ನೀವು ಮಾರುಕಟ್ಟೆಯ ಮೇಲೆ ಕಣ್ಣಾಡಿಸಿದರೆ, ಎರಡು ಅಥವಾ ಹೆಚ್ಚು ಉತ್ಪನ್ನಗಳನ್ನು ಅಥವಾ ಸಂಯೋಜಿತ ಸರಕು ಮತ್ತು ಸೇವೆಗಳನ್ನು ಜೊತೆಯಾಗಿ ಸರಬರಾಜು ಮಾಡುವುದನ್ನು ಆಗಾಗ ಗಮನಿಸಿರಬಹುದು. ಇದಕ್ಕೆ ಮುಂದಿನ ಕಾರಣಗಳು ಕಾರಣವಾಗಿರಬಹುದು:

 • ಹೆಚ್ಚು ಗ್ರಾಹಕರನ್ನು ಸೆಳೆಯಲು- ಒಂಧು ಮಾರಾಟದ ಕಾರ್ಯತಂತ್ರ
 • ಸರಕು ಅಥವಾ ಸೇವೆಯ ಲಕ್ಷಣ ಅಥವಾ ವಿಧ ಹಾಗಿರುತ್ತದೆ, ಅದನ್ನು ಗುಂಪಾಗಿ ಅಥವಾ ಜೊತೆಯಾಗಿ ನೀಡಬೇಕಾಗುತ್ತದೆ.

ಸೇವಾ ತೆರಿಗೆಯಡಿ ಇದನ್ನು ಗುಂಪು ಸೇವೆ ಎಂದು ಕರೆಯುತ್ತಾರೆ- ಇದು ಸೇವೆಯ ಸಲ್ಲಿಕೆ ಅಥವಾ ಮತ್ತೊಂದು ಸೇವೆಯ ಜೊತೆ ನೀಡುವ ಸೇವೆಯ ಸೇವೆಯಾಗಿರುತ್ತದೆ,

ಜಿಎಸ್ಟಿ ಕಾನೂನಿನ ಪರಿಷ್ಕೃತ ಕರಡಿನಲ್ಲಿ, ಎರಡು ಅಥವಾ ಹೆಚ್ಚು ಸರಕು ಅಥವಾ ಸೇವೆಯಪೂರೈಕೆಯಗುಂಪನ್ನು ಅಥವಾ ಸರಕುಗಳ ಸಂಯೋಜನೆಯನ್ನು ಅವುಗಳ ಲಕ್ಷಣಗಳ ಆಧಾರದಲ್ಲಿ ಈ ಮುಂದಿನಂತೆ ವಿಭಾಗಿಸಲಾಗಿದೆ:

 • ಮಿಶ್ರ ಪೂರೈಕೆ
 • ಸಂಯೋಜಿತ ಪೂರೈಕೆ

ಮಿಶ್ರ ಪೂರೈಕೆ

ಒಬ್ಬ ತೆರಿಗೆ ಪಾವತಿಸುವ ವ್ಯಕ್ತಿಯು, ಒಂದೇ ದರದಲ್ಲಿ ಎರಡು ಅಥವಾ ಹೆಚ್ಚು ಸರಕು ಅಥವಾ ಸೇವೆಗಳ ಅಥವಾ ಯಾವುದೇ ಸರಕು ಅಥವಾ ಸೇವೆಗಳ ಸಂಯೋಜನೆಯನ್ನು ಒದಗಿಸುವುದಕ್ಕೆ ಮಿಶ್ರ ಪೂರೈಕೆ ಎಂದು ಕರೆಯಲಾಗುತ್ತದೆ.

ಮಿಶ್ರ ಪೂರೈಕೆಯಲ್ಲಿ, ಸರಕು ಮತ್ತು /ಅಥವಾ ಸೇವೆಯ ಸಂಯೋಜನೆಯನ್ನು ಅದರ ಸಹಜ ಅಗತ್ಯಗಳಿಗಾಗಿ ಗುಂಪಾಗಿ ಮಾಡಲಾಗುವುದಿಲ್ಲ ಮತ್ತು ಅವುಗಳನ್ನು ಸಹಜ ವ್ಯವಹಾರದಲ್ಲಿ ಒಂದೊಂದಾಗಿಯೇ ನೀಡಲಾಗುತ್ತದೆ.

ಮಿಶ್ರ ಪೂರೈಕೆಯನ್ನು ನಿರ್ಧರಿಸುವುದು

ಈ ಮುಂದಿನ ಉದಾಹರಣೆಗಳ ಮೂಲಕ ಇದನ್ನು ಅರ್ಥ ಮಾಡಿಕೊಳ್ಳೋಣ.

ಒಂದು ಟೈ, ಒಂದು ವಾಚ್, ಒಂದು ಪರ್ಸ್ ಮತ್ತು ಒಂದು ಪೆನ್ನಿನ ಕಾಂಬೊ ಕಿಟ್ ದರ 4,500 ರೂಪಾಯಿ ಎಂದಿರಲಿ.

GST Mixed Supply

ಈ ಉದಾಹರಣೆಯ ಪ್ರಕಾರ,

 • ಟೈ, ವಾಚ್, ಪರ್ಸ್ ಮತ್ತು ಪೆನ್ ಒಂದು ಗುಂಪು ಕಿಟ್ ಆಗಿದೆ.
 • ಒಂದು ಟೈ ಅನ್ನು ಪೂರೈಕೆ ಮಾಡುವಾಗ ಸಹಜವಾಗಿ ಇತರ ವಸ್ತುಗಳನ್ನು (ವಾಚ್, ಪರ್ಸ್, ಪೆನ್) ಇತ್ಯಾದಿಗಳನ್ನು ನೀಡುವ ಅಗತ್ಯವಿರುವುದಿಲ್ಲ.
 • ಈ ಕಿಟ್ ಅನ್ನು ಒಂದೇ ದರದಲ್ಲಿ ನೀಡಲಾಗುತ್ತದೆ.

ಹಾಗಾಗಿ, ಈ ಕಿಟ್ ಪೂರೈಕೆಯನ್ನು ಮಿಶ್ರ ಪೂರೈಕೆ ಎನ್ನಲಾಗುತ್ತದೆ.

ಮಿಶ್ರ ಪೂರೈಕೆಗೆ ತೆರಿಗೆ ಬಾಧ್ಯತೆ

ಮಿಶ್ರ ಪೂರೈಕೆಯ ತೆರಿಗೆ ಬಾಧ್ಯತೆಯನ್ನು ಲೆಕ್ಕ ಹಾಕುವುದಾದರೆ, ಸರಕು ಮತ್ತು ಸೇವೆಗಳ ಸಂಯೋಜನೆಗೆ ಅತ್ಯಧಿಕ ದರದ ವಸ್ತುವಿನ ತೆರಿಗೆಯನ್ನು ಪರಿಗಣಿಸಲಾಗುತ್ತದೆ.

ಇದೇ ಕಿಟ್ ಉದಾಹರಣೆಯನ್ನು ಮತ್ತೊಮ್ಮೆ ನೋಡೋಣ.

ಉತ್ಪನ್ನತೆರಿಗೆ ದರ*
ಟೈ12%
ವಾಚ್18%
ಪರ್ಸ್12%
ಪೆನ್5%

*ಅಂದಾಜು ದರ

ಈ ಪ್ರಕರಣದಲ್ಲಿ ವಾಚ್ ಗೆ ಮಿಶ್ರ ಪೂರೈಕೆಯಲ್ಲಿ ಅತ್ಯಧಿಕ ತೆರಿಗೆ ಇದೆ. ಉದಾಹರಣೆ: ಶೇಕಡ 18. ಹೀಗಾಗಿ ಈ ಮಿಶ್ರ ಪೂರೈಕೆಗೆ ಶೇಕಡ 18 ತೆರಿಗೆ ವಿಧಿಸಲಾಗುತ್ತದೆ.

ಸಂಯೋಜಿತ ಪೂರೈಕೆ

ತೆರಿಗೆ ಪಾವತಿಸುವ ವ್ಯಕ್ತಿಯು ಸ್ವೀಕೃತದಾರರಿಗೆ ಸರಕು ಮತ್ತು ಸೇವೆಯ ಸಂಯೋಜಿತ ಪೂರೈಕೆಯನ್ನು ಒದಗಿಸಿದರೆ ಮತ್ತು :

 • ಇದು ಎರಡು ಅಥವಾ ಹೆಚ್ಚು ವಸ್ತು ಅಥವ ಸೇವೆಗಳನ್ನು ಒಳಗೊಂಡಿರುತ್ತದೆ ಅಥವಾ
 • ಸರಕು ಮತ್ತು ಸೇವೆಯ ಒಂದು ಸಂಯೋಜನೆಯನ್ನು, ಸಾಮಾನ್ಯ ವ್ಯವಹಾರದಲ್ಲಿ ಇದನ್ನುನೈಸರ್ಗಿಕವಾಗಿ ಜೊತೆಯಾಗಿಸಲಾಗಿರುತ್ತದೆ ಮತ್ತು ಪೂರೈಕೆ ಮಾಡಲಾಗುತ್ತದೆ.

ನೈಸರ್ಗಿಕ ಅಗತ್ಯಗಳಿಗಾಗಿ ಈ ಸರಕು ಮತ್ತು ಸೇವೆಯನ್ನು ಒಟ್ಟಾಗಿ ನೀಡಲಾಗುತ್ತದೆ ಎಂದು ಅರ್ಥವಾಗಿದೆ. ಸರಕು ಅಥವಾ ಸೇವೆಯ “ಪ್ರಿನ್ಸಿಪಾಲ್ ಪೂರೈಕೆ’ಯ ಅವಲಂಬಿತ ಅಂಗತ್ಯವಾಗಿ ಈ ವಸ್ತುಗಳ ಸಂಯೋಜಿತ ಪೂರೈಕೆ ಮಾಡಲಾಗುತ್ತದೆ.

ಪ್ರಿನ್ಸಿಪಾಲ್ ಪೂರೈಕೆ ಎಂದರೇನು?

ಸರಕು ಅಥವಾ ಸೇವೆಯ ವಿಷಯದಲ್ಲಿ ಭಾಗವಾಗಿರುವ ಪೂರೈಕೆಯನ್ನು ಪ್ರಿನ್ಸಿಪಾಲ್ ಅಥವಾ ಪ್ರಮುಖ ಪೂರೈಕೆ ಎನ್ನುತ್ತಾರೆ ಮತ್ತು ಅದು ಅವಲಂಬಿತ ಪೂರೈಕೆಯಾಗಿರುತ್ತದೆ, ಪೂರೈಕೆಯ ಭಾಗವಾಗಿರುತ್ತದೆ, ಪ್ರಮುಖ ಪೂರೈಕೆಯ ಎರಡನೇ ಭಾಗವಾಗಿರುತ್ತದೆ.

ಸಂಯೋಜಿತ ಪೂರೈಕೆಯನ್ನು ನಿರ್ಧರಿಸುವಿಕೆ

ಇದನ್ನು ಈ ಉದಾಹರಣೆ ಮೂಲಕ ಅರ್ಥ ಮಾಡಿಕೊಳ್ಳೋಣ,

 1. ಮುಂಬೈನಲ್ಲಿರುವ ಒಂದು 5-ಸ್ಟಾರ್ ಹೋಟೆಲ್ 4 ದಿನಗಳ/ 3 ರಾತ್ರಿಗಳ ಪ್ಯಾಕೇಜ್ ಅನ್ನು ಉಪಹಾರದ ಜೊತೆಗೆ ನೀಡುತ್ತದೆ.

  GST Composite supply

ಇದು ಸೌಕರ್ಯ ಸೌಲಭ್ಯದಲ್ಲಿ ಸಂಯೋಜಿತ ಪೂರೈಕೆಯ ಪ್ಯಾಕೇಜ್ ಆಗಿದೆ ಮತ್ತು ಹೋಟೆಲ್ ನಲ್ಲಿ ಉಪಹಾರ ನೀಡುವು ನೈಸರ್ಗಿಕ ಸಂಯೋಜನೆಯಾಗಿದೆ. ಈ ಪ್ರಕರಣದಲ್ಲಿ ಹೋಟೆಲ್ ಸೌಕರ್ಯವು ಪ್ರಮುಖ ಪೂರೈಕೆಯಾಗಿರುತ್ತದೆ, ಮತ್ತು ಬೆಳಗಿನ ಉಪಹಾರವು ಹೋಟೆಲ್ ಸೌಕರ್ಯದ ಭಾಗವಾಗಿರುತ್ತದೆ.

2. ಮುಂಬೈನಲ್ಲಿರುವ ಒಂದು 5-ಸ್ಟಾರ್ ಹೋಟೆಲ್ 4 ದಿನ/3 ರಾತ್ರಿ ಪ್ಯಾಕೇಜ್ ಒದಗಿಸುತ್ತದೆ, ಬೆಳಗಿನ ಉಪಹಾರ ಮತ್ತು ಒಂದು ದಿನದ ಮುಂಬೈ ವೀಕ್ಷಣೆಯ ಪ್ಯಾಕೇಜ್ ಒದಗಿಸುತ್ತದೆ.
ಇದರಲ್ಲಿ ಮುಂಬೈ ದರ್ಶನವು ಹೋಟೇಲ್ ಸೌಕರ್ಯದ ನೈಸರ್ಗಿಕ ಅಗತ್ಯವಲ್ಲ, ಹೀಗಾಗಿ, ಇದು ಸಂಯೋಜಿತ ಪೂರೈಕೆಯಲ್ಲ. ಇದು ಮಿಶ್ರ ಪೂರೈಕೆಯಾಗಿರುತ್ತದೆ.

3. ಬ್ಯಾಗ್ ಜೊತೆ ಲ್ಯಾಪ್ ಟಾಪ್ ಮಾರಾಟ- ಲ್ಯಾಪ್ ಟಾಪ್ ಕೊಂಡೊಯ್ಯಲು ಬ್ಯಾಗ್ ಸಹಜವಾಗಿ ಅವಶ್ಯಕತೆ ಇರುವುದರಿಂದ ಇದು ಸಹಜ ಅಗತ್ಯವಾಗಿದೆ. ಆದರೆ, ಗ್ರಾಹಕರು ಬಹುಅವಶ್ಯಕತೆ ಪೂರೈಸುವ, ಬಾಕ್ ಪ್ಯಾಕ್ ಬ್ಯಾಗ್ ನಂತಹ ಬ್ಯಾಗ್ ಗೆ ಬೇಡಿಕೆಯಿಟ್ಟರೆ ಅದು ಸಂಯೋಜಿತ ಪೂರೈಕೆಯಾಗುವುದಿಲ್ಲ, ಯಾಕೆಂದರೆ, ಅದನ್ನು ಸಹಜವಾಗಿ ಬಂಡಲ್ ಮಾಡಲಾಗುವುದಿಲ್ಲ.

ಸಂಯೋಜಿತ ಪೂರೈಕೆಗೆ ತೆರಿಗೆ ಬಾಧ್ಯತೆ

ತೆರಿಗೆ ಬಾಧ್ಯತೆಯನ್ನು ಲೆಕ್ಕ ಹಾಕುವ ಉದ್ದೇಶದಿಂದ ಇಂತಹ ಸರಕು ಮತ್ತು ಸೇವೆಗಳ ಪೂರೈಕೆಯಲ್ಲಿ ತೆರಿಗೆ ಬಾಧ್ಯತೆಯನ್ನು ಪ್ರಮುಖ ಪೂರೈಕೆ ಅಥವಾ ಸೇವೆಯ ಮೇಲೆ ಅನ್ವಯವಾಗುತ್ತದೆ. ಇದನ್ನು ಅದೇ ಉದಾಹರಣೆ ಮೂಲಕ ಅರ್ಥ ಮಾಡಿಕೊಳ್ಳೋಣ,

ಮುಂಬೈನಲ್ಲಿರುವ ಒಂದು 5 ಸ್ಟಾರ್ ಹೋಟೆಲ್ 4 ದಿನ/3 ರಾತ್ರಿಯ ಪ್ಯಾಕೇಜನ್ನು ಬೆಳಗಿನ ಉಪಹಾರದ ಜೊತೆಯಲ್ಲಿ ನೀಡುತ್ತದೆ. ಹೋಟೆಲ್ ಸೌಕರ್ಯಕ್ಕೆ ಶೇಕಡ 18ರಷ್ಟು ತೆರಿಗೆ ಇದೆ ಮತ್ತು ರೆಸ್ಟೂರೆಂಟ್ ಸೇವೆಗೆ ಶೇಕಡ 12ರಷ್ಟು ತೆರಿಗೆ ಇದೆ

ಈ ಉದಾಹರಣೆಯ ಪ್ರಕಾರ, ಹೋಟೆಲ್ ಸೌಕರ್ಯವು ಪ್ರಮುಖ ಪೂರೈಕೆಯಾಗಿದೆ ಮತ್ತು ಒಟ್ಟಾರೆ ಪೂರೈಕೆಯ ಮೇಲೆ ಶೇಕಡ 18ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಸರಕು ಮತ್ತು ಸೇವೆಗಳ ಲಕ್ಷಣಗಳಿಗೆ ಅನುಗುಣವಾಗಿ ಅಂತಹ ಉತ್ಪನ್ನಗಳನ್ನು ಜೊತೆಯಾಗಿ ನೀಡುವುದನ್ನು ಅರ್ಥಮಾಡಿಕೊಳ್ಳುವುದು ವ್ಯವಹಾರಗಳಿಗೆ ಅತ್ಯಂತ ಅಗತ್ಯವಾಗಿದೆ, ಇದಕ್ಕಾಗಿ ಮಿಶ್ರ ಪೂರೈಕೆ ಮತ್ತು ಸಂಯೋಜಿತ ಪೂರೈಕೆಯನ್ನು ಅರ್ಥಮಾಡಿಕೊಳ್ಳಬೇಕು.

Are you GST ready yet?

Get ready for GST with Tally.ERP 9 Release 6

98,677 total views, 28 views today

Yarab A

Author: Yarab A

Yarab is associated with Tally since 2012. In his 7+ years of experience, he has built his expertise in the field of Accounting, Inventory, Compliance and software product for the diverse industry segment. Being a member of ‘Centre of Excellence’ team, he has conducted several knowledge sharing sessions on GST and has written 200+ blogs and articles on GST, UAE VAT, Saudi VAT, Bahrain VAT, iTax in Kenya and Business efficiency.