಇವೆಲ್ಲವುಗಳಿಗೆ, ಮುಕ್ತಾಯದ ಸರಕಿಗೆ ಆದಾನ ದೊರಕಿಸಿಕೊಡುವ ಸಮಸ್ಯೆ ಬಗೆಹರಿಸಲು, ಪ್ರಮುಖವಾಗಿ ಸರಕುಪಟ್ಟಿಯಲ್ಲಿ ಅಬಕಾರಿಯು ಭಾಗವಾಗಿರದೆ ಇರುವ ವಿತರಕರಿಗೆ ಪಾವತಿ ರವಾನೆ ದಾಖಲೆಯು ಸಿದ್ಧ ಪರಿಹಾರವಾಗಿ ಕಾಣಿಸುತ್ತದೆ. ಎಲ್ಲಾದರೂ, ಅಂತಹ ದಾಖಲೆಯನ್ನು ಪಡೆಯಲಾಗದ ಸಂದರ್ಭದಲ್ಲಿ, ಹಣದ ಹರಿವಿಗೆ ನಕಾರಾತ್ಮಕ ಪರಿಣಾಮ ಬೀರುವುದನ್ನು ತಪ್ಪಿಸಲು ಅಥವಾ ಆದಾಯದಲ್ಲಿ ನಷ್ಟವನ್ನು ತಡೆಯಲು ಈ ಮುಂದಿನ ವಿಧಾನಗಳು ಅತ್ಯುತ್ತಮ ದಾರಿಯಾಗಬಲ್ಲದು. ಅವುಗಳೆಂದರೆ-

  • ಅಬಕಾರಿಯಿಂದ ತೊಂದರೆಗೀಡಾದ ಎಲ್ಲಾ ಸರಕುಗಳನ್ನು ಡಿ-ಸ್ಟಾಕ್ ಮಾಡಿರಿ, ಆದರೆ, ಯಾರ ಅಬಕಾರಿ ಸರಕುಪಟ್ಟಿ ಲಭ್ಯವಿಲ್ಲವೋ ಅವುಗಳಿಗೆ ಇದೇ ವಿಧಾನ ಅನುಸರಿಸಿ.
  • ಎಲ್ಲಾ ಖರೀದಿಯನ್ನು ತಯಾರಕರಿಂದ/ 1ನೇ ಹಂತದ ವಿತರಕರಿಂದ/ 2ನೇ ಹಂತದ ವಿತರಕರಿಂದ ಮಾತ್ರ ಖರೀದಿಸುವುದನ್ನು ಖಚಿತಪಡಿಸಿಕೊಳ್ಳಿರಿ.
  • ಕಠಿಣ ಪ್ರಕ್ರಿಯೆಯಾಗಿದ್ದರೂ, ಅಬಕಾರಿ ನೋಂದಣಿ ಮಾಡಿಸಿಕೊಳ್ಳಿ, ಇದು ಅಲ್ಪಾವಧಿಗೆ ಕಷ್ಟವೆನಿಸಿದರೂ, ಶೇಕಡ 100ರಷ್ಟು ಐಟಿಸಿ ದೊರಕುವಾಗ ಇದು ಸಿಹಿ ಹಣ್ಣಾಗಬಹುದು.

Are you GST ready yet?

Get ready for GST with Tally.ERP 9 Release 6

61,468 total views, 76 views today

Pramit Pratim Ghosh

Author: Pramit Pratim Ghosh

Pramit, who has been with Tally since May 2012, is an integral part of the digital content team. As a member of Tally’s GST centre of excellence, he has written blogs on GST law, impact and opinions - for customer, tax practitioner and student audiences, as well as on generic themes such as - automation, accounting, inventory, business efficiency - for business owners.