ಮೇ 18, 2017ರಂದು ಜಿಎಸ್ಟಿ ಸಮಿತಿಯು ಬಹುನಿರೀಕ್ಷಿತ 98 ವಿಭಾಗದ 1211 ಸರಕುಗಳಿಗೆ ಜಿಎಸ್ಟಿ ದರವನ್ನು ನಿಗದಿಪಡಿಸಿದೆ. ಅದರ ಮರುದಿನವೇ, 36 ವಿಭಾಗದ ಸೇವೆಗಳಿಗೂ ಜಿಎಸ್ಟಿ ದರವನ್ನು ಅಂತಿಮಗೊಳಿಸಿದೆ.
ಭಾರತ ಸರಕಾರದ ಹಣಕಾಸು ಸಚಿವಾಲಯದ ಆದಾಯ ಕಾರ್ಯದರ್ಶಿ ಹಸ್ಮುಖ್ ಆದಿಯಾ ಹೇಳಿದಂತೆ, ಶೇಕಡ 81ರಷ್ಟು ವಿಷಯಗಳಿಗೆ ಜಿಎಸ್ಟಿ ತೆರಿಗೆ ದರ ಶೇಕಡ 18ರಷ್ಟು ಮತ್ತು ಅದಕ್ಕಿಂತ ಕಡಿಮೆ ಇರುತ್ತದೆ, ಉಳಿದ ಶೇಕಡ 18ರಷ್ಟು ಐಟಂಗಳಿಗೆ ಜಿಎಸ್ಟಿ ತೆರಿಗೆ ದರ ಶೇಕಡ 28 ಮತ್ತು ಅದಕ್ಕಿಂತ ಹೆಚ್ಚಿರಲಿದೆ ಎಂದಿದ್ದಾರೆ.
GST Rates
ವಿವಿಧ 5 ಜಿಎಸ್ಟಿ ಸ್ಲಾಬ್ ಗಳಲ್ಲಿ ಕೆಲವು ಪ್ರಮುಖ ಸರಕು ಮತ್ತು ಸೇವೆಗಳ ವಿವರ ಇಲ್ಲಿದೆ.

ಜಿಎಸ್ಟಿಯಿಂದ ವಿನಾಯಿತಿ

ಸರಕುಗಳು

• ಪೌಲ್ಟಿ ಉತ್ಪನ್ನಗಳು- ತಾಜಾ ಮಾಂಸ, ಮೀನು, ಕೋಳಿ, ಮೊಟ್ಟೆಗಳು
• ಡೇರಿ ಉತ್ಪನ್ನಗಳು- ಹಾಲು, ಮೊಸರು, ಬೆಣ್ಣೆ, ಬೆಲ್ಲ(ಗರ್), ಲಸ್ಸಿ, ಪ್ಯಾಕ್ ಮಾಡದ ಪನ್ನೀರ್
• ತಾಜಾ ಹಣ್ಣುಗಳು ಮತ್ತು ತರಕಾರಿಗಳು
• ಆಹಾರ ಉತ್ಪನ್ನಗಳು- ನೈಸರ್ಗಿಕ ಜೇನು, ಹಿಟ್ಟು(ಅಟ್ಟಾ ಮತ್ತು ಮೈದಾ), ದ್ವಿದಳ ಧಾನ್ಯಗಳು, ಬಾಸ್ಮತಿ ಅಕ್ಕಿ, ಗ್ರಾಮ್ ಫ್ಲೋರ್(ಬೆಸನ್), ಬ್ರಡಡ್, ಅಡುಗೆ ಎಣ್ಣೆ, ಧಾರ್ಮಿಕ ಸಿಹಿತಿಂಡಿಗಳು(ಪ್ರಸಾದ), ಸಾಮಾನ್ಯ ಉಪ್ಪು.
• ಪ್ರಸಾಧನ ಸಾಮಾಗ್ರಿಗಳು ಮತ್ತು ಆ್ಯಕ್ಸೆಸರಿ- ಬಿಂದಿ, ವೆರ್ಮಿಲಿಯೊನ್(ಸಿಂಧೂರ), ಬಳೆಗಳು.
• ಸ್ಟೇಷನರಿ- ಅಂಚೆ ಚೀಟಿಗಳು, ನ್ಯಾಯಾಂಗ ಪೇಪರ್ ಗಳು, ಮುದ್ರಿತ ಪುಸ್ತಕಗಳು, ಸುದ್ದಿಪತ್ರಿಕೆಗಳು
• ಕೈ ಮಗ್ಗ ಉತ್ಪನ್ನಗಳು
• ಜವಳಿ- ಸೆಣಬು, ರೇಷ್ಮೆ
• ಗರ್ಭನಿರೋಧಕಗಳು

ಸೇವೆಗಳು

• 1,000 ರೂ.ಗಿಂತ ಕಡಿಮೆ ಇರುವ ಹೋಟೆಲ್ ಸೇವೆಗಳು
• ಶಿಕ್ಷಣ (ಈ ಹಿಂದಿನ ವಿನಾಯಿತಿಗಳು ಮುಂದುವರೆದಿವೆ)
• ಆರೋಗ್ಯ ಸೇವೆ (ಈ ಹಿಂದಿನ ವಿನಾಯಿತಿಗಳು ಮುಂದುವರೆದಿವೆ)

ಶೇಕಡ 5 ಜಿಎಸ್ಟಿ

ಸರಕುಗಳು

• ಡೇರಿ ಉತ್ಪನ್ನಗಳು- ಕೆನೆ ತೆಗೆದ ಹಾಲಿನ ಪುಡಿ, ಮಗುವಿಗೆ ಹಾಲಿನ ಆಹಾರ, ಘನೀಕೃತ ಹಾಲು, ಪ್ಯಾಕ್ ಮಾಡಿರುವ ಪನ್ನೀರ್, ಕ್ರೀಮ್
• ಫ್ರೋಝನ್ ತರಕಾರಿಗಳು
• ಆಹಾರ ವಸ್ತುಗಳು- ಸಕ್ಕರೆ, ಮಸಾಲ, ಖಾದ್ಯ ಎಣ್ಣೆ, ಫಿಜ್ಜಾ ಬ್ರೆಡ್, ರಸ್ಕ್, ಸಿಹಿತಿಂಡಿಗಳು, ಮೀನಿನ ಫಿಲ್ಲೆಟ್ ಗಳು, ಟ್ಯಾಪಿಯೊಕಾ (ಸಾಬು ದಾನ)
• ಪಾನೀಯಗಳು- ಕಾಫಿ, ಚಹಾ, ಜ್ಯೂಸ್
• ಉಡುಪು- 1 ಸಾವಿರ ರೂ.ಗಿಂತ ಕಡಿಮೆ ಇರುವುದಕ್ಕೆ
• ಪಾದರಕ್ಷೆಗಳು- 500 ರೂ.ಗಿಂತ ಕಡಿಮೆ ಇರುವುದಕ್ಕೆ
• ಇಂಧನ- ಸೀಮೆಎಣ್ಣೆ, ಎಲ್ ಪಿ ಜಿ, ಕಲ್ಲಿದ್ದಲು
• ಸೌರ ಫಲಕಗಳು
• ಸಾಮಾನ್ಯ ಅಗತ್ಯವಸ್ತುಗಳು- ಪೊರಕೆ
• ವೈದ್ಯಕೀಯ ಸರಕುಗಳು- ಔಷಧ, ಸ್ಟೆಂಟ್ ಗಳು
• ನ್ಯೂಸ್ ಪ್ರಿಂಟ್
• ಲೈಫ್ ಬೋಟ್ ಗಳು
• ಜವಳಿ- ಹತ್ತಿ, ನೈಸರ್ಗಿಕ ನೂಲು ಮತ್ತು ಯಾರ್ನ್

ಸೇವೆಗಳು

• ರೈಲ್ವೆ ಪ್ರಯಾಣ
• ಎಕಾನಾಮಿಕ್ ಕ್ಲಾಸ್ ವಿಮಾನಯಾನ
• ಕ್ಯಾಬ್ ಗುಂಪು ಸೇವೆದಾರರು (ಉದಾ: ಉಬೆರ್ ಮತ್ತು ಓಲಾ)

ಶೇಕಡ 12 ಜಿಎಸ್ಟಿ

ಸರಕುಗಳು

• ಡೇರಿ ಉತ್ಪನ್ನಗಳು- ಬೆಣ್ಣೆ, ಚೀಸ್, ತುಪ್ಪ
• ಪ್ಯಾಕ್ ಮಾಡಿರುವ ಒಣ ಹಣ್ಣುಗಳು
• ಆಹಾರ ವಸ್ತುಗಳು- ಸ್ನಾಕ್ಸ್(ನಾಮ್ಕಿನ್ ಮತ್ತು ಬೂಜಿಯಾ), ಪ್ಯಾಕ್ ಮಾಡಿರುವ ಕೋಳಿ ಮಾಂಸ, ಸಾಸ್ ಗಳು.
• ಪಾನೀಯಗಳು- ಹಣ್ಣಿನ ಜ್ಯೂಸ್, ಪ್ಯಾಕ್ ಮಾಡಿರುವ ಎಳನೀರು
• ಉಡುಪು- 1 ಸಾವಿರ ರೂ.ಗಿಂತ ಹೆಚ್ಚಿನದ್ದಕ್ಕೆ
• ವೈಯಕ್ತಿಕ ಅಗತ್ಯತೆಗಳು- ಹಲ್ಲುಜ್ಜುವ ಪುಡಿ
• ಸ್ಟೆಷನರಿ- ಬಣ್ಣದ ಪುಸ್ತಕಗಳು, ಚಿತ್ರ ಇರುವ ಪುಸ್ತಕಗಳು
• ಸಾಮಾನ್ಯ ಅಗತ್ಯ ವಸ್ತುಗಳು- ಶೇವಿಂಗ್ ಮೆಷಿನ್, ಕೊಡೆ
• ಆಯುರ್ವೇದ ಔಷಧ
• ಊದುಬತ್ತಿ(ಅಗರಬತ್ತಿ)
• ಮೊಬೈಲ್ ಫೋನ್ ಗಳು

ಸೇವೆಗಳು

• ಏಸಿ ರಹಿತ ಹೋಟೆಲ್ ಗಳು ಮತ್ತು ರೆಸ್ಟೂರೆಂಟ್ ಗಳು
• ಬಿಸ್ನೆಸ್ ಕ್ಲಾಸ್ ವಿಮಾನಯಾನ

ಶೇಕಡ 18 ಜಿಎಸ್ಟಿ

ಸರಕುಗಳು

• ಡೇರಿ ಉತ್ಪನ್ನಗಳು- ಐಸ್ ಕ್ರೀಮ್
• ಸಂಗ್ರಹಿಸಿ ತರಕಾರಿಗಳು
• ಆಹಾರ ವಸ್ತುಗಳು- ಫ್ಲೇವರ್ ಇರುವ ಸಂಸ್ಕರಿತ ಸಕ್ಕರೆ, ಪಾಸ್ತಾ, ಜೋಳದ ಫ್ಲೇಕ್, ಪ್ಯಾಸ್ಟ್ರೀಸ್, ಕೇಕ್, ಜಾಮ್, ಸಾಸ್, ಸೋಪ್, ಸಿದ್ಧ ಹಿಟ್ಟಿನ ಮಿಕ್ಸ್ ಗಳು, ಸಂಸ್ಕರಿತ ಆಹಾರಗಳು
• ಪಾನೀಯಗಳು- ಮಿನರಲ್ ವಾಟರ್
• ಬ್ರಾಂಡೆಡ್ ಉಡುಪುಗಳು
• ಪಾದರಕ್ಷೆ- 500 ರೂ.ಗಿಂತ ಹೆಚ್ಚಿನವು
• ವೈಯಕ್ತಿಕ ನೈರ್ಮಲ್ಯ- ಟಿಶ್ಯೂ, ಟಾಯ್ಲೆಟ್ ಪೇಪರ್, ತಲೆಗೆ ಹಾಕುವ ಎಣ್ಣೆ, ಸೋಪ್ ಬಾರ್ಸ್, ಟೂತ್ ಪೇಸ್ಟ್
• ಸ್ಟೇಷನರಿ- ನೋಟ್ ಪುಸ್ತಕಗಳು, ಎನ್ವಲಪ್, ಫೌಂಟೇನ್ ಪೆನ್ ಗಳು
• ಎಲೆಕ್ಟ್ರಾನಿಕ್ ಸಾಧನಗಳು- ಪ್ರಿಂಟೆಡ್ ಸರ್ಕ್ಯೂಟ್ ಗಳು, ಮಾನಿಟರ್ ಗಳು
• ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು
• ಬಿರಿ ಹೊದಿಕೆ ಎಲೆಗಳು(ಟೆಂಡು ಪಟ್ಟಾ)
• ಬಿಸ್ಕೆಟ್ ಗಳು
• ಜವಳಿ- ಮಾನವ ನಿರ್ಮಿತ ಪೈಬರ್ ಮತ್ತು ಯಾರ್ನ್

ಸೇವೆಗಳು

• ಮದ್ಯ ಪೂರೈಕೆ ಮಾಡುವ ಏಸಿ ಹೋಟೆಲ್ಸ್ ಮತ್ತು ರೆಸ್ಟೂರೆಂಟ್
• ದೂರಸಂಪರ್ಕ ಸೇವೆಗಳು
• ಐಟಿ ಸೇವೆಗಳು
• ಹಣಕಾಸು ಸೇವೆಗಳು
• ವರ್ಕ್ಸ್ ಕಾಂಟ್ರಾಕ್ಟ್

ಜಿಎಸ್ಟಿ ಶೇಕಡ 28

ಸರಕುಗಳು

• ಆಹಾರ ವಸ್ತುಗಳು- ಚಾಕೋಲೇಟ್ ಗಳು, ಚೂಯಿಂಗ್ ಗಮ್, ಕಸ್ಟರ್ಡ್ ಪೌಡರ್
• ಪಾನೀಯಗಳು- ಗಾಢವಾದ ನೀರು(ಏರೆಟೆಡ್ ವಾಟರ್)
• ವೈಯಕ್ತಿಕ ನೈರ್ಮಲ್ಯ- ಡಿಯೊಡೊರೆಂಟ್ಸ್, ಶೇವಿಂಗ್ ಕ್ರೀಮ್, ಆಫ್ಟರ್ ಶೇವ್, ಹೇರ್ ಶ್ಯಾಂಪೂ, ಡೈ, ಸನ್ ಸ್ಕ್ರಿನ್, ಪರ್ಫ್ಯೂಮ್, ಫೇಸ್ ಕ್ರೀಮ್ಸ್, ಡಿಟರ್ಜೆಂಟ್ಸ್
• ಬಿಳಿ ಸರಕುಗಳು- ವಾಕ್ಯೂಂ ಕ್ಲೀನರ್, ಷವರ್ಸ್, ಹೇರ್ ಕ್ಲಿಪ್ಪರ್ಸ್, ವಾಷಿಂಗ್ ಮೆಷಿನ್ಸ್, ಡಿಷ್ ವಾಷರ್ಸ್, ವಾಟರ್ ಹೀಟರ್ ಮತ್ತು ಇತರೆ ಗೃಹ ಬಳಕೆಯ ವಸ್ತುಗಳು
• ಸ್ಪೀಕರ್ ಗಳು
• ಕ್ಯಾಮೆರಾಗಳು
• ವಾಹನಗಳು ಮತ್ತು ಮೋಟಾರ್ ವಾಹನಗಳು *
• ಗೃಹ ಸರಕುಗಳು- ಪೇಂಟ್, ವಾಲ್ ಪೇಪರ್, ಸೆರಾಮಿಕ್ ಟೈಲ್ಸ್, ಸಿಮೆಂಟ್
• ತೂಕ ನೋಡುವ ಯಂತ್ರ, ವೆಂಡಿಂಗ್ ಮೆಷಿನ್, ಎಟಿಎಂ
• ಪಟಾಕಿಗಳು
• ಐಷಾರಾಮಿ/ಅಯೋಗ್ಯ ಉತ್ಪನ್ನಗಳು*- ಪಾನ್ ಮಸಾಲ, ತಂಬಾಕು, ಬೀಡಿ, ಗಾಢ ಪಾನೀಯಗಳು ಮತ್ತು ಮೋಟಾರ್ ವಾಹನಗಳು

ಸೇವೆಗಳು

• ಪಂಚತಾರಾ ಹೋಟೆಲ್ ಗಳ ಕೊಠಡಿಗಳು ಮತ್ತು ರೆಸ್ಟೂರೆಂಟ್ ಗಳು
• ರೇಸ್ ಕೋರ್ಸ್ ಬೆಟ್ಟಿಂಗ್
• ಸಿನೇಮಾ ಇತ್ಯಾದಿ

*ಗಮನಿಸಿ- ಮೇಲೆ ಪಟ್ಟಿ ಮಾಡಿರುವ ಐಷಾರಾಮಿ/ಅಯೋಗ್ಯ ಸರಕುಗಳು ಗಳಿಗೆ ಮೇಲಿನ ಜಿಎಸ್ಟಿ ದರ ಶೇಕಡ 28 ಸೇರಿದಂತೆ ಪರಿಹಾರ ಸೆಸ್ ಸಹ ವಿಧಿಸಲಾಗುತ್ತದೆ.

ಜಿಎಸ್ಟಿ ತೆರಿಗೆ ದರ ಸ್ಲಾಬ್ ಗಳ ಹೊರಗಿರುವ ವಿಷಯಗಳು

• ಚಿನ್ನ, ರತ್ನಗಳು, ಆಭರಣಗಳು-ಶೇಕಡ 3
• ಕಠಿಣ ವಜ್ರ-0.25 ಶೇಕಡ

ಐಷಾರಾಮಿ/ಡಿಮೆರಿಟ್ ಸರಕುಗಳಿಗೆ ಉಪಚಾರ

ಪ್ರಮುಖ ವಿಭಾಗದ ಸರಕು ಮತ್ತು ಸೇವೆಗಳಿಗೆ ಹೆಚ್ಚುವರಿಯಾಗಿ ದರ ನಿಗದಿಪಡಿಸಲು, ಜಿಎಸ್ಟಿ ಸಮಿತಿಯು ಐದು ಪ್ರಮುಖ ಕೆಟಗರಿಯ ಸರಕು ಮತ್ತು ಸೇವೆಗಳಿಗೆ ಕಾಂಪೆನ್ಷನ್ ಅಥವಾ ಪರಿಹಾರ ದರ ವಿಧಿಸಲು ಸಮ್ಮತಿಸಿದೆ. ಇದಕ್ಕೆ ನೀಡಿರುವ ಸೆಸ್ ದರವೂ ಪರಿಹಾರ ನಿಧಿಗೆ ಹೋಗುತ್ತದೆ, ಇದು ರಾಜ್ಯಗಳಿಗೆ ಮೊದಲ ಜಿಎಸ್ಟಿ ಐದು ವರ್ಷಗಳಲ್ಲಿ ತೆರಿಗೆ ಆದಾಯದ ಅಂತರವನ್ನು ತಗ್ಗಿಸಲು ಬಳಸಲಾಗುತ್ತದೆ.

ಪರಿಹಾರ ಸೆಸ್ ನಡಿ ತೆರಿಗೆ ವಿಧಿಸಲಾಗುವ ಸರಕುಗಳಿಗೆ ಹೆಚ್ಚು ಅಥವಾ ಕಡಿಮೆ ಜಿಎಸ್ಟಿ ದರವನ್ನು ಈ ಮುಂದಿನಂತೆ ನೀಡಲಾಗುತ್ತದೆ:

ವಸ್ತುಗಳು ಜಿಎಸ್ಟಿ ದರ ಅನ್ವಯ ಅಂಗೀಕೃತ ಸೆಸ್ ಶ್ರೇಣಿ ಸೆಸ್ ಸೈಲಿಂಗ್
ಕಲ್ಲಿದ್ದಲು 5%400 ರೂ/ಟನ್ 400 ರೂ./ಟನ್
ಪಾನ್ ಮಸಾಲ 28%60%135%
ತಂಬಾಕು 28%61% – 204%4170 ರೂ/ಸಾವಿರ
ಗಾಢ ಪಾನೀಯಗಳು 28%12%15%
ಮೋಟಾರ್ ವಾಹನಗಳು **28%1% – 15%15%

** ಗಮನಿಸಿ- 1500 ಸಿಸಿ ಎಂಜಿನ್ ಸಾಮರ್ಥ್ಯಕ್ಕಿಂತ ಹೆಚ್ಚಿರುವ ಕಾರುಗಳಿಗೆ, ಇತರೆ ಕ್ರೀಡಾ ಮತ್ತು ಐಷಾರಾಮಿ ಕಾರುಗಳಿಗೆ ಈ ಸೆಸ್ ಶೇಕಡ 15ರಷ್ಟಿರಲಿದೆ. ಸಣ್ನ ಕಾರುಗಳಿಗೆ ಈ ಸೆಸ್ ದರವು ಶೇಕಡ 1ರಷ್ಟು ಇರಲಿದೆ.

Are you GST ready yet?

Get ready for GST with Tally.ERP 9 Release 6

263,759 total views, 12 views today