ತಯಾರಕರಿಗೆ, ಈಗಿನ ತೆರಿಗೆ ಪದ್ಧತಿಯಲ್ಲಿ ಕೆಲಸದ ಕೆಲಸಕ್ಕಾಗಿ ಕಳುಹಿಸಿಕೊಟ್ಟ ಸರಕುಗಳನ್ನು, ಉದ್ಯೋಗದ ಕೆಲಸಗಾರ ಸರಕು ಮತ್ತು ಸೇವಾ ತೆರಿಗೆ ಅನುಷ್ಠಾನ ಬಂದ ನಂತರ ವಾಪಸ್ ನೀಡಿರುವ ಸಂದರ್ಭದಲ್ಲಿ ಯಾವ ರೀತಿಯ ತೆರಿಗೆ ವಿಧಿಸಲಾಗುತ್ತದೆ ಎಂಬ ಸಂದೇಹ ಇರುತ್ತದೆ. ಮುಖ್ಯ ತಯಾರಕರಿಗೆ ಪ್ರಮುಖವಾಗಿ ಎರಡು ಪ್ರಶ್ನೆಗಳು ಇರುತ್ತವೆ. ಅವುಗಳೆಂದರೆ-

  • ಎಲ್ಲಾದರೂ ಈಗಿನ ತೆರಿಗೆ ಪದ್ಧತಿಯಲ್ಲಿ ಉದ್ಯೋಗದ ಕೆಲಸಕ್ಕಾಗಿ ಕಳುಹಿಸಿಕೊಟ್ಟ ಸರಕುಗಳು ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ವಾಪಸ್ ಬಂದರೆ ಅಥವಾ ಪೂರೈಕೆಯಾದರೆ ತೆರಿಗೆ ಅನ್ವಯವಾಗುವುದೇ?
  • ಜುಲೈ 1, 2017ರಂದು ಉದ್ಯೋಗದ ಕೆಲಸಗಾರರು ತಲುಪಿಸಿದ ಸರಕಿಗೆ ಯಾವ ದಾಖಲೆಗಳನ್ನು ನೀಡಬೇಕು?

ಈ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ.

1. ಈಗಿನ ತೆರಿಗೆ ಪದ್ಧತಿಯಲ್ಲಿ ಉದ್ಯೋಗದ ಕೆಲಸಕ್ಕಾಗಿ ಕಳುಹಿಸಿಕೊಟ್ಟ ಸರಕುಗಳು, ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಬಂದಾಗ ಅನ್ವಯವಾಗುವ ತೆರಿಗೆಗಳು

ಎ. ಜುಲೈ 1, 2017ರಿಂದ 6 ತಿಂಗಳಳೊಳಗೆ ಸರಕುಗಳು ವಾಪಸ್ ಬರುವ ಸಂದರ್ಭ

ಜುಲೈ 1, 2017ರ ಮೊದಲು ಸರಕುಗಳು, ಅರೆ-ಪೂರ್ಣಗೊಂಡ ಸರಕುಗಳು ಅಥವಾ ಪೂರ್ಣಗೊಂಡ ಸರಕುಗಳನ್ನು ಉದ್ಯೋಗದ ಕೆಲಸಗಾರರಿಗೆ ಕಳುಹಿಸಿಕೊಡಲಾಗಿತ್ತು ಮತ್ತು ಜುಲೈ 1,2017ರ ನಂತರದ 6 ತಿಂಗಳಳೊಳಗೆ ಈ ಸರಕುಗಳು ಮುಖ್ಯ ವ್ಯವಹಾರದ ಸ್ಥಳಕ್ಕೆ ವಾಪಸ್ ಬಂದಿದೆ. ಇಲ್ಲಿ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ.

ಬಿ. ಜುಲೈ 1, 2017ರಿಂದ 6 ತಿಂಗಳಳೊಳಗೆ ಉದ್ಯೋಗದ ಕೆಲಸಗಾರರ ಸ್ಥಳದಿಂದ ಸರಕುಗಳ ಪೂರೈಕೆ ಮಾಡಲಾಗಿದೆ.

ಜುಲೈ 1, 2017ರ ಮೊದಲು ಉದ್ಯೋಗದ ಕೆಲಸಗಾರರಿಗೆ ಸರಕುಗಳು ಕಳುಹಿಸಿಕೊಡಲಾಗಿತ್ತು. ಇವು ಜುಲೈ 1, 2017ರ ನಂತರ 6 ತಿಂಗಳಳೊಗೆ ಭಾರತದೊಳಗಿನ ಪೂರೈಕೆಗೆ ತೆರಿಗೆ ಪಾವತಿಯ ಜೊತೆಗೆ ಮತ್ತು ರಫ್ತು ಪೂರೈಕೆಗೆ ಯಾವುದೇ ತೆರಿಗೆ ಪಾವತಿಸದೆ ವಾಪಸ್ ಬಂದಿದೆ.

ಗಮನಿಸಿ: ಉದ್ಯೋಗದ ಕೆಲಸಗಾರರ ವ್ಯವಹಾರದ ಸ್ಥಳದಿಂದ ಸರಕನ್ನು ಪೂರೈಕೆ ಮಾಡುವ ಸಂದರ್ಭದಲ್ಲಿ, ವ್ಯವಹಾರದ ಪ್ರಮುಖರು(ಪ್ರಿನ್ಸಿಪಾಲ್) ಉದ್ಯೋಗ ಕೆಲಸಗಾರರ ವ್ಯವಹಾರದ ಸ್ಥಳವನ್ನು ಅವರ ಹೆಚ್ಚುವರಿ ವ್ಯವಹಾರದ ಸ್ಥಳವಾಗಿ ಪರಿಗಣಿಸಬೇಕು. ಈ ಮುಂದಿನವುಗಳನ್ನು ಹೊರತುಪಡಿಸಿ-

  • ಕೆಲಸದ ಕೆಲಸಗಾರರು ನೋಂದಾಯಿಸಿದ್ದರೆ ಅಥವಾ
  • ನಿರ್ದಿಷ್ಟಪಡಿಸಿದ ಸರಕುಗಳನ್ನು ಪೂರೈಕೆ ಮಾಡುವುದಾದರೆ.
ಸಿ. ಜುಲೈ 1, 2017ರಿಂದ 6 ತಿಂಗಳೊಳಗೆ ಸರಕು ವಾಪಸ್ ಬಂದಿಲ್ಲವಾದರೆ ಅಥವಾ ಪೂರೈಕೆ ಮಾಡದೆ ಇರುವ ಸಂದರ್ಭ

ಜುಲೈ 1, 2017ರ ಮೊದಲು ಉದ್ಯೋಗದ ಕೆಲಸಗಾರರಿಗೆ ಕಳುಹಿಸಿಕೊಟ್ಟ ಸರಕುಗಳು ಮುಖ್ಯ ಕೆಲಸದ ಸ್ಥಳಕ್ಕೆ ಜುಲೈ 1, 2017ರ ನಂತರದ 6 ತಿಂಗಳಳೊಳಗೆ ವಾಪಸ್ ಪೂರೈಕೆ ಆಗದಿದ್ದರೆ, ಪ್ರಿನ್ಸಿಪಾಲ್ ಗೆ ಮತ್ತೆ ಎರಡು ತಿಂಗಳ ಕಾಲ ವಿಸ್ತರಿಸಲು ಅವಕಾಶವಿದೆ. ಇದಕ್ಕಾಗಿ, ಪ್ರಿನ್ಸಿಪಾಲ್ ಅವರು ಆಯುಕ್ತರಿಗೆ ಎರಡು ತಿಂಗಳು ಕಾಲಾವಧಿ ಹೆಚ್ಚಿಸುವ ಕುರಿತು ಸೂಕ್ತ ಕಾರಣ ನೀಡಿ ಅನುಮತಿ ಪಡೆದುಕೊಳ್ಳಬೇಕು.

ಎಲ್ಲಾದರೂ ಜುಲೈ 1, 2017ರಿಂದ ನಂತರದ 6 ತಿಂಗಳೊಳಗೆ ಸರಕುಗಳು ಮರಳಿ ಬಂದಿಲ್ಲವಾದರೆ ಅಥವಾ ವಾಪಸ್ ಪೂರೈಕೆ ಮಾಡದಿದ್ದರೆ ಅಥವಾ ದಿನಾಂಕ ವಿಸ್ತರಿಸಿದ ದಿನಾಂಕದಲ್ಲಿ (ಆಯುಕ್ತರಿಂದ ಅನುಮತಿ ಪಡೆದು) ವಾಪಸ್ ಬಾರದೆ ಇದ್ದರೆ, ಪ್ರಿನ್ಸಿಪಾಲ್ ವ್ಯವಹಾರಸ್ಥರಿಗೆ ಸರಕು ಅಥವಾ ಅರೆ ಪೂರ್ಣಗೊಂಡ ಸರಕಿಗೆ ದೊರಕುವ ಆದಾನ ತೆರಿಗೆ ಪಾವತಿಯನ್ನು ನೀಡಲಾಗುವುದಿಲ್ಲ.
ಚಿತ್ರಣ: ಬೆಂಗಳೂರಿನಲ್ಲ ನೋಂದಾಯಿತ ಉಡುಪು ತಯಾರಿಕರಾದ ರಾಜೇಶ್ ಅಪರೆಲ್ಸ್, ಜುಲೈ 15, 2017ರಂದು ಉಡುಪುಗಳ ಎಂಬ್ರಾಡಯರಿ ಕೆಲಸಕ್ಕಾಗಿ 100 ಕುರ್ತಾಗಳನ್ನು ಬೆಂಗಳೂರಿನ ರಮೇಶ್ ಎಂಬ್ರಾಡಯರಿಗೆ ಕಳುಹಿಸಿಕೊಡಲಾಗುತ್ತದೆ. ಜನವರಿ 1, 2018ರಲ್ಲಿ ಎಂಬ್ರಾಡಯರಿ ಕೆಲಸಕ್ಕಾಗಿ ಕಳುಹಿಸಿಕೊಟ್ಟ ಕುರ್ತಾಗಳ ಕೆಲಸದ ಪೂರ್ಣಗೊಳ್ಳುವಿಕೆಯ ಹಂತಗಳು ಈ ಮುಂದಿನಂತೆ ಇರುತ್ತದೆ:

ಸ್ಥಿತಿ ಪ್ರಮಾಣ ತೆರಿಗೆ ವಿಧಿಸುವಿಕೆ
ರಾಜೇಶ್ ಅಪರೆಲ್ಸ್ ಗೆ ಆಗಸ್ಟ್ 20, 2017ರಂದು ವಾಪಸ್ ಕಳುಹಿಸಿಕೊಟ್ಟಿದೆ 40 ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ.
ರಮೇಶ್ ಎಂಬ್ರಾಡಯರಿಯ ಸ್ಥಳದಿಂದ ಬೆಂಗಳೂರಿನಲ್ಲಿರುವ ಗ್ರಾಹಕರ ಸ್ಥಳಕ್ಕೆ ಸೆಪ್ಟೆಂಬರ್ 15, 2017ರಂದು ಪೂರೈಕೆ ಮಾಡಲಾಗಿದೆ.30 ಗ್ರಾಹಕರಿಗೆ ಕುರ್ತಾವನ್ನು ಪೂರೈಕೆ ಮಾಡಿರುವುದರಿಂದ ಸಿಜಿಎಸ್ಟಿ+ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.
ಮರಳಿ ನೀಡಲಾಗಿಲ್ಲ/ಪೂರೈಕೆ ಮಾಡಲಾಗಿಲ್ಲ 30 ರಾಜೇಶ್ ಅಪರೆಲ್ಸ್ ನ ಕುರ್ತಾಗಳಿಗೆ ದೊರಕುವ ಐಟಿಸಿ ಸೌಲಭ್ಯವನ್ನು ವಾಪಸ್ ಪಡೆಯಲಾಗುತ್ತದೆ.

 

2.ಜುಲೈ 1, 2017ರಂದು ಉದ್ಯೋಗದ ಕೆಲಸಗಾರರಲ್ಲಿ ಇರುವ ಸರಕುಗಳಿಗೆ ಅಗತ್ಯವಿರುವ ದಾಖಲೆಗಳು.

ಜುಲೈ 1, 2017ರಂದು ಪ್ರಮುಖ ಮುಖ್ಯಸ್ಥರ ಪರವಾಗಿ ಉದ್ಯೋಗದ ಕೆಲಸಗಾರರು ಹೊಂದಿರುವ ಸರಕುಗಳ ಕುರಿತು ತಯಾರಕರು ಮತ್ತು ಉದ್ಯೋಗದ ಕೆಲಸಗಾರರು(ನೋಂದಾಯಿಸಿದ್ದರೆ) ಸರಕಿನ ವಿವರವನ್ನು ಘೋಷಿಸಬೇಕು. ಈ ಘೋಷಣೆಯನ್ನು ಜುಲೈ 1, 2017ರಿಂದ 90 ದಿನದೊಳಗೆ ನಮೂನೆ ಜಿಎಸ್ಟಿ ಟ್ರಾನ್ -1ರಲ್ಲಿ ವಿದ್ಯುನ್ಮಾನ ವಿಧಾನದಲ್ಲಿ ಸಲ್ಲಿಸಬೇಕು.

ಸಂಸ್ಥೆಯ ಮುಖ್ಯಸ್ಥರು ಉದ್ಯೋಗದ ಕೆಲಸಗಾರರಿಗೆ ನೀಡಿರುವ ಸರಕುಗಳ ಮಾಹಿತಿಯನ್ನು ನಮೂನೆ ಜಿಎಸ್ಟಿ ಟ್ರಾನ್-1ರಲ್ಲಿ ಪರಿಚ್ಛೇಧ 9(ಎ)ನಲ್ಲಿ ಸಲ್ಲಿಸಿದ ವಿವರಗಳನ್ನು ಈ ಮುಂದೆ ತೋರಿಸಲಾಗಿದೆ:

ಎ. ಪರಿಚ್ಛೇಧ 141ರ ಪ್ರಕಾರ ಉದ್ಯೋಗದ ಕೆಲಸಗಾರರಿಗೆ ಪ್ರಿನ್ಸಿಪಾಲ್ ಕಳುಹಿಸಿರುವ ಸರಕುಗಳ ವಿವರ

Goods sent to principal Job Work

ಒಬ್ಬರು ಉದ್ಯೋಗದ ಕೆಲಸಗಾರರು (ಎಲ್ಲಾದರೂ ನೋಂದಾಯಿಸಿದ್ದರೆ) ತನ್ನಲ್ಲಿರುವ ದಾಸ್ತಾನು ವಿವರವನ್ನು ಪ್ರಮುಖ ತಯಾರಕರ ಮೂಲಕ ನಮೂನೆ ಜಿಎಸ್ಟಿ ಟ್ರಾನ್ -1 ನಮೂನೆಯ ಪರಿಚ್ಛೇಧ 9(ಬಿ) ಯ ಮೂಲಕ ಸರಕಿನ ವಿವರವನ್ನು ಈ ಮುಂದಿನಂತೆ ಘೋಷಿಷಬೇಕು:

ಬಿ. ಪರಿಚ್ಛೇಧ 141ರಡಿಯಲ್ಲಿ ತಯಾರಿಕಾ ಮುಖ್ಯಸ್ಥರ ಪರವಾಗಿ ಉದ್ಯೋಗದ ಕೆಲಸಗಾರ ಹೊಂದಿರುವ ಸರಕುಗಳ ವಿವರ

Stock held principal manufacturer-wise

ಉಪಸಂಹಾರ

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಜಿಎಸ್ಟಿಗೆ ವರ್ಗಾವಣೆಗೊಳ್ಳುವ ಪ್ರಕ್ರಿಯೆ ಮತ್ತು ಉದ್ಯೋಗದ ಕೆಲಸಗಾರರಿಗೆ ನೀಡಿರುವ ಸರಕಿನ ವಿವರವನ್ನು ವರದಿ ಮಾಡುವುದು ಸರಳವಾಗಿದೆ. ಜುಲೈ 1, 2017ರಂದು ಉದ್ಯೋಗದ ಕೆಲಸಗಾರರಿಗೆ ತಲುಪಿರುವ ಸರಕುಗಳ ವಿವರವನ್ನು ಕಡ್ಡಾಯವಾಗಿ ತಯಾರಕರು ಮತ್ತು ಉದ್ಯೋಗದ ಕೆಲಸಗಾರರು (ನೋಂದಾಯಿಸಿದ್ದರೆ) ನಮೂನೆ ಜಿಎಸ್ಟಿ ಟ್ರಾನ್ -1 ನಮೂನೆಯಲ್ಲಿ90 ದಿನದೊಳಗೆ ಸಲ್ಲಿಸಬೇಕು. ಇದರೊಂದಿಗೆ, ಐಟಿಸಿ ಸೌಲಭ್ಯ ಕಳೆದುಕೊಳ್ಳಬಾರದೆಂದರೆ ಸರಕನ್ನು 6 ತಿಂಗಳ ಒಳಗೆ ವಾಪಸ್ ಪಡೆದುಕೊಳ್ಳಬೇಕು.

Are you GST ready yet?

Get ready for GST with Tally.ERP 9 Release 6

117,898 total views, 55 views today