ಜಿಎಸ್ಟಿಯಡಿಯಲ್ಲಿ, ಈ ಹಿಂದಿನ ವ್ಯವಸ್ಥೆಯಲ್ಲಿನ, ತಯಾರಕರಿಗೆ ವಿಧಿಸುವ ತೆರಿಗೆ, ತೆರಿಗೆ ವಿಧಿಸಬಹುದಾದ ಸೇವೆಗಳ ಹಂಚಿಕೆ, ಮತ್ತು ಸರಕುಗಳ ಮಾರಾಟವನ್ನು “ಪೂರೈಕೆ’’ ಎಂಬ ಪರಿಕಲ್ಪನೆಗೆ ಬದಲಾಯಿಸಲಾಗಿದೆ. ಜಿಎಸ್ಟಿಯಡಿಯಲ್ಲಿ ಸರಕು ಅಥವಾ ಸೇವೆಗಳಿಗೆ ತೆರಿಗೆ ವಿಧಿಸಬಹುದಾದ ಕಾರ್ಯಕ್ರಮವನ್ನು “ಪೂರೈಕೆ’’ ಎಂದು ಹೇಳಲಾಗುತ್ತದೆ. ಹೀಗಾಗಿ, ಪೂರೈಕೆಗೆ ಸರಿಯಾದ ತೆರಿಗೆ ವಿಧಿಸಲು ಪೂರೈಕೆಯ ಸ್ಥಳವನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಅವಶ್ಯಕವಾದ ವಿಷಯವಾಗಿದೆ. ಈ ಸನ್ನಿವೇಶದ ಆಧಾರದಲ್ಲಿ, ನೀವು “ಇಂಟ್ರಾ ಸ್ಟೇಟ್ (ರಾಜ್ಯದೊಳಗೆ) ಅಥವಾ ಇಂಟರ್ ಸ್ಟೇಟ್ (ರಾಜ್ಯದ ಹೊರಗಡೆ) ಸರಕು ಅಥವಾ ಸೇವೆಗಳ ಪೂರೈಕೆಯನ್ನು ಮಾಡಬಹುದಾಗಿದೆ.

ಪೂರೈಕೆಗೆ ತೆರಿಗೆ ವಿಧಿಸುವುದನ್ನು ನಿರ್ಧರಿಸುವಲ್ಲಿ ಎರಡು ಪ್ರಮುಖವಾದ ಘಟಕಗಳಿವೆ :

• ಪೂರೈಕೆದಾರರ ಸ್ಥಳ- ಇದು ಪೂರೈಕೆದಾರರ ವ್ಯವಹಾರವನ್ನು ನೋಂದಾಯಿಸಿರುವ ಸ್ಥಳವಾಗಿದೆ.
• ಪೂರೈಕೆಯ ಸ್ಥಳ- ಸ್ವೀಕೃತಿದಾರರು ವ್ಯವಹಾರವನ್ನು ನೋಂದಾಯಿಸಿರುವ ಸ್ಥಳವಾಗಿದೆ.
ಇದನ್ನು ನಾವು ಒಂದು ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳೋಣ.

ಬ್ರಾಡ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು, ವ್ಯವಹಾರಕ್ಕೆ ನೋಂದಾಯಿಸಿರುವ ಸ್ಥಳವನ್ನು ಜೈಪುರ, ರಾಜಸ್ಥಾನದಲ್ಲಿ ಹೊಂದಿದೆ. ಈ ಕಂಪನಿಯು ರಾಜಸ್ಥಾನದ ಉದಯಪುರದಲ್ಲಿ ನೋಂದಾಯಿತ ಸ್ಥಳವನ್ನು ಹೊಂದಿರುವ ರವೀಂದ್ರ ಆಟೋಮೊಬೈಲ್ಸ್ ಗೆ ಪೂರೈಕೆ ಮಾಡುತ್ತದೆ.

GST Intra state supply

 
ಇಲ್ಲಿ, ಬ್ರಾಡ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ಇರುವ ಸ್ಥಳ ರಾಜಸ್ಥಾನ ಮತ್ತು ಪೂರೈಕೆ ಮಾಡುವ ಸ್ಥಳವೂ ರಾಜಸ್ಥಾನ ಆಗಿದೆ. ಹೀಗಾಗಿ, ಇದು ರಾಜ್ಯದೊಳಗಿನ ಪೂರೈಕೆಯಾಗಿದೆ. ಇಂತಹ ಇಂಟ್ರಾ-ಸ್ಟೇಟ್(ರಾಜ್ಯದೊಳಗಿನ) ಪೂರೈಕೆಗೆ >ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ತೆರಿಗೆ ವಿಧಿಸಲಾಗುತ್ತದೆ.

ಇದನ್ನು ಇನ್ನೊಂದು ಉದಾಹರಣೆಯ ಮೂಲಕ ಅರ್ಥ ಮಾಡಿಕೊಳ್ಳೋಣ.

ಬ್ರಾಡ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ರಾಜಸ್ಥಾನದಲ್ಲಿ ನೋಂದಾಯಿಸಿರುವ ಸ್ಥಳ ಹೊಂದಿದೆ. ಇದು ಪೂರೈಕೆ ಮಾಡುವ ರಾಮ್ ಆಟೋಮೊಬೈಲ್ಸ್, ತನ್ನ ವ್ಯವಹಾರದ ಸ್ಥಳವನ್ನು ಉತ್ತರ ಪ್ರದೇಶದ ಲಕ್ನೊದಲ್ಲಿ ನೋಂದಾಯಿಸಿದೆ.

GST Inter state supply
ಈ ಉದಾಹರಣೆಯಲ್ಲಿ, ಬ್ರಾಡ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ರಾಜಸ್ಥಾನದಲ್ಲಿದೆ ಮತ್ತು ತನ್ನ ಪೂರೈಕೆಯನ್ನು ಉತ್ತರ ಪ್ರದೇಶಕ್ಕೆ ಮಾಡುತ್ತದೆ. ಇದು ಅಂತರ್-ರಾಜ್ಯ ಪೂರೈಕೆಯಾಗಿದೆ. ಅಂದರೆ, ರಾಜ್ಯದ ಹೊರಗೆ ಪೂರೈಕೆ. ಈ ಅಂತರ್ ರಾಜ್ಯ ಪೂರೈಕೆಗೆ ಐಜಿಎಸ್ಟಿ ತೆರಿಗೆ ವಿಧಿಸಲಾಗುತ್ತದೆ.

ಈ ಕೆಳಗಿನ ವಿಷಯಗಳನ್ನೂ ಅಂತರ್-ರಾಜ್ಯ ಪೂರೈಕೆ ಎಂದು ಪರಿಗಣಿಸಲಾಗುತ್ತದೆ:
• ಸರಕು ಅಥವಾ ಸೇವೆಯ ಆಮದು
• ಸರಕು ಅಥವಾ ಸೇವೆಯ ರಫ್ತು
• ವಿಶೇಷ ಆರ್ಥಿಕ ವಲಯ ಅಭಿವೃದ್ಧಿಪಡಿಸುವವರಿಗೆ ಅಥವಾ ವಿಶೇಷ ಆರ್ಥಿಕ ವಲಯ ಘಟಕಕ್ಕೆ ಸರಕು ಅಥವಾ ಸೇವೆಯನ್ನು, ರಾಜ್ಯದೊಳಗೆ ಪೂರೈಕೆ ಮಾಡಿದರೂ(ಅಥವಾ ಅವರಿoದ ಸೇವೆಯನ್ನುಹೊಂದಿದರೂ) ಇದೇ ತೆರಿಗೆ ವಿಧಿಸಲಾಗುತ್ತದೆ.

ಮುಂದೆ ಪ್ರಕಟಿಸಲಾಗುವ ಲೇಖನ:

ಚಲನೆಯನ್ನು ಒಳಗೊಂಡಿರುವ ಸರಕುಗಳ, ಪೂರೈಕೆಯ ಸ್ಥಳವನ್ನು ನಿರ್ಧರಿಸುವುದು.

Are you GST ready yet?

Get ready for GST with Tally.ERP 9 Release 6

103,340 total views, 46 views today