ಜಿಎಸ್ಟಿಯಡಿ ಅನನುವರ್ತನೆಯನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಅಪರಾಧದ ತೀವ್ರತೆಯನ್ನು ಇದು ಬದಲಾವಣೆ ಮಾಡಲಿದೆ. ಈಗಿನ ತೆರಿಗೆ ಪದ್ಧತಿಗೆ ಹೋಲಿಸಿದರೆ ಜಿಎಸ್ಟಿಯಡಿ ತೆರಿಗೆ ವಂಚಕರಿಗೆ ಕಠಿಣ ಶಿಕ್ಷೆ ಕಾದಿದೆ. ಈಗಿನ ತೆರಿಗೆ ಪದ್ಧತಿಯಲ್ಲಿ ತೆರಿಗೆದಾರರ ತೆರಿಗೆ ವಂಚನೆ 2 ಕೋಟಿ ರೂ. ಮಿರಿದ್ದರೆ ಅಬಕಾರಿ ಮತ್ತು ಸೇವಾ ತೆರಿಗೆ ಕಾಯಿದೆಯನ್ವಯ ತೆರಿಗೆ ಅಧಿಕಾರಿಗಳು ವಂಚಕರನ್ನು ಬಂಧಿಸಬಹುದು. ವ್ಯಾಟ್ ನಡಿ ಗುಜರಾತ್ ಹೊರತುಪಡಿಸಿ ಬೇರೆ ಯಾವ ರಾಜ್ಯದಲ್ಲಿಯೂ ತೆರಿಗೆ ವಂಚಕರನ್ನು ಬಂಧಿಸಿದ ನಿದರ್ಶನಗಳಿಲ್ಲ.
ಜಿಎಸ್ಟಿಯಡಿ, 50 ಲಕ್ಷ ರೂ. ತೆರಿಗೆ ವಂಚನೆ ಮಾಡಿದರೆ ವ್ಯಕ್ತಿಯನ್ನು ದಂಡದ ಜೊತೆಗೆ 1 ವರ್ಷ ಜೈಲಿಗೆ ಹಕಬಹುದು. 1 ಕೋಟಿ ರೂ.ಗಿಂತ ಹೆಚ್ಚು ತೆರಿಗೆ ವಂಚನೆ ಮಾಡಿದರೆ ಜಾಮೀನುರಹಿತ ಬಂಧನ ಮಾಡಬಹುದು ಮತ್ತು 5 ವರ್ಷ ಜೈಲು ಮತ್ತು ದಂಡ ವಿಧಿಸಲಾಗುತ್ತದೆ.

ಜಿಎಸ್ಟಿ ಅನ್ವಯ ತೆರಿಗೆ ಅನನುವರ್ತನೆಗೆ ಇರುವ ವಿವಿಧ ಶಿಕ್ಷೆಗಳನ್ನು ಅರ್ಥಮಾಡಿಕೊಳ್ಳೋಣ.

ತಡವಾಗಿರುವುದಕ್ಕೆ ಶುಲ್ಕ

ತಪ್ಪು ತಡವಾಗಿರುವುದಕ್ಕೆ ಶುಲ್ಕ
ಬಾಹ್ಯಾ ಮತ್ತು ಆಂತರಿಕ ಪೂರೈಕೆಯ ವಿವರ ನೀಡಲು ವಿಫಲವಾದರೆ, ನಿಗದಿತ ದಿನದೊಳಗೆ ತಿಂಗಳ ರಿಟರ್ನ್ ಅಥವಾ ಅಂತಿಮ ರಿಟರ್ನ್ ಸಲ್ಲಿಸಲು ವಿಫಲವಾದರೆ. ಪ್ರತಿದಿನಕ್ಕೆ 100 ರೂ. ದಂಡ. ವಿಫಲತೆ ಮುಂದುವರೆದರೆ ಗರಿಷ್ಠ 5000 ರೂ.ವರೆಗೆ ದಂಡ ವಿಧಿಸಲಾಗುತ್ತದೆ.
ನಿಗದಿತ (ಡ್ಯೂ) ದಿನಾಂಕದೊಳಗೆ ವ್ಯಕ್ತಿಯೊಬ್ಬರು ವಾರ್ಷಿಕ ರಿಟರ್ನ್ ಸಲ್ಲಿಸಲು ವಿಫಲವಾದರೆ. ಪ್ರತಿದಿನಕ್ಕೆ 100 ರೂ. ದಂಡ, ವಿಫಲತೆ ಮುಂದುವರೆದರೆ ವ್ಯಕ್ತಿ ವ್ಯವಹಾರ ನೋಂದಾಯಿಸುವಲ್ಲಿ ಅಥವಾ ರಾಜ್ಯದಲ್ಲಿನ ಆತನ ಒಟ್ಟು ವಹಿವಾಟಿನ ಕಾಲು ಭಾಗದಷ್ಟು ದಂಡ.

ಬಡ್ಡಿ

ತಪ್ಪುಗಳಿಗೆ ಅನ್ವಯವಾಗುವ ಬಡ್ಡಿದರದ ಕುರಿತು ಇನ್ನೂ ಮಾಹಿತಿ ದೊರಕಿಲ್ಲ. ಬಡ್ಡಿ ಚಂದಾ ತೆರಿಗೆಯ ಸಂದರ್ಭಗಳು ಈ ಮುಂದಿನಂತೆ ಇವೆ:

ತಪ್ಪು ಬಡ್ಡಿ
ತೆರಿಗೆ ಪಾವತಿಸಲು ವಿಫಲವಾದ ವ್ಯಕ್ತಿಯು ನಂತರ ತೆರಿಗೆ ಪಾವತಿಸಲು. ತೆರಿಗೆ ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಿಂದ ಬಡ್ಡಿ ದರವನ್ನು ಲೆಕ್ಕ ಹಾಕಿ ಸೇರಿಸಲಾಗುತ್ತದೆ.
ಇನ್ಪುಟ್ ತೆರಿಗೆ ಕ್ರೆಡಿಟ್ ಅಥವಾ ತೆರಿಗೆ ವಿನಾಯಿತಿ ಪಡೆಯಲು ಅಥವಾ ಔಟ್ ಪುಟ್ ತೆರಿಗೆ ಬಾಧ್ಯತೆಯಲ್ಲಿ ವಿನಾಯಿತಿ ಪಡೆಯಲು ಅನುಚಿತ, ನ್ಯಾಯಯುತವಲ್ಲದ ವರ್ತನೆ ತೋರಿದರೆ. ನ್ಯಾಯಯುತವಾಗಿಲ್ಲದೆ ವಿನಾಯಿತಿ ಪಡೆಯಲು ಬಯಸಿದ ಮೊತ್ತಕ್ಕೆ ಬಡ್ಡಿ
ಸ್ವೀಕೃತಿದಾರರು ಸೇವೆಯನ್ನು ಪಡೆದಿರುವುದಕ್ಕೆ ಸೇವೆಯ ಮೌಲ್ಯಕ್ಕೆ ಪ್ರತಿಯಾಗಿ, ಸರಕುಪಟ್ಟಿ ನೀಡಿದ ಮೂರು ತಿಂಗಳಳೊಳಗೆ ಸೇವೆಯ ಪೂರೈಕೆದಾರರಿಗೆ ಪಾವತಿಸಲು ವಿಫಲವಾದರೆ. ಸ್ವೀಕೃತಿದಾರರು ಪಾವತಿಸಬೇಕಿರುವ ಬಾಧ್ಯತೆ ಹೊಂದಿರುವ ಮೊತ್ತಕ್ಕೆ ಬಡ್ಡಿ

ಯಾವ ಸಂದರ್ಭದಲ್ಲಿ ಯಾವ ವ್ಯಕ್ತಿಯ ನೋಂದಣಿ ರದ್ದುಗೊಳ್ಳಬಹುದು:

• ನಿಯಮಿತ ವಿತರಕರು ಪೂರ್ಣಗೊಂಡ ರಿಟರ್ನ್ ಅನ್ನು ಸತತವಾಗಿ 6 ತಿಂಗಳು ನೀಡದೆ ಇದ್ದರೆ.
• ಸಂಯೋಜಿತ ವಿತರಕರು ರಿಟರ್ನ್ ಅನ್ನು 3 ತ್ರೈಮಾಸಿಕದಲ್ಲಿ ನೀಡದೆ ಇದ್ದರೆ.
• ಸ್ವಯಂ ಪ್ರೇರಿತವಾಗಿ ವ್ಯಕ್ತಿಯೊಬ್ಬರು ನೋಂದಾಯಿಸಿಕೊಂಡು, ನೋಂದಣಿ ಮಾಡಿರುವ ದಿನಾಂಕದಿಂದ 6 ತಿಂಗಳಲ್ಲಿ ವ್ಯವಹಾರ ಆರಂಭಿಸದೆ ಇದ್ದರೆ.
• ವಂಚಕರೊಬ್ಬರಿಂದ ನೋಂದಣಿಯಾಗಿದ್ದರೆ, ಅವರು ನೀಡಿರುವ ಮಾಹಿತಿಗಳಲ್ಲಿ ಸುಳ್ಳು ಹೇಳಿಕೆ ಮತ್ತು ಸತ್ಯಾಂಶಗಳ ಕೊರತೆ ಇದ್ದರೆ.

ಶಿಕ್ಷೆ

ಜಿಎಸ್ಟಿಯಡಿ ತಪ್ಪು ಮಾಡಿದವರಿಗೆ ಯಾವ ಬಗೆಯ ಶಿಕ್ಷೆ ಅಥವಾ ದಂಡ ನೀಡಲಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ:

ತಪ್ಪು ದಂಡ
ಎಲ್ಲಾದರೂ ವ್ಯಕ್ತಿಯು:
ಎಲ್ಲಾದರೂ ವ್ಯಕ್ತಿಯು:
• ಸರಕುಪಟ್ಟಿ ನೀಡದೆ ಅಥವಾ ತಪ್ಪು ಮಾಹಿತಿ ಅಥವಾ ಸುಳ್ಳು ಸರಕುಪಟ್ಟಿ ನೀಡಿ ಸರಕು ಮತ್ತು/ಅಥವಾ ಸೇವೆಯನ್ನು ಪೂರೈಕೆ ಮಾಡಿದ್ದರೆ
• ಯಾವುದೇ ಸರಕು ಮತ್ತು/ಅಥವಾ ಸೇವೆ ಪೂರೈಕೆ ಮಾಡದೆ ಸರಕುಪಟ್ಟಿ ನೀಡಿದ್ದರೆ.
• ತೆರಿಗೆ ಸಂಗ್ರಹಿಸುತ್ತಾರೆ ಆದರೆ ಅದನ್ನು ಸರಕಾರಕ್ಕೆ ಪಾವತಿಸಬೇಕಿರುವ ಕೊನೆಯ ದಿನಾಂಕದ ನಂತರದ 3 ತಿಂಗಳಿನೊಳಗೆ ಸರಕಾರಕ್ಕೆ ಪಾವತಿಸದೆ ಇದ್ದರೆ.
• ಇ-ಕಾಮರ್ಸ್ ನಿರ್ವಹಕರು ತೆರಿಗೆ ಸಂಗ್ರಹಿಸಲು ವಿಫಲವಾದರೆ ಅಥವಾ ಸಂಗ್ರಹಿಸಲು ನಿಗದಿಪಡಿಸಿರುವುದಕ್ಕಿಂತ ಕಡಿಮೆ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸಿದರೆ ಅಥವಾ ಸರಕಾರಕ್ಕೆ ತೆರಿಗೆ ಪಾವತಿಸಲು ವಿಫಲವಾದರೆ.
• ಸರಕು ಮತ್ತು/ಅಥವಾ ಸೇವೆಗೆ ನಿಜವಾದ ಸ್ವೀಕೃತಿ ರಸೀದಿ ಇಲ್ಲದೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಪೂರ್ಣವಾಗಿ ಅಥವಾ ಭಾಗಶಃ ಪಡೆದರೆ.
• ವಂಚನೆ ಮಾಡಿ ತೆರಿಗೆ ಮರುಪಾವತಿ ಪಡೆದರೆ.
• ಹಣಕಾಸು ದಾಖಲೆಗಳಲ್ಲಿ ಸುಳ್ಳು ಮಾಹಿತಿ ಅಥವಾ ಮಾರ್ಪಾಡು ಮಾಡುವುದು ಅಥವಾ ವಂಚನೆಯ ಅಕೌಂಟ್ ಮತ್ತು ದಾಖಲೆಗಳನ್ನು ಹಾಜರುಪಡಿಸಿದರೆ ಅಥವಾ ಸುಳ್ಳು ರಿಟರ್ನ್ ಸಲ್ಲಿಸಿದರೆ.
• ನೋಂದಣಿ ಮಾಡಲು ಬಾಧ್ಯತೆ ಹೊಂದಿರುತ್ತಾರೆ, ಆದರೆ, ನೋಂದಣಿ ಮಾಡಲು ವಿಫಲರಾಗುತ್ತಾರೆ.
• ನೋಂದಣಿ ಸಮಯದಲ್ಲಿ ಸುಳ್ಳು ಮಾಹಿತಿ ನೀಡಿದರೆ.
• ದಾಖಲೆ ಇಲ್ಲದೆ ತೆರಿಗೆ ವಿಧಿಸಬಹುದಾದ ಸರಕುಗಳನ್ನು ಸಾಗಾಟ ಮಾಡುವುದು.
• ತೆರಿಗ ವಂಚನೆ ಮಾಡಲು ವಹಿವಾಟನ್ನು ನಿಗ್ರಹಿಸುವುದು.
• ಅಕೌಂಟ್ಸ್ ಪುಸ್ತಕಗಳು ಮತ್ತು ದಾಖಲೆಗಳನ್ನು ನಿರ್ವಹಿಸಲು ವಿಫಲವಾಗುವುದು.
• ಬೇರೊಬ್ಬರ ಗುರುತಿನ ಸಂಖ್ಯೆ ಬಳಸಿ ದಾಖಲೆ ಅಥವಾ ಸರಕುಪಟ್ಟಿ ಸಿದ್ಧಪಡಿಸುವುದು.
10,000 ರೂ. ಅಥವಾ ತೆರಿಗೆ ತಪ್ಪಿಸಿದ ಮೊತ್ತಕ್ಕೆ ಸಮನಾದ ಮೊತ್ತ.
ಮೇಲೆ ಪಟ್ಟಿ ಮಾಡಿರುವ ಯಾವುದೇ ಅಪರಾಧವನ್ನು ವ್ಯಕ್ತಿಯೊಬ್ಬರು ಮಾಡಲು ನೆರವು ಅಥವಾ ಸಹಾಯ ನೀಡುವುದು. 25,000 ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ.
ಕಾನೂನಿನ ಅನ್ವಯ ಪ್ರತ್ಯೇಕವಾಗಿ ಯಾವುದೇ ದಂಡ ನಿಗದಿಪಡಿಸದೆ ಇರುವ ತಪ್ಪು ಮಾಡಿದರೆ.25,000 ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ

ಸರಕು ಮತ್ತು/ಅಥವಾ ಸೌಲಭ್ಯಗಳನ್ನು ವಶಪಡಿಸಿಕೊಳ್ಳುವಿಕೆ ಮತ್ತು ದಂಡ

ಕೆಲವೊಂದು ತಪ್ಪು ಮಾಡಿದಾಗ ಸರಕು ಮತ್ತು /ಅಥವಾ ಸೌಲಭ್ಯಗಳನ್ನು ವಶಪಡಿಸಿಕೊಳ್ಳುವ ಸಂದರ್ಭ ಬರಬಹುದು ಮತ್ತು ದಂಡ ವಿಧಿಸಬೇಕಾಗಬಹುದು. ಇದಕ್ಕೆ ದಂಡ 10,000 ರೂ. ಅಥವಾ ತೆರಿಗೆ ವಂಚನೆಗೆ ಸರಿಸಮನಾದ ಮೊತ್ತವನ್ನು ದಂಡವಾಗಿ ಪಾವತಿಸಬೇಕಾಗಬಹುದು. ಇಂತಹ ಅಪರಾಧಗಳು ಯಾವುದೆಂದರೆ:
• ತೆರಿಗೆ ಪಾವತಿಸುವ ಬಾಧ್ಯತೆ ಹೊಂದಿರುವ ಸರಕಿಗೆ ವ್ಯಕ್ತಿಯೊಬ್ಬರು ಅಕೌಂಟ್ ಹೊಂದಿರದೆ ಇರುವುದು.
• ತೆರಿಗೆ ಪಾವತಿಸಲು ಬಾಧ್ಯತೆ ಹೊಂದಿರುವ ಸರಕನ್ನು ಪೂರೈಕೆ ಮಾಡುವುದು ಅಥವಾ ಸ್ವೀಕರಿಸುವುದು.
• ನೋಂದಣಿಗೆ ಅರ್ಜಿ ಸಲ್ಲಿಸದೆ ವ್ಯಕ್ತಿಯೊಬ್ಬರು ತೆರಿಗೆ ವಿಧಿಸಬಹುದಾದ ಸರಕುಗಳನ್ನು ಪೂರೈಕೆ ಮಾಡುವುದು.
• ತೆರಿಗೆ ವಿಧಿಸಬಹುದಾದ ಸರಕನ್ನು ಕಾನೂನಿನ ನೀತಿ ನಿಯಮಗಳನ್ನು ಗಾಳಿಗೆ ತೂರಿ ಮಾರಾಟ ಮಾಡುವುದು.

ಶಿಕ್ಷೆ ಮತ್ತು ದಂಡ

ಈ ಸಂದರ್ಭದಲ್ಲಿ ಯಾವ ಶಿಕ್ಷೆ ವಿಧಿಸಬಹುದೆಂದು ಮುಂದೆ ತಿಳಿಸಲಾಗಿದೆ:

ತಪ್ಪು ಶಿಕ್ಷೆ
ಈ ಮುಂದಿನವುಗಳಲ್ಲಿ ಯಾವುದನ್ನಾದರೂ ಮಾಡುವುದು ಅಥವಾ ಭಾಗಿಯಾಗುವುದು:
• ಯಾವುದೇ ಅಧಿಕಾರಿಯನ್ನು ಕಾರ್ಯನಿರ್ವಹಿಸಲು ಬಿಡದೆ ಇರುವುದು ಅಥವಾ ತಡೆಯುವುದು.
• ಯಾವುದಾದರೂ ದೊರಕಿರುವ ಸಾಕ್ಷಿ ಅಥವಾ ದಾಖಲೆಗಳನ್ನು ನಾಶಪಡಿಸುವುದು ಅಥವಾ ಹಾನಿಗೆಡವುದು.
ತಪ್ಪು ಮಾಹಿತಿ ನೀಡುವುದು ಅಥವಾ ಕಾನೂನಿಗೆ ಅಗತ್ಯವಿರುವ ಮಾಹಿತಿ ನೀಡಲು ವಿಫಲವಾಗುವುದು.
ದಂಡದೊಂದಿಗೆ 6 ತಿಂಗಳು ಜೈಲು
ತೆರಿಗೆ ತಪ್ಪಿಸಿಕೊಳ್ಳುವುದು ಅಥವಾ ಕಳ್ಳ ಹಾದಿಗಳಿಂದ ಇನ್ಪುಟ್ ತೆರಿಗೆ ಲಾಭ ಪಡೆಯುವುದು ಅಥವಾ 50 ಲಕ್ಷ ರೂ.ಗಿಂತ ಹೆಚ್ಚು ಆದರೆ 1 ಕೋಟಿ ರೂ.ಗಿಂತ ಕಡಿಮೆ ಮೊತ್ತವನ್ನು ತಪ್ಪಾಗಿ ಮರುಪಾವತಿ ಮಾಡಿಸಿಕೊಳ್ಳುವುದು. ದಂಡದೊಂದಿಗೆ 1 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ.
ತೆರಿಗೆ ತಪ್ಪಿಸಿಕೊಳ್ಳುವುದು ಅಥವಾ ವಂಚನೆಯ ಹಾದಿಗಳಿಂದ ಇನ್ಪುಟ್ ತೆರಿಗೆ ಲಾಭ ಪಡೆಯುವುದು ಅಥವಾ 100 ಲಕ್ಷ ರೂ.ಗಿಂತ ಹೆಚ್ಚು ಆದರೆ 2.5 ಕೋಟಿ ರೂ.ಗಿಂತ ಕಡಿಮೆ ಮೊತ್ತವನ್ನು ತಪ್ಪಾಗಿ ಮರುಪಾವತಿ ಮಾಡಿಸಿಕೊಳ್ಳುವುದು. ಜಾಮೀನು ರಹಿತ ಜೈಲು, 3 ವರ್ಷದವರೆಗೆ ಜೈಲು ಶಿಕ್ಷೆ ನೀಡಲು ಅವಕಾಶವಿದೆ.
ತೆರಿಗೆ ತಪ್ಪಿಸಿಕೊಳ್ಳುವುದು ಅಥವಾ ಇನ್ಪುಟ್ ತೆರಿಗೆ ಕ್ರೆಡಿಟ್ ವಂಚನೆ ಅಥವಾ 2.5 ಕೋಟಿ ರೂ.ಗಿಂತ ಹೆಚ್ಚು ಮೊತ್ತವನ್ನು ಮೋಸದಿಂದ ಮರುಪಾವತಿ ಮಾಡಿಸಿಕೊಳ್ಳುವುದು. ಜಾಮೀನು ರಹಿತ ಜೈಲು, 5 ವರ್ಷದವರೆಗೆ ಜೈಲು ಶಿಕ್ಷೆ ನೀಡಲು ಅವಕಾಶವಿದೆ.

ವಂಚನೆ, ಅನನುಸರಣೆಗೆ ಜಿಎಸ್ಟಿಯಡಿ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ. ಆದರೂ, ವಿತರಕರು ಅನುಸರಣೆಯನ್ನು ಸರಿಯಾಗಿ ನೀಡುವಂತಾಗಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ತಿಂಗಳ ರಿಟರ್ನ್ ಅನ್ನು ಸರಿಯಾಗಿ ನೀಡದ, ನಿಗದಿತ ದಿನದೊಳಗೆ ನೀಡದ ಪ್ರತಿಯೊಬ್ಬ ವಿತರಕರಿಗೂ ನಮೂನೆ GSTR-3A ಯಲ್ಲಿ ನೋಟಿಸ್ ನೀಡಲಾಗುತ್ತದೆ. ನೀಡಿರುವ ಮಾಹಿತಿಯಲ್ಲಿ ಯಾವುದಾದರೂ ಸಂಶಯ ಕಂಡುಬಂದರೆ ಪೂರೈಕೆದಾರರು ಮತ್ತು ಸ್ವೀಕೃತಿದಾರರಿಗೆ ಪ್ರತಿತಿಂಗಳು ನಮೂನೆ GST ITC-1 ಯಲ್ಲಿ ತಿಳಿಸಲಾಗುತ್ತದೆ. ಸರಕುಪಟ್ಟಿ ಆಧರಿತ ಹೋಲಿಕೆ ಮತ್ತು ಸ್ವೀಕೃತಿದಾರರ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯವು ಪೂರೈಕೆಯ ಅನುಸರಣೆಯನ್ನು ಆಧರಿಸಿದೆ. ಪರಿಶೀಲನೆಗೆ ಸಾಕಷ್ಟು ಅವಕಾಶ ಇರುವುದರಿಂದ ವಿತರಕರು ಅನನುಸರಣೆಗೆ ದಂಡಕ್ಕೆ ಒಳಗಾಗದಂತೆ ನೋಡಿಕೊಳ್ಳಲು ಸಾಕಷ್ಟು ಅವಕಾಶವಿದೆ. ಜಿಎಸ್ಟಿಯು ತಂತ್ರಜ್ಞಾನ ಆಧರಿತ ತೆರಿಗೆಯಾಗಿರುವುದರಿಂದ, ಅನುಸರಣೆಯನ್ನು ಶೀಘ್ರದಲ್ಲಿ ಮತ್ತು ಸುಲಭವಾಗಿ ಮಾಡಬಹುದು. ಹೀಗಾಗಿ ವ್ಯಾಪಾರಿಗಳು ಲಭ್ಯವಿರುವ ವಿವಿಧ ಸೌಲಭ್ಯಗಳನ್ನುಮತ್ತು ತಂತ್ರಜ್ಞಾನಗಳನ್ನು ಬಳಸಿ ಜಿಎಸ್ಟಿ ಅನುಸರಣೆಯನ್ನು ಸರಿಯಾಗಿ ಮಾಡಬೇಕು.

Are you GST ready yet?

Get ready for GST with Tally.ERP 9 Release 6

100,762 total views, 23 views today