ಜಿಎಸ್ಟಿ ಪಾವತಿಸುವುದು ಹೇಗೆ?

ಪ್ರತಿಯೊಬ್ಬ ನೋಂದಾಯಿತ ನಿಯಮ ತೆರಿಗೆ ಪಾವತಿದಾರರು ಜಿಎಸ್ಟಿ ರಿಟರ್ನ್ ಅನ್ನು ಪ್ರತಿತಿಂಗಳು ಸಲ್ಲಿಸಬೇಕು ಮತ್ತು ತಿಂಗಳ 20ನೇ ತಾರೀಕಿನಂದು ತೆರಿಗೆ ಮೊತ್ತವನ್ನು ಪಾವತಿ ಮಾಡಬೇಕು. ನಿಗದಿಪಡಿಸಿದ ಡ್ಯೂ ದಿನಾಂಕದಂದು ತೆರಿಗೆದಾರರ ತೆರಿಗೆಯನ್ನು ಪಾವತಿ ಮಾಡದೆ ಇದ್ದರೆ, ತೆರಿಗೆ ಪಾವತಿಸಬೇಕಾದ ದಿನದಿಂದ ಬಡ್ಡಿ ದರ ವಿಧಿಸಲಾಗುತ್ತದೆ.
ಎಲ್ಲಾದರೂ ತೆರಿಗೆ ಬಾಕಿ ಸಂದಾಯ ಮಾಡದೆ ವ್ಯಕ್ತಿಯೊಬ್ಬರು ತಿಂಗಳ ರಿಟರ್ನ್ ಅನ್ನು ಸಲ್ಲಿಸುತ್ತಿದ್ದರೆ, ಸಲ್ಲಿಸಿರುವ ರಿಟರ್ನ್ ಅನ್ನು ಇನ್ ವ್ಯಾಲಿಡ್ ರಿಟರ್ನ್ ಎಂದು ಪರಿಗಣಿಸಲಾಗುತ್ತದೆ. ಎಲ್ಲಾದರೂ ತಿಂಗಳ ರಿಟರ್ನ್ ಸಲ್ಲಿಕೆ ಮಾಡದೆ ಮತ್ತು ಬಾಕಿ ತೆರಿಗೆ ಮಾತ್ರ ಪಾವತಿಸಿದರೆ ಮುಂಬರುವ ತಿಂಗಳ ರಿಟರ್ನ್ ಸಲ್ಲಿಸಲಾಗುವುದಿಲ್ಲ. ಹೀಗಾಗಿ, ತೆರಿಗೆ ಮೊತ್ತ ಪಾವತಿಸದೆ ಇರುವುದಕ್ಕೆ ದಂಡ ಪಾವತಿಸುವುದನ್ನು ತಪ್ಪಿಸಲು ಜಿಎಸ್ಟಿಯಡಿ ತೆರಿಗೆ ಬಾಧ್ಯತೆಯನ್ನು ಸಮರ್ಪಕವಾಗಿ ಅರ್ಥ ಮಾಡಿಕೊಳ್ಳುವುದು ಅತ್ಯಂತ ಅವಶ್ಯವಾಗಿದೆ.

Without furnishing the return for a month and paying the tax due, the subsequent month’s return cannot be furnished.Click To Tweet

ತೆರಿಗೆ ಪಾವತಿಸುವ ಸಲುವಾಗಿ, ಪ್ರತಿಯೊಬ್ಬ ನೋಂದಾಯಿತ ವಿತರಕರಿಗೆ ಜಿಎಸ್ಟಿ ಪೋರ್ಟಲ್ ನಲ್ಲಿ ಮೂರು ಲೆಡ್ಜರ್ ಗಳನ್ನು ನೀಡಲಾಗಿದೆ:

1. ಎಲೆಕ್ಟ್ರಾನಿಕ್ ತೆರಿಗೆ ಬಾಧ್ಯತೆ ನೋಂದಣಿ
ತೆರಿಗೆ, ಬಡ್ಡಿ, ದಂಡ, ತಡವಾಗಿರುವುದಕ್ಕೆ ಶುಲ್ಕ ಮತ್ತು ಇತರೆ ಹಲವು ಪಾವತಿಯ ಬಾಧ್ಯತೆಯನ್ನು ಇಲ್ಲಿ ಪಡೆದುಕೊಳ್ಳಲಾಗುತ್ತದೆ.

2. ಎಲೆಕ್ಟ್ರಾನಿಕ್ ಕ್ಯಾಷ್ ಲೆಡ್ಜರ್
ತೆರಿಗೆ, ಬಡ್ಡಿ, ದಂಡ, ತಡವಾದ ಶುಲ್ಕ ಅಥವಾ ಇತರೆ ಮೊತ್ತ ಸೇರಿದಂತೆ ವ್ಯಕ್ತಿಯೊಬ್ಬ ಹೂಡಿಕೆ ಮಾಡಿದ ಪ್ರತಿಯೊಂದು ಮೊತ್ತವನ್ನು ಇಲ್ಲಿ ಕ್ರೆಡಿಟ್ ಮಾಡಲಾಗುತ್ತದೆ.
3. ಎಲೆಕ್ಟ್ರಾನಿಕ್ ಕ್ರೆಡಿಟ್ ಲೆಡ್ಜರ್ ಸ್ವಯಂ ಪಡೆದುಕೊಳ್ಳುವ ಮತ್ತು ನಮೂನೆ ಜಿಎಸ್ಟಿಆರ್-2 ಮೂಲಕ ವ್ಯಕ್ತಿಯೊಬ್ಬ ಕೇಳಿದ ಇನ್ಪುಟ್ ತೆರಿಗೆ ಕ್ರೆಡಿಟ್ ಅನ್ನು ಇಲ್ಲಿ ಹಾಕಲಾಗುತ್ತದೆ. ತೆರಿಗೆ ಪಾವತಿಸುವ ವ್ಯಕ್ತಿ ಮಾತ್ರ ಇದನ್ನು ಬಳಕೆ ಮಾಡಬಹುದು ಮತ್ತು ಬಡ್ಡಿ, ತಡವಾದ ಶುಲ್ಕ ಇತ್ಯಾದಿಗಳಿಗಲ್ಲ.

For the purpose of paying tax, every registered dealer will have 3 ledgers in the GST portalClick To Tweetಎಲೆಕ್ಟ್ರಾನಿಕ್ ತೆರಿಗೆ ಬಾಧ್ಯತೆ ನೋಂದಣಿಯಲ್ಲಿ ತೋರಿಸಿದಂತೆ ತೆರಿಗೆ ಬಾಧ್ಯತೆಯನ್ನು ಪಾವತಿಸಲು ವ್ಯಕ್ತಿಯೊರ್ವರು ಎಲೆಕ್ಟ್ರಾನಿಕ್ ಕ್ಯಾಷ್ ಲೆಡ್ಜರ್ ಮತ್ತು ಎಲೆಕ್ಟ್ರಾನಿಕ್ ಕ್ರೆಡಿಟ್ ಲೆಡ್ಜರ್ ನಲ್ಲಿರುವ ಬ್ಯಾಲೆನ್ಸ್ ಅನ್ನು ತೆರಿಗೆ ಪಾವತಿಗೆ ಬಳಕೆ ಮಾಡಬಹುದು, ಈ ಮುಂದಿನ ಸಂದರ್ಭಗಳಲ್ಲಿ ಮಾತ್ರ:

  • ಪಾವತಿಸಿದ ಮೊತ್ತಕ್ಕೆ ಎಲೆಕ್ಟ್ರಾನಿಕ್ ತೆರಿಗೆ ಬಾಧ್ಯತೆ ನೋಂದಣಿಯನ್ನು ಕ್ರೆಡಿಟ್ ಮಾಡಲಾಗುತ್ತದೆ.
  • ಎಲೆಕ್ಟ್ರಾನಿಕ್ ಕ್ರೆಡಿಟ್ ಲೆಡ್ಜರ್ ಪಾವತಿಯನ್ನು ಮಾಡಲು ಬಳಸುವ ಕ್ರೆಡಿಟ್ ಮೂಲಕ ಡೆಬಿಟ್ ಆಗುತ್ತದೆ.
  • ಎಲೆಕ್ಟ್ರಾನಿಕ್ ಕ್ಯಾಷ್ ಲೆಡ್ಜರ್ ಗೆ ಠೇವಣಿ ಮೊತ್ತದಿಂದ ಡೆಬಿಟ್ ಆಗಿರುವುದನ್ನು ಪಾವತಿ ಮಾಡಲು ಬಳಸಿದ್ದರೆ.
  • ಎಲೆಕ್ಟ್ರಾನಿಕ್ ನಗದು ಲೆಡ್ಜರ್ ಪಾವತಿಯನ್ನು ಮಾಡಲು ಬಳಸುವ ಠೇವಣಿಯ ಮೊತ್ತದಿಂದ ಡೆಬಿಟ್ ಆಗುತ್ತದೆ.

ಇದನ್ನು ಪರಿಕಲ್ಪನೆ ಮೂಲಕ ಅರ್ಥ ಮಾಡಿಕೊಳ್ಳೋಣ.

ಇಲ್ಯುಸ್ಟ್ರೇಷನ್

ಡಿಸೆಂಬರ್ 20, 2017ರಂದು ರವೀಂದ್ರ ಅಪರೆಲ್ ಈ ಮುಂದಿನ ಬ್ಯಾಲೆನ್ಸ್ ಹೊಂದಿದೆ:

GST Tax Payment

1.ಎಲೆಕ್ಟ್ರಾನಿಕ್ ಕ್ರೆಡಿಟ್ ಲೆಡ್ಜರ್ ನಲ್ಲಿ ಲಭ್ಯವಿರುವ ಕ್ರೆಡಿಟ್ ಬಳಸಿಕೊಂಡು ತೆರಿಗೆ ಬಾಧ್ಯತೆ ಸೆಟ್-ಆಫ್ ಮಾಡುವುದು.

ಇನ್ಪುಟ್ ಕ್ರೆಡಿಟ್ ಬಳಸಿಕೊಂಡು ತೆರಿಗೆ ಬಾಧ್ಯತೆ ಸೆಟ್-ಆಫ್ ಮಾಡಬಹುದು ಎಂದು ನಮ್ಮ ಬ್ಲಾಗ್ ಬರಹದಲ್ಲಿ blog ‘ ‘ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ತೆರಿಗೆ ಬಾಧ್ಯತೆಗೆ ಎದುರಾಗಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೆಟ್ ಆಫ್ ಮಾಡುವುದು ಹೇಗೆ? ಚರ್ಚಿಸಿದ್ದೇವೆ.

ನಮ್ಮ ಇಲ್ಯುಸ್ಟ್ರೇಷನ್ ನಲ್ಲಿ ರವೀಂದ್ರ ಅಪರೆಲ್, ಇನ್ಪುಟ್ ತೆರಿಗೆ ಕ್ರೆಡಿಟ್ ಬಳಸಿಕೊಂಡು ತೆರಿಗೆ ಬಾಧ್ಯತೆ ಸೆಟ್-ಆಫ್ ಎಷ್ಟಿರುತ್ತದೆ ಎನ್ನುವುದನ್ನು ಈ ಕೆಳಗೆ ತೋರಿಸಲಾಗಿದೆ:
Electronic Cash Ledger - GST
ಹೀಗಾಗಿ, ರವೀಂದ್ರ ಅಪರೆಲ್ ಬಾಕಿ ಬಾಧ್ಯತೆ 60,000 ರೂ. (10,000+10,000+40,000) ಪಾವತಿಸಬೇಕು.

2. ಬಾಕಿ ಉಳಿದ ತೆರಿಗೆ ಬಾಧ್ಯತೆಯನ್ನು ಪಾವತಿಸಲು ಎಲೆಕ್ಟ್ರಾನಿಕ್ ಕ್ಯಾಷ್ ಲೆಡ್ಜರಿನಲ್ಲಿ ಹಣವಿಡಿ.

ಬಾಕಿ ಉಳಿದ ತೆರಿಗೆ ಬಾಧ್ಯತೆಯನ್ನು ಪಾವತಿಸಲು, ರವಿಂದ್ರ ಅಪರೆಲ್ ಎಲೆಕ್ಟ್ರಾನಿಕ್ ಕ್ಯಾಷ್ ಲೆಡ್ಜರಿನಲ್ಲಿ ತೆರಿಗೆ ಬಾಧ್ಯತೆ ಮೊತ್ತವನ್ನು ಹೂಡಿಕೆ ಮಾಡಬೇಕು. ಇದಕ್ಕಾಗಿ ರವೀಂದ್ರ ಅಪರೇಲ್ ಹೀಗೆ ಮಾಡಬೇಕು:

ಎ. ಹಣ ಪಾವತಿ ಮಾಡಲು ಚಲನ್ ಪಡೆಯುವುದು
ಜಿಎಸ್ಟಿ ಪೋರ್ಟಲ್ ನಲ್ಲಿ ನಮೂನೆ GST PMT-06 ಬಳಸಿಕೊಂಡು ಪಾವತಿಗಾಗಿ ಚಲನ್ ಅನ್ನುಪಡೆಯಬೇಕು. ಚಲನ್ ನಲ್ಲಿ ಹೂಡಿಕೆ ಮಾಡಲಿರುವ ತೆರಿಗೆ, ಬಡ್ಡಿ, ಶುಲ್ಕ ಅಥವಾ ಇತರೆ ಯಾವುದೇ ಮೊತ್ತದ ವಿವರವನ್ನು ನಮೋದಿಸಬೇಕು. ಸೃಜಿಸಿದ ಚಲನ್ ವಾಯಿದೆ 15 ದಿನಗಳವರೆಗೆ ಇರುತ್ತದೆ.
ಬಿ. ಈ ಮುಂದಿನ ವಿಧಾನದ ಮೂಲಕ ಹಣ ಪಾವತಿ ಮಾಡಬೇಕು

ಈ ಮುಂದಿನ ವಿಧಾನಗಳನ್ನು ಬಳಸಿಕೊಂಡು ಹಣ ಪಾವತಿ ಮಾಡಬಹುದು:

  • ಅಧಿಕೃತ ಬ್ಯಾಂಕ್ ಗಳ ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ
  • ಅಧಿಕೃತ ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿಕೊಂಡು
  • ಯಾವುದೇ ಬ್ಯಾಂಕ್ ಗಳ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫಾರ್ (ಎನ್ಇಎಫ್ಟಿ) ಅಥವಾ ರಿಯಲ್ ಟೈಮ್ ಗ್ರೋಸ್ ಸೆಟ್ಲ್ಮೆಂಟ್(ಆರ್ಟಿಜಿಎಸ್) ಬಳಸಬಹುದು.
  ಅಧಿಕೃತ ಬ್ಯಾಂಕ್ ಕೌಂಟರ್(ಒಟಿಸಿ) ಮೂಲಕವೂ ತೆರಿಗೆ ಅವಧಿಗೆ ನಗದು, ಚೆಕ್, ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ಬಳಸಿಕೊಂಡು 10 ಸಾವಿರ ರೂ. ವರೆಗೆ ಹೂಡಿಕೆ ಮಾಡಬಹುದು.

ಗಮನಿಸಿ: ಎಲ್ಲಾದರೂ ಎನ್ಇಎಫ್ಟಿ ಅಥವಾ ಆರ್ಟಿಜಿಎಸ್ ಬಳಸಿ ಪಾವತಿ ಮಾಡಿದರೆ, ಜಿಎಸ್ಟಿ ಪೋರ್ಟಲ್ ನಲ್ಲಿ ಕಡ್ಡಾಯವಾಗಿ ಚಲನ್ ಜೊತೆ ನಮೂನೆ ಪಡೆಯಬೇಕು. ಎಲ್ಲಿ ಹಣ ಪಾವತಿ ಮಾಡಲಾಗಿತ್ತೋ ಆ ಬ್ಯಾಂಕಿಗೆ ಆ ನಮೂನೆಯನ್ನು ಸಲ್ಲಿಸಬೇಕು. ಈ ಮಾಂಡೆಟ್ ಫಾರ್ಮ್ ವಾಯಿದೆ 15 ದಿನಗಳವರೆಗೆ ಇರುತ್ತದೆ.
ಸಿ. ಎಲೆಕ್ಟ್ರಾನಿಕ್ ಕ್ಯಾಷ್ ಲೆಡ್ಜರಿಗೆ ಸಿಐಎನ್ ಮತ್ತು ಕ್ರೆಡಿಟ್ ಸಿದ್ಧಪಡಿಸುವುದು.
ಒಮ್ಮೆ ವಿತರಕರು ಪಾವತಿಸಿದ ಮೊತ್ತವು ದೊರಕಿದಾಗ ಸಂಬಂಧಪಟ್ಟ ಸರಕಾರಕ್ಕೆ ಮೊತ್ತವನ್ನು ಪಾವತಿಸಬೇಕು, ಚಲನ್ ಗುರುತಿನ ಸಂಖ್ಯೆ (ಸಿಐಎನ್) ತಯಾರಿಸಬೇಕು ಮತ್ತುಇದನ್ನು ಜಿಎಸ್ಟಿ ಪೋರ್ಟಲಿನಲ್ಲಿ ಚಲನ್ ನಲ್ಲಿ ನಮೋದಿಸಬೇಕು. ಸಿಐಎನ್ ರಸೀದಿ ಮೂಲಕ ಪಾವತಿಸಿರುವ ಮೊತ್ತವು ವ್ಯಕ್ತಿಯ ಎಲೆಕ್ಟ್ರಾನಿಕ್ ಕ್ಯಾಷ್ ಲೆಡ್ಜರಿಗೆ ಜಮಾ ಆಗುತ್ತದೆ.
ನಮ್ಮ ಇಲ್ಯುಸ್ಟ್ರೇಷನ್ ನಲ್ಲಿ, ರವೀಂದ್ರ ಅಪರೆಲ್, ಡಿಸೆಂಬರ್ 20, 2017ರ ತೆರಿಗೆ ಬಾಧ್ಯತೆ ಪಾವತಿಸಲು 60,000 ರೂ. ಹೂಡಿಕೆ ಮಾಡುತ್ತದೆ. ಒಮ್ಮೆ ಹಣ ಜಮಾ ಆದ ಬಳಿಕ, ಈ ಹಣವನ್ನು ಸಿಜಿಎಸ್ಟಿ, ಎಸ್ಜಿಎಸ್ಟಿ ಮತ್ತು ಐಜಿಎಎಸ್ಟಿ ತೆರಿಗೆ ಬಾಧ್ಯತೆಗಳನ್ನು ಪಾವತಿಸಲು ಬಳಸಿಕೊಳ್ಳಬಹುದು. ತೆರಿಗೆ ಬಾಕಿಯನ್ನು ಪಾವತಿಸಿದ ನಂತರ ರವೀಂದ್ರ ಅಪರೆಲ್ಸ್ ನ ಲೆಡ್ಜರ್ ಈ ಮುಂದಿನಂತೆ ಕಾಣಿಸುತ್ತದೆ:

Tax Payment under GST

ಜಿಎಸ್ಟಿಯಡಿ ತೆರಿಗೆ ಪಾವತಿ ಮಾಡಲು ಬೇಕಿರುವ ನಮೂನೆಗಳ ವಿವರ

ನಮೂನೆ ಜಿಎಸ್ಟಿ ಪಿಎಂಟಿ-01 ನಮೂನೆ ಜಿಎಸ್ಟಿ ಪಿಎಂಟಿ-01 ರಲ್ಲಿ ಎಲೆಕ್ಟ್ರಾನಿಕ್ ತೆರಿಗೆ ಬಾಧ್ಯತೆ ರಿಜಿಸ್ಟ್ರಾರ್ ಅನ್ನು ನಿರ್ವಹಿಸಬೇಕು.
ನಮೂನೆ ಜಿಎಸ್ಟಿ ಪಿಎಂಟಿ -02 ನಮೂನೆ ಜಿಎಸ್ಟಿ ಪಿಎಂಟಿ -02ರಲ್ಲಿ ಎಲೆಕ್ಟ್ರಾನಿಕ್ ಕ್ರೆಡಿಟ್ ಲೆಡ್ಜರ್ ನಿರ್ವಹಿಸಬೇಕು.
ನಮೂನೆ ಜಿಎಸ್ಟಿ ಪಿಎಂಟಿ -03 ಅಧಿಕೃತ ಅಧಿಕಾರಿಯಿಂದ ಪಡೆದಿರುವ ಎಲೆಕ್ಟ್ರಾನಿಕ್ ಕ್ರೆಡಿಟ್ ಲೆಡ್ಜರ್/ ಎಲೆಕ್ಟ್ರಾನಿಕ್ ಕ್ಯಾಷ್ ಲೆಡ್ಜರ್ ನಲ್ಲಿ ರದ್ದುಪಡಿಸಿದ ಬಾಕಿ ಮರುಪಾವತಿಯನ್ನು ಕೇಳಲು ಈ ನಮೂನೆಯನ್ನು ಬಳಸಬೇಕು.
ನಮೂನೆ ಜಿಎಸ್ಟಿ ಪಿಎಂಟಿ -04 ಎಲೆಕ್ಟ್ರಾನಿಕ್ ಕ್ಯಾಷ್ ಲೆಡ್ಜರಿನಲ್ಲಿ ವ್ಯಕ್ತಿಯೊಬ್ಬರಿಗೆ ಯಾವುದೇ ವ್ಯತ್ಯಾಸ ಕಂಡುಬಂದರೆ ಆತನು ನಮೂನೆ ಜಿಎಸ್ಟಿ ಪಿಎಂಟಿ-04 ಬಳಸಿ ಸಂವಹನ ನಡೆಸಬಹುದು.
ನಮೂನೆ ಜಿಎಸ್ಟಿ ಪಿಎಂಟಿ -05 ನಮೂನೆ ಜಿಎಸ್ಟಿ ಪಿಎಂಟಿ -05ನಲ್ಲಿ ಎಲೆಕ್ಟ್ರಾನಿಕ್ ಕ್ಯಾಷ್ ಲೆಡ್ಜರ್ ನಮೋದಿಸಬೇಕು.
ನಮೂನೆ ಜಿಎಸ್ಟಿ ಪಿಎಂಟಿ -06 ತೆರಿಗೆ, ಬಡ್ಡಿ, ಶುಲ್ಕ, ದಂಡ ಅಥವಾ ಇತರೆ ಯಾವುದೇ ಮೊತ್ತದ ಪಾವತಿಗೆ ಚಲನ್
ನಮೂನೆ ಜಿಎಸ್ಟಿ ಪಿಎಂಟಿ -07 ಎಲ್ಲಾದರೂ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಆಗಿದ್ದರೆ, ಆದರೆ, ಸಿಐಎನ್ ಸೃಜಿಸದೆ ಇದ್ದರೆ ಅಥವಾ ಸಿಐಎನ್ ಜನರೇಟ್ ಆಗಿದ್ದರೂ ಜಿಎಸ್ಟಿ ಪೋರ್ಟಲ್ ನಲ್ಲಿ ಯಾವುದೇ ಸಂವಹನ ನಡೆಯದೆ ಇದ್ದರೆ ಇದನ್ನು ವ್ಯಕ್ತಿಯು ನಮೂನೆ ಜಿಎಸ್ಟಿ ಪಿಎಂಟಿ -07ಮೂಲಕ ಸಂವಹನ ನಡೆಸಬಹುದು. < /td>

Are you GST ready yet?

Get ready for GST with Tally.ERP 9 Release 6

225,640 total views, 195 views today