ನಮ್ಮ ಹಿಂದಿನ ಲೇಖನದಲ್ಲಿ ನಾವು ಸೇವೆಯಲ್ಲಿ ಪೂರೈಕೆಯ ಸ್ಥಳವನ್ನು ಗುರುತಿಸಲು ಇರುವ ಪ್ರಮುಖ ನಿಯಮಗಳ ಕುರಿತು ಚರ್ಚಿಸಿದ್ದೇವು. ಕೆಲವೊಂದು ನಿರ್ದಿಷ್ಟ ಸೇವೆಗಳಿಗೆ ಪೂರೈಕೆಯ ಸ್ಥಳವನ್ನು ಗುರುತಿಸುವುದು ಹೇಗೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ.

ಸೇವೆಯ ಬಗೆ ಸ್ವೀಕೃತಿದಾರರ ಬಗೆ ಪೂರೈಕೆಯ ಸ್ಥಳ ಉದಾಹರಣೆ
ರೆಸ್ಟೂರೆಂಟ್ ಮತ್ತು ಅಡುಗೆಸೇವೆಅನ್ವಯವಾಗುವುದಿಲ್ಲಎಲ್ಲಿ ಸೇವೆ ನೀಡಲಾಗಿತ್ತೋ ಆ ಸ್ಥಳಮಹಾರಾಷ್ಟ್ರದ ಮುಂಬೈನಲ್ಲಿರುವ ಮನೀಶ್ ಕೆಟರರ್ಸ್, ಮುಂಬೈನಲ್ಲಿ ನಡೆದ ಮುಖೇಶ್ ಆಟೋಮೊಬೈಲ್ಸ್ ನವರ ವಾರ್ಷಿಕ ಮಾರಾಟ ಸಂಬಂಧಿ ಕಾರ್ಯಕ್ರಮವೊಂದಕ್ಕೆ ಅಡುಗೆಸೇವೆ ಒದಗಿಸುತ್ತದೆ. ಪೂರೈಕೆದಾರರ ಸ್ಥಳ: ಮಹಾರಾಷ್ಟ್ರದ ಮುಂಬೈ
ಪೂರೈಕೆಯ ಸ್ಥಳ: ಮಹಾರಾಷ್ಟ್ರದ ಮುಂಬೈ ಇದು ರಾಜ್ಯದೊಳಗಿನ
ವೈಯಕ್ತಿಕ ಪ್ರಗತಿ, ದೇಹಧಾಡ್ಯತೆ, ಸೌಂದರ್ಯ ಚಿಕಿತ್ಸೆ, ಮತ್ತು ಆರೋಗ್ಯ ಸೇವೆ, ಪ್ರಸಾಧನ ಮತ್ತು ಪ್ಲಾಸ್ಟಿಕ್ ಸರ್ಜರಿ ಸೇರಿದಂತೆಅನ್ವಯವಾಗುವುದಿಲ್ಲಮಹಾರಾಷ್ಟ್ರದ ಮುಂಬೈನಲ್ಲಿರುವ ಮನೀಶ್ ಕೆಟರರ್ಸ್, ಮುಂಬೈನಲ್ಲಿ ನಡೆದ ಮುಖೇಶ್ ಆಟೋಮೊಬೈಲ್ಸ್ ನವರ ವಾರ್ಷಿಕ ಮಾರಾಟ ಸಂಬಂಧಿ ಕಾರ್ಯಕ್ರಮವೊಂದಕ್ಕೆ ಅಡುಗೆಸೇವೆ ಒದಗಿಸುತ್ತದೆ. ಪೂರೈಕೆದಾರರ ಸ್ಥಳ: ಮಹಾರಾಷ್ಟ್ರದ ಮುಂಬೈ
ಪೂರೈಕೆಯ ಸ್ಥಳ: ಮಹಾರಾಷ್ಟ್ರದ ಮುಂಬೈ ಇದು ರಾಜ್ಯದೊಳಗಿನ ಪೂರೈಕೆಯಾಗಿದೆ ಮತ್ತು ಸಿಜಿಎಸ್ಟಿ+ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.
ಕರ್ನಾಟಕದ ಬೆಂಗಳೂರಿನಲ್ಲಿ ನೋಂದಾಯಿಸಿರುವ ಚಾರ್ಟೆಡ್ ಅಕೌಂಟೆಂಟ್, ಕೇರಳದ ದೇವ್ ಆಯುರ್ವೇದ ಕೇಂದ್ರದಲ್ಲಿ ಆಯುರ್ವೇದ ಚಿಕಿತ್ಸೆಯನ್ನು ಪಡೆಯುತ್ತಾರೆ.
ಪೂರೈಕೆದಾರರ ಸ್ಥಳ: ಕೇರಳ
ಪೂರೈಕೆಯ ಸ್ಥಳ: ಆಯುರ್ವೇದ ಚಿಕಿತ್ಸೆಯನ್ನು ಕೇರಳದಲ್ಲಿ ನೀಡಲಾಗುತ್ತದೆ.ಇದು ಅಂತರ್-ರಾಜ್ಯ ಪೂರೈಕೆಯಾಗಿದೆ ಮತ್ತು ಸಿಜಿಎಸ್ಟಿ ಮತ್ತು ಎಸ್ಜಿಎಎಸ್ಟಿ ತೆರಿಗೆ ಅನ್ವಯವಾಗುತ್ತದೆ.
ತರಬೇತಿ ಮತ್ತು ಪರ್ಪಾಮೆನ್ಸ್ ಅಪ್ರೈಸಲ್ ಸಂಬಂಧಿತ ಸೇವೆನೋಂದಾಯಿತ ವ್ಯಕ್ತಿಸ್ವೀಕೃತಿದಾರರ ಸ್ಥಳಕರ್ನಾಟಕದ ಬೆಂಗಳೂರಿನಲ್ಲಿರುವ ಅಮೋಘ್ಯ ಫ್ಯಾಷನ್ ಡಿಸೈನಿಂಗ್, ತಮಿಳುನಾಡಿನ ಚೆನ್ನೈನಲ್ಲಿರುವ ಮೋಹನ್ ಅಪರೆಲ್ ಗೆ ಫ್ಯಾಷನ್ ಡಿಸೈನಿಂಗ್ ತರಬೇತಿ ನೀಡುತ್ತದೆ. ಅಮೋಘ್ಯದ ಸ್ಥಳದಲ್ಲಿಯೇ ಈ ತರಬೇತಿ ನೀಡಲಾಗುತ್ತದೆ.
ಪೂರೈಕೆದಾರರ ಸ್ಥಳ: ಬೆಂಗಳೂರು, ಕರ್ನಾಟಕ
ಪೂರೈಕೆಯ ಸ್ಥಳ: ಚೆನ್ನೈನಲ್ಲಿರುವ ಮೋಹನ್ ಅಪರೆಲ್ಸ್ ನ ಸ್ಥಳ, ಚೆನ್ನೈ, ತಮಿಳುನಾಡು.
ಇದು ಅಂತರ್-ರಾಜ್ಯ ಪೂರೈಕೆಯಾಗಿದೆ. ಐಜಿಎಸ್ಟಿ ತೆರಿಗೆ ವಿಧಿಸಲಾಗುತ್ತದೆ.
ನೋಂದಾಯಿಸಿಲ್ಲದ ವ್ಯಕ್ತಿಸೇವೆ ಎಲ್ಲಿ ಪಡೆಯಲಾಗುತ್ತೋ ಆ ಸ್ಥಳಕರ್ನಾಟಕದ ಬೆಂಗಳೂರಿನಲ್ಲಿರುವ ಅಮೋಘ್ಯ ಫ್ಯಾಷನ್ ಡಿಸೈನಿಂಗ್, ತನ್ನ ಸ್ಥಳದಲ್ಲಿಯೇ ವಿದ್ಯಾರ್ಥಿಗಳಿಗೆ ಫ್ಯಾಷನ್ ವಿನ್ಯಾಸ ಕಲಿಕಾ ಕೋರ್ಸ್ ಒದಗಿಸುತ್ತದೆ.
ಪೂರೈಕೆದಾರರ ಸ್ಥಳ: ಬೆಂಗಳೂರು, ಕರ್ನಾಟಕ
ಪೂರೈಕೆಯ ಸ್ಥಳ: ಕರ್ನಾಟಕದ ಬೆಂಗಳೂರಿನಲ್ಲಿ ತರಬೇತಿ ನೀಡಲಾಗುತ್ತದೆ.
ಹೀಗಾಗಿ, ಇದು ರಾಜ್ಯದೊಳಗಿನ ಪೂರೈಕೆ ಮತ್ತು ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.
ಸಾಂಸ್ಕೃತಿಕ, ಕಲೆ, ಕ್ರೀಡೆ, ವೈಜ್ಞಾನಿ, ಶೈಕ್ಷಣಿಕ ಅಥವಾ ಮನರಂಜನೆ ಕಾರ್ಯಕ್ರಮ ಅಥವಾ ಆಟದ ಪಾರ್ಕ್ ಮೂಲಕ ಸೇವೆ ಒದಗಿಸುವಿಕೆಅನ್ವಯವಾಗುವುದಿಲ್ಲ.ಕಾರ್ಯಕ್ರಮ ನಡೆದ ಸ್ಥಳದಲ್ಲಿಆಂಧ್ರ ಪ್ರದೇಶದ ಹೈದರಾಬಾದ್ ನಲ್ಲಿ ಒಬ್ಬ ವ್ಯಕ್ತಿ ಅಂಡಮಾನ್ ಮತ್ತು ನಿಕೋಬಾರ್ ಪ್ರವಾಸೋದ್ಯಮ ಇಲಾಖೆಯಿಂದ ದ್ವೀಪ ಪ್ರವಾಸ ಹಬ್ಬಕ್ಕೆ ಟಿಕೇಟ್ ಗಳನ್ನು ಖರೀದಿಸುತ್ತಾನೆ.
ಪೂರೈಕೆದಾರರ ಸ್ಥಳ: ಅಂಡಮಾನ್ ಮತ್ತು ನಿಕೋಬಾರ್
ಪೂರೈಕೆಯ ಸ್ಥಳ: ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಆಯೋಜಿಸಿರುವ ದ್ವೀಪ ಪ್ರವಾಸೋದ್ಯಮ ಹಬ್ಬ.
ಇದು ರಾಜ್ಯದೊಳಗಿನ ಪೂರೈಕೆಯಾಗಿರುವುದರಿಂದ ಸಿಜಿಎಸ್ಟಿ + ಯುಟಿಜಿಎಸ್ಟಿ ಅನ್ವಯವಾಗುತ್ತದೆ.
ಸಾಂಸ್ಕೃತಿಕ, ಕಲೆ, ಕ್ರೀಡೆ, ವೈಜ್ಞಾನಿ, ಶೈಕ್ಷಣಿಕ ಅಥವಾ ಮನರಂಜನೆ ಕಾರ್ಯಕ್ರಮ ಅಥವಾ ಅಮ್ಯುಸ್ಮೆಂಟ್ ಪಾರ್ಕ್ ಮೂಲಕ ಸಂಸ್ಥೆಯೊಂದುನೋಂದಾಯಿತ ವ್ಯಕ್ತಿ ದು ಸೇವೆ ಒದಗಿಸಿದ್ದರೆ.ಸ್ವೀಕೃತಿದಾರರ ಸ್ಥಳಮುಂಬೈನಲ್ಲಿ ನೋಂದಾಯಿಸಿರುವ ಮೋನಿಕಾ ಇವೆಂಟ್ ಆರ್ಗನೈಜೇಷನ್, ದೆಹಲಿಯಲ್ಲಿ ನೋಂದಾಯಿಸಿರುವ ಕೋಮಲ್ ಆಟೋಮೊಬೈಲ್ಸಿಗೆ ಮುಂಬೈನಲ್ಲಿ ಆಯೋಜಿಸಿದ ವಾರ್ಷಿಕ ಮಾರಾಟ ಸಭೆಗೆ ಇವೆಂಟ್ ಮ್ಯಾನೇಜ್ಮೆಂಟ್ ಸೇವೆ ಒದಗಿಸುತ್ತದೆ.
ಪೂರೈಕೆದಾರರ ಸ್ಥಳ: ಮುಂಬೈ
ಪೂರೈಕೆಯ ಸ್ಥಳ: ದೆಹಲಿಯ ಕೋಮಲ್ ಆಟೋಮೊಬೈಲ್ಸ್.
ಇದು ಅಂತರ್-ರಾಜ್ಯದೊಳಗಿನ ಪೂರೈಕೆಯಾಗಿರುವುದರಿಂದ ಐಜಿಎಸ್ಟಿ ಅನ್ವಯವಾಗುತ್ತದೆ..
ನೋಂದಾಯಿಸದೆ ಇರುವ ವ್ಯಕ್ತಿಎಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತೋ ಅಲ್ಲಿ.ಮುಂಬೈನಲ್ಲಿ ನೋಂದಾಯಿಸಿರುವ ಮೋನಿಕಾ ಇವೆಂಟ್ ಆರ್ಗನೈಜೇಷನ್, ರಾಜಸ್ಥಾನದ ಗ್ರಾಹಕರೊಬ್ಬರಿಗೆ ಆಕೆಯ ಮದುವೆ ರಿಸೆಪ್ಷನ್ ಕಾರ್ಯಕ್ರಮಕ್ಕೆ ಇವೆಂಟ್ ಮ್ಯಾನೇಜ್ಮೆಂಟ್ ಸೇವೆ ಒದಗಿಸುತ್ತದೆ.
ಪೂರೈಕೆದಾರರ ಸ್ಥಳ: ಮುಂಬೈ
ಪೂರೈಕೆಯ ಸ್ಥಳ: ಮದುವೆ ರಿಸೆಪ್ಷನ್ ನಡೆದ ಮುಂಬೈ
ಇದು ರಾಜ್ಯದೊಳಗಿನ ಪೂರೈಕೆಯಾಗಿದೆ ಮತ್ತು ಸಿಜಿಎಸ್ಟಿ+ಎಸ್ಜಿಎಸ್ಟಿ ತೆರಿಗೆ ಅನ್ವಯಿಸುತ್ತದೆ.

ಸೇವೆಯಲ್ಲಿ ಪೂರೈಕೆಯ ಸ್ಥಳವನ್ನು ನಿರ್ಧರಿಸುವಾಗ, ಎಲ್ಲಿ ಪೂರೈಕೆಯ ಸ್ಥಳ ಇರುತ್ತದೋ , ಅಲ್ಲೇ ಸೇವೆಯನ್ನು ಪಡೆದರೆ ಅಥವಾ ಎಲ್ಲಿ ಕಾರ್ಯಕ್ರಮ ನಡೆಯುತ್ತೋ ಅಂತಹ ಪೂರೈಕೆಗೆ ಯಾವಾಗಲೂ ರಾಜ್ಯದೊಳಗಿನ ತೆರಿಗೆ ವಿಧಿಸುವುದನ್ನು ನೀವು ಇಲ್ಲಿ ಗಮನಿಸಿರಬಹುದು.

Are you GST ready yet?

Get ready for GST with Tally.ERP 9 Release 6

52,794 total views, 7 views today